< ಯೆಶಾಯನು 36 >

1 ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಸ್ಸೀರಿಯದ ಅರಸನಾದ ಸನ್ಹೇರೀಬನು ಬಂದು, ಯೆಹೂದದ ಎಲ್ಲಾ ಕೋಟೆಯ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.
हिज्कीया राजाच्या कारकिर्दीच्या चौदाव्या वर्षी अश्शूरचा राजा सन्हेरीब याने यहूदाच्या सर्व तटबंदी नगरांवर हल्ला केला, आणि त्यांचा ताबा घेतला.
2 ಆಗ ಅಸ್ಸೀರಿಯದ ಅರಸನು ಲಾಕೀಷಿನಿಂದ ದೊಡ್ಡ ಸೈನ್ಯದೊಂದಿಗೆ ರಬ್ಷಾಕೆ ಎಂಬವನನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಅವನು ಅಗಸರ ಹೊಲದ ಮಾರ್ಗದಲ್ಲಿ ಮೇಲಿನ ಕೆರೆಯ ಕಾಲುವೆಯ ಸಮೀಪದಲ್ಲಿ ನಿಂತುಕೊಂಡನು.
नंतर अश्शूरच्या राजाने रब-शाके याला आपल्या मोठ्या सैन्यासह लाखीशाहून यरूशलेमेमध्ये हिज्कीया राजाकडे पाठवले, तो वरच्या तळ्याच्या नळाजवळ परटाच्या शेताच्या रस्त्यावर येऊन पोहचला, आणि उभा राहीला.
3 ಆಗ ಅರಮನೆಯ ಕಾರ್ಯನಿರ್ವಾಹಕನಾದ ಹಿಲ್ಕೀಯನ ಮಗ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬುವರು ಅವನ ಬಳಿಗೆ ಬಂದರು.
मग हिल्कीयाचा मुलगा एल्याकीम, घरावरचा कारभारी व शेबना चिटणीस व आसाफचा मुलगा यवाह इतिहास लेखक हे त्याच्याकडे भेटण्यास गेले.
4 ರಬ್ಷಾಕೆಯು ಅವರಿಗೆ, “ನೀವು ಹಿಜ್ಕೀಯನಿಗೆ ಹೀಗೆ ಹೇಳಬೇಕು: “‘ಮಹಾರಾಜನಾದ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ಈ ನಿನ್ನ ಭರವಸೆಗೆ ಆಧಾರ ಏನು?
रब-शाके त्यांना म्हणाला, “तुम्ही जाऊन हिज्कीयाला सांगा, अश्शूरचा महान राजा म्हणतो, तुझ्या विश्वासाचा स्त्रोत काय आहे?
5 ಯುದ್ಧಕ್ಕೆ ಬೇಕಾದ ಆಲೋಚನೆಯೂ, ಪರಾಕ್ರಮವೂ ಉಂಟೆಂದು ಹೇಳುವ ನಿನ್ನ ಮಾತು ಬರೀ ವ್ಯರ್ಥವಾದ ಮಾತುಗಳೇ, ನೀನು ಯಾರನ್ನು ನಂಬಿಕೊಂಡು ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದೀಯೆ?
तेथे युद्धासाठी मसलत आणि सामर्थ्य आहे, असे सांगून, तू फक्त निरर्थक शब्द बोलतो, आता तू कोणावर विश्वास ठेवतो? माझ्याविरूद्ध बंड करण्यासाठी तुला कोण धैर्य देतो?
6 ಇಗೋ! ನೀನು ಜಜ್ಜಿದ ದಂಟಿಗೆ ಸಮಾನವಾಗಿರುವ ಈಜಿಪ್ಟಿನ ಮೇಲೆ ಭರವಸೆ ಇಟ್ಟಿರುವಿಯಷ್ಟೆ, ಅದರ ಮೇಲೆ ಮನುಷ್ಯನು ಊರಿಕೊಂಡರೆ ಅದು ಅವನ ಕೈಯನ್ನೇ ಚುಚ್ಚಿ ಗಾಯ ಮಾಡುವುದು. ಈಜಿಪ್ಟಿನ ಅರಸನಾದ ಫರೋಹನಲ್ಲಿ ಭರವಸೆ ಇಟ್ಟವರೆಲ್ಲರಿಗೂ ಇದೇ ಗತಿಯಾಗುವದು.
पाहा, तू या मिसराच्या ठेचलेल्या बोरूच्या चालण्याच्या काठीवर विश्वास ठेवतोस, पण जर मनुष्य आपल्या हातातील काठीवर टेकतो, तर तो भेदून जाईल; जे कोणी एक मिसराचा राजा फारो याच्यावर भरवसा ठेवतात, तो त्यांना तसाच आहे.”
7 ಬಹುಶಃ ನೀವು, “ನಮ್ಮ ದೇವರಾದ ಯೆಹೋವ ದೇವರನ್ನೇ ನಂಬಿಕೊಂಡಿದ್ದೇವೆ,” ಎಂದು ಹೇಳಬಹುದು. “ಯೆರೂಸಲೇಮಿನ ಬಲಿಪೀಠದ ಮುಂದೆಯೇ ಆರಾಧನೆ ಮಾಡಬೇಕು” ಎಂದು ಯೆಹೂದ್ಯರಿಗೆ ಮತ್ತು ಯೆರೂಸಲೇಮಿನವರಿಗೆ ಹಿಜ್ಕೀಯನು ಆಜ್ಞಾಪಿಸಿ, ಆ ಯೆಹೋವ ದೇವರ ಪೂಜಾಸ್ಥಳಗಳನ್ನೂ, ಬೇರೆ ಎಲ್ಲಾ ಬಲಿಪೀಠಗಳನ್ನೂ ಹಾಳುಮಾಡಿದನಲ್ಲವೇ?
पण जर तू मला म्हणशील, आम्ही आमचा देव परमेश्वर ह्यांवर भरवसा ठेवतो, तर हिज्कीयाने ज्यांची उच्चस्थाने व वेद्या पूजेसाठी काढून टाकल्या आणि यहूदाला आणि यरूशलेमेला म्हटले, “तुम्ही यरूशलेमेत याच वेदीपुढे उपासना करा, तोच तो आहे की नाही?”
8 “‘ಹಾಗಾದರೆ, ಈಗ ನೀನು ಅಸ್ಸೀರಿಯದ ಅರಸನಾದ ನನ್ನ ಯಜಮಾನನೊಂದಿಗೆ ಒಪ್ಪಂದ ಮಾಡಿಕೋ, ಆಗ ನಿನಗೆ ಎರಡು ಸಾವಿರ ಕುದುರೆಸವಾರರನ್ನು ಬಳಸಲು ಸಾಮರ್ಥ್ಯವಿದ್ದರೆ ನಾನು ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆ.
तर आता मी माझा धनी अश्शूरचा राजा याच्यापासून एक चांगला प्रस्ताव तुझ्याशी करण्याची इच्छा आहे, मी तुला दोन हजार घोडे देईन, जर तू त्यांच्यासाठी घोडेस्वार शोधण्यास समर्थ असलास तर.
9 ಇದಾಗದಿದ್ದರೆ ನನ್ನ ಯಜಮಾನನ ಸೇವಕರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯನ್ನು ಹೇಗೆ ಎದುರಿಸುತ್ತೀ? ನೀನು ರಥಗಳಿಗೋಸ್ಕರವೂ, ರಾಹುತರಿಗೋಸ್ಕರವೂ ಈಜಿಪ್ಟಿನ ಮೇಲೆ ಭರವಸೆ ಇಟ್ಟಿದ್ದೀಯೋ?
माझ्या धन्याच्या कनिष्ठ सेवकांतील एक नायकाचा तरी प्रतिकार तू कसा करू शकशील? तुम्ही रथ व घोडेस्वारांसाठी तुमचा भरवसा मिसरावर ठेवता?
10 ಈ ಸ್ಥಳವನ್ನು ನಾಶಮಾಡುವುದಕ್ಕೆ ಯೆಹೋವ ದೇವರ ಅಪ್ಪಣೆ ಇಲ್ಲದೆ ಬಂದಿದ್ದೇನೋ? ಈ ದೇಶದ ಮೇಲೆ ಹೋಗಿ ಅದನ್ನು ನಾಶಮಾಡೆಂದು ಯೆಹೋವ ದೇವರೇ ನನಗೆ ಹೇಳಿದರು,’” ಎಂದನು.
१०तर आता, मी येथपर्यंत प्रवास करून आलो, ते या देशाविरूद्ध लढण्यास आणि नाश करण्यास, ते परमेश्वराशिवाय काय? परमेश्वर मला म्हणाला, या देशावर हल्ला कर आणि त्यांचा नाश कर.
11 ಆಗ ಎಲ್ಯಾಕೀಮ್, ಶೆಬ್ನ, ಯೋವ ಎಂಬುವರು ರಬ್ಷಾಕೆಗೆ, “ನೀನು ಮಾತನಾಡುವುದು ಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ ಆದ್ದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು: ಅದು ನಮಗೆ ತಿಳಿಯುತ್ತದೆ ಆದರೆ ಹಿಬ್ರಿಯ ಭಾಷೆಯಲ್ಲಿ ಮಾತನಾಡಬೇಡ,” ಎಂದು ಹೇಳಿದರು.
११मग हिल्कीयाचा मुलगा एल्याकीम आणि शेबना व यवाह हे रब-शाकेला म्हणाले, “कृपया आपल्या सेवकाशी अरामी भाषेत बोल, कारण ती आम्हास समजते. कोटावरील लोकांस तुमचे बोलणे समजेल म्हणून तुम्ही आमच्याशी यहूदी भाषेत बोलू नका.”
12 ಆದರೆ ರಬ್ಷಾಕೆಯು ಅವರಿಗೆ, “ನನ್ನ ಯಜಮಾನನು ನಿಮ್ಮ ಸಂಗಡವಾಗಲಿ, ನಿಮ್ಮ ಯಜಮಾನನ ಸಂಗಡವಾಗಲಿ ಮಾತ್ರ ಈ ಮಾತುಗಳನ್ನು ಹೇಳುವುದಕ್ಕೆ ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕುಳಿತ ಜನರ ಸಂಗಡವೂ ಮಾತನಾಡುವುದಕ್ಕಾಗಿ ಕಳುಹಿಸಿದ್ದಾರೆ. ಈ ಜನರು ನಿಮ್ಮ ಸಂಗಡ ಇದ್ದರೆ ನಿಮ್ಮ ಹಾಗೆ ಇವರೂ ಸಹ ತಮ್ಮ ಸ್ವಂತ ಮಲಮೂತ್ರವನ್ನು ತಿಂದು ಕುಡಿಯಬೇಕಾಗುತ್ತದೆ,” ಎಂದು ಹೇಳಿದನು.
१२पण रब-शाके म्हणाला “माझ्या धन्याने, मला तुझ्या धन्याशी व तुजशी हे शब्द बोलण्यास मला पाठवले आहे काय? कोटावर बसलेल्या मनुष्यांनी तुम्हाबरोबर आपली स्वतःची विष्ठा खावी आणि आपल्या स्वतःचे मूत्र प्यावे हे सांगण्यासाठी मला पाठवले नाही काय?”
13 ಆಗ ರಬ್ಷಾಕೆ ನಿಂತುಕೊಂಡು ಯೆಹೂದ್ಯರ ಭಾಷೆಯಾದ ಹಿಬ್ರಿಯದಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನೆಂದರೆ, “ನೀವು ಅಸ್ಸೀರಿಯದ ಮಹಾರಾಜನ ಮಾತನ್ನು ಕೇಳಿರಿ.
१३नंतर रब-शाके उभा राहिला व खूप मोठ्या आवाजात यहूदी भाषेत म्हणाला, “महान राजा, अश्शूरचा राजा याचे शब्द ऐका.”
14 ಅರಸನು ಹೇಳುವುದೇನೆಂದರೆ: ಹಿಜ್ಕೀಯನ ಮಾತನ್ನು ಕೇಳಿ ಮೋಸಹೋಗಬೇಡಿರಿ ಏಕೆಂದರೆ ಅವನು ನಿಮ್ಮನ್ನು ಬಿಡಿಸಲು ಶಕ್ತನಲ್ಲ.
१४राजा म्हणाला, “हिज्कीयास तुम्हास भुरळ घालू देऊ नका; कारण तो तुमचे रक्षण करण्यास समर्थ नाही.
15 ಇದಲ್ಲದೆ, ‘ಯೆಹೋವ ದೇವರು ನಮ್ಮನ್ನು ನಿಶ್ಚಯವಾಗಿ ರಕ್ಷಿಸುವರೆಂದೂ, ಈ ಪಟ್ಟಣವು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲವೆಂದೂ ಹಿಜ್ಕೀಯನು ನಿಮಗೆ ಯೆಹೋವ ದೇವರಲ್ಲಿ ಭರವಸೆ ಇಡುವಂತೆ ಮಾಡುವರು.’
१५परमेश्वर आम्हास खात्रीने सोडवील; हे नगर अश्शूर राजाच्या हाती दिले जाणार नाही, असे बोलून हिज्कीयाने तुम्हास परमेश्वरावर भरवसा ठेवायला लावू नये.”
16 “ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ. ಏಕೆಂದರೆ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ನನ್ನ ಸಂಗಡ ಒಡಂಬಡಿಕೆ ಮಾಡಿಕೊಂಡು, ನನ್ನ ಬಳಿಗೆ ಹೊರಟುಬನ್ನಿರಿ, ಆಗ ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ತನ್ನ ದ್ರಾಕ್ಷಾಫಲವನ್ನೂ, ಅಂಜೂರದ ಫಲವನ್ನೂ ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು.
१६हिज्कीयाचे ऐकू नका, कारण अश्शूरचा राजा असे म्हणतोः माझ्याशी शांतीचा करार करा आणि माझ्याकडे बाहेर या, नंतर प्रत्येकजण आपापल्या द्राक्षवेलाचे व आपापल्या अंजिराचे फळ खा आणि प्रत्येकजण आपल्या स्वत: च्या टाकीतले पाणी प्या.
17 ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ, ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು.
१७मी येईन आणि जो देश तुमच्या स्वतःच्या देशासारखा आहे, धान्याचा व नव्या द्राक्षरसाचा देश, भाकरीचा व द्राक्षमळ्याचा देश, त्यामध्ये मी तुम्हास नेईपर्यंत तुम्ही असे करा.
18 “‘ಯೆಹೋವ ದೇವರು ನಮ್ಮನ್ನು ರಕ್ಷಿಸುವರು,’ ಎಂದು ಹೇಳಿ ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸದಂತೆ ಎಚ್ಚರಿಕೆಯಾಗಿರಿ. ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಸ್ಸೀರಿಯದ ಅರಸನ ಕೈಯಿಂದ ಬಿಡಿಸಿದ್ದು ಉಂಟೋ?
१८परमेश्वर आपल्याला सोडवील असे सांगून हिज्कीयाने तुम्हास चुकीचा मार्ग दाखवू नये. अश्शूर राज्याच्या सामर्थ्यापासून कोणत्या राष्ट्रातील देवाने आपल्या लोकांस सोडवीले आहे काय?
19 ಹಮಾತ್, ಅರ್ಪಾದ್, ಸೆಫರ್ವಯಿಮಿನ ದೇವರುಗಳು ಎಲ್ಲಿ? ಅವರು ಸಮಾರ್ಯವನ್ನು ನನ್ನ ಕೈಯಿಂದ ಬಿಡಿಸಿಕೊಂಡರೋ?
१९हमाथ आणि अर्पद यांचे देव कोठे आहेत? सफरवाईमचे देव कोठे आहेत? त्यांनी शोमरोनाला माझ्या सामर्थ्यापासून सोडविले काय?
20 ಈ ದೇಶಗಳ ಸಮಸ್ತ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ, ಯೆಹೋವ ದೇವರು ಯೆರೂಸಲೇಮನ್ನು ನನ್ನ ಕೈಗೆ ಸಿಗದಂತೆ ತಪ್ಪಿಸಿ ಕಾಪಾಡುವನೋ?” ಎಂದು ಹೇಳಿದನು.
२०ज्यांनी आपला देश माझ्या सामर्थ्यापासून सोडवला आहे, असे या देशांच्या सर्व देवांपैकी कोण आहेत, तर परमेश्वर माझ्या हातून यरूशलेम सोडवील काय?
21 ಆದರೆ ಜನರು ಅವನಿಗೆ ಪ್ರತ್ಯುತ್ತರ ಕೊಡದೆ ಸುಮ್ಮನಿದ್ದರು. ಏಕೆಂದರೆ ಅವನಿಗೆ ಉತ್ತರ ಕೊಡಬೇಡಿರೆಂದು ಅರಸನ ಆಜ್ಞೆಯಾಗಿತ್ತು.
२१पण लोक शांत राहीले, आणि त्यांनी काहीच उत्तर दिले नाही, कारण त्यास उत्तर देऊ नका अशी राजाची आज्ञा होती.
22 ಆಗ ಅರಮನೆಯ ಮೇಲ್ವಿಚಾರಕನಾದ ಹಿಲ್ಕೀಯನ ಮಗ ಎಲ್ಯಾಕೀಮನೂ ಕಾರ್ಯದರ್ಶಿಯಾದ ಶೆಬ್ನನೂ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬವನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ಸೈನ್ಯಾಧಿಕಾರಿಯಾದ ರಬ್ಷಾಕೆ ಹೇಳಿದ ಮಾತುಗಳನ್ನು ಅವನಿಗೆ ತಿಳಿಸಿದರು.
२२नंतर हिल्कीयाचा मुलगा एल्याकीम जो घरावरचा कारभारी होता, शेबना चिटणीस व आसाफाचा मुलगा यवाह इतिहास लेखक हे आपले कपडे फाडून हिज्कीयाकडे आले व त्यांनी त्यास रब-शाकेचे शब्द सांगितले.

< ಯೆಶಾಯನು 36 >