< ಅಪೊಸ್ತಲರ ಕೃತ್ಯಗಳ 19 >

1 ಅಪೊಲ್ಲೋಸನು ಕೊರಿಂಥದಲ್ಲಿದ್ದಾಗ ಪೌಲನು ಮಲೆನಾಡಿನಲ್ಲಿ ಸಂಚಾರಮಾಡಿ ಎಫೆಸಕ್ಕೆ ಬಂದು ಕೆಲವು ಮಂದಿ ಶಿಷ್ಯರನ್ನು ಕಂಡು;
કરિન્થનગર આપલ્લસઃ સ્થિતિકાલે પૌલ ઉત્તરપ્રદેશૈરાગચ્છન્ ઇફિષનગરમ્ ઉપસ્થિતવાન્| તત્ર કતિપયશિષ્યાન્ સાક્ષત્ પ્રાપ્ય તાન્ અપૃચ્છત્,
2 “ನೀವು ನಂಬಿದಾಗ ಪವಿತ್ರಾತ್ಮವರವನ್ನು ಹೊಂದಿದಿರೋ?” ಎಂದು ಅವರನ್ನು ಕೇಳಲು ಅವರು ಅವನಿಗೆ; “ಇಲ್ಲ, ಪವಿತ್ರಾತ್ಮವರವು ಉಂಟೆಂಬುದನ್ನೇ ನಾವು ಕೇಳಿಲ್ಲ” ಅಂದರು.
યૂયં વિશ્વસ્ય પવિત્રમાત્માનં પ્રાપ્તા ન વા? તતસ્તે પ્રત્યવદન્ પવિત્ર આત્મા દીયતે ઇત્યસ્માભિઃ શ્રુતમપિ નહિ|
3 ಅವನು; “ನೀವು ಏನನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡಿರಿ” ಎಂದು ಕೇಳಿದ್ದಕ್ಕೆ ಅವರು; “ಯೋಹಾನನ ಬೋಧನೆಯನ್ನು ನಂಬಿ ದೀಕ್ಷಾಸ್ನಾನಮಾಡಿಸಿಕೊಂಡೆವು” ಅಂದರು.
તદા સાઽવદત્ તર્હિ યૂયં કેન મજ્જિતા અભવત? તેઽકથયન્ યોહનો મજ્જનેન|
4 ಅದಕ್ಕೆ ಪೌಲನು; “ಯೋಹಾನನು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡವರಿಗೆ ದೀಕ್ಷಾಸ್ನಾನ ಮಾಡಿಸಿ ತನ್ನ ಹಿಂದೆ ಬರುವ ಯೇಸುವಿನಲ್ಲಿ ನಂಬಿಕೆಯಿಡಬೇಕೆಂಬುದಾಗಿ ಜನರಿಗೆ ಹೇಳಿದನು” ಎಂದು ಹೇಳಲು,
તદા પૌલ ઉક્તવાન્ ઇતઃ પરં ય ઉપસ્થાસ્યતિ તસ્મિન્ અર્થત યીશુખ્રીષ્ટે વિશ્વસિતવ્યમિત્યુક્ત્વા યોહન્ મનઃપરિવર્ત્તનસૂચકેન મજ્જનેન જલે લોકાન્ અમજ્જયત્|
5 ಅವರು ಆ ಮಾತನ್ನು ಕೇಳಿ ಕರ್ತನಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡರು.
તાદૃશીં કથાં શ્રુત્વા તે પ્રભો ર્યીશુખ્રીષ્ટસ્ય નામ્ના મજ્જિતા અભવન્|
6 ಪೌಲನು ಅವರ ಮೇಲೆ ಕೈಗಳನ್ನಿಡಲು ಪವಿತ್ರಾತ್ಮನು ಅವರ ಮೇಲೆ ಇಳಿದುಬಂದನು; ಅವರು ನಾನಾ ಭಾಷೆಗಳನ್ನಾಡಿದರು, ಪ್ರವಾದಿಸಿದರು.
તતઃ પૌલેન તેષાં ગાત્રેષુ કરેઽર્પિતે તેષામુપરિ પવિત્ર આત્માવરૂઢવાન્, તસ્માત્ તે નાનાદેશીયા ભાષા ભવિષ્યત્કથાશ્ચ કથિતવન્તઃ|
7 ಅಲ್ಲಿ ಸುಮಾರು ಹನ್ನೆರಡು ಮಂದಿ ಗಂಡಸರಿದ್ದರು.
તે પ્રાયેણ દ્વાદશજના આસન્|
8 ಆ ಪಟ್ಟಣದಲ್ಲಿ ಪೌಲನು ಸಭಾಮಂದಿರದೊಳಗೆ ಹೋಗಿ, ಮೂರು ತಿಂಗಳು ಅಲ್ಲೇ ದೇವರ ರಾಜ್ಯದ ವಿಷಯಗಳನ್ನು ಕುರಿತು, ವಾದಿಸುತ್ತಾ ಜನರನ್ನು ಒಡಂಬಡಿಸುತ್ತಾ ಧೈರ್ಯದಿಂದ ಮಾತನಾಡಿದನು.
પૌલો ભજનભવનં ગત્વા પ્રાયેણ માસત્રયમ્ ઈશ્વરસ્ય રાજ્યસ્ય વિચારં કૃત્વા લોકાન્ પ્રવર્ત્ય સાહસેન કથામકથયત્|
9 ಕೆಲವರು ತಮ್ಮ ಮನಸ್ಸುಗಳನ್ನು ಕಠಿಣಮಾಡಿಕೊಂಡು ಒಡಂಬಡದೆ ಗುಂಪುಕೂಡಿದ ಜನರ ಮುಂದೆ ಈ ಮಾರ್ಗವು ಕೆಟ್ಟದ್ದೆಂದು ಹೇಳಲು ಅವನು ಅವರನ್ನು ಬಿಟ್ಟುಹೋಗಿ ಶಿಷ್ಯರನ್ನು ಬೇರೆಮಾಡಿ ತುರನ್ನ ಎಂಬುವನ ತರ್ಕಶಾಲೆಯಲ್ಲಿ ಪ್ರತಿದಿನವೂ ವಾದಿಸಿದನು.
કિન્તુ કઠિનાન્તઃકરણત્વાત્ કિયન્તો જના ન વિશ્વસ્ય સર્વ્વેષાં સમક્ષમ્ એતત્પથસ્ય નિન્દાં કર્ત્તું પ્રવૃત્તાઃ, અતઃ પૌલસ્તેષાં સમીપાત્ પ્રસ્થાય શિષ્યગણં પૃથક્કૃત્વા પ્રત્યહં તુરાન્નનામ્નઃ કસ્યચિત્ જનસ્ય પાઠશાલાયાં વિચારં કૃતવાન્|
10 ೧೦ ಇದು ಎರಡು ವರ್ಷಗಳ ವರೆಗೂ ನಡೆದಿದ್ದರಿಂದ ಅಸ್ಯಸೀಮೆಯಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರೂ, ಗ್ರೀಕರೂ, ಕರ್ತನ ವಾಕ್ಯವನ್ನು ಕೇಳಿದರು.
ઇત્થં વત્સરદ્વયં ગતં તસ્માદ્ આશિયાદેશનિવાસિનઃ સર્વ્વે યિહૂદીયા અન્યદેશીયલોકાશ્ચ પ્રભો ર્યીશોઃ કથામ્ અશ્રૌષન્|
11 ೧೧ ದೇವರು ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದ್ದುದರಿಂದ,
પૌલેન ચ ઈશ્વર એતાદૃશાન્યદ્ભુતાનિ કર્મ્માણિ કૃતવાન્
12 ೧೨ ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ, ರುಮಾಲುಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರ ರೋಗಗಳು ವಾಸಿಯಾದವು, ದುರಾತ್ಮಗಳೂ ಬಿಟ್ಟುಹೋದವು.
યત્ પરિધેયે ગાત્રમાર્જનવસ્ત્રે વા તસ્ય દેહાત્ પીડિતલોકાનામ્ સમીપમ્ આનીતે તે નિરામયા જાતા અપવિત્રા ભૂતાશ્ચ તેભ્યો બહિર્ગતવન્તઃ|
13 ೧೩ ದುರಾತ್ಮಗಳನ್ನೂ ಬಿಡಿಸುವವರೆನಿಸಿಕೊಂಡು, ದೇಶಸಂಚಾರಿಗಳಾದ ಯೆಹೂದ್ಯರಿದ್ದರು. ಅವರಲ್ಲಿ ಕೆಲವರು ದುರಾತ್ಮ ಪೀಡಿತರ ಮೇಲೆ; “ಪೌಲನು ಸಾರುವ ಯೇಸುವಿನ ಆಣೆ” ಎಂದು ಹೇಳಿ ಕರ್ತನಾದ ಯೇಸುವಿನ ಹೆಸರನ್ನು ಪ್ರಯೋಗಮಾಡುವುದಕ್ಕೆ ತೊಡಗಿದರು.
તદા દેશાટનકારિણઃ કિયન્તો યિહૂદીયા ભૂતાપસારિણો ભૂતગ્રસ્તનોકાનાં સન્નિધૌ પ્રભે ર્યીશો ર્નામ જપ્ત્વા વાક્યમિદમ્ અવદન્, યસ્ય કથાં પૌલઃ પ્રચારયતિ તસ્ય યીશો ર્નામ્ના યુષ્માન્ આજ્ઞાપયામઃ|
14 ೧೪ ಮುಖ್ಯಯಾಜಕ ಸ್ಕೇವನೆಂಬ ಒಬ್ಬ ಯೆಹೂದ್ಯನ ಏಳು ಮಂದಿ ಮಕ್ಕಳೂ ಹಾಗೆ ಮಾಡುತ್ತಿದ್ದರು.
સ્કિવનામ્નો યિહૂદીયાનાં પ્રધાનયાજકસ્ય સપ્તભિઃ પુત્તૈસ્તથા કૃતે સતિ
15 ೧೫ ಆದರೆ ದುರಾತ್ಮವು ಅವರಿಗೆ; “ಯೇಸುವಿನ ಗುರುತು ನನಗುಂಟು, ಪೌಲನನ್ನೂ ಬಲ್ಲೆನು, ಆದರೆ ನೀವು ಯಾರು?” ಎಂದು ಹೇಳಿತು;
કશ્ચિદ્ અપવિત્રો ભૂતઃ પ્રત્યુદિતવાન્, યીશું જાનામિ પૌલઞ્ચ પરિચિનોમિ કિન્તુ કે યૂયં?
16 ೧೬ ಮತ್ತು ದುರಾತ್ಮ ಹಿಡಿದಿದ್ದ ಆ ಮನುಷ್ಯನು ಅವರ ಮೇಲೆ ಹಾರಿ ಬಿದ್ದು, ಅವರನ್ನೂ ಸೋಲಿಸಿ ಸದೆಬಡಿದಿದ್ದರಿಂದ ಅವರು ಗಾಯಗೊಂಡು ಬೆತ್ತಲೆಯಾಗಿ ಆ ಮನೆಯೊಳಗಿಂದ ಓಡಿಹೋದರು.
ઇત્યુક્ત્વા સોપવિત્રભૂતગ્રસ્તો મનુષ્યો લમ્ફં કૃત્વા તેષામુપરિ પતિત્વા બલેન તાન્ જિતવાન્, તસ્માત્તે નગ્નાઃ ક્ષતાઙ્ગાશ્ચ સન્તસ્તસ્માદ્ ગેહાત્ પલાયન્ત|
17 ೧೭ ಈ ಸಂಗತಿಯು ಎಫೆಸದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರಿಗೂ, ಗ್ರೀಕರಿಗೂ ತಿಳಿದುಬಂದಾಗ ಅವರೆಲ್ಲರೂ ಭಯಭೀತರಾದರು. ಮತ್ತು ಕರ್ತನಾದ ಯೇಸುವಿನ ಹೆಸರು ಪ್ರಖ್ಯಾತಿಗೆ ಬಂದಿತು.
સા વાગ્ ઇફિષનગરનિવાસિનસં સર્વ્વેષાં યિહૂદીયાનાં ભિન્નદેશીયાનાં લોકાનાઞ્ચ શ્રવોગોચરીભૂતા; તતઃ સર્વ્વે ભયં ગતાઃ પ્રભો ર્યીશો ર્નામ્નો યશો ઽવર્દ્ધત|
18 ೧೮ ಆತನನ್ನು ನಂಬಿದವರಲ್ಲಿ ಅನೇಕರು ಪಶ್ಚಾತ್ತಾಪದಿಂದ ಬಂದು ತಮ್ಮ ತಮ್ಮ ಪಾಪಕೃತ್ಯಗಳನ್ನು ಒಪ್ಪಿಕೊಂಡರು.
યેષામનેકેષાં લોકાનાં પ્રતીતિરજાયત ત આગત્ય સ્વૈઃ કૃતાઃ ક્રિયાઃ પ્રકાશરૂપેણાઙ્ગીકૃતવન્તઃ|
19 ೧೯ ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಮಾಟಮಂತ್ರಗಳ ಪುಸ್ತಕಗಳನ್ನು ತಂದು, ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವುಗಳ ಮೌಲ್ಯವನ್ನು ಲೆಕ್ಕಮಾಡಿ ಐವತ್ತು ಸಾವಿರ ಬೆಳ್ಳಿ ನಾಣ್ಯ ಆಯಿತೆಂದು ತಿಳಿದುಕೊಂಡರು.
બહવો માયાકર્મ્મકારિણઃ સ્વસ્વગ્રન્થાન્ આનીય રાશીકૃત્ય સર્વ્વેષાં સમક્ષમ્ અદાહયન્, તતો ગણનાં કૃત્વાબુધ્યન્ત પઞ્ચાયુતરૂપ્યમુદ્રામૂલ્યપુસ્તકાનિ દગ્ધાનિ|
20 ೨೦ ಈ ರೀತಿಯಾಗಿ ಕರ್ತನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.
ઇત્થં પ્રભોઃ કથા સર્વ્વદેશં વ્યાપ્ય પ્રબલા જાતા|
21 ೨೧ ಈ ಸಂಗತಿಗಳು ಆದ ಮೇಲೆ ಪೌಲನು ತಾನು ಮಕೆದೋನ್ಯದಲ್ಲಿಯೂ, ಅಖಾಯದಲ್ಲಿಯೂ ಸಂಚಾರಮಾಡಿ ಯೆರೂಸಲೇಮಿಗೆ ಹೋಗಬೇಕೆಂದು ಮನಸ್ಸಿನಲ್ಲಿ ಯೋಚಿಸಿ; “ಅಲ್ಲಿಗೆ ಹೋದ ಮೇಲೆ ರೋಮಾಪುರವನ್ನು ಸಹ ನೋಡಬೇಕೆಂದು” ಹೇಳಿದನು.
સર્વ્વેષ્વેતેષુ કર્મ્મસુ સમ્પન્નેષુ સત્સુ પૌલો માકિદનિયાખાયાદેશાભ્યાં યિરૂશાલમં ગન્તું મતિં કૃત્વા કથિતવાન્ તત્સ્થાનં યાત્રાયાં કૃતાયાં સત્યાં મયા રોમાનગરં દ્રષ્ટવ્યં|
22 ೨೨ ಆದರೆ ಅವನು ತನಗೆ ಸೇವೆಮಾಡುವವರಲ್ಲಿ ಇಬ್ಬರಾದ ತಿಮೊಥೆಯನನ್ನೂ ಮತ್ತು ಎರಸ್ತನನ್ನೂ ಮಕೆದೋನ್ಯಕ್ಕೆ ಕಳುಹಿಸಿ ತಾನು ಆಸ್ಯಸೀಮೆಯಲ್ಲಿ ಕೆಲವು ಕಾಲ ತಂಗಿದನು.
સ્વાનુગતલોકાનાં તીમથિયેરાસ્તૌ દ્વૌ જનૌ માકિદનિયાદેશં પ્રતિ પ્રહિત્ય સ્વયમ્ આશિયાદેશે કતિપયદિનાનિ સ્થિતવાન્|
23 ೨೩ ಆ ಕಾಲದಲ್ಲಿ ಈ ಮಾರ್ಗದ ವಿಷಯವಾಗಿ ಬಹಳ ಗಲಭೆ ಹುಟ್ಟಿತು.
કિન્તુ તસ્મિન્ સમયે મતેઽસ્મિન્ કલહો જાતઃ|
24 ೨೪ ಹೇಗೆಂದರೆ, ದೇಮೇತ್ರಿಯನೆಂಬ ಒಬ್ಬ ಅಕ್ಕಸಾಲಿಗನು ಬೆಳ್ಳಿಯಿಂದ ಅರ್ತೆಮೀ ದೇವಿಯ ಗುಡಿಯಂತೆ ಸಣ್ಣಸಣ್ಣ ಗುಡಿಗಳನ್ನು ಮಾಡಿಸುವವನಾಗಿದ್ದು ಆ ಕಸುಬಿನವರಿಗೆ ಬಹಳ ಲಾಭವನ್ನು ಕೊಡುತ್ತಿದ್ದನು.
તત્કારણમિદં, અર્ત્તિમીદેવ્યા રૂપ્યમન્દિરનિર્મ્માણેન સર્વ્વેષાં શિલ્પિનાં યથેષ્ટલાભમ્ અજનયત્ યો દીમીત્રિયનામા નાડીન્ધમઃ
25 ೨೫ ಅವನು ಅವರನ್ನೂ ಮತ್ತು ಆ ಕಸುಬಿಗೆ ಸಂಬಂಧಪಟ್ಟ ಕೆಲಸದವರನ್ನೂ ಒಟ್ಟಿಗೆ ಕರೆಸಿ ಅವರಿಗೆ; “ಜನರೇ, ಈ ಕೆಲಸದಿಂದ ನಮಗೆ ಐಶ್ವರ್ಯ ಉಂಟಾಗುತ್ತದೆಂದು ನೀವು ಬಲ್ಲಿರಿ.
સ તાન્ તત્કર્મ્મજીવિનઃ સર્વ્વલોકાંશ્ચ સમાહૂય ભાષિતવાન્ હે મહેચ્છા એતેન મન્દિરનિર્મ્માણેનાસ્માકં જીવિકા ભવતિ, એતદ્ યૂયં વિત્થ;
26 ೨೬ ಆದರೆ ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲವೆಂದು ಆ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಹೆಚ್ಚುಕಡಿಮೆ ಆಸ್ಯಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿಬಿಟ್ಟಿದ್ದಾನೆ ಎಂಬುದನ್ನು ನೀವು ನೋಡುತ್ತಿದ್ದೀರಿ, ಕೇಳುತ್ತಿದ್ದೀರಿ.
કિન્તુ હસ્તનિર્મ્મિતેશ્વરા ઈશ્વરા નહિ પૌલનામ્ના કેનચિજ્જનેન કથામિમાં વ્યાહૃત્ય કેવલેફિષનગરે નહિ પ્રાયેણ સર્વ્વસ્મિન્ આશિયાદેશે પ્રવૃત્તિં ગ્રાહયિત્વા બહુલોકાનાં શેમુષી પરાવર્ત્તિતા, એતદ્ યુષ્માભિ ર્દૃશ્યતે શ્રૂયતે ચ|
27 ೨೭ ಇದರಿಂದ ನಮ್ಮ ಉದ್ಯೋಗಕ್ಕೆ ಕುಂದು ಬರುವುದಲ್ಲದೆ ಅರ್ತೆಮೀ ಮಹಾದೇವಿಯ ದೇವಸ್ಥಾನವು ಗಣನೆಗೆ ಬಾರದೆಹೋಗುವ ಹಾಗೆಯೂ, ಎಲ್ಲಾ ಆಸ್ಯಸೀಮೆಯೂ, ಲೋಕವೆಲ್ಲಾ ಪೂಜಿಸುವ ಈ ದೇವಿಯ ವೈಭವಕ್ಕೆ ಹಾನಿಬರುವ ಹಾಗೆ ಗಂಡಾಂತರವುಂಟಾಗುತ್ತದೆಂದು” ಹೇಳಿದನು.
તેનાસ્માકં વાણિજ્યસ્ય સર્વ્વથા હાનેઃ સમ્ભવનં કેવલમિતિ નહિ, આશિયાદેશસ્થૈ ર્વા સર્વ્વજગત્સ્થૈ ર્લોકૈઃ પૂજ્યા યાર્તિમી મહાદેવી તસ્યા મન્દિરસ્યાવજ્ઞાનસ્ય તસ્યા ઐશ્વર્ય્યસ્ય નાશસ્ય ચ સમ્ભાવના વિદ્યતે|
28 ೨೮ ಅವರು ಈ ಮಾತುಗಳನ್ನು ಕೇಳಿ ಕೋಪಗೊಂಡು; “ಎಫೆಸದವರ ಅರ್ತೆಮೀದೇವಿ ಮಹಾದೇವಿ” ಎಂದು ಅರ್ಭಟಿಸಿದರು.
એતાદૃશીં કથાં શ્રુત્વા તે મહાક્રોધાન્વિતાઃ સન્ત ઉચ્ચૈઃકારં કથિતવન્ત ઇફિષીયાનામ્ અર્ત્તિમી દેવી મહતી ભવતિ|
29 ೨೯ ಆಗ ಊರಿನಲ್ಲೆಲ್ಲಾ ಗಲಿಬಿಲಿಯಾಯಿತು. ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನೂ, ಅರಿಸ್ತಾರ್ಕನನ್ನೂ ಜನರು ಹಿಡಿದುಕೊಂಡು ಒಟ್ಟಾಗಿ ನಾಟಕ ಶಾಲೆಯೊಳಗೆ ನುಗ್ಗಿದರು.
તતઃ સર્વ્વનગરં કલહેન પરિપૂર્ણમભવત્, તતઃ પરં તે માકિદનીયગાયારિસ્તાર્ખનામાનૌ પૌલસ્ય દ્વૌ સહચરૌ ધૃત્વૈકચિત્તા રઙ્ગભૂમિં જવેન ધાવિતવન્તઃ|
30 ೩೦ ಪೌಲನು ಜನರೊಳಗೆ ನುಗ್ಗಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ.
તતઃ પૌલો લોકાનાં સન્નિધિં યાતુમ્ ઉદ્યતવાન્ કિન્તુ શિષ્યગણસ્તં વારિતવાન્|
31 ೩೧ ಇದಲ್ಲದೆ ಆಸ್ಯಸೀಮೆಯ ಅಧಿಕಾರಿಗಳಲ್ಲಿ ಕೆಲವರು ಪೌಲನ ಸ್ನೇಹಿತರಾಗಿದ್ದುದರಿಂದ ಅವನ ಬಳಿಗೆ ಜನರನ್ನು ಕಳುಹಿಸಿ; ನೀನು ನಾಟಕ ಶಾಲೆಯೊಳಗೆ ಹೋಗ ಬೇಡ ಎಂದು ಬೇಡಿಕೊಂಡರು.
પૌલસ્યત્મીયા આશિયાદેશસ્થાઃ કતિપયાઃ પ્રધાનલોકાસ્તસ્ય સમીપં નરમેકં પ્રેષ્ય ત્વં રઙ્ગભૂમિં માગા ઇતિ ન્યવેદયન્|
32 ೩೨ ಜನಸಮೂಹದಲ್ಲಿ ಗೊಂದಲವೆದ್ದಿತು, ಕೆಲವರು ಒಂದು ವಿಧದಲ್ಲಿ ಕೂಗಾಡಿದರೆ ಮತ್ತೆ ಕೆಲವರು ಇನ್ನೊಂದು ವಿಧದಲ್ಲಿ ಕೂಗುತ್ತಿದ್ದರು. ಬಹುಜನರಿಗೆ ತಾವು ಅಲ್ಲಿ ಕೂಡಿ ಬಂದಿದ್ದ ಕಾರಣವು ಗೊತ್ತಿರಲಿಲ್ಲ.
તતો નાનાલોકાનાં નાનાકથાકથનાત્ સભા વ્યાકુલા જાતા કિં કારણાદ્ એતાવતી જનતાભવત્ એતદ્ અધિકૈ ર્લોકૈ ર્નાજ્ઞાયિ|
33 ೩೩ ಯೆಹೂದ್ಯರು ಅಲೆಕ್ಸಾಂದ್ರನನ್ನು ಮುಂದಕ್ಕೆ ನೂಕಲು, ಗುಂಪಿನಲ್ಲಿ ಕೆಲವರು ಅವನಿಗೆ ಸೂಚನೆ ಕೊಟ್ಟರು. ಆಗ ಅಲೆಕ್ಸಾಂದ್ರನು ಕೈಸನ್ನೆ ಮಾಡಿ ಕೂಡಿದ್ದ ಜನರಿಗೆ ಪ್ರತಿವಾದ ಮಾಡಬೇಕೆಂದಿದ್ದನು.
તતઃ પરં જનતામધ્યાદ્ યિહૂદીયૈર્બહિષ્કૃતઃ સિકન્દરો હસ્તેન સઙ્કેતં કૃત્વા લોકેભ્ય ઉત્તરં દાતુમુદ્યતવાન્,
34 ೩೪ ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ; “ಎಫೆಸದವರ ಅರ್ತೆಮೀದೇವಿ ಮಹಾದೇವಿ” ಎಂದು ಎರಡು ಘಂಟೆ ಹೊತ್ತು ಕೂಗಿದರು.
કિન્તુ સ યિહૂદીયલોક ઇતિ નિશ્ચિતે સતિ ઇફિષીયાનામ્ અર્ત્તિમી દેવી મહતીતિ વાક્યં પ્રાયેણ પઞ્ચ દણ્ડાન્ યાવદ્ એકસ્વરેણ લોકનિવહૈઃ પ્રોક્તં|
35 ೩೫ ಕೊನೆಗೆ ಪಟ್ಟಣದ ಯಜಮಾನನು ಜನರ ಗುಂಪನ್ನು ಸಮಾಧಾನಪಡಿಸಿ; “ಎಫೆಸದವರೇ, ಎಫೆಸ ಪಟ್ಟಣದವರು ಅರ್ತೆಮೀ ಮಹಾದೇವಿಯ ದೇವಸ್ಥಾನಕ್ಕೂ, ಆಕಾಶದಿಂದ ಬಿದ್ದ ಆಕೆಯ ಮೂರ್ತಿಗೂ, ಪಾಲಕರಾಗಿದ್ದಾರೆಂಬುದನ್ನು ತಿಳಿಯದಿರುವ ಮನುಷ್ಯನು ಯಾವನಿದ್ದಾನೇ?
તતો નગરાધિપતિસ્તાન્ સ્થિરાન્ કૃત્વા કથિતવાન્ હે ઇફિષાયાઃ સર્વ્વે લોકા આકર્ણયત, અર્તિમીમહાદેવ્યા મહાદેવાત્ પતિતાયાસ્તત્પ્રતિમાયાશ્ચ પૂજનમ ઇફિષનગરસ્થાઃ સર્વ્વે લોકાઃ કુર્વ્વન્તિ, એતત્ કે ન જાનન્તિ?
36 ೩೬ ಈ ಸಂಗತಿ ಅಲ್ಲವೆನ್ನುವುದಕ್ಕೆ ಯಾರಿಂದಲೂ ಆಗದಿರುವುದರಿಂದ ನೀವು ಶಾಂತಿಯಿಂದಿರಬೇಕು; ದುಡುಕಿ ಏನೂ ಮಾಡಬಾರದು.
તસ્માદ્ એતત્પ્રતિકૂલં કેપિ કથયિતું ન શક્નુવન્તિ, ઇતિ જ્ઞાત્વા યુષ્માભિઃ સુસ્થિરત્વેન સ્થાતવ્યમ્ અવિવિચ્ય કિમપિ કર્મ્મ ન કર્ત્તવ્યઞ્ચ|
37 ೩೭ ನೀವು ಹಿಡಿದುತಂದಿರುವ ಈ ಮನುಷ್ಯರು ದೇವಸ್ಥಾನದಲ್ಲಿ ಕಳ್ಳತನ ಮಾಡುವವರಲ್ಲ, ನಮ್ಮ ದೇವಿಯನ್ನು ದೂಷಿಸುವವರೂ ಅಲ್ಲ.
યાન્ એતાન્ મનુષ્યાન્ યૂયમત્ર સમાનયત તે મન્દિરદ્રવ્યાપહારકા યુષ્માકં દેવ્યા નિન્દકાશ્ચ ન ભવન્તિ|
38 ೩೮ ಹೀಗಿರುವುದರಿಂದ ದೇಮೇತ್ರಿಯನಿಗೂ ಅವನ ಪಕ್ಷವನ್ನು ಹಿಡಿದಿರುವ ಅಕ್ಕಸಾಲಿಗರಿಗೂ ಯಾವನ ಮೇಲಾದರೂ ದೂರುಗಳಿದ್ದರೆ ನ್ಯಾಯಸ್ಥಾನಗಳುಂಟು, ಅಧಿಪತಿಗಳಿದ್ದಾರೆ, ಒಬ್ಬರ ಮೇಲೊಬ್ಬರು ವ್ಯಾಜ್ಯವಾಡಿಕೊಳ್ಳಲಿ.
યદિ કઞ્ચન પ્રતિ દીમીત્રિયસ્ય તસ્ય સહાયાનાઞ્ચ કાચિદ્ આપત્તિ ર્વિદ્યતે તર્હિ પ્રતિનિધિલોકા વિચારસ્થાનઞ્ચ સન્તિ, તે તત્ સ્થાનં ગત્વા ઉત્તરપ્રત્યુત્તરે કુર્વ્વન્તુ|
39 ೩೯ ಏನಾದರೂ ಹೆಚ್ಚು ವಿಚಾರಣೆ ಬೇಕಾದರೆ ಅದು ನ್ಯಾಯವಾಗಿ ನೆರೆದ ಸಭೆಯಲ್ಲಿ ತೀರ್ಮಾನಿಸಲ್ಪಡಬೇಕು.
કિન્તુ યુષ્માકં કાચિદપરા કથા યદિ તિષ્ઠતિ તર્હિ નિયમિતાયાં સભાયાં તસ્યા નિષ્પત્તિ ર્ભવિષ્યતિ|
40 ೪೦ ಈ ದಿನದಲ್ಲಿ ನ್ಯಾಯವಾದ ಕಾರಣವಿಲ್ಲದೆ ನೆರೆದ ಜನರ ವಿಷಯದಲ್ಲಿ ಇದು ಒಂದು ದಂಗೆ ಎಂಬುದಾಗಿ ನಮ್ಮ ಮೇಲೆ ತಪ್ಪುಹೊರಿಸುವುದಕ್ಕೆ ಆಸ್ಪದವಾಯಿತು. ಈ ದೊಂಬಿಯನ್ನು ಕುರಿತು ವಿಚಾರಣೆನಡೆಸಿದರೆ ನಮ್ಮಿಂದ ಉತ್ತರಕೊಡುವುದಕ್ಕೆ ಆಗುವುದೇ ಇಲ್ಲ” ಎಂದು ಹೇಳಿದನು.
કિન્ત્વેતસ્ય વિરોધસ્યોત્તરં યેન દાતું શક્નુમ્ એતાદૃશસ્ય કસ્યચિત્ કારણસ્યાભાવાદ્ અદ્યતનઘટનાહેતો રાજદ્રોહિણામિવાસ્માકમ્ અભિયોગો ભવિષ્યતીતિ શઙ્કા વિદ્યતે|
41 ೪೧ ಈ ಮಾತುಗಳನ್ನು ಹೇಳಿ ಜನರ ಗುಂಪನ್ನು ಕಳುಹಿಸಿಬಿಟ್ಟನು.
ઇતિ કથયિત્વા સ સભાસ્થલોકાન્ વિસૃષ્ટવાન્|

< ಅಪೊಸ್ತಲರ ಕೃತ್ಯಗಳ 19 >