< ಕೀರ್ತನೆಗಳು 110 >

1 ದಾವೀದನ ಕೀರ್ತನೆ. ಯೆಹೋವನು ನನ್ನ ಒಡೆಯನಿಗೆ, “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಪೀಠವಾಗುವಂತೆ ಮಾಡುವ ತನಕ, ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ನುಡಿದನು. 2 ಯೆಹೋವನು ನಿನ್ನ ರಾಜದಂಡದ ಆಳ್ವಿಕೆಯನ್ನು ಚೀಯೋನಿನ ಹೊರಗೂ ಹಬ್ಬಿಸುವನು; ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನ ಮಾಡು. 3 ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ, ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಪರಿಶುದ್ಧ ವಸ್ತ್ರಭೂಷಿತರಾದ ನಿನ್ನ ಯುವ ಸೈನಿಕರು, ಉದಯಕಾಲದ ಇಬ್ಬನಿಯಂತಿರುವರು. 4 “ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹ ಯಾಜಕನಾಗಿರುವೆ” ಎಂದು ಯೆಹೋವನು ಆಣೆಯಿಟ್ಟು ನುಡಿದಿದ್ದಾನೆ; ಪಶ್ಚಾತ್ತಾಪಡುವುದಿಲ್ಲ. 5 ನಿನ್ನ ಬಲಗಡೆಯಲ್ಲಿರುವ ಕರ್ತನು ತನ್ನ ಕೋಪದ ದಿನದಲ್ಲಿ ರಾಜರನ್ನು ಖಂಡಿಸುವನು. 6 ಆತನು ಜನಾಂಗಗಳಲ್ಲಿ ನ್ಯಾಯಸ್ಥಾಪಿಸುವಾಗ, ವಿಸ್ತಾರವಾದ ರಣರಂಗದಲ್ಲಿ ಶತ್ರುಗಳ ಶಿರಸ್ಸನ್ನು ಛೇದಿಸಿ, ಹೆಣಗಳಿಂದ ಅದನ್ನು ತುಂಬಿಸುವನು. 7 ಒಡೆಯನು ದಾರಿಯಲ್ಲಿ ಹಳ್ಳದ ನೀರನ್ನು ಕುಡಿದು ತಲೆಯೆತ್ತುವನು.

< ಕೀರ್ತನೆಗಳು 110 >