< ಲೂಕನು 23 >

1 ಆಗ ಅಲ್ಲಿ ಕೂಡಿದ್ದವರೆಲ್ಲರೂ ಎದ್ದು ಯೇಸುವನ್ನು ಪಿಲಾತನ ಬಳಿಗೆ ಕರೆದುಕೊಂಡು ಹೋದರು.
Ils se levèrent en masse, et conduisirent Jésus devant Pilate.
2 ಅವರು ಯೇಸುವಿನ ಮೇಲೆ ದೂರು ಹೇಳಲಾರಂಭಿಸಿ, “ಈ ನಮ್ಮ ಜನಾಂಗವು ದಂಗೆಯೇಳುವಂತೆಯೂ ತಾನೇ ಕ್ರಿಸ್ತನೆಂಬ ಒಬ್ಬ ಅರಸನಾಗಿದ್ದೇನೆಂದೂ ಹೇಳಿ ಕೈಸರನಿಗೆ ತೆರಿಗೆ ಕೊಡದಂತೆ ಈತನು ಅಡ್ಡಿಮಾಡುತ್ತಿರುವುದನ್ನೂ ನಾವು ಕಂಡಿದ್ದೇವೆ,” ಎಂದರು.
Ils se mirent à l'accuser, disant: «Nous avons trouvé cet homme qui poussait notre nation à la révolte, et qui défendait de payer le tribut à César, se prétendant lui-même Messie, Roi.»
3 ಆಗ ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. ಅದಕ್ಕೆ ಯೇಸು ಅವರಿಗೆ, “ನೀವೇ ಹೇಳುತ್ತಿದ್ದೀರಿ,” ಎಂದರು.
Pilate l'interrogea, disant: «Tu es le roi des Juifs?» — «Tu le dis, » lui répondit Jésus.
4 ತರುವಾಯ ಪಿಲಾತನು, ಮುಖ್ಯಯಾಜಕರಿಗೂ ಜನರಿಗೂ, “ಈ ಮನುಷ್ಯನಲ್ಲಿ ನಾನು ಯಾವ ತಪ್ಪನ್ನೂ ಕಾಣಲಿಲ್ಲ,” ಎಂದನು.
Pilate dit aux principaux sacrificateurs et à la foule: «Je ne trouve rien de criminel en cet homme.»
5 ಅದಕ್ಕೆ ಅವರು, “ಈತನು ಗಲಿಲಾಯ ಪ್ರಾಂತ ಮೊದಲುಗೊಂಡು ಈ ಸ್ಥಳದವರೆಗೂ ಯೂದಾಯ ಪ್ರಾಂತದ ಎಲ್ಲಾ ಕಡೆಗೂ ಬೋಧಿಸುತ್ತಾ, ಜನರನ್ನು ಕ್ರಾಂತಿಗೆ ಪ್ರೇರೇಪಿಸುತ್ತಿದ್ದಾನೆ,” ಎಂದು ಒತ್ತಾಯ ಪೂರ್ವಕವಾಗಿ ಹೇಳಿದರು.
Mais ils insistèrent, disant: «Il agite le peuple, en enseignant par toute la Judée, après avoir commencé par la Galilée, et être venu jusqu'ici.»
6 ಪಿಲಾತನು ಗಲಿಲಾಯದ ವಿಷಯವಾಗಿ ಕೇಳಿದಾಗ, “ಈ ಮನುಷ್ಯನು ಗಲಿಲಾಯದವನೋ?” ಎಂದು ವಿಚಾರಿಸಿದನು.
Pilate, entendant nommer la Galilée, demanda si cet homme était Galiléen;
7 ಯೇಸು ಹೆರೋದನ ಅಧಿಕಾರಕ್ಕೆ ಸಂಬಂಧ ಪಟ್ಟವನೆಂದು ತಿಳಿದ ಕೂಡಲೇ ಅದೇ ಸಮಯದಲ್ಲಿ ಯೆರೂಸಲೇಮಿನಲ್ಲಿಯೇ ಇದ್ದ ಹೆರೋದನ ಬಳಿಗೆ ಯೇಸುವನ್ನು ಕಳುಹಿಸಿದನು.
et ayant appris qu'il était de la juridiction d'Hérode, il le renvoya à Hérode, qui était aussi à Jérusalem en ces jours-là.
8 ಹೆರೋದನು ಯೇಸುವನ್ನು ಕಂಡಾಗ, ಅತ್ಯಂತ ಸಂತೋಷಪಟ್ಟನು. ಏಕೆಂದರೆ ಅವನು ಯೇಸುವಿನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ, ಅವರನ್ನು ಕಾಣಲು ಬಹಳ ಕಾಲದಿಂದ ಆಶೆಪಟ್ಟಿದ್ದನು. ಅವರಿಂದಾಗುವ ಸೂಚಕಕಾರ್ಯವನ್ನು ಕಾಣಲು ನಿರೀಕ್ಷಿಸುತ್ತಿದ್ದನು.
Hérode eut une grande joie de voir Jésus, car depuis longtemps il en avait le désir, parce qu'il avait entendu parler de lui, et qu'il espérait le voir faire quelque miracle.
9 ಅವನು ಯೇಸುವನ್ನು ಅನೇಕ ಪ್ರಶ್ನೆಗಳನ್ನು ಕೇಳಿದರೂ ಯೇಸು ಅವನಿಗೆ ಏನೂ ಉತ್ತರ ಕೊಡಲಿಲ್ಲ.
Il lui adressa un grand nombre de questions, mais Jésus ne lui répondit rien.
10 ಮುಖ್ಯಯಾಜಕರೂ ನಿಯಮ ಬೋಧಕರು ನಿಂತುಕೊಂಡು ಬಲವಾಗಿ ಯೇಸುವಿನ ಮೇಲೆ ದೂರುಗಳನ್ನು ಹೇಳುತ್ತಿದ್ದರು.
Or les principaux sacrificateurs et les scribes étaient là, qui l'accusaient avec véhémence;
11 ಆಗ ಹೆರೋದನು ತನ್ನ ಸೈನಿಕರೊಂದಿಗೆ ಯೇಸುವನ್ನು ತಿರಸ್ಕರಿಸಿ, ಹಾಸ್ಯಮಾಡಿ, ಅವರ ಮೇಲೆ ರಾಜವಸ್ತ್ರವನ್ನು ಹೊದಿಸಿ ಅವರನ್ನು ತಿರುಗಿ ಪಿಲಾತನ ಬಳಿಗೆ ಕಳುಹಿಸಿದನು.
mais Hérode avec sa garde le traita avec mépris: il le fit revêtir par dérision d'un magnifique manteau, et le renvoya à Pilate.
12 ಪಿಲಾತನೂ ಹೆರೋದನೂ ಅದೇ ದಿನದಲ್ಲಿ ಒಬ್ಬರಿಗೊಬ್ಬರು ಸ್ನೇಹಿತರಾದರು. ಏಕೆಂದರೆ ಅದುವರೆಗೂ ಅವರು ವೈರಿಗಳಾಗಿದ್ದರು.
Le jour même, Pilate et Hérode devinrent amis, d'ennemis qu'ils étaient auparavant.
13 ಪಿಲಾತನು ಮುಖ್ಯಯಾಜಕರನ್ನೂ ಅಧಿಕಾರಿಗಳನ್ನೂ ಜನರನ್ನೂ ಒಟ್ಟಾಗಿ ಕರೆಯಿಸಿ ಅವರಿಗೆ,
Pilate, ayant assemblé les principaux sacrificateurs, les sénateurs et le peuple, leur dit:
14 “ಜನರು ತಿರುಗಿ ಬೀಳುವಂತೆ ಮಾಡುತ್ತಾನೆಂದು ನೀವು ಈತನನ್ನು ನನ್ನ ಬಳಿಗೆ ತಂದಿದ್ದೀರಿ. ಇಗೋ, ನೀವು ಈತನ ಮೇಲೆ ತಂದಿರುವ ದೂರುಗಳನ್ನು ನಾನು ನಿಮ್ಮ ಮುಂದೆಯೇ ವಿಚಾರಿಸಿದಾಗ ಈತನಲ್ಲಿ ನನಗೆ ಯಾವ ಅಪರಾಧವೂ ಕಾಣಲಿಲ್ಲ.
«Vous avez traduit devant moi cet homme, comme excitant le peuple à la révolte, et, après l'avoir interrogé en votre présence, je ne l'ai trouvé coupable d'aucun des crimes dont vous l'accusez.
15 ಮಾತ್ರವಲ್ಲದೆ, ಈತನನ್ನು ನಮ್ಮ ಬಳಿಗೆ ಕಳುಹಿಸಿದ ಹೆರೋದ ಅರಸನಿಗೂ ಸಹ ಈತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ. ಇಗೋ, ಈತನಲ್ಲಿ ಮರಣಕ್ಕೆ ಯೋಗ್ಯವಾದದ್ದೇನೂ ಕಾಣಲಿಲ್ಲ.
Hérode non plus, car je vous ai renvoyés à lui, et, vous le voyez, cet homme n'a rien fait qui mérite la mort.
16 ಹೀಗಿರುವುದರಿಂದ ನಾನು ಈತನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.
Je le relâcherai donc, après l'avoir fait châtier.»
17 ಏಕೆಂದರೆ ಅಧಿಪತಿಯು ಸೆರೆಯಾಳು ಒಬ್ಬನನ್ನು ಹಬ್ಬದಲ್ಲಿ ಜನರಿಗೋಸ್ಕರ ಬಿಡಿಸುವುದು ಪದ್ಧತಿಯಾಗಿತ್ತು.
[Or il était obligé à chaque fête de leur relâcher un prisonnier]
18 ಆಗ ಅವರೆಲ್ಲರೂ ಆ ಕ್ಷಣವೇ, “ಈತನಿಗೆ ಮರಣದಂಡನೆ ವಿಧಿಸಿರಿ, ನಮಗೆ ಬರಬ್ಬನನ್ನು ಬಿಡುಗಡೆಮಾಡು,” ಎಂದು ಬೊಬ್ಬೆಹಾಕಿದರು.
Mais ils crièrent tous à la fois: «Fais-le mourir! Relâche-nous Barabbas.»
19 ಬರಬ್ಬನು ಪಟ್ಟಣದಲ್ಲಿ ನಡೆದ ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಯಲ್ಲಿ ಹಾಕಿದವನಾಗಿದ್ದನು.
Ce Barabbas avait été mis en prison pour une sédition qui avait eu lieu dans la ville, et pour un meurtre.
20 ಪಿಲಾತನು ಯೇಸುವನ್ನು ಬಿಡಿಸಬೇಕೆಂದು ಮನಸ್ಸುಳ್ಳವನಾಗಿ ಮತ್ತೊಮ್ಮೆ ಜನರಲ್ಲಿ ಮನವಿ ಮಾಡಿಕೊಂಡನು.
Pilate, qui désirait relâcher Jésus, les harangua donc de nouveau;
21 ಅವರಾದರೋ, “ಈತನನ್ನು ಶಿಲುಬೆಗೆ ಹಾಕಿಸು, ಈತನನ್ನು ಶಿಲುಬೆಗೆ ಹಾಕಿಸು!” ಎಂದು ಆರ್ಭಟಿಸತೊಡಗಿದರು.
mais ils répondirent par les cris de «crucifie-le! crucifie-le!»
22 ಪಿಲಾತನು ಮೂರನೆಯ ಸಾರಿ ಅವರಿಗೆ, “ಏಕೆ? ಈತನು ಮಾಡಿದ ಅಪರಾಧವೇನು? ಈತನಲ್ಲಿ ಮರಣದಂಡನೆಗೆ ಕಾರಣವಾದದ್ದೇನೂ ನನಗೆ ಕಾಣಲಿಲ್ಲ. ಆದ್ದರಿಂದ ನಾನು ಈತನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.
Il leur dit pour la troisième fois: «Quel mal a-t-il donc fait? Je n'ai rien trouvé en lui qui mérite la mort; je le relâcherai donc, après l'avoir fait châtier?»
23 ಆದರೆ ಯೇಸುವನ್ನು ಶಿಲುಬೆಗೆ ಹಾಕಿಸಬೇಕೆಂದು ಜನರು ಆರ್ಭಟಿಸುತ್ತಾ, ಒತ್ತಾಯಮಾಡಿದರು. ಹೀಗೆ ಅವರ ಕೂಗಾಟವೇ ಗೆದ್ದಿತು.
Mais ils insistèrent, demandant à grands cris qu'il fût crucifié, et leurs clameurs et celles des principaux sacrificateurs prévalurent,
24 ಪಿಲಾತನು ಅವರು ಕೇಳಿಕೊಂಡಂತೆಯೇ ಆಗಲಿ ಎಂದು ನಿರ್ಣಯಿಸಿದನು.
et Pilate prononça que ce qu'ils demandaient serait exécuté:
25 ಇದಲ್ಲದೆ ಪಿಲಾತನು ಜನರು ಬರಬ್ಬನನ್ನು ಎಂದರೆ, ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಮನೆಯೊಳಗೆ ಹಾಕಿದವನನ್ನು ಅವರಿಗೆ ಬಿಟ್ಟುಕೊಟ್ಟು, ಯೇಸುವನ್ನೋ ಅವರ ಇಷ್ಟಕ್ಕೆ ಒಪ್ಪಿಸಿದನು.
il leur relâcha celui qui avait été mis en prison pour sédition et pour meurtre, et qu'ils réclamaient; et il leur abandonna Jésus.
26 ಸೈನಿಕರು ಯೇಸುವನ್ನು ತೆಗೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ ಕುರೇನೆದ ಸೀಮೋನನೆಂಬವನನ್ನು ಹಿಡಿದು, ಅವನ ಮೇಲೆ ಶಿಲುಬೆಯನ್ನು ಹೊರಿಸಿ, ಯೇಸುವಿನ ಹಿಂದೆ ಹೊತ್ತುಕೊಂಡು ಹೋಗುವಂತೆ ಮಾಡಿದರು.
Comme ils l'emmenaient au supplice, ils prirent un nommé Simon, de Cyrène, qui venait des champs, et ils le chargèrent de la croix, pour qu'il la portât derrière Jésus.
27 ಜನರ ಮಹಾ ಸಮೂಹ ಯೇಸುವಿನ ಹಿಂದೆ ಹೊರಟಿತು. ಅವರಲ್ಲಿ ಯೇಸುವಿಗಾಗಿ ಶೋಕಿಸುತ್ತಾ, ಗೋಳಾಡುತ್ತಿದ್ದ ಮಹಿಳೆಯರು ಸಹ ಇದ್ದರು.
Or, Jésus était suivi d'une grande foule de peuple, et particulièrement de femmes qui se frappaient la poitrine et pleuraient sur lui.
28 ಯೇಸು ಅವರ ಕಡೆಗೆ ತಿರುಗಿಕೊಂಡು, “ಯೆರೂಸಲೇಮಿನ ಪುತ್ರಿಯರೇ, ನನಗಾಗಿ ಅಳಬೇಡಿರಿ. ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿ ಅಳಿರಿ.
Il se tourna vers elles, et leur dit: «Filles de Jérusalem, ne pleurez pas sur moi, mais pleurez sur vous-mêmes et sur vos enfants;
29 ಏಕೆಂದರೆ, ‘ಇಗೋ, ಬಂಜೆಯರೂ ಹೆರದವರೂ ಹಾಲು ಕುಡಿಸದವರೂ ಧನ್ಯರು,’ ಎಂದು ಜನರು ಹೇಳುವ ದಿವಸಗಳು ಬರುತ್ತವೆ.
car les temps viennent où l’on dira: «Heureuses les stériles! Heureux le sein qui n'a point enfanté! Heureuses les mamelles qui n'ont point nourri!»
30 ಆಗ ಅವರು, “‘ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ!” ಗುಡ್ಡಗಳಿಗೆ, “ನಮ್ಮನ್ನು ಮುಚ್ಚಿಕೊಳ್ಳಿರಿ!”’ ಎಂದು ಹೇಳಲಾರಂಭಿಸುವರು.
Alors on se mettra à dire aux montagnes: «Tombez sur nous; » et aux collines: «Couvrez-nous; »
31 ಅವರು ಹಸಿ ಮರಕ್ಕೆ ಇವುಗಳನ್ನು ಮಾಡಿದರೆ, ಒಣ ಮರಕ್ಕೆ ಇನ್ನೇನು ಮಾಡಿಯಾರು?” ಎಂದರು.
car si l'on fait ces choses au bois vert, que fera-t-on au bois sec?»
32 ಅಪರಾಧಿಗಳಾದ ಬೇರೆ ಇಬ್ಬರನ್ನು ಕೂಡ ಯೇಸುವಿನೊಂದಿಗೆ ಮರಣದಂಡನೆಗಾಗಿ ಕರೆದುಕೊಂಡು ಹೋದರು.
Les soldats conduisaient en même temps deux malfaiteurs pour être mis à mort avec lui.
33 ಅವರು “ತಲೆಬುರುಡೆಯ ಸ್ಥಳ” ಎಂದು ಕರೆಯಲಾಗುವ ಸ್ಥಳಕ್ಕೆ ಬಂದಾಗ, ಅಲ್ಲಿ ಯೇಸುವನ್ನು ಶಿಲುಬೆಗೆ ಹಾಕಿದರು. ಆ ಅಪರಾಧಿಗಳಲ್ಲಿ ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿ ಮತ್ತೊಬ್ಬನನ್ನು ಅವರ ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು.
Quand ils furent arrivés au lieu appelé Calvaire, ils y crucifièrent Jésus, ainsi que les malfaiteurs, l'un à sa droite, l'autre à sa gauche;
34 ಆಗ ಯೇಸು, “ತಂದೆಯೇ, ಇವರನ್ನು ಕ್ಷಮಿಸಿ, ತಾವು ಏನು ಮಾಡುತ್ತಿದ್ದಾರೆಂದು ಅರಿಯರು,” ಎಂದರು. ಸೈನಿಕರಾದರೋ ಯೇಸುವಿನ ಉಡುಪನ್ನು ಚೀಟುಹಾಕಿ, ಹಂಚಿಕೊಂಡರು.
et Jésus dit: «Père, pardonne-leur, car ils ne savent ce qu'ils font.» Ils se partagèrent ses vêtements en les tirant au sort.
35 ಜನರು ನೋಡುತ್ತಾ ನಿಂತುಕೊಂಡಿದ್ದರು. ಅವರೊಂದಿಗೆ ಅಧಿಕಾರಿಗಳು ಸಹ ಯೇಸುವನ್ನು ಅಪಹಾಸ್ಯಮಾಡಿ, “ಬೇರೆಯವರನ್ನು ರಕ್ಷಿಸಿದ ಈತನು ದೇವರು ಆರಿಸಿಕೊಂಡ ಕ್ರಿಸ್ತನಾಗಿದ್ದರೆ, ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ,” ಎಂದರು.
Le peuple était là qui regardait. Les sénateurs se moquaient et disaient: «Il en a sauvé d'autres, qu'il se sauve lui-même, s'il est le Messie, l'élu de Dieu.»
36 ಸೈನಿಕರು ಸಹ ಯೇಸುವಿನ ಬಳಿಗೆ ಬಂದು ಅವರನ್ನು ಹಾಸ್ಯಮಾಡಿ ಯೇಸುವಿಗೆ ಹುಳಿರಸವನ್ನು ಕೊಟ್ಟು,
Les soldats aussi, s'approchant pour lui présenter du vinaigre, le raillaient,
37 “ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೋ,” ಎಂದರು.
et disaient: «Si tu es le roi des Juifs, sauve-toi toi-même.»
38 ಯೇಸುವಿನ ಶಿಲುಬೆಯ ಮೇಲ್ಗಡೆಯಲ್ಲಿ ಒಂದು ಲಿಖಿತ ಹೀಗಿತ್ತು: ಈತನು ಯೆಹೂದ್ಯರ ಅರಸನು.
Il y avait même une inscription au-dessus de sa tête, portant: «Celui-ci est le Roi des Juifs.»
39 ಶಿಲುಬೆಗೆ ಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, “ನೀನು ಕ್ರಿಸ್ತನಾಗಿದ್ದರೆ ನಿನ್ನನ್ನು ರಕ್ಷಿಸಿಕೊಂಡು, ನಮ್ಮನ್ನೂ ರಕ್ಷಿಸು,” ಎಂದು ಯೇಸುವನ್ನು ದೂಷಿಸಿದನು.
L'un des malfaiteurs pendus à la croix, l'injuriait, disant: «N'es-tu pas le Messie? Sauve-toi toi-même, et nous avec toi.»
40 ಆದರೆ ಮತ್ತೊಬ್ಬ ಅಫರಾಧಿಯು ಅವನನ್ನು ಖಂಡಿಸುತ್ತಾ, “ನೀನು ಇದೇ ದಂಡನೆಗೆ ಗುರಿಯಾಗಿದ್ದರೂ ದೇವರಿಗೆ ಭಯಪಡುವುದಿಲ್ಲವೋ?
Mais l'autre le reprenait: «N'as-tu point de crainte de Dieu, toi qui subis le même jugement?
41 ನಮಗಾದರೋ ನಮ್ಮ ಕೃತ್ಯಕ್ಕೆ ತಕ್ಕ ಶಿಕ್ಷೆ ನ್ಯಾಯವಾಗಿ ಸಿಕ್ಕಿದೆ. ಈತನಾದರೋ ತಪ್ಪಾದದ್ದೇನೂ ಮಾಡಲಿಲ್ಲ,” ಎಂದನು.
Pour nous, c'est justice; car nous recevons la peine que nos crimes ont méritée; mais lui, il n'a rien fait de mal.»
42 ಬಳಿಕ ಅವನು, “ಯೇಸುವೇ, ನೀವು ನಿಮ್ಮ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪುಮಾಡಿಕೊಳ್ಳಿರಿ,” ಎಂದನು.
Et il dit à Jésus: «Souviens-toi de moi, quand tu seras dans ton règne.»
43 ಆಗ ಯೇಸು ಅವನಿಗೆ, “ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವೆ ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
Et Jésus répondit: «Je te dis en vérité, qu'aujourd'hui même tu seras avec moi dans le paradis.»
44 ಆಗ ಸುಮಾರು ಮಧ್ಯಾಹ್ನವಾಗಿತ್ತು, ಆ ಹೊತ್ತಿನಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.
Il était déjà environ la sixième heure, quand des ténèbres se répandirent sur tout le pays jusqu’à la neuvième heure.
45 ಸೂರ್ಯನು ಕಳೆಗುಂದಿದನು ಮತ್ತು ದೇವಾಲಯದ ತೆರೆಯು ಹರಿದು ಎರಡು ಭಾಗವಾಯಿತು.
Le soleil pâlit; le voile du temple se déchira par le milieu;
46 ಯೇಸು ಮಹಾಧ್ವನಿಯಿಂದ, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇನೆ,” ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.
et Jésus s'écria d'une voix forte: «Père, je remets mon esprit entre tes mains.» En prononçant ces mots, il expira.
47 ಆಗ ಶತಾಧಿಪತಿಯು, ನಡೆದದ್ದನ್ನು ಕಂಡು, “ಈತನು ನೀತಿವಂತನೇ ಸರಿ,” ಎಂದು ಹೇಳಿ ದೇವರನ್ನು ಮಹಿಮೆಪಡಿಸಿದನು.
Le centurion, témoin de ces événements, donna gloire à Dieu, disant: «Assurément cet homme était juste; »
48 ಆ ದೃಶ್ಯವನ್ನು ಕಾಣಲು ಬಂದ ಜನರು ನಡೆದ ಘಟನೆಗಳನ್ನು ಕಂಡು, ತಮ್ಮ ಎದೆಗಳನ್ನು ಬಡಿದುಕೊಂಡು ಹಿಂದಿರುಗಿ ಹೋದರು.
et les foules que ce spectacle avait attirées, voyant ce qui s'était passé, s'en retournaient toutes en se frappant la poitrine.
49 ಯೇಸುವಿಗೆ ಪರಿಚಯವಿದ್ದವರೆಲ್ಲರೂ ಗಲಿಲಾಯದಿಂದ ಅವರನ್ನು ಹಿಂಬಾಲಿಸಿದ ಸ್ತ್ರೀಯರೂ ದೂರದಲ್ಲಿ ನಿಂತು ಇವುಗಳನ್ನು ನೋಡುತ್ತಿದ್ದರು.
Mais tous ceux qui connaissaient Jésus, et les femmes qui l'avaient suivi de Galilée, se tenaient là, à l'écart, regardant ce qui se passait.
50 ಯೋಸೇಫನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು, ಇವನು ಆಲೋಚನಾ ಸಭೆಯವನೂ ಒಳ್ಳೆಯವನೂ ಮತ್ತು ನೀತಿವಂತನೂ ಆಗಿದ್ದನು.
Il y avait un sénateur, nommé Joseph, homme droit et juste,
51 ಇವನು ಅವರ ತೀರ್ಮಾನಕ್ಕೂ ಕೃತ್ಯಕ್ಕೂ ಒಪ್ಪಿಕೊಂಡಿರಲಿಲ್ಲ. ಇವನು ಯೆಹೂದ್ಯರ ಪಟ್ಟಣವಾದ ಅರಿಮಥಾಯದವನೂ ದೇವರ ರಾಜ್ಯಕ್ಕಾಗಿ ಎದುರುನೋಡುವವನೂ ಆಗಿದ್ದನು.
qui ne s'était associé ni au dessein, ni aux actes des autres sénateurs; il était originaire d'Arimathée. ville des Juifs, et il attendait le royaume de Dieu.
52 ಇವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ಕೊಡಲು ಬೇಡಿಕೊಂಡನು.
Il se rendit auprès de Pilate et lui demanda le corps de Jésus.
53 ತರುವಾಯ ಇವನು ಶರೀರವನ್ನು ಕೆಳಗೆ ಇಳಿಸಿ, ನಾರುಬಟ್ಟೆಯಲ್ಲಿ ಸುತ್ತಿ, ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿ ಇಟ್ಟನು, ಅದರಲ್ಲಿ ಅದುವರೆಗೆ ಯಾರನ್ನೂ ಇಟ್ಟಿರಲಿಲ್ಲ.
Il le descendit de la croix, l'enveloppa d'un linceul, et le déposa dans un sépulcre taillé dans le roc, où personne n'avait encore été mis.
54 ಅಂದು ಸಿದ್ಧತೆಯ ದಿನವಾಗಿತ್ತು. ಸಬ್ಬತ್ ದಿನ ಪ್ರಾರಂಭವಾಗಲಿತ್ತು.
C'était le jour de la préparation, et le sabbat allait commencer.
55 ಗಲಿಲಾಯದಿಂದ ಯೇಸುವಿನೊಂದಿಗೆ ಬಂದ ಸ್ತ್ರೀಯರು ಅರಿಮಥಾಯದ ಯೋಸೇಫನೊಂದಿಗೆ ಹೋಗಿ, ಸಮಾಧಿಯನ್ನೂ ದೇಹವನ್ನು ಅದರಲ್ಲಿಟ್ಟ ರೀತಿಯನ್ನೂ ನೋಡಿದರು.
Les femmes qui étaient venues de la Galilée avec Jésus, ayant accompagné Joseph, virent le sépulcre et la manière dont le corps de Jésus y fut placé,
56 ಅವರು ಮನೆಗೆ ಹಿಂತಿರುಗಿ ಪರಿಮಳ ದ್ರವ್ಯವನ್ನೂ ಸುಗಂಧ ತೈಲವನ್ನೂ ಸಿದ್ಧಪಡಿಸಿಕೊಂಡರು; ಆದರೆ ಮೋಶೆಯ ಆಜ್ಞಾನುಸಾರವಾಗಿ ಸಬ್ಬತ್ ದಿನದಲ್ಲಿ ವಿಶ್ರಮಿಸಿಕೊಂಡರು.
puis, s'en étant retournées, elles préparèrent des aromates et des parfums.

< ಲೂಕನು 23 >