< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 12 >

1 ಸಹೋದರರೇ ಪವಿತ್ರಾತ್ಮನಿಂದುಂಟಾಗುವ ವರಗಳನ್ನು ಕುರಿತು ನಿಮಗೆ ತಿಳಿವಳಿಕೆಯಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.
ហេ ភ្រាតរះ, យូយំ យទ៑ អាត្មិកាន៑ ទាយាន៑ អនវគតាស្តិឞ្ឋថ តទហំ នាភិលឞាមិ។
2 ನೀವು ಅನ್ಯಜನರಾಗಿದ್ದಾಗ ಮೂಕ ವಿಗ್ರಹಗಳು ನಿಮ್ಮನ್ನು ನಡೆಸಿದ ಹಾಗೆ ನೀವು ಅವುಗಳ ಬಳಿಗೆ ಹೋಗುತ್ತಿದ್ದಿರೆಂದು ಬಲ್ಲಿರಿ.
បូវ៌្វំ ភិន្នជាតីយា យូយំ យទ្វទ៑ វិនីតាស្តទ្វទ៑ អវាក្ប្រតិមានាម៑ អនុគាមិន អាធ្ពម៑ ឥតិ ជានីថ។
3 ಹೀಗಿರುವುದರಿಂದ ನಾನು ನಿಮಗೆ ತಿಳಿಸುವುದನ್ನು ಕೇಳಿರಿ. ದೇವರಾತ್ಮನ ಪ್ರೇರಣೆಯಿಂದ ಮಾತನಾಡುವ ಯಾವ ಮನುಷ್ಯನಾದರೂ “ಯೇಸುವನ್ನು ಶಾಪಗ್ರಸ್ತನೆಂದು” ಹೇಳುವುದಿಲ್ಲ. ಮತ್ತು ಪವಿತ್ರಾತ್ಮನ ಪ್ರೇರಣೆಯಿಂದಲೇ ಹೊರತು ಯಾವ ಮನುಷ್ಯನಾದರೂ “ಯೇಸುವನ್ನು ಕರ್ತನೆಂದು” ಹೇಳಲಾರನು.
ឥតិ ហេតោរហំ យុឞ្មភ្យំ និវេទយាមិ, ឦឝ្វរស្យាត្មនា ភាឞមាណះ កោៜបិ យីឝុំ ឝប្ត ឥតិ ន វ្យាហរតិ, បុនឝ្ច បវិត្រេណាត្មនា វិនីតំ វិនាន្យះ កោៜបិ យីឝុំ ប្រភុរិតិ វ្យាហត៌្តុំ ន ឝក្នោតិ។
4 ವರಗಳಲ್ಲಿ ಬೇರೆ ಬೇರೆ ವಿಧಗಳುಂಟು. ಆದರೆ ದೇವರಾತ್ಮನು ಒಬ್ಬನೇ.
ទាយា ពហុវិធាះ កិន្ត្វេក អាត្មា
5 ಸೇವೆಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಕರ್ತನು ಒಬ್ಬನೇ.
បរិចយ៌្យាឝ្ច ពហុវិធាះ កិន្ត្វេកះ ប្រភុះ។
6 ಕಾರ್ಯಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಸರ್ವರಲ್ಲಿಯೂ ಸರ್ವ ಕಾರ್ಯಗಳನ್ನು ಸಾಧಿಸುವ ದೇವರು ಒಬ್ಬನೇ.
សាធនានិ ពហុវិធានិ កិន្តុ សវ៌្វេឞុ សវ៌្វសាធក ឦឝ្វរ ឯកះ។
7 ಆದರೆ ಪ್ರತಿಯೊಬ್ಬನಲ್ಲಿ ತೋರಿಬರುವ ದೇವರಾತ್ಮನ ವರಗಳು ಸರ್ವರ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿವೆ.
ឯកៃកស្មៃ តស្យាត្មនោ ទឝ៌នំ បរហិតាត៌្ហំ ទីយតេ។
8 ಒಬ್ಬನಿಗೆ ದೇವರಾತ್ಮನ ಮೂಲಕ ಜ್ಞಾನವಾಕ್ಯವು ಮತ್ತೊಬ್ಬನಿಗೆ ಆ ಆತ್ಮನಿಂದಲೇ ತಿಳಿವಳಿಕೆಯ ವಾಕ್ಯವು
ឯកស្មៃ តេនាត្មនា ជ្ញានវាក្យំ ទីយតេ, អន្យស្មៃ តេនៃវាត្មនាទិឞ្ដំ វិទ្យាវាក្យម៑,
9 ಒಬ್ಬನಿಗೆ ಆ ಆತ್ಮನಿಂದಲೇ ನಂಬಿಕೆಯು ಮತ್ತೊಬ್ಬನಿಗೆ ಆ ಒಬ್ಬ ಆತ್ಮನಿಂದಲೇ ನಾನಾ ರೋಗಗಳನ್ನು ವಾಸಿಮಾಡುವ ವರವು,
អន្យស្មៃ តេនៃវាត្មនា វិឝ្វាសះ, អន្យស្មៃ តេនៃវាត្មនា ស្វាស្ថ្យទានឝក្តិះ,
10 ೧೦ ಮತ್ತೊಬ್ಬನಿಗೆ ಮಹತ್ಕಾರ್ಯಗಳನ್ನು ಮಾಡುವ ವರವು, ಇನ್ನೊಬ್ಬನಿಗೆ ಪ್ರವಾದನೆಯ ವರವು, ಒಬ್ಬನಿಗೆ ಆತ್ಮವನ್ನು ವಿವೇಚಿಸುವ ವರವು, ಮತ್ತೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ವರವು, ಒಬ್ಬನಿಗೆ ಭಾಷೆಗಳ ಅರ್ಥವನ್ನು ಬಿಡಿಸಿ ಹೇಳುವ ವರವು ಕೊಡಲ್ಪಡುತ್ತದೆ.
អន្យស្មៃ ទុះសាធ្យសាធនឝក្តិរន្យស្មៃ ចេឝ្វរីយាទេឝះ, អន្យស្មៃ ចាតិមានុឞិកស្យាទេឝស្យ វិចារសាមត៌្ហ្យម៑, អន្យស្មៃ បរភាឞាភាឞណឝក្តិរន្យស្មៃ ច ភាឞាត៌្ហភាឞណសាមយ៌ំ ទីយតេ។
11 ೧೧ ಆದರೆ ಈ ಎಲ್ಲವುಗಳಲ್ಲಿ ಕಾರ್ಯ ಮಾಡುವ ಆ ಒಬ್ಬ ಆತ್ಮನೇ ವರಗಳನ್ನೆಲ್ಲಾ ತನ್ನ ಚಿತ್ತಾನುಸಾರವಾಗಿ ಒಬ್ಬೊಬ್ಬನಿಗೆ ಹಂಚಿಕೊಡುವವನಾಗಿದ್ದಾನೆ.
ឯកេនាទ្វិតីយេនាត្មនា យថាភិលាឞម៑ ឯកៃកស្មៃ ជនាយៃកៃកំ ទានំ វិតរតា តានិ សវ៌្វាណិ សាធ្យន្តេ។
12 ೧೨ ಹೇಗೆ ದೇಹವು ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ದೇಹದ ಅಂಗಗಳೆಲ್ಲವೂ ಅನೇಕವಾಗಿದ್ದು ಒಂದೇ ದೇಹವಾಗಿದೆಯೋ, ಹಾಗೆಯೇ ಕ್ರಿಸ್ತನು ಇದ್ದಾನೆ.
ទេហ ឯកះ សន្នបិ យទ្វទ៑ ពហ្វង្គយុក្តោ ភវតិ, តស្យៃកស្យ វបុឞោ ៜង្គានាំ ពហុត្វេន យទ្វទ៑ ឯកំ វបុ រ្ភវតិ, តទ្វត៑ ខ្រីឞ្ដះ។
13 ೧೩ ಯೆಹೂದ್ಯರಾಗಲಿ, ಗ್ರೀಕರಾಗಲಿ, ದಾಸರಾಗಲಿ, ಸ್ವತಂತ್ರರಾಗಲಿ ನಾವೆಲ್ಲರೂ ಒಂದೇ ದೇಹವಾಗುವುದಕ್ಕಾಗಿ ಒಂದೇ ಆತ್ಮನಲ್ಲಿ ದೀಕ್ಷಾಸ್ನಾನಮಾಡಿಸಿಕೊಂಡೆವು. ಒಂದೇ ಆತ್ಮವು ನಮ್ಮೆಲ್ಲರಿಗೆ ಪಾನವಾಗಿ ಕೊಡಲ್ಪಟ್ಟಿತು.
យតោ ហេតោ រ្យិហូទិភិន្នជាតីយទាសស្វតន្ត្រា វយំ សវ៌្វេ មជ្ជនេនៃកេនាត្មនៃកទេហីក្ឫតាះ សវ៌្វេ ចៃកាត្មភុក្តា អភវាម។
14 ೧೪ ದೇಹವು ಒಂದೇ ಅಂಗವಲ್ಲ. ಅನೇಕ ಅಂಗಗಳುಳ್ಳದ್ದಾಗಿದೆ.
ឯកេនាង្គេន វបុ រ្ន ភវតិ កិន្តុ ពហុភិះ។
15 ೧೫ ಕಾಲು “ನಾನು ಕೈಯಲ್ಲದ ಕಾರಣ ದೇಹಕ್ಕೆ ಸೇರಿಲ್ಲವೆಂದು” ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ?
តត្រ ចរណំ យទិ វទេត៑ នាហំ ហស្តស្តស្មាត៑ ឝរីរស្យ ភាគោ នាស្មីតិ តហ៌្យនេន ឝរីរាត៑ តស្យ វិយោគោ ន ភវតិ។
16 ೧೬ ಕಿವಿ “ನಾನು ಕಣ್ಣಲ್ಲದ ಕಾರಣ ನಾನು ದೇಹಕ್ಕೆ ಸೇರಿಲ್ಲವೆಂದು” ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ?
ឝ្រោត្រំ វា យទិ វទេត៑ នាហំ នយនំ តស្មាត៑ ឝរីរស្យាំឝោ នាស្មីតិ តហ៌្យនេន ឝរីរាត៑ តស្យ វិយោគោ ន ភវតិ។
17 ೧೭ ದೇಹವೆಲ್ಲಾ ಕಣ್ಣಾದರೆ ನೀವು ಏನೂ ಕೇಳಲಾಗುತ್ತಿರಲಿಲ್ಲ. ದೇಹವೆಲ್ಲಾ ಕಿವಿಯಾದರೆ ನೀವು ಯಾವ ವಾಸನೆಯನ್ನು ಮೂಸಲಾಗುತ್ತಿರಲಿಲ್ಲ.
ក្ឫត្ស្នំ ឝរីរំ យទិ ទឝ៌នេន្ទ្រិយំ ភវេត៑ តហ៌ិ ឝ្រវណេន្ទ្រិយំ កុត្រ ស្ថាស្យតិ? តត៑ ក្ឫត្ស្នំ យទិ វា ឝ្រវណេន្ទ្រិយំ ភវេត៑ តហ៌ិ ឃ្រណេន្ទ្រិយំ កុត្រ ស្ថាស្យតិ?
18 ೧೮ ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತನಗೆ ಸರಿಯಾಗಿ ತೋಚಿದ ಪ್ರಕಾರ ದೇಹದೊಳಗೆ ಇಟ್ಟಿದ್ದಾನೆ.
កិន្ត្វិទានីម៑ ឦឝ្វរេណ យថាភិលឞិតំ តថៃវាង្គប្រត្យង្គានាម៑ ឯកៃកំ ឝរីរេ ស្ថាបិតំ។
19 ೧೯ ಅವೆಲ್ಲವೂ ಒಂದೇ ಅಂಗವಾಗಿದ್ದರೆ ದೇಹವೆಲ್ಲಿರುವುದು?
តត៑ ក្ឫត្ស្នំ យទ្យេកាង្គរូបិ ភវេត៑ តហ៌ិ ឝរីរេ កុត្រ ស្ថាស្យតិ?
20 ೨೦ ಆದರೆ ಅಂಗಗಳು ಅನೇಕವಾಗಿದೆ ಆದರೆ ದೇಹವು ಒಂದೇ.
តស្មាទ៑ អង្គានិ ពហូនិ សន្តិ ឝរីរំ ត្វេកមេវ។
21 ೨೧ ಕಣ್ಣು ಕೈಗೆ, “ನೀನು ನನಗೆ ಅವಶ್ಯವಿಲ್ಲವೆಂದೂ,” ತಲೆಯು “ಪಾದಗಳಿಗೆ ನೀವು ನನಗೆ ಅವಶ್ಯವಿಲ್ಲವೆಂದೂ” ಹೇಳುವುದಕ್ಕಾಗುವುದಿಲ್ಲ.
អតឯវ ត្វយា មម ប្រយោជនំ នាស្តីតិ វាចំ បាណិំ វទិតុំ នយនំ ន ឝក្នោតិ, តថា យុវាភ្យាំ មម ប្រយោជនំ នាស្តីតិ មូទ៌្ធា ចរណៅ វទិតុំ ន ឝក្នោតិះ;
22 ೨೨ ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸಿ ಕಾಣುವ ಅಂಗಗಳನ್ನು ಅತ್ಯವಶ್ಯವೆಂದು ತಿಳಿಯಬೇಕಲ್ಲವೋ?
វស្តុតស្តុ វិគ្រហស្យ យាន្យង្គាន្យស្មាភិ រ្ទុព៌្ពលានិ ពុធ្យន្តេ តាន្យេវ សប្រយោជនានិ សន្តិ។
23 ೨೩ ಮತ್ತು ನಾವು ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸುವ ಭಾಗಗಳಿಗೆ ಉಡಿಗೆಯಿಂದ ಹೆಚ್ಚಾದ ಮಾನವನ್ನು ಕೊಡುವುದುಂಟಲ್ಲಾ. ಹೀಗೆ ಮಾನವಿಲ್ಲದ ಅಂಗಗಳಿಗೆ ಹೆಚ್ಚಾದ ಮಾನವುಂಟಾಗುತ್ತದೆ.
យានិ ច ឝរីរមធ្យេៜវមន្យានិ ពុធ្យតេ តាន្យស្មាភិរធិកំ ឝោភ្យន្តេ។ យានិ ច កុទ្ឫឝ្យានិ តានិ សុទ្ឫឝ្យតរាណិ ក្រិយន្តេ
24 ೨೪ ಮಾನವುಳ್ಳ ಅಂಗಗಳಿಗೆ ಏನೂ ಅವಶ್ಯವಿಲ್ಲ. ದೇಹದಲ್ಲಿ ಭೇದವೇನೂ ಇರದೇ ಅಂಗಗಳು ಒಂದಕ್ಕೊಂದರ ಹಿತವನ್ನು ಚಿಂತಿಸುವ ಹಾಗೆ ದೇವರು ಕೊರತೆಯುಳ್ಳದ್ದಕ್ಕೆ ಹೆಚ್ಚಾದ ಮಾನವನ್ನು ಕೊಟ್ಟು ದೇಹವನ್ನು ಹದವಾಗಿ ಜೋಡಿಸಿದ್ದಾನೆ.
កិន្តុ យានិ ស្វយំ សុទ្ឫឝ្យានិ តេឞាំ ឝោភនម៑ និឞ្ប្រយោជនំ។
25 ೨೫
ឝរីរមធ្យេ យទ៑ ភេទោ ន ភវេត៑ កិន្តុ សវ៌្វាណ្យង្គានិ យទ៑ ឰក្យភាវេន សវ៌្វេឞាំ ហិតំ ចិន្តយន្តិ តទត៌្ហម៑ ឦឝ្វរេណាប្រធានម៑ អាទរណីយំ ក្ឫត្វា ឝរីរំ វិរចិតំ។
26 ೨೬ ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ. ಒಂದು ಅಂಗ ಗೌರವಿಸಲ್ಪಟ್ಟರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.
តស្មាទ៑ ឯកស្យាង្គស្យ បីឌាយាំ ជាតាយាំ សវ៌្វាណ្យង្គានិ តេន សហ បីឌ្យន្តេ, ឯកស្យ សមាទរេ ជាតេ ច សវ៌្វាណិ តេន សហ សំហ្ឫឞ្យន្តិ។
27 ೨೭ ನೀವು ಕ್ರಿಸ್ತನ ದೇಹವು ಮತ್ತು ಒಬ್ಬೊಬ್ಬರಾಗಿ ಅದಕ್ಕೆ ಅಂಗಗಳಾಗಿದ್ದೀರಿ.
យូយញ្ច ខ្រីឞ្ដស្យ ឝរីរំ, យុឞ្មាកម៑ ឯកៃកឝ្ច តស្យៃកៃកម៑ អង្គំ។
28 ೨೮ ದೇವರು ತನ್ನ ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ಇಟ್ಟಿದ್ದಾನೆ. ಆ ಮೇಲೆ ಮಹತ್ಕಾರ್ಯ ಮಾಡುವ ಶಕ್ತಿಯನ್ನು, ನಾನಾ ರೋಗಗಳನ್ನು ವಾಸಿಮಾಡುವ ವರವನ್ನೂ, ಪರಸಹಾಯ ಮಾಡುವ ಗುಣವನ್ನೂ, ಕಾರ್ಯಗಳನ್ನು ನಿರ್ವಹಿಸುವ ಜ್ಞಾನವನ್ನು ಮತ್ತು ವಿವಿಧ ಭಾಷೆಗಳನ್ನಾಡುವ ವರವನ್ನೂ ಅವರವರಿಗೆ ಬೇರೆ ಬೇರೆಯಾಗಿ ಕೊಟ್ಟಿದ್ದಾನೆ.
កេចិត៑ កេចិត៑ សមិតាវីឝ្វរេណ ប្រថមតះ ប្រេរិតា ទ្វិតីយត ឦឝ្វរីយាទេឝវក្តារស្ត្ឫតីយត ឧបទេឞ្ដារោ និយុក្តាះ, តតះ បរំ កេភ្យោៜបិ ចិត្រកាយ៌្យសាធនសាមត៌្ហ្យម៑ អនាមយករណឝក្តិរុបក្ឫតៅ លោកឝាសនេ វា នៃបុណ្យំ នានាភាឞាភាឞណសាមត៌្ហ្យំ វា តេន វ្យតារិ។
29 ೨೯ ಎಲ್ಲರು ಅಪೊಸ್ತಲರೋ? ಎಲ್ಲರು ಪ್ರವಾದಿಗಳೋ? ಎಲ್ಲರೂ ಬೋಧಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ?
សវ៌្វេ កិំ ប្រេរិតាះ? សវ៌្វេ កិម៑ ឦឝ្វរីយាទេឝវក្តារះ? សវ៌្វេ កិម៑ ឧបទេឞ្ដារះ? សវ៌្វេ កិំ ចិត្រកាយ៌្យសាធកាះ?
30 ೩೦ ರೋಗ ವಾಸಿಮಾಡುವ ವರಗಳು ಎಲ್ಲರಿಗೂ ಉಂಟೋ? ಎಲ್ಲರೂ ಅನ್ಯಭಾಷೆಗಳನ್ನಾಡುವರೋ? ಅನ್ಯಭಾಷೆಗಳ ಅರ್ಥವನ್ನು ಹೇಳುವುದಕ್ಕೆ ಎಲ್ಲರಿಗೂ ಶಕ್ತಿಯುಂಟೋ?
សវ៌្វេ កិម៑ អនាមយករណឝក្តិយុក្តាះ? សវ៌្វេ កិំ បរភាឞាវាទិនះ? សវ៌្វេ វា កិំ បរភាឞាត៌្ហប្រកាឝកាះ?
31 ೩೧ ಇವುಗಳಲ್ಲಿ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಇನ್ನೂ ಸರ್ವೋತ್ತಮವಾದ ಮಾರ್ಗವೊಂದನ್ನು ನಿಮಗೆ ತೋರಿಸುತ್ತೇನೆ.
យូយំ ឝ្រេឞ្ឋទាយាន៑ លព្ធុំ យតធ្វំ។ អនេន យូយំ មយា សវ៌្វោត្តមមាគ៌ំ ទឝ៌យិតវ្យាះ។

< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 12 >