< ಲೂಕಃ 22 >

1 ಅಪರಞ್ಚ ಕಿಣ್ವಶೂನ್ಯಪೂಪೋತ್ಸವಸ್ಯ ಕಾಲ ಉಪಸ್ಥಿತೇ
ಪಸ್ಕವೆಂಬ, ಹುಳಿಯಿಲ್ಲದ ರೊಟ್ಟಿಯ ಹಬ್ಬವು ಸಮೀಪವಾಗಿತ್ತು.
2 ಪ್ರಧಾನಯಾಜಕಾ ಅಧ್ಯಾಯಕಾಶ್ಚ ಯಥಾ ತಂ ಹನ್ತುಂ ಶಕ್ನುವನ್ತಿ ತಥೋಪಾಯಾಮ್ ಅಚೇಷ್ಟನ್ತ ಕಿನ್ತು ಲೋಕೇಭ್ಯೋ ಬಿಭ್ಯುಃ|
ಮುಖ್ಯಯಾಜಕರೂ ನಿಯಮ ಬೋಧಕರೂ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಹುಡುಕುತ್ತಿದ್ದರು. ಆದರೆ ಅವರು ಜನರಿಗೆ ಭಯಪಟ್ಟರು.
3 ಏತಸ್ತಿನ್ ಸಮಯೇ ದ್ವಾದಶಶಿಷ್ಯೇಷು ಗಣಿತ ಈಷ್ಕರಿಯೋತೀಯರೂಢಿಮಾನ್ ಯೋ ಯಿಹೂದಾಸ್ತಸ್ಯಾನ್ತಃಕರಣಂ ಶೈತಾನಾಶ್ರಿತತ್ವಾತ್
ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಎಂದು ಕರೆಯಲಾಗುವ ಯೂದನಲ್ಲಿ, ಸೈತಾನನು ಪ್ರವೇಶಿಸಿದನು.
4 ಸ ಗತ್ವಾ ಯಥಾ ಯೀಶುಂ ತೇಷಾಂ ಕರೇಷು ಸಮರ್ಪಯಿತುಂ ಶಕ್ನೋತಿ ತಥಾ ಮನ್ತ್ರಣಾಂ ಪ್ರಧಾನಯಾಜಕೈಃ ಸೇನಾಪತಿಭಿಶ್ಚ ಸಹ ಚಕಾರ|
ಅವನು ಮುಖ್ಯಯಾಜಕರ ಬಳಿಗೂ ದೇವಾಲಯದ ಕಾವಲಧಿಕಾರಿಗಳ ಬಳಿಗೂ ಹೋಗಿ ಯೇಸುವನ್ನು ಅವರಿಗೆ ಹಿಡಿದುಕೊಡುವ ವಿಧಾನವನ್ನು ಕುರಿತು ಅವರ ಕೂಡ ಚರ್ಚಿಸಿದನು.
5 ತೇನ ತೇ ತುಷ್ಟಾಸ್ತಸ್ಮೈ ಮುದ್ರಾಂ ದಾತುಂ ಪಣಂ ಚಕ್ರುಃ|
ಆಗ ಅವರು ಸಂತೋಷಪಟ್ಟು ಅವನಿಗೆ ಹಣ ಕೊಡುವುದಕ್ಕೆ ವಾಗ್ದಾನ ಮಾಡಿದರು.
6 ತತಃ ಸೋಙ್ಗೀಕೃತ್ಯ ಯಥಾ ಲೋಕಾನಾಮಗೋಚರೇ ತಂ ಪರಕರೇಷು ಸಮರ್ಪಯಿತುಂ ಶಕ್ನೋತಿ ತಥಾವಕಾಶಂ ಚೇಷ್ಟಿತುಮಾರೇಭೇ|
ಅವನೂ ಸಮ್ಮತಿಸಿ, ಜನಸಮೂಹವು ಇಲ್ಲದಿರುವಾಗ ಯೇಸುವನ್ನು ಅವರಿಗೆ ಹಿಡಿದುಕೊಡುವಂತೆ ಸಂದರ್ಭವನ್ನು ಕಾಯುತ್ತಿದ್ದನು.
7 ಅಥ ಕಿಣ್ವಶೂನ್ಯಪೂಪೋತ್ಮವದಿನೇ, ಅರ್ಥಾತ್ ಯಸ್ಮಿನ್ ದಿನೇ ನಿಸ್ತಾರೋತ್ಸವಸ್ಯ ಮೇಷೋ ಹನ್ತವ್ಯಸ್ತಸ್ಮಿನ್ ದಿನೇ
ಆಗ ಪಸ್ಕದ ಕುರಿಯು ಬಲಿಕೊಡಬೇಕಾಗಿದ್ದ ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿನ ಬಂದಿತು.
8 ಯೀಶುಃ ಪಿತರಂ ಯೋಹನಞ್ಚಾಹೂಯ ಜಗಾದ, ಯುವಾಂ ಗತ್ವಾಸ್ಮಾಕಂ ಭೋಜನಾರ್ಥಂ ನಿಸ್ತಾರೋತ್ಸವಸ್ಯ ದ್ರವ್ಯಾಣ್ಯಾಸಾದಯತಂ|
ಯೇಸು ಪೇತ್ರ ಯೋಹಾನರನ್ನು ಕರೆದು, “ನೀವು ಹೋಗಿ ನಮಗೋಸ್ಕರ ಪಸ್ಕಭೋಜನವನ್ನು ಸಿದ್ಧಮಾಡಿರಿ,” ಎಂದರು.
9 ತದಾ ತೌ ಪಪ್ರಚ್ಛತುಃ ಕುಚಾಸಾದಯಾವೋ ಭವತಃ ಕೇಚ್ಛಾ?
ಅವರು ಯೇಸುವಿಗೆ, “ನಾವು ಎಲ್ಲಿ ಸಿದ್ಧಮಾಡಬೇಕು?” ಎಂದರು.
10 ತದಾ ಸೋವಾದೀತ್, ನಗರೇ ಪ್ರವಿಷ್ಟೇ ಕಶ್ಚಿಜ್ಜಲಕುಮ್ಭಮಾದಾಯ ಯುವಾಂ ಸಾಕ್ಷಾತ್ ಕರಿಷ್ಯತಿ ಸ ಯನ್ನಿವೇಶನಂ ಪ್ರವಿಶತಿ ಯುವಾಮಪಿ ತನ್ನಿವೇಶನಂ ತತ್ಪಶ್ಚಾದಿತ್ವಾ ನಿವೇಶನಪತಿಮ್ ಇತಿ ವಾಕ್ಯಂ ವದತಂ,
ಆಗ ಯೇಸು ಅವರಿಗೆ, “ನೀವು ಪಟ್ಟಣವನ್ನು ಪ್ರವೇಶಿಸಿದಾಗ, ಅಲ್ಲಿ ನೀರಿನ ಕೊಡವನ್ನು ಹೊತ್ತುಕೊಂಡಿರುವ ಒಬ್ಬನು ನಿಮ್ಮನ್ನು ಸಂಧಿಸುವನು. ಅವನು ಪ್ರವೇಶಿಸುವ ಮನೆಯೊಳಗೆ ನೀವು ಅವನ ಹಿಂದೆ ಹೋಗಿರಿ.
11 ಯತ್ರಾಹಂ ನಿಸ್ತಾರೋತ್ಸವಸ್ಯ ಭೋಜ್ಯಂ ಶಿಷ್ಯೈಃ ಸಾರ್ದ್ಧಂ ಭೋಕ್ತುಂ ಶಕ್ನೋಮಿ ಸಾತಿಥಿಶಾಲಾ ಕುತ್ರ? ಕಥಾಮಿಮಾಂ ಪ್ರಭುಸ್ತ್ವಾಂ ಪೃಚ್ಛತಿ|
ನೀವು ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರೊಂದಿಗೆ ಪಸ್ಕಭೋಜನ ಮಾಡಲು ಅತಿಥಿಯ ಕೊಠಡಿ ಎಲ್ಲಿದೆ? ಎಂದು ಬೋಧಕರು ನಿನ್ನನ್ನು ಕೇಳುತ್ತಾರೆ’ ಎಂದು ಹೇಳಿರಿ.
12 ತತಃ ಸ ಜನೋ ದ್ವಿತೀಯಪ್ರಕೋಷ್ಠೀಯಮ್ ಏಕಂ ಶಸ್ತಂ ಕೋಷ್ಠಂ ದರ್ಶಯಿಷ್ಯತಿ ತತ್ರ ಭೋಜ್ಯಮಾಸಾದಯತಂ|
ಅವನು ಕ್ರಮಪಡಿಸಿದ ಮೇಲಂತಸ್ತಿನ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು, ಅಲ್ಲಿಯೇ ಪಸ್ಕಭೋಜನ ಸಿದ್ಧಪಡಿಸಿರಿ,” ಎಂದರು.
13 ತತಸ್ತೌ ಗತ್ವಾ ತದ್ವಾಕ್ಯಾನುಸಾರೇಣ ಸರ್ವ್ವಂ ದೃಷ್ದ್ವಾ ತತ್ರ ನಿಸ್ತಾರೋತ್ಸವೀಯಂ ಭೋಜ್ಯಮಾಸಾದಯಾಮಾಸತುಃ|
ಅವರು ಹೊರಟುಹೋಗಿ ಯೇಸು ತಮಗೆ ಹೇಳಿದಂತೆಯೇ ಕಂಡು, ಪಸ್ಕವನ್ನು ಸಿದ್ಧಮಾಡಿದರು.
14 ಅಥ ಕಾಲ ಉಪಸ್ಥಿತೇ ಯೀಶು ರ್ದ್ವಾದಶಭಿಃ ಪ್ರೇರಿತೈಃ ಸಹ ಭೋಕ್ತುಮುಪವಿಶ್ಯ ಕಥಿತವಾನ್
ನಿಶ್ಚಿತ ಸಮಯ ಬಂದಾಗ ಯೇಸು ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಕುಳಿತುಕೊಂಡರು.
15 ಮಮ ದುಃಖಭೋಗಾತ್ ಪೂರ್ವ್ವಂ ಯುಭಾಭಿಃ ಸಹ ನಿಸ್ತಾರೋತ್ಸವಸ್ಯೈತಸ್ಯ ಭೋಜ್ಯಂ ಭೋಕ್ತುಂ ಮಯಾತಿವಾಞ್ಛಾ ಕೃತಾ|
ಆಗ ಯೇಸು ಅವರಿಗೆ, “ನಾನು ಬಾಧೆಯನ್ನು ಅನುಭವಿಸುವುದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕಭೋಜನ ಮಾಡುವುದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ.
16 ಯುಷ್ಮಾನ್ ವದಾಮಿ, ಯಾವತ್ಕಾಲಮ್ ಈಶ್ವರರಾಜ್ಯೇ ಭೋಜನಂ ನ ಕರಿಷ್ಯೇ ತಾವತ್ಕಾಲಮ್ ಇದಂ ನ ಭೋಕ್ಷ್ಯೇ|
ದೇವರ ರಾಜ್ಯದಲ್ಲಿ ಇದು ನೆರವೇರುವ ತನಕ ನಾನು ಇನ್ನು ಮೇಲೆ ಪಸ್ಕಭೋಜನ ಮಾಡುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
17 ತದಾ ಸ ಪಾನಪಾತ್ರಮಾದಾಯ ಈಶ್ವರಸ್ಯ ಗುಣಾನ್ ಕೀರ್ತ್ತಯಿತ್ವಾ ತೇಭ್ಯೋ ದತ್ವಾವದತ್, ಇದಂ ಗೃಹ್ಲೀತ ಯೂಯಂ ವಿಭಜ್ಯ ಪಿವತ|
ಅನಂತರ ಯೇಸು ಪಾನಪಾತ್ರೆಯನ್ನು ತೆಗೆದುಕೊಂಡು, ಸ್ತೋತ್ರಮಾಡಿ, “ಇದನ್ನು ತೆಗೆದುಕೊಳ್ಳಿರಿ ಮತ್ತು ನಿಮ್ಮೊಳಗೆ ಹಂಚಿಕೊಳ್ಳಿರಿ.
18 ಯುಷ್ಮಾನ್ ವದಾಮಿ ಯಾವತ್ಕಾಲಮ್ ಈಶ್ವರರಾಜತ್ವಸ್ಯ ಸಂಸ್ಥಾಪನಂ ನ ಭವತಿ ತಾವದ್ ದ್ರಾಕ್ಷಾಫಲರಸಂ ನ ಪಾಸ್ಯಾಮಿ|
ದೇವರ ರಾಜ್ಯವು ಬರುವ ತನಕ ಇನ್ನು ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ,” ಎಂದರು.
19 ತತಃ ಪೂಪಂ ಗೃಹೀತ್ವಾ ಈಶ್ವರಗುಣಾನ್ ಕೀರ್ತ್ತಯಿತ್ವಾ ಭಙ್ಕ್ತಾ ತೇಭ್ಯೋ ದತ್ವಾವದತ್, ಯುಷ್ಮದರ್ಥಂ ಸಮರ್ಪಿತಂ ಯನ್ಮಮ ವಪುಸ್ತದಿದಂ, ಏತತ್ ಕರ್ಮ್ಮ ಮಮ ಸ್ಮರಣಾರ್ಥಂ ಕುರುಧ್ವಂ|
ಆಮೇಲೆ ಯೇಸು ರೊಟ್ಟಿಯನ್ನು ತೆಗೆದುಕೊಂಡು, ಸ್ತೋತ್ರಮಾಡಿ ಅದನ್ನು ಮುರಿದು ಶಿಷ್ಯರಿಗೆ ಕೊಟ್ಟು, “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನ ನೆನಪಿಗಾಗಿ ನೀವು ಇದನ್ನು ಮಾಡಿರಿ,” ಎಂದರು.
20 ಅಥ ಭೋಜನಾನ್ತೇ ತಾದೃಶಂ ಪಾತ್ರಂ ಗೃಹೀತ್ವಾವದತ್, ಯುಷ್ಮತ್ಕೃತೇ ಪಾತಿತಂ ಯನ್ಮಮ ರಕ್ತಂ ತೇನ ನಿರ್ಣೀತನವನಿಯಮರೂಪಂ ಪಾನಪಾತ್ರಮಿದಂ|
ಅದೇ ಪ್ರಕಾರ, ಭೋಜನವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲಾಗುವ, ನನ್ನ ರಕ್ತದಿಂದಾದ ಹೊಸ ಒಡಂಬಡಿಕೆಯಾಗಿದೆ.
21 ಪಶ್ಯತ ಯೋ ಮಾಂ ಪರಕರೇಷು ಸಮರ್ಪಯಿಷ್ಯತಿ ಸ ಮಯಾ ಸಹ ಭೋಜನಾಸನ ಉಪವಿಶತಿ|
ಆದರೂ ಇಗೋ, ನನಗೆ ದ್ರೋಹಬಗೆಯುವವನ ಕೈ ನನ್ನ ಕೈಯೊಂದಿಗೆ ಮೇಜಿನ ಮೇಲೆ ಇದೆ.
22 ಯಥಾ ನಿರೂಪಿತಮಾಸ್ತೇ ತದನುಸಾರೇಣಾ ಮನುಷ್ಯಪುತ್ರಸ್ಯ ಗತಿ ರ್ಭವಿಷ್ಯತಿ ಕಿನ್ತು ಯಸ್ತಂ ಪರಕರೇಷು ಸಮರ್ಪಯಿಷ್ಯತಿ ತಸ್ಯ ಸನ್ತಾಪೋ ಭವಿಷ್ಯತಿ|
ನೇಮಕವಾದ ಪ್ರಕಾರ ಮನುಷ್ಯಪುತ್ರನಾದ ನಾನು ಹೊರಟುಹೋಗುತ್ತೇನೆ; ಆದರೆ ನನಗೆ ದ್ರೋಹಬಗೆಯುವವನಿಗೋ ಎಷ್ಟೋ ಕಷ್ಟ!” ಎಂದು ಹೇಳಿದರು.
23 ತದಾ ತೇಷಾಂ ಕೋ ಜನ ಏತತ್ ಕರ್ಮ್ಮ ಕರಿಷ್ಯತಿ ತತ್ ತೇ ಪರಸ್ಪರಂ ಪ್ರಷ್ಟುಮಾರೇಭಿರೇ|
ಆಗ ಇದನ್ನು ದ್ರೋಹಬಗೆಯುವವನು ಯಾವನು ಎಂದು ಶಿಷ್ಯರು ತಮ್ಮೊಳಗೆ ಪ್ರಶ್ನೆ ಮಾಡಲಾರಂಭಿಸಿದರು.
24 ಅಪರಂ ತೇಷಾಂ ಕೋ ಜನಃ ಶ್ರೇಷ್ಠತ್ವೇನ ಗಣಯಿಷ್ಯತೇ, ಅತ್ರಾರ್ಥೇ ತೇಷಾಂ ವಿವಾದೋಭವತ್|
ಇದಲ್ಲದೆ ತಮ್ಮೊಳಗೆ ಯಾರು ಅತಿ ದೊಡ್ಡವನೆಂಬುದಾಗಿ ಶಿಷ್ಯರಲ್ಲಿ ವಿವಾದವು ಪ್ರಾರಂಭವಾಯಿತು.
25 ಅಸ್ಮಾತ್ ಕಾರಣಾತ್ ಸೋವದತ್, ಅನ್ಯದೇಶೀಯಾನಾಂ ರಾಜಾನಃ ಪ್ರಜಾನಾಮುಪರಿ ಪ್ರಭುತ್ವಂ ಕುರ್ವ್ವನ್ತಿ ದಾರುಣಶಾಸನಂ ಕೃತ್ವಾಪಿ ತೇ ಭೂಪತಿತ್ವೇನ ವಿಖ್ಯಾತಾ ಭವನ್ತಿ ಚ|
ಆಗ ಯೇಸು ಅವರಿಗೆ, “ಯೆಹೂದ್ಯರಲ್ಲದವರ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ; ಅವರ ಮೇಲೆ ಅಧಿಕಾರವನ್ನು ನಡೆಸುವವರು ಉಪಕಾರಿಗಳು ಎಂದು ಎಣಿಸಿಕೊಳ್ಳುತ್ತಾರೆ.
26 ಕಿನ್ತು ಯುಷ್ಮಾಕಂ ತಥಾ ನ ಭವಿಷ್ಯತಿ, ಯೋ ಯುಷ್ಮಾಕಂ ಶ್ರೇಷ್ಠೋ ಭವಿಷ್ಯತಿ ಸ ಕನಿಷ್ಠವದ್ ಭವತು, ಯಶ್ಚ ಮುಖ್ಯೋ ಭವಿಷ್ಯತಿ ಸ ಸೇವಕವದ್ಭವತು|
ಆದರೆ ನೀವು ಹಾಗಿರಬಾರದು. ನಿಮ್ಮೊಳಗೆ ಅತಿ ದೊಡ್ಡವನಾಗಿರುವವನು ಅತಿ ಚಿಕ್ಕವನಂತೆ ಇರಲಿ ಮತ್ತು ಆಳ್ವಿಕೆ ಮಾಡುವವನು ಸೇವೆ ಮಾಡುವವನಂತೆ ಇರಲಿ.
27 ಭೋಜನೋಪವಿಷ್ಟಪರಿಚಾರಕಯೋಃ ಕಃ ಶ್ರೇಷ್ಠಃ? ಯೋ ಭೋಜನಾಯೋಪವಿಶತಿ ಸ ಕಿಂ ಶ್ರೇಷ್ಠೋ ನ ಭವತಿ? ಕಿನ್ತು ಯುಷ್ಮಾಕಂ ಮಧ್ಯೇಽಹಂ ಪರಿಚಾರಕಇವಾಸ್ಮಿ|
ಯಾರು ದೊಡ್ಡವನು? ಊಟಕ್ಕೆ ಕುಳಿತುಕೊಂಡಿರುವವನೋ ಅಥವಾ ಸೇವೆ ಮಾಡುವವನೋ? ಊಟಕ್ಕೆ ಕುಳಿತುಕೊಂಡವನಲ್ಲವೋ? ಆದರೆ ನಾನು ನಿಮ್ಮೊಳಗೆ ಸೇವೆ ಮಾಡುವವನಂತಿದ್ದೇನೆ.
28 ಅಪರಞ್ಚ ಯುಯಂ ಮಮ ಪರೀಕ್ಷಾಕಾಲೇ ಪ್ರಥಮಮಾರಭ್ಯ ಮಯಾ ಸಹ ಸ್ಥಿತಾ
ನೀವೇ, ನನ್ನ ಕಷ್ಟಗಳಲ್ಲಿ ನನ್ನೊಂದಿಗೆ ನಿಂತವರು.
29 ಏತತ್ಕಾರಣಾತ್ ಪಿತ್ರಾ ಯಥಾ ಮದರ್ಥಂ ರಾಜ್ಯಮೇಕಂ ನಿರೂಪಿತಂ ತಥಾಹಮಪಿ ಯುಷ್ಮದರ್ಥಂ ರಾಜ್ಯಂ ನಿರೂಪಯಾಮಿ|
ನನ್ನ ತಂದೆ ನನಗೆ ರಾಜ್ಯವನ್ನು ನೇಮಕ ಮಾಡಿದ ಹಾಗೆಯೇ, ನಾನೂ ನಿಮಗೆ ರಾಜ್ಯವನ್ನು ನೇಮಕ ಮಾಡುತ್ತೇನೆ.
30 ತಸ್ಮಾನ್ ಮಮ ರಾಜ್ಯೇ ಭೋಜನಾಸನೇ ಚ ಭೋಜನಪಾನೇ ಕರಿಷ್ಯಧ್ವೇ ಸಿಂಹಾಸನೇಷೂಪವಿಶ್ಯ ಚೇಸ್ರಾಯೇಲೀಯಾನಾಂ ದ್ವಾದಶವಂಶಾನಾಂ ವಿಚಾರಂ ಕರಿಷ್ಯಧ್ವೇ|
ಹೀಗೆ ನೀವು ನನ್ನ ರಾಜ್ಯದಲ್ಲಿ ನನ್ನ ಮೇಜಿನ ಬಳಿಯಲ್ಲಿ ಊಟಮಾಡಿ ಪಾನೀಯವನ್ನು ಸೇವಿಸುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.
31 ಅಪರಂ ಪ್ರಭುರುವಾಚ, ಹೇ ಶಿಮೋನ್ ಪಶ್ಯ ತಿತಉನಾ ಧಾನ್ಯಾನೀವ ಯುಷ್ಮಾನ್ ಶೈತಾನ್ ಚಾಲಯಿತುಮ್ ಐಚ್ಛತ್,
“ಸೀಮೋನನೇ, ಸೀಮೋನನೇ, ಇಗೋ, ಸೈತಾನನು ನಿಮ್ಮೆಲ್ಲರನ್ನೂ ಗೋಧಿಯಂತೆ ತೂರಬೇಕೆಂದು ಅಪ್ಪಣೆ ಕೇಳಿದ್ದಾನೆ.
32 ಕಿನ್ತು ತವ ವಿಶ್ವಾಸಸ್ಯ ಲೋಪೋ ಯಥಾ ನ ಭವತಿ ಏತತ್ ತ್ವದರ್ಥಂ ಪ್ರಾರ್ಥಿತಂ ಮಯಾ, ತ್ವನ್ಮನಸಿ ಪರಿವರ್ತ್ತಿತೇ ಚ ಭ್ರಾತೃಣಾಂ ಮನಾಂಸಿ ಸ್ಥಿರೀಕುರು|
ಆದರೆ ನಿನ್ನ ನಂಬಿಕೆಯು ಕುಂದದಂತೆ ನಾನು ನಿನಗೋಸ್ಕರ ಬೇಡಿಕೊಂಡಿದ್ದೇನೆ. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ಬಲಪಡಿಸು,” ಎಂದು ಹೇಳಿದರು.
33 ತದಾ ಸೋವದತ್, ಹೇ ಪ್ರಭೋಹಂ ತ್ವಯಾ ಸಾರ್ದ್ಧಂ ಕಾರಾಂ ಮೃತಿಞ್ಚ ಯಾತುಂ ಮಜ್ಜಿತೋಸ್ಮಿ|
ಆದರೆ ಅವನು ಯೇಸುವಿಗೆ, “ಕರ್ತದೇವರೇ, ನಾನು ನಿಮ್ಮ ಜೊತೆಯಲ್ಲಿ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ಸಿದ್ಧನಾಗಿದ್ದೇನೆ,” ಎಂದನು.
34 ತತಃ ಸ ಉವಾಚ, ಹೇ ಪಿತರ ತ್ವಾಂ ವದಾಮಿ, ಅದ್ಯ ಕುಕ್ಕುಟರವಾತ್ ಪೂರ್ವ್ವಂ ತ್ವಂ ಮತ್ಪರಿಚಯಂ ವಾರತ್ರಯಮ್ ಅಪಹ್ವೋಷ್ಯಸೇ|
ಆಗ ಯೇಸು, “ಪೇತ್ರನೇ, ನೀನು ನನ್ನನ್ನು ಅರಿಯೆನೆಂದು ಮೂರು ಸಾರಿ ಅಲ್ಲಗಳೆಯುವುದಕ್ಕಿಂತ ಮುಂಚೆ, ಈ ದಿವಸ ಹುಂಜ ಕೂಗುವುದಿಲ್ಲ ಎಂದು ನಿನಗೆ ಹೇಳುತ್ತೇನೆ,” ಎಂದರು.
35 ಅಪರಂ ಸ ಪಪ್ರಚ್ಛ, ಯದಾ ಮುದ್ರಾಸಮ್ಪುಟಂ ಖಾದ್ಯಪಾತ್ರಂ ಪಾದುಕಾಞ್ಚ ವಿನಾ ಯುಷ್ಮಾನ್ ಪ್ರಾಹಿಣವಂ ತದಾ ಯುಷ್ಮಾಕಂ ಕಸ್ಯಾಪಿ ನ್ಯೂನತಾಸೀತ್? ತೇ ಪ್ರೋಚುಃ ಕಸ್ಯಾಪಿ ನ|
ನಂತರ ಯೇಸು ಅವರಿಗೆ, “ನಾನು ನಿಮ್ಮನ್ನು ಹಣದ ಚೀಲ, ಪ್ರಯಾಣದ ಚೀಲ ಮತ್ತು ಪಾದರಕ್ಷೆಗಳಿಲ್ಲದೆ ಕಳುಹಿಸಿದಾಗ ನೀವು ಏನಾದರೂ ಕೊರತೆಪಟ್ಟಿರೋ?” ಎಂದು ಕೇಳಲು, ಶಿಷ್ಯರು, “ಏನೂ ಇಲ್ಲ,” ಎಂದರು.
36 ತದಾ ಸೋವದತ್ ಕಿನ್ತ್ವಿದಾನೀಂ ಮುದ್ರಾಸಮ್ಪುಟಂ ಖಾದ್ಯಪಾತ್ರಂ ವಾ ಯಸ್ಯಾಸ್ತಿ ತೇನ ತದ್ಗ್ರಹೀತವ್ಯಂ, ಯಸ್ಯ ಚ ಕೃಪಾಣೋ ನಾಸ್ತಿ ತೇನ ಸ್ವವಸ್ತ್ರಂ ವಿಕ್ರೀಯ ಸ ಕ್ರೇತವ್ಯಃ|
ಆಗ ಯೇಸು ಅವರಿಗೆ, “ಆದರೆ ಈಗ ಹಣದ ಚೀಲ ಇದ್ದವನು ಅದನ್ನು ತೆಗೆದುಕೊಳ್ಳಲಿ. ಅದರಂತೆಯೇ ಪ್ರಯಾಣದ ಚೀಲ ಇದ್ದವನು ಅದನ್ನು ತೆಗೆದುಕೊಳ್ಳಲಿ. ಖಡ್ಗಯಿಲ್ಲದವನು ತನ್ನ ಬಟ್ಟೆಯನ್ನು ಮಾರಿ ಅದನ್ನು ಕೊಂಡುಕೊಳ್ಳಲಿ.
37 ಯತೋ ಯುಷ್ಮಾನಹಂ ವದಾಮಿ, ಅಪರಾಧಿಜನೈಃ ಸಾರ್ದ್ಧಂ ಗಣಿತಃ ಸ ಭವಿಷ್ಯತಿ| ಇದಂ ಯಚ್ಛಾಸ್ತ್ರೀಯಂ ವಚನಂ ಲಿಖಿತಮಸ್ತಿ ತನ್ಮಯಿ ಫಲಿಷ್ಯತಿ ಯತೋ ಮಮ ಸಮ್ಬನ್ಧೀಯಂ ಸರ್ವ್ವಂ ಸೇತ್ಸ್ಯತಿ|
ಏಕೆಂದರೆ, ‘ಆತನು ಪಾತಕರಲ್ಲಿ ಒಬ್ಬನಂತೆ ಎಣಿಸಿಕೊಂಡನು,’ ಎಂಬುದಾಗಿ ಪವಿತ್ರ ವೇದದಲ್ಲಿ ಬರೆದಿರುವುದೆಲ್ಲವೂ ನೆರವೇರಬೇಕು ಎಂದು ನಾನು ನಿಮಗೆ ಹೇಳುತ್ತೇನೆ. ಹೌದು, ನನ್ನ ವಿಷಯವಾಗಿ ಬರೆದದ್ದು ನೆರವೇರಲಿದೆ,” ಎಂದರು.
38 ತದಾ ತೇ ಪ್ರೋಚುಃ ಪ್ರಭೋ ಪಶ್ಯ ಇಮೌ ಕೃಪಾಣೌ| ತತಃ ಸೋವದದ್ ಏತೌ ಯಥೇಷ್ಟೌ|
ಶಿಷ್ಯರು, “ಕರ್ತದೇವರೇ, ಇಗೋ ಇಲ್ಲಿ ಎರಡು ಖಡ್ಗಗಳಿವೆ,” ಎಂದರು. ಅದಕ್ಕೆ ಯೇಸು ಅವರಿಗೆ, “ಅಷ್ಟು ಸಾಕು,” ಎಂದರು.
39 ಅಥ ಸ ತಸ್ಮಾದ್ವಹಿ ರ್ಗತ್ವಾ ಸ್ವಾಚಾರಾನುಸಾರೇಣ ಜೈತುನನಾಮಾದ್ರಿಂ ಜಗಾಮ ಶಿಷ್ಯಾಶ್ಚ ತತ್ಪಶ್ಚಾದ್ ಯಯುಃ|
ಯೇಸು ಹೊರಗೆ ಬಂದು ತಮ್ಮ ವಾಡಿಕೆಯಂತೆ ಓಲಿವ್ ಗುಡ್ಡಕ್ಕೆ ಹೋದರು. ಯೇಸುವಿನ ಶಿಷ್ಯರೂ ಅವರನ್ನು ಹಿಂಬಾಲಿಸಿದರು.
40 ತತ್ರೋಪಸ್ಥಾಯ ಸ ತಾನುವಾಚ, ಯಥಾ ಪರೀಕ್ಷಾಯಾಂ ನ ಪತಥ ತದರ್ಥಂ ಪ್ರಾರ್ಥಯಧ್ವಂ|
ಯೇಸು ಆ ಸ್ಥಳದಲ್ಲಿದ್ದಾಗ ಅವರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ,” ಎಂದರು.
41 ಪಶ್ಚಾತ್ ಸ ತಸ್ಮಾದ್ ಏಕಶರಕ್ಷೇಪಾದ್ ಬಹಿ ರ್ಗತ್ವಾ ಜಾನುನೀ ಪಾತಯಿತ್ವಾ ಏತತ್ ಪ್ರಾರ್ಥಯಾಞ್ಚಕ್ರೇ,
ಯೇಸು ಅವರಿಂದ ಒಂದು ಕಲ್ಲೆಸೆಯುವಷ್ಟು ದೂರಹೋಗಿ ಮೊಣಕಾಲೂರಿ,
42 ಹೇ ಪಿತ ರ್ಯದಿ ಭವಾನ್ ಸಮ್ಮನ್ಯತೇ ತರ್ಹಿ ಕಂಸಮೇನಂ ಮಮಾನ್ತಿಕಾದ್ ದೂರಯ ಕಿನ್ತು ಮದಿಚ್ಛಾನುರೂಪಂ ನ ತ್ವದಿಚ್ಛಾನುರೂಪಂ ಭವತು|
“ತಂದೆಯೇ, ನಿಮ್ಮ ಚಿತ್ತವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸಿ. ಆದರೂ ನನ್ನ ಚಿತ್ತವಲ್ಲ ನಿಮ್ಮ ಚಿತ್ತದಂತೆಯೇ ಆಗಲಿ,” ಎಂದು ಪ್ರಾರ್ಥಿಸಿದರು.
43 ತದಾ ತಸ್ಮೈ ಶಕ್ತಿಂ ದಾತುಂ ಸ್ವರ್ಗೀಯದೂತೋ ದರ್ಶನಂ ದದೌ|
ಆಗ ಪರಲೋಕದಿಂದ ಒಬ್ಬ ದೇವದೂತನು ಯೇಸುವಿಗೆ ಕಾಣಿಸಿಕೊಂಡು, ಅವರನ್ನು ಬಲಪಡಿಸುತ್ತಾ ಇದ್ದನು.
44 ಪಶ್ಚಾತ್ ಸೋತ್ಯನ್ತಂ ಯಾತನಯಾ ವ್ಯಾಕುಲೋ ಭೂತ್ವಾ ಪುನರ್ದೃಢಂ ಪ್ರಾರ್ಥಯಾಞ್ಚಕ್ರೇ, ತಸ್ಮಾದ್ ಬೃಹಚ್ಛೋಣಿತಬಿನ್ದವ ಇವ ತಸ್ಯ ಸ್ವೇದಬಿನ್ದವಃ ಪೃಥಿವ್ಯಾಂ ಪತಿತುಮಾರೇಭಿರೇ|
ಯೇಸು ವೇದನೆಯಲ್ಲಿದ್ದು ಬಹಳ ಆಸಕ್ತಿಯಿಂದ ಪ್ರಾರ್ಥಿಸಿದರು. ಯೇಸುವಿನ ಬೆವರು ನೆಲಕ್ಕೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳಂತಿದ್ದವು.
45 ಅಥ ಪ್ರಾರ್ಥನಾತ ಉತ್ಥಾಯ ಶಿಷ್ಯಾಣಾಂ ಸಮೀಪಮೇತ್ಯ ತಾನ್ ಮನೋದುಃಖಿನೋ ನಿದ್ರಿತಾನ್ ದೃಷ್ಟ್ವಾವದತ್
ಯೇಸು ಪ್ರಾರ್ಥನೆಮಾಡಿ ಎದ್ದ ಮೇಲೆ ತಮ್ಮ ಶಿಷ್ಯರ ಕಡೆಗೆ ಬಂದು, ಅವರು ದುಃಖದಿಂದ ಬಳಲಿ ನಿದ್ರೆ ಮಾಡುತ್ತಿರುವುದನ್ನು ಕಂಡು ಅವರಿಗೆ,
46 ಕುತೋ ನಿದ್ರಾಥ? ಪರೀಕ್ಷಾಯಾಮ್ ಅಪತನಾರ್ಥಂ ಪ್ರರ್ಥಯಧ್ವಂ|
“ನೀವು ನಿದ್ರೆ ಮಾಡುವುದು ಏಕೆ? ಶೋಧನೆಗೆ ಒಳಗಾಗದಂತೆ ಎದ್ದು ಪ್ರಾರ್ಥಿಸಿರಿ,” ಎಂದರು.
47 ಏತತ್ಕಥಾಯಾಃ ಕಥನಕಾಲೇ ದ್ವಾದಶಶಿಷ್ಯಾಣಾಂ ಮಧ್ಯೇ ಗಣಿತೋ ಯಿಹೂದಾನಾಮಾ ಜನತಾಸಹಿತಸ್ತೇಷಾಮ್ ಅಗ್ರೇ ಚಲಿತ್ವಾ ಯೀಶೋಶ್ಚುಮ್ಬನಾರ್ಥಂ ತದನ್ತಿಕಮ್ ಆಯಯೌ|
ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಜನರ ಗುಂಪು ಕಾಣಿಸಿತು. ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದ ಯೂದನು ಅವರಿಗೆ ಮುಂದಾಳಾಗಿ ಬಂದು, ಮುದ್ದಿಡುವುದಕ್ಕಾಗಿ ಯೇಸುವನ್ನು ಸಮೀಪಿಸಿದನು.
48 ತದಾ ಯೀಶುರುವಾಚ, ಹೇ ಯಿಹೂದಾ ಕಿಂ ಚುಮ್ಬನೇನ ಮನುಷ್ಯಪುತ್ರಂ ಪರಕರೇಷು ಸಮರ್ಪಯಸಿ?
ಆಗ ಯೇಸು ಅವನಿಗೆ, “ಯೂದಾ, ಮುದ್ದಿನಿಂದ ಮನುಷ್ಯಪುತ್ರನಾದ ನನಗೆ ದ್ರೋಹಮಾಡುತ್ತೀಯೋ?” ಎಂದರು.
49 ತದಾ ಯದ್ಯದ್ ಘಟಿಷ್ಯತೇ ತದನುಮಾಯ ಸಙ್ಗಿಭಿರುಕ್ತಂ, ಹೇ ಪ್ರಭೋ ವಯಂ ಕಿ ಖಙ್ಗೇನ ಘಾತಯಿಷ್ಯಾಮಃ?
ಯೇಸುವಿನ ಸುತ್ತಲಿದ್ದ ಶಿಷ್ಯರು ಮುಂದೆ ಸಂಭವಿಸುವುದನ್ನು ಅರಿತು ಯೇಸುವಿಗೆ, “ಕರ್ತದೇವರೇ, ನಾವು ಖಡ್ಗದಿಂದ ಹೊಡೆಯೋಣವೋ?” ಎಂದು ಕೇಳಿದರು.
50 ತತ ಏಕಃ ಕರವಾಲೇನಾಹತ್ಯ ಪ್ರಧಾನಯಾಜಕಸ್ಯ ದಾಸಸ್ಯ ದಕ್ಷಿಣಂ ಕರ್ಣಂ ಚಿಚ್ಛೇದ|
ಅವರಲ್ಲಿ ಒಬ್ಬನು ಮಹಾಯಾಜಕನ ಆಳನ್ನು ಹೊಡೆದು, ಅವನ ಬಲಗಿವಿಯನ್ನು ಕತ್ತರಿಸಿದನು.
51 ಅಧೂನಾ ನಿವರ್ತ್ತಸ್ವ ಇತ್ಯುಕ್ತ್ವಾ ಯೀಶುಸ್ತಸ್ಯ ಶ್ರುತಿಂ ಸ್ಪೃಷ್ಟ್ವಾ ಸ್ವಸ್ಯಂ ಚಕಾರ|
ಆದರೆ ಯೇಸು, “ಸಾಕು ಇಂಥದ್ದು ಬೇಡ!” ಎಂದು ಹೇಳಿ, ಅವನ ಕಿವಿಯನ್ನು ಮುಟ್ಟಿ ಸ್ವಸ್ಥಮಾಡಿದರು.
52 ಪಶ್ಚಾದ್ ಯೀಶುಃ ಸಮೀಪಸ್ಥಾನ್ ಪ್ರಧಾನಯಾಜಕಾನ್ ಮನ್ದಿರಸ್ಯ ಸೇನಾಪತೀನ್ ಪ್ರಾಚೀನಾಂಶ್ಚ ಜಗಾದ, ಯೂಯಂ ಕೃಪಾಣಾನ್ ಯಷ್ಟೀಂಶ್ಚ ಗೃಹೀತ್ವಾ ಮಾಂ ಕಿಂ ಚೋರಂ ಧರ್ತ್ತುಮಾಯಾತಾಃ?
ಆಗ ಯೇಸು ತಮ್ಮ ಬಳಿಗೆ ಬಂದಿದ್ದ ಮುಖ್ಯಯಾಜಕರಿಗೂ ದೇವಾಲಯದ ಕಾವಲಾಧಿಕಾರಿಗಳಿಗೂ ಹಿರಿಯರಿಗೂ, “ದಂಗೆಗಾರನನ್ನು ಹಿಡಿಯುವುದಕ್ಕಾಗಿ ಬಂದ ಹಾಗೆ ಖಡ್ಗಗಳಿಂದಲೂ ದೊಣ್ಣೆಗಳಿಂದಲೂ ನೀವು ಹೊರಟು ಬಂದಿರುವಿರೋ?
53 ಯದಾಹಂ ಯುಷ್ಮಾಭಿಃ ಸಹ ಪ್ರತಿದಿನಂ ಮನ್ದಿರೇಽತಿಷ್ಠಂ ತದಾ ಮಾಂ ಧರ್ತ್ತಂ ನ ಪ್ರವೃತ್ತಾಃ, ಕಿನ್ತ್ವಿದಾನೀಂ ಯುಷ್ಮಾಕಂ ಸಮಯೋನ್ಧಕಾರಸ್ಯ ಚಾಧಿಪತ್ಯಮಸ್ತಿ|
ನಾನು ನಿಮ್ಮ ಸಂಗಡ ಪ್ರತಿದಿನವೂ ದೇವಾಲಯದಲ್ಲಿದ್ದಾಗ, ನೀವು ನನ್ನನ್ನು ಹಿಡಿಯಲಿಲ್ಲ. ಆದರೆ ಇದು ನಿಮ್ಮ ಸಮಯ, ಅಂಧಕಾರ ದೊರೆತನ ಮಾಡುವ ಕಾಲ,” ಎಂದರು.
54 ಅಥ ತೇ ತಂ ಧೃತ್ವಾ ಮಹಾಯಾಜಕಸ್ಯ ನಿವೇಶನಂ ನಿನ್ಯುಃ| ತತಃ ಪಿತರೋ ದೂರೇ ದೂರೇ ಪಶ್ಚಾದಿತ್ವಾ
ಆಗ ಅವರು ಯೇಸುವನ್ನು ಬಂಧಿಸಿ, ಮಹಾಯಾಜಕನ ಭವನಕ್ಕೆ ಕರೆದುಕೊಂಡು ಬಂದರು. ಪೇತ್ರನೋ ದೂರದಿಂದ ಹಿಂಬಾಲಿಸಿದನು.
55 ಬೃಹತ್ಕೋಷ್ಠಸ್ಯ ಮಧ್ಯೇ ಯತ್ರಾಗ್ನಿಂ ಜ್ವಾಲಯಿತ್ವಾ ಲೋಕಾಃ ಸಮೇತ್ಯೋಪವಿಷ್ಟಾಸ್ತತ್ರ ತೈಃ ಸಾರ್ದ್ಧಮ್ ಉಪವಿವೇಶ|
ಅವರು ಭವನದ ಹೊರಾಂಗಣದ ನಡುವೆ ಬೆಂಕಿಮಾಡಿ, ಅದರ ಸುತ್ತಲೂ ಒಟ್ಟಾಗಿ ಕುಳಿತುಕೊಂಡಾಗ ಪೇತ್ರನೂ ಅವರ ಸಂಗಡ ಸೇರಿ ಕುಳಿತುಕೊಂಡನು.
56 ಅಥ ವಹ್ನಿಸನ್ನಿಧೌ ಸಮುಪವೇಶಕಾಲೇ ಕಾಚಿದ್ದಾಸೀ ಮನೋ ನಿವಿಶ್ಯ ತಂ ನಿರೀಕ್ಷ್ಯಾವದತ್ ಪುಮಾನಯಂ ತಸ್ಯ ಸಙ್ಗೇಽಸ್ಥಾತ್|
ಆದರೆ ಒಬ್ಬ ದಾಸಿಯು ಬೆಂಕಿಯ ಬಳಿಯಲ್ಲಿ ಕುಳಿತುಕೊಂಡಿದ್ದ ಪೇತ್ರನನ್ನು ದೃಷ್ಟಿಸಿ ನೋಡಿ, “ಈ ಮನುಷ್ಯನು ಸಹ ಯೇಸುವಿನ ಸಂಗಡ ಇದ್ದವನು,” ಎಂದಳು.
57 ಕಿನ್ತು ಸ ತದ್ ಅಪಹ್ನುತ್ಯಾವಾದೀತ್ ಹೇ ನಾರಿ ತಮಹಂ ನ ಪರಿಚಿನೋಮಿ|
ಆದರೆ ಪೇತ್ರನು ಅಲ್ಲಗಳೆದು, “ಅಮ್ಮಾ, ನಾನು ಯೇಸುವನ್ನು ಅರಿಯೆನು,” ಎಂದನು.
58 ಕ್ಷಣಾನ್ತರೇಽನ್ಯಜನಸ್ತಂ ದೃಷ್ಟ್ವಾಬ್ರವೀತ್ ತ್ವಮಪಿ ತೇಷಾಂ ನಿಕರಸ್ಯೈಕಜನೋಸಿ| ಪಿತರಃ ಪ್ರತ್ಯುವಾಚ ಹೇ ನರ ನಾಹಮಸ್ಮಿ|
ಸ್ವಲ್ಪ ಸಮಯದ ಮೇಲೆ ಮತ್ತೊಬ್ಬನು ಪೇತ್ರನನ್ನು ಕಂಡು, “ನೀನು ಸಹ ಅವರಲ್ಲಿ ಒಬ್ಬನು,” ಎಂದನು. ಅದಕ್ಕೆ ಪೇತ್ರನು, “ಇಲ್ಲಪ್ಪ, ನಾನಲ್ಲ,” ಎಂದನು.
59 ತತಃ ಸಾರ್ದ್ಧದಣ್ಡದ್ವಯಾತ್ ಪರಂ ಪುನರನ್ಯೋ ಜನೋ ನಿಶ್ಚಿತ್ಯ ಬಭಾಷೇ, ಏಷ ತಸ್ಯ ಸಙ್ಗೀತಿ ಸತ್ಯಂ ಯತೋಯಂ ಗಾಲೀಲೀಯೋ ಲೋಕಃ|
ಹೆಚ್ಚು ಕಡಿಮೆ ಒಂದು ತಾಸು ಕಳೆದನಂತರ ಮತ್ತೊಬ್ಬನು, “ನಿಜವಾಗಿಯೂ ಇವನು ಸಹ ಯೇಸುವಿನೊಂದಿಗೆ ಇದ್ದವನು. ಏಕೆಂದರೆ ಇವನು ಗಲಿಲಾಯದವನೇ,” ಎಂದನು.
60 ತದಾ ಪಿತರ ಉವಾಚ ಹೇ ನರ ತ್ವಂ ಯದ್ ವದಮಿ ತದಹಂ ಬೋದ್ಧುಂ ನ ಶಕ್ನೋಮಿ, ಇತಿ ವಾಕ್ಯೇ ಕಥಿತಮಾತ್ರೇ ಕುಕ್ಕುಟೋ ರುರಾವ|
ಆದರೆ ಪೇತ್ರನು, “ಅಯ್ಯಾ, ನೀನು ಏನು ಹೇಳುತ್ತೀಯೋ ನನಗೆ ಅರ್ಥವಾಗುತ್ತಾಯಿಲ್ಲ,” ಎಂದನು. ಹೀಗೆ ಅವನು ಇನ್ನೂ ಮಾತನಾಡುತ್ತಿರುವಾಗಲೇ ಹುಂಜ ಕೂಗಿತು.
61 ತದಾ ಪ್ರಭುಣಾ ವ್ಯಾಧುಟ್ಯ ಪಿತರೇ ನಿರೀಕ್ಷಿತೇ ಕೃಕವಾಕುರವಾತ್ ಪೂರ್ವ್ವಂ ಮಾಂ ತ್ರಿರಪಹ್ನೋಷ್ಯಸೇ ಇತಿ ಪೂರ್ವ್ವೋಕ್ತಂ ತಸ್ಯ ವಾಕ್ಯಂ ಪಿತರಃ ಸ್ಮೃತ್ವಾ
ಆಗ ಕರ್ತದೇವರು ಹಿಂದಿರುಗಿ ಪೇತ್ರನ ಕಡೆಗೆ ದಿಟ್ಟಿಸಿ ನೋಡಿದರು. “ಹುಂಜ ಕೂಗುವುದಕ್ಕಿಂತ ಮುಂಚಿತವಾಗಿ ಮೂರು ಸಾರಿ ನೀನು ನನ್ನನ್ನು ನಿರಾಕರಿಸುವೆ,” ಎಂದು ಕರ್ತದೇವರು ತನಗೆ ಹೇಳಿದ್ದ ಮಾತನ್ನು ಪೇತ್ರನು ಜ್ಞಾಪಕಮಾಡಿಕೊಂಡು
62 ಬಹಿರ್ಗತ್ವಾ ಮಹಾಖೇದೇನ ಚಕ್ರನ್ದ|
ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.
63 ತದಾ ಯೈ ರ್ಯೀಶುರ್ಧೃತಸ್ತೇ ತಮುಪಹಸ್ಯ ಪ್ರಹರ್ತ್ತುಮಾರೇಭಿರೇ|
ಯೇಸುವನ್ನು ಕಾಯುತ್ತಿದ್ದ ಜನರು, ಹಾಸ್ಯಮಾಡಿ ಅವರನ್ನು ಹೊಡೆದರು.
64 ವಸ್ತ್ರೇಣ ತಸ್ಯ ದೃಶೌ ಬದ್ಧ್ವಾ ಕಪೋಲೇ ಚಪೇಟಾಘಾತಂ ಕೃತ್ವಾ ಪಪ್ರಚ್ಛುಃ, ಕಸ್ತೇ ಕಪೋಲೇ ಚಪೇಟಾಘಾತಂ ಕೃತವಾನ? ಗಣಯಿತ್ವಾ ತದ್ ವದ|
ಇದಲ್ಲದೆ ಅವರು ಯೇಸುವಿನ ಕಣ್ಣಿಗೆ ಬಟ್ಟೆ ಕಟ್ಟಿ, ಅವರ ಮುಖದ ಮೇಲೆ ಹೊಡೆದು ಯೇಸುವಿಗೆ, “ನಿನ್ನನ್ನು ಹೊಡೆದವರು ಯಾರು? ಪ್ರವಾದನೆ ಹೇಳು,” ಎಂದರು.
65 ತದನ್ಯತ್ ತದ್ವಿರುದ್ಧಂ ಬಹುನಿನ್ದಾವಾಕ್ಯಂ ವಕ್ತುಮಾರೇಭಿರೇ|
ಅವರು ಯೇಸುವಿಗೆ ವಿರೋಧವಾಗಿ ಅನೇಕ ದೂಷಣೆಯ ಮಾತುಗಳನ್ನಾಡಿದರು.
66 ಅಥ ಪ್ರಭಾತೇ ಸತಿ ಲೋಕಪ್ರಾಞ್ಚಃ ಪ್ರಧಾನಯಾಜಕಾ ಅಧ್ಯಾಪಕಾಶ್ಚ ಸಭಾಂ ಕೃತ್ವಾ ಮಧ್ಯೇಸಭಂ ಯೀಶುಮಾನೀಯ ಪಪ್ರಚ್ಛುಃ, ತ್ವಮ್ ಅಭಿಷಿಕತೋಸಿ ನ ವಾಸ್ಮಾನ್ ವದ|
ಬೆಳಗಾದ ಕೂಡಲೇ ಜನರ ಹಿರಿಯರೂ ಮುಖ್ಯಯಾಜಕರೂ ನಿಯಮ ಬೋಧಕರೂ ಒಟ್ಟಾಗಿ ಬಂದು ಯೇಸುವನ್ನು ತಮ್ಮ ಆಲೋಚನಾ ಸಭೆಗೆ ಸಾಗಿಸಿಕೊಂಡು ಹೋಗಿ,
67 ಸ ಪ್ರತ್ಯುವಾಚ, ಮಯಾ ತಸ್ಮಿನ್ನುಕ್ತೇಽಪಿ ಯೂಯಂ ನ ವಿಶ್ವಸಿಷ್ಯಥ|
“ನೀನು ಆ ಕ್ರಿಸ್ತನೋ? ನಮಗೆ ಹೇಳು,” ಎಂದರು. ಯೇಸು ಅವರಿಗೆ, “ನಾನು ನಿಮಗೆ ಹೇಳಿದರೂ ನೀವು ನಂಬುವುದಿಲ್ಲ.
68 ಕಸ್ಮಿಂಶ್ಚಿದ್ವಾಕ್ಯೇ ಯುಷ್ಮಾನ್ ಪೃಷ್ಟೇಽಪಿ ಮಾಂ ನ ತದುತ್ತರಂ ವಕ್ಷ್ಯಥ ನ ಮಾಂ ತ್ಯಕ್ಷ್ಯಥ ಚ|
ನಾನು ನಿಮ್ಮನ್ನು ಕೇಳಿದರೂ ನೀವು ಉತ್ತರ ಕೊಡುವುದಿಲ್ಲ.
69 ಕಿನ್ತ್ವಿತಃ ಪರಂ ಮನುಜಸುತಃ ಸರ್ವ್ವಶಕ್ತಿಮತ ಈಶ್ವರಸ್ಯ ದಕ್ಷಿಣೇ ಪಾರ್ಶ್ವೇ ಸಮುಪವೇಕ್ಷ್ಯತಿ|
ಆದರೆ ಇಂದಿನಿಂದ ಮನುಷ್ಯಪುತ್ರನಾದ ನಾನು ಸರ್ವಶಕ್ತರಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡಿರುವೆನು,” ಎಂದರು.
70 ತತಸ್ತೇ ಪಪ್ರಚ್ಛುಃ, ರ್ತಿಹ ತ್ವಮೀಶ್ವರಸ್ಯ ಪುತ್ರಃ? ಸ ಕಥಯಾಮಾಸ, ಯೂಯಂ ಯಥಾರ್ಥಂ ವದಥ ಸ ಏವಾಹಂ|
ಆಗ ಅವರೆಲ್ಲರೂ, “ಹಾಗಾದರೆ ನೀನು ದೇವರ ಪುತ್ರನೋ?” ಎಂದು ಕೇಳಿದರು. ಅದಕ್ಕೆ ಯೇಸು ಅವರಿಗೆ, “ನಾನೇ ಆತನು ಎಂದು ನೀವೇ ಹೇಳುತ್ತಿದ್ದೀರಿ,” ಎಂದು ಉತ್ತರಕೊಟ್ಟರು.
71 ತದಾ ತೇ ಸರ್ವ್ವೇ ಕಥಯಾಮಾಸುಃ, ರ್ತಿಹ ಸಾಕ್ಷ್ಯೇಽನ್ಸಸ್ಮಿನ್ ಅಸ್ಮಾಕಂ ಕಿಂ ಪ್ರಯೋಜನಂ? ಅಸ್ಯ ಸ್ವಮುಖಾದೇವ ಸಾಕ್ಷ್ಯಂ ಪ್ರಾಪ್ತಮ್|
ಆಗ ಅವರು, “ನಮಗೆ ಇನ್ನೇನು ಸಾಕ್ಷಿ ಬೇಕು? ನಾವೇ ಈತನ ಬಾಯಿಂದ ಕೇಳಿದ್ದೇವಲ್ಲಾ?” ಎಂದರು.

< ಲೂಕಃ 22 >