< ಕೀರ್ತನೆಗಳು 76 >

1 ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ಕೀರ್ತನೆ; ಆಸಾಫನ ಹಾಡು. ದೇವರು ಯೆಹೂದ ದೇಶದಲ್ಲಿ ಪ್ರಸಿದ್ಧಗೊಂಡವನು; ಇಸ್ರಾಯೇಲರಲ್ಲಿ ಆತನ ನಾಮವು ದೊಡ್ಡದು. 2 ಸಾಲೇಮಿನಲ್ಲಿ ಆತನ ಬಿಡಾರವಿದೆ; ಚೀಯೋನಿನಲ್ಲಿ ಆತನು ವಾಸಿಸುತ್ತಾನೆ. 3 ಅಲ್ಲಿ ಆತನು ಮಿಂಚಿನಂತೆ ಹಾರಿ ಬರುವ ಬಾಣಗಳನ್ನೂ, ಗುರಾಣಿ, ಖಡ್ಗ ಮುಂತಾದ ಯುದ್ಧ ಆಯುಧಗಳನ್ನೂ ಮುರಿದುಬಿಟ್ಟಿದ್ದಾನೆ. (ಸೆಲಾ) 4 ನೀನು ತೇಜೋಮಯನು; ಕೊಳ್ಳೆಹೊಡೆದ ಬೆಟ್ಟಗಳಿಗಿಂತ ಘನ ಗಾಂಭೀರ್ಯಯುಳ್ಳವನು. 5 ಧೀರಹೃದಯರು ಸುಲಿಗೆಯಾಗಿ ದೀರ್ಘನಿದ್ರೆ ಮಾಡಿದ್ದಾರೆ; ಎಲ್ಲಾ ಶೂರರ ಕೈಗಳು ಬಿದ್ದುಹೋದವು. 6 ಯಾಕೋಬ ವಂಶದವರ ದೇವರೇ, ನಿನ್ನ ಗದರಿಕೆಯಿಂದ ರಥಬಲವೂ, ಅಶ್ವಬಲವೂ ಮೈಮರೆತು ಹೋದವು. 7 ನೀನು ಮಹಾಶಕ್ತಿಶಾಲಿ; ನೀನು ಸಿಟ್ಟುಗೊಂಡಾಗ ನಿನ್ನ ಮುಂದೆ ಯಾರು ನಿಂತಾರು? 8 ಪರಲೋಕದಲ್ಲಿರುವ ನೀನು ನಿನ್ನ ನ್ಯಾಯವಿಧಿಯನ್ನು ಆಜ್ಞಾಪಿಸುವಾಗ, 9 ದೇವರು ಲೋಕದ ದೀನರನ್ನು ರಕ್ಷಿಸಿ, ನ್ಯಾಯವನ್ನು ಸ್ಥಾಪಿಸುವುದಕ್ಕೋಸ್ಕರ ಎದ್ದು ಬಂದಿದ್ದಾನೆಂದು ಭೂನಿವಾಸಿಗಳು ಭಯದಿಂದ ಸ್ತಬ್ಧರಾದರು. (ಸೆಲಾ) 10 ೧೦ ಮನುಷ್ಯರ ಮೇಲಿನ ಕೋಪವೂ ನಿನ್ನ ಘನತೆಗೆ ಸಾಧನವಾಗುವುದು; ಕೋಪಶೇಷವನ್ನು ನಡುಕಟ್ಟಿನಂತೆ ಬಿಗಿದುಕೊಳ್ಳುವಿ. 11 ೧೧ ನಿಮ್ಮ ದೇವನಾದ ಯೆಹೋವನಿಗೆ ಹರಕೆಮಾಡಿ ಸಲ್ಲಿಸಿರಿ; ಅವನ ಸುತ್ತಲಿರುವ ಜನರು ಮಹಾಮಹಿಮನಿಗೆ ಕಾಣಿಕೆಗಳನ್ನು ಸಮರ್ಪಿಸಲಿ. 12 ೧೨ ಆತನು ಭೂಪತಿಗಳಿಗೆ ಭಯಪ್ರದರಾಗಿದ್ದ ಪ್ರಭುಗಳ ಅಹಂಭಾವವನ್ನು ಮುರಿದುಬಿಡುವನು.

< ಕೀರ್ತನೆಗಳು 76 >