< ಪ್ರಕಟಣೆ 1 >

1 ಯೇಸು ಕ್ರಿಸ್ತನ ಪ್ರಕಟನೆಯು, ಆತನು ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟಣೆಯನ್ನು ಹೊಂದಿದನು. ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ತಿಳಿಸಿದನು.
યત્ પ્રકાશિતં વાક્યમ્ ઈશ્વરઃ સ્વદાસાનાં નિકટં શીઘ્રમુપસ્થાસ્યન્તીનાં ઘટનાનાં દર્શનાર્થં યીશુખ્રીષ્ટે સમર્પિતવાન્ તત્ સ સ્વીયદૂતં પ્રેષ્ય નિજસેવકં યોહનં જ્ઞાપિતવાન્|
2 ಯೋಹಾನನು ದೇವರ ವಾಕ್ಯದ ಕುರಿತಾಗಿಯೂ ಯೇಸು ಕ್ರಿಸ್ತನು ಹೇಳಿದ ಸಾಕ್ಷಿಯ ವಿಷಯವಾಗಿಯೂ ತಾನು ಕಂಡದ್ದನ್ನೆಲ್ಲಾ ತಿಳಿಸುವವನಾಗಿ ಸಾಕ್ಷಿಕೊಟ್ಟನು.
સ ચેશ્વરસ્ય વાક્યે ખ્રીષ્ટસ્ય સાક્ષ્યે ચ યદ્યદ્ દૃષ્ટવાન્ તસ્ય પ્રમાણં દત્તવાન્|
3 ಈ ಪ್ರವಾದನಾ ವಾಕ್ಯಗಳನ್ನು ಓದುವವನೂ, ಕೇಳುವವರೂ ಮತ್ತು ಇದರಲ್ಲಿ ಬರೆದಿರುವುದನ್ನು ಕೈಕೊಂಡು ನಡೆಯುವವರೂ ಧನ್ಯರು. ಏಕೆಂದರೆ ಅವು ನೆರವೇರುವ ಕಾಲವು ಸಮೀಪವಾಗಿದೆ.
એતસ્ય ભવિષ્યદ્વક્તૃગ્રન્થસ્ય વાક્યાનાં પાઠકઃ શ્રોતારશ્ચ તન્મધ્યે લિખિતાજ્ઞાગ્રાહિણશ્ચ ધન્યા યતઃ સ કાલઃ સન્નિકટઃ|
4 ಆಸ್ಯಸೀಮೆಯಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನಂದರೆ; ಇರುವಾತನೂ, ಇದ್ದಾತನೂ, ಬರುವಾತನೂ ಆಗಿರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ
યોહન્ આશિયાદેશસ્થાઃ સપ્ત સમિતીઃ પ્રતિ પત્રં લિખતિ| યો વર્ત્તમાનો ભૂતો ભવિષ્યંશ્ચ યે ચ સપ્તાત્માનસ્તસ્ય સિંહાસનસ્ય સમ્મુખે તિષ્ઠન્તિ
5 ಮತ್ತು ನಂಬಿಗಸ್ತ ಸಾಕ್ಷಿಯೂ, ಸತ್ತವರೊಳಗಿಂದ ಮೊದಲು ಎದ್ದುಬಂದಾತನೂ ಮತ್ತು ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ನಮ್ಮನ್ನು ಪ್ರೀತಿಸುವಾತನೂ ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ,
યશ્ચ યીશુખ્રીષ્ટો વિશ્વસ્તઃ સાક્ષી મૃતાનાં મધ્યે પ્રથમજાતો ભૂમણ્ડલસ્થરાજાનામ્ અધિપતિશ્ચ ભવતિ, એતેભ્યો ઽનુગ્રહઃ શાન્તિશ્ચ યુષ્માસુ વર્ત્તતાં|
6 ನಮ್ಮನ್ನು ದೇವರ ರಾಜ್ಯವನ್ನಾಗಿಯೂ ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದಾತನಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯು ಬಲವು ಉಂಟಾಗಲಿ. ಆಮೆನ್. (aiōn g165)
યો ઽસ્માસુ પ્રીતવાન્ સ્વરુધિરેણાસ્માન્ સ્વપાપેભ્યઃ પ્રક્ષાલિતવાન્ તસ્ય પિતુરીશ્વરસ્ય યાજકાન્ કૃત્વાસ્માન્ રાજવર્ગે નિયુક્તવાંશ્ચ તસ્મિન્ મહિમા પરાક્રમશ્ચાનન્તકાલં યાવદ્ વર્ત્તતાં| આમેન્| (aiōn g165)
7 ನೋಡಿರಿ, ಆತನು ಮೇಘಗಳೊಂದಿಗೆ ಬರುತ್ತಾನೆ, ಎಲ್ಲರ ಕಣ್ಣುಗಳು ಆತನನ್ನು ನೋಡುವವು, ಆತನನ್ನು ಇರಿದವರು ಸಹ ಅದನ್ನು ಕಾಣುವರು, ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ದುಃಖಿಸುವರು. ಹೌದು, ಹಾಗೆಯೇ ಆಗುವುದು. ಆಮೆನ್.
પશ્યત સ મેઘૈરાગચ્છતિ તેનૈકૈકસ્ય ચક્ષુસ્તં દ્રક્ષ્યતિ યે ચ તં વિદ્ધવન્તસ્તે ઽપિ તં વિલોકિષ્યન્તે તસ્ય કૃતે પૃથિવીસ્થાઃ સર્વ્વે વંશા વિલપિષ્યન્તિ| સત્યમ્ આમેન્|
8 “ನಾನೇ ಆದಿಯೂ ಅಂತ್ಯವೂ, ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ” ಎಂದು ದೇವರಾದ ಕರ್ತನು ಹೇಳುತ್ತಾನೆ.
વર્ત્તમાનો ભૂતો ભવિષ્યંશ્ચ યઃ સર્વ્વશક્તિમાન્ પ્રભુઃ પરમેશ્વરઃ સ ગદતિ, અહમેવ કઃ ક્ષશ્ચાર્થત આદિરન્તશ્ચ|
9 ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಹಿಂಸೆಯಲ್ಲಿ, ರಾಜ್ಯದಲ್ಲಿ, ತಾಳ್ಮೆಯಲ್ಲಿ, ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು ದೇವರ ವಾಕ್ಯಕ್ಕೋಸ್ಕರ ಯೇಸುವಿನ ವಿಷಯವಾಗಿ ಸಾಕ್ಷಿ ನೀಡಲು ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು.
યુષ્માકં ભ્રાતા યીશુખ્રીષ્ટસ્ય ક્લેશરાજ્યતિતિક્ષાણાં સહભાગી ચાહં યોહન્ ઈશ્વરસ્ય વાક્યહેતો ર્યીશુખ્રીષ્ટસ્ય સાક્ષ્યહેતોશ્ચ પાત્મનામક ઉપદ્વીપ આસં|
10 ೧೦ ನಾನು ಕರ್ತನ ದಿನದಲ್ಲಿ ದೇವರಾತ್ಮವಶನಾಗಿರಲು, ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು ತುತ್ತೂರಿಯ ನಾದದಂತಿತ್ತು.
તત્ર પ્રભો ર્દિને આત્મનાવિષ્ટો ઽહં સ્વપશ્ચાત્ તૂરીધ્વનિવત્ મહારવમ્ અશ્રૌષં,
11 ೧೧ ಅದು, “ನೀನು ನೋಡುವುದನ್ನು ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ, ಎಂಬೀ ಏಳು ಸಭೆಗಳಿಗೆ ಕಳುಹಿಸಬೇಕು” ಎಂದು ನುಡಿಯಿತು.
તેનોક્તમ્, અહં કઃ ક્ષશ્ચાર્થત આદિરન્તશ્ચ| ત્વં યદ્ દ્રક્ષ્યસિ તદ્ ગ્રન્થે લિખિત્વાશિયાદેશસ્થાનાં સપ્ત સમિતીનાં સમીપમ્ ઇફિષં સ્મુર્ણાં થુયાતીરાં સાર્દ્દિં ફિલાદિલ્ફિયાં લાયદીકેયાઞ્ચ પ્રેષય|
12 ೧೨ ನನ್ನ ಸಂಗಡ ಮಾತನಾಡುತ್ತಿದ್ದ ಶಬ್ದವು ಯಾರದೆಂದು ನೋಡುವುದಕ್ಕೆ ನಾನು ಹಿಂದಕ್ಕೆ ತಿರುಗಿದೆನು. ತಿರುಗಿದಾಗ ಏಳು ಚಿನ್ನದ ದೀಪಸ್ತಂಭಗಳನ್ನೂ
તતો મયા સમ્ભાષમાણસ્ય કસ્ય રવઃ શ્રૂયતે તદ્દર્શનાર્થં મુખં પરાવર્ત્તિતં તત્ પરાવર્ત્ય સ્વર્ણમયાઃ સપ્ત દીપવૃક્ષા દૃષ્ટાઃ|
13 ೧೩ ಆ ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು. ಆತನು ನಿಲುವಂಗಿಯನ್ನು ಧರಿಸಿ ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು.
તેષાં સપ્ત દીપવૃક્ષાણાં મધ્યે દીર્ઘપરિચ્છદપરિહિતઃ સુવર્ણશૃઙ્ખલેન વેષ્ટિતવક્ષશ્ચ મનુષ્યપુત્રાકૃતિરેકો જનસ્તિષ્ઠતિ,
14 ೧೪ ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತೆಯೂ,
તસ્ય શિરઃ કેશશ્ચ શ્વેતમેષલોમાનીવ હિમવત્ શ્રેતૌ લોચને વહ્નિશિખાસમે
15 ೧೫ ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ, ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.
ચરણૌ વહ્નિકુણ્ડેતાપિતસુપિત્તલસદૃશૌ રવશ્ચ બહુતોયાનાં રવતુલ્યઃ|
16 ೧೬ ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. ಆತನ ಮುಖವು ಪ್ರಬಲವಾಗಿ ಪ್ರಕಾಶಿಸುವ ಸೂರ್ಯನಂತಿತ್ತು.
તસ્ય દક્ષિણહસ્તે સપ્ત તારા વિદ્યન્તે વક્ત્રાચ્ચ તીક્ષ્ણો દ્વિધારઃ ખઙ્ગો નિર્ગચ્છતિ મુખમણ્ડલઞ્ચ સ્વતેજસા દેદીપ્યમાનસ્ય સૂર્ય્યસ્ય સદૃશં|
17 ೧೭ ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, “ಹೆದರಬೇಡ, ನಾನು ಮೊದಲನೆಯವನೂ, ಕಡೆಯವನೂ,
તં દૃષ્ટ્વાહં મૃતકલ્પસ્તચ્ચરણે પતિતસ્તતઃ સ્વદક્ષિણકરં મયિ નિધાય તેનોક્તમ્ મા ભૈષીઃ; અહમ્ આદિરન્તશ્ચ|
18 ೧೮ ಸದಾ ಜೀವಿಸುವವನೂ ಆಗಿದ್ದೇನೆ. ಸತ್ತವನಾಗಿದ್ದೆನು, ಆದರೆ ಇಗೋ ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. ಮೃತ್ಯುವಿನ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಇವೆ. (aiōn g165, Hadēs g86)
અહમ્ અમરસ્તથાપિ મૃતવાન્ કિન્તુ પશ્યાહમ્ અનન્તકાલં યાવત્ જીવામિ| આમેન્| મૃત્યોઃ પરલોકસ્ય ચ કુઞ્જિકા મમ હસ્તગતાઃ| (aiōn g165, Hadēs g86)
19 ೧೯ ಆದ್ದರಿಂದನೀನು ಕಂಡವುಗಳನ್ನೂ ಈಗ ನಡೆಯುತ್ತಿರುವವುಗಳನ್ನೂ ಮುಂದೆ ಆಗಬೇಕಾದವುಗಳನ್ನೂ ಬರೆ.
અતો યદ્ ભવતિ યચ્ચેતઃ પરં ભવિષ્યતિ ત્વયા દૃષ્ટં તત્ સર્વ્વં લિખ્યતાં|
20 ೨೦ ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ. ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳದೂತರು, ಆ ಏಳು ದೀಪಸ್ತಂಭಗಳು ಅಂದರೆಆ ಏಳು ಸಭೆಗಳು.”
મમ દક્ષિણહસ્તે સ્થિતા યાઃ સપ્ત તારા યે ચ સ્વર્ણમયાઃ સપ્ત દીપવૃક્ષાસ્ત્વયા દૃષ્ટાસ્તત્તાત્પર્ય્યમિદં તાઃ સપ્ત તારાઃ સપ્ત સમિતીનાં દૂતાઃ સુવર્ણમયાઃ સપ્ત દીપવૃક્ષાશ્ચ સપ્ત સમિતયઃ સન્તિ|

< ಪ್ರಕಟಣೆ 1 >