< ಲೂಕನು 14 >

1 ಯೇಸು ಒಂದು ಸಬ್ಬತ್ ದಿನದಲ್ಲಿ, ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಯೊಳಗೆ ಊಟಕ್ಕೆ ಹೋದಾಗ, ಎಲ್ಲರು ಅವರನ್ನು ಗಮನಿಸುತ್ತಿದ್ದರು.
Một ngày Sa-bát, Đức Chúa Jêsus vào nhà một người kẻ cả dòng Pha-ri-si để dùng bữa, những người ở đó dòm hành Ngài.
2 ಅಲ್ಲಿ ದೇಹದಲ್ಲಿ ಅಸಾಧಾರಣವಾಗಿ ನೀರು ತುಂಬಿದ್ದ ರೋಗಿಯೊಬ್ಬನು ಯೇಸುವಿನ ಮುಂದೆ ಇದ್ದನು.
Số là có một người mắc bịnh thủy thũng ở trước mặt Ngài.
3 ಆಗ ಯೇಸು ನಿಯಮ ಪಂಡಿತರಿಗೂ ಫರಿಸಾಯರಿಗೂ, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ಮೋಶೆಯ ನಿಯಮದ ಪ್ರಕಾರವೋ?” ಎಂದು ಕೇಳಿದರು.
Đức Chúa Jêsus cất tiếng hỏi thầy dạy luật và người Pha-ri-si rằng: Trong ngày Sa-bát, có nên chữa bịnh hay không?
4 ಆದರೆ ಅವರು ಮೌನವಾಗಿಯೇ ಇದ್ದರು. ಆಗ ಯೇಸು, ಆ ರೋಗಿಯನ್ನು ಸ್ವಸ್ಥಮಾಡಿ ಕಳುಹಿಸಿಬಿಟ್ಟರು.
Họ đều làm thinh. Ngài bèn đem người bịnh chữa lành, rồi cho về.
5 ಆಗ ಯೇಸು ಅವರಿಗೆ, “ನಿಮ್ಮಲ್ಲಿ ಒಬ್ಬರ ಮಗುವಾಗಲಿ, ಎತ್ತಾಗಲಿ ಒಂದು ಬಾವಿಯಲ್ಲಿ ಬಿದ್ದರೆ, ಅದನ್ನು ತಕ್ಷಣವೇ ಸಬ್ಬತ್ ದಿನದಲ್ಲಿ ಮೇಲಕ್ಕೆ ಎಳೆಯುವುದಿಲ್ಲವೇ?” ಎಂದು ಕೇಳಿದರು.
Đoạn, Ngài phán cùng họ rằng: Nào có ai trong các ngươi, đang ngày Sa- bát, nếu có con trai hay là bò mình té xuống giếng mà không kéo liền lên sao?
6 ಅದಕ್ಕೆ ಅವರು ಉತ್ತರ ಕೊಡಲಾರದೆ ಇದ್ದರು.
Họ không đối đáp gì về điều đó được.
7 ಊಟಕ್ಕೆ ಆಹ್ವಾನಿತರು ತಮಗಾಗಿ ಮುಖ್ಯ ಸ್ಥಳಗಳನ್ನು ಹೇಗೆ ಆರಿಸಿಕೊಂಡರೆಂದು ಯೇಸು ಗುರುತಿಸಿ, ಅವರಿಗೆ ಒಂದು ಸಾಮ್ಯವನ್ನು ಹೇಳಿದರು:
Ngài thấy những kẻ được mời đều lựa chỗ ngồi trên, nên phán cùng họ thí dụ nầy:
8 “ಯಾರಾದರೂ ನಿನ್ನನ್ನು ಮದುವೆಯ ಊಟಕ್ಕೆ ಕರೆದರೆ ಮೊದಲನೆಯ ಸ್ಥಾನದಲ್ಲಿ ಕುಳಿತುಕೊಳ್ಳಬೇಡ, ಏಕೆಂದರೆ ಅವನು ನಿನಗಿಂತಲೂ ಗೌರವವುಳ್ಳ ಮನುಷ್ಯನನ್ನು ಆಹ್ವಾನಿಸಿರಬಹುದು.
Khi người ta mời ngươi dự tiệc cưới, chớ ngồi chỗ cao nhất, vì e rằng trong những khách mời có ai tôn trọng hơn ngươi,
9 ಆಗ, ನಿನ್ನನ್ನು ಮತ್ತು ಅವನನ್ನು ಆಹ್ವಾನಿಸಿದವನು ಬಂದು ನಿನಗೆ, ‘ಈ ಮನುಷ್ಯನಿಗೆ ಸ್ಥಳಕೊಡು,’ ಎಂದು ಹೇಳುವಾಗ ನೀನು ನಾಚಿಕೆಯಿಂದ ಕಡೇ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುವುದು.
người đứng mời sẽ đến nói cùng ngươi rằng: Hãy nhường chỗ cho người nầy ngồi, mà ngươi xấu hổ vì phải xuống chỗ chót chăng.
10 ಆದರೆ ನಿನ್ನನ್ನು ಆಹ್ವಾನಿಸಿದಾಗ, ಹೋಗಿ ಕಡೇ ಸ್ಥಳದಲ್ಲಿ ಕುಳಿತುಕೋ, ಆಗ ನಿನ್ನನ್ನು ಆಹ್ವಾನಿಸಿದವನು ಬಂದು ನಿನಗೆ, ‘ಸ್ನೇಹಿತನೇ, ಉತ್ತಮ ಸ್ಥಳಕ್ಕೆ ಬಾ,’ ಎಂದು ಹೇಳುವಾಗ ನಿನ್ನ ಜೊತೆಯಲ್ಲಿ ಊಟಕ್ಕೆ ಕುಳಿತವರೆಲ್ಲರ ಮುಂದೆ ನಿನಗೆ ಗೌರವವಿರುವುದು.
Nhưng khi ngươi được mời, hãy ngồi chỗ chót, người đứng mời sẽ đến nói cùng ngươi rằng: Hỡi bạn, xin ngồi lên cao hơn. Vậy thì điều đó sẽ làm cho ngươi được kính trọng trước mặt những người đồng bàn mình.
11 ಏಕೆಂದರೆ, ಯಾರಾದರೂ ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವರೋ ಅವರು ತಗ್ಗಿಸಲಾಗುವರು ಮತ್ತು ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಹೆಚ್ಚಿಸಲಾಗುವರು,” ಎಂದರು.
Bởi vì ai tự nhắc mình lên, sẽ phải hạ xuống, còn ai tự hạ mình xuống, sẽ được nhắc lên.
12 ಯೇಸು ತಮ್ಮನ್ನು ಆಹ್ವಾನಿಸಿದವನಿಗೆ, “ನೀನು ಮಧ್ಯಾಹ್ನದ ಊಟಕ್ಕೆ ಇಲ್ಲವೆ ರಾತ್ರಿಯ ಊಟಕ್ಕೆ ಸಿದ್ಧಪಡಿಸಿದಾಗ, ನಿನ್ನ ಸ್ನೇಹಿತರನ್ನಾಗಲಿ ನಿನ್ನ ಸಹೋದರ ಸಹೋದರಿಯನ್ನಾಗಲಿ, ನಿನ್ನ ಬಂಧುಗಳನ್ನಾಗಲಿ, ಇಲ್ಲವೆ ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ, ಏಕೆಂದರೆ ಅವರೂ ಪ್ರತಿಯಾಗಿ ನಿನ್ನನ್ನೂ ಆಹ್ವಾನಿಸಬಹುದು ಮತ್ತು ನಿನಗೆ ಪ್ರತ್ಯುಪಕಾರವಾದೀತು.
Ngài cũng phán với người mời Ngài rằng: Khi ngươi đãi bữa trưa hoặc bữa tối, đừng mời bạn hữu, anh em, bà con và láng giềng giàu, e rằng họ cũng mời lại mà trả cho ngươi chăng.
13 ಆದರೆ ನೀನು ಔತಣಮಾಡಿಸಿದಾಗ, ಬಡವರನ್ನೂ ಊನವಾದವರನ್ನೂ ಕುಂಟರನ್ನೂ ಕುರುಡರನ್ನೂ ಆಹ್ವಾನಿಸು.
Song khi ngươi đãi tiệc, hãy mời những kẻ nghèo khó, tàn tật, què, đui,
14 ಆಗ ಅವರು ನಿನಗೆ ಪ್ರತ್ಯುಪಕಾರ ಮಾಡುವುದಕ್ಕೆ ಆಗದಿರುವುದರಿಂದ, ನೀನು ಧನ್ಯನಾಗುವೆ. ಏಕೆಂದರೆ ನೀತಿವಂತರ ಪುನರುತ್ಥಾನದಲ್ಲಿ ನಿನಗೆ ಪ್ರತ್ಯುಪಕಾರವಾಗುವುದು.”
thì ngươi sẽ được phước, vì họ không có thể trả lại cho ngươi; đến k” kẻ công bình sống lại, ngươi sẽ được trả.
15 ಯೇಸುವಿನ ಸಂಗಡ ಔತಣಕ್ಕೆ ಕುಳಿತವರಲ್ಲಿ ಒಬ್ಬನು ಈ ಸಂಗತಿಗಳನ್ನು ಕೇಳಿ ಅವರಿಗೆ, “ದೇವರ ರಾಜ್ಯದಲ್ಲಿ ಊಟಮಾಡುವವನು ಧನ್ಯನು,” ಎಂದು ಹೇಳಿದನು.
Một người đồng tiệc nghe lời đó, thì thưa Ngài rằng: Phước cho kẻ sẽ được ăn bánh trong nước Đức Chúa Trời!
16 ಯೇಸು ಅವನಿಗೆ ಹೀಗೆ ಹೇಳಿದರು: “ಒಬ್ಬ ಮನುಷ್ಯನು ಒಂದು ದೊಡ್ಡ ಔತಣ ಮಾಡಿಸಿ ಅನೇಕರನ್ನು ಆಹ್ವಾನಿಸಿದನು.
Nhưng Đức Chúa Jêsus đáp rằng: Có người kia dọn tiệc lớn, mời nhiều người ăn.
17 ಊಟಕ್ಕೆ ಸಮಯವಾದಾಗ ಆಹ್ವಾನಿತರಿಗೆ ಅವನು, ‘ಎಲ್ಲವೂ ಸಿದ್ಧವಾಗಿದೆ ಬನ್ನಿರಿ,’ ಎಂದು ಹೇಳಲು ತನ್ನ ಸೇವಕನನ್ನು ಕಳುಹಿಸಿದನು.
Khi đến giờ ăn, sai đầy tớ mình đi nói với những kẻ được mời rằng: Hãy đến, mọi sự đã sẵn rồi.
18 “ಆದರೆ ಅವರೆಲ್ಲರೂ ಒಂದೇ ರೀತಿಯಾಗಿ ನೆಪ ಹೇಳಲಾರಂಭಿಸಿದರು. ಮೊದಲನೆಯವನು, ‘ನಾನು ಒಂದು ಹೊಲ ಕೊಂಡುಕೊಂಡಿದ್ದೇನೆ, ನಾನು ಅದನ್ನು ನೋಡಬೇಕಾಗಿದೆ, ದಯವಿಟ್ಟು ಕ್ಷಮಿಸಬೇಕು,’ ಎಂದು ಹೇಳಿದನು.
Song họ đồng tình xin kiếu hết. Người thứ nhất nói rằng: Tôi có mua một đám ruộng, cần phải đi coi; xin cho tôi kiếu.
19 “ಇನ್ನೊಬ್ಬನು, ‘ನಾನು ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಬೇಕು,’ ಎಂದನು.
Kẻ khác rằng: Tôi có mua năm cặp bò, phải đi xem thử; xin cho tôi kiếu.
20 “ಮತ್ತೊಬ್ಬನು, ‘ನಾನು ಮದುವೆ ಮಾಡಿಕೊಂಡಿದ್ದೇನೆ, ಆದ್ದರಿಂದ ಬರಲಾರೆ,’ ಎಂದನು.
Kẻ khác nữa rằng: Tôi mới cưới vợ, vậy tôi đi không được.
21 “ಆ ಸೇವಕನು ಬಂದು ತನ್ನ ಯಜಮಾನನಿಗೆ ಈ ವಿಷಯಗಳನ್ನು ತಿಳಿಸಲು, ಆ ಮನೆಯಜಮಾನನು ಕೋಪಗೊಂಡು ತನ್ನ ಸೇವಕನಿಗೆ, ‘ನೀನು ಬೇಗನೆ ಪಟ್ಟಣದ ಬೀದಿಗಳಿಗೂ ಸಂದುಗಳಿಗೂ ಹೋಗಿ, ಬಡವರನ್ನೂ ಊನವಾದವರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿ ಕರೆದುಕೊಂಡು ಬಾ,’ ಎಂದನು.
Đầy tớ trở về, trình việc đó cho chủ mình. Chủ bèn nổi giận, biểu đầy tớ rằng: Hãy đi mau ra ngoài chợ, và các đường phố, đem những kẻ nghèo khó, tàn tật, đui, què vào đây.
22 “ಆ ಸೇವಕನು, ‘ಸ್ವಾಮಿ, ನೀನು ಅಪ್ಪಣೆ ಕೊಟ್ಟಂತೆ ಮಾಡಿದ್ದಾಯಿತು, ಆದರೂ ಸ್ಥಳವಿದೆ,’ ಎಂದನು.
Sau lại đầy tớ trình rằng: Thưa chủ, điều chủ dạy, đã làm rồi, mà hãy còn thừa chỗ.
23 “ಆಗ ಯಜಮಾನನು ಸೇವಕನಿಗೆ, ‘ನೀನು ಬೀದಿಗಳಿಗೂ ಓಣಿಗಳಿಗೂ ಹೊರಟುಹೋಗಿ ನನ್ನ ಮನೆ ತುಂಬುವಂತೆ, ಇಲ್ಲಿ ಬರುವುದಕ್ಕೆ ಕಂಡವರನ್ನು ಬಲವಂತಮಾಡು.
Chủ nhà lại biểu rằng: Hãy ra ngoài đường và dọc hàng rào, gặp ai thì ép mời vào, cho được đầy nhà ta.
24 ಆದರೆ, ಮೊದಲು ಆಹ್ವಾನಿತರಲ್ಲಿ ಒಬ್ಬನಾದರೂ ನನ್ನ ಔತಣವನ್ನು ರುಚಿ ನೋಡಬಾರದು ಎಂದು ನಾನು ನಿನಗೆ ಹೇಳುತ್ತೇನೆ.’”
Vì, ta nói cùng các ngươi, trong những kẻ đã mời trước, không có ai được nếm bữa tiệc của ta đâu.
25 ದೊಡ್ಡ ಜನಸಮೂಹವು ಯೇಸುವಿನ ಸಂಗಡ ಹೋಗುತ್ತಿರಲು, ಯೇಸು ತಿರುಗಿಕೊಂಡು ಅವರನ್ನು ನೋಡಿ ಹೇಳಿದ್ದೇನೆಂದರೆ:
Có đoàn dân đông cùng đi với Đức Chúa Jêsus; Ngài xây lại cùng họ mà phán rằng:
26 “ಯಾರಾದರೂ ನನ್ನ ಬಳಿಗೆ ಬಂದು ತಮ್ಮ ತಂದೆ, ತಾಯಿ, ಹೆಂಡತಿ, ಮಕ್ಕಳು, ಸಹೋದರರು, ಸಹೋದರಿಯರು ಹಾಗೂ ತಮ್ಮ ಸ್ವಂತ ಪ್ರಾಣವನ್ನು ಸಹ ದ್ವೇಷಿಸದಿದ್ದರೆ ಅವರು ನನ್ನ ಶಿಷ್ಯರಾಗಲಾರರು.
Nếu có ai đến theo ta mà không ghét cha mẹ, vợ con, anh em, chị em mình, và chính sự sống mình nữa, thì không được làm môn đồ ta.
27 ಯಾರಾದರೂ ತಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸದವರು ನನ್ನ ಶಿಷ್ಯರಾಗಲಾರರು.
Còn ai không vác thập tự giá mình mà theo ta, cũng không được làm môn đồ ta.
28 “ನಿಮ್ಮಲ್ಲಿ ಒಬ್ಬರು ಗೋಪುರವನ್ನು ಕಟ್ಟಲು ಇಚ್ಛಿಸಿದರೆ. ನೀವು ಮೊದಲು ಕುಳಿತು ಅದನ್ನು ಪೂರೈಸುವುದಕ್ಕೆ ಬೇಕಾದ ಖರ್ಚು ಇದೆಯೋ ಎಂದು ಲೆಕ್ಕ ಮಾಡುವುದಿಲ್ಲವೋ?
Vả, trong các ngươi có ai là người muốn xây một cái tháp, mà trước không ngồi tính phí tổn cho biết mình có đủ của đặng làm xong việc cùng chăng sao?
29 ಒಂದು ವೇಳೆ ಹಾಗೆ ಲೆಕ್ಕಮಾಡದೆ ನೀವು ಅದಕ್ಕೆ ಅಸ್ತಿವಾರ ಹಾಕಿದ ಮೇಲೆ, ಅದನ್ನು ಪೂರೈಸದಿದ್ದರೆ, ನಿಮ್ಮನ್ನು ನೋಡುವವರೆಲ್ಲರೂ, ‘ಈ ವ್ಯಕ್ತಿ ಕಟ್ಟಲಾರಂಭಿಸಿದ, ಮುಗಿಸಲು ಇವನಿಗೆ ಆಗಲಿಲ್ಲ,’ ಎಂದು ಹೇಳಿ ಹಾಸ್ಯಮಾಡುವರು.
e khi đã xây nền rồi, không làm xong được, thì mọi người thấy liền chê cười,
và rằng: Người nầy khởi công xây, mà không thể làm xong được!
31 “ಅಥವಾ ಯಾವ ಅರಸನಾದರೂ ಬೇರೆ ಅರಸನಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೋಗುವಾಗ, ಮೊದಲು ಕುಳಿತು ತನಗೆ ವಿರೋಧವಾಗಿ ಇಪ್ಪತ್ತು ಸಾವಿರ ಸೈನ್ಯದೊಂದಿಗೆ ಬರುವ ಆ ಅರಸನನ್ನು ತನ್ನ ಹತ್ತು ಸಾವಿರ ಸೈನ್ಯದೊಂದಿಗೆ ಎದುರಿಸುವುದಕ್ಕೆ ಸಮರ್ಥವೋ ಎಂದು ಆಲೋಚನೆ ಮಾಡುವುದಿಲ್ಲವೇ?
Hay là có vua nào đi đánh trận cùng vua khác, mà trước không ngồi bàn luận xem mình đem đi một muôn lính có thể địch nổi vua kia đem hai muôn cùng chăng sao?
32 ಸಾಮರ್ಥ್ಯ ಇಲ್ಲದಿದ್ದರೆ, ಇನ್ನೂ ದೂರದಲ್ಲಿರುವಾಗಲೇ ಪ್ರತಿನಿಧಿಗಳನ್ನು ಕಳುಹಿಸಿ ಸಮಾಧಾನವನ್ನು ಕೋರುವನಲ್ಲವೇ?
Bằng chẳng nổi, khi vua kia còn ở xa, sai sứ đi xin hòa.
33 ಆದ್ದರಿಂದ ನಿಮ್ಮಲ್ಲಿ ಯಾರಾದರೂ ತಮಗಿರುವುದನ್ನೆಲ್ಲಾ ಬಿಟ್ಟುಬಿಡದಿದ್ದರೆ, ಅವರು ನನ್ನ ಶಿಷ್ಯರಾಗಲಾರರು.
Như vậy, nếu ai trong các ngươi không bỏ mọi sự mình có, thì không được làm môn đồ ta.
34 “ಉಪ್ಪು ಒಳ್ಳೆಯದು, ಆದರೆ ಉಪ್ಪೇ ಸಪ್ಪಗಾದರೆ, ಅದಕ್ಕೆ ಇನ್ನಾವುದರಿಂದ ರುಚಿ ಬಂದೀತು?
Muối là giống tốt; nhưng nếu muối mất mặn, thì lấy chi làm cho nó mặn lại được?
35 ಅದು ಭೂಮಿಗಾದರೂ ಗೊಬ್ಬರಕ್ಕಾದರೂ ಪ್ರಯೋಜನವಿಲ್ಲ; ಅದನ್ನು ಜನರು ಹೊರಗೆ ಹಾಕುತ್ತಾರೆ. “ಕೇಳುವುದಕ್ಕೆ ಕಿವಿಯುಳ್ಳವರು, ಕೇಳಲಿ.”
Không dùng chi được cho ruộng hoặc cho phân; người ta phải bỏ nó ra ngoài. Ai có tai mà nghe, hãy nghe.

< ಲೂಕನು 14 >