< ಅಪೊಸ್ತಲರ ಕೃತ್ಯಗಳ 10 >

1 ಕೈಸರೈಯ ಪಟ್ಟಣದಲ್ಲಿ ಇತಾಲ್ಯ ಸೈನ್ಯದ ಶತಾಧಿಪತಿಯಾದ ಕೊರ್ನೆಲ್ಯನೆಂಬ ಒಬ್ಬ ಮನುಷ್ಯನಿದ್ದನು.
કૈસરિયાનગર ઇતાલિયાખ્યસૈન્યાન્તર્ગતઃ કર્ણીલિયનામા સેનાપતિરાસીત્
2 ಅವನು ದೈವಭಕ್ತನೂ, ತನ್ನ ಮನೆಯವರೆಲ್ಲರ ಸಹಿತವಾಗಿ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳುವವನು ಆಗಿದ್ದು, ಜನರಿಗೆ ಬಹಳವಾಗಿ ದಾನಧರ್ಮಮಾಡುತ್ತಾ, ದೇವರಿಗೆ ನಿತ್ಯವೂ ಪ್ರಾರ್ಥನೆಮಾಡುತ್ತಾ ಇದ್ದನು.
સ સપરિવારો ભક્ત ઈશ્વરપરાયણશ્ચાસીત્; લોકેભ્યો બહૂનિ દાનાદીનિ દત્વા નિરન્તરમ્ ઈશ્વરે પ્રાર્થયાઞ્ચક્રે|
3 ಒಂದು ದಿನ ಮಧ್ಯಾಹ್ನ ಸುಮಾರು ಮೂರು ಘಂಟೆಗೆ ಅವನಿಗೆ ಒಂದು ದರ್ಶನ ಉಂಟಾಗಿ ಒಬ್ಬ ದೇವದೂತನು ತನ್ನ ಬಳಿಗೆ ಬಂದು; “ಕೊರ್ನೆಲ್ಯನೇ” ಎಂದು ಕರೆಯುವುದನ್ನು ಅವನು ಪ್ರತ್ಯಕ್ಷವಾಗಿ ಕಂಡನು.
એકદા તૃતીયપ્રહરવેલાયાં સ દૃષ્ટવાન્ ઈશ્વરસ્યૈકો દૂતઃ સપ્રકાશં તત્સમીપમ્ આગત્ય કથિતવાન્, હે કર્ણીલિય|
4 ಅವನು ಆ ದೂತನನ್ನು ದೃಷ್ಟಿಸಿನೋಡಿ ಭಯಹಿಡಿದವನಾಗಿ; “ಕರ್ತನೇ, ಇದೇನು?” ಎಂದು ಕೇಳಲು, ಆ ದೂತನು ಅವನಿಗೆ; “ನಿನ್ನ ಪ್ರಾರ್ಥನೆಗಳೂ, ನಿನ್ನ ದಾನಧರ್ಮಗಳೂ ದೇವರ ಸನ್ನಿಧಿಗೆ ಜ್ಞಾಪರ್ಥಕವಾಗಿ ಬಂದು ತಲುಪಿದೆ.
કિન્તુ સ તં દૃષ્ટ્વા ભીતોઽકથયત્, હે પ્રભો કિં? તદા તમવદત્ તવ પ્રાર્થના દાનાદિ ચ સાક્ષિસ્વરૂપં ભૂત્વેશ્વરસ્ય ગોચરમભવત્|
5 ಈಗ ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ, ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸಬೇಕು.
ઇદાનીં યાફોનગરં પ્રતિ લોકાન્ પ્રેષ્ય સમુદ્રતીરે શિમોન્નામ્નશ્ચર્મ્મકારસ્ય ગૃહે પ્રવાસકારી પિતરનામ્ના વિખ્યાતો યઃ શિમોન્ તમ્ આહ્વાયય;
6 ಅವನು ಚಮ್ಮಾರನಾದ ಸೀಮೋನನ ಬಳಿಯಲ್ಲಿ ಇಳುಕೊಂಡಿದ್ದಾನೆ; ಈ ಸೀಮೋನನ ಮನೆಯು ಸಮುದ್ರತೀರದ ಬಳಿಯಲ್ಲಿ ಇದೆ” ಎಂದು ಹೇಳಿದನು.
તસ્માત્ ત્વયા યદ્યત્ કર્ત્તવ્યં તત્તત્ સ વદિષ્યતિ|
7 ಕೊರ್ನೇಲ್ಯನು ತನ್ನ ಸಂಗಡ ಮಾತನಾಡಿದ ದೇವದೂತನು ಹೊರಟುಹೋದ ಮೇಲೆ, ತನ್ನ ಮನೆಯಲ್ಲಿದ್ದ ಸೇವಕರಲ್ಲಿ ಇಬ್ಬರನ್ನೂ ಮತ್ತು ತನ್ನ ಹತ್ತಿರ ಯಾವಾಗಲೂ ಇರುತ್ತಿದ್ದ ಸಿಪಾಯಿಗಳಲ್ಲಿ ಒಬ್ಬ ದೈವಭಕ್ತನನ್ನೂ ಕರೆದು,
ઇત્યુપદિશ્ય દૂતે પ્રસ્થિતે સતિ કર્ણીલિયઃ સ્વગૃહસ્થાનાં દાસાનાં દ્વૌ જનૌ નિત્યં સ્વસઙ્ગિનાં સૈન્યાનામ્ એકાં ભક્તસેનાઞ્ચાહૂય
8 ಅವರಿಗೆ ಈ ಸಂಗತಿಗಳನ್ನೆಲ್ಲಾ ವಿವರವಾಗಿ ಹೇಳಿ, ಅವರನ್ನು ಯೊಪ್ಪ ಎಂಬ ಪಟ್ಟಣಕ್ಕೆ ಕಳುಹಿಸಿದನು.
સકલમેતં વૃત્તાન્તં વિજ્ઞાપ્ય યાફોનગરં તાન્ પ્રાહિણોત્|
9 ಮರುದಿನ ಅವರು ಪ್ರಯಾಣಮಾಡಿ ಆ ಪಟ್ಟಣದ ಹತ್ತಿರಕ್ಕೆ ಬರುತ್ತಿರುವಾಗ ಪೇತ್ರನು ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಗೆ ಪ್ರಾರ್ಥನೆಮಾಡುವುದಕ್ಕಾಗಿ ಮಹಡಿಯನ್ನು ಹತ್ತಿದನು.
પરસ્મિન્ દિને તે યાત્રાં કૃત્વા યદા નગરસ્ય સમીપ ઉપાતિષ્ઠન્, તદા પિતરો દ્વિતીયપ્રહરવેલાયાં પ્રાર્થયિતું ગૃહપૃષ્ઠમ્ આરોહત્|
10 ೧೦ ಅವನಿಗೆ ಬಹಳ ಹಸಿವಾಗಿ ಊಟಮಾಡ ಬಯಸಿದನು. ಅವರು ಊಟಕ್ಕೆ ಸಿದ್ಧಮಾಡುತ್ತಿರುವಷ್ಟರಲ್ಲಿ,
એતસ્મિન્ સમયે ક્ષુધાર્ત્તઃ સન્ કિઞ્ચિદ્ ભોક્તુમ્ ઐચ્છત્ કિન્તુ તેષામ્ અન્નાસાદનસમયે સ મૂર્ચ્છિતઃ સન્નપતત્|
11 ೧೧ ಅವನು ಧ್ಯಾನಪರವಶನಾಗಿ ಆಕಾಶವು ತೆರೆದಿರುವುದನ್ನೂ, ನಾಲ್ಕು ಮೂಲೆಗಳನ್ನು ಕಟ್ಟಿದ್ದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಭೂಮಿಯ ಮೇಲೆ ಇಳಿಯುವುದನ್ನೂ ಕಂಡನು.
તતો મેઘદ્વારં મુક્તં ચતુર્ભિઃ કોણૈ ર્લમ્બિતં બૃહદ્વસ્ત્રમિવ કિઞ્ચન ભાજનમ્ આકાશાત્ પૃથિવીમ્ અવારોહતીતિ દૃષ્ટવાન્|
12 ೧೨ ಅದರೊಳಗೆ ಸಕಲ ವಿಧವಾದ ಪಶುಗಳೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳೂ ಇದ್ದವು.
તન્મધ્યે નાનપ્રકારા ગ્રામ્યવન્યપશવઃ ખેચરોરોગામિપ્રભૃતયો જન્તવશ્ચાસન્|
13 ೧೩ ಆಗ; “ಪೇತ್ರನೇ, ಎದ್ದು, ಕೊಯ್ದು ತಿನ್ನು” ಎಂದು ಅವನಿಗೆ ಒಂದು ವಾಣಿ ಕೇಳಿಸಿತು.
અનન્તરં હે પિતર ઉત્થાય હત્વા ભુંક્ષ્વ તમ્પ્રતીયં ગગણીયા વાણી જાતા|
14 ೧೪ ಅದಕ್ಕೆ ಪೇತ್ರನು; “ಬೇಡವೇ ಬೇಡ ಕರ್ತನೇ, ನಾನು ಎಂದೂ ಹೊಲೆ ಪದಾರ್ಥವನ್ನಾಗಲಿ, ಅಶುದ್ಧವಾದವುಗಳನ್ನಾಗಲಿ ತಿಂದವನಲ್ಲ” ಅಂದನು.
તદા પિતરઃ પ્રત્યવદત્, હે પ્રભો ઈદૃશં મા ભવતુ, અહમ્ એતત્ કાલં યાવત્ નિષિદ્ધમ્ અશુચિ વા દ્રવ્યં કિઞ્ચિદપિ ન ભુક્તવાન્|
15 ೧೫ ಅದಕ್ಕೆ; “ದೇವರು ಶುದ್ಧಮಾಡಿದ್ದನ್ನು ನೀನು ಹೊಲೆ ಎನ್ನಬಾರದೆಂದು” ಪುನಃ ಎರಡನೆಯ ಸಾರಿ ಅವನಿಗೆ ವಾಣಿ ಕೇಳಿಸಿತು.
તતઃ પુનરપિ તાદૃશી વિહયસીયા વાણી જાતા યદ્ ઈશ્વરઃ શુચિ કૃતવાન્ તત્ ત્વં નિષિદ્ધં ન જાનીહિ|
16 ೧೬ ಹೀಗೆ ಮೂರು ಸಾರಿ ಆಯಿತು. ಆದ ಮೇಲೆ ಆ ವಸ್ತುವು ಆಕಾಶದೊಳಗೆ ಸೇರಿಕೊಂಡಿತು.
ઇત્થં ત્રિઃ સતિ તત્ પાત્રં પુનરાકૃષ્ટં આકાશમ્ અગચ્છત્|
17 ೧೭ ಪೇತ್ರನು ತನಗಾದ ದರ್ಶನವು ಏನಾಗಿರಬಹುದೆಂದು ತನ್ನಲ್ಲಿ ಕಳವಳ ಪಡುತ್ತಿರುವಾಗಲೇ, ಆಗೋ, ಕೊರ್ನೆಲ್ಯನು ಕಳುಹಿಸಿದ್ದ ಆ ಮನುಷ್ಯರು ಸೀಮೋನನ ಮನೆ ಯಾವುದು ಎಂದು ಕೇಳಿಕೊಂಡು ಬಂದು ಆ ಮನೆಯ ಬಾಗಿಲಲ್ಲಿ ನಿಂತು;
તતઃ પરં યદ્ દર્શનં પ્રાપ્તવાન્ તસ્ય કો ભાવ ઇત્યત્ર પિતરો મનસા સન્દેગ્ધિ, એતસ્મિન્ સમયે કર્ણીલિયસ્ય તે પ્રેષિતા મનુષ્યા દ્વારસ્ય સન્નિધાવુપસ્થાય,
18 ೧೮ ಪೇತ್ರನೆನಿಸಿಕೊಳ್ಳುವ ಸೀಮೋನನು ಇಲ್ಲಿ ಇಳುಕೊಂಡಿದ್ದಾನೋ ಎಂದು ಕೂಗಿ ಕೇಳಿದರು.
શિમોનો ગૃહમન્વિચ્છન્તઃ સમ્પૃછ્યાહૂય કથિતવન્તઃ પિતરનામ્ના વિખ્યાતો યઃ શિમોન્ સ કિમત્ર પ્રવસતિ?
19 ೧೯ ಪೇತ್ರನು ಆ ದರ್ಶನದ ಕುರಿತಾಗಿ ಯೋಚನೆ ಮಾಡುತ್ತಿರಲು ದೇವರಾತ್ಮನು ಅವನಿಗೆ; “ಅಗೋ, ಮೂವರು ಮನುಷ್ಯರು ನಿನ್ನನ್ನು ವಿಚಾರಿಸುತ್ತಾರೆ;
યદા પિતરસ્તદ્દર્શનસ્ય ભાવં મનસાન્દોલયતિ તદાત્મા તમવદત્, પશ્ય ત્રયો જનાસ્ત્વાં મૃગયન્તે|
20 ೨೦ ನೀನೆದ್ದು ಕೆಳಗಿಳಿದು ಏನೂ ಸಂಶಯಪಡದೆ ಅವರ ಜೊತೆಯಲ್ಲಿ ಹೋಗು; ನಾನೇ ಅವರನ್ನು ಕಳುಹಿಸಿದ್ದೇನೆ” ಎಂದು ಹೇಳಿದನು.
ત્વમ્ ઉત્થાયાવરુહ્ય નિઃસન્દેહં તૈઃ સહ ગચ્છ મયૈવ તે પ્રેષિતાઃ|
21 ೨೧ ಪೇತ್ರನು ಕೆಳಗಿಳಿದು ಆ ಮನುಷ್ಯರ ಬಳಿಗೆ ಬಂದು; “ಇಗೋ, ನೀವು ವಿಚಾರಿಸುವವನು ನಾನೇ; ನೀವು ಬಂದ ಕಾರಣವೇನು?” ಎಂದು ಕೇಳಲು,
તસ્માત્ પિતરોઽવરુહ્ય કર્ણીલિયપ્રેરિતલોકાનાં નિકટમાગત્ય કથિતવાન્ પશ્યત યૂયં યં મૃગયધ્વે સ જનોહં, યૂયં કિન્નિમિત્તમ્ આગતાઃ?
22 ೨೨ ಅವರು; “ಕೊರ್ನೆಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನೂ, ದೇವರಿಗೆ ಭಯಪಡುವವನೂ, ಯೆಹೂದ್ಯ ಜನರೆಲ್ಲರಿಂದ ಒಳ್ಳೆಯ ಹೆಸರು ಹೊಂದಿದವನೂ ಆಗಿದ್ದಾನೆ; ನಿನ್ನನ್ನು ತನ್ನ ಮನೆಗೆ ಆಹ್ವಾನಿಸಿ ನಿನ್ನಿಂದ ಸುವಾರ್ತೆಯನ್ನು ಕೇಳಬೇಕೆಂದು ಪರಿಶುದ್ಧ ದೇವದೂತನ ಮುಖಾಂತರವಾಗಿ ಅಪ್ಪಣೆ ಹೊಂದಿದ್ದಾನೆ” ಎಂದು ಹೇಳಿದರು.
તતસ્તે પ્રત્યવદન્ કર્ણીલિયનામા શુદ્ધસત્ત્વ ઈશ્વરપરાયણો યિહૂદીયદેશસ્થાનાં સર્વ્વેષાં સન્નિધૌ સુખ્યાત્યાપન્ન એકઃ સેનાપતિ ર્નિજગૃહં ત્વામાહૂય નેતું ત્વત્તઃ કથા શ્રોતુઞ્ચ પવિત્રદૂતેન સમાદિષ્ટઃ|
23 ೨೩ ಪೇತ್ರನು ಇದನ್ನು ಕೇಳಿ ಅವರನ್ನು ಒಳಕ್ಕೆ ಕರೆದು ಉಪಚರಿಸಿದನು. ಮರುದಿನ ಅವನು ಎದ್ದು ಅವರ ಜೊತೆಯಲ್ಲಿ ಹೊರಟನು; ಯೊಪ್ಪ ಪಟ್ಟಣದ ಸಹೋದರರಲ್ಲಿ ಕೆಲವರು ಅವನ ಕೂಡ ಹೋದರು.
તદા પિતરસ્તાનભ્યન્તરં નીત્વા તેષામાતિથ્યં કૃતવાન્, પરેઽહનિ તૈઃ સાર્દ્ધં યાત્રામકરોત્, યાફોનિવાસિનાં ભ્રાતૃણાં કિયન્તો જનાશ્ચ તેન સહ ગતાઃ|
24 ೨೪ ಮರುದಿನ ಅವನು ಕೈಸರೈಯಕ್ಕೆ ಬಂದು ಸೇರಿದನು. ಕೊರ್ನೆಲ್ಯನು ತನ್ನ ಬಂಧುಬಳಗದವರನ್ನೂ ಮತ್ತು ಅಪ್ತಮಿತ್ರರನ್ನೂ ಕರೆಯಿಸಿ ಪೇತ್ರನಿಗಾಗಿ ಎದುರುನೋಡುತ್ತಿದ್ದನು.
પરસ્મિન્ દિવસે કૈસરિયાનગરમધ્યપ્રવેશસમયે કર્ણીલિયો જ્ઞાતિબન્ધૂન્ આહૂયાનીય તાન્ અપેક્ષ્ય સ્થિતઃ|
25 ೨೫ ಪೇತ್ರನು ಬಂದಾಗ ಕೊರ್ನೆಲ್ಯನು ಅವನನ್ನು ಎದುರುಗೊಂಡು ಅವನ ಪಾದಕ್ಕೆ ಬಿದ್ದು ನಮಸ್ಕಾರ ಮಾಡಿದನು.
પિતરે ગૃહ ઉપસ્થિતે કર્ણીલિયસ્તં સાક્ષાત્કૃત્ય ચરણયોઃ પતિત્વા પ્રાણમત્|
26 ೨೬ ಆದರೆ ಪೇತ್ರನು; “ಏಳು, ನಾನೂ ಸಹಾ ಮನುಷ್ಯನೇ” ಎಂದು ಹೇಳಿ, ಅವನನ್ನು ಎತ್ತಿ,
પિતરસ્તમુત્થાપ્ય કથિતવાન્, ઉત્તિષ્ઠાહમપિ માનુષઃ|
27 ೨೭ ಅವನ ಸಂಗಡ ಸಂಭಾಷಣೆಮಾಡುತ್ತಾ ಮನೆಯೊಳಕ್ಕೆ ಬಂದನು.
તદા કર્ણીલિયેન સાકમ્ આલપન્ ગૃહં પ્રાવિશત્ તન્મધ્યે ચ બહુલોકાનાં સમાગમં દૃષ્ટ્વા તાન્ અવદત્,
28 ೨೮ ಅಲ್ಲಿ ಬಹು ಜನರು ಸೇರಿ ಬಂದಿರುವುದನ್ನು ಕಂಡು ಅವರಿಗೆ; “ಯೆಹೂದ್ಯರು, ಅನ್ಯ ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದು, ಅವರೊಂದಿಗೆ ವ್ಯವಹರಿಸುವುದು ಯೆಹೂದ್ಯರ ಸಂಪ್ರದಾಯಕ್ಕೆ ನಿಷಿದ್ಧವಾಗಿದೆ ಎಂಬುದು ನಿಮಗೆ ತಿಳಿದಿದೆ. ನನಗಂತೂ ಯಾವ ಮನುಷ್ಯನನ್ನೂ ಹೊಲೆಯಾದವನು, ಇಲ್ಲವೆ ಅಶುದ್ಧನು ಎಂದು ಅನ್ನಬಾರದೆಂದು ದೇವರು ತೋರಿಸಿಕೊಟ್ಟಿದ್ದಾನೆ.
અન્યજાતીયલોકૈઃ મહાલપનં વા તેષાં ગૃહમધ્યે પ્રવેશનં યિહૂદીયાનાં નિષિદ્ધમ્ અસ્તીતિ યૂયમ્ અવગચ્છથ; કિન્તુ કમપિ માનુષમ્ અવ્યવહાર્ય્યમ્ અશુચિં વા જ્ઞાતું મમ નોચિતમ્ ઇતિ પરમેશ્વરો માં જ્ઞાપિતવાન્|
29 ೨೯ ಆದಕಾರಣ ನೀವು ನನ್ನನ್ನು ಕರೆಕಳುಹಿಸಿದಾಗ ನಾನು ಯಾವ ಎದುರುಮಾತನ್ನೂ ಆಡದೆ ಬಂದೆನು. ಈಗ ನೀವು ನನ್ನನ್ನು ಕರೆಯಿಸಿದ ಉದ್ದೇಶವೇನು ಎಂದು ನನಗೆ ತಿಳಿಸಬೇಕು” ಎಂದು ಕೇಳಿದನು.
ઇતિ હેતોરાહ્વાનશ્રવણમાત્રાત્ કાઞ્ચનાપત્તિમ્ અકૃત્વા યુષ્માકં સમીપમ્ આગતોસ્મિ; પૃચ્છામિ યૂયં કિન્નિમિત્તં મામ્ આહૂયત?
30 ೩೦ ಅದಕ್ಕೆ ಕೊರ್ನೇಲ್ಯನು; “ನಾನು ನಾಲ್ಕು ದಿನಗಳ ಹಿಂದೆ ಇದೇ ಹೊತ್ತಿನಲ್ಲಿ ಮೂರನೇ ಗಳಿಗೆಯ ದೇವರ ಪ್ರಾರ್ಥನೆಯನ್ನು ನನ್ನ ಮನೆಯಲ್ಲಿ ಮಾಡುತ್ತಿದ್ದಾಗ ಹೊಳೆಯುವ ವಸ್ತ್ರವನ್ನು ಧರಿಸಿಕೊಂಡಿದ್ದ ಒಬ್ಬ ಮನುಷ್ಯನು ನನ್ನೆದುರಿಗೆ ನಿಂತುಕೊಂಡು;
તદા કર્ણીલિયઃ કથિતવાન્, અદ્ય ચત્વારિ દિનાનિ જાતાનિ એતાવદ્વેલાં યાવદ્ અહમ્ અનાહાર આસન્ તતસ્તૃતીયપ્રહરે સતિ ગૃહે પ્રાર્થનસમયે તેજોમયવસ્ત્રભૃદ્ એકો જનો મમ સમક્ષં તિષ્ઠન્ એતાં કથામ્ અકથયત્,
31 ೩೧ ಕೊರ್ನೆಲ್ಯನೇ ‘ನಿನ್ನ ಪ್ರಾರ್ಥನೆಯನ್ನು ದೇವರು ಕೇಳಿದ್ದಾನೆ, ನಿನ್ನ ದಾನಧರ್ಮಗಳು ದೇವರ ಸನ್ನಿಧಾನದಲ್ಲಿ ನೆನಪಿಗೆ ಬಂದವು.
હે કર્ણીલિય ત્વદીયા પ્રાર્થના ઈશ્વરસ્ય કર્ણગોચરીભૂતા તવ દાનાદિ ચ સાક્ષિસ્વરૂપં ભૂત્વા તસ્ય દૃષ્ટિગોચરમભવત્|
32 ೩೨ ನೀನು ಯಾರನ್ನಾದರು ಯೊಪ್ಪಕ್ಕೆ ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸಬೇಕು, ಅವನು ಚಮ್ಮಾರನಾದ ಸೀಮೋನನ ಮನೆಯಲ್ಲಿ ಇಳುಕೊಂಡಿದ್ದಾನೆ; ಆ ಮನೆ ಸಮುದ್ರ ತೀರದ ಸಮೀಪವಿದೆ’ ಅಂದನು.
અતો યાફોનગરં પ્રતિ લોકાન્ પ્રહિત્ય તત્ર સમુદ્રતીરે શિમોન્નામ્નઃ કસ્યચિચ્ચર્મ્મકારસ્ય ગૃહે પ્રવાસકારી પિતરનામ્ના વિખ્યાતો યઃ શિમોન્ તમાહૂયય; તતઃ સ આગત્ય ત્વામ્ ઉપદેક્ષ્યતિ|
33 ೩೩ ನಾನು ತಡಮಾಡದೆ ನಿಮ್ಮ ಹತ್ತಿರ ಜನರನ್ನು ಕಳುಹಿಸಿದೆನು. ನೀವು ಬಂದದ್ದು ಒಳ್ಳೆಯದಾಯಿತು. ಹೀಗಿರುವುದರಿಂದ ಕರ್ತನು ನಿನಗೆ ಅಪ್ಪಣೆಕೊಟ್ಟಿರುವ ಎಲ್ಲಾ ಮಾತುಗಳನ್ನು ಕೇಳುವುದಕ್ಕೆ ನಾವೆಲ್ಲರು ಈಗ ದೇವರ ಸನ್ನಿಧಾನದಲ್ಲಿ ಸೇರಿಬಂದಿದ್ದೇವೆ” ಅಂದನು.
ઇતિ કારણાત્ તત્ક્ષણાત્ તવ નિકટે લોકાન્ પ્રેષિતવાન્, ત્વમાગતવાન્ ઇતિ ભદ્રં કૃતવાન્| ઈશ્વરો યાન્યાખ્યાનાનિ કથયિતુમ્ આદિશત્ તાનિ શ્રોતું વયં સર્વ્વે સામ્પ્રતમ્ ઈશ્વરસ્ય સાક્ષાદ્ ઉપસ્થિતાઃ સ્મઃ|
34 ೩೪ ಆಗ ಪೇತ್ರನು ಉಪದೇಶಮಾಡಲಾರಂಭಿಸಿ ಹೇಳಿದ್ದೇನಂದರೆ; “ನಿಜವಾಗಿಯೂ, ದೇವರು ಪಕ್ಷಪಾತಿಯಲ್ಲ,
તદા પિતર ઇમાં કથાં કથયિતુમ્ આરબ્ધવાન્, ઈશ્વરો મનુષ્યાણામ્ અપક્ષપાતી સન્
35 ೩೫ ಯಾವ ಜನಾಂಗದವರೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.
યસ્ય કસ્યચિદ્ દેશસ્ય યો લોકાસ્તસ્માદ્ભીત્વા સત્કર્મ્મ કરોતિ સ તસ્ય ગ્રાહ્યો ભવતિ, એતસ્ય નિશ્ચયમ્ ઉપલબ્ધવાનહમ્|
36 ೩೬ ಎಲ್ಲಾ ಜನರಿಗೂ ಕರ್ತನಾಗಿರುವ ಯೇಸು ಕ್ರಿಸ್ತನ ಮೂಲಕ ದೇವರು ಸಮಾಧಾನದ ಶುಭಸಮಾಚಾರವನ್ನು ಪ್ರಕಟಿಸುತ್ತಾ ಇಸ್ರಾಯೇಲ್ ಜನರಿಗೆ ಅನುಗ್ರಹಿಸಿದ ವಾಕ್ಯವು ನಿಮಗೇ ತಿಳಿದಿದೆ.
સર્વ્વેષાં પ્રભુ ર્યો યીશુખ્રીષ્ટસ્તેન ઈશ્વર ઇસ્રાયેલ્વંશાનાં નિકટે સુસંવાદં પ્રેષ્ય સમ્મેલનસ્ય યં સંવાદં પ્રાચારયત્ તં સંવાદં યૂયં શ્રુતવન્તઃ|
37 ೩೭ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಯೋಹಾನನು ಸಾರಿದ ತರುವಾಯ ಈ ವಾಕ್ಯವು ಗಲಿಲಾಯದಿಂದ ಪ್ರಾರಂಭವಾಗಿ, ಯೂದಾಯದಲ್ಲೆಲ್ಲಾ ಪ್ರಬಲವಾಯಿತು.
યતો યોહના મજ્જને પ્રચારિતે સતિ સ ગાલીલદેશમારભ્ય સમસ્તયિહૂદીયદેશં વ્યાપ્નોત્;
38 ೩೮ ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ, ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದುದರಿಂದ ಆತನು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ; ಸೈತಾನನಿಂದ ಬಾಧಿಸಲ್ಪಟ್ಟವರನ್ನು ಗುಣಪಡಿಸುತ್ತಾ ಸಂಚರಿಸಿದನು; ಇದೆಲ್ಲಾ ನಿಮಗೆ ಗೊತ್ತಾಗಿರುವ ಸಂಗತಿಯೇ.
ફલત ઈશ્વરેણ પવિત્રેણાત્મના શક્ત્યા ચાભિષિક્તો નાસરતીયયીશુઃ સ્થાને સ્થાને ભ્રમન્ સુક્રિયાં કુર્વ્વન્ શૈતાના ક્લિષ્ટાન્ સર્વ્વલોકાન્ સ્વસ્થાન્ અકરોત્, યત ઈશ્વરસ્તસ્ય સહાય આસીત્;
39 ೩೯ ಆತನು ಯೆಹೂದ್ಯರ ಸೀಮೆಯಲ್ಲಿಯೂ, ಯೆರೂಸಲೇಮಿನಲ್ಲಿಯೂ ಮಾಡಿದ ಎಲ್ಲಾ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ.
વયઞ્ચ યિહૂદીયદેશે યિરૂશાલમ્નગરે ચ તેન કૃતાનાં સર્વ્વેષાં કર્મ્મણાં સાક્ષિણો ભવામઃ| લોકાસ્તં ક્રુશે વિદ્ધ્વા હતવન્તઃ,
40 ೪೦ ಆತನನ್ನು ಮರದ ಕಂಬಕ್ಕೆ ತೂಗುಹಾಕಿ ಕೊಂದರು. ದೇವರು ಆತನನ್ನು ಮೂರನೆಯ ದಿನದಲ್ಲಿ ಎಬ್ಬಿಸಿ, ಪ್ರತ್ಯಕ್ಷನಾಗುವಂತೆ ಮಾಡಿದನು.
કિન્તુ તૃતીયદિવસે ઈશ્વરસ્તમુત્થાપ્ય સપ્રકાશમ્ અદર્શયત્|
41 ೪೧ ಆತನು ಎಲ್ಲರಿಗೂ ಪ್ರತ್ಯಕ್ಷನಾಗದೆ, ದೇವರು ಮುಂಚಿತವಾಗಿ ಆರಿಸಿಕೊಂಡಿದ್ದ ಸಾಕ್ಷಿಗಳಾದ ನಮಗೆ ಪ್ರತ್ಯಕ್ಷನಾದನು. ಆತನು ಸತ್ತವರೊಳಗಿಂದ ಜೀವಿತನಾಗಿ ಎದ್ದು ಬಂದ ಮೇಲೆ ನಾವು ಆತನ ಸಂಗಡ ಊಟ ಮಾಡಿದೆವು.
સર્વ્વલોકાનાં નિકટ ઇતિ ન હિ, કિન્તુ તસ્મિન્ શ્મશાનાદુત્થિતે સતિ તેન સાર્દ્ધં ભોજનં પાનઞ્ચ કૃતવન્ત એતાદૃશા ઈશ્વરસ્ય મનોનીતાઃ સાક્ષિણો યે વયમ્ અસ્માકં નિકટે તમદર્શયત્|
42 ೪೨ ಆತನೇ ಜೀವವಿರುವವರಿಗೂ, ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನು ಎಂಬುದನ್ನು ಜನರಿಗೆ ಸಾರಿ, ಸಾಕ್ಷಿ ಹೇಳಬೇಕೆಂದು ದೇವರು ನಮಗೆ ಅಪ್ಪಣೆಕೊಟ್ಟನು.
જીવિતમૃતોભયલોકાનાં વિચારં કર્ત્તુમ્ ઈશ્વરો યં નિયુક્તવાન્ સ એવ સ જનઃ, ઇમાં કથાં પ્રચારયિતું તસ્મિન્ પ્રમાણં દાતુઞ્ચ સોઽસ્માન્ આજ્ઞાપયત્|
43 ೪೩ ಆತನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ಆತನ ಹೆಸರಿನ ಮೂಲಕವಾಗಿ ಪಾಪ ಕ್ಷಮಾಪಣೆಯನ್ನು ಹೊಂದುವನೆಂದು ಆತನ ವಿಷಯದಲ್ಲಿ ಪ್ರವಾದಿಗಳೆಲ್ಲರು ಸಾಕ್ಷಿ ಹೇಳಿದ್ದಾರೆ” ಅಂದನು.
યસ્તસ્મિન્ વિશ્વસિતિ સ તસ્ય નામ્ના પાપાન્મુક્તો ભવિષ્યતિ તસ્મિન્ સર્વ્વે ભવિષ્યદ્વાદિનોપિ એતાદૃશં સાક્ષ્યં દદતિ|
44 ೪೪ ಪೇತ್ರನು, ಈ ವಾಕ್ಯಗಳನ್ನು ಇನ್ನೂ ಹೇಳುತ್ತಿರುವಾಗಲೇ, ಅವನ ವಾಕ್ಯಗಳನ್ನು ಕೇಳಿದವರೆಲ್ಲರ ಮೇಲೆ ಪವಿತ್ರಾತ್ಮನು ಇಳಿದನು.
પિતરસ્યૈતત્કથાકથનકાલે સર્વ્વેષાં શ્રોતૃણામુપરિ પવિત્ર આત્માવારોહત્|
45 ೪೫ ಅವರು ನಾನಾ ಭಾಷೆಗಳನ್ನಾಡುತ್ತಾ, ದೇವರನ್ನು ಕೊಂಡಾಡುತ್ತಾ ಇರುವುದನ್ನು ಪೇತ್ರನ ಸಂಗಡ ಬಂದಿದ್ದ ಯೆಹೂದ್ಯರಾದ ವಿಶ್ವಾಸಿಗಳು ನೋಡಿ,
તતઃ પિતરેણ સાર્દ્ધમ્ આગતાસ્ત્વક્છેદિનો વિશ્વાસિનો લોકા અન્યદેશીયેભ્યઃ પવિત્ર આત્મનિ દત્તે સતિ
46 ೪೬ ಅನ್ಯಜನಗಳಿಗೂ ಪವಿತ್ರಾತ್ಮನ ದಾನವಾಯಿತಲ್ಲಾ ಎಂದು ಅತ್ಯಾಶ್ಚರ್ಯಪಟ್ಟರು.
તે નાનાજાતીયભાષાભિઃ કથાં કથયન્ત ઈશ્વરં પ્રશંસન્તિ, ઇતિ દૃષ્ટ્વા શ્રુત્વા ચ વિસ્મયમ્ આપદ્યન્ત|
47 ೪೭ ನಡೆದ ಸಂಗತಿಯನ್ನು ಪೇತ್ರನು ನೋಡಿ; “ನಮ್ಮ ಹಾಗೆಯೇ ಪವಿತ್ರಾತ್ಮವರವನ್ನು ಹೊಂದಿದ ಇವರಿಗೆ ದೀಕ್ಷಾಸ್ನಾನವಾಗದಂತೆ ಅಡ್ಡಿಪಡಿಸುವವರು ಯಾರು?” ಎಂದು ಹೇಳಿ ಅವರಿಗೆ,
તદા પિતરઃ કથિતવાન્, વયમિવ યે પવિત્રમ્ આત્માનં પ્રાપ્તાસ્તેષાં જલમજ્જનં કિં કોપિ નિષેદ્ધું શક્નોતિ?
48 ೪೮ ನೀವು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಅಪ್ಪಣೆಕೊಟ್ಟನು. ಆ ಮೇಲೆ ಅವರು ಅವನನ್ನು ಇನ್ನೂ ಕೆಲವು ದಿನ ಅವರೊಂದಿಗೆ ಇರಬೇಕೆಂದು ಬೇಡಿಕೊಂಡರು.
તતઃ પ્રભો ર્નામ્ના મજ્જિતા ભવતેતિ તાનાજ્ઞાપયત્| અનન્તરં તે સ્વૈઃ સાર્દ્ધં કતિપયદિનાનિ સ્થાતું પ્રાર્થયન્ત|

< ಅಪೊಸ್ತಲರ ಕೃತ್ಯಗಳ 10 >