< ತೀತನಿಗೆ ಬರೆದ ಪತ್ರಿಕೆ 2 >

1 ನೀನಾದರೋ ಸ್ವಸ್ಥ ಬೋಧನೆಗೆ ಅನುಗುಣವಾಗಿ ಉಪದೇಶಮಾಡು.
Koma iwe uziphunzitsa zogwirizana ndi chiphunzitso choona.
2 ವೃದ್ಧರು ಮದ್ಯಾಸಕ್ತಿಯಿಲ್ಲದವರೂ, ಗೌರವವುಳ್ಳವರೂ, ಜಿತೇಂದ್ರಿಯರೂ, ನಂಬಿಕೆ, ಪ್ರೀತಿ, ತಾಳ್ಮೆಯಲ್ಲಿ ಸ್ವಸ್ಥರು ಆಗಿರಬೇಕೆಂದು ಬೋಧಿಸು.
Phunzitsa amuna achikulire kuti akhale osaledzera, aulemu wawo, odziletsa, okhwima mʼchikhulupiriro, mʼchikondi ndi mʼkupirira.
3 ಹಾಗೆಯೇ, ವೃದ್ಧ ಸ್ತ್ರೀಯರು ಚಾಡಿಹೇಳುವವರೂ ಮದ್ಯಕ್ಕೆ ಅಧೀನರು ಆಗಿರದೆ ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರೂ, ಸದ್ಬೋಧಕಿಯರು ಆಗಿರಬೇಕು.
Chimodzimodzinso, phunzitsa amayi achikulire kuti akhale aulemu mʼmakhalidwe awo, asakhale osinjirira anzawo kapena zidakwa, koma akhale alangizi abwino.
4 ಇದಲ್ಲದೆ, ವೃದ್ಧ ಸ್ತ್ರೀಯರು ಪ್ರಾಯದ ಸ್ತ್ರೀಯರಿಗೆ ಮಾದರಿಯಾಗಿ, ತಮ್ಮ ಮೂಲಕ ದೇವರ ವಾಕ್ಯಕ್ಕೆ ದೂಷಣೆಯಾಗದಂತೆ ನಡೆದುಕೊಳ್ಳುವಂತೆ ತಿಳಿಸು. ಪ್ರಾಯದಸ್ತ್ರಿಯರು ಗಂಡಂದಿರನ್ನೂ, ಮಕ್ಕಳನ್ನೂ ಪ್ರೀತಿಸುವವರೂ, ವಿವೇಕವುಳ್ಳವರೂ, ಕ್ಷಮಾಶಿಲರೂ, ಪತಿವ್ರತೆಯರೂ
Tsono atha kulangiza amayi achichepere kukonda amuna awo ndi ana awo.
5 ಸ್ವಂತಮನೆಗಾಗಿ ಕೆಲಸಮಾಡುವವರೂ, ಸುಶೀಲೆಯರೂ ಆಗಿ ತಮ್ಮ ಗಂಡಂದಿರಿಗೆ ವಿಧೇಯರಾಗಿರಬೇಕೆಂದು ಬುದ್ಧಿಹೇಳಬೇಕೆಂದು ನೀನು ವೃದ್ಧ ಸ್ತ್ರೀಯರಿಗೆ ಬೋಧಿಸು.
Kuwaphunzitsa kukhala odziletsa ndi oyera mtima, osamala bwino mabanja awo, okoma mtima, ndi ogonjera amuna awo. Choncho palibe amene adzanyoze mawu a Mulungu.
6 ಹಾಗೆಯೇ ಯೌವನಸ್ಥರನ್ನು ಎಲ್ಲಾ ಸಂಗತಿಗಳಲ್ಲಿಯೂ ಸ್ವಸ್ಥ ಚಿತ್ತರಾಗಿರಬೇಕೆಂದು ಎಚ್ಚರಿಸು.
Momwemonso, uwalimbikitse amuna achichepere kuti akhale odziletsa.
7 ಸತ್ಕಾರ್ಯ ಮಾಡುವುದರಲ್ಲಿ ನೀನೇ ಮಾದರಿಯಾಗಿರು. ನೀನು ಮಾಡುವ ಉಪದೇಶದಲ್ಲಿ ಸತ್ಯವೂ ಗೌರವವೂ ಆಕ್ಷೇಪಣೆಗೆ ಅವಕಾಶವಿಲ್ಲದಂಥ ಸುಬುದ್ಧಿಯೂ ಇರಬೇಕು;
Pa zonse iwe mwini ukhale chitsanzo pa ntchito zabwino. Pa chiphunzitso chako uwonetsa kuona mtima ndi kutsimikiza mtima kwako.
8 ಆಗ ನಮಗೆ ಎದುರಾಳಿಗಳಾಗಿರುವವರು ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕೆ ಆಸ್ಪದವಿಲ್ಲದೆ ನಾಚಿಕೊಳ್ಳುವರು.
Phunzitsa choonadi kuti anthu asapeze chokutsutsa, motero wotsutsana nawe adzachita manyazi chifukwa adzasowa kanthu koyipa kuti atinenere.
9 ಸೇವಕರು ತಮ್ಮ ಯಜಮಾನರಿಗೆ ವಿಧೇಯರಾಗಿದ್ದು ಅವರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಪಡುತ್ತಾ ಎದುರುತ್ತರಕೊಡದೆ,
Phunzitsa akapolo kuti azigonjera ambuye awo mu zinthu zonse ndi kuwakondweretsa. Asamatsutsane nawo
10 ೧೦ ಯಾವುದನ್ನೂ ಕದ್ದಿಟ್ಟುಕೊಳ್ಳದೆ ಒಳ್ಳೆಯ ನಂಬಿಗಸ್ತರೆಂದು ಹೆಸರನ್ನು ಹೊಂದಲು, ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಗೌರವ ತರುವಂತೆ ವರ್ತಿಸಬೇಕೆಂದು ಅವರಿಗೆ ಉಪದೇಶಿಸು.
kapena kumawabera, koma adzionetse kuti ndi odalirika, motero pa zochita zawo zonse adzaonetsa ubwino wa chiphunzitso cha Mulungu, Mpulumutsi wathu.
11 ೧೧ ಏಕೆಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು;
Pakuti chisomo cha Mulungu chimene chimapulumutsa chaonekera kwa anthu onse.
12 ೧೨ ಅದು ಭಕ್ತಿಹೀನತೆಯನ್ನೂ, ಲೋಕದ ಆಸೆಗಳನ್ನೂ ತ್ಯಜಿಸಿ ಭಾಗ್ಯಕರವಾದ ನಿರೀಕ್ಷೆಯನ್ನು, (aiōn g165)
Chisomo chimatiphunzitsa kukana moyo osalemekeza Mulungu komanso zilakolako za dziko lapansi. Ndipo chimatiphunzitsa kukhala moyo odziletsa, olungama ndi opembedza Mulungu nthawi ino, (aiōn g165)
13 ೧೩ ಅಂದರೆ ಮಹಾ ದೇವರ ಮತ್ತು ನಮ್ಮ ರಕ್ಷಕನಾದ ಯೇಸುಕ್ರಿಸ್ತನ ಮಹಿಮೆಪೂರ್ಣವಾದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ, ನೀತಿವಂತರಾಗಿಯೂ, ಭಕ್ತಿಯುಳ್ಳವರಾಗಿಯೂ ಜೀವಿಸಬೇಕೆಂದು ನಮಗೆ ಬೋಧಿಸುತ್ತದೆ.
pamene tikudikira chiyembekezo chodala; kuonekera kwa ulemerero wa Mulungu wathu wamkulu ndi Mpulumutsi, Yesu Khristu,
14 ೧೪ ಆತನು ನಮ್ಮನ್ನು ಸಕಲ ಅಧರ್ಮಗಳಿಂದ ಬಿಡುಗಡೆಮಾಡುವುದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯಜನರನ್ನು ತನಗಾಗಿ ಬೇರ್ಪಡಿಸಿ ಶುದ್ಧೀಕರಣ ಮಾಡುವುದಕ್ಕಾಗಿಯೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು.
amene anadzipereka yekha chifukwa cha ife kutiwombola ku zoyipa zonse ndi kudziyeretsera yekha anthu amene ndi akeake, achangu pa ntchito yabwino.
15 ೧೫ ಈ ಕಾರ್ಯಗಳ ವಿಷಯದಲ್ಲಿ ಬೋಧಿಸುತ್ತಾ, ಎಚ್ಚರಿಸುತ್ತಾ, ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದ ಹಾಗೆ ನೋಡಿಕೋ.
Tsono zimenezi ndi zinthu zomwe uyenera kuphunzitsa. Uziwalimbikitsa anthu ndi kuwatsutsa komwe. Uzichita zimenezi ndi ulamuliro wonse. Wina aliyense asakupeputse ayi.

< ತೀತನಿಗೆ ಬರೆದ ಪತ್ರಿಕೆ 2 >