< 1 Samweli 22 >

1 Daudi akaondoka Gathi na kukimbilia kwenye pango la Adulamu. Ndugu zake na watu wa nyumba ya baba yake waliposikia habari hiyo, wakamwendea huko.
ದಾವೀದನು ಆ ಸ್ಥಳದಿಂದ ತಪ್ಪಿಸಿಕೊಂಡು ಅದುಲ್ಲಾಮ್ ಎಂಬ ಗವಿಗೆ ಬಂದನು. ಆ ವರ್ತಮಾನವನ್ನು ಅವನ ಸಹೋದರರೂ, ಅವನ ತಂದೆಯ ಮನೆಯವರೆಲ್ಲರೂ ಕೇಳಿ, ಅವನ ಬಳಿಗೆ ಅಲ್ಲಿಗೆ ಬಂದರು.
2 Wale wote waliokuwa katika dhiki au waliokuwa na madeni au wale ambao hawakuridhika wakamkusanyikia Daudi, naye akawa kiongozi wao. Watu wapatao 400 walikuwa pamoja naye.
ಇದಲ್ಲದೆ ಶ್ರಮಪಟ್ಟವರೂ, ಸಾಲಗಾರರೂ, ಅಸಂತುಷ್ಟರೂ ಅವನ ಸಂಗಡ ಕೂಡಿಕೊಂಡರು. ಆಗ ದಾವೀದನು ಅವರಿಗೆ ಅಧಿಪತಿಯಾದನು. ಹೆಚ್ಚು ಕಡಿಮೆ ನಾನೂರು ಜನರು ಅವನ ಬಳಿಯಲ್ಲಿ ಇದ್ದರು.
3 Kutoka huko Daudi akaenda Mispa huko Moabu na kumwambia mfalme wa Moabu, “Naomba uwaruhusu baba yangu na mama yangu waje kukaa nawe mpaka nijue nini Mungu atakachonifanyia.”
ದಾವೀದನು ಅಲ್ಲಿಂದ ಹೊರಟು ಮೋವಾಬ್ ದೇಶದ ಮಿಚ್ಪೆಗೆ ಬಂದು ಮೋವಾಬಿನ ಅರಸನಿಗೆ, “ದೇವರು ನನಗೆ ಏನು ಮಾಡುವರೋ ಎಂದು ನಾನು ತಿಳಿಯುವವರೆಗೂ, ನನ್ನ ತಂದೆತಾಯಿಗಳು ಹೊರಟುಬಂದು ನಿನ್ನ ಬಳಿಯಲ್ಲಿ ವಾಸಿಸಿರಲಿ,” ಎಂದು ಹೇಳಿ, ಅವರನ್ನು ಮೋವಾಬಿನ ಅರಸನ ಬಳಿಗೆ ಕರೆತಂದು ಬಿಟ್ಟನು.
4 Hivyo akawaacha wazazi wake wakae na mfalme wa Moabu, nao wakakaa naye muda wote ambao Daudi alikuwa ngomeni.
ದಾವೀದನು ಗವಿಯಲ್ಲಿ ಇದ್ದ ದಿವಸಗಳೆಲ್ಲಾ, ಅವರು ಆ ಅರಸನ ಬಳಿಯಲ್ಲಿ ವಾಸವಾಗಿದ್ದರು.
5 Ndipo nabii Gadi akamwambia Daudi, “Usikae ngomeni. Nenda katika nchi ya Yuda.” Hivyo Daudi akaondoka na kwenda katika msitu wa Herethi.
ಆದರೆ ಗಾದನೆಂಬ ಪ್ರವಾದಿಯು ದಾವೀದನಿಗೆ, “ನೀನು ಗವಿಯಲ್ಲಿರದೆ ಯೆಹೂದ ದೇಶಕ್ಕೆ ಹೊರಟು ಬಾ,” ಎಂದನು. ಆಗ ದಾವೀದನು ಹೊರಟು ಹೆರೆತ್ ಎಂಬ ಅರಣ್ಯಕ್ಕೆ ಬಂದನು.
6 Basi Sauli akasikia kwamba Daudi na watu wake wameonekana. Sauli akiwa na mkuki mkononi, alikuwa ameketi chini ya mti wa mkwaju kwenye kilima huko Gibea, maafisa wake wote wakiwa wamesimama kumzunguka.
ಒಂದು ದಿನ ದಾವೀದನೂ ಅವನ ಸಂಗಡ ಇದ್ದವರೂ ಅಡಗಿಕೊಂಡಿದ್ದಾರೆ ಎಂಬ ವರ್ತಮಾನವನ್ನು ಸೌಲನು ಕೇಳಿದನು. ಆಗ ಅವನು ಗಿಬೆಯದ ಗುಡ್ಡದಲ್ಲಿ ಒಂದು ಪಿಚುಲ ವೃಕ್ಷದ ಕೆಳಗೆ ತನ್ನ ಈಟಿಯನ್ನು ಕೈಯಲ್ಲಿ ಹಿಡಿದು ಕುಳಿತುಕೊಂಡನು. ಅವನ ಸೇವಕರೆಲ್ಲರು ಸುತ್ತಲೂ ನಿಂತಿದ್ದರು.
7 Sauli akawaambia, “Sikilizeni enyi watu wa Benyamini! Je, mwana wa Yese atawapa ninyi nyote mashamba na mashamba ya mizabibu? Je, atawafanya ninyi nyote majemadari wa maelfu na majemadari wa mamia?
ಆಗ ಸೌಲನು ಸುತ್ತಲು ನಿಂತಿದ್ದ ಸೇವಕರಿಗೆ, “ಬೆನ್ಯಾಮೀನನ ಮಕ್ಕಳೇ, ಕೇಳಿರಿ. ನೀವೆಲ್ಲರೂ ನನಗೆ ವಿರೋಧವಾಗಿ ಒಳಸಂಚು ನಡೆಸುವಂತೆ ಇಷಯನ ಮಗನು ನಿಮ್ಮೆಲ್ಲರಿಗೆ ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ ಕೊಡುವನೋ? ನಿಮ್ಮೆಲ್ಲರನ್ನು ಸಾವಿರಕ್ಕೆ ನಾಯಕರಾಗಿಯೂ, ನೂರಕ್ಕೆ ನಾಯಕರಾಗಿಯೂ ಮಾಡುವನೋ?
8 Je, ndiyo sababu ninyi mkapanga hila mbaya dhidi yangu? Hakuna hata mmoja wenu ambaye ameniambia ni lini mwanangu alifanya agano na mwana wa Yese. Hapana hata mmoja wenu anayejishughulisha nami wala anayeniambia kwamba mwanangu amechochea mtumishi wangu kunivizia, kama afanyavyo leo.”
ಇದಲ್ಲದೆ ನಿಮ್ಮಲ್ಲಿ ನನ್ನ ಮಗನು ಇಷಯನ ಮಗನ ಸಂಗಡ ಒಡಂಬಡಿಕೆ ಮಾಡಿಕೊಂಡಿದ್ದನ್ನು ನನಗೆ ಯಾವನೂ ತಿಳಿಸಲಿಲ್ಲ. ನಿಮ್ಮಲ್ಲಿ ಯಾವನಾದರೂ ನನಗೋಸ್ಕರ ಚಿಂತಿಸಿ, ನನ್ನ ಮಗನು ಈ ಹೊತ್ತು ನನ್ನ ನಿಮಿತ್ತ ಅಡಗಿಕೊಂಡಿರುವಂತೆ ನನ್ನ ಸೇವಕನನ್ನು ನನಗೆ ವಿರೋಧವಾಗಿ ಒಳಸಂಚುಮಾಡಿ ಎಬ್ಬಿಸಿದ್ದನ್ನು ಯಾವನೂ ನನಗೆ ತಿಳಿಸಲಿಲ್ಲ,” ಎಂದನು.
9 Lakini Doegi Mwedomu, ambaye alikuwa akisimama na maafisa wa Sauli, akasema, “Nilimwona mwana wa Yese akija kwa Ahimeleki mwana wa Ahitubu huko Nobu.
ಆಗ ಸೌಲನು ಸೇವಕರಿಗೆ ಯಜಮಾನನಾಗಿದ್ದ ಎದೋಮ್ಯನಾದ ದೋಯೇಗನು ಉತ್ತರವಾಗಿ, “ಇಷಯನ ಮಗನು ನೋಬದಲ್ಲಿರುವ ಅಹೀಟೂಬನ ಮಗನಾದ ಅಹೀಮೆಲೆಕನ ಬಳಿಗೆ ಬಂದದ್ದನ್ನು ನಾನು ಕಂಡೆನು.
10 Ahimeleki akamuuliza Bwana kwa ajili yake; pia akampa vyakula na ule upanga wa Goliathi Mfilisti.”
ಇವನು ಅವನಿಗೋಸ್ಕರ ಯೆಹೋವ ದೇವರನ್ನು ಕೇಳಿ ಅವನಿಗೆ ಆಹಾರವನ್ನು ಕೊಟ್ಟು, ಫಿಲಿಷ್ಟಿಯನಾದ ಗೊಲ್ಯಾತನ ಖಡ್ಗವನ್ನು ಅವನಿಗೆ ಕೊಟ್ಟನು,” ಎಂದನು.
11 Kisha mfalme akatuma watu wamwite kuhani Ahimeleki mwana wa Ahitubu, na jamaa yote ya baba yake, waliokuwa makuhani huko Nobu, nao wote wakaja kwa mfalme.
ಆದ್ದರಿಂದ ಅರಸನು ಅಹೀಟೂಬನ ಮಗನಾದ ಯಾಜಕನಾಗಿರುವ ಅಹೀಮೆಲೆಕನನ್ನೂ, ನೋಬದಲ್ಲಿರುವ ಯಾಜಕರಾಗಿರುವ ಅವನ ತಂದೆಯ ಮನೆಯವರಾದ ಸಮಸ್ತರನ್ನೂ ಕರೆಯಿಸಿದನು. ಅವರೆಲ್ಲರೂ ಅರಸನ ಬಳಿಗೆ ಬಂದರು.
12 Sauli akasema, “Sikiliza sasa, mwana wa Ahitubu.” Akajibu, “Naam, bwana wangu.”
ಆಗ ಸೌಲನು, “ಅಹೀಟೂಬನ ಮಗನೇ, ಕೇಳು,” ಎಂದನು. ಅದಕ್ಕವನು, “ನನ್ನ ಒಡೆಯನೇ, ನಾನು ಇಲ್ಲಿದ್ದೇನೆ,” ಎಂದನು.
13 Sauli akamwambia, “Kwa nini umepanga shauri baya dhidi yangu, wewe na mwana wa Yese, ukampa vyakula na upanga, tena hukumuuliza Mungu kwa ajili yake, na kwa sababu hiyo ameasi dhidi yangu na kunivizia, kama afanyavyo leo?”
ಸೌಲನು ಅವನಿಗೆ, “ನೀನೂ, ಇಷಯನ ಮಗನೂ ನನಗೆ ವಿರೋಧವಾಗಿ ಒಳಸಂಚು ಮಾಡಿದ್ದೇನು? ಅವನು ಅಡಗಿಕೊಂಡು ನನಗೆ ವಿರೋಧವಾಗಿ ಹೊಂಚುಹಾಕುವಂತೆ ನೀನು ಅವನಿಗೆ ರೊಟ್ಟಿಯನ್ನೂ, ಖಡ್ಗವನ್ನೂ ಕೊಟ್ಟು ದೇವರನ್ನು ಅವನಿಗೋಸ್ಕರ ವಿಚಾರಿಸಿದ್ದೇನು? ಅವನು ಇಂದಿನವರೆಗೂ ನನ್ನನ್ನು ಕೊಲ್ಲುವುದಕ್ಕೆ ಕಾಯುತ್ತಿದ್ದಾನೆ?” ಎಂದು ಕೇಳಿದನು.
14 Ahimeleki akamjibu mfalme, “Ni nani miongoni mwa watumishi wako wote aliye mwaminifu kama Daudi, mkwewe mfalme, kiongozi wa walinzi wako na anayeheshimika sana katika watu wa nyumbani mwako?
ಅಹೀಮೆಲೆಕನು ಅರಸನಿಗೆ ಉತ್ತರವಾಗಿ, “ನಿನ್ನ ಸಮಸ್ತ ಸೇವಕರಲ್ಲಿ ದಾವೀದನ ಹಾಗೆ ನಂಬಿಗಸ್ತನಾದವನು ಯಾರಿದ್ದಾರೆ? ಅವನು ಅರಸನಿಗೆ ಅಳಿಯನೂ ನಿಮ್ಮ ಅಂಗರಕ್ಷಕರ ನಾಯಕನೂ ನಿನ್ನ ಮನೆಯಲ್ಲಿ ಘನವುಳ್ಳವನೂ ಆಗಿದ್ದಾನೆ.
15 Je, siku hiyo ilikuwa ndiyo ya kwanza kumwomba Mungu kwa ajili yake? La hasha! Mfalme na usiwashutumu watumishi wako wala yeyote wa jamaa ya baba yake, kwa kuwa mtumishi wako hafahamu lolote kabisa kuhusu jambo hili lote.”
ನಾನು ಅವನಿಗೋಸ್ಕರ ದೇವರನ್ನು ಕೇಳಿಕೊಂಡದ್ದು ಅದೇ ಮೊದಲನೆಯದೋ? ಅಲ್ಲವೇ ಅಲ್ಲ. ಅರಸನು ತನ್ನ ಸೇವಕನ ಮೇಲಾದರೂ ಇಲ್ಲವೆ ಅವನ ಕುಟುಂಬದವರ ಮೇಲಾದರೂ ಇಂಥ ಅಪವಾದವನ್ನು ಹೊರಿಸಬಾರದು, ಏಕೆಂದರೆ ಆ ಕಾರ್ಯದ ಬಗ್ಗೆ ನಮಗೇನೂ ತಿಳಿದಿಲ್ಲ,” ಎಂದನು.
16 Lakini mfalme akasema, “Ahimeleki, hakika utakufa, wewe na jamaa yote ya baba yako.”
ಅದಕ್ಕೆ ಅರಸನು, “ಅಹೀಮೆಲೆಕನೇ, ನೀನೂ ನಿನ್ನ ತಂದೆಯ ಮನೆಯ ಸಮಸ್ತರೂ ನಿಶ್ಚಯವಾಗಿ ಸಾಯಲೇಬೇಕು,” ಎಂದನು.
17 Ndipo mfalme akawaamuru walinzi wake waliokuwa kando yake: “Geukeni na kuwaua makuhani wa Bwana, kwa sababu nao pia wamejiunga na Daudi. Walijua kuwa alikuwa anakimbia, wala hawakuniambia.” Lakini maafisa wa mfalme hawakuwa radhi kuinua mkono kuwaua makuhani wa Bwana.
ಅರಸನು ತನ್ನ ಬಳಿಯಲ್ಲಿ ನಿಂತಿರುವ ಕಾಲಾಳಿಗೆ, “ನೀವು ತಿರುಗಿಕೊಂಡು ಯೆಹೋವ ದೇವರ ಯಾಜಕರನ್ನು ಕೊಂದುಹಾಕಿರಿ. ಏಕೆಂದರೆ ಅವರ ಕೈ ದಾವೀದನಿಗೆ ಸಹಾಯಕವಾಗಿದೆ. ಅವನು ಓಡಿ ಹೋಗುವುದನ್ನು ಅವರು ತಿಳಿದಿದ್ದು, ಅದನ್ನು ನನಗೆ ತಿಳಿಸದೆ ಹೋದರು,” ಎಂದನು. ಆದರೆ ಅರಸನ ಸೇವಕರು ಯೆಹೋವ ದೇವರ ಯಾಜಕರ ಮೇಲೆ ತಮ್ಮ ಕೈಯನ್ನು ಚಾಚಲೊಲ್ಲದೆ ಹೋದರು.
18 Kisha mfalme akamwagiza Doegi, “Wewe geuka ukawaue makuhani.” Hivyo basi Doegi Mwedomu, akageuka na kuwaua. Siku ile aliwaua watu themanini na watano wavaao visibau vya kitani.
ಆಗ ಅರಸನು ದೋಯೇಗನಿಗೆ, “ನೀನು ತಿರುಗಿಕೊಂಡು ಯಾಜಕರ ಮೇಲೆ ಬೀಳು,” ಎಂದನು. ಆಗ ಎದೋಮ್ಯನಾದ ದೋಯೇಗನು ತಿರುಗಿಕೊಂಡು ಯಾಜಕರ ಮೇಲೆ ಬಿದ್ದು, ನಾರುಬಟ್ಟೆಯ ಏಫೋದನ್ನು ಧರಿಸಿಕೊಳ್ಳುವವರಾದ ಎಂಬತ್ತೈದು ಯಾಜಕರನ್ನು ಆ ದಿನದಲ್ಲಿ ಕೊಂದನು.
19 Pia akaupiga Nobu kwa upanga, mji wa makuhani, wakiwemo wanaume na wanawake, watoto wadogo na wale wanyonyao, ngʼombe wake, punda na kondoo.
ಇದಲ್ಲದೆ ಯಾಜಕರ ಪಟ್ಟಣವಾದ ನೋಬಿನಲ್ಲಿ ಇರುವ ಪುರುಷರನ್ನೂ, ಸ್ತ್ರೀಯರನ್ನೂ, ಮಕ್ಕಳನ್ನೂ, ಕೂಸುಗಳನ್ನೂ, ಎತ್ತುಗಳನ್ನೂ, ಕತ್ತೆಗಳನ್ನೂ, ಕುರಿಗಳನ್ನೂ ಖಡ್ಗದಿಂದ ಹೊಡೆದುಬಿಟ್ಟನು.
20 Lakini Abiathari, mwana wa Ahimeleki, mwana wa Ahitubu, akatoroka, akakimbia na kujiunga na Daudi.
ಆದರೆ ಅಹೀಟೂಬನ ಮಗನಾಗಿರುವ ಅಹೀಮೆಲೆಕನ ಮಕ್ಕಳಲ್ಲಿ ಒಬ್ಬನಾದ ಅಬಿಯಾತರನು ತಪ್ಪಿಸಿಕೊಂಡು ದಾವೀದನ ಬಳಿಗೆ ಓಡಿಹೋದನು.
21 Akamwambia Daudi kuwa Sauli amewaua makuhani wa Bwana.
ಸೌಲನು ಯೆಹೋವ ದೇವರ ಯಾಜಕರನ್ನು ಕೊಂದುಹಾಕಿದ ವರ್ತಮಾನವನ್ನು ಅಬಿಯಾತರನು ದಾವೀದನಿಗೆ ತಿಳಿಸಿದನು.
22 Kisha Daudi akamwambia Abiathari: “Siku ile, wakati Doegi Mwedomu alipokuwa pale, nilijua atahakikisha amemwambia Sauli. Mimi ninawajibika kwa vifo vya jamaa ya baba yako yote.
ಆಗ ದಾವೀದನು ಅಬಿಯಾತರನಿಗೆ, “ಎದೋಮ್ಯನಾದ ದೋಯೇಗನು ಅಲ್ಲಿ ಇದ್ದುದರಿಂದ ಅವನು ಸೌಲನಿಗೆ ನಿಶ್ಚಯವಾಗಿ ತಿಳಿಸುವನೆಂದು ನಾನು ಆ ದಿನವೇ ನೆನೆಸಿಕೊಂಡೆ. ನಿನ್ನ ತಂದೆಯ ಮನೆಯ ಸಮಸ್ತರ ಪ್ರಾಣಹತ್ಯೆಗೆ ಕಾರಣನಾದವನು ನಾನೇ.
23 Kaa pamoja nami; usiogope. Mtu anayeutafuta uhai wako anautafuta uhai wangu pia. Ukiwa pamoja nami utakuwa salama.”
ನನ್ನ ಬಳಿಯಲ್ಲಿ ಇರು; ಭಯಪಡಬೇಡ; ಏಕೆಂದರೆ ನನ್ನ ಪ್ರಾಣವನ್ನು ಹುಡುಕುವವನು ನಿನ್ನ ಪ್ರಾಣವನ್ನು ಹುಡುಕುವನು; ನೀನು ನನ್ನ ಸಂಗಡ ಇದ್ದರೆ ಸುರಕ್ಷಿತನಾಗಿರುವಿ,” ಎಂದನು.

< 1 Samweli 22 >