< תְהִלִּים 60 >

לַ֭מְנַצֵּחַ עַל־שׁוּשַׁ֣ן עֵד֑וּת מִכְתָּ֖ם לְדָוִ֣ד לְלַמֵּֽד׃ בְּהַצֹּותֹ֨ו ׀ אֶ֥ת אֲרַ֣ם נַהֲרַיִם֮ וְאֶת־אֲרַ֪ם צֹ֫ובָ֥ה וַיָּ֤שָׁב יֹואָ֗ב וַיַּ֣ךְ אֶת־אֱדֹ֣ום בְּגֵיא־מֶ֑לַח שְׁנֵ֖ים עָשָׂ֣ר אָֽלֶף׃ אֱ֭לֹהִים זְנַחְתָּ֣נוּ פְרַצְתָּ֑נוּ אָ֝נַ֗פְתָּ תְּשֹׁ֣ובֵ֥ב לָֽנוּ׃ 1
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಷೂಷನ್ ಎದೂತೆಂಬ ರಾಗವನ್ನು ಆಧರಿಸಿದೆ. ದಾವೀದನ ಮಿಕ್ಟಮ್ ಹಾಡಿನ ಸಂಯೋಜನೆ. ಪರಾಜಿತರು ದೈವೋತ್ತರವನ್ನು ಆಧಾರಮಾಡಿಕೊಂಡು ಪ್ರಾರ್ಥಿಸುವುದು. ಯೋವಾಬನು ಉಪ್ಪಿನ ತಗ್ಗಿನಲ್ಲಿ ಹನ್ನೆರಡು ಸಾವಿರ ಎದೋಮ್ಯರನ್ನು ಹೊಡೆದಾಗ ದಾವೀದನು ರಚಿಸಿದ ಕೀರ್ತನೆ. ದೇವರೇ, ನನ್ನನ್ನು ಕೈಬಿಟ್ಟಿದ್ದೀರಾ? ನನ್ನನ್ನು ಚದರಿಸಿದ್ದೀರಾ? ನಮ್ಮ ಕಡೆಗೆ ಬೇಸರಗೊಂಡರೂ ನಮ್ಮನ್ನು ಪುನಃ ಸ್ಥಾಪಿಸಿರಿ.
הִרְעַ֣שְׁתָּה אֶ֣רֶץ פְּצַמְתָּ֑הּ רְפָ֖ה שְׁבָרֶ֣יהָ כִי־מָֽטָה׃ 2
ದೇಶವು ಕಂಪನಗೊಂಡು ಒಡೆದುಹೋಗಿದೆ. ಅದರ ಬಿರುಕುಗಳನ್ನು ಸ್ವಸ್ಥಮಾಡಿರಿ, ಅದು ನಡುಗುತ್ತಿದೆ.
הִרְאִ֣יתָה עַמְּךָ֣ קָשָׁ֑ה הִ֝שְׁקִיתָ֗נוּ יַ֣יִן תַּרְעֵלָֽה׃ 3
ನಿಮ್ಮ ಜನರಿಗೆ ಕಠಿಣ ಕಾಲಗಳನ್ನು ನೀವು ತೋರಿಸಿದ್ದೀರಿ. ನಾವು ಭ್ರಮಣಗೊಳಿಸುವ ದ್ರಾಕ್ಷಾರಸವನ್ನು ಕುಡಿದವರಂತೆ ಆದೆವು.
נָ֘תַ֤תָּה לִּירֵאֶ֣יךָ נֵּ֭ס לְהִתְנֹוסֵ֑ס מִ֝פְּנֵ֗י קֹ֣שֶׁט סֶֽלָה׃ 4
ನಿಮ್ಮ ಭಕ್ತರಿಗೆ ಧ್ವಜವನ್ನು ನಿಲ್ಲಿಸಿದ್ದೀರಿ. ಶತ್ರುಗಳ ಬಿಲ್ಲಿನ ವಿರುದ್ಧ ಹಾರಿಸಬಹುದಾದ ಧ್ವಜವನ್ನೇ ನೀಡಿದ್ದೀರಿ.
לְ֭מַעַן יֵחָלְצ֣וּן יְדִידֶ֑יךָ הֹושִׁ֖יעָה יְמִֽינְךָ֣ וַעֲנֵנוּ (וַעֲנֵֽנִי)׃ 5
ನೀವು ಪ್ರೀತಿಸುವವರು ಬಿಡುಗಡೆಯಾಗುವಂತೆ ನಿಮ್ಮ ಬಲಗೈಯಿಂದ ರಕ್ಷಿಸಿ ನಮಗೆ ಸಹಾಯಮಾಡಿರಿ.
אֱלֹהִ֤ים ׀ דִּבֶּ֥ר בְּקָדְשֹׁ֗ו אֶ֫עְלֹ֥זָה אֲחַלְּקָ֥ה שְׁכֶ֑ם וְעֵ֖מֶק סֻכֹּ֣ות אֲמַדֵּֽד׃ 6
ದೇವರು ತಮ್ಮ ಪರಿಶುದ್ಧ ಸ್ಥಳದಿಂದ ಹೀಗೆ ನುಡಿದಿದ್ದಾರೆ: “ನಾನು ಜಯದಿಂದ ಶೆಕೆಮ್ ಪ್ರದೇಶವನ್ನು ಹಂಚುವೆನು. ಸುಕ್ಕೋತಿನ ತಗ್ಗನ್ನು ಅಳತೆ ಮಾಡುವೆನು.
לִ֤י גִלְעָ֨ד ׀ וְלִ֬י מְנַשֶּׁ֗ה וְ֭אֶפְרַיִם מָעֹ֣וז רֹאשִׁ֑י יְ֝הוּדָ֗ה מְחֹֽקְקִי׃ 7
ಗಿಲ್ಯಾದ್ ನನ್ನದು; ಮನಸ್ಸೆ ನನ್ನದು, ಎಫ್ರಾಯೀಮ್ ನನ್ನ ಶಿರಸ್ತ್ರಾಣ, ಯೆಹೂದವು ನನ್ನ ರಾಜದಂಡ.
מֹואָ֤ב ׀ סִ֬יר רַחְצִ֗י עַל־אֱ֭דֹום אַשְׁלִ֣יךְ נַעֲלִ֑י עָ֝לַ֗י פְּלֶ֣שֶׁת הִתְרֹעָֽעִֽי׃ 8
ಮೋವಾಬ್ ನನ್ನ ಸ್ನಾನ ಪಾತ್ರೆಯು, ಎದೋಮ್ ನನ್ನ ಕೆರಗಳ ಸ್ಥಳ. ಫಿಲಿಷ್ಟಿಯರ ಮೇಲೆ ಜಯೋತ್ಸಾಹ ಮಾಡುವೆನು.”
מִ֣י יֹ֭בִלֵנִי עִ֣יר מָצֹ֑ור מִ֖י נָחַ֣נִי עַד־אֱדֹֽום׃ 9
ಕೋಟೆಯ ಪಟ್ಟಣಕ್ಕೆ ನನ್ನನ್ನು ಕರೆತರುವವರು ಯಾರು? ಎದೋಮಿಗೆ ನನ್ನನ್ನು ನಡೆಸುವವರು ಯಾರು?
הֲלֹֽא־אַתָּ֣ה אֱלֹהִ֣ים זְנַחְתָּ֑נוּ וְֽלֹא־תֵצֵ֥א אֱ֝לֹהִ֗ים בְּצִבְאֹותֵֽינוּ׃ 10
ದೇವರೇ, ಈಗ ನೀವು ನಮ್ಮ ಸೈನ್ಯಗಳ ಸಂಗಡ ಹೊರಡುವುದಿಲ್ಲವೋ ನಮ್ಮನ್ನು ಕೈಬಿಟ್ಟಿದ್ದೀರೋ?
הָֽבָה־לָּ֣נוּ עֶזְרָ֣ת מִצָּ֑ר וְ֝שָׁ֗וְא תְּשׁוּעַ֥ת אָדָם׃ 11
ವೈರಿಗಳ ವಿರೋಧ ನಮಗೆ ಸಹಾಯಮಾಡಿರಿ. ಮನುಷ್ಯರ ಸಹಾಯವು ವ್ಯರ್ಥ.
בֵּֽאלֹהִ֥ים נַעֲשֶׂה־חָ֑יִל וְ֝ה֗וּא יָב֥וּס צָרֵֽינוּ׃ 12
ದೇವರಿಂದ ನಾವು ಜಯ ಹೊಂದುವೆವು. ದೇವರೇ ನಮ್ಮ ವೈರಿಗಳನ್ನು ತುಳಿದುಬಿಡುವರು.

< תְהִלִּים 60 >