< ಲೂಕನು 20 >

1 ಆ ದಿವಸಗಳಲ್ಲಿ ಒಂದು ದಿನ ಯೇಸು ದೇವಾಲಯದ ಅಂಗಳದಲ್ಲಿ ಜನರಿಗೆ ಬೋಧಿಸುತ್ತಾ, ಸುವಾರ್ತೆಯನ್ನು ಸಾರುತ್ತಿದ್ದರು. ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೊಂದಿಗೆ ಅವರ ಬಳಿಗೆ ಬಂದು
或 日イエス宮にて民を教へ、福音を宣べゐ給ふとき、祭司長・學者らは、長老どもと共に近づき來り、
2 ಯೇಸುವಿಗೆ, “ನೀವು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತೀರಿ? ನಿಮಗೆ ಈ ಅಧಿಕಾರವನ್ನು ಕೊಟ್ಟವರು ಯಾರು? ನಮಗೆ ಹೇಳಿ,” ಎಂದರು.
イエスに語りて言ふ『なにの權威をもて此 等の事をなすか、此の權威を授けし者は誰か、我らに告げよ』
3 ಅದಕ್ಕೆ ಯೇಸು ಅವರಿಗೆ, “ನಾನು ಸಹ ನಿಮ್ಮನ್ನು ಒಂದು ವಿಷಯ ಕೇಳುತ್ತೇನೆ, ನನಗೆ ಉತ್ತರಕೊಡಿರಿ.
答へて言ひ給ふ『われも一言なんぢらに問はん、答へよ。
4 ಯೋಹಾನನಿಗೆ ದೀಕ್ಷಾಸ್ನಾನವನ್ನು ಕೊಡುವ ಅಧಿಕಾರ ಪರಲೋಕದಿಂದ ಬಂದದ್ದೋ ಇಲ್ಲವೇ ಮನುಷ್ಯರಿಂದಲೋ?” ಎಂದು ಕೇಳಿದರು.
ヨハネのバプテスマは天よりか、人よりか』
5 ಆಗ ಅವರು ತಮ್ಮೊಳಗೆ, “‘ಪರಲೋಕದಿಂದ’ ಎಂದು ನಾವು ಹೇಳಿದರೆ ಆತನು, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು.
彼ら互に論じて言ふ『もし「天より」と言はば「なに故かれを信ぜざりし」と言はん。
6 ‘ಮನುಷ್ಯರಿಂದ ಬಂತು,’ ಎಂದು ನಾವು ಹೇಳಿದರೆ, ಜನರೆಲ್ಲಾ ನಮಗೆ ಕಲ್ಲೆಸೆಯುವರು. ಏಕೆಂದರೆ ಯೋಹಾನನು ಒಬ್ಬ ಪ್ರವಾದಿಯೆಂದು ಅವರು ಒಪ್ಪಿದ್ದಾರೆ,” ಎಂದು ಆಲೋಚಿಸಿ,
もし「人より」と言はんか、民みなヨハネを預言者と信ずるによりて、我らを石にて撃たん』
7 “ಅದು ಎಲ್ಲಿಂದಲೋ ನಮಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟರು.
遂に何處よりか知らぬ由を答ふ。
8 ಆಗ ಯೇಸು ಅವರಿಗೆ, “ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.
イエス言ひたまふ『われも何の權威をもて此 等の事をなすか、汝らに告げじ』
9 ಬಳಿಕ ಯೇಸು ಜನರಿಗೆ ಈ ಸಾಮ್ಯವನ್ನು ಹೇಳಿದರು: “ಒಬ್ಬನು ದ್ರಾಕ್ಷಿಯ ತೋಟವನ್ನು ನೆಟ್ಟು, ಅದನ್ನು ರೈತರಿಗೆ ಗೇಣಿಗೆ ಕೊಟ್ಟು, ದೀರ್ಘಕಾಲ ದೂರದೇಶಕ್ಕೆ ಪ್ರವಾಸಹೋದನು.
かくて次の譬を民に語りいで給ふ『ある人、葡萄園を造りて農夫どもに貸し、遠く旅立して久しくなりぬ。
10 ಫಲದ ಕಾಲ ಬಂದಾಗ ಅವನು ತನಗೆ ಬರಬೇಕಾಗಿದ್ದ ದ್ರಾಕ್ಷಿತೋಟದ ಫಲವನ್ನು ಕೊಡುವಂತೆ ತನ್ನ ಸೇವಕನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಆ ಗೇಣಿಗೆದಾರರು ಅವನನ್ನು ಹೊಡೆದು, ಬರಿಗೈಯಲ್ಲಿ ಕಳುಹಿಸಿಬಿಟ್ಟರು.
時 至りて、葡萄園の所得を納めしめんとて、一人の僕を農夫の許に遣ししに、農夫ども之を打ちたたき、空手にて歸らしめたり。
11 ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಕಳುಹಿಸಿದನು. ಅವರು ಎರಡನೆಯವನನ್ನೂ ಸಹ ಹೊಡೆದು, ಅವಮಾನಪಡಿಸಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು.
又ほかの僕を遣ししに、之をも打ちたたき、辱しめ、空手にて歸らしめたり。
12 ಆ ಯಜಮಾನನು ಮೂರನೆಯವನನ್ನು ಕಳುಹಿಸಿದನು. ಆಗ ಅವರು ಅವನನ್ನೂ ಗಾಯಪಡಿಸಿ ಹೊರಗೆ ಹಾಕಿದರು.
なほ三度めの者を遣ししに、之をも傷つけて逐ひ出したり。
13 “ಆಗ ದ್ರಾಕ್ಷಿಯ ತೋಟದ ಯಜಮಾನನು, ‘ನಾನೇನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನೇ ಕಳುಹಿಸುವೆನು, ಬಹುಶಃ ಅವರು ಅವನಿಗಾದರೂ ಮರ್ಯಾದೆಕೊಟ್ಟಾರು,’ ಎಂದುಕೊಂಡನು.
葡萄園の主いふ「われ何を爲さんか。我が愛しむ子を遣さん、或は之を敬ふなるべし」
14 “ಆದರೆ ಗೇಣಿಗೆದಾರರು ಅವನನ್ನು ಕಂಡಾಗ ತಮ್ಮತಮ್ಮೊಳಗೆ, ‘ಇವನೇ ಬಾಧ್ಯಸ್ಥನು. ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು,’ ಎಂದು ಒಳಸಂಚು ಮಾಡಿಕೊಂಡರು.
農夫ども之を見て互に論じて言ふ「これは世嗣なり。いざ殺して其の嗣業を我らの物とせん」
15 ಹಾಗೆಯೇ, ಅವರು ಅವನನ್ನು ದ್ರಾಕ್ಷಿತೋಟದ ಹೊರಗೆ ಹಾಕಿ ಕೊಂದರು. “ಹೀಗಿರಲಾಗಿ ದ್ರಾಕ್ಷಿತೋಟದ ಯಜಮಾನನು ಅವರಿಗೆ ಏನು ಮಾಡುವನು?
かくてこれを葡萄園の外に逐ひ出して殺せり。さらば葡萄園の主かれらに何を爲さんか、
16 ಅವನು ಬಂದು ಆ ಗೇಣಿಗೆದಾರರನ್ನು ಸಂಹರಿಸಿ ದ್ರಾಕ್ಷಿಯ ತೋಟವನ್ನು ಬೇರೆಯವರಿಗೆ ಒಪ್ಪಿಸುವನು,” ಎಂದರು. ಜನರು ಇದನ್ನು ಕೇಳಿದಾಗ, “ಹಾಗೆ ಎಂದಿಗೂ ಆಗಬಾರದು!” ಎಂದರು.
來りてかの農夫どもを亡し、葡萄園を他の者どもに與ふべし』人々これを聽きて言ふ『然はあらざれ』
17 ಆಗ ಯೇಸು ಅವರನ್ನು ದಿಟ್ಟಿಸಿ ನೋಡಿ, “ಹಾಗಾದರೆ, “‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು,’ ಎಂದು ಪವಿತ್ರ ವೇದದಲ್ಲಿ ಬರೆದಿರುವುದರ ಅರ್ಥ ಏನು?
イエス彼らに目を注めて言ひ給ふ『されば「造家者らの棄てる石は、これぞ隅の首石となれる」と録されたるは何ぞや。
18 ಆ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು; ಆದರೆ ಅದೇ ಕಲ್ಲು ಯಾವನ ಮೇಲೆ ಬೀಳುವುದೋ ಅವನನ್ನು ಅದು ಜಜ್ಜಿ ಹೋಗುವಂತೆ ಮಾಡುವುದು,” ಎಂದರು.
凡そその石の上に倒るる者は碎け、又その石、人の上に倒るれば、その人を微塵にせん』
19 ಅದೇ ಗಳಿಗೆಯಲ್ಲಿ ನಿಯಮ ಬೋಧಕರೂ ಮುಖ್ಯಯಾಜಕರೂ ಯೇಸುವನ್ನು ಬಂಧಿಸುವುದಕ್ಕೆ ಹವಣಿಸಿದರು. ಏಕೆಂದರೆ ಯೇಸು ತಮಗೆ ವಿರೋಧವಾಗಿಯೇ ಈ ಸಾಮ್ಯವನ್ನು ಹೇಳಿದ್ದಾರೆಂದು ಅವರು ತಿಳಿದುಕೊಂಡರು. ಆದರೂ ಅವರು ಜನರಿಗೆ ಭಯಪಟ್ಟರು.
此のとき學者・祭司長ら、イエスに手をかけんと思ひたれど、民を恐れたり。この譬の己どもを指して言ひ給へるを悟りしに因る。
20 ಅವರು ಯೇಸುವನ್ನು ಹೊಂಚಿ ನೋಡುತ್ತಾ, ಮಾತಿನಲ್ಲಿ ಅವರನ್ನು ಸಿಕ್ಕಿಸುವಂತೆ ಅಧಿಪತಿಗೂ ಅಧಿಕಾರಕ್ಕೂ ಒಪ್ಪಿಸಿಕೊಡಲು, ನೀತಿವಂತರೆಂದು ನಟಿಸುವ ಗೂಢಚಾರರನ್ನು ಕಳುಹಿಸಿದರು.
かくて彼ら機を窺ひ、イエスを司の支配と權威との下に付さんとて、その言を捉ふるために、義人の樣したる間諜どもを遣したれば、
21 ಅವರು ಯೇಸುವಿಗೆ, “ಗುರುವೇ, ನೀವು ಮುಖ ದಾಕ್ಷಿಣ್ಯವಿಲ್ಲದೆ ಸರಿಯಾಗಿ ಬೋಧಿಸುತ್ತೀರಿ ಮತ್ತು ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವರಾಗಿದ್ದೀರೆಂದು ನಾವು ಬಲ್ಲೆವು.
其の者どもイエスに問ひて言ふ『師よ、我らは汝の正しく語り、かつ教へ、外貌を取らず、眞をもて神の道を教へ給ふを知る。
22 ಆದ್ದರಿಂದ ಕೈಸರನಿಗೆ ತೆರಿಗೆ ಕೊಡುವುದು ನಮಗೆ ಮೋಶೆಯ ನಿಯಮಕ್ಕೆ ಅನುಸಾರವಾದದ್ದೋ?” ಎಂದು ಕೇಳಿದರು.
われら貢をカイザルに納むるは、善きか、惡しきか』
23 ಆದರೆ ಯೇಸು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ,
イエスその惡巧を知りて言ひ給ふ、
24 “ಒಂದು ಬೆಳ್ಳಿ ನಾಣ್ಯವನ್ನು ತೋರಿಸಿರಿ. ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಅವರನ್ನು ಕೇಳಲು ಅವರು, “ಕೈಸರನದು,” ಎಂದರು.
『デナリを我に見せよ。これは誰の像、たれの號なるか』『カイザルのなり』と答ふ。
25 ಆಗ ಯೇಸು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೂ ದೇವರದ್ದನ್ನು ದೇವರಿಗೂ ಕೊಡಿರಿ,” ಎಂದರು.
イエス言ひ給ふ『さらばカイザルの物はカイザルに、神の物は神に納めよ』
26 ಯೇಸು ಜನರ ಮುಂದೆ ಬಹಿರಂಗವಾಗಿ ಹೇಳಿದ ಮಾತಿನಲ್ಲಿ ಅವರು ತಪ್ಪು ಕಂಡುಹಿಡಿಯಲಾರದೆ ಹೋದರು. ಯೇಸುವಿನ ಉತ್ತರಗಳಿಗಾಗಿ ಆಶ್ಚರ್ಯಪಟ್ಟು ಸುಮ್ಮನಾದರು.
かれら民の前にて其の言をとらへ得ず、且その答を怪しみて默したり。
27 ಪುನರುತ್ಥಾನವನ್ನು ಅಲ್ಲಗಳೆಯುವ ಸದ್ದುಕಾಯರಲ್ಲಿ ಕೆಲವರು, ಯೇಸುವಿನ ಬಳಿಗೆ ಬಂದು ಅವರಿಗೆ,
また復活なしと言張るサドカイ人の或 者ども、イエスに來り問ひて言ふ、
28 “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಸಹೋದರನು ಅವನ ಪತ್ನಿಯನ್ನು ಮದುವೆಯಾಗಿ ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕೆಂದು ಮೋಶೆ ನಮಗೆ ಬರೆದಿಟ್ಟಿದ್ದಾನೆ.
『師よ、モーセは、人の兄弟もし妻あり子なくして死なば、其の兄弟かれの妻を娶りて、兄弟のために嗣子を擧ぐべしと、我らに書き遣したり。
29 ಹೀಗೆ ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಆ ಸ್ತ್ರೀಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತಪಟ್ಟನು.
さて茲に七人の兄弟ありて、兄、妻を娶り、子なくして死に、
30 ಎರಡನೆಯವನೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತನಾದನು.
第二、第三の者も之を娶り、
31 ಮೂರನೆಯವನು ಆಕೆಯನ್ನು ಮದುವೆಯಾದನು, ಅದೇ ರೀತಿಯಲ್ಲಿ ಏಳು ಜನರು ಸಹ ಮದುವೆಯಾಗಿ ಮಕ್ಕಳಿಲ್ಲದೆ ನಿಧನರಾದರು.
七人みな同じく子を殘さずして死に、
32 ಕೊನೆಗೆ, ಆ ಸ್ತ್ರೀಯು ಸಹ ಮರಣಹೊಂದಿದಳು.
後には其の女も死にたり。
33 ಹಾಗಾದರೆ, ಪುನರುತ್ಥಾನದಲ್ಲಿ ಅವರು ಜೀವಂತವಾಗಿ ಎದ್ದಾಗ ಅವರಲ್ಲಿ ಆಕೆಯು ಯಾರ ಪತ್ನಿಯಾಗಿರುವಳು? ಏಕೆಂದರೆ ಏಳುಮಂದಿಯೂ ಅವಳನ್ನು ಮದುವೆ ಮಾಡಿಕೊಂಡಿದ್ದರಲ್ಲಾ?” ಎಂದರು.
されば復活の時、この女は誰の妻たるべきか、七人これを妻としたればなり』
34 ಅದಕ್ಕೆ ಯೇಸು ಉತ್ತರವಾಗಿ, “ಈ ಲೋಕದ ಜನರು ಮದುವೆ ಮಾಡಿಕೊಳ್ಳುತ್ತಾರೆ. ಮದುವೆ ಮಾಡಿಕೊಡುತ್ತಾರೆ. (aiōn g165)
イエス言ひ給ふ『この世の子らは娶り嫁ぎすれど、 (aiōn g165)
35 ಆದರೆ ಮುಂಬರುವ ಲೋಕದಲ್ಲಿ ಸತ್ತವರು ಪುನರುತ್ಥಾನವನ್ನು ಹೊಂದಿ, ಯೋಗ್ಯರೆಂದು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. (aiōn g165)
かの世に入るに、死人の中より甦へるに相應しとせらるる者は、娶り嫁ぎすることなし。 (aiōn g165)
36 ಅವರು ಇನ್ನೆಂದಿಗೂ ಸಾಯುವುದಿಲ್ಲ. ಏಕೆಂದರೆ ಅವರು ಪುನರುತ್ಥಾನದ ಮಕ್ಕಳೂ ದೇವದೂತರಿಗೆ ಸರಿಸಮಾನರೂ ಆಗಿರುವುದರಿಂದ, ಅವರು ದೇವರ ಮಕ್ಕಳಾಗಿದ್ದಾರೆ.
彼 等ははや死ぬること能はざればなり。御使たちに等しく、また復活の子どもにして、神の子供たるなり。
37 ಆದರೆ ಉರಿಯುವ ಪೊದೆಯ ಬಳಿ ಕರ್ತದೇವರು, ‘ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು,’ ಎಂದು ತಿಳಿಸಿ ಸತ್ತವರು ಏಳುತ್ತಾರೆಂಬದನ್ನು ಮೋಶೆಗೆ ವ್ಯಕ್ತಪಡಿಸಿದ್ದಾರೆ.
死にたる者の甦へる事は、モーセも柴の條に、主を「アブラハムの神、イサクの神、ヤコブの神」と呼びて之を示せり。
38 ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ. ಏಕೆಂದರೆ ಎಲ್ಲರೂ ಅವರಿಗಾಗಿ ಜೀವಿಸುತ್ತಾರೆ,” ಎಂದರು.
神は死にたる者の神にあらず、生ける者の神なり。それ神の前には皆 生けるなり』
39 ಆಗ ನಿಯಮ ಬೋಧಕರಲ್ಲಿ ಕೆಲವರು ಪ್ರತ್ಯುತ್ತರವಾಗಿ, “ಬೋಧಕರೇ, ನೀವು ಸರಿಯಾಗಿ ಹೇಳಿದಿರಿ,” ಎಂದರು.
學者のうちの或 者ども答へて『師よ、善く言ひ給へり』と言ふ。
40 ಯಾರೂ ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳುವುದಕ್ಕೂ ಧೈರ್ಯಗೊಳ್ಳಲಿಲ್ಲ.
彼 等ははや何事をも問ひ得ざりし故なり。
41 ಯೇಸು ಅವರಿಗೆ, “ಕ್ರಿಸ್ತನು ದಾವೀದನ ಪುತ್ರನೆಂದು ಜನರು ಹೇಳುವುದು ಹೇಗೆ?
イエス彼らに言ひたまふ『如何なれば人々、キリストをダビデの子と言ふか。
42 ದಾವೀದನು ತಾನೇ ಕೀರ್ತನೆಗಳ ಗ್ರಂಥದಲ್ಲಿ ಹೀಗೆ ಹೇಳಿದ್ದಾನೆ: “‘ಕರ್ತದೇವರು ನನ್ನ ಕರ್ತದೇವರಿಗೆ: “ನಾನು ನಿನ್ನ ವಿರೋಧಿಗಳನ್ನು
ダビデ自ら詩 篇に言ふ「主わが主に言ひたまふ、
43 ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕುಳಿತುಕೊಂಡಿರು.”’
われ汝の敵を汝の足臺となすまでは、わが右に坐せよ」
44 ಆದಕಾರಣ ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರು,’ ಎಂದು ಕರೆಯುವಾಗ, ಅವರು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದರು.
ダビデ斯く彼を主と稱ふれば、爭でその子ならんや』
45 ಜನರೆಲ್ಲರೂ ಕೇಳುತ್ತಿದ್ದಾಗ ಯೇಸು ತಮ್ಮ ಶಿಷ್ಯರಿಗೆ,
民の皆ききをる中にて、イエス弟子たちに言ひ給ふ、
46 “ನಿಯಮ ಬೋಧಕರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಯನ್ನು ತೊಟ್ಟುಕೊಂಡು ತಿರುಗಾಡುವುದಕ್ಕೆ ಬಯಸುವವರೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಬಯಸುವವರಾಗಿದ್ದಾರೆ;
『學者らに心せよ。彼らは長き衣を著て歩むことを好み、市場にての敬禮、會堂の上座、饗宴の上席を喜び、
47 ಇವರು ವಿಧವೆಯರ ಮನೆಗಳನ್ನು ದೋಚಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು,” ಎಂದರು.
また寡婦らの家を呑み、外見をつくりて長き祈をなす。其の受くる審判は更に嚴しからん』

< ಲೂಕನು 20 >