< ಅಪೊಸ್ತಲರ ಕೃತ್ಯಗಳ 9 >

1 ಸೌಲನು ಇನ್ನೂ ಕರ್ತನ ಶಿಷ್ಯರ ಮೇಲೆ ಕೋಪವುಳ್ಳನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಆಲೋಚಿಸುತ್ತಾ ಮಹಾಯಾಜಕನ ಬಳಿಗೆ ಹೋಗಿ;
તત્કાલપર્ય્યનતં શૌલઃ પ્રભોઃ શિષ્યાણાં પ્રાતિકૂલ્યેન તાડનાબધયોઃ કથાં નિઃસારયન્ મહાયાજકસ્ય સન્નિધિં ગત્વા
2 ಈ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ ಅವರು ಗಂಡಸರಾದರೂ ಸರಿಯೇ, ಹೆಂಗಸರಾದರೂ ಸರಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರೂಸಲೇಮಿಗೆ ತರುವಂತೆ, ದಮಸ್ಕದಲ್ಲಿರುವ ಸಭಾಮಂದಿರದವರಿಗೆ ನೀನು, ಪತ್ರವನ್ನು ಕೊಡಬೇಕು ಎಂದು ಅವನನ್ನು ಬೇಡಿಕೊಂಡನು.
સ્ત્રિયં પુરુષઞ્ચ તન્મતગ્રાહિણં યં કઞ્ચિત્ પશ્યતિ તાન્ ધૃત્વા બદ્ધ્વા યિરૂશાલમમ્ આનયતીત્યાશયેન દમ્મેષક્નગરીયં ધર્મ્મસમાજાન્ પ્રતિ પત્રં યાચિતવાન્|
3 ಅವನು ಪ್ರಯಾಣ ಮಾಡುತ್ತಾ ದಮಸ್ಕದ ಹತ್ತಿರಕ್ಕೆ ಬರಲು, ಫಕ್ಕನೆ ಆಕಾಶದಿಂದ ಒಂದು ಬೆಳಕು ಅವನ ಸುತ್ತಲು ಮಿಂಚಿತು.
ગચ્છન્ તુ દમ્મેષક્નગરનિકટ ઉપસ્થિતવાન્; તતોઽકસ્માદ્ આકાશાત્ તસ્ય ચતુર્દિક્ષુ તેજસઃ પ્રકાશનાત્ સ ભૂમાવપતત્|
4 ಅವನು ನೆಲಕ್ಕೆ ಬಿದ್ದನು. ಆಗ, “ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ?” ಎಂದು ಹೇಳುವ ವಾಣಿಯನ್ನು ಕೇಳಿದನು.
પશ્ચાત્ હે શૌલ હે શૌલ કુતો માં તાડયસિ? સ્વં પ્રતિ પ્રોક્તમ્ એતં શબ્દં શ્રુત્વા
5 ಅದಕ್ಕೆ ಸೌಲನು; , “ಕರ್ತನೇ, ನೀನಾರು?” ಎಂದು ಕೇಳಿದ್ದಕ್ಕೆ, ಕರ್ತನು, “ನೀನು ಹಿಂಸೆಪಡಿಸುವ ಯೇಸುವೇ ನಾನು;
સ પૃષ્ટવાન્, હે પ્રભો ભવાન્ કઃ? તદા પ્રભુરકથયત્ યં યીશું ત્વં તાડયસિ સ એવાહં; કણ્ટકસ્ય મુખે પદાઘાતકરણં તવ કષ્ટમ્|
6 ನೀನೆದ್ದು ಊರೊಳಕ್ಕೆ ಹೋಗು, ನೀನು ಮಾಡಬೇಕಾದದ್ದು ಅಲ್ಲಿ ನಿನಗೆ ತಿಳಿಸಲ್ಪಡುವುದು” ಎಂದು ಹೇಳಿದನು.
તદા કમ્પમાનો વિસ્મયાપન્નશ્ચ સોવદત્ હે પ્રભો મયા કિં કર્ત્તવ્યં? ભવત ઇચ્છા કા? તતઃ પ્રભુરાજ્ઞાપયદ્ ઉત્થાય નગરં ગચ્છ તત્ર ત્વયા યત્ કર્ત્તવ્યં તદ્ વદિષ્યતે|
7 ಅವನ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದವರು ಧ್ವನಿಯನ್ನು ಮಾತ್ರ ಕೇಳಿ, ಯಾರನ್ನೂ ಕಾಣದೆ ಮೂಕರಂತೆ ವಿಸ್ಮಿತರಾಗಿ ನಿಂತರು.
તસ્ય સઙ્ગિનો લોકા અપિ તં શબ્દં શ્રુતવન્તઃ કિન્તુ કમપિ ન દૃષ્ટ્વા સ્તબ્ધાઃ સન્તઃ સ્થિતવન્તઃ|
8 ಸೌಲನು ನೆಲದಿಂದ ಎದ್ದು ಕಣ್ಣು ತೆರೆದಾಗ ಏನೂ ಕಾಣಿಸಲಿಲ್ಲ. ಆಗ ಅವರು ಅವನನ್ನು ಕೈಹಿಡಿದು ದಮಸ್ಕದೊಳಕ್ಕೆ ಕರೆದುಕೊಂಡು ಹೋದರು.
અનન્તરં શૌલો ભૂમિત ઉત્થાય ચક્ષુષી ઉન્મીલ્ય કમપિ ન દૃષ્ટવાન્| તદા લોકાસ્તસ્ય હસ્તૌ ધૃત્વા દમ્મેષક્નગરમ્ આનયન્|
9 ಅವನು ಮೂರು ದಿನಗಳು ಕಣ್ಣುಕಾಣದೆ, ಏನೂ ತಿನ್ನಲಿಲ್ಲ ಮತ್ತು ಏನೂ ಕುಡಿಯದೇ ಇದ್ದನು.
તતઃ સ દિનત્રયં યાવદ્ અન્ધો ભૂત્વા ન ભુક્તવાન્ પીતવાંશ્ચ|
10 ೧೦ ದಮಸ್ಕದಲ್ಲಿ ಅನನೀಯನೆಂಬ ಒಬ್ಬ ಶಿಷ್ಯನಿದ್ದನು; ಕರ್ತನು ದರ್ಶನದಲ್ಲಿ; “ಅನನೀಯನೇ,” ಎಂದು ಅವನನ್ನು ಕರೆಯಲು, ಅವನು; “ಕರ್ತನೇ, ಇಗೋ, ಇದ್ದೇನೆ” ಅಂದನು.
તદનન્તરં પ્રભુસ્તદ્દમ્મેષક્નગરવાસિન એકસ્મૈ શિષ્યાય દર્શનં દત્વા આહૂતવાન્ હે અનનિય| તતઃ સ પ્રત્યવાદીત્, હે પ્રભો પશ્ય શૃણોમિ|
11 ೧೧ ಕರ್ತನು ಅವನಿಗೆ, “ನೀನೆದ್ದು ನೆಟ್ಟನೇ ಬೀದಿ ಎಂಬ ಬೀದಿಗೆ ಹೋಗಿ ಯೂದನ ಮನೆಯಲ್ಲಿ ತಾರ್ಸದ ಸೌಲನೆಂಬವನನ್ನು ಕುರಿತು ವಿಚಾರಿಸು; ಅವನು ಈಗ ಪ್ರಾರ್ಥನೆ ಮಾಡುತ್ತಿದ್ದಾನೆ.
તદા પ્રભુસ્તમાજ્ઞાપયત્ ત્વમુત્થાય સરલનામાનં માર્ગં ગત્વા યિહૂદાનિવેશને તાર્ષનગરીયં શૌલનામાનં જનં ગવેષયન્ પૃચ્છ;
12 ೧೨ ಮತ್ತು ಅನನೀಯನೆಂಬ ಒಬ್ಬ ಮನುಷ್ಯನು ಒಳಗೆ ಬಂದು ತನಗೆ ಪುನಃ ಕಣ್ಣು ಕಾಣುವಂತೆ ತನ್ನ ಮೇಲೆ ಕೈಯಿಟ್ಟು ಪ್ರಾರ್ಥನೆಮಾಡುವುದನ್ನು ದರ್ಶನದಲ್ಲಿ ನೋಡಿದ್ದಾನೆ” ಎಂದು ಹೇಳಿದನು.
પશ્ય સ પ્રાર્થયતે, તથા અનનિયનામક એકો જનસ્તસ્ય સમીપમ્ આગત્ય તસ્ય ગાત્રે હસ્તાર્પણં કૃત્વા દૃષ્ટિં દદાતીત્થં સ્વપ્ને દૃષ્ટવાન્|
13 ೧೩ ಅದಕ್ಕೆ ಅನನೀಯನು, “ಕರ್ತನೇ, ಆ ಮನುಷ್ಯನು ಯೆರೂಸಲೇಮಿನಲ್ಲಿ ನಿನ್ನನ್ನು ನಂಬಿದ ದೇವಜನರಿಗೆ ಎಷ್ಟೋ ಕೇಡನ್ನುಂಟುಮಾಡಿದನೆಂದು ಅವನ ವಿಷಯವಾಗಿ ಅನೇಕರಿಂದ ಕೇಳಿದ್ದೇನೆ.
તસ્માદ્ અનનિયઃ પ્રત્યવદત્ હે પ્રભો યિરૂશાલમિ પવિત્રલોકાન્ પ્રતિ સોઽનેકહિંસાં કૃતવાન્;
14 ೧೪ ಮತ್ತು ಇಲ್ಲಿಯೂ ನಿನ್ನ ಹೆಸರನ್ನು ಸ್ಮರಿಸುವವರೆಲ್ಲರಿಗೆ ಬೇಡಿಹಾಕಿಸುವ ಅಧಿಕಾರವನ್ನು ಮುಖ್ಯಯಾಜಕರಿಂದ ಹೊಂದಿದ್ದಾನೆ” ಅಂದನು.
અત્ર સ્થાને ચ યે લોકાસ્તવ નામ્નિ પ્રાર્થયન્તિ તાનપિ બદ્ધું સ પ્રધાનયાજકેભ્યઃ શક્તિં પ્રાપ્તવાન્, ઇમાં કથામ્ અહમ્ અનેકેષાં મુખેભ્યઃ શ્રુતવાન્|
15 ೧೫ ಕರ್ತನು ಅವನಿಗೆ, “ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ, ಅರಸುಗಳಿಗೂ, ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.
કિન્તુ પ્રભુરકથયત્, યાહિ ભિન્નદેશીયલોકાનાં ભૂપતીનામ્ ઇસ્રાયેલ્લોકાનાઞ્ચ નિકટે મમ નામ પ્રચારયિતું સ જનો મમ મનોનીતપાત્રમાસ્તે|
16 ೧೬ ಅವನು ನನ್ನ ಹೆಸರಿನ ನಿಮಿತ್ತ ಎಷ್ಟು ಹಿಂಸೆ ಅನುಭವಿಸಬೇಕೆಂಬುದನ್ನು ನಾನೇ ಅವನಿಗೆ ತೋರಿಸುವೆನು” ಎಂದು ಹೇಳಿದನು.
મમ નામનિમિત્તઞ્ચ તેન કિયાન્ મહાન્ ક્લેશો ભોક્તવ્ય એતત્ તં દર્શયિષ્યામિ|
17 ೧೭ ಆಗ ಅನನೀಯನು ಹೊರಟು ಆ ಮನೆಯೊಳಗೆ ಹೋಗಿ ಅವನ ಮೇಲೆ ತನ್ನ ಕೈಗಳನ್ನಿಟ್ಟು, “ಸಹೋದರನಾದ ಸೌಲನೇ, ನೀನು ಬಂದ ದಾರಿಯಲ್ಲಿ ನಿನಗೆ ಕಾಣಿಸಿಕೊಂಡ ಕರ್ತನಾದ ಯೇಸು ನಿನಗೆ ಕಣ್ಣು ಕಾಣುವಂತೆಯೂ, ನೀನು ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ” ಎಂದು ಹೇಳಿದನು.
તતો ઽનનિયો ગત્વા ગૃહં પ્રવિશ્ય તસ્ય ગાત્રે હસ્તાર્પ્રણં કૃત્વા કથિતવાન્, હે ભ્રાતઃ શૌલ ત્વં યથા દૃષ્ટિં પ્રાપ્નોષિ પવિત્રેણાત્મના પરિપૂર્ણો ભવસિ ચ, તદર્થં તવાગમનકાલે યઃ પ્રભુયીશુસ્તુભ્યં દર્શનમ્ અદદાત્ સ માં પ્રેષિતવાન્|
18 ೧೮ ಕೂಡಲೇ ಅವನ ಕಣ್ಣುಗಳಿಂದ ಪರೆಗಳಂತೆ ಏನೋ ಬಿದ್ದು ಅವನ ಕಣ್ಣು ಕಾಣಿಸಿದವು. ಅವನು ಎದ್ದು ದೀಕ್ಷಾಸ್ನಾನ ಮಾಡಿಸಿಕೊಂಡನು.
ઇત્યુક્તમાત્રે તસ્ય ચક્ષુર્ભ્યામ્ મીનશલ્કવદ્ વસ્તુનિ નિર્ગતે તત્ક્ષણાત્ સ પ્રસન્નચક્ષુ ર્ભૂત્વા પ્રોત્થાય મજ્જિતોઽભવત્ ભુક્ત્વા પીત્વા સબલોભવચ્ચ|
19 ೧೯ ತರುವಾಯ ಊಟಮಾಡಿ ಬಲಹೊಂದಿದನು. ಅವನು ದಮಸ್ಕದಲ್ಲಿದ್ದ ಶಿಷ್ಯರ ಸಂಗಡ ಕೆಲವು ದಿನಗಳು ಇದ್ದನು.
તતઃ પરં શૌલઃ શિષ્યૈઃ સહ કતિપયદિવસાન્ તસ્મિન્ દમ્મેષકનગરે સ્થિત્વાઽવિલમ્બં
20 ೨೦ ಅವನು ಕೂಡಲೇ, ಸಭಾಮಂದಿರಗಳಲ್ಲಿ ಯೇಸುವಿನ ವಿಷಯವಾಗಿ ಆತನೇ ದೇವಕುಮಾರನೆಂದು ಸಾರುವುದಕ್ಕೆ ಪ್ರಾರಂಭಮಾಡಿದನು.
સર્વ્વભજનભવનાનિ ગત્વા યીશુરીશ્વરસ્ય પુત્ર ઇમાં કથાં પ્રાચારયત્|
21 ೨೧ ಕೇಳಿದವರೆಲ್ಲರು ಬೆರಗಾಗಿ; “ಯೇಸುಕ್ರಿಸ್ತನ ಹೆಸರು ಹೇಳುವವರನ್ನು ಯೆರೂಸಲೇಮಿನಲ್ಲಿ ನಾಶಮಾಡುತ್ತಿದ್ದವನು ಇವನಲ್ಲವೇ. ಅಂಥವರನ್ನು ಬೇಡಿಹಾಕಿಸಿ ಮುಖ್ಯಯಾಜಕರ ಬಳಿಗೆ ತೆಗೆದುಕೊಂಡು ಹೋಗಬೇಕೆಂದು ಇಲ್ಲಿಗೆ ಬಂದಿರುವನಲ್ಲವೇ” ಎಂದು ಮಾತನಾಡಿಕೊಂಡರು.
તસ્માત્ સર્વ્વે શ્રોતારશ્ચમત્કૃત્ય કથિતવન્તો યો યિરૂશાલમ્નગર એતન્નામ્ના પ્રાર્થયિતૃલોકાન્ વિનાશિતવાન્ એવમ્ એતાદૃશલોકાન્ બદ્ધ્વા પ્રધાનયાજકનિકટં નયતીત્યાશયા એતત્સ્થાનમપ્યાગચ્છત્ સએવ કિમયં ન ભવતિ?
22 ೨೨ ಆದರೆ ಸೌಲನು ಇನ್ನೂ ಅಧಿಕ ಬಲವುಳ್ಳವನಾಗಿ, ಯೇಸುವೇ ಕ್ರಿಸ್ತನೆಂದು ರುಜುವಾತುಪಡಿಸುತ್ತಾ ದಮಸ್ಕದಲ್ಲಿದ್ದ ಯೆಹೂದ್ಯರನ್ನು ಉತ್ತರವಿಲ್ಲದವರ ಹಾಗೆ ಮಾಡಿದನು.
કિન્તુ શૌલઃ ક્રમશ ઉત્સાહવાન્ ભૂત્વા યીશુરીશ્વરેણાભિષિક્તો જન એતસ્મિન્ પ્રમાણં દત્વા દમ્મેષક્-નિવાસિયિહૂદીયલોકાન્ નિરુત્તરાન્ અકરોત્|
23 ೨೩ ಅನೇಕ ದಿನಗಳು ಕಳೆದ ಮೇಲೆ, ಯೆಹೂದ್ಯರು ಅವನನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
ઇત્થં બહુતિથે કાલે ગતે યિહૂદીયલોકાસ્તં હન્તું મન્ત્રયામાસુઃ
24 ೨೪ ಆದರೆ ಅವರ ಗೂಢಾಲೋಚನೆಯು ಸೌಲನಿಗೆ ತಿಳಿದುಬಂದಿತು. ಅವನನ್ನು ಕೊಲ್ಲುವುದಕ್ಕಾಗಿ ಅವರು ಹಗಲಿರುಳೂ ಪಟ್ಟಣದ ಬಾಗಿಲುಗಳನ್ನು ಕಾಯುತ್ತಿದ್ದರು.
કિન્તુ શૌલસ્તેષામેતસ્યા મન્ત્રણાયા વાર્ત્તાં પ્રાપ્તવાન્| તે તં હન્તું તુ દિવાનિશં ગુપ્તાઃ સન્તો નગરસ્ય દ્વારેઽતિષ્ઠન્;
25 ೨೫ ಆದರೆ ಸೌಲನ ಶಿಷ್ಯರು ರಾತ್ರಿಕಾಲದಲ್ಲಿ ಅವನನ್ನು ಕರೆದುಕೊಂಡುಹೋಗಿ, ಒಂದು ಪುಟ್ಟಿಯಲ್ಲಿ ಕುಳ್ಳಿರಿಸಿ, ಗೋಡೆಯ ಮಗ್ಗುಲಲ್ಲಿ ಇಳಿಸಿದರು.
તસ્માત્ શિષ્યાસ્તં નીત્વા રાત્રૌ પિટકે નિધાય પ્રાચીરેણાવારોહયન્|
26 ೨೬ ಅವನು ಯೆರೂಸಲೇಮಿಗೆ ಬಂದು ಶಿಷ್ಯರೊಳಗೆ ಸೇರಿಕೊಳ್ಳಬೇಕೆಂದು ಪ್ರಯತ್ನಪಟ್ಟಾಗ, ಅಲ್ಲಿ ಇದ್ದವರು ಅವನನ್ನು ಯೇಸುವಿನ ಶಿಷ್ಯನೆಂದು ನಂಬದೆ ಅವನಿಗೆ ಭಯಪಟ್ಟರು.
તતઃ પરં શૌલો યિરૂશાલમં ગત્વા શિષ્યગણેન સાર્દ્ધં સ્થાતુમ્ ઐહત્, કિન્તુ સર્વ્વે તસ્માદબિભયુઃ સ શિષ્ય ઇતિ ચ ન પ્રત્યયન્|
27 ೨೭ ಆದರೆ ಬಾರ್ನಬನು ಅವನನ್ನು ಕೈಹಿಡಿದು, ಅಪೊಸ್ತಲರ ಬಳಿಗೆ ಕರೆದುಕೊಂಡುಹೋಗಿ, ಅವನು ದಮಸ್ಕದ ದಾರಿಯಲ್ಲಿ ಕರ್ತನನ್ನು ಕಂಡದ್ದನ್ನೂ, ಕರ್ತನು ಅವನ ಸಂಗಡ ಮಾತನಾಡಿದ್ದನ್ನೂ, ದಮಸ್ಕದೊಳಗೆ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಪ್ರಚಾರ ಮಾಡಿದ್ದನ್ನೂ ಅವರಿಗೆ ವಿವರವಾಗಿ ಹೇಳಿದನು.
એતસ્માદ્ બર્ણબ્બાસ્તં ગૃહીત્વા પ્રેરિતાનાં સમીપમાનીય માર્ગમધ્યે પ્રભુઃ કથં તસ્મૈ દર્શનં દત્તવાન્ યાઃ કથાશ્ચ કથિતવાન્ સ ચ યથાક્ષોભઃ સન્ દમ્મેષક્નગરે યીશો ર્નામ પ્રાચારયત્ એતાન્ સર્વ્વવૃત્તાન્તાન્ તાન્ જ્ઞાપિતવાન્|
28 ೨೮ ಆ ಮೇಲೆ ಸೌಲನು ಯೆರೂಸಲೇಮಿನಲ್ಲಿದ್ದುಕೊಂಡು ಅವರಲ್ಲಿ ಬರುತ್ತಾ ಹೋಗುತ್ತಾ ಕರ್ತನ ಹೆಸರಿನಲ್ಲಿ ಧೈರ್ಯದಿಂದ ಬೋಧಿಸತೊಡಗಿದನು.
તતઃ શૌલસ્તૈઃ સહ યિરૂશાલમિ કાલં યાપયન્ નિર્ભયં પ્રભો ર્યીશો ર્નામ પ્રાચારયત્|
29 ೨೯ ಮತ್ತು ಗ್ರೀಕ್ ಭಾಷೆಯನ್ನಾಡುವ ಯೆಹೂದ್ಯರ ಸಂಗಡ ಮಾತನಾಡಿ ತರ್ಕಮಾಡುತ್ತಿದ್ದನು. ಆದರೆ ಅವರು ಅವನನ್ನು ಕೊಲ್ಲುವುದಕ್ಕೆ ಪ್ರಯತ್ನ ಮಾಡುತ್ತಿದ್ದರು.
તસ્માદ્ અન્યદેશીયલોકૈઃ સાર્દ્ધં વિવાદસ્યોપસ્થિતત્વાત્ તે તં હન્તુમ્ અચેષ્ટન્ત|
30 ೩೦ ಇದು ಸಹೋದರರಿಗೆ ತಿಳಿದು ಬರಲು, ಅವರು ಅವನನ್ನು ಕೈಸರೈಯಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ತಾರ್ಸಕ್ಕೆ ಕಳುಹಿಸಿದರು.
કિન્તુ ભ્રાતૃગણસ્તજ્જ્ઞાત્વા તં કૈસરિયાનગરં નીત્વા તાર્ષનગરં પ્રેષિતવાન્|
31 ೩೧ ಹೀಗಿರಲಾಗಿ ಯೂದಾಯ, ಗಲಿಲಾಯ, ಸಮಾರ್ಯ ಸೀಮೆಗಳಲ್ಲಿದ್ದ ಸಭೆಯು ಸಮಾಧಾನ ಹೊಂದಿತು; ಮತ್ತು ಭಕ್ತಿಯಲ್ಲಿ ಬೆಳೆದು ಕರ್ತನ ಭಯದಲ್ಲಿ ನಡೆದು, ಪವಿತ್ರಾತ್ಮನಿಂದ ಪ್ರೋತ್ಸಾಹವನ್ನು ಹೊಂದಿ ಬೆಳೆಯುತ್ತಾ ಬಂದಿತು.
ઇત્થં સતિ યિહૂદિયાગાલીલ્શોમિરોણદેશીયાઃ સર્વ્વા મણ્ડલ્યો વિશ્રામં પ્રાપ્તાસ્તતસ્તાસાં નિષ્ઠાભવત્ પ્રભો ર્ભિયા પવિત્રસ્યાત્મનઃ સાન્ત્વનયા ચ કાલં ક્ષેપયિત્વા બહુસંખ્યા અભવન્|
32 ೩೨ ಪೇತ್ರನು ಎಲ್ಲಾ ಕಡೆಗಳಲ್ಲಿಯೂ ಸಂಚಾರಮಾಡುತ್ತಿರುವಾಗ, ಲುದ್ದದಲ್ಲಿ ವಾಸವಾಗಿದ್ದ ದೇವಜನರ ಬಳಿಗೂ ಬಂದನು.
તતઃ પરં પિતરઃ સ્થાને સ્થાને ભ્રમિત્વા શેષે લોદ્નગરનિવાસિપવિત્રલોકાનાં સમીપે સ્થિતવાન્|
33 ೩೩ ಅಲ್ಲಿ ಪಾರ್ಶ್ವವಾಯುರೋಗಿಯಾಗಿ ಎಂಟು ವರ್ಷಗಳಿಂದ ಹಾಸಿಗೆಯ ಮೇಲೆ ಬಿದ್ದಿದ್ದ ಐನೇಯನೆಂಬ ಒಬ್ಬ ಮನುಷ್ಯನನ್ನು ಕಂಡನು.
તદા તત્ર પક્ષાઘાતવ્યાધિનાષ્ટૌ વત્સરાન્ શય્યાગતમ્ ઐનેયનામાનં મનુષ્યં સાક્ષત્ પ્રાપ્ય તમવદત્,
34 ೩೪ ಪೇತ್ರನು ಅವನಿಗೆ, “ಐನೇಯನೇ, ಯೇಸು ಕ್ರಿಸ್ತನು ನಿನ್ನನ್ನು ವಾಸಿಮಾಡುತ್ತಾನೆ; ಎದ್ದು ನಿನ್ನ ಹಾಸಿಗೆಯನ್ನು ನೀನೇ ಹಾಸಿಕೋ” ಎಂದು ಹೇಳಿದನು. ಕೂಡಲೆ ಅವನು ಎದ್ದನು.
હે ઐનેય યીશુખ્રીષ્ટસ્ત્વાં સ્વસ્થમ્ અકાર્ષીત્, ત્વમુત્થાય સ્વશય્યાં નિક્ષિપ, ઇત્યુક્તમાત્રે સ ઉદતિષ્ઠત્|
35 ೩೫ ಮತ್ತು ಲುದ್ದದಲ್ಲಿಯೂ, ಶಾರೋನಿನಲ್ಲಿಯೂ ವಾಸವಾಗಿದ್ದವರೆಲ್ಲರು ಅವನನ್ನು ನೋಡಿ, ಅವರು ಕರ್ತನ ಕಡೆಗೆ ತಿರುಗಿಕೊಂಡರು.
એતાદૃશં દૃષ્ટ્વા લોદ્શારોણનિવાસિનો લોકાઃ પ્રભું પ્રતિ પરાવર્ત્તન્ત|
36 ೩೬ ಯೊಪ್ಪ ಪಟ್ಟಣದಲ್ಲಿ ತಬಿಥಾ ಎಂಬ ಒಬ್ಬ ಶಿಷ್ಯಳಿದ್ದಳು. ಆ ಹೆಸರಿಗೆ ಗ್ರೀಕ್ ಭಾಷೆಯಲ್ಲಿ “ದೊರ್ಕ” ಅಂದರೆ ಜಿಂಕೆ ಎಂದರ್ಥ. ಆಕೆಯು ಸತ್ಕ್ರಿಯೆಗಳನ್ನೂ, ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದಳು.
અપરઞ્ચ ભિક્ષાદાનાદિષુ નાનક્રિયાસુ નિત્યં પ્રવૃત્તા યા યાફોનગરનિવાસિની ટાબિથાનામા શિષ્યા યાં દર્ક્કાં અર્થાદ્ હરિણીમયુક્ત્વા આહ્વયન્ સા નારી
37 ೩೭ ಆ ಕಾಲದಲ್ಲಿ ಆಕೆ ರೋಗಕ್ಕೆ ತುತ್ತಾಗಿ ಸತ್ತಳು. ಆಕೆಯ ಶವವನ್ನು ಸ್ನಾನಮಾಡಿಸಿ ಮೇಲಂತಸ್ತಿನಲ್ಲಿಟ್ಟರು.
તસ્મિન્ સમયે રુગ્ના સતી પ્રાણાન્ અત્યજત્, તતો લોકાસ્તાં પ્રક્ષાલ્યોપરિસ્થપ્રકોષ્ઠે શાયયિત્વાસ્થાપયન્|
38 ೩೮ ಯೊಪ್ಪಕ್ಕೆ ಲುದ್ದವು ಹತ್ತಿರವಾಗಿರಲಾಗಿ ಪೇತ್ರನು ಅಲ್ಲಿ ಇದ್ದಾನೆಂದು ಶಿಷ್ಯರು ಕೇಳಿ ಇಬ್ಬರು ಮನುಷ್ಯರನ್ನು ಅವನ ಬಳಿಗೆ ಕಳುಹಿಸಿ, “ತಡಮಾಡದೆ ನಮ್ಮ ಹತ್ತಿರಕ್ಕೆ ಬರಬೇಕೆಂದು” ಬೇಡಿಕೊಂಡರು.
લોદ્નગરં યાફોનગરસ્ય સમીપસ્થં તસ્માત્તત્ર પિતર આસ્તે, ઇતિ વાર્ત્તાં શ્રુત્વા તૂર્ણં તસ્યાગમનાર્થં તસ્મિન્ વિનયમુક્ત્વા શિષ્યગણો દ્વૌ મનુજૌ પ્રેષિતવાન્|
39 ೩೯ ಪೇತ್ರನು ಎದ್ದು ಅವರ ಜೊತೆಯಲ್ಲಿ ಹೋದನು. ಅವನು ಬಂದ ಕೂಡಲೆ ಅವರು ಅವನನ್ನು ಮೇಲಂತಸ್ತಿಗೆ ಕರೆದುಕೊಂಡು ಹೋದರು. ಅಲ್ಲಿ ವಿಧವೆಯರೆಲ್ಲ ಅಳುತ್ತಾ, ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಒಳಂಗಿಗಳನ್ನೂ, ಮೇಲಂಗಿಗಳನ್ನೂ ತೋರಿಸಿದರು.
તસ્માત્ પિતર ઉત્થાય તાભ્યાં સાર્દ્ધમ્ આગચ્છત્, તત્ર તસ્મિન્ ઉપસ્થિત ઉપરિસ્થપ્રકોષ્ઠં સમાનીતે ચ વિધવાઃ સ્વાભિઃ સહ સ્થિતિકાલે દર્ક્કયા કૃતાનિ યાન્યુત્તરીયાણિ પરિધેયાનિ ચ તાનિ સર્વ્વાણિ તં દર્શયિત્વા રુદત્યશ્ચતસૃષુ દિક્ષ્વતિષ્ઠન્|
40 ೪೦ ಪೇತ್ರನು ಅವರೆಲ್ಲರನ್ನು ಹೊರಕ್ಕೆ ಕಳುಹಿಸಿ, ಮೊಣಕಾಲೂರಿ ಪ್ರಾರ್ಥನೆಮಾಡಿ ಶವದ ಕಡೆಗೆ ತಿರುಗಿಕೊಂಡು; “ತಬಿಥಾ, ಎದ್ದೇಳು” ಅಂದನು. ಆಕೆಯು ಕಣ್ಣು ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತುಕೊಂಡಳು.
કિન્તુ પિતરસ્તાઃ સર્વ્વા બહિઃ કૃત્વા જાનુની પાતયિત્વા પ્રાર્થિતવાન્; પશ્ચાત્ શવં પ્રતિ દૃષ્ટિં કૃત્વા કથિતવાન્, હે ટાબીથે ત્વમુત્તિષ્ઠ, ઇતિ વાક્ય ઉક્તે સા સ્ત્રી ચક્ષુષી પ્રોન્મીલ્ય પિતરમ્ અવલોક્યોત્થાયોપાવિશત્|
41 ೪೧ ಅವನು ಆಕೆಯನ್ನು ಕೈಹಿಡಿದು ಎಬ್ಬಿಸಿ, ಅಲ್ಲಿದ್ದ ವಿಧವೆಯರನ್ನು ಮತ್ತು ದೇವಜನರನ್ನೂ ಕರೆದು, ಜೀವಿತಳಾದ ಆಕೆಯನ್ನು ಅವರೆದುರಿಗೆ ನಿಲ್ಲಿಸಿದನು.
તતઃ પિતરસ્તસ્યાઃ કરૌ ધૃત્વા ઉત્તોલ્ય પવિત્રલોકાન્ વિધવાશ્ચાહૂય તેષાં નિકટે સજીવાં તાં સમાર્પયત્|
42 ೪೨ ಈ ಸಂಗತಿಯು ಯೊಪ್ಪದಲ್ಲೆಲ್ಲಾ ಹರಡಿ ಅನೇಕರು ಕರ್ತನ ಮೇಲೆ ನಂಬಿಕೆಯಿಟ್ಟರು.
એષા કથા સમસ્તયાફોનગરં વ્યાપ્તા તસ્માદ્ અનેકે લોકાઃ પ્રભૌ વ્યશ્વસન્|
43 ೪೩ ಆ ಮೇಲೆ ಪೇತ್ರನು ಯೊಪ್ಪದಲ್ಲಿ ಚರ್ಮದ ಕೆಲಸ ಮಾಡುವ ಸೀಮೋನನೆಂಬುವನ ಬಳಿಯಲ್ಲಿ ಬಹಳ ದಿನಗಳ ವರೆಗೂ ಇದ್ದನು.
અપરઞ્ચ પિતરસ્તદ્યાફોનગરીયસ્ય કસ્યચિત્ શિમોન્નામ્નશ્ચર્મ્મકારસ્ય ગૃહે બહુદિનાનિ ન્યવસત્|

< ಅಪೊಸ್ತಲರ ಕೃತ್ಯಗಳ 9 >