< ಲೂಕಃ 4 >

1 ತತಃ ಪರಂ ಯೀಶುಃ ಪವಿತ್ರೇಣಾತ್ಮನಾ ಪೂರ್ಣಃ ಸನ್ ಯರ್ದ್ದನನದ್ಯಾಃ ಪರಾವೃತ್ಯಾತ್ಮನಾ ಪ್ರಾನ್ತರಂ ನೀತಃ ಸನ್ ಚತ್ವಾರಿಂಶದ್ದಿನಾನಿ ಯಾವತ್ ಶೈತಾನಾ ಪರೀಕ್ಷಿತೋಽಭೂತ್,
ಯೇಸು ಪವಿತ್ರಾತ್ಮಭರಿತರಾಗಿ, ಯೊರ್ದನ್ ನದಿ ತೀರದಿಂದ ಹಿಂದಿರುಗಿ ಬಂದು, ದೇವರಾತ್ಮರಿಂದ ಅರಣ್ಯದೊಳಕ್ಕೆ ಮಾರ್ಗದರ್ಶನ ಹೊಂದಿ,
2 ಕಿಞ್ಚ ತಾನಿ ಸರ್ವ್ವದಿನಾನಿ ಭೋಜನಂ ವಿನಾ ಸ್ಥಿತತ್ವಾತ್ ಕಾಲೇ ಪೂರ್ಣೇ ಸ ಕ್ಷುಧಿತವಾನ್|
ನಲವತ್ತು ದಿನಗಳು ಸೈತಾನನಿಂದ ಶೋಧನೆಯನ್ನು ಎದುರಿಸಿದರು. ಆ ದಿನಗಳಲ್ಲಿ ಯೇಸು ಏನೂ ತಿನ್ನಲಿಲ್ಲ. ಆ ದಿನಗಳು ಮುಗಿದ ಮೇಲೆ ಯೇಸುವಿಗೆ ಹಸಿವಾಯಿತು.
3 ತತಃ ಶೈತಾನಾಗತ್ಯ ತಮವದತ್ ತ್ವಂ ಚೇದೀಶ್ವರಸ್ಯ ಪುತ್ರಸ್ತರ್ಹಿ ಪ್ರಸ್ತರಾನೇತಾನ್ ಆಜ್ಞಯಾ ಪೂಪಾನ್ ಕುರು|
ಸೈತಾನನು ಯೇಸುವಿಗೆ, “ನೀನು ದೇವರ ಪುತ್ರನಾಗಿದ್ದರೆ, ಈ ಕಲ್ಲಿಗೆ ರೊಟ್ಟಿಯಾಗುವಂತೆ ಹೇಳು,” ಎಂದನು.
4 ತದಾ ಯೀಶುರುವಾಚ, ಲಿಪಿರೀದೃಶೀ ವಿದ್ಯತೇ ಮನುಜಃ ಕೇವಲೇನ ಪೂಪೇನ ನ ಜೀವತಿ ಕಿನ್ತ್ವೀಶ್ವರಸ್ಯ ಸರ್ವ್ವಾಭಿರಾಜ್ಞಾಭಿ ರ್ಜೀವತಿ|
ಅದಕ್ಕೆ ಯೇಸು ಉತ್ತರವಾಗಿ ಅವನಿಗೆ, “‘ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
5 ತದಾ ಶೈತಾನ್ ತಮುಚ್ಚಂ ಪರ್ವ್ವತಂ ನೀತ್ವಾ ನಿಮಿಷೈಕಮಧ್ಯೇ ಜಗತಃ ಸರ್ವ್ವರಾಜ್ಯಾನಿ ದರ್ಶಿತವಾನ್|
ಸೈತಾನನು ಯೇಸುವನ್ನು ಎತ್ತರವಾದ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನು ಕ್ಷಣಮಾತ್ರದಲ್ಲಿ ಅವರಿಗೆ ತೋರಿಸಿದನು.
6 ಪಶ್ಚಾತ್ ತಮವಾದೀತ್ ಸರ್ವ್ವಮ್ ಏತದ್ ವಿಭವಂ ಪ್ರತಾಪಞ್ಚ ತುಭ್ಯಂ ದಾಸ್ಯಾಮಿ ತನ್ ಮಯಿ ಸಮರ್ಪಿತಮಾಸ್ತೇ ಯಂ ಪ್ರತಿ ಮಮೇಚ್ಛಾ ಜಾಯತೇ ತಸ್ಮೈ ದಾತುಂ ಶಕ್ನೋಮಿ,
ಅನಂತರ ಸೈತಾನನು ಯೇಸುವಿಗೆ, “ಈ ಎಲ್ಲಾ ರಾಜ್ಯಗಳ ಅಧಿಕಾರವನ್ನೂ ಇವುಗಳ ಮಹಿಮೆಯನ್ನೂ ನಾನು ನಿನಗೆ ಕೊಡುವೆನು. ಇವೆಲ್ಲಾ ನನಗೆ ಕೊಟ್ಟಿರುವುದರಿಂದ ನನಗೆ ಇಷ್ಟ ಬಂದ ಯಾರಿಗಾದರೂ ನಾನು ಕೊಡುವೆನು.
7 ತ್ವಂ ಚೇನ್ಮಾಂ ಭಜಸೇ ತರ್ಹಿ ಸರ್ವ್ವಮೇತತ್ ತವೈವ ಭವಿಷ್ಯತಿ|
ಆದ್ದರಿಂದ ನೀನು ನನ್ನನ್ನು ಆರಾಧಿಸಿದರೆ, ಎಲ್ಲವೂ ನಿನ್ನದಾಗುವವು,” ಎಂದು ಹೇಳಿದನು.
8 ತದಾ ಯೀಶುಸ್ತಂ ಪ್ರತ್ಯುಕ್ತವಾನ್ ದೂರೀ ಭವ ಶೈತಾನ್ ಲಿಪಿರಾಸ್ತೇ, ನಿಜಂ ಪ್ರಭುಂ ಪರಮೇಶ್ವರಂ ಭಜಸ್ವ ಕೇವಲಂ ತಮೇವ ಸೇವಸ್ವ ಚ|
ಯೇಸು ಅವನಿಗೆ ಉತ್ತರವಾಗಿ, “‘ನಿನ್ನ ದೇವರಾದ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
9 ಅಥ ಶೈತಾನ್ ತಂ ಯಿರೂಶಾಲಮಂ ನೀತ್ವಾ ಮನ್ದಿರಸ್ಯ ಚೂಡಾಯಾ ಉಪರಿ ಸಮುಪವೇಶ್ಯ ಜಗಾದ ತ್ವಂ ಚೇದೀಶ್ವರಸ್ಯ ಪುತ್ರಸ್ತರ್ಹಿ ಸ್ಥಾನಾದಿತೋ ಲಮ್ಫಿತ್ವಾಧಃ
ಸೈತಾನನು ಯೇಸುವನ್ನು ಯೆರೂಸಲೇಮಿಗೆ ಕರೆತಂದು ದೇವಾಲಯದ ಅತಿ ಎತ್ತರವಾದ ಶಿಖರದ ಮೇಲೆ ನಿಲ್ಲಿಸಿ ಯೇಸುವಿಗೆ, “ನೀನು ದೇವರ ಪುತ್ರನಾಗಿದ್ದರೆ ಇಲ್ಲಿಂದ ಕೆಳಕ್ಕೆ ಧುಮುಕು,
10 ಪತ ಯತೋ ಲಿಪಿರಾಸ್ತೇ, ಆಜ್ಞಾಪಯಿಷ್ಯತಿ ಸ್ವೀಯಾನ್ ದೂತಾನ್ ಸ ಪರಮೇಶ್ವರಃ|
ಏಕೆಂದರೆ ಪವಿತ್ರ ವೇದದಲ್ಲಿ ಬರೆದಿರುವಂತೆ: “‘ದೇವರು ನಿನ್ನನ್ನು ಕಾಪಾಡುವುದಕ್ಕೆ ತಮ್ಮ ದೂತರಿಗೆ ಆಜ್ಞಾಪಿಸುವರು
11 ರಕ್ಷಿತುಂ ಸರ್ವ್ವಮಾರ್ಗೇ ತ್ವಾಂ ತೇನ ತ್ವಚ್ಚರಣೇ ಯಥಾ| ನ ಲಗೇತ್ ಪ್ರಸ್ತರಾಘಾತಸ್ತ್ವಾಂ ಧರಿಷ್ಯನ್ತಿ ತೇ ತಥಾ|
ಮತ್ತು ನಿನ್ನ ಪಾದಗಳು ಕಲ್ಲಿಗೆ ತಗಲದಂತೆ, ದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು,’” ಎಂದನು.
12 ತದಾ ಯೀಶುನಾ ಪ್ರತ್ಯುಕ್ತಮ್ ಇದಮಪ್ಯುಕ್ತಮಸ್ತಿ ತ್ವಂ ಸ್ವಪ್ರಭುಂ ಪರೇಶಂ ಮಾ ಪರೀಕ್ಷಸ್ವ|
ಅದಕ್ಕೆ ಯೇಸು ಅವನಿಗೆ, “‘ನಿನ್ನ ದೇವರಾದ ಕರ್ತದೇವರನ್ನು ಪರೀಕ್ಷಿಸಬಾರದು,’ ಎಂದೂ ಹೇಳಿದೆ,” ಎಂದು ಉತ್ತರಕೊಟ್ಟರು.
13 ಪಶ್ಚಾತ್ ಶೈತಾನ್ ಸರ್ವ್ವಪರೀಕ್ಷಾಂ ಸಮಾಪ್ಯ ಕ್ಷಣಾತ್ತಂ ತ್ಯಕ್ತ್ವಾ ಯಯೌ|
ಸೈತಾನನು ಯೇಸುವನ್ನು ನಾನಾರೀತಿಯಲ್ಲಿ ಶೋಧಿಸಿದ ಮೇಲೆ, ತಕ್ಕಕಾಲ ಬರುವ ತನಕ ಅವರನ್ನು ಬಿಟ್ಟು ಹೊರಟುಹೋದನು.
14 ತದಾ ಯೀಶುರಾತ್ಮಪ್ರಭಾವಾತ್ ಪುನರ್ಗಾಲೀಲ್ಪ್ರದೇಶಂ ಗತಸ್ತದಾ ತತ್ಸುಖ್ಯಾತಿಶ್ಚತುರ್ದಿಶಂ ವ್ಯಾನಶೇ|
ಯೇಸು ಪವಿತ್ರಾತ್ಮರ ಶಕ್ತಿಯಿಂದ ಗಲಿಲಾಯಕ್ಕೆ ಹಿಂದಿರುಗಿದರು. ಅವರ ಸುದ್ದಿಯು ಸುತ್ತಮುತ್ತೆಲ್ಲಾ ಹರಡಿತು.
15 ಸ ತೇಷಾಂ ಭಜನಗೃಹೇಷು ಉಪದಿಶ್ಯ ಸರ್ವ್ವೈಃ ಪ್ರಶಂಸಿತೋ ಬಭೂವ|
ಯೇಸು ಯೆಹೂದ್ಯರ ಸಭಾಮಂದಿರಗಳಲ್ಲಿ ಬೋಧಿಸಿದ್ದರಿಂದ, ಎಲ್ಲರೂ ಅವರನ್ನು ಹೊಗಳಿದರು.
16 ಅಥ ಸ ಸ್ವಪಾಲನಸ್ಥಾನಂ ನಾಸರತ್ಪುರಮೇತ್ಯ ವಿಶ್ರಾಮವಾರೇ ಸ್ವಾಚಾರಾದ್ ಭಜನಗೇಹಂ ಪ್ರವಿಶ್ಯ ಪಠಿತುಮುತ್ತಸ್ಥೌ|
ಯೇಸು ತಾವು ಬೆಳೆದ ನಜರೇತಿಗೆ ಬಂದು, ತಮ್ಮ ಪದ್ಧತಿಯಂತೆ ಸಬ್ಬತ್ ದಿನದಲ್ಲಿ ಸಭಾಮಂದಿರದೊಳಕ್ಕೆ ಹೋಗಿ ಪವಿತ್ರ ವೇದದ ಸುರುಳಿಯನ್ನು ಓದುವುದಕ್ಕಾಗಿ ಎದ್ದು ನಿಂತರು.
17 ತತೋ ಯಿಶಯಿಯಭವಿಷ್ಯದ್ವಾದಿನಃ ಪುಸ್ತಕೇ ತಸ್ಯ ಕರದತ್ತೇ ಸತಿ ಸ ತತ್ ಪುಸ್ತಕಂ ವಿಸ್ತಾರ್ಯ್ಯ ಯತ್ರ ವಕ್ಷ್ಯಮಾಣಾನಿ ವಚನಾನಿ ಸನ್ತಿ ತತ್ ಸ್ಥಾನಂ ಪ್ರಾಪ್ಯ ಪಪಾಠ|
ಯೇಸುವಿನ ಕೈಗೆ ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಕೊಟ್ಟರು. ಯೇಸು ಅದನ್ನು ಬಿಚ್ಚಿ, ಅದರಲ್ಲಿ ಬರೆದಿರುವ ಈ ವಾಕ್ಯಗಳನ್ನು ಕಂಡು ಓದಿದರು:
18 ಆತ್ಮಾ ತು ಪರಮೇಶಸ್ಯ ಮದೀಯೋಪರಿ ವಿದ್ಯತೇ| ದರಿದ್ರೇಷು ಸುಸಂವಾದಂ ವಕ್ತುಂ ಮಾಂ ಸೋಭಿಷಿಕ್ತವಾನ್| ಭಗ್ನಾನ್ತಃ ಕರಣಾಲ್ಲೋಕಾನ್ ಸುಸ್ವಸ್ಥಾನ್ ಕರ್ತ್ತುಮೇವ ಚ| ಬನ್ದೀಕೃತೇಷು ಲೋಕೇಷು ಮುಕ್ತೇ ರ್ಘೋಷಯಿತುಂ ವಚಃ| ನೇತ್ರಾಣಿ ದಾತುಮನ್ಧೇಭ್ಯಸ್ತ್ರಾತುಂ ಬದ್ಧಜನಾನಪಿ|
“ಕರ್ತದೇವರ ಆತ್ಮರು ನನ್ನ ಮೇಲೆ ಇದ್ದಾರೆ, ಅವರು ನನ್ನನ್ನು ಬಡವರಿಗೆ ಸುವಾರ್ತೆ ಸಾರುವುದಕ್ಕೆ ಅಭಿಷೇಕಿಸಿದ್ದಾರೆ. ಸೆರೆಯಲ್ಲಿದ್ದವರಿಗೆ ಬಿಡುಗಡೆಯನ್ನು ಸಾರುವುದಕ್ಕೂ, ಕುರುಡರಿಗೆ ದೃಷ್ಟಿ ಕೊಡುವುದಕ್ಕೂ, ಜಜ್ಜಿ ಹೋದವರನ್ನು ಬಿಡಿಸಿ ಕಳುಹಿಸುವುದಕ್ಕೂ,
19 ಪರೇಶಾನುಗ್ರಹೇ ಕಾಲಂ ಪ್ರಚಾರಯಿತುಮೇವ ಚ| ಸರ್ವ್ವೈತತ್ಕರಣಾರ್ಥಾಯ ಮಾಮೇವ ಪ್ರಹಿಣೋತಿ ಸಃ||
ಕರ್ತದೇವರ ಮೆಚ್ಚುಗೆಯ ವರ್ಷವನ್ನು ಸಾರುವುದಕ್ಕೂ ಅವರು ನನ್ನನ್ನು ಕಳುಹಿಸಿದ್ದಾರೆ.”
20 ತತಃ ಪುಸ್ತಕಂ ಬದ್ವ್ವಾ ಪರಿಚಾರಕಸ್ಯ ಹಸ್ತೇ ಸಮರ್ಪ್ಯ ಚಾಸನೇ ಸಮುಪವಿಷ್ಟಃ, ತತೋ ಭಜನಗೃಹೇ ಯಾವನ್ತೋ ಲೋಕಾ ಆಸನ್ ತೇ ಸರ್ವ್ವೇಽನನ್ಯದೃಷ್ಟ್ಯಾ ತಂ ವಿಲುಲೋಕಿರೇ|
ಯೇಸು ಗ್ರಂಥದ ಸುರುಳಿಯನ್ನು ಸುತ್ತಿ, ಪರಿಚಾರಕನ ಕೈಗೆ ಕೊಟ್ಟು ಕುಳಿತುಕೊಂಡರು. ಆಗ ಆ ಸಭಾಮಂದಿರದಲ್ಲಿ ಇದ್ದವರೆಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು.
21 ಅನನ್ತರಮ್ ಅದ್ಯೈತಾನಿ ಸರ್ವ್ವಾಣಿ ಲಿಖಿತವಚನಾನಿ ಯುಷ್ಮಾಕಂ ಮಧ್ಯೇ ಸಿದ್ಧಾನಿ ಸ ಇಮಾಂ ಕಥಾಂ ತೇಭ್ಯಃ ಕಥಯಿತುಮಾರೇಭೇ|
ಯೇಸು ಅವರಿಗೆ, “ನೀವು ಕೇಳುತ್ತಿದ್ದಂತೆಯೇ ಈ ಪವಿತ್ರ ವೇದದ ವಾಕ್ಯವು ಇಂದು ನೆರವೇರಿತು,” ಎಂದು ಹೇಳಲಾರಂಭಿಸಿದರು.
22 ತತಃ ಸರ್ವ್ವೇ ತಸ್ಮಿನ್ ಅನ್ವರಜ್ಯನ್ತ, ಕಿಞ್ಚ ತಸ್ಯ ಮುಖಾನ್ನಿರ್ಗತಾಭಿರನುಗ್ರಹಸ್ಯ ಕಥಾಭಿಶ್ಚಮತ್ಕೃತ್ಯ ಕಥಯಾಮಾಸುಃ ಕಿಮಯಂ ಯೂಷಫಃ ಪುತ್ರೋ ನ?
ಎಲ್ಲರೂ ಅವರನ್ನು ಹೊಗಳಿದರು. ಯೇಸುವಿನ ಬಾಯಿಂದ ಬಂದ ಕೃಪೆಯುಳ್ಳ ಮಾತುಗಳಿಗೆ ಆಶ್ಚರ್ಯಪಟ್ಟು, “ಈತನು ಯೋಸೇಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು.
23 ತದಾ ಸೋಽವಾದೀದ್ ಹೇ ಚಿಕಿತ್ಸಕ ಸ್ವಮೇವ ಸ್ವಸ್ಥಂ ಕುರು ಕಫರ್ನಾಹೂಮಿ ಯದ್ಯತ್ ಕೃತವಾನ್ ತದಶ್ರೌಷ್ಮ ತಾಃ ಸರ್ವಾಃ ಕ್ರಿಯಾ ಅತ್ರ ಸ್ವದೇಶೇ ಕುರು ಕಥಾಮೇತಾಂ ಯೂಯಮೇವಾವಶ್ಯಂ ಮಾಂ ವದಿಷ್ಯಥ|
ಯೇಸು ಅವರಿಗೆ, “‘ವೈದ್ಯನೇ, ನಿನ್ನನ್ನು ನೀನೇ ವಾಸಿಮಾಡಿಕೋ!’ ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಹೇಳಿ, ‘ಕಪೆರ್ನೌಮಿನಲ್ಲಿ ಎಂತೆಂಥ ಕಾರ್ಯಗಳು ನಡೆಯಿತೆಂದು ನಾವು ಕೇಳಿದೆವು. ಅದನ್ನು ಇಲ್ಲಿ ನಿನ್ನ ಸ್ವಂತ ಊರಿನಲ್ಲಿಯೂ ಮಾಡು’ ಎಂದು ನನಗೆ ಹೇಳುವಿರಿ,” ಎಂದರು.
24 ಪುನಃ ಸೋವಾದೀದ್ ಯುಷ್ಮಾನಹಂ ಯಥಾರ್ಥಂ ವದಾಮಿ, ಕೋಪಿ ಭವಿಷ್ಯದ್ವಾದೀ ಸ್ವದೇಶೇ ಸತ್ಕಾರಂ ನ ಪ್ರಾಪ್ನೋತಿ|
ಯೇಸು ಮುಂದುವರಿಸಿ, “ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಯಾವ ಪ್ರವಾದಿಯೂ ಸ್ವಂತ ಊರಿನಲ್ಲಿ ಸ್ವೀಕಾರವಾಗುವುದಿಲ್ಲ.
25 ಅಪರಞ್ಚ ಯಥಾರ್ಥಂ ವಚ್ಮಿ, ಏಲಿಯಸ್ಯ ಜೀವನಕಾಲೇ ಯದಾ ಸಾರ್ದ್ಧತ್ರಿತಯವರ್ಷಾಣಿ ಯಾವತ್ ಜಲದಪ್ರತಿಬನ್ಧಾತ್ ಸರ್ವ್ವಸ್ಮಿನ್ ದೇಶೇ ಮಹಾದುರ್ಭಿಕ್ಷಮ್ ಅಜನಿಷ್ಟ ತದಾನೀಮ್ ಇಸ್ರಾಯೇಲೋ ದೇಶಸ್ಯ ಮಧ್ಯೇ ಬಹ್ವ್ಯೋ ವಿಧವಾ ಆಸನ್,
ನಿಮಗೆ ಸತ್ಯವನ್ನು ಹೇಳುತ್ತೇನೆ: ಎಲೀಯನ ದಿವಸಗಳಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಬರ ಉಂಟಾದಾಗ, ಇಸ್ರಾಯೇಲಿನಲ್ಲಿ ಅನೇಕ ವಿಧವೆಯರು ಇದ್ದರು.
26 ಕಿನ್ತು ಸೀದೋನ್ಪ್ರದೇಶೀಯಸಾರಿಫತ್ಪುರನಿವಾಸಿನೀಮ್ ಏಕಾಂ ವಿಧವಾಂ ವಿನಾ ಕಸ್ಯಾಶ್ಚಿದಪಿ ಸಮೀಪೇ ಏಲಿಯಃ ಪ್ರೇರಿತೋ ನಾಭೂತ್|
ಅವರಲ್ಲಿ ಯಾರ ಬಳಿಗೂ ದೇವರು ಎಲೀಯನನ್ನು ಕಳುಹಿಸದೆ ಸೀದೋನ್ ಪಟ್ಟಣದ ಸರೆಪ್ತದಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಕಳುಹಿಸಿದರು.
27 ಅಪರಞ್ಚ ಇಲೀಶಾಯಭವಿಷ್ಯದ್ವಾದಿವಿದ್ಯಮಾನತಾಕಾಲೇ ಇಸ್ರಾಯೇಲ್ದೇಶೇ ಬಹವಃ ಕುಷ್ಠಿನ ಆಸನ್ ಕಿನ್ತು ಸುರೀಯದೇಶೀಯಂ ನಾಮಾನ್ಕುಷ್ಠಿನಂ ವಿನಾ ಕೋಪ್ಯನ್ಯಃ ಪರಿಷ್ಕೃತೋ ನಾಭೂತ್|
ಹಾಗೆಯೇ, ಪ್ರವಾದಿ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರಾಯೇಲಿನಲ್ಲಿದ್ದರೂ ಸಿರಿಯದ ನಾಮಾನನ ಹೊರತು ಅವರಲ್ಲಿ ಬೇರೆ ಯಾರೂ ಶುದ್ಧರಾಗಲಿಲ್ಲ,” ಎಂದರು.
28 ಇಮಾಂ ಕಥಾಂ ಶ್ರುತ್ವಾ ಭಜನಗೇಹಸ್ಥಿತಾ ಲೋಕಾಃ ಸಕ್ರೋಧಮ್ ಉತ್ಥಾಯ
ಆಗ ಸಭಾಮಂದಿರದಲ್ಲಿ ಇದ್ದವರೆಲ್ಲರೂ ಇವುಗಳನ್ನು ಕೇಳಿ ಬಹು ಕೋಪಗೊಂಡರು.
29 ನಗರಾತ್ತಂ ಬಹಿಷ್ಕೃತ್ಯ ಯಸ್ಯ ಶಿಖರಿಣ ಉಪರಿ ತೇಷಾಂ ನಗರಂ ಸ್ಥಾಪಿತಮಾಸ್ತೇ ತಸ್ಮಾನ್ನಿಕ್ಷೇಪ್ತುಂ ತಸ್ಯ ಶಿಖರಂ ತಂ ನಿನ್ಯುಃ
ಅವರು ಮೇಲಕ್ಕೆದ್ದು, ಯೇಸುವನ್ನು ಪಟ್ಟಣದ ಹೊರಗೆ ದಬ್ಬಬೇಕೆಂದು, ತಮ್ಮ ಬೆಟ್ಟದ ಮೇಲೆ ಕಟ್ಟಿರುವ ಪಟ್ಟಣದ ಕಡಿದಾದ ಸ್ಥಳಕ್ಕೆ ಅವರನ್ನು ಹಿಡಿದುಕೊಂಡು ಹೋದರು.
30 ಕಿನ್ತು ಸ ತೇಷಾಂ ಮಧ್ಯಾದಪಸೃತ್ಯ ಸ್ಥಾನಾನ್ತರಂ ಜಗಾಮ|
ಆದರೆ ಯೇಸು ಅವರ ಮಧ್ಯದಿಂದ ಹಾದು ಹೊರಟು ಹೋದರು.
31 ತತಃ ಪರಂ ಯೀಶುರ್ಗಾಲೀಲ್ಪ್ರದೇಶೀಯಕಫರ್ನಾಹೂಮ್ನಗರ ಉಪಸ್ಥಾಯ ವಿಶ್ರಾಮವಾರೇ ಲೋಕಾನುಪದೇಷ್ಟುಮ್ ಆರಬ್ಧವಾನ್|
ಯೇಸು ಗಲಿಲಾಯದ ಕಪೆರ್ನೌಮಿಗೆ ಬಂದು, ಸಬ್ಬತ್ ದಿನಗಳಲ್ಲಿ ಅವರಿಗೆ ಬೋಧಿಸುತ್ತಿದ್ದರು.
32 ತದುಪದೇಶಾತ್ ಸರ್ವ್ವೇ ಚಮಚ್ಚಕ್ರು ರ್ಯತಸ್ತಸ್ಯ ಕಥಾ ಗುರುತರಾ ಆಸನ್|
ಯೇಸುವಿನ ಬೋಧನೆಯನ್ನು ಕೇಳಿ ಜನರು ಆಶ್ಚರ್ಯಪಟ್ಟರು. ಏಕೆಂದರೆ ಅವರ ವಾಕ್ಯವು ಅಧಿಕಾರದಿಂದ ಕೂಡಿದ್ದಾಗಿತ್ತು.
33 ತದಾನೀಂ ತದ್ಭಜನಗೇಹಸ್ಥಿತೋಽಮೇಧ್ಯಭೂತಗ್ರಸ್ತ ಏಕೋ ಜನ ಉಚ್ಚೈಃ ಕಥಯಾಮಾಸ,
ಆ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾಗಿ ಕಿರುಚುತ್ತಾ,
34 ಹೇ ನಾಸರತೀಯಯೀಶೋಽಸ್ಮಾನ್ ತ್ಯಜ, ತ್ವಯಾ ಸಹಾಸ್ಮಾಕಂ ಕಃ ಸಮ್ಬನ್ಧಃ? ಕಿಮಸ್ಮಾನ್ ವಿನಾಶಯಿತುಮಾಯಾಸಿ? ತ್ವಮೀಶ್ವರಸ್ಯ ಪವಿತ್ರೋ ಜನ ಏತದಹಂ ಜಾನಾಮಿ|
“ನಜರೇತಿನ ಯೇಸುವೇ, ನಮ್ಮ ಗೊಡವೆ ನಿಮಗೆ ಏಕೆ? ನಮ್ಮನ್ನು ನಾಶಮಾಡುವುದಕ್ಕಾಗಿ ಬಂದಿರಾ? ನೀವು ಯಾರೆಂದು ನಾನು ಬಲ್ಲೆನು. ನೀವು ದೇವರ ಪರಿಶುದ್ಧರು,” ಎಂದು ಹೇಳಿದನು.
35 ತದಾ ಯೀಶುಸ್ತಂ ತರ್ಜಯಿತ್ವಾವದತ್ ಮೌನೀ ಭವ ಇತೋ ಬಹಿರ್ಭವ; ತತಃ ಸೋಮೇಧ್ಯಭೂತಸ್ತಂ ಮಧ್ಯಸ್ಥಾನೇ ಪಾತಯಿತ್ವಾ ಕಿಞ್ಚಿದಪ್ಯಹಿಂಸಿತ್ವಾ ತಸ್ಮಾದ್ ಬಹಿರ್ಗತವಾನ್|
ಆಗ ಯೇಸು ಅವನನ್ನು ಗದರಿಸಿ, “ಸುಮ್ಮನಿರು, ಅವನೊಳಗಿಂದ ಹೊರಗೆ ಬಾ,” ಎಂದರು. ಆ ದೆವ್ವವು ಅವನನ್ನು ಮಧ್ಯದಲ್ಲಿ ಕೆಡವಿ, ಬಾಧಿಸದೆ ಅವನೊಳಗಿಂದ ಹೊರಗೆ ಬಂತು.
36 ತತಃ ಸರ್ವ್ವೇ ಲೋಕಾಶ್ಚಮತ್ಕೃತ್ಯ ಪರಸ್ಪರಂ ವಕ್ತುಮಾರೇಭಿರೇ ಕೋಯಂ ಚಮತ್ಕಾರಃ| ಏಷ ಪ್ರಭಾವೇಣ ಪರಾಕ್ರಮೇಣ ಚಾಮೇಧ್ಯಭೂತಾನ್ ಆಜ್ಞಾಪಯತಿ ತೇನೈವ ತೇ ಬಹಿರ್ಗಚ್ಛನ್ತಿ|
ಜನರೆಲ್ಲರೂ ಬೆರಗಾಗಿ, “ಇದೆಂಥಾ ಮಾತಾಗಿದೆ! ಈತನು ಅಧಿಕಾರದಿಂದಲೂ ಶಕ್ತಿಯಿಂದಲೂ ಅಶುದ್ಧಾತ್ಮಗಳಿಗೆ ಅಪ್ಪಣೆಕೊಡಲು ಅವು ಹೊರಗೆ ಬರುತ್ತವಲ್ಲಾ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
37 ಅನನ್ತರಂ ಚತುರ್ದಿಕ್ಸ್ಥದೇಶಾನ್ ತಸ್ಯ ಸುಖ್ಯಾತಿರ್ವ್ಯಾಪ್ನೋತ್|
ಯೇಸುವಿನ ಸುದ್ದಿಯು ಸುತ್ತಲಿನ ಪ್ರದೇಶದ ಪ್ರತಿಯೊಂದು ಸ್ಥಳದಲ್ಲಿ ಹರಡಿತು.
38 ತದನನ್ತರಂ ಸ ಭಜನಗೇಹಾದ್ ಬಹಿರಾಗತ್ಯ ಶಿಮೋನೋ ನಿವೇಶನಂ ಪ್ರವಿವೇಶ ತದಾ ತಸ್ಯ ಶ್ವಶ್ರೂರ್ಜ್ವರೇಣಾತ್ಯನ್ತಂ ಪೀಡಿತಾಸೀತ್ ಶಿಷ್ಯಾಸ್ತದರ್ಥಂ ತಸ್ಮಿನ್ ವಿನಯಂ ಚಕ್ರುಃ|
ಯೇಸು ಸಭಾಮಂದಿರದಿಂದ ಎದ್ದು ಸೀಮೋನನ ಮನೆಗೆ ಹೋದರು. ಅಲ್ಲಿ ಸೀಮೋನನ ಅತ್ತೆಗೆ ಕಠಿಣ ಜ್ವರವಿದ್ದುದರಿಂದ ಅಲ್ಲಿದ್ದವರು ಆಕೆಗೆ ಸಹಾಯ ಮಾಡಬೇಕೆಂದು ಯೇಸುವನ್ನು ಬೇಡಿಕೊಂಡರು.
39 ತತಃ ಸ ತಸ್ಯಾಃ ಸಮೀಪೇ ಸ್ಥಿತ್ವಾ ಜ್ವರಂ ತರ್ಜಯಾಮಾಸ ತೇನೈವ ತಾಂ ಜ್ವರೋಽತ್ಯಾಕ್ಷೀತ್ ತತಃ ಸಾ ತತ್ಕ್ಷಣಮ್ ಉತ್ಥಾಯ ತಾನ್ ಸಿಷೇವೇ|
ಆಗ ಯೇಸು ಆಕೆಯ ಬಳಿಯಲ್ಲಿ ನಿಂತು ಜ್ವರವನ್ನು ಗದರಿಸಲು ಅದು ಆಕೆಯನ್ನು ಬಿಟ್ಟುಹೋಯಿತು. ಕೂಡಲೇ ಆಕೆಯು ಎದ್ದು ಅವರನ್ನು ಉಪಚರಿಸಿದಳು.
40 ಅಥ ಸೂರ್ಯ್ಯಾಸ್ತಕಾಲೇ ಸ್ವೇಷಾಂ ಯೇ ಯೇ ಜನಾ ನಾನಾರೋಗೈಃ ಪೀಡಿತಾ ಆಸನ್ ಲೋಕಾಸ್ತಾನ್ ಯೀಶೋಃ ಸಮೀಪಮ್ ಆನಿನ್ಯುಃ, ತದಾ ಸ ಏಕೈಕಸ್ಯ ಗಾತ್ರೇ ಕರಮರ್ಪಯಿತ್ವಾ ತಾನರೋಗಾನ್ ಚಕಾರ|
ಸಂಜೆಯಾದ ನಂತರ, ನಾನಾ ವಿಧವಾದ ರೋಗಗಳಿಂದ ಅಸ್ವಸ್ಥರಾದವರೆಲ್ಲರನ್ನು ಜನರು ಯೇಸುವಿನ ಬಳಿಗೆ ಕರೆತಂದರು, ಅವರಲ್ಲಿ ಪ್ರತಿಯೊಬ್ಬನ ಮೇಲೆ ಯೇಸು ತಮ್ಮ ಕೈಗಳನ್ನಿಟ್ಟು ಅವರನ್ನು ಸ್ವಸ್ಥಪಡಿಸಿದರು.
41 ತತೋ ಭೂತಾ ಬಹುಭ್ಯೋ ನಿರ್ಗತ್ಯ ಚೀತ್ಶಬ್ದಂ ಕೃತ್ವಾ ಚ ಬಭಾಷಿರೇ ತ್ವಮೀಶ್ವರಸ್ಯ ಪುತ್ರೋಽಭಿಷಿಕ್ತತ್ರಾತಾ; ಕಿನ್ತು ಸೋಭಿಷಿಕ್ತತ್ರಾತೇತಿ ತೇ ವಿವಿದುರೇತಸ್ಮಾತ್ ಕಾರಣಾತ್ ತಾನ್ ತರ್ಜಯಿತ್ವಾ ತದ್ವಕ್ತುಂ ನಿಷಿಷೇಧ|
ಅನೇಕರೊಳಗಿಂದ, ದೆವ್ವಗಳು ಸಹ ಹೊರಗೆ ಬಂದು, “ನೀವು ದೇವರ ಪುತ್ರ” ಎಂದು ಅರಚಿದವು. ಯೇಸು ಅವುಗಳನ್ನು ಗದರಿಸಿ ಮಾತನಾಡಬಾರದೆಂದು ಹೇಳಿದರು. ಏಕೆಂದರೆ ಅವರೇ ಕ್ರಿಸ್ತನೆಂದು ಅವುಗಳಿಗೆ ಗೊತ್ತಿತ್ತು.
42 ಅಪರಞ್ಚ ಪ್ರಭಾತೇ ಸತಿ ಸ ವಿಜನಸ್ಥಾನಂ ಪ್ರತಸ್ಥೇ ಪಶ್ಚಾತ್ ಜನಾಸ್ತಮನ್ವಿಚ್ಛನ್ತಸ್ತನ್ನಿಕಟಂ ಗತ್ವಾ ಸ್ಥಾನಾನ್ತರಗಮನಾರ್ಥಂ ತಮನ್ವರುನ್ಧನ್|
ಬೆಳಗಾದ ಮೇಲೆ, ಯೇಸು ಏಕಾಂತ ಸ್ಥಳಕ್ಕೆ ಹೊರಟು ಹೋದರು. ಜನರು ಅವರನ್ನು ಹುಡುಕಿಕೊಂಡು ಅವರ ಬಳಿಗೆ ಬಂದು ತಮ್ಮನ್ನು ಬಿಟ್ಟು ಹೋಗಬಾರದೆಂದು ಅವರನ್ನು ತಡೆದರು.
43 ಕಿನ್ತು ಸ ತಾನ್ ಜಗಾದ, ಈಶ್ವರೀಯರಾಜ್ಯಸ್ಯ ಸುಸಂವಾದಂ ಪ್ರಚಾರಯಿತುಮ್ ಅನ್ಯಾನಿ ಪುರಾಣ್ಯಪಿ ಮಯಾ ಯಾತವ್ಯಾನಿ ಯತಸ್ತದರ್ಥಮೇವ ಪ್ರೇರಿತೋಹಂ|
ಆದರೆ ಯೇಸು ಅವರಿಗೆ, “ಬೇರೆ ಪಟ್ಟಣಗಳಿಗೂ ದೇವರ ರಾಜ್ಯದ ಸುವಾರ್ತೆಯನ್ನು ನಾನು ಸಾರಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಇದಕ್ಕಾಗಿಯೇ,” ಎಂದರು.
44 ಅಥ ಗಾಲೀಲೋ ಭಜನಗೇಹೇಷು ಸ ಉಪದಿದೇಶ|
ಅನಂತರ ಯೇಸು ಯೂದಾಯದ ಸಭಾಮಂದಿರಗಳಲ್ಲಿ ಸುವಾರ್ತೆ ಸಾರುತ್ತಾ ಇದ್ದರು.

< ಲೂಕಃ 4 >