< लूकः 18 >

1 अपरञ्च लोकैरक्लान्तै र्निरन्तरं प्रार्थयितव्यम् इत्याशयेन यीशुना दृष्टान्त एकः कथितः।
ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತಮ್ಮ ಶಿಷ್ಯರಿಗೆ ಒಂದು ಸಾಮ್ಯವನ್ನು ಹೇಳಿದರು.
2 कुत्रचिन्नगरे कश्चित् प्राड्विवाक आसीत् स ईश्वरान्नाबिभेत् मानुषांश्च नामन्यत।
“ಒಂದು ಪಟ್ಟಣದಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೂ ಭಯಪಡುತ್ತಿರಲಿಲ್ಲ ಮನುಷ್ಯರಿಗೂ ಲಕ್ಷ್ಯಕೊಡುತ್ತಿರಲಿಲ್ಲ.
3 अथ तत्पुरवासिनी काचिद्विधवा तत्समीपमेत्य विवादिना सह मम विवादं परिष्कुर्व्विति निवेदयामास।
ಅದೇ ಪಟ್ಟಣದಲ್ಲಿ ಒಬ್ಬ ವಿಧವೆಯಿದ್ದಳು. ಆಕೆ ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿಯ ಎದುರಾಗಿ ನನಗೆ ನ್ಯಾಯ ದೊರಕಿಸಿಕೊಡು,’ ಎಂದು ಕೇಳಿಕೊಳ್ಳುತ್ತಿದ್ದಳು.
4 ततः स प्राड्विवाकः कियद्दिनानि न तदङ्गीकृतवान् पश्चाच्चित्ते चिन्तयामास, यद्यपीश्वरान्न बिभेमि मनुष्यानपि न मन्ये
“ಅವನು ಸ್ವಲ್ಪಕಾಲ ಆಕೆಗೆ ಗಮನಕೊಡಲಿಲ್ಲ. ತರುವಾಯ ಅವನು ತನ್ನೊಳಗೆ, ‘ನಾನು ದೇವರಿಗೆ ಭಯಪಡುವುದಿಲ್ಲ ಹಾಗೂ ಮನುಷ್ಯರಿಗೂ ಲಕ್ಷ್ಯಕೊಡುವುದಿಲ್ಲ,
5 तथाप्येषा विधवा मां क्लिश्नाति तस्मादस्या विवादं परिष्करिष्यामि नोचेत् सा सदागत्य मां व्यग्रं करिष्यति।
ಆದರೂ ಈ ವಿಧವೆಯು ನನಗೆ ತೊಂದರೆಕೊಟ್ಟು ಪದೇಪದೇ ನನ್ನ ಬಳಿಗೆ ಬಂದು, ನನ್ನನ್ನು ಕಾಡಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು,’” ಎಂದುಕೊಂಡನು.
6 पश्चात् प्रभुरवदद् असावन्यायप्राड्विवाको यदाह तत्र मनो निधध्वं।
ಅನಂತರ ಕರ್ತದೇವರು, “ಈ ಅನ್ಯಾಯಗಾರನಾದ ನ್ಯಾಯಾಧಿಪತಿಯು ಹೇಳಿಕೊಂಡಿದ್ದನ್ನು ಕೇಳಿರಿ.
7 ईश्वरस्य ये ऽभिरुचितलोका दिवानिशं प्रार्थयन्ते स बहुदिनानि विलम्ब्यापि तेषां विवादान् किं न परिष्करिष्यति?
ದೇವರಾದುಕೊಂಡವರು ದೇವರಿಗೆ ಹಗಲುರಾತ್ರಿ ಮೊರೆಯಿಡುವಾಗ, ದೇವರು ಅವರ ವಿಷಯದಲ್ಲಿ ಅವರಿಗೆ ನ್ಯಾಯವನ್ನು ಕೊಡದೆ ಇರುವರೋ? ದೇವರು ನ್ಯಾಯ ಕೊಡಲು ತಡಮಾಡುವರೋ?
8 युष्मानहं वदामि त्वरया परिष्करिष्यति, किन्तु यदा मनुष्यपुत्र आगमिष्यति तदा पृथिव्यां किमीदृशं विश्वासं प्राप्स्यति?
ದೇವರು ಬೇಗನೇ ಅವರಿಗೆ ನ್ಯಾಯತೀರಿಸುವರೆಂದು, ನಾನು ನಿಮಗೆ ಹೇಳುತ್ತೇನೆ. ಆದರೂ, ಮನುಷ್ಯಪುತ್ರನಾದ ನಾನು ಬಂದಾಗ ಭೂಮಿಯ ಮೇಲೆ ವಿಶ್ವಾಸವನ್ನು ಕಾಣುವೆನೋ?” ಎಂದರು.
9 ये स्वान् धार्म्मिकान् ज्ञात्वा परान् तुच्छीकुर्व्वन्ति एतादृग्भ्यः, कियद्भ्य इमं दृष्टान्तं कथयामास।
ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸೆಯನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ, ಯೇಸು ಈ ಸಾಮ್ಯವನ್ನು ಹೇಳಿದರು:
10 एकः फिरूश्यपरः करसञ्चायी द्वाविमौ प्रार्थयितुं मन्दिरं गतौ।
“ಇಬ್ಬರು ಪ್ರಾರ್ಥನೆಮಾಡುವುದಕ್ಕೆ ದೇವಾಲಯಕ್ಕೆ ಹೋದರು. ಅವರಲ್ಲಿ ಒಬ್ಬನು ಫರಿಸಾಯನು ಮತ್ತೊಬ್ಬನು ಸುಂಕದವನು.
11 ततोऽसौ फिरूश्येकपार्श्वे तिष्ठन् हे ईश्वर अहमन्यलोकवत् लोठयितान्यायी पारदारिकश्च न भवामि अस्य करसञ्चायिनस्तुल्यश्च न, तस्मात्त्वां धन्यं वदामि।
ಫರಿಸಾಯನು ನಿಂತುಕೊಂಡು: ‘ದೇವರೇ, ಸುಲಿಗೆ ಮಾಡುವವರು, ಅನೀತಿವಂತರು, ವ್ಯಭಿಚಾರಿಗಳು ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ನಾನಲ್ಲ. ಆದ್ದರಿಂದ ನಾನು ನಿನಗೆ ಸ್ತೋತ್ರ ಮಾಡುತ್ತೇನೆ.
12 सप्तसु दिनेषु दिनद्वयमुपवसामि सर्व्वसम्पत्ते र्दशमांशं ददामि च, एतत्कथां कथयन् प्रार्थयामास।
ನಾನು ವಾರಕ್ಕೆ ಎರಡು ಸಾರಿ ಉಪವಾಸ ಮಾಡುತ್ತೇನೆ. ನನಗಿರುವ ಎಲ್ಲವುಗಳಲ್ಲಿ ದಶಾಂಶ ಕೊಡುತ್ತೇನೆ,’ ಎಂದು ಹೇಳಿ ತನಗೆ ತಾನೇ ಪ್ರಾರ್ಥಿಸಿದನು.
13 किन्तु स करसञ्चायि दूरे तिष्ठन् स्वर्गं द्रष्टुं नेच्छन् वक्षसि कराघातं कुर्व्वन् हे ईश्वर पापिष्ठं मां दयस्व, इत्थं प्रार्थयामास।
“ಆದರೆ ಸುಂಕದವನು ದೂರದಲ್ಲಿ ನಿಂತು, ಆಕಾಶದ ಕಡೆಗೆ ಕಣ್ಣೆತ್ತಿ ನೋಡುವುದಕ್ಕೂ ಧೈರ್ಯಗೊಳ್ಳದೇ ತನ್ನ ಎದೆಯನ್ನು ಬಡಿದುಕೊಳ್ಳುತ್ತಾ, ‘ದೇವರೇ ಪಾಪಿಯಾದವನು ನಾನೇ ನನ್ನನ್ನು ಕರುಣಿಸು,’ ಎಂದು ಪ್ರಾರ್ಥಿಸಿದನು.
14 युष्मानहं वदामि, तयोर्द्वयो र्मध्ये केवलः करसञ्चायी पुण्यवत्त्वेन गणितो निजगृहं जगाम, यतो यः कश्चित् स्वमुन्नमयति स नामयिष्यते किन्तु यः कश्चित् स्वं नमयति स उन्नमयिष्यते।
“ನಾನು ನಿಮಗೆ ಹೇಳುತ್ತೇನೆ, ಅವನಲ್ಲ, ಇವನೇ ನೀತಿವಂತನೆಂಬ ನಿರ್ಣಯ ಪಡೆದವನಾಗಿ ತನ್ನ ಮನೆಗೆ ಹೋದನು. ಏಕೆಂದರೆ, ಯಾರಾದರೂ ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವರೋ ಅವರು ತಗ್ಗಿಸಲಾಗುವರು ಮತ್ತು ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಹೆಚ್ಚಿಸಲಾಗುವರು,” ಎಂದರು.
15 अथ शिशूनां गात्रस्पर्शार्थं लोकास्तान् तस्य समीपमानिन्युः शिष्यास्तद् दृष्ट्वानेतृन् तर्जयामासुः,
ಚಿಕ್ಕಮಕ್ಕಳನ್ನು ಯೇಸು ಮುಟ್ಟುವಂತೆ ಕೆಲವರು ಚಿಕ್ಕಮಕ್ಕಳನ್ನು ಅವರ ಬಳಿಗೆ ತಂದರು ಆಗ ಅವರ ಶಿಷ್ಯರು ಇದನ್ನು ಕಂಡು, ಜನರನ್ನು ಗದರಿಸಿದರು.
16 किन्तु यीशुस्तानाहूय जगाद, मन्निकटम् आगन्तुं शिशून् अनुजानीध्वं तांश्च मा वारयत; यत ईश्वरराज्याधिकारिण एषां सदृशाः।
ಆದರೆ ಯೇಸುವೋ ಚಿಕ್ಕಮಕ್ಕಳನ್ನು ತಮ್ಮ ಹತ್ತಿರಕ್ಕೆ ಆಹ್ವಾನಿಸಿ ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ. ಅವುಗಳಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಇಂಥವರದೇ.
17 अहं युष्मान् यथार्थं वदामि, यो जनः शिशोः सदृशो भूत्वा ईश्वरराज्यं न गृह्लाति स केनापि प्रकारेण तत् प्रवेष्टुं न शक्नोति।
ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾರಾದರೂ ಚಿಕ್ಕಮಗುವಿನಂತೆ ದೇವರ ರಾಜ್ಯವನ್ನು ಸ್ವೀಕರಿಸದಿದ್ದರೆ, ಅವರು ಅದರೊಳಗೆ ಸೇರುವುದೇ ಇಲ್ಲ,” ಎಂದರು.
18 अपरम् एकोधिपतिस्तं पप्रच्छ, हे परमगुरो, अनन्तायुषः प्राप्तये मया किं कर्त्तव्यं? (aiōnios g166)
ಒಬ್ಬ ಅಧಿಕಾರಿಯು ಯೇಸುವಿಗೆ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು. (aiōnios g166)
19 यीशुरुवाच, मां कुतः परमं वदसि? ईश्वरं विना कोपि परमो न भवति।
ಅದಕ್ಕೆ ಯೇಸು ಅವನಿಗೆ, “ನೀನು ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತಿ? ದೇವರೊಬ್ಬರೇ ಹೊರತು ಬೇರೆ ಯಾರೂ ಒಳ್ಳೆಯವರಲ್ಲ.
20 परदारान् मा गच्छ, नरं मा जहि, मा चोरय, मिथ्यासाक्ष्यं मा देहि, मातरं पितरञ्च संमन्यस्व, एता या आज्ञाः सन्ति तास्त्वं जानासि।
‘ವ್ಯಭಿಚಾರ ಮಾಡಬಾರದು, ನರಹತ್ಯೆ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,’ ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆಯಲ್ಲಾ,” ಎಂದರು.
21 तदा स उवाच, बाल्यकालात् सर्व्वा एता आचरामि।
ಅದಕ್ಕವನು, “ನನ್ನ ಬಾಲ್ಯದಿಂದಲೇ ನಾನು ಇವೆಲ್ಲವನ್ನೂ ಕೈಕೊಂಡಿದ್ದೇನೆ,” ಎಂದು ಹೇಳಿದನು.
22 इति कथां श्रुत्वा यीशुस्तमवदत्, तथापि तवैकं कर्म्म न्यूनमास्ते, निजं सर्व्वस्वं विक्रीय दरिद्रेभ्यो वितर, तस्मात् स्वर्गे धनं प्राप्स्यसि; तत आगत्य ममानुगामी भव।
ಯೇಸು ಇವುಗಳನ್ನು ಕೇಳಿ ಅವನಿಗೆ, “ಆದರೂ ನಿನಗೆ ಒಂದು ಕೊರತೆ ಇದೆ. ನೀನು ಹೋಗಿ ನಿನಗೆ ಇರುವುದೆಲ್ಲವನ್ನು ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು.
23 किन्त्वेतां कथां श्रुत्वा सोधिपतिः शुशोच, यतस्तस्य बहुधनमासीत्।
ಅವನು ಇದನ್ನು ಕೇಳಿ, ಬಹಳ ದುಃಖವುಳ್ಳವನಾದನು. ಏಕೆಂದರೆ ಅವನು ಬಹಳ ಸಿರಿವಂತನಾಗಿದ್ದನು.
24 तदा यीशुस्तमतिशोकान्वितं दृष्ट्वा जगाद, धनवताम् ईश्वरराज्यप्रवेशः कीदृग् दुष्करः।
ಅವನು ಬಹಳ ವ್ಯಥೆಗೊಂಡದ್ದನ್ನು ಯೇಸು ಕಂಡು, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ!
25 ईश्वरराज्ये धनिनः प्रवेशात् सूचेश्छिद्रेण महाङ्गस्य गमनागमने सुकरे।
ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ,” ಎಂದು ಹೇಳಿದರು.
26 श्रोतारः पप्रच्छुस्तर्हि केन परित्राणं प्राप्स्यते?
ಇದನ್ನು ಕೇಳಿದವರು, “ಹಾಗಾದರೆ ಯಾರು ರಕ್ಷಣೆ ಹೊಂದುವವರು?” ಎಂದರು.
27 स उक्तवान्, यन् मानुषेणाशक्यं तद् ईश्वरेण शक्यं।
ಅದಕ್ಕೆ ಯೇಸು, “ಮನುಷ್ಯರಿಗೆ ಅಸಾಧ್ಯವಾದವುಗಳು ದೇವರಿಗೆ ಸಾಧ್ಯವಾಗಿವೆ,” ಎಂದು ಹೇಳಿದರು.
28 तदा पितर उवाच, पश्य वयं सर्व्वस्वं परित्यज्य तव पश्चाद्गामिनोऽभवाम।
ಆಗ ಪೇತ್ರನು, “ಇಗೋ, ನಾವು ಎಲ್ಲವನ್ನೂ ಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ,” ಎಂದನು.
29 ततः स उवाच, युष्मानहं यथार्थं वदामि, ईश्वरराज्यार्थं गृहं पितरौ भ्रातृगणं जायां सन्तानांश्च त्यक्तवा
ಯೇಸು ಅವರಿಗೆ, “ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಮನೆಯನ್ನಾದರೂ ಹೆಂಡತಿಯನ್ನಾದರೂ ಸಹೋದರರನ್ನಾದರೂ ತಂದೆತಾಯಿಗಳನ್ನಾದರೂ ಮಕ್ಕಳನ್ನಾದರೂ ದೇವರ ರಾಜ್ಯಕ್ಕೋಸ್ಕರ ಬಿಟ್ಟುಬಿಡುವವನು,
30 इह काले ततोऽधिकं परकाले ऽनन्तायुश्च न प्राप्स्यति लोक ईदृशः कोपि नास्ति। (aiōn g165, aiōnios g166)
ಈ ಕಾಲದಲ್ಲಿ ಅತ್ಯಧಿಕವಾದವುಗಳನ್ನೂ ಬರುವ ಕಾಲದಲ್ಲಿ ನಿತ್ಯಜೀವವನ್ನೂ ಹೊಂದುವನು,” ಎಂದರು. (aiōn g165, aiōnios g166)
31 अनन्तरं स द्वादशशिष्यानाहूय बभाषे, पश्यत वयं यिरूशालम्नगरं यामः, तस्मात् मनुष्यपुत्रे भविष्यद्वादिभिरुक्तं यदस्ति तदनुरूपं तं प्रति घटिष्यते;
ಯೇಸು ಹನ್ನೆರಡು ಮಂದಿಯನ್ನು ಹತ್ತಿರಕ್ಕೆ ಕರೆದು ಅವರಿಗೆ, “ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ, ಮನುಷ್ಯಪುತ್ರನಾದ ನನ್ನ ವಿಷಯದಲ್ಲಿ ಪ್ರವಾದಿಗಳಿಂದ ಬರೆದಿರುವುದೆಲ್ಲವೂ ನೆರವೇರಬೇಕು.
32 वस्तुतस्तु सोऽन्यदेशीयानां हस्तेषु समर्पयिष्यते, ते तमुपहसिष्यन्ति, अन्यायमाचरिष्यन्ति तद्वपुषि निष्ठीवं निक्षेप्स्यन्ति, कशाभिः प्रहृत्य तं हनिष्यन्ति च,
ನಾನು ಯೆಹೂದ್ಯರಲ್ಲದವರ ಕೈಗೆ ಸೆರೆಯಾಗುವೆನು. ಅವರು ನನ್ನನ್ನು ಹಾಸ್ಯಮಾಡಿ, ನನಗೆ ಅವಮಾನ ಮಾಡಿ, ನನ್ನ ಮೇಲೆ ಉಗುಳುವರು.
33 किन्तु तृतीयदिने स श्मशानाद् उत्थास्यति।
ಇದಲ್ಲದೆ ಅವರು ನನ್ನನ್ನು ಕೊರಡೆಗಳಿಂದ ಹೊಡೆದು, ಕೊಂದುಹಾಕುವರು. ಆದರೆ ನಾನು ಮೂರನೆಯ ದಿನ ಜೀವಿತನಾಗಿ ಎದ್ದು ಬರುವೆನು,” ಎಂದರು.
34 एतस्याः कथाया अभिप्रायं किञ्चिदपि ते बोद्धुं न शेकुः तेषां निकटेऽस्पष्टतवात् तस्यैतासां कथानाम् आशयं ते ज्ञातुं न शेकुश्च।
ಆದರೆ ಶಿಷ್ಯರಿಗೆ ಇವುಗಳಲ್ಲಿ ಒಂದೂ ಅರ್ಥವಾಗಲಿಲ್ಲ. ಈ ಮಾತುಗಳು ಅವರಿಗೆ ಮರೆಯಾಗಿದ್ದುದರಿಂದ, ಯೇಸು ಹೇಳಿದವುಗಳನ್ನು ಅವರು ತಿಳಿದುಕೊಳ್ಳಲಿಲ್ಲ.
35 अथ तस्मिन् यिरीहोः पुरस्यान्तिकं प्राप्ते कश्चिदन्धः पथः पार्श्व उपविश्य भिक्षाम् अकरोत्
ಯೇಸು ಯೆರಿಕೋವಿನ ಸಮೀಪಕ್ಕೆ ಬಂದಾಗ, ಒಬ್ಬ ಕುರುಡನು ದಾರಿಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು.
36 स लोकसमूहस्य गमनशब्दं श्रुत्वा तत्कारणं पृष्टवान्।
ಜನಸಮೂಹವು ಹಾದು ಹೋಗುವುದನ್ನು ಇವನು ಕೇಳಿಸಿಕೊಂಡು, ಅದೇನೆಂದು ವಿಚಾರಿಸಿದನು.
37 नासरतीययीशुर्यातीति लोकैरुक्ते स उच्चैर्वक्तुमारेभे,
“ನಜರೇತಿನ ಯೇಸು ಹಾದು ಹೋಗುತ್ತಿದ್ದಾರೆ,” ಎಂದು ಜನರು ಅವನಿಗೆ ಹೇಳಿದರು.
38 हे दायूदः सन्तान यीशो मां दयस्व।
ಆಗ ಅವನು, “ಯೇಸುವೇ, ದಾವೀದನ ಪುತ್ರನೇ, ನನ್ನನ್ನು ಕರುಣಿಸಿ!” ಎಂದು ಗಟ್ಟಿಯಾಗಿ ಕೂಗಿಕೊಂಡನು.
39 ततोग्रगामिनस्तं मौनी तिष्ठेति तर्जयामासुः किन्तु स पुनारुवन् उवाच, हे दायूदः सन्तान मां दयस्व।
ಮುಂದೆ ಹೋಗುತ್ತಿದ್ದವರು ಸುಮ್ಮನಿರುವಂತೆ ಅವನನ್ನು ಗದರಿಸಿದರು, ಆದರೂ ಅವನು, “ದಾವೀದನ ಪುತ್ರರೇ, ನನ್ನನ್ನು ಕರುಣಿಸಿ,” ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡನು.
40 तदा यीशुः स्थगितो भूत्वा स्वान्तिके तमानेतुम् आदिदेश।
ಆಗ ಯೇಸು ನಿಂತು ಅವನನ್ನು ತಮ್ಮ ಬಳಿಗೆ ಕರೆತರುವಂತೆ ಅಪ್ಪಣೆಕೊಟ್ಟರು. ಅವನು ಯೇಸುವಿನ ಬಳಿಗೆ ಬಂದಾಗ, ಅವರು ಅವನಿಗೆ,
41 ततः स तस्यान्तिकम् आगमत्, तदा स तं पप्रच्छ, त्वं किमिच्छसि? त्वदर्थमहं किं करिष्यामि? स उक्तवान्, हे प्रभोऽहं द्रष्टुं लभै।
“ನನ್ನಿಂದ ನಿನಗೇನಾಗಬೇಕು?” ಎಂದು ಕೇಳಿದರು. ಅದಕ್ಕವನು, “ಕರ್ತದೇವರೇ, ನನಗೆ ದೃಷ್ಟಿ ಕೊಡಿ,” ಎಂದನು.
42 तदा यीशुरुवाच, दृष्टिशक्तिं गृहाण तव प्रत्ययस्त्वां स्वस्थं कृतवान्।
ಆಗ ಯೇಸು ಅವನಿಗೆ, “ನೀನು ದೃಷ್ಟಿ ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದರು.
43 ततस्तत्क्षणात् तस्य चक्षुषी प्रसन्ने; तस्मात् स ईश्वरं धन्यं वदन् तत्पश्चाद् ययौ, तदालोक्य सर्व्वे लोका ईश्वरं प्रशंसितुम् आरेभिरे।
ಕೂಡಲೇ ಅವನು ದೃಷ್ಟಿಯನ್ನು ಪಡೆದನು. ಆಗ ಅವನು ದೇವರನ್ನು ಸ್ತುತಿಸುತ್ತಾ, ಯೇಸುವನ್ನು ಹಿಂಬಾಲಿಸಿದನು. ಎಲ್ಲಾ ಜನರು ಅದನ್ನು ಕಂಡು, ದೇವರಿಗೆ ಸ್ತೋತ್ರ ಸಲ್ಲಿಸಿದರು.

< लूकः 18 >