< ಅರಣ್ಯಕಾಂಡ 18 >

1 ಆಗ ಯೆಹೋವನು ಆರೋನನಿಗೆ, “ದೇವದರ್ಶನದ ಗುಡಾರದ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನೂ, ನಿನ್ನ ಸಂತತಿಯವರೂ, ನಿನ್ನ ಕುಲದವರೆಲ್ಲರೂ ಆ ದೋಷದ ಫಲವನ್ನು ಅನುಭವಿಸಬೇಕು. ಯಾಜಕತ್ವದ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನೂ, ನಿನ್ನ ಸಂತತಿಯವರು ಮಾತ್ರವೇ ಆ ದೋಷದ ಫಲವನ್ನು ಅನುಭವಿಸಬೇಕು.
Olúwa sọ fún Aaroni pé, “Ìwọ, àti àwọn ọmọ rẹ àti ìdílé baba rẹ ni yóò ru gbogbo ẹ̀ṣẹ̀ tí wọ́n ti dá fún ilé tí a yà sí mímọ́ fún Ọlọ́run, àti ìwọ àti àwọn ọmọ rẹ nìkan ni yóò máa ru ẹ̀ṣẹ̀ iṣẹ́ àlùfáà yín.
2 ನಿನ್ನ ಕುಲದ ಮೂಲಪುರುಷನಾದ ಲೇವಿ ವಂಶದವರನ್ನು ನೀನು ಹತ್ತಿರಕ್ಕೆ ಕರೆದು ಜೊತೆಯಲ್ಲಿರಿಸಿಕೊಂಡು ನಿನ್ನ ಕೈಕೆಳಗೆ ಸೇವೆಮಾಡಿಸಬೇಕು. ಆದರೆ ಆಜ್ಞಾಶಾಸನಗಳಿರುವ ಗುಡಾರದ ಮುಂದೆ ನೀನೂ, ನಿನ್ನ ಮಕ್ಕಳೂ ಮಾತ್ರ ಸೇವೆಮಾಡಬೇಕು.
Kí o sì mú àwọn ènìyàn rẹ ará Lefi láti ẹ̀yà ìran rẹ láti dàpọ̀ mọ́ ìwọ láti ràn ọ́ lọ́wọ́ nígbà tí ìwọ àti àwọn ọmọ rẹ ọkùnrin bá ń ṣe iṣẹ́ ìránṣẹ́ níwájú Àgọ́ ẹ̀rí.
3 ಲೇವಿಯರು ನಿನ್ನ ಅಪ್ಪಣೆಯ ಪ್ರಕಾರ ನಡೆದು ಗುಡಾರವನ್ನು ಕಾಯಬೇಕು. ಆದರೆ ಪವಿತ್ರಸ್ಥಾನದ ವಸ್ತುಗಳ ಹತ್ತಿರವಾಗಲಿ ಅಥವಾ ಯಜ್ಞವೇದಿಯ ಹತ್ತಿರವಾಗಲಿ ಅವರು ಬರಬಾರದು, ಬಂದರೆ ಅವರು ಸಾಯುವುದು ಮಾತ್ರವಲ್ಲದೆ ನೀವೂ ಸಾಯುವಿರಿ.
Àwọn ni ó yẹ láti dúró fún ọ àti láti ṣe gbogbo iṣẹ́ ti Àgọ́, ṣùgbọ́n wọn kò gbọdọ̀ súnmọ́ ibi tí a ti ṣe lọ́ṣọ̀ọ́ tí a sì yà sí mímọ́ tàbí ibi pẹpẹ, tàbí gbogbo wọn àti ìwọ ló máa kú.
4 ಅವರೇ ನಿನ್ನ ಜೊತೆಯಲ್ಲಿದ್ದು ದೇವದರ್ಶನದ ಗುಡಾರವನ್ನು ನೋಡಿಕೊಂಡು ಅದರ ಸಕಲ ಸೇವಾಕಾರ್ಯವನ್ನು ಮಾಡಬೇಕು. ಇತರ ಕುಲದವರು ನಿಮ್ಮ ಹತ್ತಿರಕ್ಕೆ ಬರಬಾರದು.
Ó yẹ kí wọ́n darapọ̀ mọ́ ọ láti jẹ ìyà iṣẹ́ fún àìtọ́jú ibi ti àgọ́ ìpàdé àti gbogbo iṣẹ́ tí ó wà ní ibi àgọ́, àti wí pé kò sí àlejò tí ó le wá sí ẹ̀gbẹ́ ibi tí o wà.
5 ಇನ್ನು ಮುಂದೆ ಇಸ್ರಾಯೇಲರ ಮೇಲೆ ದೇವರ ಕೋಪವುಂಟಾಗದಂತೆ, ನೀವೇ ದೇವಸ್ಥಾನದ ವಸ್ತುಗಳನ್ನೂ, ಯಜ್ಞವೇದಿಯನ್ನೂ ನೋಡಿಕೊಳ್ಳಬೇಕು.
“Kí o sì mójútó iṣẹ́ ibi mímọ́ àti iṣẹ́ ibi pẹpẹ, kí ìbínú má ba wá sí orí àwọn ọmọ Israẹli mọ́.
6 ಇಗೋ, ನಾನು ಇಸ್ರಾಯೇಲರೊಳಗಿಂದ ನಿನ್ನ ಕುಲದವರಾದ ಲೇವಿಯರನ್ನು ಆರಿಸಿಕೊಂಡಿದ್ದೇನೆ. ಅವರು ಯೆಹೋವನಿಗೆ ಸಮರ್ಪಿಸಲ್ಪಟ್ಟ ಕಾಣಿಕೆಯಂತೆ ನಿನ್ನ ವಶದಲ್ಲಿಯೇ ಇದ್ದಾರೆ. ಅವರೇ ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡಬೇಕು.
Èmi fúnra mi ti yan àwọn arákùnrin rẹ tí í ṣe ọmọ Lefi kún àwọn ọmọ Israẹli yòókù, wọn jẹ́ ẹ̀bùn fún ọ, èyí ni a fún Olúwa láti ṣe iṣẹ́ tí ó wà ní àgọ́ ìpàdé.
7 ನೀನೂ, ನಿನ್ನ ಸಂತತಿಯವರೂ ಯಾಜಕೋದ್ಯೋಗವನ್ನು ಕೈಕೊಂಡವರಾಗಿ ಯಜ್ಞವೇದಿಯ ಮತ್ತು ತೆರೆಯ ಒಳಗಿನ ಕಾರ್ಯಗಳನ್ನು ನಡೆಸಬೇಕು. ಅವುಗಳ ಸೇವಾಕಾರ್ಯವನ್ನು ನೀವೇ ಮಾಡಬೇಕು. ನಾನು ಯಾಜಕತ್ವವನ್ನು ನಿಮಗೆ ದಾನವಾಗಿ ಅನುಗ್ರಹಿಸಿದ್ದೇನೆ. ಇತರರು ಅದಕ್ಕೆ ಕೈಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕು” ಎಂದನು.
Ṣùgbọ́n ìwọ àti àwọn ọmọ rẹ ni yóò mójútó iṣẹ́ àlùfáà yín fún gbogbo ohun tó bá jẹ mọ́ ibi pẹpẹ àti ti ẹ̀yin aṣọ títa, ẹ ó sì máa ṣiṣẹ́ ibi pẹpẹ àti nínú aṣọ tí a ta. Mo fún ọ ní iṣẹ́ àlùfáà gẹ́gẹ́ bí ẹ̀bùn. Ṣùgbọ́n àlejò tí ó bá súnmọ́ tòsí ibi ìyàsímímọ́ fún Ọlọ́run ni a ó pa.”
8 ಯೆಹೋವನು ಆರೋನನಿಗೆ ಆಜ್ಞಾಪಿಸಿದ್ದೇನೆಂದರೆ, “ಇಸ್ರಾಯೇಲರು ನನಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ಪದಾರ್ಥಗಳನ್ನೆಲ್ಲಾ ಹಾಗೂ ದೇವರ ಪರಿಶುದ್ಧ ವಸ್ತುಗಳನ್ನೆಲ್ಲಾ ನಾನು ನಿನ್ನ ಮತ್ತು ನಿನ್ನ ಸಂತತಿಯವರ ಪಾಲಾಗುವುದಕ್ಕೆ ದಾನಮಾಡಿದ್ದೇನೆ. ಅವು ಸದಾಕಾಲವೂ ನಿಮಗೇ ಸಲ್ಲಬೇಕು.
Nígbà náà ni Olúwa sọ fún Aaroni pé, “Èmi fúnra mi ti fi ọ́ ṣọ́ ìdí gbogbo ẹbọ tí a bá mú wá fún gbogbo ọrẹ mímọ́ tí àwọn ọmọ Israẹli bá fún mi, mo fún ìwọ àti àwọn ọmọ rẹ gẹ́gẹ́ bí ìpín rẹ tí yóò máa ṣe.
9 ಬೆಂಕಿಯಲ್ಲಿ ಹೋಮಮಾಡದೆ ಉಳಿದಿರುವ ಮಹಾ ಪರಿಶುದ್ಧ ವಸ್ತುಗಳು ನಿನಗೆ ಕಾಣಿಕೆಯಾಗಿ ಸಲ್ಲಬೇಕು. ಇಸ್ರಾಯೇಲರು ನನಗೆ ಸಮರ್ಪಿಸುವ ಎಲ್ಲಾ ಧಾನ್ಯದ್ರವ್ಯ, ದೋಷಪರಿಹಾರಕ ಯಜ್ಞ, ಪ್ರಾಯಶ್ಚಿತ್ತಯಜ್ಞ ಇವುಗಳಲ್ಲಿ ಹೋಮಶೇಷವು ಮಹಾಪರಿಶುದ್ಧವಾದುದರಿಂದ ನಿನಗೂ ನಿನ್ನ ಸಂತತಿಯವರಿಗೂ ಸಲ್ಲಬೇಕು.
Ìwọ ni kí o ni ìpín ọrẹ mímọ́ jùlọ tí a mú kúrò ní ibi iná, nínú gbogbo ọrẹ tí wọ́n mú wá gẹ́gẹ́ bí ẹbọ mímọ́ jùlọ, yálà ẹbọ ohun jíjẹ, ẹbọ ẹ̀ṣẹ̀ tàbí ẹbọ ẹ̀bi, ìpín wọ̀nyí jẹ́ ti ìwọ àti àwọn ọmọ rẹ.
10 ೧೦ ನೀವು ಮಹಾಪರಿಶುದ್ಧವಾದ ಒಂದು ಸ್ಥಳದಲ್ಲಿ ಅವುಗಳನ್ನು ಊಟಮಾಡಬೇಕು. ನಿಮ್ಮಲ್ಲಿರುವ ಗಂಡಸರೆಲ್ಲರೂ ಅವುಗಳನ್ನು ತಿನ್ನಬಹುದು. ಅವು ಮಹಾಪರಿಶುದ್ಧವಾದವುಗಳೆಂದು ನೀವು ತಿಳಿದುಕೊಳ್ಳಬೇಕು.
Ẹ jẹ ẹ́ ní ibi mímọ́ jùlọ, gbogbo ọkùnrin ni ó gbọdọ̀ jẹ ẹ́. Ó gbọdọ̀ kà á sí mímọ́.
11 ೧೧ “ಇದಲ್ಲದೆ ಇಸ್ರಾಯೇಲರು ಮಾಡುವ ಸಮಾಧಾನಯಜ್ಞಗಳಿಂದ ನನಗೋಸ್ಕರ ಪ್ರತ್ಯೇಕಿಸಿಕೊಡುವ ದ್ರವ್ಯಗಳೂ, ನೈವೇದ್ಯವಾಗಿ ನಿವಾಳಿಸುವ ದ್ರವ್ಯಗಳೂ ನಿಮಗೆ ಸೇರಬೇಕು. ಇವು ನಿನಗೂ, ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತ ನಿಯಮವಾಗಿ ಸಲ್ಲಬೇಕೆಂದು ಅನುಗ್ರಹಿಸಿದ್ದೇನೆ. ಇವುಗಳನ್ನು ನಿಮ್ಮ ಮನೆಗಳಲ್ಲಿರುವ ಶುದ್ಧರಾದವರೆಲ್ಲರೂ ಊಟ ಮಾಡಬಹುದು.
“Èyí tún jẹ́ tìrẹ pẹ̀lú: ohunkóhun tí a bá yà sọ́tọ̀ lára ẹ̀bùn ọrẹ fífì àwọn ọmọ Israẹli. Mó fún ìwọ àti àwọn ọmọ rẹ ọkùnrin àti ọmọ rẹ obìnrin gẹ́gẹ́ bí ìpín tí yóò máa ṣe déédé nínú ìdílé rẹ, tí o bá wà ní mímọ́ ni o le jẹ ẹ́.
12 ೧೨ ಇಸ್ರಾಯೇಲರು ಯೆಹೋವನಿಗೆ ಸಮರ್ಪಿಸುವ ಪ್ರಥಮಫಲಗಳು ಯಾವುವೆಂದರೆ: ಎಣ್ಣೆ, ದ್ರಾಕ್ಷಾರಸ, ಧಾನ್ಯ ಇವುಗಳಲ್ಲಿ ಶ್ರೇಷ್ಠವಾದದ್ದು ನಿನಗೇ ಸೇರಬೇಕೆಂದು ವಿಧಿಸಿದ್ದೇನೆ.
“Mo fún ọ ní gbogbo òróró tí ó dára jùlọ àti gbogbo ọtí tuntun dáradára jùlọ àti ọkà tí wọ́n mú wá fún Olúwa ní àkọ́so ohun ọ̀gbìn wọn tí wọ́n kórè.
13 ೧೩ ಅವರು ತಮ್ಮ ದೇಶದ ಎಲ್ಲಾ ಬೆಳೆಗಳಲ್ಲಿ ಯೆಹೋವನಿಗೋಸ್ಕರ ತರುವ ಪ್ರಥಮಫಲಗಳು ನಿನಗೇ ಸಲ್ಲಬೇಕು. ನಿಮ್ಮ ಮನೆಗಳಲ್ಲಿ ಶುದ್ಧರಾಗಿರುವ ಎಲ್ಲರೂ ಅವುಗಳನ್ನು ಊಟಮಾಡಬಹುದು.
Gbogbo àkọ́so nǹkan ilẹ̀ wọ́n tí wọn mú wá fún Olúwa yóò jẹ́ tìrẹ. Ẹnikẹ́ni nínú ìdílé rẹ, àwọn tí ó jẹ́ mímọ́ nínú ìdílé rẹ lè jẹ ẹ́.
14 ೧೪ ಕೇವಲ ಯೆಹೋವನಿಗೋಸ್ಕರ ಇರುವುದಕ್ಕೆ ಇಸ್ರಾಯೇಲರು ಹರಕೆಮಾಡಿ ಸಮರ್ಪಿಸುವುದೆಲ್ಲವೂ ನಿನಗೆ ಸೇರಬೇಕು.
“Gbogbo nǹkan tí a yà sọ́tọ̀ fún Olúwa ní Israẹli jẹ́ tìrẹ.
15 ೧೫ ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಸಕಲಪ್ರಾಣಿಗಳಲ್ಲಿ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲಮಕ್ಕಳಿಗೂ, ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.
Gbogbo àkọ́bí nínú gbogbo ohun alààyè tí wọ́n mú wá fún Olúwa, ìbá à jẹ́ ti ènìyàn tàbí ti ẹranko jẹ́ tìrẹ ṣùgbọ́n o gbọdọ̀ ra gbogbo àkọ́bí ọmọkùnrin padà àti àkọ́bí àwọn ẹranko aláìmọ́.
16 ೧೬ ಹೀಗೆ ಬಿಟ್ಟುಬಿಡಬೇಕಾದ ಶಿಶುಗಳು ಒಂದು ತಿಂಗಳಿನ ಪ್ರಾಯಕ್ಕೆ ಬಂದಾಗ, ನೀವು ಗೊತ್ತು ಮಾಡಿದ ಈಡನ್ನು ದೇವರ ಸೇವೆಗೆ ನೇಮಕವಾದ ಇಪ್ಪತ್ತು ಗೇರಾ ತೂಕದ ಶೆಕೆಲ್ ಪ್ರಕಾರ ಐದು ಶೆಕೆಲ್ ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.
Nígbà tí wọ́n bá pé oṣù kan, o gbọdọ̀ rà wọ́n padà ní iye owó ìràpadà tí í ṣe ṣékélì márùn-ún fàdákà, gẹ́gẹ́ bí iye ṣékélì ibi mímọ́ tí ó wọn ìwọ̀n ogún gera.
17 ೧೭ “ಆಕಳಿನ ಮತ್ತು ಆಡುಕುರಿಗಳ ಚೊಚ್ಚಲುಮರಿಗಳು ದೇವರ ಸೊತ್ತಾಗಿರುವುದರಿಂದ ಅವುಗಳನ್ನು ಬಿಡಬಾರದು. ಅವುಗಳ ರಕ್ತವನ್ನು ಯಜ್ಞವೇದಿಗೆ ಚಿಮುಕಿಸಿಬೇಕು, ಅವುಗಳ ಕೊಬ್ಬನ್ನು ಯೆಹೋವನಿಗೆ ಸುಗಂಧಹೋಮಮಾಡಬೇಕು.
“Ṣùgbọ́n o kò gbọdọ̀ ra àwọn àkọ́bí ọmọ màlúù, àgùntàn tàbí ewúrẹ́; wọ́n jẹ́ mímọ́. Wọ́n ẹ̀jẹ̀ wọn sórí pẹpẹ kí o sì sun ọ̀rá rẹ̀ gẹ́gẹ́ bí ọrẹ àfinásun, ẹbọ òórùn dídùn sí Olúwa.
18 ೧೮ ಅವುಗಳ ಮಾಂಸವು ಸಮಾಧಾನಯಜ್ಞಗಳಲ್ಲಿ ನೈವೇದ್ಯವಾಗಿ ನಿವಾಳಿಸುವ ಎದೆಯ ಭಾಗದಂತೆಯೂ, ಬಲತೊಡೆಯಂತೆಯೂ ನಿನಗೇ ಸಲ್ಲಬೇಕು.
Ẹran wọn gbọdọ̀ jẹ́ tìrẹ, gẹ́gẹ́ bí igẹ̀ ọrẹ ẹbọ fífì àti itan ọ̀tún ṣe jẹ́ tìrẹ.
19 ೧೯ ಇಸ್ರಾಯೇಲರು ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ದೇವರ ವಸ್ತುಗಳೆಲ್ಲಾ ನಿನಗೂ, ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಸದಾಕಾಲವೂ ಸಲ್ಲಬೇಕೆಂದು ನಾನು ಅನುಗ್ರಹಮಾಡಿದ್ದೇನೆ. ಇದು ಯೆಹೋವನ ಸನ್ನಿಧಿಯಲ್ಲಿ ನಿನ್ನೊಡನೆಯೂ, ನಿನ್ನ ಸಂತತಿಯೊಡನೆಯೂ ಮಾಡಲ್ಪಟ್ಟ ಶಾಶ್ವತವಾದ ಉಪ್ಪಿನ ಒಡಂಬಡಿಕೆಯಾಗಬೇಕು” ಎಂದು ಹೇಳಿದನು.
Ohunkóhun tí a bá ti yà sọ́tọ̀ nínú ọrẹ àwọn ọmọ Israẹli tí wọ́n mú wá fún Olúwa ni mo fún ìwọ àti àwọn ọmọ rẹ ọkùnrin àti ọmọ rẹ obìnrin gẹ́gẹ́ bí ìpín rẹ tí yóò máa ṣe déédé. Ó jẹ́ májẹ̀mú iyọ̀ láéláé níwájú Olúwa fún ìwọ àti ọmọ rẹ.”
20 ೨೦ ಇದಲ್ಲದೆ ಯೆಹೋವನು ಆರೋನನಿಗೆ ಹೇಳಿದ್ದೇನೆಂದರೆ, “ಇಸ್ರಾಯೇಲರ ದೇಶದಲ್ಲಿ ನಿನ್ನ ಸ್ವಂತಕ್ಕಾಗಿ ಯಾವ ಸ್ವತ್ತು ಇರಬಾರದು. ಅವರೊಂದಿಗೆ ನಿನಗೆ ಪಾಲು ಇರುವುದಿಲ್ಲ. ಇಸ್ರಾಯೇಲರ ಮಧ್ಯದಲ್ಲಿ ನಾನೇ ನಿನಗೆ ಪಾಲಾಗಿಯೂ ಮತ್ತು ಸ್ವತ್ತಾಗಿಯೂ ಇದ್ದೇನೆ.
Olúwa sọ fún Aaroni pé, “O kò ní ní ogún nínú ilẹ̀ wọn bẹ́ẹ̀ ni ìwọ kò ní ní ìpín láàrín wọn; Èmi ni ìpín àti ogún rẹ láàrín àwọn ọmọ Israẹli.
21 ೨೧ “ಲೇವಿಯರು ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡುವುದಕ್ಕಾಗಿ ಇಸ್ರಾಯೇಲರಿಂದ ಸಕಲ ಪದಾರ್ಥಗಳ ಹತ್ತನೆಯ ಪಾಲನ್ನು ಗೊತ್ತುಮಾಡಿ ಕೊಟ್ಟಿದ್ದೇನೆ.
“Mó ti fún àwọn ọmọ Lefi ní gbogbo ìdámẹ́wàá ní Israẹli gẹ́gẹ́ bí ogún fún iṣẹ́ tí wọ́n ṣe, nígbà tí wọ́n ń ṣiṣẹ́ níbi àgọ́ ìpàdé.
22 ೨೨ ಇನ್ನು ಮುಂದೆ ಇಸ್ರಾಯೇಲರು ದೇವದರ್ಶನದ ಗುಡಾರದ ಹತ್ತಿರಕ್ಕೆ ಬರಬಾರದು, ಬಂದರೆ ಅವರು ಆ ದೋಷದಿಂದ ಸತ್ತುಹೋಗುವರು.
Láti ìsinsin yìí àwọn ọmọ Israẹli, kò gbọdọ̀ súnmọ́ àgọ́ ìpàdé, bí wọ́n bá ṣe bẹ́ẹ̀, wọn yóò jẹ ìyà ẹ̀ṣẹ̀ wọn, wọn á sì kú.
23 ೨೩ ಲೇವಿಯರೇ ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡಬೇಕು. ಅದರ ಸಂಬಂಧವಾಗಿ ಅವರು ಮಾಡುವ ಪಾಪಫಲವನ್ನು ತಾವೇ ಅನುಭವಿಸಬೇಕು. ಇದು ನಿಮಗೂ, ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರಬೇಕು. ಆದರೆ ಇಸ್ರಾಯೇಲರ ಮಧ್ಯದಲ್ಲಿ ಲೇವಿಯರಿಗೆ ಸ್ವಂತವಾದ ಸ್ವತ್ತು ಇರುವುದಿಲ್ಲ.
Àwọn ọmọ Lefi ní ó gbọdọ̀ ṣe iṣẹ́ tí ó wà nínú àgọ́ ìpàdé, wọn yóò sì jìyà ẹ̀ṣẹ̀ wọn bí wọ́n bá kúrò láti ṣe é. Èyí ni ìlànà láéláé fún àwọn ìran tí ó ń bọ̀. Wọn kò nígbà ogún kankan láàrín àwọn ọmọ Israẹli.
24 ೨೪ ಇಸ್ರಾಯೇಲರು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸುವ ಹತ್ತನೆಯ ಒಂದು ಭಾಗವನ್ನು ಲೇವಿಯರಿಗೆ ಸ್ವತ್ತಾಗಿ ಕೊಟ್ಟಿದ್ದೇನೆ. ಆದುದರಿಂದ ಲೇವಿಯರಿಗೆ ‘ಇತರ ಇಸ್ರಾಯೇಲರೊಂದಿಗೆ ಪಾಲು ದೊರೆಯುವುದಿಲ್ಲ’” ಎಂದು ಹೇಳಿದ ಮಾತಿಗೆ ಇದೇ ಕಾರಣ.
Kàkà bẹ́ẹ̀, mo fún àwọn ọmọ Lefi gẹ́gẹ́ bí ogún wọn, ìdákan nínú ìdámẹ́wàá tí àwọn ọmọ Israẹli pèsè gẹ́gẹ́ bí ọrẹ sí Olúwa. Èyí ni mo wí nípa wọn. Wọn kò ní gba ogún kankan láàrín àwọn ọmọ Israẹli.”
25 ೨೫ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,
Olúwa sọ fún Mose pé,
26 ೨೬ “ನೀನು ಲೇವಿಯರಿಗೆ ಹೀಗೆ ಆಜ್ಞಾಪಿಸಬೇಕು, ‘ಇಸ್ರಾಯೇಲರ ಸ್ವಂತಕ್ಕಾಗಿ ನಾನು ನೇಮಿಸಿರುವ ಹತ್ತನೆಯ ಒಂದು ಭಾಗವನ್ನು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸಬೇಕು.
“Sọ fún àwọn ọmọ Lefi kí o sì wí fún wọn pé: ‘Nígbà tí ìdámẹ́wàá bá ń wọlé láti ọ̀dọ̀ àwọn ọmọ Israẹli gẹ́gẹ́ bí ogún rẹ. O gbọdọ̀ mú ìdámẹ́wàá lára rẹ̀ gẹ́gẹ́ bí ọrẹ Olúwa.
27 ೨೭ ನೀವು ಹೀಗೆ ಸಮರ್ಪಿಸಿದ ಹತ್ತನೆಯ ಒಂದು ಭಾಗದ ಕಣದಲ್ಲಿನ ಧಾನ್ಯವನ್ನೂ, ದ್ರಾಕ್ಷಿತೊಟ್ಟಿಯ ರಸದಿಂದ ಬರಬೇಕಾದ ದಶಮಾಂಶವೆಂದು ಪರಿಗಣಿಸಲ್ಪಡುವುದು.
A ó ka ọrẹ rẹ gẹ́gẹ́ bí ọkà irúgbìn láti ilẹ̀ ìpakà tàbí wáìnì láti fún wa.
28 ೨೮ ಇಸ್ರಾಯೇಲರಿಂದ ನಿಮಗೆ ಸಲ್ಲುವ ಹತ್ತನೆಯ ಒಂದು ಭಾಗವನ್ನು ಯೆಹೋವನಿಗೆ ಪ್ರತ್ಯೇಕಿಸಿ ಯಾಜಕನಾದ ಆರೋನನಿಗೆ ಒಪ್ಪಿಸಬೇಕು.
Báyìí ni ìwọ gan an náà yóò mú ọrẹ wa fún Olúwa láti ara ìdámẹ́wàá tí ìwọ gbà láti ọ̀dọ̀ àwọn ọmọ Israẹli. Láti ara ìdámẹ́wàá ó gbọdọ̀ mú ọrẹ Olúwa fún Aaroni àlùfáà.
29 ೨೯ ನಿಮಗೆ ಕೊಡಲ್ಪಡುವ ಸಕಲ ಪದಾರ್ಥಗಳಲ್ಲಿಯೂ ನೀವು ಉತ್ತಮ ಭಾಗವನ್ನೇ ದೇವರ ವಸ್ತುವಾಗುವುದಕ್ಕೆ ಯೋಗ್ಯಭಾಗವನ್ನೇ ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸಬೇಕು’
Ìwọ gbọdọ̀ mú wá gẹ́gẹ́ bí ìpín Olúwa èyí tí ó dára jùlọ àti tí ó jẹ́ mímọ́ jùlọ lára gbogbo nǹkan tí wọ́n mú wá fún ọ.’
30 ೩೦ ಆದುದರಿಂದ ನೀನು ಲೇವಿಯರಿಗೆ ಹೀಗೆ ಹೇಳಬೇಕು, ‘ನಿಮಗೆ ದೊರಕಿದ್ದರಲ್ಲಿ ನೀವು ಉತ್ತಮವಾದದ್ದನ್ನೇ ಪ್ರತ್ಯೇಕಿಸಿ ಸಮರ್ಪಿಸಿದ ಮೇಲೆ ಉಳಿದದ್ದನ್ನು ಕಣದಲ್ಲಿನ ದವಸದ ಹಾಗೂ, ದ್ರಾಕ್ಷಿತೊಟ್ಟಿಯ ರಸವೆಂದು ಭಾವಿಸಿ ಉಪಯೋಗಿಸಿಕೊಳ್ಳಬಹುದು.
“Sọ fún àwọn ọmọ pé, ‘Nígbà tí ẹ̀yin bá mú ìpín tí ó dára jù wá, a ó kà á sí fún àwọn ọmọ Lefi gẹ́gẹ́ bí ìkórè láti ilẹ̀ ìpakà tàbí ìfúntí yín.
31 ೩೧ ನೀವೂ, ನಿಮ್ಮ ಮನೆಯವರೂ ಅದನ್ನು ಎಲ್ಲಾ ಸ್ಥಳಗಳಲ್ಲಿ ಊಟಮಾಡಬಹುದು. ನೀವು ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡಿದ್ದಕ್ಕೆ ಅದು ನಿಮಗೆ ದೊರೆಯುವ ಪ್ರತಿಫಲ.
Ìwọ àti àwọn ìdílé rẹ̀ le jẹ èyí tí ó kù ní ibikíbi gbogbo. Nítorí pé ó jẹ́ ọrẹ fún iṣẹ́ rẹ níbi àgọ́ ìpàdé.
32 ೩೨ ಅದರಲ್ಲಿ ಉತ್ತಮ ಭಾಗವನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಿದ ನಂತರ ನೀವು ಉಳಿದ ವಿಷಯದಲ್ಲಿ ಯಾವ ದೋಷಕ್ಕೂ ಗುರಿಯಾಗುವುದಿಲ್ಲ. ಇಸ್ರಾಯೇಲರು ಸಮರ್ಪಿಸುವ ದೇವರ ವಸ್ತುಗಳನ್ನು ಅಪವಿತ್ರಮಾಡಿದರೆ ನೀವು ಸಾಯುವಿರಿ’” ಎಂದನು.
Nípa ṣíṣe ìgbékalẹ̀ ìpín tí ó dára jùlọ o kò ní jẹ̀bi lórí ọ̀rọ̀ yìí, ìwọ kò sì ní ba ọrẹ mímọ́ àwọn ọmọ Israẹli jẹ́, ìwọ kì yóò sì kú.’”

< ಅರಣ್ಯಕಾಂಡ 18 >