< ವಿಮೋಚನಕಾಂಡ 35 >

1 ಮೋಶೆಯು ಇಸ್ರಾಯೇಲರ ಸಮೂಹವನ್ನು ಒಟ್ಟುಗೂಡಿಸಿ ಅವರಿಗೆ, “ನೀವು ಅನುಸರಿಸಬೇಕೆಂದು ಯೆಹೋವ ದೇವರು ನಿಮಗೆ ಹೀಗೆ ಆಜ್ಞಾಪಿಸಿದ್ದಾರೆ.
মোশি ইস্রায়েল সন্তানদের সমস্ত মণ্ডলীকে জড়ো করে তাদেরকে বললেন, “সদাপ্রভু তোমাদেরকে এই সব বাক্য পালন করতে আদেশ দিয়েছেন,
2 ಆರು ದಿನಗಳು ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ನಿಮಗೆ ಪರಿಶುದ್ಧವಾಗಿರಬೇಕು. ಅದು ಯೆಹೋವ ದೇವರ ಸಬ್ಬತ್ ದಿನ. ಆ ದಿನದಲ್ಲಿ ಕೆಲಸಮಾಡುವವರಿಗೆ ಮರಣದಂಡನೆಯಾಗಬೇಕು.
ছয় দিন কাজ করা যাবে, কিন্তু সপ্তম দিন তোমাদের জন্য পবিত্র দিন হবে; সেটা সদাপ্রভুর উদ্দেশ্যে সম্পূর্ণ বিশ্রামের জন্য বিশ্রামদিন হবে; যে কেউ সেই দিনের কাজ করবে, তার প্রাণদণ্ড হবে।
3 ಸಬ್ಬತ್ ದಿನದಲ್ಲಿ ನೀವು ವಾಸಮಾಡುವ ಯಾವ ಮನೆಯಲ್ಲಿಯೂ ಬೆಂಕಿಯನ್ನು ಹೊತ್ತಿಸಬಾರದು,” ಎಂದು ಹೇಳಿದನು.
তোমরা বিশ্রামদিনের তোমাদের কোন বাড়িতে আগুন জ্বালাবে না।”
4 ಮೋಶೆಯು ಇಸ್ರಾಯೇಲರ ಇಡೀ ಸಮೂಹಕ್ಕೆ ಹೇಳಿದ್ದು: “ಯೆಹೋವ ದೇವರು ಆಜ್ಞಾಪಿಸಿದ್ದು ಇದೇ.
মোশি ইস্রায়েল সন্তানদের সমস্ত মণ্ডলীকে বললেন,
5 ನಿಮ್ಮಲ್ಲಿರುವದರಿಂದ ಯೆಹೋವ ದೇವರಿಗೆ ಕಾಣಿಕೆಯನ್ನು ಅರ್ಪಿಸಿರಿ. ಯಾರ‍್ಯಾರಿಗೆ ಇಷ್ಟವಿದೆಯೋ ಅವರು, “ಚಿನ್ನ, ಬೆಳ್ಳಿ, ಕಂಚು,
সদাপ্রভু এই আদেশ দিয়েছেন; তোমরা সদাপ্রভুর জন্য তোমাদের কাছ থেকে উপহার নাও; যার মনে ইচ্ছা হবে, সে সদাপ্রভুর উপহার হিসাবে এই সব দ্রব্য আনবে;
6 ನೀಲಿ, ನಾರು, ರಕ್ತವರ್ಣ ನಾರು, ಲಾಕಿ ಬಣ್ಣ, ನಾರು, ನಾರುಬಟ್ಟೆಗಳು, ಮೇಕೆಯ ಕೂದಲು,
সোনা, রূপা ও পিতল এবং নীল, বেগুনে, লাল ও সাদা মসীনা সুতো ও ছাগলের লোম
7 ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಚರ್ಮಗಳು, ಕಡಲುಹಂದಿಯ ಚರ್ಮಗಳು, ಜಾಲಿ ಮರದ ಕಟ್ಟಿಗೆ,
এবং লাল রঙের ভেড়ার চামড়া ও শীলের চামড়া, শিটীম কাঠ
8 ದೀಪಕ್ಕಾಗಿ ಓಲಿವ್ ಎಣ್ಣೆ ಅಭಿಷೇಕಿಸುವ ಎಣ್ಣೆಗೋಸ್ಕರ ಪರಿಮಳ ಮತ್ತು ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳು,
এবং প্রদীপের জন্য তেল, আর অভিষেকের তেল ও সুগন্ধি ধূপের জন্য সুগন্ধি
9 ಏಫೋದ್ ಕವಚಕ್ಕಾಗಿ ಗೋಮೇಧಿಕಗಳು ಮತ್ತು ಎದೆಪದಕದಲ್ಲಿ ಹಚ್ಚಬೇಕಾದ ನಾನಾ ರತ್ನಗಳನ್ನು ತನ್ನಿರಿ.
এবং এফোদের ও বুকপাটার জন্য গোমেদক মণি এবং আরও দামী পাথর।
10 “ನಿಮ್ಮಲ್ಲಿರುವ ಶಿಲ್ಪಿಗಳೆಲ್ಲರೂ ಬಂದು, ಯೆಹೋವ ದೇವರು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಬೇಕು. ಅವು ಯಾವುವೆಂದರೆ:
১০আর তোমাদের প্রত্যেক জ্ঞানী লোকেরা এসে সদাপ্রভুর আদেশ মত সমস্ত বস্তু তৈরী করুক;
11 “ದೇವದರ್ಶನದ ಗುಡಾರವನ್ನು, ಅದರ ಮೇಲ್ಹೊದಿಕೆಯನ್ನು, ಅದರ ಕೊಂಡಿಗಳನ್ನು, ಅದರ ಚೌಕಟ್ಟುಗಳನ್ನು, ಅದರ ಅಗುಳಿಗಳನ್ನು, ಅದರ ಸ್ತಂಭಗಳನ್ನು, ಅದರ ಕುಣಿಕೆಗಳನ್ನು,
১১সমাগম তাঁবু, তাঁবু, তার ঢাকনা, হুক, তক্তা, খিল, স্তম্ভ ও ভিত্তি,
12 ಮಂಜೂಷವನ್ನು, ಅದರ ಕೋಲುಗಳನ್ನು, ಅವುಗಳೊಂದಿಗೆ ಕರುಣಾಸನವನ್ನು, ಮರೆಮಾಡುವ ಪರದೆಯನ್ನು,
১২আর সিন্দুক ও তার বহন দণ্ড, পাপাবরণ ও আড়াল রাখার পর্দা।
13 ಮೇಜನ್ನು, ಅದರ ಕೋಲುಗಳನ್ನು, ಅದರ ಎಲ್ಲಾ ಉಪಕರಣಗಳನ್ನು, ನೈವೇದ್ಯದ ರೊಟ್ಟಿಯನ್ನು,
১৩টেবিল ও তার বহন দণ্ড ও সমস্ত পাত্র, দর্শন রুটি
14 ಬೆಳಕಿಗಾಗಿ ದೀಪಸ್ತಂಭವನ್ನು, ಅದರ ಉಪಕರಣಗಳನ್ನು, ಅದರ ದೀಪಗಳನ್ನು, ದೀಪಸ್ತಂಭಕ್ಕಾಗಿ ಎಣ್ಣೆಯನ್ನು,
১৪এবং আলোর জন্য বাতিদানী ও তার পাত্রগুলি, প্রদীপ ও প্রদীপের জন্য তেল
15 ಧೂಪವೇದಿಯನ್ನು, ಅದರ ಕೋಲುಗಳನ್ನು, ಅಭಿಷೇಕಿಸುವ ತೈಲವನ್ನು, ಪರಿಮಳ ಧೂಪವನ್ನು, ಗುಡಾರದ ಬಾಗಿಲಿನ ಪರದೆಯನ್ನು,
১৫এবং ধূপবেদি ও তার বহন দণ্ড এবং অভিষেকের তেল ও সুগন্ধি ধূপ, সমাগম তাঁবুর মধ্যে প্রবেশ দরজার পর্দা,
16 ದಹನಬಲಿಯ ಪೀಠವನ್ನು, ಅದರೊಂದಿಗೆ ಕಂಚಿನ ಜಾಳಿಗೆಯನ್ನು, ಅದರ ಕೋಲುಗಳನ್ನು, ಅದರ ಎಲ್ಲಾ ಉಪಕರಣಗಳನ್ನು, ಕಂಚಿನ ಗಂಗಾಳವನ್ನು, ಅದರ ಕಾಲನ್ನು,
১৬হোমবেদি, তার পিতলের জাল, বহন দণ্ড ও সমস্ত পাত্র এবং ধোয়ার পাত্র ও তার পায়া।
17 ದೇವದರ್ಶನದ ಗುಡಾರ ಅಂಗಳದ ಪರದೆಗಳನ್ನು, ಅದರ ಸ್ತಂಭಗಳನ್ನು, ಅದರ ಗದ್ದಿಗೇ ಕಲ್ಲುಗಳನ್ನು, ಅಂಗಳದ ಬಾಗಿಲಿನ ಪರದೆಗಳನ್ನು,
১৭তারা উঠানের পর্দার সঙ্গে আনল তার স্তম্ভ ও ভিত্তি এবং উঠানের ফটকের পর্দা
18 ಗುಡಾರದ ಗೂಟಗಳನ್ನು, ಅಂಗಳದ ಗೂಟಗಳನ್ನು, ಅದರ ಹಗ್ಗಗಳನ್ನು,
১৮এবং সমাগম তাঁবুর খুঁটি, উঠানের খুঁটি ও তাদের দড়ি।
19 ಪರಿಶುದ್ಧಸ್ಥಳದ ಸೇವೆಗೋಸ್ಕರ ನೇಯ್ದ ಪರಿಶುದ್ಧ ವಸ್ತ್ರಗಳನ್ನು ಅಂದರೆ ಸೇವೆಮಾಡುವದಕ್ಕೆ ಯಾಜಕನಾದ ಆರೋನನಿಗೆ ಮತ್ತು ಅವನ ಪುತ್ರರಿಗೆ ಯಾಜಕವಸ್ತ್ರಗಳನ್ನು ಮಾಡಲಿ,” ಎಂದನು.
১৯তারা পবিত্র স্থানে পরিচর্য্যা করার জন্য সূক্ষ্ম বোনা পোশাক আনল, অর্থাৎ হারোণ যাজকের জন্য পবিত্র পোশাক ও যাজকের কাজ করার জন্য তার ছেলেদের পোশাক।
20 ಆಗ ಇಸ್ರಾಯೇಲರ ಸಮೂಹವೆಲ್ಲಾ ಮೋಶೆಯ ಸನ್ನಿಧಿಯಿಂದ ಹೊರಟು ಹೋದರು.
২০পরে ইস্রায়েল সন্তানদের সমস্ত মণ্ডলী মোশির সামনে থেকে চলে গেল।
21 ಹೃದಯ ಪ್ರೇರಣೆ ಹೊಂದಿದವರೂ ಸಿದ್ಧಮನಸ್ಸಿನವರೂ ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಎಲ್ಲಾ ಸೇವೆಗಾಗಿಯೂ ಪರಿಶುದ್ಧ ವಸ್ತ್ರಗಳಿಗಾಗಿಯೂ ಯೆಹೋವ ದೇವರಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದರು.
২১আর যাদের হৃদয়ে প্রবৃত্তি ও মনে ইচ্ছা হল, তারা সবাই সমাগম তাঁবু তৈরীর জন্য এবং সেই বিষয়ে সমস্ত কাজের ও পবিত্র পোশাকের জন্য সদাপ্রভুর উদ্দেশ্যে উপহার আনল।
22 ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿ ಬಂದು ಬಳೆಗಳನ್ನೂ ಮೂಗುತಿಗಳನ್ನೂ ಉಂಗುರಗಳನ್ನೂ ಮುದ್ರೆಗಳನ್ನೂ ಚಿನ್ನದ ಎಲ್ಲಾ ಒಡವೆಗಳನ್ನೂ ತಂದರು. ಜನರೆಲ್ಲಾ ಚಿನ್ನವನ್ನು ವಿಶೇಷ ಕಾಣಿಕೆಗಳನ್ನಾಗಿ ಯೆಹೋವ ದೇವರಿಗೆ ಅರ್ಪಿಸಿದರು.
২২পুরুষ ও স্ত্রী যত লোক মনে ইচ্ছা করল, তারা সবাই এসে বলয়, কানবালা, অঙ্গুরীয় ও হার, সোনার সব রকম গয়না আনল। যে কেউ সদাপ্রভুর উদ্দেশ্যে সোনার উপহার আনতে চাইল, সে আনল।
23 ನೀಲಿ, ಧೂಮ್ರ, ರಕ್ತವರ್ಣ ದಾರಗಳೂ ನಯವಾದ ನಾರುಮಡಿ, ಮೇಕೆಯ ಕೂದಲು, ಟಗರುಗಳ ಕೆಂಪು ಬಣ್ಣದ ಚರ್ಮಗಳೂ ಕಡಲುಹಂದಿಯ ಚರ್ಮಗಳೂ ಯಾರ ಬಳಿಯಲ್ಲಿದ್ದವೋ ಅವರೆಲ್ಲರೂ ತಂದರು.
২৩আর যাদের কাছে নীল, বেগুনে, লাল ও সাদা মসীনা সুতো, ছাগলের লোম, লাল রঙের ভেড়ার চামড়া ও দামী চামড়া ছিল, তারা সবাই তা আনল।
24 ಬೆಳ್ಳಿ, ಕಂಚುಗಳ ಕಾಣಿಕೆಗಳನ್ನು ಅರ್ಪಿಸುವುದಕ್ಕೆ ಮನಸ್ಸಿದ್ದವರೆಲ್ಲರೂ ಯೆಹೋವ ದೇವರಿಗೆ ಕಾಣಿಕೆಗಳನ್ನು ತಂದರು. ಸೇವೆಯ ಎಲ್ಲಾ ಕೆಲಸಕ್ಕೋಸ್ಕರ ಜಾಲಿ ಮರವಿದ್ದವರು ಅದನ್ನು ತಂದರು.
২৪যে কেউ রূপা ও পিতলের উপহার উপস্থিত করল, সে সদাপ্রভুর উদ্দেশ্যে সেই উপহার আনল এবং যার কাছে কোন কাজে লাগানোর জন্য শিটীম কাঠ ছিল, সে তাই আনল।
25 ಕುಶಲತೆ ಬಲ್ಲ ಸ್ತ್ರೀಯರೆಲ್ಲರೂ ತಮ್ಮ ಕೈಗಳಿಂದ ನೇಯ್ದ ನೀಲಿ, ಧೂಮ್ರ, ರಕ್ತವರ್ಣ ದಾರಗಳನ್ನು ಮತ್ತು ನಯವಾದ ನಾರುಮಡಿಯನ್ನು ತಂದರು.
২৫আর দক্ষ স্ত্রীলোকেরা তাদের হাতে সুতো কেটে, তাদের কাটা নীল, বেগুনে, লাল ও সাদা মসীনা সুতো আনল।
26 ಕುಶಲತೆ ಬಲ್ಲ ಎಲ್ಲಾ ಸ್ತ್ರೀಯರು ಮೇಕೆ ಕೂದಲುಗಳನ್ನು ನೇಯ್ದರು.
২৬সমস্ত স্ত্রীলোক যাদের হৃদয় তাদেরকে আলোড়িত করল এবং যারা দক্ষতায় পরিপূর্ণ তারা ছাগলের লোমের সুতো কাটল।
27 ಅಧಿಪತಿಗಳು ಏಫೋದಿನಲ್ಲಿಯೂ ಎದೆಪದಕದಲ್ಲಿಯೂ ಕೂಡ್ರಿಸುವುದಕ್ಕೆ ಗೋಮೇಧಿಕಗಳನ್ನೂ ರತ್ನಗಳನ್ನೂ
২৭আর অধ্যক্ষরা এফোদের ও বুকপাটার জন্য গোমেদক মণি
28 ಸುಗಂಧದ್ರವ್ಯಗಳನ್ನೂ ದೀಪಕ್ಕೋಸ್ಕರವೂ ಅಭಿಷೇಕಿಸುವ ತೈಲಕ್ಕೋಸ್ಕರವೂ ಪರಿಮಳ ಧೂಪಕ್ಕೋಸ್ಕರವೂ ಎಣ್ಣೆಯನ್ನೂ ತಂದರು.
২৮এবং দীপের, অভিষেকের তেলের ও সুগন্ধি ধূপের জন্য গন্ধদ্রব্য ও তেল আনলেন।
29 ಹೀಗೆ ಮಾಡಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಎಲ್ಲಾ ಕೆಲಸಕ್ಕೋಸ್ಕರ ಬೇಕಾದವುಗಳನ್ನು ಇಸ್ರಾಯೇಲಿನ ಸ್ತ್ರೀಪುರುಷರೆಲ್ಲರು ಮನಃಪೂರ್ವಕವಾಗಿಯೇ ಯೆಹೋವ ದೇವರಿಗೆ ಕಾಣಿಕೆಯನ್ನು ತಂದರು.
২৯ইস্রায়েল সন্তানরা ইচ্ছাকৃত সদাপ্রভুর উদ্দেশ্যে উপহার আনল, সদাপ্রভু মোশিকে দিয়ে যা যা করতে আদেশ করেছিলেন, তার কোন রকম কাজ করার জন্য যে পুরুষ ও স্ত্রীলোকদের হৃদয়ের ইচ্ছা হল, তারা সবাই উপহার আনল।
30 ಆಗ ಮೋಶೆಯು ಇಸ್ರಾಯೇಲರಿಗೆ, “ನೋಡಿರಿ, ಯೆಹೋವ ದೇವರು ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲಯೇಲ್ ಎಂಬವನನ್ನು ಗುರುತಿಸಿ ಆರಿಸಿಕೊಂಡಿದ್ದಾರೆ,
৩০পরে মোশি ইস্রায়েল সন্তানদের বললেন, “দেখ, সদাপ্রভু যিহূদা বংশীয় হূরের নাতি ঊরির ছেলে বৎসলেলের নাম ধরে ডাকলেন;
31 ಅವರು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕದಿಂದಲೂ
৩১আর তিনি তাকে ঈশ্বরের আত্মায়, জ্ঞানে, বুদ্ধিতে, বিদ্যায় ও সর্বপ্রকার শিল্প কৌশলে পরিপূর্ণ করলেন,
32 ಚಿನ್ನ, ಬೆಳ್ಳಿ, ಕಂಚಿನಲ್ಲಿ ಕಲಾತ್ಮಕವಾದ ವಿನ್ಯಾಸಗಳ ಕೆಲಸವನ್ನು ಮಾಡುವುದರಲ್ಲಿಯೂ
৩২যাতে তিনি কৌশলের কাজ কল্পনা করতে, সোনা, রূপা ও পিতলের কাজ করতে,
33 ರತ್ನಗಳಲ್ಲಿ ಕೆತ್ತನೆಯನ್ನೂ ಮರದಲ್ಲಿ ಕೆತ್ತನೆಯನ್ನೂ ಸಕಲ ವಿಧವಾದ ಕೌಶಲ್ಯದ ಕೆಲಸದ ಜ್ಞಾನದಿಂದಲೂ ಅವನನ್ನು ತುಂಬಿಸಿದ್ದಾರೆ.
৩৩খোচিত মণি কাটতে, কাঠ খোদাই করতে ও সব রকম কৌশলযুক্ত শিল্প কাজ করতে পারেন।
34 ಇದಲ್ಲದೆ ಕಲಿಸುವುದಕ್ಕೆ ಅವನಿಗೆ ಮತ್ತು ದಾನನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನನ್ನು ನೇಮಿಸಿದ್ದಾರೆ.
৩৪এই সকলের শিক্ষা দিতে তার ও দান-বংশীয় অহীষামকের ছেলে অহলীয়াবের হৃদয়ে বাসনা দিলেন।
35 ಕೆತ್ತನೆಯ ಕೆಲಸಗಳನ್ನು, ವಿನ್ಯಾಸದ ಕೆಲಸಗಳನ್ನು, ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ, ನಯವಾದ ನಾರುಬಟ್ಟೆ ಇವುಗಳಲ್ಲಿ ಕಸೂತಿ ಕೆಲಸಗಳನ್ನು ಮಾಡುವುದಕ್ಕೆ ಮತ್ತು ನೇಯ್ಗೆಯ ಕೆಲಸ ಮಾಡುವುದಕ್ಕೆ ಎಂದರೆ ಅವುಗಳಲ್ಲಿ ಯಾವ ಕೆಲಸವನ್ನಾದರೂ ಕಲ್ಪಿಸಿ ಮಾಡುವದಕ್ಕೆ ಯೆಹೋವ ದೇವರು ಅವರಿಗೆ ಜ್ಞಾನವನ್ನು ಅನುಗ್ರಹಿಸಿದ್ದಾರೆ.
৩৫তিনি খোদাই করতে ও শিল্প কাজ করতে এবং নীল, বেগুনে, লাল ও সাদা মসীনা সুতোয় খোদাই কাজ করতে এবং তাঁতির কাজ করতে, অর্থাৎ যাবতীয় শিল্প কাজ ও চিত্রের কাজ করতে তাঁদের হৃদয় অভিজ্ঞতায় পরিপূর্ণ করলেন।

< ವಿಮೋಚನಕಾಂಡ 35 >