< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 11 >

1 ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.
ហេ ភ្រាតរះ, យូយំ សវ៌្វស្មិន៑ កាយ៌្យេ មាំ ស្មរថ មយា ច យាទ្ឫគុបទិឞ្ដាស្តាទ្ឫគាចរថៃតត្ការណាត៑ មយា ប្រឝំសនីយា អាធ្ពេ។
2 ನೀವು ಎಲ್ಲಾದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು ನಾನು ನಿಮಗೆ ತಿಳಿಸಿಕೊಟ್ಟ ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.
តថាបិ មមៃឞា វាញ្ឆា យទ៑ យូយមិទម៑ អវគតា ភវថ,
3 ಆದರೂ ನೀವು ಒಂದು ಸಂಗತಿಯನ್ನು ತಿಳಿದಿರಬೇಕೆಂಬುದು ನನ್ನ ಇಷ್ಟ. ಅದೇನೆಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆಯಾಗಿದ್ದಾನೆ. ಸ್ತ್ರೀಗೆ ಪುರುಷನು ತಲೆಯಾಗಿದ್ದಾನೆ. ಕ್ರಿಸ್ತನಿಗೆ ದೇವರು ತಲೆಯಾಗಿದ್ದಾನೆ.
ឯកៃកស្យ បុរុឞស្យោត្តមាង្គស្វរូបះ ខ្រីឞ្ដះ, យោឞិតឝ្ចោត្តមាង្គស្វរូបះ បុមាន៑, ខ្រីឞ្ដស្យ ចោត្តមាង្គស្វរូប ឦឝ្វរះ។
4 ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆಯನ್ನಾಗಲಿ, ಪ್ರವಾದನೆಯನ್ನಾಗಲಿ ಮಾಡುವ ಪುರುಷನು ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.
អបរម៑ អាច្ឆាទិតោត្តមាង្គេន យេន បុំសា ប្រាត៌្ហនា ក្រិយត ឦឝ្វរីយវាណី កថ្យតេ វា តេន ស្វីយោត្តមាង្គម៑ អវជ្ញាយតេ។
5 ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ. ಸ್ತ್ರೀಯು ಮುಸುಕಿಲ್ಲದೆ ಇರುವುದೂ ತಲೆಬೋಳಿಸಿಕೊಂಡಿರುವುದೂ ಒಂದೇ.
អនាច្ឆាទិតោត្តមាង្គយា យយា យោឞិតា ច ប្រាត៌្ហនា ក្រិយត ឦឝ្វរីយវាណី កថ្យតេ វា តយាបិ ស្វីយោត្តមាង្គម៑ អវជ្ញាយតេ យតះ សា មុណ្ឌិតឝិរះសទ្ឫឝា។
6 ಸ್ತ್ರೀಯು ಮುಸುಕು ಹಾಕಿಕೊಳ್ಳದಿದ್ದರೆ ಆಕೆಯು ಕೂದಲನ್ನು ತೆಗೆಯಿಸಿಬಿಡಬೇಕಷ್ಟೆ. ಆದರೆ ಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ ಆಕೆಯು ಮುಸುಕನ್ನು ಹಾಕಿಕೊಳ್ಳಲಿ.
អនាច្ឆាទិតមស្តកា យា យោឞិត៑ តស្យាះ ឝិរះ មុណ្ឌនីយមេវ កិន្តុ យោឞិតះ កេឝច្ឆេទនំ ឝិរោមុណ្ឌនំ វា យទិ លជ្ជាជនកំ ភវេត៑ តហ៌ិ តយា ស្វឝិរ អាច្ឆាទ្យតាំ។
7 ಪುರುಷನು ದೇವರ ಪ್ರತಿರೂಪವೂ ಮತ್ತು ಪ್ರಭಾವವೂ ಆಗಿರುವುದರಿಂದ ತಲೆಯನ್ನು ಮುಚ್ಚಿಕೊಳ್ಳಬಾರದು. ಸ್ತ್ರೀಯಾದರೋ ಪುರುಷನ ಪ್ರಭಾವವಾಗಿದ್ದಾಳೆ.
បុមាន៑ ឦឝ្វរស្យ ប្រតិមូត៌្តិះ ប្រតិតេជះស្វរូបឝ្ច តស្មាត៑ តេន ឝិរោ នាច្ឆាទនីយំ កិន្តុ សីមន្តិនី បុំសះ ប្រតិពិម្ពស្វរូបា។
8 ಪುರುಷನು ಸ್ತ್ರೀಯಿಂದ ಉತ್ಪತ್ತಿಯಾಗಲಿಲ್ಲ. ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು.
យតោ យោឞាតះ បុមាន៑ នោទបាទិ កិន្តុ បុំសោ យោឞិទ៑ ឧទបាទិ។
9 ಇದಲ್ಲದೆ ಪುರುಷನು ಸ್ತ್ರೀಗೋಸ್ಕರವಾಗಿ ಸೃಷ್ಟಿಸಲ್ಪಡಲಿಲ್ಲ, ಆದರೆ ಸ್ತ್ರೀಯು ಪುರುಷನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಳು.
អធិកន្តុ យោឞិតះ ក្ឫតេ បុំសះ ស្ឫឞ្ដិ រ្ន ពភូវ កិន្តុ បុំសះ ក្ឫតេ យោឞិតះ ស្ឫឞ្ដិ រ្ពភូវ។
10 ೧೦ ಹೀಗಿರುವುದರಿಂದ ದೂತರ ನಿಮಿತ್ತವಾಗಿ ಸ್ತ್ರೀಯು ಪುರುಷನ ಅಧಿಕಾರವನ್ನು ಸೂಚಿಸುವ ಮುಸುಕನ್ನು ತಲೆಯ ಮೇಲೆ ಹಾಕಿಕೊಂಡಿರಬೇಕು.
ឥតិ ហេតោ រ្ទូតានាម៑ អាទរាទ៑ យោឞិតា ឝិរស្យធីនតាសូចកម៑ អាវរណំ ធត៌្តវ្យំ។
11 ೧೧ ಆದರೂ ಕರ್ತನ ವಿಷಯದಲ್ಲಿ ಪುರುಷರಿಲ್ಲದೆ ಸ್ತ್ರೀಯರೂ, ಸ್ತ್ರೀಯರಿಲ್ಲದೆ ಪುರುಷರೂ ಇಲ್ಲ.
តថាបិ ប្រភោ រ្វិធិនា បុមាំសំ វិនា យោឞិន្ន ជាយតេ យោឞិតញ្ច វិនា បុមាន៑ ន ជាយតេ។
12 ೧೨ ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು. ಹಾಗೆಯೇ ಪುರುಷನು ಸ್ತ್ರೀ ಮೂಲಕವಾಗಿ ಹುಟ್ಟುತ್ತಾನೆ. ಆದರೆ ದೇವರೇ ಸಮಸ್ತವನ್ನು ಸೃಷ್ಟಿಸಿದಾತನು.
យតោ យថា បុំសោ យោឞិទ៑ ឧទបាទិ តថា យោឞិតះ បុមាន៑ ជាយតេ, សវ៌្វវស្តូនិ ចេឝ្វរាទ៑ ឧត្បទ្យន្តេ។
13 ೧೩ ನಿಮ್ಮೊಳಗೆ ನೀವೇ ಯೋಚಿಸಿ ತೀರ್ಮಾನಿಸಿಕೊಳ್ಳಿರಿ. ಸ್ತ್ರೀಯು ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥನೆ ಮಾಡುವುದು ಯುಕ್ತವೋ
យុឞ្មាភិរេវៃតទ៑ វិវិច្យតាំ, អនាវ្ឫតយា យោឞិតា ប្រាត៌្ហនំ កិំ សុទ្ឫឝ្យំ ភវេត៑?
14 ೧೪ ಪುರುಷನು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವನಿಗೆ ಅವಮಾನಕರವಾಗಿದೆಯೆಂದೂ,
បុរុឞស្យ ទីគ៌្ហកេឝត្វំ តស្យ លជ្ជាជនកំ, កិន្តុ យោឞិតោ ទីគ៌្ហកេឝត្វំ តស្យា គៅរវជនកំ
15 ೧೫ ಸ್ತ್ರೀಯು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವಳಿಗೆ ಮುಸುಕಿಗೆ ಬದಲಾಗಿ ನೀಡಲಾಗಿದ್ದು ಅದು ಅವಳಿಗೆ ಗೌರವವಾಗಿದೆಯೆಂದೂ ಸ್ವಾಭಾವಿಕವಾಗಿ ನಿಮಗೆ ತಿಳಿಯುತ್ತದಲ್ಲವೋ?
យត អាច្ឆាទនាយ តស្យៃ កេឝា ទត្តា ឥតិ កិំ យុឞ្មាភិះ ស្វភាវតោ ន ឝិក្ឞ្យតេ?
16 ೧೬ ಯಾವನಾದರೂ ಇದರ ಕುರಿತು ವಾಗ್ವಾದ ಮಾಡುವುದಾದರೆ ಇಂಥ ಪದ್ಧತಿ ನಮ್ಮಲ್ಲಿ ಇಲ್ಲ ಮತ್ತು ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳಿದುಕೊಳ್ಳಿರಿ.
អត្រ យទិ កឝ្ចិទ៑ វិវទិតុម៑ ឥច្ឆេត៑ តហ៌្យស្មាកម៑ ឦឝ្វរីយសមិតីនាញ្ច តាទ្ឫឝី រីតិ រ្ន វិទ្យតេ។
17 ೧೭ ನಾನು ಇನ್ನು ನಿಮಗೆ ಅಪ್ಪಣೆಕೊಡುವಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ಯಾಕೆಂದರೆ ನೀವು ಒಟ್ಟಾಗಿ ಸೇರಿಬರುತ್ತಿರುವುದು ಕೇಡಿಗಾಗಿಯೇ ಹೊರತು ಮೇಲಿಗಾಗಿಯಲ್ಲ.
យុឞ្មាភិ រ្ន ភទ្រាយ កិន្តុ កុត្សិតាយ សមាគម្យតេ តស្មាទ៑ ឯតានិ ភាឞមាណេន មយា យូយំ ន ប្រឝំសនីយាះ។
18 ೧೮ ಹೇಗೆಂದರೆ ಮೊದಲನೆಯದಾಗಿ ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಭಿನ್ನತೆ, ಭೇದಗಳು ಉಂಟಾಗುತ್ತವೆಂದು ಕೇಳಿದ್ದೇನೆ. ಮತ್ತು ಇದು ನಿಜವೆಂದು ಸ್ವಲ್ಪ ಮಟ್ಟಿಗೆ ನಂಬುತ್ತೇನೆ.
ប្រថមតះ សមិតៅ សមាគតានាំ យុឞ្មាកំ មធ្យេ ភេទាះ សន្តីតិ វាត៌្តា មយា ឝ្រូយតេ តន្មធ្យេ កិញ្ចិត៑ សត្យំ មន្យតេ ច។
19 ೧೯ ನಿಮ್ಮಲ್ಲಿ ಕೆಲವರು ಯೋಗ್ಯರೆಂದು ಕಂಡುಬರುವುದಕ್ಕಾಗಿ ಭಿನ್ನಾಭಿಪ್ರಾಯಗಳು ಇರುವುದು ಅವಶ್ಯವೇ.
យតោ ហេតោ រ្យុឞ្មន្មធ្យេ យេ បរីក្ឞិតាស្តេ យត៑ ប្រកាឝ្យន្តេ តទត៌្ហំ ភេទៃ រ្ភវិតវ្យមេវ។
20 ೨೦ ನೀವೆಲ್ಲರು ಸೇರಿಬರುವಾಗ ನೀವು ಮಾಡುವ ಭೋಜನವು ಕರ್ತನ ಭೋಜನವಲ್ಲ.
ឯកត្រ សមាគតៃ រ្យុឞ្មាភិះ ប្រភាវំ ភេជ្យំ ភុជ្យត ឥតិ នហិ;
21 ೨೧ ಭೋಜನ ಮಾಡುವಲ್ಲಿ ಪ್ರತಿಯೊಬ್ಬನು ತಾನು ತಂದದ್ದನ್ನು ಮತ್ತೊಬ್ಬರಿಗಿಂತ ಮುಂದಾಗಿ ಊಟಮಾಡುತ್ತಾನೆ. ಹೀಗೆ ಒಬ್ಬನು ಹಸಿದಿರುತ್ತಾನೆ ಮತ್ತೊಬ್ಬನು ಕುಡಿದು ಮತ್ತನಾಗಿರುತ್ತಾನೆ.
យតោ ភោជនកាលេ យុឞ្មាកមេកៃកេន ស្វកីយំ ភក្ឞ្យំ តូណ៌ំ គ្រស្យតេ តស្មាទ៑ ឯកោ ជនោ ពុភុក្ឞិតស្តិឞ្ឋតិ, អន្យឝ្ច បរិត្ឫប្តោ ភវតិ។
22 ೨೨ ನಿಮಗೆ ತಿನ್ನುವುದಕ್ಕೂ, ಕುಡಿಯುವುದಕ್ಕೂ ಮನೆಗಳಿಲ್ಲವೋ? ಅಥವಾ ದೇವರ ಸಭೆಯನ್ನು ಅಸಡ್ಡೆಮಾಡಿ ಏನೂ ಇಲ್ಲದವರನ್ನು ಅವಮಾನಮಾಡುತ್ತೀರಾ? ನಾನು ನಿಮಗೇನು ಹೇಳಲಿ? ನಿಮ್ಮನ್ನು ಹೊಗಳಲೋ? ಈ ವಿಷಯದಲ್ಲಿ ಹೊಗಳುವುದಿಲ್ಲ.
ភោជនបានាត៌្ហំ យុឞ្មាកំ កិំ វេឝ្មានិ ន សន្តិ? យុឞ្មាភិ រ្វា កិម៑ ឦឝ្វរស្យ សមិតិំ តុច្ឆីក្ឫត្យ ទីនា លោកា អវជ្ញាយន្តេ? ឥត្យនេន មយា កិំ វក្តវ្យំ? យូយំ កិំ មយា ប្រឝំសនីយាះ? ឯតស្មិន៑ យូយំ ន ប្រឝំសនីយាះ។
23 ೨೩ ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನೆಂದರೆ, ಕರ್ತನಾದ ಯೇಸು ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು,
ប្រភុតោ យ ឧបទេឝោ មយា លព្ធោ យុឞ្មាសុ សមប៌ិតឝ្ច ស ឯឞះ។
24 ೨೪ “ಇದುನಿಮಗೋಸ್ಕರವಾಗಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರಹೀಗೆ ಮಾಡಿರಿ” ಅಂದನು.
បរករសមប៌ណក្ឞបាយាំ ប្រភុ រ្យីឝុះ បូបមាទាយេឝ្វរំ ធន្យំ វ្យាហ្ឫត្យ តំ ភង្ក្ត្វា ភាឞិតវាន៑ យុឞ្មាភិរេតទ៑ គ្ឫហ្យតាំ ភុជ្យតាញ្ច តទ៑ យុឞ្មត្ក្ឫតេ ភគ្នំ មម ឝរីរំ; មម ស្មរណាត៌្ហំ យុឞ្មាភិរេតត៑ ក្រិយតាំ។
25 ೨೫ ಊಟವಾದ ಮೇಲೆ ಆತನು ಅದೇ ರೀತಿಯಲ್ಲಿ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾನಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ. ನೀವು ಇದರಲ್ಲಿ ಪಾನಮಾಡುವಾಗೆಲೆಲ್ಲಾ ನನ್ನನ್ನು ನೆನಪುಮಾಡಿಕೊಳ್ಳುವುದಕ್ಕೋಸ್ಕರ ಇದನ್ನು ಪಾನಮಾಡಿರಿ” ಅಂದನು.
បុនឝ្ច ភេជនាត៑ បរំ តថៃវ កំសម៑ អាទាយ តេនោក្តំ កំសោៜយំ មម ឝោណិតេន ស្ថាបិតោ នូតននិយមះ; យតិវារំ យុឞ្មាភិរេតត៑ បីយតេ តតិវារំ មម ស្មរណាត៌្ហំ បីយតាំ។
26 ೨೬ ನೀವು ಈ ರೊಟ್ಟಿಯನ್ನು ತಿಂದು ಈ ಪಾನಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.
យតិវារំ យុឞ្មាភិរេឞ បូបោ ភុជ្យតេ ភាជនេនានេន បីយតេ ច តតិវារំ ប្រភោរាគមនំ យាវត៑ តស្យ ម្ឫត្យុះ ប្រកាឝ្យតេ។
27 ೨೭ ಹೀಗಿರುವುದರಿಂದ ಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿಂದರೆ ಇಲ್ಲವೆ ಆತನ ಪಾನಪಾತ್ರೆಯಲ್ಲಿ ಪಾನ ಮಾಡಿದರೆ ಅವನು ಕರ್ತನ ದೇಹಕ್ಕೂ ಮತ್ತು ಕರ್ತನ ರಕ್ತಕ್ಕೂ ಸಂಬಂಧಿಸಿದಂತೆ ದ್ರೋಹಮಾಡಿದವನಾಗಿರುವನು.
អបរញ្ច យះ កឝ្ចិទ៑ អយោគ្យត្វេន ប្រភោរិមំ បូបម៑ អឝ្នាតិ តស្យានេន ភាជនេន បិវតិ ច ស ប្រភោះ កាយរុធិរយោ រ្ទណ្ឌទាយី ភវិឞ្យតិ។
28 ೨೮ ಪ್ರತಿ ಮನುಷ್ಯನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯನ್ನು ತೆಗೆದುಕೊಂಡು ತಿನ್ನಲಿ, ಆ ಪಾನಪಾತ್ರೆಯಲ್ಲಿ ಕುಡಿಯಲಿ.
តស្មាត៑ មានវេនាគ្រ អាត្មាន បរីក្ឞ្យ បឝ្ចាទ៑ ឯឞ បូបោ ភុជ្យតាំ កំសេនានេន ច បីយតាំ។
29 ೨೯ ಯಾಕೆಂದರೆ ಕರ್ತನ ದೇಹವೆಂದು ವಿವೇಚಿಸದೇ ತಿಂದು ಕುಡಿಯುವವನು ಹಾಗೆ ತಿಂದು ಕುಡಿಯುವುದರಿಂದ ನ್ಯಾಯತೀರ್ಪಿಗೊಳಗಾಗುವನು.
យេន ចានហ៌ត្វេន ភុជ្យតេ បីយតេ ច ប្រភោះ កាយម៑ អវិម្ឫឝតា តេន ទណ្ឌប្រាប្តយេ ភុជ្យតេ បីយតេ ច។
30 ೩೦ ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರು ಮತ್ತು ರೋಗಿಗಳು ಆಗುತ್ತಾರೆ ಮತ್ತು ಅನೇಕರು ಸಾಯುತ್ತಾರೆ.
ឯតត្ការណាទ៑ យុឞ្មាកំ ភូរិឝោ លោកា ទុព៌្ពលា រោគិណឝ្ច សន្តិ ពហវឝ្ច មហានិទ្រាំ គតាះ។
31 ೩೧ ನಮ್ಮನ್ನು ನಾವೇ ಪರೀಕ್ಷಿಸಿಕೊಂಡರೆ ನ್ಯಾಯ ವಿಚಾರಣೆಗೊಳಗಾಗುವುದಿಲ್ಲ.
អស្មាភិ រ្យទ្យាត្មវិចារោៜការិឞ្យត តហ៌ិ ទណ្ឌោ នាលប្ស្យត;
32 ೩೨ ಆದರೆ ನಾವು ಕರ್ತನಿಂದ ನ್ಯಾಯವಿಚಾರಣೆಗೆ ಒಳಗಾಗಿರಲಾಗಿ ಆತನು, ನಮಗೆ ಲೋಕದವರ ಸಂಗಡ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ನಮ್ಮನ್ನು ದಂಡನೆಗೆ ಗುರಿಪಡಿಸುತ್ತಾನೆ.
កិន្តុ យទាស្មាកំ វិចារោ ភវតិ តទា វយំ ជគតោ ជនៃះ សមំ យទ៑ ទណ្ឌំ ន លភាមហេ តទត៌្ហំ ប្រភុនា ឝាស្តិំ ភុំជ្មហេ។
33 ೩೩ ಆದಕಾರಣ ನನ್ನ ಸಹೋದರರೇ, ಈ ಭೋಜನವನ್ನು ಮಾಡುವುದಕ್ಕೆ ಸೇರಿಬರುವಾಗ ಒಬ್ಬರು ಇನ್ನೊಬ್ಬರಿಗಾಗಿ ಕಾಯಿರಿ.
ហេ មម ភ្រាតរះ, ភោជនាត៌្ហំ មិលិតានាំ យុឞ្មាកម៑ ឯកេនេតរោៜនុគ្ឫហ្យតាំ។
34 ೩೪ ಒಬ್ಬನು ಹಸಿದರೆ ಅವನು ಮನೆಯಲ್ಲೇ ಊಟಮಾಡಲಿ ನೀವು ಸೇರಿಬಂದದ್ದು ನ್ಯಾಯ ತೀರ್ಪಿಗೊಳಗಾಗುವುದಕ್ಕೆ ಕಾರಣವಾಗಬಾರದು. ಇನ್ನುಳಿದಿರುವ ಸಂಗತಿಗಳನ್ನು ನಾನು ಬಂದ ನಂತರ ಆದೇಶಿಸುತ್ತೇನೆ.
យឝ្ច ពុភុក្ឞិតះ ស ស្វគ្ឫហេ ភុង្ក្តាំ។ ទណ្ឌប្រាប្តយេ យុឞ្មាភិ រ្ន សមាគម្យតាំ។ ឯតទ្ភិន្នំ យទ៑ អាទេឞ្ដវ្យំ តទ៑ យុឞ្មត្សមីបាគមនកាលេ មយាទេក្ឞ្យតេ។

< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 11 >