< ಮತ್ತಾಯನು 16 >

1 ತರುವಾಯ ಫರಿಸಾಯರು ಸದ್ದುಕಾಯರು ಬಂದು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, ನೀನು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ನಮಗೆ ತೋರಿಸಿಕೊಡಬೇಕೆಂದು ಕೇಳಿದರು.
តទានីំ ផិរូឝិនះ សិទូកិនឝ្ចាគត្យ តំ បរីក្ឞិតុំ នភមីយំ កិញ្ចន លក្ឞ្ម ទឝ៌យិតុំ តស្មៃ និវេទយាមាសុះ។
2 ಆತನು ಅವರಿಗೆ, “‘ನೀವು ಸಂಜೆಯಾದಾಗ ಆಕಾಶವು ಕೆಂಪಾಗಿದ್ದರೆ ಹಿತಕರವಾದ ವಾತಾವರಣವಿರುತ್ತದೆ’ ಅನ್ನುತ್ತೀರಿ.
តតះ ស ឧក្តវាន៑, សន្ធ្យាយាំ នភសោ រក្តត្វាទ៑ យូយំ វទថ, ឝ្វោ និម៌្មលំ ទិនំ ភវិឞ្យតិ;
3 ಬೆಳಗ್ಗೆ, ‘ಆಕಾಶವು ಮೋಡ ಕವಿದುಕೊಂಡು ಕೆಂಪಾಗಿದ್ದರೆ ಈಹೊತ್ತು ಗಾಳಿ ಮಳೆ ಬರುತ್ತದೆ’ ಅನ್ನುತ್ತೀರಿ. ಆಕಾಶದಲ್ಲಿ ಕಾಣುವ ಸೂಚನೆಗಳನ್ನು ತಿಳಿದುಕೊಳ್ಳಬಲ್ಲವರಾಗಿದ್ದೀರಿ, ಆದರೆ ಈ ಕಾಲದ ಸೂಚನೆಗಳನ್ನು ತಿಳಿದುಕೊಳ್ಳಲು ನಿಮಗೆ ಸಾಧ್ಯವಿಲ್ಲವೋ?
ប្រាតះកាលេ ច នភសោ រក្តត្វាត៑ មលិនត្វាញ្ច វទថ, ឈញ្ភ្ឝទ្យ ភវិឞ្យតិ។ ហេ កបដិនោ យទិ យូយម៑ អន្តរីក្ឞស្យ លក្ឞ្ម ពោទ្ធុំ ឝក្នុថ, តហ៌ិ កាលស្យៃតស្យ លក្ឞ្ម កថំ ពោទ្ធុំ ន ឝក្នុថ?
4 ವ್ಯಭಿಚಾರಿಣಿಯಂತಿರುವ ಈ ದುಷ್ಟ ಸಂತತಿಯು ಸೂಚಕಕಾರ್ಯವನ್ನು ನೋಡಬೇಕೆಂದು ಹುಡುಕುತ್ತದೆ. ಆದರೆ ಯೋನನ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಇದಕ್ಕೆ ಸಿಕ್ಕುವುದಿಲ್ಲ” ಎಂದು ಉತ್ತರ ಕೊಟ್ಟನು. ತರುವಾಯ ಆತನು ಅವರನ್ನು ಬಿಟ್ಟು ಹೊರಟು ಹೋದನು.
ឯតត្កាលស្យ ទុឞ្ដោ វ្យភិចារី ច វំឝោ លក្ឞ្ម គវេឞយតិ, កិន្តុ យូនសោ ភវិឞ្យទ្វាទិនោ លក្ឞ្ម វិនាន្យត៑ កិមបិ លក្ឞ្ម តាន៑ ន ទឝ៌យិយ្យតេ។ តទានីំ ស តាន៑ វិហាយ ប្រតស្ថេ។
5 ಶಿಷ್ಯರು ರೊಟ್ಟಿ ಬುತ್ತಿ ತೆಗೆದುಕೊಳ್ಳುವುದನ್ನು ಮರೆತು ಆಚೇ ದಡಕ್ಕೆ ಬಂದಿದ್ದರು.
អនន្តរមន្យបារគមនកាលេ តស្យ ឝិឞ្យាះ បូបមានេតុំ វិស្ម្ឫតវន្តះ។
6 ಯೇಸು ಅವರಿಗೆ “ಎಚ್ಚರಿಕೆ! ಫರಿಸಾಯರ ಮತ್ತು ಸದ್ದುಕಾಯರಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ” ಎಂದು ಹೇಳಿದನು.
យីឝុស្តានវាទីត៑, យូយំ ផិរូឝិនាំ សិទូកិនាញ្ច កិណ្វំ ប្រតិ សាវធានាះ សតក៌ាឝ្ច ភវត។
7 ಅದಕ್ಕೆ ಅವರು, “ನಾವು ರೊಟ್ಟಿಯನ್ನು ತೆಗೆದುಕೊಳ್ಳದೆ ಬಂದಿದ್ದರಿಂದ” ಹೀಗೆ ಹೇಳಿರಬೇಕು ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
តេន តេ បរស្បរំ វិវិច្យ កថយិតុមារេភិរេ, វយំ បូបានានេតុំ វិស្ម្ឫតវន្ត ឯតត្ការណាទ៑ ឥតិ កថយតិ។
8 ಯೇಸು ಅದನ್ನು ತಿಳಿದು, “ಅಲ್ಪ ವಿಶ್ವಾಸಿಗಳೇ, ರೊಟ್ಟಿ ಬುತ್ತಿಯನ್ನು ತಂದಿಲ್ಲವೆಂದು ನಿಮ್ಮಲ್ಲೇ ಏಕೆ ಚರ್ಚೆಮಾಡುತ್ತಿದ್ದೀರಿ?
កិន្តុ យីឝុស្តទ្វិជ្ញាយ តានវោចត៑, ហេ ស្តោកវិឝ្វាសិនោ យូយំ បូបានានយនមធិ កុតះ បរស្បរមេតទ៑ វិវិំក្យ?
9 ಆ ಐದು ರೊಟ್ಟಿಗಳನ್ನುಐದು ಸಾವಿರ ಜನರಿಗೆ ಹಂಚಿದ ನಂತರ ಎಷ್ಟು ಪುಟ್ಟಿ ಶೇಖರಿಸಿಕೊಂಡಿದ್ದಿರಿ?
យុឞ្មាភិះ កិមទ្យាបិ ន ជ្ញាយតេ? បញ្ចភិះ បូបៃះ បញ្ចសហស្របុរុឞេឞុ ភោជិតេឞុ ភក្ឞ្យោច្ឆិឞ្ដបូណ៌ាន៑ កតិ ឌលកាន៑ សមគ្ឫហ្លីតំ;
10 ೧೦ ಇಲ್ಲವೆ ಆಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರಿಗೆ ಹಂಚಿದ ನಂತರ ಎಷ್ಟು ಪುಟ್ಟಿ ತುಂಬಿಟ್ಟಿರಿ? ನೀವು ಇನ್ನೂ ಗ್ರಹಿಸಲಿಲ್ಲವೇ? ನಿಮಗೆ ನೆನಪಿಲ್ಲವೇ?
តថា សប្តភិះ បូបៃឝ្ចតុះសហស្របុរុឞេឞុ ភេជិតេឞុ កតិ ឌលកាន៑ សមគ្ឫហ្លីត, តត៑ កិំ យុឞ្មាភិន៌ ស្មយ៌្យតេ?
11 ೧೧ ನಾನು ರೊಟ್ಟಿಯನ್ನು ಕುರಿತು ಮಾತನಾಡಲಿಲ್ಲ, ಎಂಬುದು ನಿಮಗೆ ಹೇಗೆ ತಿಳಿಯದು? ಆದರೆ ನಾನು ನಿಮಗೆ ಹೇಳಿದು ಏನೆಂದರೆ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರ ಬೇಕೆಂದೇ” ಅಂದನು.
តស្មាត៑ ផិរូឝិនាំ សិទូកិនាញ្ច កិណ្វំ ប្រតិ សាវធានាស្តិឞ្ឋត, កថាមិមាម៑ អហំ បូបានធិ នាកថយំ, ឯតទ៑ យូយំ កុតោ ន ពុធ្យធ្វេ?
12 ೧೨ ಆಗ ಅವರು ರೊಟ್ಟಿಯ ಹುಳಿಹಿಟ್ಟನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಆತನು ತಮಗೆ ಹೇಳಲಿಲ್ಲ; ಆದರೆ ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಹೇಳಿದನು ಎಂಬುದಾಗಿ ತಿಳಿದುಕೊಂಡರು.
តទានីំ បូបកិណ្វំ ប្រតិ សាវធានាស្តិឞ្ឋតេតិ នោក្ត្វា ផិរូឝិនាំ សិទូកិនាញ្ច ឧបទេឝំ ប្រតិ សាវធានាស្តិឞ្ឋតេតិ កថិតវាន៑, ឥតិ តៃរពោធិ។
13 ೧೩ ಯೇಸು ಫಿಲಿಪ್ಪನ ಕೈಸರೈಯ ಎಂಬ ಪಟ್ಟಣದ ಪ್ರಾಂತ್ಯಕ್ಕೆ ಬಂದಾಗ, “ಜನರು ಮನುಷ್ಯಕುಮಾರನಾದ ನನ್ನನ್ನು ಯಾರೆಂದು ಹೇಳುತ್ತಾರೆ” ಎಂದು ತನ್ನ ಶಿಷ್ಯರನ್ನು ಕೇಳಿದನು.
អបរញ្ច យីឝុះ កៃសរិយា-ផិលិបិប្រទេឝមាគត្យ ឝិឞ្យាន៑ អប្ឫច្ឆត៑, យោៜហំ មនុជសុតះ សោៜហំ កះ? លោកៃរហំ កិមុច្យេ?
14 ೧೪ ಅವರು, “ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ, ಕೆಲವರು ಎಲೀಯನು ಅನ್ನುತ್ತಾರೆ ಮತ್ತು ಬೇರೆಯವರು ಯೆರಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು” ಅನ್ನುತ್ತಾರೆ ಎಂದು ಹೇಳಿದರು.
តទានីំ តេ កថិតវន្តះ, កេចិទ៑ វទន្តិ ត្វំ មជ្ជយិតា យោហន៑, កេចិទ្វទន្តិ, ត្វម៑ ឯលិយះ, កេចិច្ច វទន្តិ, ត្វំ យិរិមិយោ វា កឝ្ចិទ៑ ភវិឞ្យទ្វាទីតិ។
15 ೧೫ ಆತನು ಅವರನ್ನು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ ಎಂದು ಕೇಳಿದನು?”
បឝ្ចាត៑ ស តាន៑ បប្រច្ឆ, យូយំ មាំ កំ វទថ? តតះ ឝិមោន៑ បិតរ ឧវាច,
16 ೧೬ ಆಗ ಸೀಮೋನ ಪೇತ್ರನು, “ನೀನು ಜೀವವುಳ್ಳ ದೇವರ ಕುಮಾರನಾದ ಕ್ರಿಸ್ತನು” ಎಂದು ಉತ್ತರ ಕೊಟ್ಟನು.
ត្វមមរេឝ្វរស្យាភិឞិក្តបុត្រះ។
17 ೧೭ ಅದಕ್ಕೆ ಯೇಸು, “ಯೋನನ ಮಗನಾದ ಸೀಮೋನನೇ, ನೀನು ಧನ್ಯನು. ಏಕೆಂದರೆ ಇದು ಮನುಷ್ಯನಿಂದ ನಿನಗೆ ಪ್ರಕಟವಾಗಿಲ್ಲ, ಪರಲೋಕದಲ್ಲಿರುವ ನನ್ನ ತಂದೆಯೇ ಇದನ್ನೂ ನಿನಗೆ ಪ್ರಕಟಪಡಿಸಿರುವನು” ಎಂದು ಹೇಳಿದನು.
តតោ យីឝុះ កថិតវាន៑, ហេ យូនសះ បុត្រ ឝិមោន៑ ត្វំ ធន្យះ; យតះ កោបិ អនុជស្ត្វយ្យេតជ្ជ្ញានំ នោទបាទយត៑, កិន្តុ មម ស្វគ៌ស្យះ បិតោទបាទយត៑។
18 ೧೮ ನಾನು ಇದನ್ನು ಸಹ ನಿನಗೆ ಹೇಳುತ್ತೇನೆ, “ನೀನುಪೇತ್ರನು, ಈಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ಶಕ್ತಿಗಳು ಅದನ್ನು ಸೋಲಿಸಲಾರವು. (Hadēs g86)
អតោៜហំ ត្វាំ វទាមិ, ត្វំ បិតរះ (ប្រស្តរះ) អហញ្ច តស្យ ប្រស្តរស្យោបរិ ស្វមណ្ឌលីំ និម៌្មាស្យាមិ, តេន និរយោ ពលាត៑ តាំ បរាជេតុំ ន ឝក្ឞ្យតិ។ (Hadēs g86)
19 ೧೯ ಪರಲೋಕ ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಭೂಲೋಕದಲ್ಲಿ ನೀನು ಯಾವುದನ್ನು ಕಟ್ಟುತ್ತೀಯೋ ಅದು ಪರಲೋಕದಲ್ಲಿಯೂ ಕಟ್ಟಲ್ಪಟ್ಟಿರುವುದು. ಮತ್ತು ಭೂಲೋಕದಲ್ಲಿ ನೀನು ಯಾವುದನ್ನು ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಟ್ಟಿರುವುದು” ಅಂದನು.
អហំ តុភ្យំ ស្វគ៌ីយរាជ្យស្យ កុញ្ជិកាំ ទាស្យាមិ, តេន យត៑ កិញ្ចន ត្វំ ប្ឫថិវ្យាំ ភំត្ស្យសិ តត្ស្វគ៌េ ភំត្ស្យតេ, យច្ច កិញ្ចន មហ្យាំ មោក្ឞ្យសិ តត៑ ស្វគ៌េ មោក្ឞ្យតេ។
20 ೨೦ ಆಗ ಆತನು, ನಾನು ಕ್ರಿಸ್ತನಾಗಿದ್ದೆನೆಂಬುದನ್ನು ಯಾರಿಗೂ ಖಂಡಿತವಾಗಿ ಹೇಳಬೇಡಿರಿ ಎಂದು ತನ್ನ ಶಿಷ್ಯರಿಗೆ ಆಜ್ಞಾಪಿಸಿದನು.
បឝ្ចាត៑ ស ឝិឞ្យានាទិឝត៑, អហមភិឞិក្តោ យីឝុរិតិ កថាំ កស្មៃចិទបិ យូយំ មា កថយត។
21 ೨೧ ಅಂದಿನಿಂದ ಯೇಸು ಕ್ರಿಸ್ತನು ತಾನು ಯೆರೂಸಲೇಮಿಗೆ ಹೋಗಿ ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಕಷ್ಟಗಳನ್ನನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಎಬ್ಬಿಸಲ್ಪಡುವುದು ಅಗತ್ಯವೆಂದು ತನ್ನ ಶಿಷ್ಯರಿಗೆ ಹೇಳುವುದಕ್ಕೆ ಪ್ರಾರಂಭಿಸಿದನು.
អន្យញ្ច យិរូឝាលម្នគរំ គត្វា ប្រាចីនលោកេភ្យះ ប្រធានយាជកេភ្យ ឧបាធ្យាយេភ្យឝ្ច ពហុទុះខភោគស្តៃ រ្ហតត្វំ ត្ឫតីយទិនេ បុនរុត្ថានញ្ច មមាវឝ្យកម៑ ឯតាះ កថា យីឝុស្តត្កាលមារភ្យ ឝិឞ្យាន៑ ជ្ញាបយិតុម៑ អារព្ធវាន៑។
22 ೨೨ ಆಗ ಪೇತ್ರನು ಆತನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ, “ಕರ್ತನೇ, ದೇವರು ಅದನ್ನು ನಿನಗೆ ಬರಗೊಡಿಸದಿರಲಿ; ನಿನಗೆ ಹೀಗೆ ಎಂದಿಗೂ ಆಗಬಾರದು” ಎಂದು ಆತನನ್ನು ಗದರಿಸುವುದಕ್ಕೆ ಪ್ರಾರಂಭಿಸಿದನು.
តទានីំ បិតរស្តស្យ ករំ ឃ្ឫត្វា តជ៌យិត្វា កថយិតុមារព្ធវាន៑, ហេ ប្រភោ, តត៑ ត្វត្តោ ទូរំ យាតុ, ត្វាំ ប្រតិ កទាបិ ន ឃដិឞ្យតេ។
23 ೨೩ ಆತನು ತಿರುಗಿಕೊಂಡು ಪೇತ್ರನಿಗೆ, “ಸೈತಾನನೇ, ನನ್ನನ್ನು ಬಿಟ್ಟು ತೊಲಗಿ ಹೋಗು. ನನಗೆ ನೀನು ಅಡ್ಡಿಯಾಗಿದ್ದಿ, ಏಕೆಂದರೆ ನೀನು ದೇವರ ವಿಷಯಗಳ ಬಗ್ಗೆ ಯೋಚಿಸದೇ ಮನುಷ್ಯರ ವಿಷಯಗಳ ಬಗ್ಗೆ ಯೋಚಿಸುತ್ತೀ” ಎಂದು ಹೇಳಿದನು.
កិន្តុ ស វទនំ បរាវត៌្យ បិតរំ ជគាទ, ហេ វិឃ្នការិន៑, មត្សម្មុខាទ៑ ទូរីភវ, ត្វំ មាំ ពាធសេ, ឦឝ្វរីយកាយ៌្យាត៑ មានុឞីយកាយ៌្យំ តុភ្យំ រោចតេ។
24 ೨೪ ಅನಂತರ ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನೆಂದರೆ “ಯಾವನಾದರೂ ನನ್ನನ್ನು ಹಿಂಬಾಲಿಸುವುದಕ್ಕೆ ಬಯಸಿದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
អនន្តរំ យីឝុះ ស្វីយឝិឞ្យាន៑ ឧក្តវាន៑ យះ កឝ្ចិត៑ មម បឝ្ចាទ្គាមី ភវិតុម៑ ឥច្ឆតិ, ស ស្វំ ទាម្យតុ, តថា ស្វក្រុឝំ គ្ឫហ្លន៑ មត្បឝ្ចាទាយាតុ។
25 ೨೫ ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಂಡವನು ಅದನ್ನು ಕಂಡುಕೊಳ್ಳುವನು.
យតោ យះ ប្រាណាន៑ រក្ឞិតុមិច្ឆតិ, ស តាន៑ ហារយិឞ្យតិ, កិន្តុ យោ មទត៌្ហំ និជប្រាណាន៑ ហារយតិ, ស តាន៑ ប្រាប្ស្យតិ។
26 ೨೬ ಒಬ್ಬ ಮನುಷ್ಯನು ಭೂಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಅವನ ಪ್ರಾಣವನ್ನು ಕಳೆದುಕೊಂಡರೆ ಅವನಿಗೆ ಪ್ರಯೋಜನವೇನು? ಅಥವಾ ಒಬ್ಬನು ತನ್ನ ಪ್ರಾಣಕ್ಕೆ ಬದಲಿಗೆ ಏನು ಕೊಟ್ಟಾನು?
មានុឞោ យទិ សវ៌្វំ ជគត៑ លភតេ និជប្រណាន៑ ហារយតិ, តហ៌ិ តស្យ កោ លាភះ? មនុជោ និជប្រាណានាំ វិនិមយេន វា កិំ ទាតុំ ឝក្នោតិ?
27 ೨೭ ಮನುಷ್ಯಕುಮಾರನು ತನ್ನ ತಂದೆಯ ಮಹಿಮೆಯೊಡನೆ ತನ್ನ ದೂತರ ಸಮೇತವಾಗಿ ಬರುವನು. ಆಗ ಆತನು ಒಬ್ಬೊಬ್ಬನಿಗೆ ಅವನು ಮಾಡಿದ ಕೆಲಸಕ್ಕೆ ತಕ್ಕಂತೆ ಪ್ರತಿಫಲವನ್ನು ಕೊಡುವನು.
មនុជសុតះ ស្វទូតៃះ សាកំ បិតុះ ប្រភាវេណាគមិឞ្យតិ; តទា ប្រតិមនុជំ ស្វស្វកម៌្មានុសារាត៑ ផលំ ទាស្យតិ។
28 ೨೮ “ನಿಮಗೆ ನಿಜವಾಗಿ ಹೇಳುತ್ತೇನೆ ಇಲ್ಲಿ ನಿಂತವರಲ್ಲಿ ಕೆಲವರು ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವುದನ್ನು ನೋಡುವ ತನಕ ಮರಣಹೊಂದುವುದಿಲ್ಲ” ಅಂದನು.
អហំ យុឞ្មាន៑ តថ្យំ វច្មិ, សរាជ្យំ មនុជសុតម៑ អាគតំ ន បឝ្យន្តោ ម្ឫត្យុំ ន ស្វាទិឞ្យន្តិ, ឯតាទ្ឫឝាះ កតិបយជនា អត្រាបិ ទណ្ឌាយមានាះ សន្តិ។

< ಮತ್ತಾಯನು 16 >