< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 7 >

1 ಇಸ್ಸಾಕಾರನ ಪುತ್ರರು: ತೋಲ, ಪೂವ, ಯಾಶೂಬ್, ಶಿಮ್ರೋನ್ ಎಂಬ ನಾಲ್ಕು ಮಂದಿ. 2 ತೋಲನ ಪುತ್ರರು: ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್ ಮತ್ತು ಸಮುಯೇಲ್. ಇವರು ತಮ್ಮ ಕುಟುಂಬಗಳಿಗೆ ಯಜಮಾನರಾಗಿದ್ದರು. ಇವರು ತಮ್ಮ ವಂಶಗಳಲ್ಲಿ ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿದ್ದರು. ದಾವೀದನ ದಿವಸಗಳಲ್ಲಿ ಅವರ ಲೆಕ್ಕ 22,600 ಮಂದಿ ಆಗಿತ್ತು. 3 ಉಜ್ಜೀಯನ ಪುತ್ರನು ಇಜರಾಹಿಯಾ. ಇಜರಾಹಿಯಾನ ಪುತ್ರರು: ಮೀಕಾಯೇಲ್, ಓಬದ್ಯ, ಯೋಯೇಲ್ ಮತ್ತು ಇಷೀಯ ಈ ಐದು ಮಂದಿಯೂ ಮುಖ್ಯಸ್ಥರಾಗಿದ್ದರು. 4 ಇವರ ಸಂಗಡ ಅವರ ವಂಶಗಳ ಪ್ರಕಾರವೂ, ಅವರ ಪಿತೃಗಳ ಮನೆಯ ಪ್ರಕಾರವೂ ಯುದ್ಧಕ್ಕೋಸ್ಕರ 36,000 ಮಂದಿ ಯುದ್ಧವೀರರ ಗುಂಪುಗಳಿದ್ದವು. ಏಕೆಂದರೆ ಅವರ ಹೆಂಡತಿಯರು, ಮಕ್ಕಳು ಬಹಳ ಮಂದಿ ಇದ್ದರು. 5 ಇಸ್ಸಾಕಾರನ ಕುಟುಂಬಗಳಾಗಿರುವ ಸಹೋದರರೊಳಗೆ ಅವರ ವಂಶಾವಳಿಗಳಲ್ಲಿ ಲೆಕ್ಕಿಸಿದಾಗ ಯುದ್ಧವೀರರೆಲ್ಲರೂ 87,000 ಮಂದಿಯಾಗಿದ್ದರು. 6 ಬೆನ್ಯಾಮೀನನ ಪುತ್ರರು: ಬೆಳ, ಬೆಕೆರ್, ಯೆದೀಯಯೇಲ್ ಈ ಮೂರು ಮಂದಿ. 7 ಬೆಳನ ಪುತ್ರರು: ಎಚ್ಬೋನ್, ಉಜ್ಜೀ, ಉಜ್ಜೀಯೇಲ್, ಯೆರೀಮೋತ್ ಮತ್ತು ಈರೀ; ಈ ಐದು ಮಂದಿ ತಮ್ಮ ಪಿತೃಗಳ ಕುಟುಂಬಗಳಲ್ಲಿ ಯಜಮಾನರಾಗಿಯೂ, ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿಯೂ ಇದ್ದು, ತಮ್ಮ ವಂಶಾವಳಿಗಳ ಪ್ರಕಾರ 22,034 ಮಂದಿ ದಾಖಲಿಸಿದ್ದರು. 8 ಬೆಕೆರನ ಪುತ್ರರು: ಜೆಮೀರ, ಯೋವಾಷ್, ಎಲೀಯೆಜೆರ್, ಎಲ್ಯೋವೇನೈ, ಒಮ್ರಿ, ಯೆರೀಮೋತ್, ಅಬೀಯ, ಅನಾತೋತ್, ಆಲೆಮೆತ್ ಇವರೆಲ್ಲರು ಬೆಕೆರನ ಪುತ್ರರು. 9 ಪ್ರತಿಯೊಬ್ಬರೂ ಪೂರ್ವಜರ ಕುಲದ ನಾಯಕರಾಗಿದ್ದರು. ಅವರ ವಂಶಾವಳಿಯ ದಾಖಲೆಗಳಲ್ಲಿ ಪಟ್ಟಿ ಮಾಡಲಾಗಿರುವಂತೆ ಈ ಕುಲಗಳ ಪ್ರಬಲ ಯೋಧರು ಮತ್ತು ನಾಯಕರ ಒಟ್ಟು ಸಂಖ್ಯೆ 20,200 ಆಗಿತ್ತು. 10 ಯೆದೀಯಯೇಲನ ಪುತ್ರನು ಬಿಲ್ಹಾನ್. ಬಿಲ್ಹಾನನ ಪುತ್ರರು: ಯೆಯೂಷ್, ಬೆನ್ಯಾಮೀನ್, ಏಹೂದ್, ಕೆನಾನ, ಜೇತಾನ್, ತಾರ್ಷೀಷ್ ಮತ್ತು ಅಹೀಷೆಹರ; 11 ಇವರೆಲ್ಲರು ಯೆದೀಯಯೇಲನ ಪುತ್ರರು. ಪ್ರತಿಯೊಬ್ಬರೂ ಪೂರ್ವಜರ ಕುಲದ ನಾಯಕರಾಗಿದ್ದರು. ಯುದ್ಧದ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡತಕ್ಕವರು 17,200 ಮಂದಿಯಾಗಿದ್ದರು. 12 ಅಹೇರನ ಪುತ್ರರಾದ ಈರನೂ, ಹುಶೀಮನೂ ಎಂಬವರ ಮಕ್ಕಳು ಶುಪ್ಪೀಮನೂ, ಹುಪ್ಪೀಮನೂ ಇದ್ದರು. 13 ನಫ್ತಾಲಿಯ ಪುತ್ರರು: ಯಹಚಿಯೇಲ್, ಗೂನೀ, ಯೇಚೆರ್, ಶಲ್ಲೂಮ್ ಇವರು ಬಿಲ್ಹಳ ಪುತ್ರರು. 14 ಮನಸ್ಸೆಯ ವಂಶಜರು: ಅರಾಮ್ಯಳಾದ ಮನಸ್ಸೆಯ ಉಪಪತ್ನಿಯಿಂದ ಅಸ್ರೀಯೇಲ್ ಮತ್ತು ಮಾಕೀರನನ್ನು ಮನಸ್ಸೆ ಪಡೆದನು. ಮಾಕೀರನು ಗಿಲ್ಯಾದನ ತಂದೆ. 15 ಆದರೆ ಈ ಮಾಕೀರನು ಹುಪ್ಪೀಮ್ ಮತ್ತು ಶುಪ್ಪೀಮರ ಸಹೋದರಿಯಾದ ಮಾಕಳನ್ನು ಹೆಂಡತಿಯಾಗಿ ತೆಗೆದುಕೊಂಡನು. ಅವನ ಮೊಮ್ಮಗನ ಹೆಸರು ಚೆಲೊಫಾದನು; ಈ ಚೆಲೋಫಾದನಿಗೆ ಪುತ್ರಿಯರು ಮಾತ್ರ ಇದ್ದರು. 16 ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು, ಪೆರೆಷ್ ಎಂದು ಹೆಸರಿಟ್ಟಳು. ಅವನ ಸಹೋದರನ ಹೆಸರು ಶೆರೆಷ್. ಇವನಿಗೆ ಊಲಾಮ್, ರೆಕೆಮ್ ಎಂಬ ಇಬ್ಬರು ಪುತ್ರರಿದ್ದರು. 17 ಊಲಾಮ್ ಮಗನು ಬೆದಾನ್. ಇವರೇ ಮನಸ್ಸೆಯ ಮಗನಾಗಿರುವ ಮಾಕೀರನ ಮಗ ಗಿಲ್ಯಾದನ ಪುತ್ರರು. 18 ಅವನ ಸಹೋದರಿ ಹಮ್ಮೋಲೆಕೆತಳು ಈಷ್ಹೋದನನ್ನೂ, ಅಬೀಯೆಜೆರನನ್ನೂ, ಮಹ್ಲನನ್ನೂ ಹೆತ್ತಳು. 19 ಶೆಮೀದನನ ಪುತ್ರರು: ಅಹ್ಯಾನ್, ಶೆಕೆಮ್, ಲಿಕ್ಹೀ, ಅನೀಯಾಮ್. 20 ಎಫ್ರಾಯೀಮನ ವಂಶಜರು: ಶೂತೆಲಹ, ಅವನ ಮಗನು ಬೆರೆದ್; ಅವನ ಮಗನು ತಹಾತ್; ಅವನ ಮಗನು ಎಲ್ಲಾದ, ಅವನ ಮಗನು ತಹತ್; 21 ಅವನ ಮಗನು ಜಾಬಾದ್; ಅವನ ಮಗನು ಶೂತೆಲಹ, ಏಜೆರ್, ಎಲಿಯಾದ್. ಆ ದೇಶದಲ್ಲಿ ಹುಟ್ಟಿದ ಗತ್‌ನವರು ಇವರ ಪಶುಗಳನ್ನು ಹಿಡಿದುಕೊಳ್ಳಲು ಇಳಿದು ಬಂದಾಗ, ಇವರನ್ನು ಕೊಂದುಹಾಕಿದರು. 22 ಅವರ ತಂದೆಯಾದ ಎಫ್ರಾಯೀಮನು ಅನೇಕ ದಿವಸಗಳು ದುಃಖಪಟ್ಟದ್ದರಿಂದ, ಅವನ ಸಹೋದರರು ಅವನನ್ನು ಆದರಿಸಲು ಬಂದರು. 23 ಅವನು ತನ್ನ ಹೆಂಡತಿಯ ಬಳಿಗೆ ಸೇರಿದಾಗ, ಅವಳು ಗರ್ಭಧರಿಸಿ ಮಗನನ್ನು ಹೆತ್ತಳು. ಆಗ ತನ್ನ ಮನೆಯಲ್ಲಿ ಕೇಡು ಉಂಟಾದದ್ದರಿಂದ ಅವನಿಗೆ ಬೆರೀಯ ಎಂದು ಹೆಸರಿಟ್ಟನು. 24 ಇವನ ಪುತ್ರಿಯ ಹೆಸರು ಶೇರಳು. ಇವಳು ಕೆಳಗಿನ ಬೇತ್ ಹೋರೋನ್, ಮೇಲಿನ ಬೇತ್ ಹೋರೋನ್ ಮತ್ತು ಉಜ್ಜೇನ್ ಶೇರವನ್ನೂ ಕಟ್ಟಿಸಿದಳು. 25 ಇವರ ಪುತ್ರರು: ರೆಫಹನ ಮಗನು ರೆಷೆಫನು, ರೆಷೆಫನ ಮಗನು ತೆಲಹನು, ಅವನ ಮಗನು ತಹನನು, 26 ಅವನ ಮಗನು ಲದ್ದಾನ್, ಅವನ ಮಗನು ಅಮ್ಮೀಹೂದ, ಅವನ ಮಗನು ಎಲೀಷಾಮಾ, 27 ಅವನ ಮಗನು ನೂನನು, ಅವನ ಮಗನು ಯೆಹೋಶುವ. 28 ಅವರ ವಶಪಡಿಸಿಕೊಂಡು ನಿವಾಸಮಾಡಿದ ಬೇತೇಲೂ, ಅದರ ಗ್ರಾಮಗಳೂ ಪೂರ್ವದಿಕ್ಕಿನಲ್ಲಿ ನಾರಾನನೂ, ಪಶ್ಚಿಮ ದಿಕ್ಕಿನಲ್ಲಿ ಗೆಜೆರ್, ಅದರ ಗ್ರಾಮಗಳೂ ಒಳಗೊಂಡಿತ್ತು; ಶೆಕೆಮ್, ಅಯ್ಯಾ ಪಟ್ಟಣಗಳೂ ಅದರ ಗ್ರಾಮಗಳೂ ಇವೇ. 29 ಗಾಜವೂ, ಮನಸ್ಸೆಯ ಸಂತಾನದವರ ಮೇರೆಯಲ್ಲಿರುವ ಬೇತ್ ಷೆಯಾನೂ, ತಾನಕವೂ, ಮೆಗಿದ್ದೋ, ದೋರ್ ಮತ್ತು ಇವುಗಳ ಗ್ರಾಮಗಳು ಇವುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಸಂತಾನದವರು ವಾಸವಾಗಿದ್ದರು. 30 ಆಶೇರನ ಪುತ್ರರು: ಇಮ್ನ, ಇಷ್ವ, ಇಷ್ವೀ, ಬೆರೀಯ, ಅವರ ಸಹೋದರಿಯಾದ ಸೆರಹಳು. 31 ಬೆರೀಯನ ಪುತ್ರರು: ಹೆಬೆರನು, ಮಲ್ಕೀಯೇಲ್ ಇವನು ಬಿರ್ಜಾಯಿತನ ತಂದೆಯು. 32 ಹೆಬೆರನು ಯಫ್ಲೇಟನನ್ನೂ, ಶೋಮೇರನನ್ನೂ, ಹೋತಾಮನನ್ನೂ, ಅವರ ಸಹೋದರಿಯಾದ ಶೂವಳನ್ನೂ ಪಡೆದನು. 33 ಯಫ್ಲೇಟನ ಪುತ್ರರು: ಪಾಸಕನು, ಬಿಮ್ಹಾಲನು, ಅಶ್ವಾತನು ಇವರೇ ಯಫ್ಲೇಟನ ಮಕ್ಕಳು. 34 ಶೆಮೆರನ ಪುತ್ರರು: ಅಹೀಯು, ರೊಹ್ಗನು, ಹುಬ್ಬನು, ಅರಾಮ್. 35 ಅವನ ಸಹೋದರನಾದ ಹೆಲೆಮನ ಪುತ್ರರು: ಚೋಫಹನು, ಇಮ್ನನು, ಶೇಲೆಷ್‌ನು, ಆಮಾಲನು. 36 ಚೋಫಹನ ಪುತ್ರರು: ಸೂಹ, ಹರ್ನೆಫೆರ್, ಶೂಗಾಲ್, ಬೇರೀ, ಇಮ್ರ, 37 ಬೆಚೆರ್, ಹೋದ್, ಶಮ್ಮ, ಶಿಲ್ಷ, ಇತ್ರಾನ್, ಬೇರನು. 38 ಯೆತೆರನ ಪುತ್ರರು: ಯೆಫುನ್ನೆ, ಪಿಸ್ಪ, ಅರಾ. 39 ಉಲ್ಲನ ಪುತ್ರರು: ಆರಹ, ಹನ್ನೀಯೇಲ್, ರಿಚ್ಯ. 40 ಇವರೆಲ್ಲರು ಆಶೇರನ ಮಕ್ಕಳಾಗಿದ್ದು, ತಮ್ಮ ತಂದೆಯ ಕುಟುಂಬದಲ್ಲಿ ಯಜಮಾನರಾಗಿಯೂ, ಯುದ್ಧ ಪರಾಕ್ರಮಶಾಲಿಗಳಲ್ಲಿ ಮುಖ್ಯಸ್ಥರಾಗಿಯೂ, ಪ್ರಭುಗಳಲ್ಲಿ ಶ್ರೇಷ್ಠರಾಗಿಯೂ ಇದ್ದರು. ಅವರ ವಂಶಾವಳಿಯಲ್ಲಿ ದಾಖಲಿಸಿದ ಲೆಕ್ಕದ ಪ್ರಕಾರ ಯುದ್ಧಕ್ಕೆ ಸಿದ್ಧವಿರುವ 26,000 ಮಂದಿ ಇದ್ದರು.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 7 >