< ಲೂಕನು 6 >

1 ಒಂದು ಯೆಹೂದ್ಯರ ಸಬ್ಬತ್ ದಿನದಲ್ಲಿ ಯೇಸು ಪೈರಿನ ಹೊಲಗಳನ್ನು ದಾಟಿಹೋಗುತ್ತಿದ್ದರು. ಆಗ ಅವರ ಶಿಷ್ಯರು ತೆನೆಗಳನ್ನು ಕಿತ್ತು ತಮ್ಮ ಕೈಗಳಲ್ಲಿ ಹೊಸಕಿಕೊಂಡು ಅದರ ಕಾಳುಗಳನ್ನು ತಿನ್ನುತ್ತಿದ್ದರು.
အစရဉ္စ ပရွွဏော ဒွိတီယဒိနာတ် ပရံ ပြထမဝိၑြာမဝါရေ ၑသျက္ၐေတြေဏ ယီၑောရ္ဂမနကာလေ တသျ ၑိၐျား ကဏိၑံ ဆိတ္တွာ ကရေၐု မရ္ဒ္ဒယိတွာ ခါဒိတုမာရေဘိရေ၊
2 ಫರಿಸಾಯರಲ್ಲಿ ಕೆಲವರು ಅವರಿಗೆ, “ಸಬ್ಬತ್ ದಿನದಲ್ಲಿ ಮೋಶೆಯ ನಿಯಮಕ್ಕೆ ವಿರುದ್ಧವಾಗಿರುವದನ್ನು ನೀವು ಏಕೆ ಮಾಡುತ್ತೀರಿ?” ಎಂದರು.
တသ္မာတ် ကိယန္တး ဖိရူၑိနသ္တာနဝဒန် ဝိၑြာမဝါရေ ယတ် ကရ္မ္မ န ကရ္တ္တဝျံ တတ် ကုတး ကုရုထ?
3 ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಅವನು ಏನು ಮಾಡಿದನೆಂದು ನೀವು ಓದಲಿಲ್ಲವೇ?
ယီၑုး ပြတျုဝါစ ဒါယူဒ် တသျ သင်္ဂိနၑ္စ က္ၐုဓာရ္တ္တား ကိံ စကြုး သ ကထမ် ဤၑွရသျ မန္ဒိရံ ပြဝိၑျ
4 ಅವನು ದೇವರ ಆಲಯದೊಳಗೆ ಹೋಗಿ, ಯಾಜಕರ ಹೊರತು ಬೇರೆಯವರು ತಿನ್ನುವುದಕ್ಕೆ ಮೋಶೆ ನಿಯಮಕ್ಕೆ ಸಮ್ಮತವಲ್ಲದ ನೈವೇದ್ಯದ ರೊಟ್ಟಿಯನ್ನು ತೆಗೆದುಕೊಂಡು ತಿಂದು, ತನ್ನ ಸಂಗಡಿಗರಿಗೂ ಕೊಟ್ಟನಲ್ಲವೇ” ಎಂದರು.
ယေ ဒရ္ၑနီယား ပူပါ ယာဇကာန် ဝိနာနျသျ ကသျာပျဘောဇနီယာသ္တာနာနီယ သွယံ ဗုဘဇေ သင်္ဂိဘျောပိ ဒဒေါ် တတ် ကိံ ယုၐ္မာဘိး ကဒါပိ နာပါဌိ?
5 ಯೇಸು ಅವರಿಗೆ, “ಮನುಷ್ಯಪುತ್ರನಾದ ನಾನು ಸಬ್ಬತ್ತಿಗೂ ಕರ್ತ ದೇವರಾಗಿದ್ದೇನೆ,” ಎಂದರು.
ပၑ္စာတ် သ တာနဝဒတ် မနုဇသုတော ဝိၑြာမဝါရသျာပိ ပြဘု ရ္ဘဝတိ၊
6 ಇನ್ನೊಂದು ಸಬ್ಬತ್ ದಿನದಲ್ಲಿ ಯೇಸು ಸಭಾಮಂದಿರದೊಳಕ್ಕೆ ಪ್ರವೇಶಿಸಿ ಬೋಧಿಸಿದರು, ಅಲ್ಲಿ ಬಲಗೈ ಬತ್ತಿದ ಒಬ್ಬ ಮನುಷ್ಯನಿದ್ದನು.
အနန္တရမ် အနျဝိၑြာမဝါရေ သ ဘဇနဂေဟံ ပြဝိၑျ သမုပဒိၑတိ၊ တဒါ တတ္သ္ထာနေ ၑုၐ္ကဒက္ၐိဏကရ ဧကး ပုမာန် ဥပတသ္ထိဝါန်၊
7 ಆಗ ಫರಿಸಾಯರೂ ನಿಯಮ ಬೋಧಕರೂ ಯೇಸುವಿಗೆ ವಿರೋಧವಾಗಿ ತಪ್ಪು ಕಂಡು ಹಿಡಿಯಬೇಕೆಂದು, ಅವರು ಆ ಸಬ್ಬತ್ ದಿನದಲ್ಲಿ ಅವನನ್ನು ಯೇಸು ಗುಣಪಡಿಸುವರೋ ಏನೋ ಎಂದು ಗಮನಿಸಿ ನೋಡುತ್ತಿದ್ದರು.
တသ္မာဒ် အဓျာပကား ဖိရူၑိနၑ္စ တသ္မိန် ဒေါၐမာရောပယိတုံ သ ဝိၑြာမဝါရေ တသျ သွာသ္ထျံ ကရောတိ နဝေတိ ပြတီက္ၐိတုမာရေဘိရေ၊
8 ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದುಕೊಂಡು ಕೈಬತ್ತಿದವನಿಗೆ, “ನೀನು ಎದ್ದು ಬಂದು ನಡುವೆ ನಿಂತುಕೋ,” ಎಂದಾಗ ಅವನು ಎದ್ದು ನಿಂತುಕೊಂಡನು.
တဒါ ယီၑုသ္တေၐာံ စိန္တာံ ဝိဒိတွာ တံ ၑုၐ္ကကရံ ပုမာံသံ ပြောဝါစ, တွမုတ္ထာယ မဓျသ္ထာနေ တိၐ္ဌ၊
9 ಯೇಸು ಅವರಿಗೆ, “ನಾನು ನಿಮ್ಮನ್ನು ಕೇಳುತ್ತೇನೆ: ಸಬ್ಬತ್ ದಿನದಲ್ಲಿ ಒಳ್ಳೆಯದನ್ನು ಮಾಡುವುದು ಮೋಶೆಯ ನಿಯಮಕ್ಕೆ ಸಮ್ಮತವೋ ಕೆಟ್ಟದ್ದನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಳಿಸುವುದೋ?” ಎಂದರು.
တသ္မာတ် တသ္မိန် ဥတ္ထိတဝတိ ယီၑုသ္တာန် ဝျာဇဟာရ, ယုၐ္မာန် ဣမာံ ကထာံ ပၖစ္ဆာမိ, ဝိၑြာမဝါရေ ဟိတမ် အဟိတံ ဝါ, ပြာဏရက္ၐဏံ ပြာဏနာၑနံ ဝါ, ဧတေၐာံ ကိံ ကရ္မ္မကရဏီယမ်?
10 ಯೇಸು ಸುತ್ತಲೂ ಇದ್ದವರನ್ನು ನೋಡಿ, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದರು. ಅವನು ಹಾಗೆಯೇ ಮಾಡಿದನು. ಆಗ ಅವನ ಕೈ ಸಂಪೂರ್ಣವಾಗಿ ಗುಣವಾಯಿತು.
ပၑ္စာတ် စတုရ္ဒိက္ၐု သရွွာန် ဝိလောကျ တံ မာနဝံ ဗဘာၐေ, နိဇကရံ ပြသာရယ; တတသ္တေန တထာ ကၖတ ဣတရကရဝတ် တသျ ဟသ္တး သွသ္ထောဘဝတ်၊
11 ಆದರೆ ಫರಿಸಾಯರೂ ನಿಯಮ ಬೋಧಕರೂ ತುಂಬಾ ಕೋಪಗೊಂಡು ಯೇಸುವಿಗೆ ಏನಾದರೂ ಮಾಡಬೇಕೆಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
တသ္မာတ် တေ ပြစဏ္ဍကောပါနွိတာ ယီၑုံ ကိံ ကရိၐျန္တီတိ ပရသ္ပရံ ပြမန္တြိတား၊
12 ಆ ದಿನಗಳಲ್ಲಿ ಯೇಸು ಪ್ರಾರ್ಥಿಸುವುದಕ್ಕಾಗಿ ಒಂದು ಬೆಟ್ಟಕ್ಕೆ ಹೋಗಿ, ರಾತ್ರಿಯೆಲ್ಲಾ ದೇವರನ್ನು ಪ್ರಾರ್ಥಿಸುವುದರಲ್ಲಿ ಕಳೆದರು.
တတး ပရံ သ ပရွွတမာရုဟျေၑွရမုဒ္ဒိၑျ ပြာရ္ထယမာနး ကၖတ္သ္နာံ ရာတြိံ ယာပိတဝါန်၊
13 ಬೆಳಗಾದ ಮೇಲೆ, ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು, ಅವರಿಗೆ “ಅಪೊಸ್ತಲರು” ಎಂದು ಹೆಸರಿಟ್ಟರು.
အထ ဒိနေ သတိ သ သရွွာန် ၑိၐျာန် အာဟူတဝါန် တေၐာံ မဓျေ
14 ಅವರು ಯಾರೆಂದರೆ: ಪೇತ್ರನೆಂದು ಹೆಸರು ಹೊಂದಿದ ಸೀಮೋನ, ಅವನ ಸಹೋದರ ಅಂದ್ರೆಯ, ಯಾಕೋಬ, ಯೋಹಾನ, ಫಿಲಿಪ್ಪ, ಬಾರ್ತೊಲೊಮಾಯ,
ပိတရနာမ္နာ ချာတး ၑိမောန် တသျ ဘြာတာ အာန္ဒြိယၑ္စ ယာကူဗ် ယောဟန် စ ဖိလိပ် ဗရ္ထလမယၑ္စ
15 ಮತ್ತಾಯ, ತೋಮ, ಅಲ್ಫಾಯನ ಮಗ ಯಾಕೋಬ, ದೇಶಾಭಿಮಾನಿ ಎಂದು ಅನ್ನಿಸಿಕೊಂಡ ಸೀಮೋನ,
မထိး ထောမာ အာလ္ဖီယသျ ပုတြော ယာကူဗ် ဇွလန္တနာမ္နာ ချာတး ၑိမောန္
16 ಯಾಕೋಬನ ಮಗ ಯೂದ, ಮತ್ತು ದ್ರೋಹಿಯಾದ ಇಸ್ಕರಿಯೋತ ಯೂದ.
စ ယာကူဗော ဘြာတာ ယိဟူဒါၑ္စ တံ ယး ပရကရေၐု သမရ္ပယိၐျတိ သ ဤၐ္ကရီယောတီယယိဟူဒါၑ္စဲတာန် ဒွါဒၑ ဇနာန် မနောနီတာန် ကၖတွာ သ ဇဂြာဟ တထာ ပြေရိတ ဣတိ တေၐာံ နာမ စကာရ၊
17 ಯೇಸು ಅವರೊಂದಿಗೆ ಕೆಳಗಿಳಿದು ಸಮತಟ್ಟಾದ ಭೂಮಿಯ ಮೇಲೆ ನಿಂತಿದ್ದಾಗ, ಅವರ ಶಿಷ್ಯರ ಗುಂಪು ಅಲ್ಲದೆ ಯೂದಾಯದಿಂದಲೂ ಯೆರೂಸಲೇಮಿನಿಂದಲೂ ಟೈರ್, ಸೀದೋನ್ ಪಟ್ಟಣಗಳಿರುವ ಸಮುದ್ರ ತೀರದಿಂದಲೂ
တတး ပရံ သ တဲး သဟ ပရွွတာဒဝရုဟျ ဥပတျကာယာံ တသ္ထော် တတသ္တသျ ၑိၐျသင်္ဃော ယိဟူဒါဒေၑာဒ် ယိရူၑာလမၑ္စ သောရး သီဒေါနၑ္စ ဇလဓေ ရောဓသော ဇနနိဟာၑ္စ ဧတျ တသျ ကထာၑြဝဏာရ္ထံ ရောဂမုက္တျရ္ထဉ္စ တသျ သမီပေ တသ္ထုး၊
18 ಅವರ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳಿಂದ ಸ್ವಸ್ಥರಾಗುವುದಕ್ಕೂ ಜನರು ದೊಡ್ಡ ಸಮೂಹವಾಗಿ ಬಂದರು. ದುರಾತ್ಮಗಳಿಂದ ಪೀಡಿತರಾದವರೂ ಬಂದು ಸ್ವಸ್ಥರಾದರು,
အမေဓျဘူတဂြသ္တာၑ္စ တန္နိကဋမာဂတျ သွာသ္ထျံ ပြာပုး၊
19 ಆಗ ಸಮೂಹದವರೆಲ್ಲರೂ ಯೇಸುವನ್ನು ಮುಟ್ಟಬೇಕೆಂದು ಪ್ರಯತ್ನಿಸಿದರು, ಏಕೆಂದರೆ ಅವರಿಂದ ಶಕ್ತಿಯು ಹೊರಟು ಅವರೆಲ್ಲರನ್ನು ಸ್ವಸ್ಥಮಾಡುತ್ತಿತ್ತು.
သရွွေၐာံ သွာသ္ထျကရဏပြဘာဝသျ ပြကာၑိတတွာတ် သရွွေ လောကာ ဧတျ တံ သ္ပြၐ္ဋုံ ယေတိရေ၊
20 ಯೇಸು ತಮ್ಮ ಶಿಷ್ಯರನ್ನು ನೋಡಿ, ಹೇಳಿದ್ದೇನೆಂದರೆ: “ಬಡವರಾದ ನೀವು ಧನ್ಯರು, ದೇವರ ರಾಜ್ಯವು ನಿಮ್ಮದೇ.
ပၑ္စာတ် သ ၑိၐျာန် ပြတိ ဒၖၐ္ဋိံ ကုတွာ ဇဂါဒ, ဟေ ဒရိဒြာ ယူယံ ဓနျာ ယတ ဤၑွရီယေ ရာဇျေ ဝေါ'ဓိကာရောသ္တိ၊
21 ಈಗ ಹಸಿದವರಾದ ನೀವು ಧನ್ಯರು, ನೀವು ತೃಪ್ತಿಹೊಂದುವಿರಿ. ಈಗ ಅಳುವವರಾದ ನೀವು ಧನ್ಯರು, ನೀವು ನಗುವಿರಿ.
ဟေ အဓုနာ က္ၐုဓိတလောကာ ယူယံ ဓနျာ ယတော ယူယံ တရ္ပ္သျထ; ဟေ ဣဟ ရောဒိနော ဇနာ ယူယံ ဓနျာ ယတော ယူယံ ဟသိၐျထ၊
22 ಮನುಷ್ಯಪುತ್ರನಾದ ನನ್ನ ನಿಮಿತ್ತ ಜನರು ನಿಮ್ಮನ್ನು ದ್ವೇಷಮಾಡಿ, ನಿಮ್ಮನ್ನು ಬಹಿಷ್ಕರಿಸಿ, ನಿಂದಿಸಿ, ನಿಮ್ಮ ಹೆಸರನ್ನು ಕೆಟ್ಟದೆಂದು ತಿರಸ್ಕರಿಸಿದರೆ ನೀವು ಧನ್ಯರು.
ယဒါ လောကာ မနုၐျသူနော ရ္နာမဟေတော ရျုၐ္မာန် ၒတီယိၐျန္တေ ပၖထက် ကၖတွာ နိန္ဒိၐျန္တိ, အဓမာနိဝ ယုၐ္မာန် သွသမီပါဒ် ဒူရီကရိၐျန္တိ စ တဒါ ယူယံ ဓနျား၊
23 “ಆ ದಿನದಲ್ಲಿ ನೀವು ಸಂತೋಷಪಡಿರಿ, ಉಲ್ಲಾಸದಿಂದ ಕುಣಿದಾಡಿರಿ. ಇಗೋ, ಪರಲೋಕದಲ್ಲಿ ನಿಮಗೆ ಮಹಾ ಪ್ರತಿಫಲ ಸಿಕ್ಕುವುದು. ಈ ಜನರ ಪಿತೃಗಳು ಪ್ರವಾದಿಗಳಿಗೆ ಅದೇ ರೀತಿಯಲ್ಲಿ ಮಾಡಿದರು.
သွရ္ဂေ ယုၐ္မာကံ ယထေၐ္ဋံ ဖလံ ဘဝိၐျတိ, ဧတဒရ္ထံ တသ္မိန် ဒိနေ ပြောလ္လသတ အာနန္ဒေန နၖတျတ စ, တေၐာံ ပူရွွပုရုၐာၑ္စ ဘဝိၐျဒွါဒိနး ပြတိ တထဲဝ ဝျဝါဟရန်၊
24 “ಆದರೆ ಐಶ್ವರ್ಯವಂತರೇ, ನಿಮಗೆ ಕಷ್ಟ, ಏಕೆಂದರೆ ನೀವು ನಿಮ್ಮ ನೆಮ್ಮದಿಯನ್ನು ಹೊಂದಿದ್ದೀರಿ.
ကိန္တု ဟာ ဟာ ဓနဝန္တော ယူယံ သုခံ ပြာပ္နုတ၊ ဟန္တ ပရိတၖပ္တာ ယူယံ က္ၐုဓိတာ ဘဝိၐျထ;
25 ಈಗ ತಿಂದು ತೃಪ್ತಿಯಿಂದಿರುವವರೇ, ನಿಮಗೆ ಕಷ್ಟ, ಏಕೆಂದರೆ ನಿಮಗೆ ಹಸಿವೆಯಾಗುವುದು. ಈಗ ನಗುವವರೇ ನಿಮಗೆ ಕಷ್ಟ, ಏಕೆಂದರೆ ನೀವು ದುಃಖಿಸಿ ಗೋಳಾಡುವಿರಿ.
ဣဟ ဟသန္တော ယူယံ ဝတ ယုၐ္မာဘိး ၑောစိတဝျံ ရောဒိတဝျဉ္စ၊
26 ಎಲ್ಲಾ ಜನರು ನಿಮ್ಮ ವಿಷಯದಲ್ಲಿ ಒಳ್ಳೆಯದಾಗಿ ಮಾತನಾಡಿದರೆ ನಿಮಗೆ ಕಷ್ಟ, ಇವರ ಪಿತೃಗಳು ಸುಳ್ಳು ಪ್ರವಾದಿಗಳಿಗೆ ಹಾಗೆಯೇ ಮಾಡಿದರು.
သရွွဲလာကဲ ရျုၐ္မာကံ သုချာတော် ကၖတာယာံ ယုၐ္မာကံ ဒုရ္ဂတိ ရ္ဘဝိၐျတိ ယုၐ္မာကံ ပူရွွပုရုၐာ မၖၐာဘဝိၐျဒွါဒိနး ပြတိ တဒွတ် ကၖတဝန္တး၊
27 “ನನ್ನನ್ನು ಆಲಿಸುತ್ತಿರುವವರೆ ನನ್ನ ಮಾತನ್ನು ಕೇಳಿರಿ: ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಮಾಡುವವರಿಗೆ ಒಳ್ಳೆಯದನ್ನು ಮಾಡಿರಿ,
ဟေ ၑြောတာရော ယုၐ္မဘျမဟံ ကထယာမိ, ယူယံ ၑတြုၐု ပြီယဓွံ ယေ စ ယုၐ္မာန် ဒွိၐန္တိ တေၐာမပိ ဟိတံ ကုရုတ၊
28 ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ಅವಮಾನ ಪಡಿಸುವವರಿಗೋಸ್ಕರ ಪ್ರಾರ್ಥಿಸಿರಿ.
ယေ စ ယုၐ္မာန် ၑပန္တိ တေဘျ အာၑိၐံ ဒတ္တ ယေ စ ယုၐ္မာန် အဝမနျန္တေ တေၐာံ မင်္ဂလံ ပြာရ္ထယဓွံ၊
29 ಒಂದು ಕೆನ್ನೆಯ ಮೇಲೆ ನಿನ್ನನ್ನು ಹೊಡೆಯುವವನಿಗೆ ಮತ್ತೊಂದನ್ನು ಸಹ ತೋರಿಸು. ನಿನ್ನ ಮೇಲಂಗಿಯನ್ನು ತೆಗೆದುಕೊಳ್ಳುವವನಿಗೆ, ನಿನ್ನ ಒಳ ಅಂಗಿಯನ್ನು ಕೊಟ್ಟುಬಿಡು.
ယဒိ ကၑ္စိတ် တဝ ကပေါလေ စပေဋာဃာတံ ကရောတိ တရှိ တံ ပြတိ ကပေါလမ် အနျံ ပရာဝရ္တ္တျ သမ္မုခီကုရု ပုနၑ္စ ယဒိ ကၑ္စိတ် တဝ ဂါတြီယဝသ္တြံ ဟရတိ တရှိ တံ ပရိဓေယဝသ္တြမ် အပိ ဂြဟီတုံ မာ ဝါရယ၊
30 ನಿನ್ನಿಂದ ಕೇಳುವ ಪ್ರತಿಯೊಬ್ಬರಿಗೂ ಕೊಡು, ನಿನ್ನ ಸೊತ್ತನ್ನು ತೆಗೆದುಕೊಳ್ಳುವವನಿಂದ, ಅವುಗಳನ್ನು ತಿರುಗಿ ಕೇಳಬೇಡ.
ယသ္တွာံ ယာစတေ တသ္မဲ ဒေဟိ, ယၑ္စ တဝ သမ္ပတ္တိံ ဟရတိ တံ မာ ယာစသွ၊
31 ಇತರರು ನಿಮಗೆ ಏನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿರಿ.
ပရေဘျး သွာန် ပြတိ ယထာစရဏမ် အပေက္ၐဓွေ ပရာန် ပြတိ ယူယမပိ တထာစရတ၊
32 “ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ, ನಿಮಗೇನು ದೊಡ್ಡಸ್ತಿಕೆ ಬಂದೀತು? ಪಾಪಿಗಳು ಸಹ ತಮ್ಮನ್ನು ಪ್ರೀತಿಸುವವರನ್ನೇ ಪ್ರೀತಿಸುತ್ತಾರೆ.
ယေ ဇနာ ယုၐ္မာသု ပြီယန္တေ ကေဝလံ တေၐု ပြီယမာဏေၐု ယုၐ္မာကံ ကိံ ဖလံ? ပါပိလောကာ အပိ သွေၐု ပြီယမာဏေၐု ပြီယန္တေ၊
33 ನಿಮಗೆ ಒಳ್ಳೆಯದನ್ನು ಮಾಡುವವರಿಗೆ ನೀವು ಒಳ್ಳೆಯದನ್ನು ಮಾಡಿದರೆ ವಿಶೇಷವೇನು? ಪಾಪಿಗಳು ಸಹ ಹಾಗೆಯೇ ಮಾಡುತ್ತಾರಲ್ಲಾ.
ယဒိ ဟိတကာရိဏ ဧဝ ဟိတံ ကုရုထ တရှိ ယုၐ္မာကံ ကိံ ဖလံ? ပါပိလောကာ အပိ တထာ ကုရွွန္တိ၊
34 ಯಾರಿಂದ ತಿರುಗಿ ಪಡೆದುಕೊಳ್ಳಬೇಕೆಂದು ನಿರೀಕ್ಷಿಸುತ್ತೀರೋ ಅಂಥವರಿಗೆ ಸಾಲಕೊಟ್ಟರೆ, ಅದರಿಂದ ನಿಮಗೆ ವಿಶೇಷವೇನು? ಪಾಪಿಗಳು ಸಹ ಹಾಗೆಯೇ ತಾವು ಕೊಟ್ಟದ್ದನ್ನು ತಿರುಗಿ ಪಡೆಯುವಂತೆ, ಪಾಪಿಗಳಿಗೆ ಸಾಲ ಕೊಡುತ್ತಾರೆ.
ယေဘျ ၒဏပရိၑောဓသျ ပြာပ္တိပြတျာၑာသ္တေ ကေဝလံ တေၐု ၒဏေ သမရ္ပိတေ ယုၐ္မာကံ ကိံ ဖလံ? ပုနး ပြာပ္တျာၑယာ ပါပီလောကာ အပိ ပါပိဇနေၐု ၒဏမ် အရ္ပယန္တိ၊
35 ಆದರೆ ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಅವರಿಗೆ ಒಳ್ಳೆಯದನ್ನು ಮಾಡಿರಿ. ಏನನ್ನೂ ತಿರುಗಿ ನಿರೀಕ್ಷಿಸದೆ ಸಾಲ ಕೊಡಿರಿ, ಆಗ ನಿಮ್ಮ ಪ್ರತಿಫಲ ದೊಡ್ಡದಾಗಿರುವುದು. ನೀವು ಮಹೋನ್ನತ ದೇವರ ಮಕ್ಕಳಾಗಿರುವಿರಿ, ಅವರು ಕೃತಜ್ಞತೆಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವರಾಗಿದ್ದಾರೆ.
အတော ယူယံ ရိပုၐွပိ ပြီယဓွံ, ပရဟိတံ ကုရုတ စ; ပုနး ပြာပ္တျာၑာံ တျက္တွာ ၒဏမရ္ပယတ, တထာ ကၖတေ ယုၐ္မာကံ မဟာဖလံ ဘဝိၐျတိ, ယူယဉ္စ သရွွပြဓာနသျ သန္တာနာ ဣတိ ချာတိံ ပြာပ္သျထ, ယတော ယုၐ္မာကံ ပိတာ ကၖတဃ္နာနာံ ဒုရွ္ဋတ္တာနာဉ္စ ဟိတမာစရတိ၊
36 ನಿಮ್ಮ ತಂದೆಯು ಕರುಣೆಯುಳ್ಳವರಾಗಿರುವ ಪ್ರಕಾರ, ನೀವೂ ಕರುಣೆಯುಳ್ಳವರಾಗಿರಿ.
အတ ဧဝ သ ယထာ ဒယာလု ရျူယမပိ တာဒၖၑာ ဒယာလဝေါ ဘဝတ၊
37 “ತೀರ್ಪುಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ. ಇತರರನ್ನು ಅಪರಾಧಿಯೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವುದಿಲ್ಲ. ಕ್ಷಮಿಸಿರಿ, ಆಗ ನಿಮ್ಮನ್ನೂ ಕ್ಷಮಿಸುವರು.
အပရဉ္စ ပရာန် ဒေါၐိဏော မာ ကုရုတ တသ္မာဒ် ယူယံ ဒေါၐီကၖတာ န ဘဝိၐျထ; အဒဏ္ဍျာန် မာ ဒဏ္ဍယတ တသ္မာဒ် ယူယမပိ ဒဏ္ဍံ န ပြာပ္သျထ; ပရေၐာံ ဒေါၐာန် က္ၐမဓွံ တသ္မာဒ် ယုၐ္မာကမပိ ဒေါၐား က္ၐမိၐျန္တေ၊
38 ಕೊಡಿರಿ, ಆಗ ನಿಮಗೂ ಕೊಡುವರು. ಒಳ್ಳೆಯ ಅಳತೆಯಲ್ಲಿ ಒತ್ತಿ, ಕುಲುಕಿ, ಚೆಲ್ಲುವಂತೆ ಮನುಷ್ಯರು ನಿಮ್ಮ ಮಡಿಲಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು,” ಎಂದರು.
ဒါနာနိဒတ္တ တသ္မာဒ် ယူယံ ဒါနာနိ ပြာပ္သျထ, ဝရဉ္စ လောကား ပရိမာဏပါတြံ ပြဒလယျ သဉ္စာလျ ပြောဉ္စာလျ ပရိပူရျျ ယုၐ္မာကံ ကြောဍေၐု သမရ္ပယိၐျန္တိ; ယူယံ ယေန ပရိမာဏေန ပရိမာထ တေနဲဝ ပရိမာဏေန ယုၐ္မတ္ကၖတေ ပရိမာသျတေ၊
39 ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದು: “ಕುರುಡನು ಕುರುಡನಿಗೆ ದಾರಿತೋರಿಸಬಲ್ಲನೋ? ಅವರಿಬ್ಬರೂ ಹಳ್ಳಕ್ಕೆ ಬೀಳುವರಲ್ಲವೇ?
အထ သ တေဘျော ဒၖၐ္ဋာန္တကထာမကထယတ်, အန္ဓော ဇနး ကိမန္ဓံ ပန္ထာနံ ဒရ္ၑယိတုံ ၑက္နောတိ? တသ္မာဒ် ဥဘာဝပိ ကိံ ဂရ္တ္တေ န ပတိၐျတး?
40 ತನ್ನ ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ, ಆದರೆ ಪರಿಪೂರ್ಣನಾಗಿರುವ ಪ್ರತಿಯೊಬ್ಬನು ತನ್ನ ಗುರುವಿನಂತೆ ಇರುವನಷ್ಟೇ.
ဂုရေား ၑိၐျော န ၑြေၐ္ဌး ကိန္တု ၑိၐျေ သိဒ္ဓေ သတိ သ ဂုရုတုလျော ဘဝိတုံ ၑက္နောတိ၊
41 “ನೀನು ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೋಡದೆ, ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ನೋಡುವುದೇಕೆ?
အပရဉ္စ တွံ သွစက္ၐုၐိ နာသာမ် အဒၖၐ္ဋွာ တဝ ဘြာတုၑ္စက္ၐုၐိ ယတ္တၖဏမသ္တိ တဒေဝ ကုတး ပၑျမိ?
42 ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೀನು ತೆಗೆಯದೆ ನಿನ್ನ ಸಹೋದರನಿಗೆ, ‘ಸಹೋದರನೇ, ನಿನ್ನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆಯುತ್ತೇನೆ,’ ಎಂದು ನೀನು ಹೇಳುವುದು ಹೇಗೆ? ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ತೆಗೆದುಹಾಕು, ಆಮೇಲೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆಯಲು ನಿನ್ನ ಕಣ್ಣು ಸ್ಪಷ್ಟವಾಗಿ ಕಾಣುವುದು.
သွစက္ၐုၐိ ယာ နာသာ ဝိဒျတေ တာမ် အဇ္ဉာတွာ, ဘြာတသ္တဝ နေတြာတ် တၖဏံ ဗဟိး ကရောမီတိ ဝါကျံ ဘြာတရံ ကထံ ဝက္တုံ ၑက္နောၐိ? ဟေ ကပဋိန် ပူရွွံ သွနယနာတ် နာသာံ ဗဟိး ကုရု တတော ဘြာတုၑ္စက္ၐုၐသ္တၖဏံ ဗဟိး ကရ္တ္တုံ သုဒၖၐ္ဋိံ ပြာပ္သျသိ၊
43 “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ, ಇಲ್ಲವೆ ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ.
အနျဉ္စ ဥတ္တမသ္တရုး ကဒါပိ ဖလမနုတ္တမံ န ဖလတိ, အနုတ္တမတရုၑ္စ ဖလမုတ္တမံ န ဖလတိ ကာရဏာဒတး ဖလဲသ္တရဝေါ ဇ္ဉာယန္တေ၊
44 ಪ್ರತಿಯೊಂದು ಮರವು ಅದರ ಫಲದಿಂದಲೇ ಗೊತ್ತಾಗುವುದು. ಏಕೆಂದರೆ ಮನುಷ್ಯರು ಮುಳ್ಳುಗಿಡಗಳಲ್ಲಿ ಅಂಜೂರಗಳನ್ನು ಕೀಳುವುದಿಲ್ಲ, ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿಗಳನ್ನು ಕೊಯ್ಯುವುದಿಲ್ಲ.
ကဏ္ဋကိပါဒပါတ် ကောပိ ဥဍုမ္ဗရဖလာနိ န ပါတယတိ တထာ ၑၖဂါလကောလိဝၖက္ၐာဒပိ ကောပိ ဒြာက္ၐာဖလံ န ပါတယတိ၊
45 ಒಳ್ಳೆಯವನು ತನ್ನ ಹೃದಯದ ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಆದರೆ ಕೆಟ್ಟವನು ತನ್ನ ಹೃದಯದ ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವದನ್ನೇ ಅವನ ಬಾಯಿ ಮಾತನಾಡುತ್ತದೆ.
တဒွတ် သာဓုလောကော'န္တးကရဏရူပါတ် သုဘာဏ္ဍာဂါရာဒ် ဥတ္တမာနိ ဒြဝျာဏိ ဗဟိး ကရောတိ, ဒုၐ္ဋော လောကၑ္စာန္တးကရဏရူပါတ် ကုဘာဏ္ဍာဂါရာတ် ကုတ္သိတာနိ ဒြဝျာဏိ နိရ္ဂမယတိ ယတော'န္တးကရဏာနာံ ပူရ္ဏဘာဝါနုရူပါဏိ ဝစာံသိ မုခါန္နိရ္ဂစ္ဆန္တိ၊
46 “ನನ್ನನ್ನು ನೀವು, ‘ಕರ್ತದೇವರೇ, ಕರ್ತದೇವರೇ,’ ಎಂದು ಕರೆದು ನಾನು ಹೇಳುವವುಗಳನ್ನು ನೀವು ಮಾಡದೆ ಇರುವುದು ಏಕೆ?
အပရဉ္စ မမာဇ္ဉာနုရူပံ နာစရိတွာ ကုတော မာံ ပြဘော ပြဘော ဣတိ ဝဒထ?
47 ಯಾರು ನನ್ನ ಬಳಿಗೆ ಬಂದು ನನ್ನ ಮಾತನ್ನು ಕೇಳಿ ಅದರಂತೆ ನಡೆಯುತ್ತಾರೋ, ಅಂಥವರು ಯಾರಿಗೆ ಸಮಾನರಾಗಿದ್ದಾರೆಂದು ನಾನು ನಿಮಗೆ ತೋರಿಸುತ್ತೇನೆ.
ယး ကၑ္စိန် မမ နိကဋမ် အာဂတျ မမ ကထာ နိၑမျ တဒနုရူပံ ကရ္မ္မ ကရောတိ သ ကသျ သဒၖၑော ဘဝတိ တဒဟံ ယုၐ္မာန် ဇ္ဉာပယာမိ၊
48 ಅವರು ಆಳವಾಗಿ ಅಗೆದು ಬಂಡೆಯ ಮೇಲೆ ಅಸ್ತಿವಾರವನ್ನು ಹಾಕಿ, ಮನೆ ಕಟ್ಟಿದವರಿಗೆ ಸಮಾನರಾಗಿದ್ದಾರೆ. ಪ್ರಳಯವು ಎದ್ದು, ಪ್ರವಾಹವು ಆ ಮನೆಗೆ ರಭಸವಾಗಿ ಬಡಿದರೂ ಅದನ್ನು ಕದಲಿಸಲಿಕ್ಕಾಗದೆ ಹೋಯಿತು, ಏಕೆಂದರೆ ಅದು ಬಲವಾಗಿ ಕಟ್ಟಲಾಗಿತ್ತು.
ယော ဇနော ဂဘီရံ ခနိတွာ ပါၐာဏသ္ထလေ ဘိတ္တိံ နိရ္မ္မာယ သွဂၖဟံ ရစယတိ တေန သဟ တသျောပမာ ဘဝတိ; ယတ အာပ္လာဝိဇလမေတျ တသျ မူလေ ဝေဂေန ဝဟဒပိ တဒ္ဂေဟံ လာဍယိတုံ န ၑက္နောတိ ယတသ္တသျ ဘိတ္တိး ပါၐာဏောပရိ တိၐ္ဌတိ၊
49 ಆದರೆ ನನ್ನ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದೆ ಇರುವವರು, ಅಸ್ತಿವಾರವಿಲ್ಲದೆ ಮರಳಿನ ಮೇಲೆ ಮನೆ ಕಟ್ಟಿದವರಿಗೆ ಹೋಲಿಕೆಯಾಗಿದ್ದಾರೆ. ಪ್ರವಾಹವು ಆ ಮನೆಗೆ ಅಪ್ಪಳಿಸಿದಾಗ, ಕೂಡಲೇ ಅದು ಕುಸಿದು ಬಿತ್ತು. ಹೀಗೆ ಆ ಮನೆಯು ಸರ್ವನಾಶವಾಯಿತು.”
ကိန္တု ယး ကၑ္စိန် မမ ကထား ၑြုတွာ တဒနုရူပံ နာစရတိ သ ဘိတ္တိံ ဝိနာ မၖဒုပရိ ဂၖဟနိရ္မ္မာတြာ သမာနော ဘဝတိ; ယတ အာပ္လာဝိဇလမာဂတျ ဝေဂေန ယဒါ ဝဟတိ တဒါ တဒ္ဂၖဟံ ပတတိ တသျ မဟတ် ပတနံ ဇာယတေ၊

< ಲೂಕನು 6 >