< ರೋಮಾಪುರದವರಿಗೆ 10 >

1 ಸಹೋದರರೇ, ಇಸ್ರಾಯೇಲ್ಯರು ರಕ್ಷಣೆ ಹೊಂದಬೇಕೆಂಬುದೇ ನನ್ನ ಮನೋಭಿಲಾಷೆಯೂ ಮತ್ತು ದೇವರಿಗೆ ನಾನು ಮಾಡುವ ವಿಜ್ಞಾಪನೆಯೂ ಆಗಿದೆ.
ហេ ភ្រាតរ ឥស្រាយេលីយលោកា យត៑ បរិត្រាណំ ប្រាប្នុវន្តិ តទហំ មនសាភិលឞន៑ ឦឝ្វរស្យ សមីបេ ប្រាត៌្ហយេ។
2 ದೇವರ ಬಗ್ಗೆ ಆಸಕ್ತಿಯುಳ್ಳವರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿ ಕೊಡುತ್ತೇನೆ; ಆದರೂ ಅವರ ಆಸಕ್ತಿಯು ಜ್ಞಾನಾನುಸಾರವಾದುದಲ್ಲ.
យត ឦឝ្វរេ តេឞាំ ចេឞ្ដា វិទ្យត ឥត្យត្រាហំ សាក្ឞ្យស្មិ; កិន្តុ តេឞាំ សា ចេឞ្ដា សជ្ញានា នហិ,
3 ಅವರು ದೇವರಿಂದ ದೊರಕುವ ನೀತಿಯನ್ನರಿಯದೆ ಸ್ವಂತ ನೀತಿಯನ್ನೇ; ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದ್ದುದ್ದರಿಂದ ದೇವರ ನೀತಿಗೆ ಅಧೀನರಾಗಲಿಲ್ಲ.
យតស្ត ឦឝ្វរទត្តំ បុណ្យម៑ អវិជ្ញាយ ស្វក្ឫតបុណ្យំ ស្ថាបយិតុម៑ ចេឞ្ដមានា ឦឝ្វរទត្តស្យ បុណ្យស្យ និឃ្នត្វំ ន ស្វីកុវ៌្វន្តិ។
4 ನಂಬುವವರೆಲ್ಲರಿಗೆ ನೀತಿಯನ್ನು ದೊರಕಿಸಿಕೊಡುವುದಕ್ಕಾಗಿ ಕ್ರಿಸ್ತನೇ ಧರ್ಮಶಾಸ್ತ್ರವನ್ನು ಕೊನೆಗೊಳಿಸಿದನು.
ខ្រីឞ្ដ ឯកៃកវិឝ្វាសិជនាយ បុណ្យំ ទាតុំ វ្យវស្ថាយាះ ផលស្វរូបោ ភវតិ។
5 ಧರ್ಮಶಾಸ್ತ್ರದ ನೀತಿಯನುಸಾರ, “ಅದನ್ನು ಅನುಸರಿಸಿದವನು ಅದರಿಂದಲೇ ಜೀವಿಸುವನೆಂದು” ಮೋಶೆಯು ಬರೆಯುತ್ತಾನೆ.
វ្យវស្ថាបាលនេន យត៑ បុណ្យំ តត៑ មូសា វណ៌យាមាស, យថា, យោ ជនស្តាំ បាលយិឞ្យតិ ស តទ្ទ្វារា ជីវិឞ្យតិ។
6 ಆದರೆ ನಂಬಿಕೆಯಿಂದುಂಟಾಗುವ ನೀತಿಯು ಈ ರೀತಿಯಾಗಿ ಹೇಳುತ್ತದೆ. “‘ಕ್ರಿಸ್ತನನ್ನು ಭೂಮಿಗಿಳಿಸಿಕೊಂಡು ಬರುವುದಕ್ಕಾಗಿ ಮೇಲಣ ಲೋಕಕ್ಕೆ ಏರಿಹೋದವರಾರು?’
កិន្តុ ប្រត្យយេន យត៑ បុណ្យំ តទ៑ ឯតាទ្ឫឝំ វាក្យំ វទតិ, កះ ស្វគ៌ម៑ អារុហ្យ ខ្រីឞ្ដម៑ អវរោហយិឞ្យតិ?
7 ಎಂದಾಗಲಿ ‘ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರುವುದಕ್ಕಾಗಿ ಯಾರು ಪಾತಾಳಲೋಕಕ್ಕೆ ಇಳಿದುಹೋದರು? ಎಂದಾಗಲಿ ನಿನ್ನ ಮನಸ್ಸಿನಲ್ಲಿ ಅಂದುಕೊಳ್ಳಬಾರದು.’” ಆದರೆ ಅದು ಏನನ್ನು ಹೇಳುತ್ತದೆ. (Abyssos g12)
កោ វា ប្រេតលោកម៑ អវរុហ្យ ខ្រីឞ្ដំ ម្ឫតគណមធ្យាទ៑ អានេឞ្យតីតិ វាក៑ មនសិ ត្វយា ន គទិតវ្យា។ (Abyssos g12)
8 “ದೇವರ ವಾಕ್ಯವು ನಿನ್ನ ಸಮೀಪದಲ್ಲಿಯೇ ಇದೆ; ಅದು ನಿನ್ನ ಬಾಯಲ್ಲಿಯೂ, ನಿನ್ನ ಹೃದಯದಲ್ಲಿಯೂ ಇದೆ.” ಆ ವಾಕ್ಯವು ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ.
តហ៌ិ កិំ ព្រវីតិ? តទ៑ វាក្យំ តវ សមីបស្ថម៑ អត៌្ហាត៑ តវ វទនេ មនសិ ចាស្តេ, តច្ច វាក្យម៑ អស្មាភិះ ប្រចាយ៌្យមាណំ វិឝ្វាសស្យ វាក្យមេវ។
9 ಅದೇನೆಂದರೆ ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವುದು ಎಂಬುದೇ.
វស្តុតះ ប្រភុំ យីឝុំ យទិ វទនេន ស្វីករោឞិ, តថេឝ្វរស្តំ ឝ្មឝានាទ៑ ឧទស្ថាបយទ៑ ឥតិ យទ្យន្តះករណេន វិឝ្វសិឞិ តហ៌ិ បរិត្រាណំ លប្ស្យសេ។
10 ೧೦ ಹೃದಯದಿಂದ ನಂಬುವುದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ ಅರಿಕೆಮಾಡುವುದರ ಮೂಲಕ ರಕ್ಷಣೆಯಾಗುತ್ತದೆ.
យស្មាត៑ បុណ្យប្រាប្ត្យត៌្ហម៑ អន្តះករណេន វិឝ្វសិតវ្យំ បរិត្រាណាត៌្ហញ្ច វទនេន ស្វីកត៌្តវ្យំ។
11 ೧೧ “ಆತನ ಮೇಲೆ ನಂಬಿಕೆಯಿಡುವ ಒಬ್ಬನಾದರೂ ಆಶಾಭಂಗಪಡುವುದಿಲ್ಲವೆಂದು” ಧರ್ಮಶಾಸ್ತ್ರವು ಹೇಳುತ್ತದೆ.
ឝាស្ត្រេ យាទ្ឫឝំ លិខតិ វិឝ្វសិឞ្យតិ យស្តត្រ ស ជនោ ន ត្របិឞ្យតេ។
12 ೧೨ ಈ ವಿಷಯದಲ್ಲಿ ಯೆಹೂದ್ಯರಿಗೂ ಅಥವಾ ಗ್ರೀಕನಿಗೂ ಹೆಚ್ಚು ಕಡಿಮೆ ಏನೂ ಇಲ್ಲ. ಎಲ್ಲರಿಗೂ ಒಬ್ಬನೇ ಕರ್ತನು; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವುದಕ್ಕೆ ಶಕ್ತನಾಗಿದ್ದಾನೆ.
ឥត្យត្រ យិហូទិនិ តទន្យលោកេ ច កោបិ វិឝេឞោ នាស្តិ យស្មាទ៑ យះ សវ៌្វេឞាម៑ អទ្វិតីយះ ប្រភុះ ស និជយាចកាន សវ៌្វាន៑ ប្រតិ វទាន្យោ ភវតិ។
13 ೧೩ ಆದ್ದರಿಂದ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೂ ರಕ್ಷಣೆಯಾಗುವುದೆಂದು ಬರೆದಿದೆ.
យតះ, យះ កឝ្ចិត៑ បរមេឝស្យ នាម្នា ហិ ប្រាត៌្ហយិឞ្យតេ។ ស ឯវ មនុជោ នូនំ បរិត្រាតោ ភវិឞ្យតិ។
14 ೧೪ ಆದರೆ ಅವರು ನಂಬದೆ ಇರುವುದರಿಂದ ಆತನ ನಾಮವನ್ನು ಹೇಳಿಕೊಳ್ಳುವುದಾದರೂ ಹೇಗೆ? ಮತ್ತು ಆತನ ಸುದ್ದಿಯನ್ನು ಕೇಳದಿರುವಲ್ಲಿ ಆತನನ್ನು ನಂಬುವುದಾದರೂ ಹೇಗೆ? ಪ್ರಚಾರಪಡಿಸುವವನಿಲ್ಲದೆ ಕೇಳುವುದಾದರೂ ಹೇಗೆ? ಸುವಾರ್ತೆಸಾರುವವರನ್ನು ಕಳುಹಿಸದೆ ಸಾರುವುದು ಹೇಗೆ?
យំ យេ ជនា ន ប្រត្យាយន៑ តេ តមុទ្ទិឝ្យ កថំ ប្រាត៌្ហយិឞ្យន្តេ? យេ វា យស្យាខ្យានំ កទាបិ ន ឝ្រុតវន្តស្តេ តំ កថំ ប្រត្យេឞ្យន្តិ? អបរំ យទិ ប្រចារយិតារោ ន តិឞ្ឋន្តិ តទា កថំ តេ ឝ្រោឞ្យន្តិ?
15 ೧೫ ಇದಕ್ಕೆ ಸರಿಯಾಗಿ “ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಮನೋಹರವಾಗಿವೆ” ಎಂದು ಬರೆದಿದೆ.
យទិ វា ប្រេរិតា ន ភវន្តិ តទា កថំ ប្រចារយិឞ្យន្តិ? យាទ្ឫឝំ លិខិតម៑ អាស្តេ, យថា, មាង្គលិកំ សុសំវាទំ ទទត្យានីយ យេ នរាះ។ ប្រចារយន្តិ ឝាន្តេឝ្ច សុសំវាទំ ជនាស្តុ យេ។ តេឞាំ ចរណបទ្មានិ កីទ្ឫក៑ ឝោភាន្វិតានិ ហិ។
16 ೧೬ ಆದರೂ ಆ ಶುಭವರ್ತಮಾನಕ್ಕೆ ಎಲ್ಲರೂ ಕಿವಿಗೊಡಲಿಲ್ಲ. ಈ ವಿಷಯದಲ್ಲಿ ಯೆಶಾಯನು, “ಕರ್ತನೇ, ನಾವು ಸಾರಿದ ಸುವಾರ್ತೆಯನ್ನು ಯಾರು ನಂಬಿದರು?” ಎಂದು ನುಡಿಯುತ್ತಾನೆ.
កិន្តុ តេ សវ៌្វេ តំ សុសំវាទំ ន គ្ឫហីតវន្តះ។ យិឝាយិយោ យថា លិខិតវាន៑។ អស្មត្ប្រចារិតេ វាក្យេ វិឝ្វាសមករោទ្ធិ កះ។
17 ೧೭ ಆದಕಾರಣ ಸಾರಿದ ಸುವಾರ್ತೆಯನ್ನು ಕೇಳುವುದರಿಂದ ನಂಬಿಕೆಯು ಹುಟ್ಟುತ್ತದೆ, ಕೇಳಿಸಿಕೊಳ್ಳುವುದು ಕ್ರಿಸ್ತನ ವಾಕ್ಯವಾಗಿದೆ.
អតឯវ ឝ្រវណាទ៑ វិឝ្វាស ឰឝ្វរវាក្យប្រចារាត៑ ឝ្រវណញ្ច ភវតិ។
18 ೧೮ ಆದರೂ “ಅವರಿಗೆ ಕೇಳಿಸಲಿಲ್ಲವೇನೋ?” ಎಂದು ಹೇಳುತ್ತೇನೆ. ಹೌದು ನಿಶ್ಚಯವಾಗಿ ಕೇಳಿಸಿಕೊಂಡಿದ್ದರು. “ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿದವು.”
តហ៌្យហំ ព្រវីមិ តៃះ កិំ នាឝ្រាវិ? អវឝ្យម៑ អឝ្រាវិ, យស្មាត៑ តេឞាំ ឝព្ទោ មហីំ វ្យាប្នោទ៑ វាក្យញ្ច និខិលំ ជគត៑។
19 ೧೯ ಆದರೆ “ಇಸ್ರಾಯೇಲ್ಯರು ಆ ವಾರ್ತೆಯನ್ನು ತಿಳಿದುಕೊಳ್ಳಲಿಲ್ಲವೇನು” ಎಂದು ಹೇಳುತ್ತೇನೆ. ಈ ವಿಷಯದಲ್ಲಿ, “ಜನಾಂಗವಲ್ಲದವರ ಮೂಲಕ ನಿಮ್ಮಲ್ಲಿ ಅಸೂಯೆ ಹುಟ್ಟುವಂತೆ ಪ್ರೆರೇಪಿಸುತ್ತೇನೆ; ವಿವೇಕವಿಲ್ಲದ ಜನರ ಮೂಲಕ ನಿಮ್ಮನ್ನು ರೊಚ್ಚಿಗೆಬ್ಬಿಸುವೆನು” ಎಂದು ಮೊದಲು ಮೋಶೆಯು ಹೇಳುತ್ತಾನೆ.
អបរមបិ វទាមិ, ឥស្រាយេលីយលោកាះ កិម៑ ឯតាំ កថាំ ន ពុធ្យន្តេ? ប្រថមតោ មូសា ឥទំ វាក្យំ ប្រោវាច, អហមុត្តាបយិឞ្យេ តាន៑ អគណ្យមានវៃរបិ។ ក្លេក្ឞ្យាមិ ជាតិម៑ ឯតាញ្ច ប្រោន្មត្តភិន្នជាតិភិះ។
20 ೨೦ ಇದಲ್ಲದೆ ಯೆಶಾಯನು ಧೈರ್ಯವಾಗಿ ಮಾತನಾಡಿ, “ನನ್ನನ್ನು ಹುಡುಕದವರಿಗೂ ನಾನು ಸಿಕ್ಕಿದೆನು, ನನ್ನನ್ನು ಕೇಳದವರಿಗೆ ನಾನು ಪ್ರತ್ಯಕ್ಷನಾದೆನು,” ಎಂದು ಹೇಳುತ್ತಾನೆ.
អបរញ្ច យិឝាយិយោៜតិឝយាក្ឞោភេណ កថយាមាស, យថា, អធិ មាំ យៃស្តុ នាចេឞ្ដិ សម្ប្រាប្តស្តៃ រ្ជនៃរហំ។ អធិ មាំ យៃ រ្ន សម្ប្ឫឞ្ដំ វិជ្ញាតស្តៃ រ្ជនៃរហំ៕
21 ೨೧ ಆದರೆ ಅವನು ಇಸ್ರಾಯೇಲ್ಯರನ್ನು ಕುರಿತು, “ನನ್ನ ಮಾತಿಗೆ ಅವಿಧೇಯರಾಗಿ ಎದುರುಮಾತನಾಡುವ ಜನರನ್ನು ನಾನು ದಿನವೆಲ್ಲಾ ಎಡೆಬಿಡದೆ ಕೈ ಚಾಚಿ ಕರೆದೆನೆಂದು” ಆತನು ಹೇಳುತ್ತಾನೆ.
កិន្ត្វិស្រាយេលីយលោកាន៑ អធិ កថយាញ្ចការ, យៃរាជ្ញាលង្ឃិភិ រ្លោកៃ រ្វិរុទ្ធំ វាក្យមុច្យតេ។ តាន៑ ប្រត្យេវ ទិនំ ក្ឫត្ស្នំ ហស្តៅ វិស្តារយាម្យហំ៕

< ರೋಮಾಪುರದವರಿಗೆ 10 >