< यिर्मया 29 >

1 बंदिवान करून नेलेल्यांतील राहिलेले वडील याजक, संदेष्टे आणि यरूशलेमेमधून बाबेलास ज्यास नबुखद्नेस्सराने कैद करून नेले होते, त्या सर्व लोकांस यिर्मया संदेष्ट्याने यरूशलेमेहून पत्र पाठवले.
ಪ್ರವಾದಿಯಾದ ಯೆರೆಮೀಯನು ಸೆರೆಹೋಗಿದ್ದ ಹಿರಿಯರಲ್ಲಿ ಉಳಿದವರಿಗೂ, ಯಾಜಕರಿಗೂ, ಪ್ರವಾದಿಗಳಿಗೂ ಅಂತು ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದಿದ್ದ ಸಕಲ ಜನರಿಗೂ ಯೆರೂಸಲೇಮಿನಿಂದ ಬರೆದು ರವಾನಿಸಿದ ಕಾಗದದ ಮಾತುಗಳು.
2 राजा यकन्या, राजमाता, व उच्च अधिकारी, यहूदाचे व यरूशलेमेचे नेते, व कारागीर हे यरूशलेमेमधून निघून गेल्यावर यिर्मयाने हे पत्र पाठवले.
ಇದು ಅರಸನಾದ ಯೆಕೊನ್ಯನು, ರಾಜಮಾತೆಯು, ಕಂಚುಕಿಗಳು, ಯೆಹೂದದ ಮತ್ತು ಯೆರೂಸಲೇಮಿನ ಸರದಾರರು, ಶಿಲ್ಪಿಗಳು, ಕಮ್ಮಾರರು ಇವರು ಯೆರೂಸಲೇಮಿನಿಂದ ತೊಲಗಿದ ಮೇಲೆ ನಡೆದ ಸಂಗತಿಗಳು.
3 ज्यांना यहूदाचा राजा सिद्कीया याने बाबेलाचा राजा नबुखद्नेस्सर याच्याकडे एलास शाफानाचा व गमऱ्या हिल्कीयाचा मुलगा यांच्या हस्ते पत्र पाठवले.
ಯೆಹೂದದ ಅರಸನಾದ ಚಿದ್ಕೀಯನಿಂದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ರಾಯಭಾರಿಗಳಾಗಿ ಬಾಬಿಲೋನಿಗೆ ಕಳುಹಿಸಲ್ಪಟ್ಟ ಶಾಫಾನನ ಮಗನಾದ ಎಲ್ಲಾಸ, ಹಿಲ್ಕೀಯನ ಮಗನಾದ ಗೆಮರ್ಯ ಇವರ ಕೈಯಲ್ಲಿ ಅದನ್ನು ಕಳುಹಿಸಿದನು.
4 पत्रात असे म्हटले, ज्यांना मी यरूशलेमेहून कैद करून बाबेलास नेण्यास लावले त्या सर्वांना सेनाधीश परमेश्वर, इस्राएलाचा देव असे सांगतो,
ಅದರಲ್ಲಿ, “ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ತಾನು ಯೆರೂಸಲೇಮಿನಿಂದ ಬಾಬಿಲೋನಿಗೆ ಸಾಗಿಸಿದ ಸೆರೆಯವರೆಲ್ಲರಿಗೂ ಹೀಗೆ ಹೇಳುತ್ತಾನೆ,
5 “घरे बांधून त्यामध्ये राहा. बागे लावा आणि त्याचे फळ खा.
ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ, ತೋಟಗಳನ್ನು ಮಾಡಿಕೊಂಡು ಅವುಗಳ ಫಲವನ್ನು ಅನುಭವಿಸಿರಿ.
6 स्त्रिया करा, आणि मुलाला व मुलीला जन्म द्या, नंतर आपल्या मुलांसाठी स्त्रिया करून द्या आणि तुमच्या मुलींना नवरे करून द्या. त्यांनी मुलांना व मुलींना जन्म द्यावा. तेथे तुम्ही वाढा, कमी होऊ नका.
ಸಂಸಾರಿಗಳಾಗಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆಯಿರಿ. ನಿಮ್ಮ ಗಂಡುಮಕ್ಕಳಿಗೆ ಹೆಣ್ಣುಮಕ್ಕಳನ್ನು ತೆಗೆದುಕೊಳ್ಳಿರಿ, ನಿಮ್ಮ ಹೆಣ್ಣುಮಕ್ಕಳಿಗೆ ಗಂಡುಮಕ್ಕಳನ್ನು ಕೊಡಿರಿ; ಅವರೂ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆಯಲಿ; ನೀವು ಇರುವಲ್ಲಿಯೇ ವೃದ್ಧಿಯಾಗಿರಿ, ಕೊರತೆ ಅನುಭವಿಸದಿರಿ.
7 मी ज्या नगरांत तुम्हास बंदिवान करून न्यायला लावले त्याच्या शांतीसाठी झटा आणि त्यांच्यावतीने माझ्याबरोबर मध्यस्थी करा. कारण त्यांच्या शांतीत तुमची शांती आहे.”
ನಾನು ಯಾವ ಪಟ್ಟಣಕ್ಕೆ ನಿಮ್ಮನ್ನು ಸಾಗಿಸಿದೆನೋ, ಅದರ ಕ್ಷೇಮವನ್ನು ಹಾರೈಸಿ ಅದಕ್ಕಾಗಿ ಯೆಹೋವನನ್ನು ಪ್ರಾರ್ಥಿಸಿರಿ; ಅದರ ಕ್ಷೇಮವೇ ನಿಮ್ಮ ಕ್ಷೇಮ.
8 कारण सेनाधीश परमेश्वर, इस्राएलाचा देव, असे म्हणतो, “तुमच्यामध्ये असलेले तुमचे संदेष्टे आणि ज्योतिषीह्न्जी यांनी तुम्हास फसवू नये आणि तुम्ही ज्यास आपली स्वप्ने पाहण्यास लावता त्याचे तुम्ही ऐकू नका.
ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳಿಂದಲೂ, ಶಕುನದವರಿಂದಲೂ ಮೋಸಹೋಗಬೇಡಿರಿ; ನಿಮಗಾಗಿ ಕನಸುಕಂಡು ಹೇಳುವವರಿಗೆ ಕಿವಿಗೊಡಬೇಡಿರಿ.
9 कारण ते माझ्या नामाने लबाड भविष्य सांगतात. मी त्यांना बाहेर पाठविले नाही.” असे परमेश्वर म्हणतो.
ಅವರು ನನ್ನ ಹೆಸರಿನಲ್ಲಿ ನಿಮಗೆ ಸುಳ್ಳನ್ನು ಸಾರುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲ. ಇದು ಯೆಹೋವನ ನುಡಿ” ಎಂದು ಬರೆಯಲ್ಪಟ್ಟಿತು.
10 १० कारण परमेश्वर असे म्हणतो, जेव्हा बाबेलाच्या राज्यास सत्तर वर्षे होतील, मी तुम्हास मदत करील आणि तुम्हास या स्थळी परत आणण्याचे सुवचन मी पूर्ण करीन.
೧೦ಯೆಹೋವನು ಇಂತೆನ್ನುತ್ತಾನೆ, “ಬಾಬೆಲ್ ರಾಜ್ಯವು ಎಪ್ಪತ್ತು ವರ್ಷ ಪ್ರಬಲಿಸಿದ ಮೇಲೆ ನಾನು ನಿಮ್ಮನ್ನು ಕಟಾಕ್ಷಿಸಿ, ಈ ಸ್ಥಳಕ್ಕೆ ತಿರುಗಿ ಬರಮಾಡುವೆನೆಂಬ ನನ್ನ ಶುಭವಾಕ್ಯವನ್ನು ನಿಮಗಾಗಿ ನೆರವೇರಿಸುವೆನು.
11 ११ कारण परमेश्वर असे म्हणतो की, तुमच्याविषयी माझ्या मनात ज्या योजना आहेत त्या मी जाणतो; त्या योजना तुमच्या हिताच्या आहेत आणि अनिष्टासाठी नाहीत, त्या तुम्हास भविष्य व आशा देणाऱ्या आहेत.
೧೧ಇವರಿಗೆ ಒಳ್ಳೆಯದಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ.
12 १२ मग तुम्ही माझा धावा कराल आणि जाऊन माझी प्रार्थना कराल आणि तेव्हा मी तुमचे ऐकेन.
೧೨ನೀವು ನನಗೆ ಮೊರೆಯಿಡುವಿರಿ, ನನ್ನನ್ನು ಪ್ರಾರ್ಥಿಸಲು ಹೋಗುವಿರಿ; ನಾನು ಕಿವಿಗೊಡುವೆನು.
13 १३ कारण जेव्हा तुम्ही आपल्या संपूर्ण हृदयाने मला शोधाल, तेव्हा मी तुम्हास सापडेन.
೧೩ನೀವು ನನ್ನನ್ನು ಹುಡುಕುವಿರಿ, ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ.
14 १४ परमेश्वर असे म्हणतो की मग मी तुम्हास प्राप्त होईल. “मी तुम्हास बंदिवासातून परत आणीन आणि ज्या सर्व राष्ट्रांत व सर्व स्थानात मी तुम्हास विखरविले त्यातून मी तुम्हास एकवटीन आणि ज्या स्थानातून मी तुम्हास कैद करून नेले आहे त्याकडे मी तुम्हास परत आणीन.” असे परमेश्वर म्हणतो.
೧೪ನಾನು ನಿಮಗೆ ದೊರೆಯುವೆನು, ನಿಮ್ಮನ್ನು ನಿಮ್ಮ ದುರವಸ್ಥೆಯಿಂದ ತಪ್ಪಿಸಿ, ನಾನು ನಿಮ್ಮನ್ನು ಅಟ್ಟಿಬಿಟ್ಟಿದ್ದ ಸಮಸ್ತ ದೇಶಗಳಿಂದಲೂ, ಸಕಲಜನಾಂಗಗಳ ಮಧ್ಯದಿಂದಲೂ ಒಟ್ಟುಗೂಡಿಸಿ ನಿಮ್ಮನ್ನು ಯಾವ ಸ್ಥಳದಿಂದ ಸೆರೆಗೆ ಸಾಗಿಸಿದೆನೋ ಅಲ್ಲಿಗೆ ತಿರುಗಿ ಬರಮಾಡುವೆನು, ಇದು ಯೆಹೋವನ ನುಡಿ” ಎಂಬುದೇ.
15 १५ “कारण तुम्ही म्हटले आहे की, परमेश्वराने आम्हासाठी बाबेलामध्ये संदेष्टे उत्पन्न केले आहेत.”
೧೫ನೀವೋ, “ಯೆಹೋವನು ನಮಗಾಗಿ ಬಾಬೆಲಿನಲ್ಲೇ ಪ್ರವಾದಿಗಳನ್ನು ಏರ್ಪಡಿಸಿದ್ದಾನಲ್ಲಾ” ಅಂದುಕೊಂಡಿದ್ದೀರಿ.
16 १६ दावीदाच्या सिंहासनावर जो बसला आहे त्याच्याविषयी आणि जे लोक त्या नगरात राहतात, तुमचे बांधव जे बंदिवासात तुमच्याबरोबर बाहेर गेले नाहीत, त्या सर्वांविषयी परमेश्वर म्हणतो,
೧೬ಸೇನಾಧೀಶ್ವರನಾದ ಯೆಹೋವನು ದಾವೀದನ ಸಿಂಹಾಸನಾರೂಢನಾದ ಅರಸನ ವಿಷಯವಾಗಿಯೂ, ನಿಮ್ಮೊಂದಿಗೆ ಸೆರೆಹೋಗದ ನಿಮ್ಮ ಸಹೋದರರಾದ ಈ ಪಟ್ಟಣದ ಸಕಲ ನಿವಾಸಿಗಳ ವಿಷಯವಾಗಿಯೂ ಇಂತೆನ್ನುತ್ತಾನೆ,
17 १७ सेनाधीश परमेश्वर असे म्हणतो की, पाहा, मी त्यांच्यावर तलवार, दुष्काळ आणि आजार पाठवीन. कारण मी त्यांना कुजलेल्या अंजिरासारखे करीन जे खाण्याससुद्धा घाणेरडे असते.
೧೭“ಆಹಾ, ನಾನು ಅವರ ಮೇಲೆ ಖಡ್ಗ, ಕ್ಷಾಮ ಮತ್ತು ವ್ಯಾಧಿಗಳನ್ನು ಬರಮಾಡಿ ಯಾರೂ ತಿನ್ನದ ಹಾಗೆ ಕೆಟ್ಟು ಕೇವಲ ಅಸಹ್ಯವಾದ ಅಂಜೂರದ ಹಣ್ಣುಗಳ ಗತಿಗೆ ಅವರನ್ನು ತರುವೆನು.
18 १८ आणि मी त्यांचा तलवार, दुष्काळ आणि मरीने पाठपुरावा करीन आणि पृथ्वीवरील सर्व राज्याच्या दृष्टीने दहशत पोहचेल असे मी त्यांना करीन. मी त्यांना ज्या राष्ट्रात विखरविले आहे तेथे भयंकर भीती, शाप व निंदा व उपहास या गोष्टींचे ते विषय होतील.
೧೮ನಾನು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಅವರನ್ನು ಹಿಂದಟ್ಟುತ್ತಾ, ಲೋಕದ ಸಮಸ್ತ ರಾಜ್ಯಗಳಿಗೆ ಭಯಾಸ್ಪದವಾಗುವಂತೆಯೂ, ನಾನು ಅವರನ್ನು ಅಟ್ಟಿಬಿಟ್ಟಿರುವ ಸಕಲ ಜನಾಂಗಗಳಲ್ಲಿ ಶಾಪ, ಪರಿಹಾಸ್ಯ, ದೂಷಣೆ, ಇವುಗಳಿಗೆ ಗುರಿಯಾಗುವಂತೆಯೂ ಮಾಡುವೆನು.
19 १९ परमेश्वर असे म्हणतो, याचे कारण हे आहे की, मी आपले सेवक संदेष्टे यांच्याद्वारे माझी वचने पाठवली, तरी त्यांनी माझे ऐकले नाही. मी वारंवार त्यांना पाठवले पण तुम्ही ऐकले नाही, असे परमेश्वर म्हणतो.
೧೯ಅವರು ನನ್ನ ಮಾತುಗಳನ್ನು ಕೇಳಲಿಲ್ಲವಲ್ಲಾ; ನಾನು ನನ್ನ ಸೇವಕರಾದ ಪ್ರವಾದಿಗಳನ್ನು ಅವರ ಬಳಿಗೆ ತಪ್ಪದೆ ಕಳುಹಿಸಿ ಎಚ್ಚರಿಸುತ್ತಾ ಬಂದರೂ ಅವರು ಕೇಳಲೊಲ್ಲದೆ ಹೋದರು ಇದು ಯೆಹೋವನ ನುಡಿ.”
20 २० “तर बंदिवानानो ज्या तुम्हास यरूशलेमेहून बाबेलास पाठविले ते तुम्ही परमेश्वराचे वचन ऐका.”
೨೦ನಾನು ಯೆರೂಸಲೇಮಿನಿಂದ ಬಾಬಿಲೋನಿಗೆ ಸಾಗಿಸಿದ ಸೆರೆಯವರೇ, ನೀವೆಲ್ಲರೂ ಯೆಹೋವನ ವಾಕ್ಯವನ್ನು ಕೇಳಿರಿ.
21 २१ कोलायाचा मुलगा अहाब व मासेयाचा मुलगा सिद्कीया, ते माझ्या नावाने खोटे भविष्य सांगतात, यांच्याविषयी इस्राएलाचा देव सेनाधीश परमेश्वर असे म्हणतो, पाहा, मी त्यांना बाबेलाचा राजा नबुखद्नेस्सराच्या हाती देईन. आणि तो त्यास तुमच्या डोळ्यांसमोर ठार करील.
೨೧ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ತನ್ನ ಹೆಸರೆತ್ತಿ ಸುಳ್ಳನ್ನು ಸಾರುವ ಕೊಲಾಯನ ಮಗನಾದ ಅಹಾಬ, ಮಾಸೇಯನ ಮಗನಾದ ಚಿದ್ಕೀಯ ಇವರ ವಿಷಯವಾಗಿ ಇಂತೆನ್ನುತ್ತಾನೆ, “ಇಗೋ, ನಾನು ಇವರನ್ನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಗೆ ಕೊಡುವೆನು; ಅವನು ನಿಮ್ಮ ಕಣ್ಣೆದುರಿಗೆ ಇವರನ್ನು ಕೊಲ್ಲಿಸುವನು.
22 २२ नंतर यहूदाचे जे सर्व बंदिवान करून बाबेलात नेलेल्या या मनुष्यांविषयी हा शाप म्हणतील, सिद्कीया व अहाब यांना बाबेलाच्या राजाने अग्नीवर भाजले तसे परमेश्वर तुला करो.
೨೨ಇವರ ಚರಿತ್ರೆಯನ್ನು ಬಾಬೆಲಿನಲ್ಲಿ ಸೆರೆಯಾಗಿರುವ ಯೆಹೂದ್ಯರೆಲ್ಲರು ಶಪಿಸುವ ಮಾತಾಗಿ ತೆಗೆದುಕೊಂಡು ‘ಬಾಬೆಲಿನ ಅರಸನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಮತ್ತು ಅಹಾಬನ ಗತಿಯನ್ನು ಯೆಹೋವನು ನಿನಗೆ ತರಲಿ’ ಎಂದು ಶಪಿಸುವರು.
23 २३ हे यासाठी होईल की, कारण त्यांनी इस्राएलामध्ये लज्जास्पद गोष्टी केल्यात, आपल्या शेजाऱ्यांच्या बायकांबरोबर व्यभिचार केला आणि जे मी त्यांना आज्ञापिले नाही ते वचन ते खोटेपणाने माझ्या नावाने बोलले आहेत. कारण जो मी एक आहे तो जाणतो. असे परमेश्वर म्हणतो.
೨೩ಇವರು ಇಸ್ರಾಯೇಲಿನಲ್ಲಿ ದುರಾಚಾರವನ್ನು ನಡೆಸಿ, ನೆರೆಯವರ ಹೆಂಡತಿಯರೊಂದಿಗೆ ವ್ಯಭಿಚಾರಮಾಡಿ, ನಾನು ಆಜ್ಞಾಪಿಸದ ಮಾತುಗಳನ್ನು ನನ್ನ ಹೆಸರಿನ ಮೇಲೆ ಸುಳ್ಳಾಗಿ ಸಾರಿದಿರಲ್ಲಾ; ನಾನೇ ಬಲ್ಲೆ, ನಾನೇ ಸಾಕ್ಷಿ ಎಂದು ಯೆಹೋವನು ಅನ್ನುತ್ತಾನೆ” ಎಂಬುದೇ.
24 २४ शमाया नेहेलमकराबद्दल, हे सांग,
೨೪ಆಮೇಲೆ ಯೆಹೋವನು ಯೆರೆಮೀಯನಿಗೆ ಈ ಅಪ್ಪಣೆಯನ್ನು ಕೊಟ್ಟನು, ನೀನು ನೆಹೆಲಾಮ್ಯನಾದ ಶೆಮಾಯನಿಗೆ ಹೀಗೆ ತಿಳಿಸಬೇಕು,
25 २५ सेनाधीश परमेश्वर, इस्राएलाचा देव, हे म्हणतो, कारण जे सर्व लोक यरूशलेमेत आहेत त्यांच्याकडे व मासेयाचा मुलगा याजक सफन्या व सर्व याजक यांच्याकडे तू आपल्या नावाने पत्रे पाठवून व म्हटले,
೨೫ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನೀನು ಯೆರೂಸಲೇಮಿನಲ್ಲಿರುವ ಎಲ್ಲಾ, ಜನರಿಗೂ ಯಾಜಕನಾದ ಮಾಸೇಯನ ಮಗನಾಗಿರುವ ಚೆಫನ್ಯನಿಗೂ ಮತ್ತು ಸಮಸ್ತ ಯಾಜಕರಿಗೂ ನಿನ್ನ ಹೆಸರಿಗೆ ಕಳುಹಿಸಿದ ಕಾಗದದಲ್ಲಿ,
26 २६ परमेश्वराने तुला यहोयादाच्या जागी याजक म्हणून नेमले आहे. यासाठी की, परमेश्वराच्या मंदिराचा तू अधिकारी असावे. जो कोणी वेडा होऊन आपणास संदेष्टा करतो, ते सर्व लोक तुझ्या नियंत्रणात आहेत. तू त्यांना खोड्यात अडकवून व बेडी घालावी.
೨೬“ಯೆಹೋವನು ನಿನ್ನನ್ನು ಯೆಹೋಯಾದನ ಸ್ಥಾನದಲ್ಲಿ ಯಾಜಕನನ್ನಾಗಿ ನೇಮಿಸಿ, ಯಾರು ತನ್ನನ್ನು ತಾನೇ ಪ್ರವಾದಿಯಂತೆ ನಟಿಸುತ್ತಾನೋ ಅವನನ್ನು ಕೋಳಕ್ಕೆ ಹಾಕಿ, ಕೊರಳಿಗೆ ಕವೆಯೊಡ್ಡುವ ಅಧಿಕಾರವನ್ನು ತನ್ನ ಆಲಯದಲ್ಲಿ ನಿನಗೆ ವಹಿಸಿದ್ದಾನಲ್ಲಾ.
27 २७ म्हणून आता, अनाथोथकर यिर्मया जो आपणास तुम्हासमोर संदेष्टा म्हणवतो त्यास तू का धमकावले नाहीस?
೨೭ಹೀಗಿರಲು ನಿಮ್ಮ ಮಧ್ಯದಲ್ಲಿ ಪ್ರವಾದಿಯಾಗಿ ನಟಿಸುವ ಅನಾತೋತಿನವನಾದ ಯೆರೆಮೀಯನನ್ನು ನೀನು ಏಕೆ ಖಂಡಿಸಲಿಲ್ಲ?
28 २८ कारण त्याने बाबेलास आम्हाकडे पत्र पाठवले व म्हटले की, “बंदिवास दीर्घकाळ राहील, म्हणून घरे बांधा, वस्ती करा, बागा लावा व त्याची फळे खा.”
೨೮ಇವನು, ‘ಪರದೇಶ ವಾಸವು ನಿಮಗೆ ದೀರ್ಘವಾಗುವುದು, ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ, ತೋಟಗಳನ್ನು ಮಾಡಿಕೊಂಡು ಫಲವನ್ನು ಅನುಭವಿಸಿರಿ’ ಎಂದು ಬಾಬೆಲಿನಲ್ಲಿರುವ ನಮಗೆ ಹೇಳಿ ಕಳುಹಿಸಿದ್ದಾನೆ ನೋಡು ಎಂಬುದಾಗಿ ಬರೆದ ಕಾರಣ ನಾನು ನಿನ್ನನ್ನು ದಂಡಿಸುವುದು ಖಂಡಿತ.”
29 २९ सफन्या याजकाने हे पत्र यिर्मया संदेष्ट्याला ऐकू येईल असे वाचले.
೨೯ಯಾಜಕನಾದ ಚೆಫನ್ಯನು ಈ ಕಾಗದವನ್ನು ಪ್ರವಾದಿಯಾದ ಯೆರೆಮೀಯನ ಮುಂದೆ ಓದಿದನು.
30 ३० मग यिर्मयाकडे परमेश्वराचे वचन आले आणि म्हणाले,
೩೦ಅನಂತರ ಯೆರೆಮೀಯನಿಗೆ ಯೆಹೋವನು ಈ ಮಾತುಗಳನ್ನು ತಿಳಿಸಿದನು.
31 ३१ “सर्व बंदिवासांतल्या लोकांस निरोप पाठव व सांग, नेहेलमकर घराण्यातील शमाया याच्याबद्दल परमेश्वर असे म्हणतो ‘कारण शमायाने तुम्हास भविष्य सांगितले आहे पण मी त्यास पाठविलेले नाही. कारण तुम्ही खोट्यावर विश्वास ठेवावा, असे त्याने केले आहे.
೩೧ನೀನು ಸೆರೆಯವರೆಲ್ಲರಿಗೆ ಹೀಗೆ ಹೇಳಿ ಕಳುಹಿಸು, “ನೆಹೆಲಾಮ್ಯನಾದ ಶೆಮಾಯನ ವಿಷಯದಲ್ಲಿ ಯೆಹೋವನು ಇಂತೆನ್ನುತ್ತಾನೆ, ನಾನು ಕಳುಹಿಸದೆ ಹೋದರೂ ಶೆಮಾಯನು ನಿಮಗೆ ಪ್ರವಾದನೆಮಾಡಿ ಸುಳ್ಳಿನಲ್ಲಿ ನಂಬಿಕೆಯನ್ನು ಹುಟ್ಟಿಸಿದ ಕಾರಣ ಇಗೋ,
32 ३२ म्हणून परमेश्वर असे म्हणतो की, पाहा, मी शमाया नेहेलमकराला आणि त्याच्या वंशजाला शिक्षा करीन. या लोकांमध्ये वस्ती करायला त्याचा कोणी उरणार नाही. मी आपल्या लोकांसाठी जे चांगले करीन ते तो पाहणार नाही. कारण त्याने परमेश्वराविरूद्ध गैरविश्वासाचे भाषण केले आहे. असे परमेश्वर म्हणतो.
೩೨ನಾನು ಆ ನೆಹೆಲಾಮ್ಯನಾದ ಶೆಮಾಯನನ್ನೂ ಮತ್ತು ಅವನ ಸಂತತಿಯವರನ್ನೂ ದಂಡಿಸುವೆನು; ಅವನು ಯೆಹೋವನಾದ ನನ್ನ ವಿರುದ್ಧವಾಗಿ ದ್ರೋಹದ ಮಾತನ್ನು ಆಡಿದ್ದರಿಂದ ಈ ಜನರ ಮಧ್ಯದಲ್ಲಿ ವಾಸಿಸಲು ಅವನಿಗೆ ಯಾವ ಸಂತಾನವೂ ಇರದು; ನಾನು ನನ್ನ ಜನರಿಗೆ ಉಂಟುಮಾಡಬೇಕೆಂದಿರುವ ಮೇಲನ್ನು ಅವನು ನೋಡದೆ ಹೋಗುವನು; ಇದು ಯೆಹೋವನ ನುಡಿ” ಎಂಬುದೇ.

< यिर्मया 29 >