< ಜೆಕರ್ಯನು 1 >

1 ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಎಂಟನೆಯ ತಿಂಗಳಲ್ಲಿ ಯೆಹೋವನು ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನೂ ಅದ ಜೆಕರ್ಯನೆಂಬ ಪ್ರವಾದಿಗೆ ಈ ವಾಕ್ಯವನ್ನು ದಯಪಾಲಿಸಿದನು.
Ɔbosome a ɛtɔ so nwɔtwe wɔ ɔhene Dario adedie afe a ɛtɔ so mmienu mu no, Awurade asɛm baa odiyifoɔ Sakaria a ɔyɛ Berekia babarima na ɔno nso yɛ Ido babarima nkyɛn sɛ:
2 ಅದೇನೆಂದರೆ, “ಯೆಹೋವನು ನಿಮ್ಮ ಪೂರ್ವಿಕರ ಮೇಲೆ ಬಹು ಕೋಪಗೊಂಡಿದ್ದಾನೆ.
“Awurade bo fuu mo tete agyanom.
3 ಆದಕಾರಣ ನೀನು ನಿನ್ನ ಜನರಿಗೆ ಹೀಗೆ ಹೇಳು, ‘ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ನನ್ನ ಕಡೆಗೆ ಪುನಃ ತಿರುಗಿಕೊಳ್ಳಿರಿ’” ಇದು ಸೇನಾಧೀಶ್ವರನಾದ ಯೆಹೋವನ ನುಡಿ, “ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
Enti, ka kyerɛ nkurɔfoɔ no sɛ: Sei na Asafo Awurade seɛ: ‘Monsane mmra me nkyɛn, na mɛsane aba mo nkyɛn,’ deɛ Asafo Awurade seɛ nie.
4 ನಿಮ್ಮ ಪೂರ್ವಿಕರಂತಿರಬೇಡಿರಿ; ಪೂರ್ವಕಾಲದ ಪ್ರವಾದಿಗಳು ಅವರಿಗೆ, “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ನಿಮ್ಮ ದುರ್ಮಾರ್ಗ, ದುಷ್ಕೃತ್ಯಗಳಿಂದ ಹಿಂದಿರುಗಿರಿ’ ಎಂದು ಸಾರಿದರೂ ಅವರು ನನ್ನ ಮಾತನ್ನು ಕಿವಿಗೊಟ್ಟು ಕೇಳಲಿಲ್ಲ” ಇದು ಯೆಹೋವನ ನುಡಿ.
Monnyɛ sɛ mo tete agyanom, a adiyifoɔ a wɔdii ɛkan no pae mu ka kyerɛɛ wɔn sɛ, ‘Sei na Asafo Awurade seɛ: Monnane mfiri mo akwammɔne ne nneyɛeɛ bɔne ho,’ nanso wɔantie no na wɔanyɛ aso amma no.
5 “ನಿಮ್ಮ ಪೂರ್ವಿಕರು ಎಲ್ಲಿ? ಪ್ರವಾದಿಗಳು ಸದಾಕಾಲ ನಿತ್ಯನಿರಂತರವಾಗಿ ಇರುವರೇ?
Mo tete agyanom wɔ he seesei? Na adiyifoɔ no, wɔte ase daa anaa?
6 ಆದರೆ ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯಗಳೂ ಮತ್ತು ವಿಧಿಗಳೂ ನಿಮ್ಮ ಪೂರ್ವಿಕರನ್ನು ಹಿಂದಟ್ಟಿ ಹಿಡಿದು ಶಾಶ್ವತವಾಗಿ ಉಳಿದಿದೆ. ಅವರು ತಿರುಗಿಕೊಂಡು, ಸೇನಾಧೀಶ್ವರ ಯೆಹೋವನಿಗೆ ‘ನಮ್ಮ ದುಷ್ಕೃತ್ಯಗಳಿಗೆ ತಕ್ಕ ಹಾಗೆ ನಮಗೆ ಏನು ಮಾಡಬೇಕೆಂದು ಸಂಕಲ್ಪಿಸಿದನೋ ಅದನ್ನು ನಮಗೆ ಮಾಡಿದ್ದಾನಲ್ಲಾ’” ಅಂದುಕೊಂಡರು.
Na me nsɛm a menam mʼasomfoɔ adiyifoɔ so kaeɛ no, amma mo tete agyanom no so anaa? “Afei wɔnuu wɔn ho na wɔkaa sɛ, ‘Asafo Awurade ayɛ yɛn deɛ ɛfata yɛn akwan ne nneyɛeɛ, sɛdeɛ ɔyɛɛ nʼadwene sɛ ɔbɛyɛ no.’”
7 ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಹನ್ನೊಂದನೆಯ ತಿಂಗಳಿನ ಅಂದರೆ ಶೆಬಾಟ್ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನ ವಾಕ್ಯವು ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನಾದ ಜೆಕರ್ಯನೆಂಬ ಪ್ರವಾದಿಗೆ ಕೇಳಿಬಂತು,
Na ɛda a ɛtɔ so aduonu ɛnan wɔ ɔbosome a ɛtɔ so dubaako a wɔfrɛ no Sebat, wɔ ɔhene Dario adedie afe a ɛtɔ so mmienu so no, Awurade asɛm baa odiyifoɔ Sakaria a ɔyɛ Ido babarima Berekia babarima no nkyɛn.
8 “ರಾತ್ರಿಯಲ್ಲಿ ನನಗೆ ದರ್ಶನವಾಯಿತು. ಇಗೋ, ಕೆಂಪು ಕುದುರೆಯನ್ನು ಹತ್ತಿದ ಒಬ್ಬ ಪುರುಷನು ತಗ್ಗಿನಲ್ಲಿರುವ ಸುಗಂಧವೃಕ್ಷಗಳ ನಡುವೆ ನಿಂತಿದ್ದನು; ಅವನ ಹಿಂದೆ ಕೆಂಪು, ಕಂದು, ಬಿಳಿ ಕುದುರೆಗಳು ಮತ್ತು ಅವರ ಸವಾರರಿದ್ದರು.
Anadwo no menyaa anisoadehunu, mehunuu ɔbarima bi a ɔte ɔpɔnkɔ kɔkɔɔ so wɔ mʼanim! Na ɔgyina ohwam nnua bi ntam wɔ bɔnhwa tiaa a emu dɔ mu. Na apɔnkɔ kɔkɔɔ, nnodoeɛ ne fitaa wɔ nʼakyi.
9 ನನಗೆ ಕನಸಿನ ಅರ್ಥವನ್ನು ವಿವರಿಸುವ ದೇವದೂತನನ್ನು, ‘ಸ್ವಾಮಿ ಇವರು ಯಾರು?’” ಎಂದು ನಾನು ಕೇಳಲು ಆತನು ನನಗೆ, “ಇವರು ಇಂಥವರೆಂದು ನಿನಗೆ ತೋರಿಸುವೆನು” ಎಂಬುದಾಗಿ ಹೇಳಿದನು.
Mebisaa sɛ, “Yeinom ase ne sɛn, me wura?” Ɔbɔfoɔ a ɔne me rekasa no buaa sɛ, “Mɛkyerɛ wo adekodeɛ a wɔyɛ.”
10 ೧೦ ಕೂಡಲೆ ಸುಗಂಧವೃಕ್ಷಗಳ ನಡುವೆ ನಿಂತಿದ್ದವನು, “ಇವರು ಲೋಕಸಂಚಾರಾರ್ಥವಾಗಿ ಯೆಹೋವನಿಂದ ಕಳುಹಿಸಲ್ಪಟ್ಟವರು” ಎಂದು ಉತ್ತರಕೊಟ್ಟನು.
Enti, ɔbarima a ɔgyina ohwam nnua ntam mu no kyerɛɛ aseɛ sɛ, “Wɔyɛ wɔn a Awurade asoma wɔn sɛ wɔnkɔ ewiase afanan nyinaa no.”
11 ೧೧ ಆಗ ಅವರು ಸುಗಂಧವೃಕ್ಷಗಳ ನಡುವೆ ನಿಂತಿದ್ದ ಆ ಯೆಹೋವನ ದೂತನಿಗೆ, “ನಾವು ಲೋಕದಲ್ಲಿ ಸಂಚರಿಸಿ ಬಂದಿದ್ದೇವೆ. ಇಗೋ ಲೋಕವೆಲ್ಲಾ ನೆಮ್ಮದಿಯಾಗಿ ಸುಮ್ಮನಿದೆ” ಎಂದು ಅರಿಕೆಮಾಡಿದರು.
Na wɔbɛka kyerɛɛ Awurade ɔbɔfoɔ a ɔgyina ohwam nnua no mu no sɛ, “Yɛakyin afa asase no so nyinaa, na yɛhunuu sɛ ewiase nyinaa wɔ ahomegyeɛ ne asomdwoeɛ.”
12 ೧೨ ಇದನ್ನು ಕೇಳಿ ಯೆಹೋವನ ದೂತನು, “ಸೇನಾಧೀಶ್ವರನಾದ ಯೆಹೋವನೇ, ನೀನು ಎಪ್ಪತ್ತು ವರ್ಷಗಳಿಂದ ರೋಷಗೊಂಡಿರುವ ಯೆರೂಸಲೇಮ್ ಮೊದಲಾದ ಯೆಹೂದದ ಪಟ್ಟಣಗಳನ್ನು ಎಷ್ಟು ಕಾಲ ಕರುಣಿಸದೆ ಇರುವಿ” ಎಂದು ಬಿನ್ನವಿಸಲು,
Afei, Awurade ɔbɔfoɔ no kaa sɛ, “Asafo Awurade, ɛnkɔsi da bɛn na wobɛyi wʼahummɔborɔ afiri Yerusalem ne Yuda nkuro a wo bo afu wɔn mfirinhyia aduɔson yi so?”
13 ೧೩ ನನ್ನೊಂದಿಗೆ ಮಾತನಾಡಿದ ದೂತನಿಗೆ, ಯೆಹೋವನು ಕರುಣೆ ಹಾಗೂ ಒಳ್ಳೆಯ ಮಾತುಗಳಿಂದ ಉತ್ತರಕೊಟ್ಟನು.
Enti, Awurade kaa abodwosɛm ne awerɛkyekyesɛm kyerɛɛ ɔbɔfoɔ a ɔne me kasaeɛ no.
14 ೧೪ ಆಗ ಆ ದೂತನು ನನಗೆ ಈ ಅಪ್ಪಣೆ ಮಾಡಿದನು, “ನೀನು ಹೀಗೆ ಸಾರಿ ಹೇಳಬೇಕು, ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ಯೆರೂಸಲೇಮಿಗೂ, ಚೀಯೋನಿಗೂ ಅವಮಾನವಾಯಿತಲ್ಲಾ’ ಎಂದು ಬಹಳವಾಗಿ ಅಸಮಾಧಾನಗೊಂಡಿದ್ದೇನೆ.
Afei ɔbɔfoɔ a ɔne me rekasa no kaa sɛ, “Pae mu ka saa asɛm yi: Yei ne deɛ Asafo Awurade seɛ: ‘Metwe Yerusalem ne Sion ho ninkunu yie,
15 ೧೫ ನೆಮ್ಮದಿಯಾಗಿರುವ ಜನಾಂಗಗಳ ಮೇಲೆ ನಾನು ಬಹಳ ಕೋಪಗೊಂಡಿದ್ದೇನೆ; ನಾನು ಯೆರೂಸಲೇಮಿನ ಮೇಲೆ ಸ್ವಲ್ಪ ಮಾತ್ರ ಸಿಟ್ಟುಗೊಂಡು ಮಾಡಬೇಕೆಂದಿದ್ದ ಕೇಡಿಗಿಂತ ಅವರೇ ಹೆಚ್ಚಾಗಿ ಕೇಡಿಗೆ ಕೇಡು ಸೇರಿಸಿಕೊಂಡರು.”
nanso, me bo afu aman a wɔn aso mu adwo wɔn no. Na anka me bo mfu wɔn bebree, nanso wɔmaa Israel amanehunu no boroo so.’
16 ೧೬ ಹೀಗಿರಲು ಯೆಹೋವನು ಇಂತೆನ್ನುತ್ತಾನೆ, “ನಾನು ಕನಿಕರವುಳ್ಳವನಾಗಿ ಯೆರೂಸಲೇಮಿಗೆ ಹಿಂದಿರುಗಿದ್ದೇನೆ; ನನ್ನ ಆಲಯವು ಪುನಃ ಅಲ್ಲಿ ಕಟ್ಟಲ್ಪಡುವುದು; ಯೆರೂಸಲೇಮಿನಲ್ಲಿ ನೂಲು ಎಳೆಯಲ್ಪಡುವುದು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
“Enti, deɛ Awurade seɛ nie: ‘Mɛsane abɛhunu Yerusalem mmɔbɔ, na ɛhɔ na wɔbɛsane asi me fie. Na wɔbɛtwe susu ahoma mu wɔ Yerusalem so,’ deɛ Asafo Awurade seɛ nie.
17 ೧೭ ಮತ್ತೊಮ್ಮೆ ಹೀಗೆ ಸಾರಿ ಹೇಳು, ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇನ್ನು ನನ್ನ ಪಟ್ಟಣಗಳಲ್ಲಿ ಶುಭವು ತುಂಬಿ ತುಳುಕುವುದು; ಯೆಹೋವನು ಇನ್ನು ಚೀಯೋನನ್ನು ಸಂತೈಸುವನು, ಯೆರೂಸಲೇಮನ್ನು ಮತ್ತೆ ತನಗಾಗಿ ಆರಿಸಿಕೊಳ್ಳುವನು.”
“Kɔ so pae mu ka sɛ, sei na Asafo Awurade seɛ: ‘Nnepa bɛbu so wɔ me nkuro yi so bio, na Awurade bɛkyekye Sion werɛ bio, na wafa Yerusalem.’”
18 ೧೮ ನಾನು ಕಣ್ಣೆತ್ತಿ ನೋಡಲು ಇಗೋ, ನಾಲ್ಕು ಕೊಂಬುಗಳು ಕಾಣಿಸಿದವು.
Afei, memaa mʼani so, na mehunuu mmɛn ɛnan!
19 ೧೯ ವಿವರಿಸುವ ದೂತನನ್ನು ಕುರಿತು, “ಇವು ಏನು?” ಎಂದು ನಾನು ಕೇಳಿದ್ದಕ್ಕೆ ಅವನು, “ಇವು ಯೆಹೂದ, ಇಸ್ರಾಯೇಲ್, ಯೆರೂಸಲೇಮನ್ನು ಚದುರಿಸುವ ಕೊಂಬುಗಳು” ಎಂದು ಉತ್ತರಕೊಟ್ಟನು.
Mebisaa ɔbɔfoɔ a ɔne me rekasa no sɛ, “Yeinom yɛ ɛdeɛn?” Ɔbuaa me sɛ, “Saa mmɛn yi na ɛbɔɔ Yuda, Israel ne Yerusalem peteeɛ no.”
20 ೨೦ ಅನಂತರ ಯೆಹೋವನು ನನಗೆ ನಾಲ್ಕು ಮಂದಿ ಕಮ್ಮಾರರನ್ನು ತೋರಿಸಿದನು.
Na Awurade kyerɛɛ me adwumfoɔ ɛnan.
21 ೨೧ ಆಗ ನಾನು, “ಇವರು ಏನು ಮಾಡುವುದಕ್ಕೆ ಬಂದಿದ್ದಾರೆ?” ಎಂದು ಕೇಳಲು ಅವನು, “ಈ ಕೊಂಬುಗಳು ಯೆಹೂದದವರಲ್ಲಿ ಯಾರೂ ತಲೆಯೆತ್ತದಂತೆ ಅವರನ್ನು ಚದುರಿಸಿವೆಯಷ್ಟೆ; ಇವರಾದರೋ ಯೆಹೂದ ದೇಶದವರನ್ನು ಚದುರಿಸಬೇಕೆಂದು ತಲೆಯೆತ್ತಿದ ಜನಾಂಗಗಳ ಕೊಂಬುಗಳನ್ನು ಹೆದರಿಸಿ ಕೆಡುವುದಕ್ಕೆ ಬಂದಿದ್ದಾರೆ” ಎಂದು ಹೇಳಿದನು.
Mebisaa sɛ, “Ɛdeɛn na yeinom rebɛyɛ?” Ɔbuaa sɛ, “Mmɛn ɛnan no bɔɔ Yuda petee a obiara antumi amma ne tiri so, nanso adwumfoɔ yi aba sɛ wɔrebɛhunahuna wɔn, na woatutu aman no mmɛn a wɔmemaa so tiaa Yudaman na wɔbɔɔ nnipa no peteeɛ no.”

< ಜೆಕರ್ಯನು 1 >