< תְהִלִּים 69 >

לַמְנַצֵּ֬חַ עַֽל־שֹׁושַׁנִּ֬ים לְדָוִֽד׃ הֹושִׁיעֵ֥נִי אֱלֹהִ֑ים כִּ֤י בָ֖אוּ מַ֣יִם עַד־נָֽפֶשׁ׃ 1
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ಲಿಲಿಹೂಗಳು” ರಾಗವನ್ನು ಆಧರಿಸಿದೆ. ದಾವೀದನ ಕೀರ್ತನೆ. ದೇವರೇ, ನನ್ನನ್ನು ರಕ್ಷಿಸಿರಿ. ಏಕೆಂದರೆ, ಪ್ರವಾಹ ಕುತ್ತಿಗೆಯ ವರೆಗೆ ಬಂದಿದೆ.
טָבַ֤עְתִּי ׀ בִּיוֵ֣ן מְ֭צוּלָה וְאֵ֣ין מָעֳמָ֑ד בָּ֥אתִי בְמַעֲמַקֵּי־מַ֝֗יִם וְשִׁבֹּ֥לֶת שְׁטָפָֽתְנִי׃ 2
ನೆಲವಿಲ್ಲದಿರುವ ಆಳವಾದ ಕೆಸರಿನಲ್ಲಿ ನಾನು ಮುಳುಗುತ್ತಿದ್ದೇನೆ. ಪ್ರವಾಹಗಳು ನನ್ನ ಮೇಲೆ ಹಾದುಹೋಗುವ ನೀರಿನ ಅಗಾಧಕ್ಕೆ ನಾನು ಬಂದಿದ್ದೇನೆ.
יָגַ֣עְתִּי בְקָרְאִי֮ נִחַ֪ר גְּרֹ֫ונִ֥י כָּל֥וּ עֵינַ֑י מְ֝יַחֵ֗ל לֵאלֹהָֽי׃ 3
ನಾನು ಮೊರೆಯಿಟ್ಟು ದಣಿದಿದ್ದೇನೆ. ನನ್ನ ಗಂಟಲು ಒಣಗಿದೆ. ನಾನು ದೇವರನ್ನು ಎದುರು ನೋಡುವುದರಿಂದ ನನ್ನ ಕಣ್ಣು ಕ್ಷೀಣವಾಗಿವೆ.
רַבּ֤וּ ׀ מִשַּׂעֲרֹ֣ות רֹאשִׁי֮ שֹׂנְאַ֪י חִ֫נָּ֥ם עָצְמ֣וּ מַ֭צְמִיתַי אֹיְבַ֣י שֶׁ֑קֶר אֲשֶׁ֥ר לֹא־גָ֝זַ֗לְתִּי אָ֣ז אָשִֽׁיב׃ 4
ಕಾರಣವಿಲ್ಲದೆ ನನ್ನನ್ನು ದ್ವೇಷಿಸುವವರು ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ. ನನ್ನನ್ನು ನಾಶಮಾಡ ಬಯಸುವವರೂ ಕಾರಣವಿಲ್ಲದೆ ನನಗೆ ಶತ್ರುಗಳಾಗಿದ್ದಾರೆ. ನಾನು ಅಪಹರಿಸದಿದ್ದರೂ ದಂಡ ಕೊಡಬೇಕಾಯಿತು.
אֱ‍ֽלֹהִ֗ים אַתָּ֣ה יָ֭דַעְתָּ לְאִוַּלְתִּ֑י וְ֝אַשְׁמֹותַ֗י מִמְּךָ֥ לֹא־נִכְחָֽדוּ׃ 5
ದೇವರೇ, ನೀವು ನನ್ನ ಮೂರ್ಖತನವನ್ನು ತಿಳಿದಿದ್ದೀರಿ. ನನ್ನ ಅಪರಾಧಗಳು ನಿಮಗೆ ಮರೆಯಾಗಿಲ್ಲ.
אַל־יֵ֘בֹ֤שׁוּ בִ֨י ׀ קֹוֶיךָ֮ אֲדֹנָ֥י יְהוִ֗ה צְבָ֫אֹ֥ות אַל־יִכָּ֣לְמוּ בִ֣י מְבַקְשֶׁ֑יךָ אֱ֝לֹהֵ֗י יִשְׂרָאֵֽל׃ 6
ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮನ್ನು ನಂಬಿದವರಿಗೆ ನನ್ನಿಂದ ನಿರಾಶೆಯಾಗದಿರಲಿ; ಇಸ್ರಾಯೇಲರ ದೇವರೇ, ನಿಮ್ನನ್ನು ಹುಡುಕುವವರು ನನ್ನಿಂದ ಅಪಮಾನಕ್ಕೆ ಗುರಿಯಾಗದಿರಲಿ.
כִּֽי־עָ֭לֶיךָ נָשָׂ֣אתִי חֶרְפָּ֑ה כִּסְּתָ֖ה כְלִמָּ֣ה פָנָֽי׃ 7
ನಾನು ನಿಮ್ಮ ನಿಮಿತ್ತ ನಿಂದೆಗೆ ಒಳಗಾಗಿದ್ದೇನೆ. ಅವಮಾನವು ನನ್ನ ಮುಖವನ್ನು ಮುಚ್ಚಿದೆ.
מ֖וּזָר הָיִ֣יתִי לְאֶחָ֑י וְ֝נָכְרִ֗י לִבְנֵ֥י אִמִּֽי׃ 8
ನನ್ನ ಸಹೋದರರಿಗೆ ಅನ್ಯನಾಗಿದ್ದೇನೆ. ನನ್ನ ಒಡಹುಟ್ಟಿದವರಿಗೇ ಪರಕೀಯನಾಗಿದ್ದೇನೆ.
כִּֽי־קִנְאַ֣ת בֵּיתְךָ֣ אֲכָלָ֑תְנִי וְחֶרְפֹּ֥ות חֹ֝ורְפֶ֗יךָ נָפְל֥וּ עָלָֽי׃ 9
ಏಕೆಂದರೆ ನಿಮ್ಮ ಆಲಯದ ಮೇಲಿನ ಆಸಕ್ತಿಯು ಬೆಂಕಿಯಂತೆ ನನ್ನನ್ನು ದಹಿಸಿಬಿಟ್ಟಿದೆ. ನಿಮ್ಮನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಿದ್ದಿವೆ.
וָאֶבְכֶּ֣ה בַצֹּ֣ום נַפְשִׁ֑י וַתְּהִ֖י לַחֲרָפֹ֣ות לִֽי׃ 10
ನಾನು ಅತ್ತು ಉಪವಾಸ ಮಾಡಿದಾಗ ನಿಂದೆಗೆ ಒಳಗಾಗಬೇಕಾಯಿತು.
וָאֶתְּנָ֣ה לְבוּשִׁ֣י שָׂ֑ק וָאֱהִ֖י לָהֶ֣ם לְמָשָֽׁל׃ 11
ಗೋಣಿತಟ್ಟನ್ನು ನನ್ನ ಉಡುಪಾಗಿ ಮಾಡಿಕೊಂಡಿದ್ದೇನೆ. ಇದರಿಂದ ನಾನು ಅವರಿಗೆ ಗಾದೆಯ ಮಾತಾದೆನು.
יָשִׂ֣יחוּ בִ֭י יֹ֣שְׁבֵי שָׁ֑עַר וּ֝נְגִינֹ֗ות שֹׁותֵ֥י שֵׁכָֽר׃ 12
ಊರುಬಾಗಿಲಲ್ಲಿ ಕೂತುಕೊಳ್ಳುವವರು ಪರಿಹಾಸ್ಯ ಮಾಡುತ್ತಾರೆ. ನಾನು ಮದ್ಯಪಾನಿಗಳಿಗೆ ಗಾಯನ ವಿಷಯವಾಗಿದ್ದೇನೆ.
וַאֲנִ֤י תְפִלָּתִֽי־לְךָ֨ ׀ יְהוָ֡ה עֵ֤ת רָצֹ֗ון אֱלֹהִ֥ים בְּרָב־חַסְדֶּ֑ךָ עֲ֝נֵ֗נִי בֶּאֱמֶ֥ת יִשְׁעֶֽךָ׃ 13
ಯೆಹೋವ ದೇವರೇ, ನಾನಾದರೋ ನಿಮಗೆ ಮೊರೆಯಿಟ್ಟಿದ್ದೇನೆ. ಇದು ನಿಮ್ಮ ಮೆಚ್ಚಿಕೆಯ ಸಕಾಲ. ಓ ದೇವರೇ, ನಿಮ್ಮ ಮಹಾಪ್ರೀತಿಯಿಂದ ನನಗೆ ನಿಮ್ಮ ನಿಶ್ಚಯ ರಕ್ಷಣೆಯನ್ನು ದಯಪಾಲಿಸಿರಿ.
הַצִּילֵ֣נִי מִ֭טִּיט וְאַל־אֶטְבָּ֑עָה אִנָּצְלָ֥ה מִ֝שֹּֽׂנְאַ֗י וּמִמַּֽעֲמַקֵּי־מָֽיִם׃ 14
ನನ್ನನ್ನು ಕೆಸರಿನೊಳಗಿಂದ ಬಿಡಿಸಿರಿ. ನಾನು ಮುಳುಗದೆ ಇರಲಿ. ನನ್ನನ್ನು ದ್ವೇಷಿಸಿಸುವವರಿಂದಲೂ ನೀರಿನ ಅಗಾಧದಿಂದಲೂ ನನಗೆ ಬಿಡುಗಡೆ ಆಗಲಿ.
אַל־תִּשְׁטְפֵ֤נִי ׀ שִׁבֹּ֣לֶת מַ֭יִם וְאַל־תִּבְלָעֵ֣נִי מְצוּלָ֑ה וְאַל־תֶּאְטַר־עָלַ֖י בְּאֵ֣ר פִּֽיהָ׃ 15
ನೀರಿನ ಪ್ರವಾಹವು ನನ್ನ ಮೇಲೆ ಹಾದುಹೋಗದೆ ಇರಲಿ. ಅಗಾಧವು ನನ್ನನ್ನು ನುಂಗದೆ ಇರಲಿ. ಕುಣಿಯು ನನ್ನ ಮೇಲೆ ತನ್ನ ಬಾಯನ್ನು ಮುಚ್ಚದೆ ಇರಲಿ.
עֲנֵ֣נִי יְ֭הוָה כִּי־טֹ֣וב חַסְדֶּ֑ךָ כְּרֹ֥ב רַ֝חֲמֶ֗יךָ פְּנֵ֣ה אֵלָֽי׃ 16
ಯೆಹೋವ ದೇವರೇ, ನಿಮ್ಮ ಪ್ರೀತಿಯ ಒಳ್ಳೆಯತನದಿಂದ ನನಗೆ ಉತ್ತರಕೊಡಿರಿ. ನಿಮ್ಮ ಮಹಾ ಕರುಣೆಯಿಂದ ನನ್ನ ಕಡೆಗೆ ತಿರುಗಿರಿ.
וְאַל־תַּסְתֵּ֣ר פָּ֭נֶיךָ מֵֽעַבְדֶּ֑ךָ כִּֽי־צַר־לִ֝֗י מַהֵ֥ר עֲנֵֽנִי׃ 17
ನಿಮ್ಮ ಮುಖವನ್ನು ನಿಮ್ಮ ಸೇವಕನಿಗೆ ಮರೆಮಾಡಬೇಡಿರಿ. ನಾನು ಇಕ್ಕಟ್ಟಿನಲ್ಲಿದ್ದೇನೆ. ಬೇಗ ನನಗೆ ಉತ್ತರಕೊಡಿರಿ.
קָרְבָ֣ה אֶל־נַפְשִׁ֣י גְאָלָ֑הּ לְמַ֖עַן אֹיְבַ֣י פְּדֵֽנִי׃ 18
ನನಗೆ ಸಮೀಪವಾಗಿ ನನ್ನನ್ನು ಕಾಪಾಡಿರಿ. ನನ್ನ ಶತ್ರುಗಳ ನಿಮಿತ್ತ ನನ್ನನ್ನು ಬಿಡಿಸಿರಿ.
אַתָּ֤ה יָדַ֗עְתָּ חֶרְפָּתִ֣י וּ֭בָשְׁתִּי וּכְלִמָּתִ֑י נֶ֝גְדְּךָ֗ כָּל־צֹורְרָֽי׃ 19
ನೀವು ನನಗಿರುವ ನಿಂದೆ, ನಾಚಿಕೆ ಹಾಗೂ ನನ್ನ ಅವಮಾನವನ್ನೂ ತಿಳಿದಿದ್ದೀರಿ. ನನ್ನ ವೈರಿಗಳೆಲ್ಲರು ನಿಮ್ಮ ಮುಂದೆ ಇದ್ದಾರೆ.
חֶרְפָּ֤ה ׀ שָֽׁבְרָ֥ה לִבִּ֗י וָֽאָ֫נ֥וּשָׁה וָאֲקַוֶּ֣ה לָנ֣וּד וָאַ֑יִן וְ֝לַמְנַחֲמִ֗ים וְלֹ֣א מָצָֽאתִי׃ 20
ನಿಂದೆಯು ನನ್ನ ಹೃದಯವನ್ನು ಮುರಿದಿದೆ. ನನ್ನನ್ನು ನಿಸ್ಸಹಾಯಕನನ್ನಾಗಿ ಮಾಡಿದೆ. ಅನುತಾಪಕ್ಕೋಸ್ಕರ ಕೆಲವರನ್ನು ನಿರೀಕ್ಷಿಸಿದೆನು, ಆದರೆ ಒಬ್ಬರೂ ಇರಲಿಲ್ಲ. ಸಂತೈಸುವವರಿಗೋಸ್ಕರ ಸಹ ಎದುರು ನೋಡಿದೆನು, ಆದರೆ ಯಾರೂ ಸಿಕ್ಕಲಿಲ್ಲ.
וַיִּתְּנ֣וּ בְּבָרוּתִ֣י רֹ֑אשׁ וְ֝לִצְמָאִ֗י יַשְׁק֥וּנִי חֹֽמֶץ׃ 21
ನನ್ನ ಆಹಾರಕ್ಕಾಗಿ ಕಹಿಯಾದದ್ದನ್ನು ಕೊಟ್ಟರು. ನನ್ನ ದಾಹಕ್ಕಾಗಿ ನನಗೆ ಹುಳಿರಸವನ್ನು ಕುಡಿಯಲು ಕೊಟ್ಟರು.
יְהִֽי־שֻׁלְחָנָ֣ם לִפְנֵיהֶ֣ם לְפָ֑ח וְלִשְׁלֹומִ֥ים לְמֹוקֵֽשׁ׃ 22
ಅವರ ಊಟವೇ ಅವರಿಗೆ ಉರುಲಾಗಲಿ. ಸುಖವಾಗಿರುವವರಿಗೆ ಅದು ಬೋನಾಗಲಿ.
תֶּחְשַׁ֣כְנָה עֵ֭ינֵיהֶם מֵרְאֹ֑ות וּ֝מָתְנֵ֗יהֶם תָּמִ֥יד הַמְעַֽד׃ 23
ಅವರ ಕಣ್ಣುಗಳು ಕಾಣದ ಹಾಗೆ ಕತ್ತಲಾಗಲಿ. ಮತ್ತು ಅವರ ಬೆನ್ನು ಎಂದೆಂದಿಗೂ ಬಗ್ಗಿ ಹೋಗಲಿ
שְׁפָךְ־עֲלֵיהֶ֥ם זַעְמֶ֑ךָ וַחֲרֹ֥ון אַ֝פְּךָ֗ יַשִּׂיגֵֽם׃ 24
ಅವರು ಕೋಪಕ್ಕೆ ಗುರಿಯಾಗಲಿ. ಅವರು ಬೇಸರಕ್ಕೆ ತುತ್ತಾಗಲಿ.
תְּהִי־טִֽירָתָ֥ם נְשַׁמָּ֑ה בְּ֝אָהֳלֵיהֶ֗ם אַל־יְהִ֥י יֹשֵֽׁב׃ 25
ಅವರ ವಾಸಸ್ಥಾನವು ಹಾಳಾಗಲಿ; ಅವರ ಗುಡಾರಗಳಲ್ಲಿ ನಿವಾಸಿಯು ಇಲ್ಲದೆ ಹೋಗಲಿ.
כִּֽי־אַתָּ֣ה אֲשֶׁר־הִכִּ֣יתָ רָדָ֑פוּ וְאֶל־מַכְאֹ֖וב חֲלָלֶ֣יךָ יְסַפֵּֽרוּ׃ 26
ನೀವು ಗಾಯಮಾಡಿದ ನನ್ನನ್ನು ಹಿಂಸಿಸುತ್ತಾರೆ. ನೀವು ನೋಯಿಸಿದ ನನ್ನನ್ನು ಕುರಿತು ಚುಚ್ಚಿಮಾತನಾಡಿಕೊಳ್ಳುತ್ತಾರೆ.
תְּֽנָה־עָ֭וֹן עַל־עֲוֹנָ֑ם וְאַל־יָ֝בֹ֗אוּ בְּצִדְקָתֶֽךָ׃ 27
ಅಪರಾಧದ ಮೇಲೆ ಅಪರಾಧವು ಅವರ ಮೇಲೆ ಬರಲಿ. ಅವರು ನಿಮ್ಮ ರಕ್ಷಣೆಯಲ್ಲಿ ಸೇರದೆ ಇರಲಿ.
יִ֭מָּחֽוּ מִסֵּ֣פֶר חַיִּ֑ים וְעִ֥ם צַ֝דִּיקִ֗ים אַל־יִכָּתֵֽבוּ׃ 28
ಜೀವಪುಸ್ತಕದೊಳಗಿಂದ ಅವರ ಹೆಸರು ಅಳಿದು ಹೋಗಲಿ. ನೀತಿವಂತರ ಸಂಗಡ ಅವರ ಹೆಸರು ಬರೆಯದೆ ಇರಲಿ.
וַ֭אֲנִי עָנִ֣י וְכֹואֵ֑ב יְשׁוּעָתְךָ֖ אֱלֹהִ֣ים תְּשַׂגְּבֵֽנִי׃ 29
ದೇವರೇ, ನಾನು ನೊಂದು ವ್ಯಥೆಗೊಂಡಿದ್ದೇನೆ. ನಿಮ್ಮ ರಕ್ಷಣೆಯು ನನ್ನನ್ನು ಕಾಪಾಡಲಿ.
אֲהַֽלְלָ֣ה שֵׁם־אֱלֹהִ֣ים בְּשִׁ֑יר וַאֲגַדְּלֶ֥נּוּ בְתֹודָֽה׃ 30
ನಾನು ದೇವರ ಹೆಸರನ್ನು ಹಾಡಿ ಸ್ತುತಿಸುವೆನು. ಸ್ತೋತ್ರದಿಂದ ದೇವರನ್ನು ಸ್ತುತಿಸುವೆನು.
וְתִיטַ֣ב לַֽ֭יהוָה מִשֹּׁ֥ור פָּ֗ר מַקְרִ֥ן מַפְרִֽיס׃ 31
ಅದು ಯೆಹೋವ ದೇವರಿಗೆ ಎಳೆಯ ಎತ್ತು ಯಜ್ಞಗಳಿಗಿಂತ, ಕೊಂಬೂ ಗೊರಸುಗಳುಳ್ಳ ಹೋರಿಗಳಿಗಿಂತ ಮೆಚ್ಚಿಕೆಯಾಗಿರುವುದು.
רָא֣וּ עֲנָוִ֣ים יִשְׂמָ֑חוּ דֹּרְשֵׁ֥י אֱ֝לֹהִ֗ים וִיחִ֥י לְבַבְכֶֽם׃ 32
ಇದನ್ನು ದೀನರು ಕಂಡು ಸಂತೋಷಪಡುವರು. ದೇವರನ್ನು ಹುಡುಕುವವರೇ, ನಿಮ್ಮ ಹೃದಯವು ಚೈತನ್ಯಗೊಳ್ಳಲಿ.
כִּֽי־שֹׁמֵ֣עַ אֶל־אֶבְיֹונִ֣ים יְהוָ֑ה וְאֶת־אֲ֝סִירָ֗יו לֹ֣א בָזָֽה׃ 33
ಯೆಹೋವ ದೇವರು ಬಡವರ ಮೊರೆಗೆ ಕಿವಿಗೊಡುತ್ತಾರೆ. ಸೆರೆಯಲ್ಲಿರುವ ತಮ್ಮ ಜನರನ್ನು ತಿರಸ್ಕರಿಸುವುದಿಲ್ಲ.
יְֽ֭הַלְלוּהוּ שָׁמַ֣יִם וָאָ֑רֶץ יַ֝מִּ֗ים וְֽכָל־רֹמֵ֥שׂ בָּֽם׃ 34
ಆಕಾಶವೂ ಭೂಮಿಯೂ ಸಮುದ್ರಗಳೂ, ಅವುಗಳಲ್ಲಿ ಸಂಚರಿಸುವುದೆಲ್ಲವೂ ದೇವರನ್ನು ಸ್ತುತಿಸಲಿ.
כִּ֤י אֱלֹהִ֨ים ׀ יֹ֘ושִׁ֤יעַ צִיֹּ֗ון וְ֭יִבְנֶה עָרֵ֣י יְהוּדָ֑ה וְיָ֥שְׁבוּ שָׁ֝֗ם וִירֵשֽׁוּהָ׃ 35
ದೇವರು ಚೀಯೋನನ್ನು ರಕ್ಷಿಸುವರು. ದೇವರು ಯೆಹೂದದ ಪಟ್ಟಣಗಳನ್ನು ಕಟ್ಟುವರು. ಜನರು ಅಲ್ಲಿ ವಾಸಮಾಡಿ, ಅದನ್ನು ಸ್ವಾಧೀನಮಾಡಿಕೊಳ್ಳುವರು.
וְזֶ֣רַע עֲ֭בָדָיו יִנְחָל֑וּהָ וְאֹהֲבֵ֥י שְׁ֝מֹ֗ו יִשְׁכְּנוּ־בָֽהּ׃ 36
ದೇವರ ಸೇವಕರ ಸಂತತಿಯು ಅದನ್ನು ಬಾಧ್ಯವಾಗಿ ಹೊಂದುವುದು. ದೇವರ ಹೆಸರನ್ನು ಪ್ರೀತಿಸುವವರು ಅದರಲ್ಲಿ ವಾಸಮಾಡುವರು.

< תְהִלִּים 69 >