< ಮತ್ತಾಯನು 28 >

1 ಸಬ್ಬತ್ ದಿನ ಆದ ಮೇಲೆ ವಾರದ ಮೊದಲನೆಯ ದಿನ ಬೆಳಗಾಗುತ್ತಿರುವಾಗಲೇ ಮಗ್ದಲದ ಮರಿಯಳೂ ಮತ್ತು ಆ ಬೇರೆ ಮರಿಯಳೂ ಸಮಾಧಿಯನ್ನು ನೋಡಲು ಬಂದರು.
តតះ បរំ វិឝ្រាមវារស្យ ឝេឞេ សប្តាហប្រថមទិនស្យ ប្រភោតេ ជាតេ មគ្ទលីនី មរិយម៑ អន្យមរិយម៑ ច ឝ្មឝានំ ទ្រឞ្ដុមាគតា។
2 ಇಗೋ, ಮಹಾ ಭೂಕಂಪವುಂಟಾಯಿತು, ಕರ್ತನ ದೂತನು ಆಕಾಶದಿಂದ ಇಳಿದು ಬಂದು ಆ ಕಲ್ಲನ್ನು ಬಾಗಿಲಿನಿಂದ ಉರುಳಿಸಿ ಅದರ ಮೇಲೆ ಕುಳಿತುಕೊಂಡಿದ್ದನು.
តទា មហាន៑ ភូកម្បោៜភវត៑; បរមេឝ្វរីយទូតះ ស្វគ៌ាទវរុហ្យ ឝ្មឝានទ្វារាត៑ បាឞាណមបសាយ៌្យ តទុបយ៌្យុបវិវេឝ។
3 ಅವನ ಮುಖಭಾವವು ಮಿಂಚಿನಂತೆ ಇತ್ತು. ಅವನ ಉಡುಪು ಹಿಮದಂತೆ ಬೆಳ್ಳಗಿತ್ತು;
តទ្វទនំ វិទ្យុទ្វត៑ តេជោមយំ វសនំ ហិមឝុភ្រញ្ច។
4 ಕಾವಲುಗಾರರು ಹೆದರಿ ನಡುಗಿ ಸತ್ತವರ ಹಾಗಾದರು.
តទានីំ រក្ឞិណស្តទ្ភយាត៑ កម្បិតា ម្ឫតវទ៑ ពភូវះ។
5 ಆಗ ದೂತನು ಆ ಹೆಂಗಸರಿಗೆ, “ನೀವು ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು;
ស ទូតោ យោឞិតោ ជគាទ, យូយំ មា ភៃឞ្ដ, ក្រុឝហតយីឝុំ ម្ឫគយធ្វេ តទហំ វេទ្មិ។
6 ಆತನು ಇಲ್ಲಿ ಇಲ್ಲ, ತಾನು ಹೇಳಿದಂತೆಯೇ ಎದ್ದಿದ್ದಾನೆ. ಬನ್ನಿ, ಕರ್ತನು ಮಲಗಿದ್ದ ಸ್ಥಳವನ್ನು ನೋಡಿರಿ;
សោៜត្រ នាស្តិ, យថាវទត៑ តថោត្ថិតវាន៑; ឯតត៑ ប្រភោះ ឝយនស្ថានំ បឝ្យត។
7 ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ, ‘ಆತನು ಸತ್ತವರೊಳಗಿಂದ ಎದ್ದಿದ್ದಾನೆಂದು, ಆತನು ನಿಮಗಿಂತಲೂ ಮೊದಲೇ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ’ ಎಂದು ತಿಳಿಸಿರಿ; ನೋಡಿರಿ, ನಾನು ನಿಮಗೆ ಹೇಳಿದ್ದೇನೆ,” ಎಂದು ಹೇಳಿದನು.
តូណ៌ំ គត្វា តច្ឆិឞ្យាន៑ ឥតិ វទត, ស ឝ្មឝានាទ៑ ឧទតិឞ្ឋត៑, យុឞ្មាកមគ្រេ គាលីលំ យាស្យតិ យូយំ តត្រ តំ វីក្ឞិឞ្យធ្វេ, បឝ្យតាហំ វាត៌្តាមិមាំ យុឞ្មានវាទិឞំ។
8 ಅವರು ಭಯದಿಂದಲೂ, ಮಹಾ ಸಂತೋಷದಿಂದಲೂ ಬೇಗ ಸಮಾಧಿಯ ಬಳಿಯಿಂದ ಹೊರಟು ಆತನ ಶಿಷ್ಯರಿಗೆ ಅದನ್ನು ತಿಳಿಸುವುದಕ್ಕೆ ಓಡಿಹೋದರು.
តតស្តា ភយាត៑ មហានន្ទាញ្ច ឝ្មឝានាត៑ តូណ៌ំ ពហិព៌្ហូយ តច្ឆិឞ្យាន៑ វាត៌្តាំ វក្តុំ ធាវិតវត្យះ។ កិន្តុ ឝិឞ្យាន៑ វាត៌្តាំ វក្តុំ យាន្តិ, តទា យីឝុ រ្ទឝ៌នំ ទត្ត្វា តា ជគាទ,
9 ಆಗ ಯೇಸು ಅವರನ್ನು ಭೇಟಿಯಾಗಿ, “ನಿಮಗೆ ಶುಭವಾಗಲಿ” ಅಂದನು. ಅವರು ಹತ್ತಿರಕ್ಕೆ ಬಂದು ಆತನ ಪಾದಗಳಿಗೆ ಅಡ್ಡಬಿದ್ದು ಆತನನ್ನು ಆರಾಧಿಸಿದರು.
យុឞ្មាកំ កល្យាណំ ភូយាត៑, តតស្តា អាគត្យ តត្បាទយោះ បតិត្វា ប្រណេមុះ។
10 ೧೦ ಆಗ ಯೇಸು ಅವರಿಗೆ, “ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ಅವರು ನನ್ನನ್ನು ನೋಡುವರು” ಎಂದು ಹೇಳಿದನು.
យីឝុស្តា អវាទីត៑, មា ពិភីត, យូយំ គត្វា មម ភ្រាត្ឫន៑ គាលីលំ យាតុំ វទត, តត្រ តេ មាំ ទ្រក្ឞ្យន្តិ។
11 ೧೧ ಆಗ ಹೆಂಗಸರು ಹೋಗುತ್ತಿರುವಾಗ, ಇಗೋ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ನಡೆದ ಸಂಗತಿಗಳನ್ನೆಲ್ಲಾ ಮುಖ್ಯಯಾಜಕರಿಗೆ ತಿಳಿಸಿದರು.
ស្ត្រិយោ គច្ឆន្តិ, តទា រក្ឞិណាំ កេចិត៑ បុរំ គត្វា យទ្យទ៑ ឃដិតំ តត្សវ៌្វំ ប្រធានយាជកាន៑ ជ្ញាបិតវន្តះ។
12 ೧೨ ಯಾಜಕರು ಹಿರಿಯರ ಸಂಗಡ ಕೂಡಿಕೊಂಡು ಆಲೋಚನೆ ಮಾಡಿ ಆ ಸಿಪಾಯಿಗಳಿಗೆ ಬಹಳ ಹಣಕೊಟ್ಟು,
តេ ប្រាចីនៃះ សមំ សំសទំ ក្ឫត្វា មន្ត្រយន្តោ ពហុមុទ្រាះ សេនាភ្យោ ទត្ត្វាវទន៑,
13 ೧೩ “‘ಯೇಸುವಿನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿದ್ದಾಗ ಅವನ ಮೃತದೇಹವನ್ನು ಕದ್ದುಕೊಂಡು ಹೋದರು’ ಎಂದು ಹೇಳಿರಿ;
អស្មាសុ និទ្រិតេឞុ តច្ឆិឞ្យា យាមិន្យាមាគត្យ តំ ហ្ឫត្វានយន៑, ឥតិ យូយំ ប្រចារយត។
14 ೧೪ ಈ ಸುದ್ದಿಯು ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವು ಅವನನ್ನು ಸಮಾಧಾನಪಡಿಸಿ ನಿಮಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ” ಎಂದರು.
យទ្យេតទធិបតេះ ឝ្រោត្រគោចរីភវេត៑, តហ៌ិ តំ ពោធយិត្វា យុឞ្មានវិឞ្យាមះ។
15 ೧೫ ಅದರಂತೆ ಕಾವಲುಗಾರರು ಆ ಹಣವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟ ಹಾಗೆಯೇ ಮಾಡಿದರು. ಈ ಮಾತು ಇಂದಿನವರೆಗೂ ಯೆಹೂದ್ಯರಲ್ಲಿ ಹರಡಿಕೊಂಡಿದೆ.
តតស្តេ មុទ្រា គ្ឫហីត្វា ឝិក្ឞានុរូបំ កម៌្ម ចក្រុះ, យិហូទីយានាំ មធ្យេ តស្យាទ្យាបិ កិំវទន្តី វិទ្យតេ។
16 ೧೬ ಆದರೆ ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೋಗಿ, ಯೇಸು ತಮಗೆ ಗೊತ್ತುಮಾಡಿದ್ದ ಬೆಟ್ಟಕ್ಕೆ ಹೋಗಿ ಸೇರಿದರು.
ឯកាទឝ ឝិឞ្យា យីឝុនិរូបិតាគាលីលស្យាទ្រិំ គត្វា
17 ೧೭ ಅವರು ಅಲ್ಲಿ ಯೇಸುವನ್ನು ಕಂಡು ಆತನನ್ನು ಆರಾಧಿಸಿದರು; ಆದರೆ ಕೆಲವರು ಸಂದೇಹಪಟ್ಟರು.
តត្រ តំ សំវីក្ឞ្យ ប្រណេមុះ, កិន្តុ កេចិត៑ សន្ទិគ្ធវន្តះ។
18 ೧೮ ಯೇಸು ಅವರ ಹತ್ತಿರಕ್ಕೆ ಬಂದು, “ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಇರುವ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ.
យីឝុស្តេឞាំ សមីបមាគត្យ វ្យាហ្ឫតវាន៑, ស្វគ៌មេទិន្យោះ សវ៌្វាធិបតិត្វភារោ មយ្យប៌ិត អាស្តេ។
19 ೧೯ ಆದುದರಿಂದ ನೀವು ಹೊರಟುಹೋಗಿ ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ; ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ.
អតោ យូយំ ប្រយាយ សវ៌្វទេឝីយាន៑ ឝិឞ្យាន៑ ក្ឫត្វា បិតុះ បុត្រស្យ បវិត្រស្យាត្មនឝ្ច នាម្នា តានវគាហយត; អហំ យុឞ្មាន៑ យទ្យទាទិឝំ តទបិ បាលយិតុំ តានុបាទិឝត។
20 ೨೦ ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ. ಹಾಗುಇಗೋ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿನವೂ ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳಿದನು. (aiōn g165)
បឝ្យត, ជគទន្តំ យាវត៑ សទាហំ យុឞ្មាភិះ សាកំ តិឞ្ឋាមិ។ ឥតិ។ (aiōn g165)

< ಮತ್ತಾಯನು 28 >