< ಕೀರ್ತನೆಗಳು 112 >

1 ಯೆಹೋವನಿಗೆ ಸ್ತೋತ್ರ! ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ, ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು.
Blago èovjeku koji se boji Gospoda, kome su veoma omiljele zapovijesti njegove.
2 ಅವನ ಸಂತಾನವು ಲೋಕದಲ್ಲಿ ಬಲಿಷ್ಠವಾಗುವುದು; ನೀತಿವಂತನ ವಂಶವು ಶುಭಹೊಂದುವುದು.
Silno æe biti na zemlji sjeme njegovo, rod pravednièki biæe blagosloven.
3 ಅವನ ಮನೆಯಲ್ಲಿ ಸಿರಿಸಂಪತ್ತುಗಳು ಇರುವವು; ಅವನ ನೀತಿಯು ಸದಾಕಾಲವೂ ಫಲಿಸುತ್ತಿರುವುದು.
Obilje je i bogatstvo u domu njegovu, i pravda njegova traje dovijeka.
4 ಯಥಾರ್ಥರಿಗೆ ಕತ್ತಲೆಯಲ್ಲಿಯೂ ಜ್ಯೋತಿ ಮೂಡುವುದು; ದಯೆಯೂ, ಕನಿಕರವೂ, ನೀತಿಯುಳ್ಳ ದೇವರೇ ಆ ಜ್ಯೋತಿ.
U tami sjaje vidjelo pravednicima od dobroga, milostivoga i pravednoga.
5 ದಯಾಳುವಾಗಿ ಧನಸಹಾಯ ಮಾಡುವವನೂ, ತನ್ನ ಕಾರ್ಯಗಳನ್ನು ನೀತಿಯಿಂದ ನಡೆಸುವವನೂ ಭಾಗ್ಯವಂತನು.
Blago onome koji je milostiv i daje u zajam! On æe dati tvrðu rijeèima svojim na sudu.
6 ಅವನು ಎಂದಿಗೂ ಕದಲುವುದಿಲ್ಲ; ನೀತಿವಂತನನ್ನು ಯಾವಾಗಲೂ ಸ್ಮರಿಸುವರು.
Jer neæe posrnuti dovijeka, pravednik æe se spominjati uvijek.
7 ಅವನಿಗೆ ಕೆಟ್ಟ ಸುದ್ದಿಯ ಭಯವಿರುವುದಿಲ್ಲ; ಯೆಹೋವನಲ್ಲಿ ಭರವಸವಿಟ್ಟಿರುವುದರಿಂದ, ಅವನ ಮನಸ್ಸು ಸ್ಥಿರವಾಗಿರುವುದು.
Ne boji se zla glasa; srce je njegovo stalno, uzda se u Gospoda.
8 ದುಷ್ಟರಿಗಾಗುವ ಶಿಕ್ಷೆಯನ್ನು ಕಣ್ಣಾರೆ ಕಾಣುವೆನೆಂಬ ಭರವಸೆ ಇರುವುದರಿಂದ ಅವನ ಮನಸ್ಸು ದೃಢವಾಗಿದೆ, ಹೆದರುವುದಿಲ್ಲ.
Utvrðeno je srce njegovo, neæe se pobojati, i vidjeæe kako padaju neprijatelji njegovi.
9 ಬಡವರಿಗೆ ಉದಾರವಾಗಿ ಕೊಡುತ್ತಾನೆ; ಅವನ ನೀತಿಯ ಫಲವು ಸದಾಕಾಲವೂ ಇರುವುದು. ಮಹಿಮೆಯೊಡನೆ ಅವನ ಕೊಂಬು ಎತ್ತಲ್ಪಡುವುದು.
Prosipa, daje ubogima; pravda njegova traje dovijeka, rog se njegov uzvišuje u slavi.
10 ೧೦ ದುಷ್ಟನು ನೋಡಿ ವ್ಯಥೆಪಡುವನು; ಅವನು ಹಲ್ಲುಕಡಿಯುತ್ತಾ ನಾಶವಾಗುವನು. ದುಷ್ಟರ ನಿರೀಕ್ಷೆಯು ಭಂಗವಾಗುವುದು.
Bezbožnik vidi i jedi se, škrguæe zubima svojim, i sahne. Želja æe bezbožnicima propasti.

< ಕೀರ್ತನೆಗಳು 112 >