< ಲೂಕನು 7 >

1 ಆತನು ತನ್ನ ಮಾತುಗಳನ್ನೆಲ್ಲಾ ಜನರು ಕೇಳುವಂತೆ ಹೇಳಿ ಮುಗಿಸಿದ ಮೇಲೆ, ಕಪೆರ್ನೌಮಿಗೆ ಬಂದನು.
តតះ បរំ ស លោកានាំ កណ៌គោចរេ តាន៑ សវ៌្វាន៑ ឧបទេឝាន៑ សមាប្យ យទា កផន៌ាហូម្បុរំ ប្រវិឝតិ
2 ಅಲ್ಲಿ ದಂಡಿನ ಶತಾಧಿಪತಿಗೆ ಇಷ್ಟನಾದ ಒಬ್ಬ ಆಳು ಕ್ಷೇಮವಿಲ್ಲದೆ ಸಾಯುವ ಹಾಗಿದ್ದನು.
តទា ឝតសេនាបតេះ ប្រិយទាស ឯកោ ម្ឫតកល្បះ បីឌិត អាសីត៑។
3 ಅವನು ಯೇಸುವಿನ ಸುದ್ದಿಯನ್ನು ಕೇಳಿ ಆತನ ಬಳಿಗೆ ಬಂದು ನನ್ನ ಆಳನ್ನು ಸ್ವಸ್ಥಮಾಡಬೇಕೆಂದು ಆತನನ್ನು ಬೇಡಿಕೊಳ್ಳುವ ಹಾಗೆ ಯೆಹೂದ್ಯರ ಹಿರಿಯರನ್ನು ಕಳುಹಿಸಿದನು.
អតះ សេនាបតិ រ្យីឝោ រ្វាត៌្តាំ និឝម្យ ទាសស្យារោគ្យករណាយ តស្យាគមនាត៌្ហំ វិនយករណាយ យិហូទីយាន៑ កិយតះ ប្រាចះ ប្រេឞយាមាស។
4 ಅವರು ಯೇಸುವಿನ ಬಳಿಗೆ ಬಂದು, “ನಿನ್ನಿಂದ ಇಂಥ ಉಪಕಾರ ಹೊಂದುವುದಕ್ಕೆ ಅವನು ಯೋಗ್ಯನು,
តេ យីឝោរន្តិកំ គត្វា វិនយាតិឝយំ វក្តុមារេភិរេ, ស សេនាបតិ រ្ភវតោនុគ្រហំ ប្រាប្តុម៑ អហ៌តិ។
5 ಅವನು ನಮ್ಮ ದೇಶವನ್ನು ಪ್ರೀತಿಸಿ ಪ್ರಾರ್ಥನೆಗಾಗಿ ನಮಗೆ ಸಭಾಮಂದಿರವನ್ನು ಕಟ್ಟಿಸಿಕೊಟ್ಟಿರುವನು” ಎಂದು ಆತನನ್ನು ಬಹಳವಾಗಿ ಬೇಡಿಕೊಳ್ಳಲು,
យតះ សោស្មជ្ជាតីយេឞុ លោកេឞុ ប្រីយតេ តថាស្មត្ក្ឫតេ ភជនគេហំ និម៌្មិតវាន៑។
6 ಯೇಸು ಅವರ ಸಂಗಡ ಹೋದನು. ಆತನು ಇನ್ನೂ ಮನೆಗೆ ಮುಟ್ಟುವುದಕ್ಕೆ ಸ್ವಲ್ಪ ದೂರವಿರುವಾಗಲೇ ಶತಾಧಿಪತಿಯು ಅವನ ಸ್ನೇಹಿತರನ್ನು ಆತನ ಬಳಿಗೆ ಕಳುಹಿಸಿ, “ಕರ್ತನೇ, ತೊಂದರೆ ತೆಗೆದುಕೊಳ್ಳಬೇಡ. ನೀವು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನಗಿಲ್ಲ.
តស្មាទ៑ យីឝុស្តៃះ សហ គត្វា និវេឝនស្យ សមីបំ ប្រាប, តទា ស ឝតសេនាបតិ រ្វក្ឞ្យមាណវាក្យំ តំ វក្តុំ ពន្ធូន៑ ប្រាហិណោត៑។ ហេ ប្រភោ ស្វយំ ឝ្រមោ ន កត៌្តវ្យោ យទ៑ ភវតា មទ្គេហមធ្យេ បាទាប៌ណំ ក្រិយេត តទប្យហំ នាហ៌ាមិ,
7 ಈ ಕಾರಣದಿಂದ ನಾನು ನಿಮ್ಮ ಬಳಿಗೆ ಬರುವುದಕ್ಕೆ ನನ್ನನ್ನೇ ಯೋಗ್ಯನೆಂದು ಎಣಿಸಿಕೊಳ್ಳಲಿಲ್ಲ. ಆದರೆ ನೀವು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವುದು.
កិញ្ចាហំ ភវត្សមីបំ យាតុមបិ នាត្មានំ យោគ្យំ ពុទ្ធវាន៑, តតោ ភវាន៑ វាក្យមាត្រំ វទតុ តេនៃវ មម ទាសះ ស្វស្ថោ ភវិឞ្យតិ។
8 ನಾನು ಸಹ ಮತ್ತೊಬ್ಬರ ಅಧಿಕಾರದ ಕೆಳಗಿರುವವನು; ನನ್ನ ಕೈ ಕೆಳಗೆ ಸಿಪಾಯಿಗಳಿದ್ದಾರೆ. ನಾನು ಅವರಲ್ಲಿ ಒಬ್ಬನಿಗೆ ‘ಹೋಗು’ ಎಂದು ಹೇಳಿದರೆ ಅವನು ಹೋಗುತ್ತಾನೆ. ಮತ್ತೊಬ್ಬನಿಗೆ ‘ಬಾ’ ಎಂದು ಹೇಳಿದರೆ ಅವನು ಬರುತ್ತಾನೆ; ನನ್ನ ಆಳಿಗೆ ‘ಇಂಥಿಂಥದನ್ನು ಮಾಡು’ ಎಂದು ಹೇಳಿದರೆ ಮಾಡುತ್ತಾನೆ” ಎಂಬುದಾಗಿ ಹೇಳಿಸಿದನು.
យស្មាទ៑ អហំ បរាធីនោបិ មមាធីនា យាះ សេនាះ សន្តិ តាសាម៑ ឯកជនំ ប្រតិ យាហីតិ មយា ប្រោក្តេ ស យាតិ; តទន្យំ ប្រតិ អាយាហីតិ ប្រោក្តេ ស អាយាតិ; តថា និជទាសំ ប្រតិ ឯតត៑ កុវ៌្វិតិ ប្រោក្តេ ស តទេវ ករោតិ។
9 ಯೇಸು ಈ ಮಾತನ್ನು ಕೇಳಿ ಅವನ ವಿಷಯದಲ್ಲಿ ಆಶ್ಚರ್ಯಪಟ್ಟು ತನ್ನ ಹಿಂದೆ ಬರುತ್ತಿರುವ ಗುಂಪನ್ನು ನೋಡಿ, “ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ಹೇಳುತ್ತೇನೆ” ಅಂದನು.
យីឝុរិទំ វាក្យំ ឝ្រុត្វា វិស្មយំ យយៅ, មុខំ បរាវត៌្យ បឝ្ចាទ្វត៌្តិនោ លោកាន៑ ពភាឞេ ច, យុឞ្មានហំ វទាមិ ឥស្រាយេលោ វំឝមធ្យេបិ វិឝ្វាសមីទ្ឫឝំ ន ប្រាប្នវំ។
10 ೧೦ ತರುವಾಯ ಆ ಶತಾಧಿಪತಿಯ ಕಡೆಯಿಂದ ಬಂದವರು ತಿರುಗಿ ಮನೆಗೆ ಹೋಗಿ ಆಳು ಸ್ವಸ್ಥನಾಗಿರುವುದನ್ನು ಕಂಡರು.
តតស្តេ ប្រេឞិតា គ្ឫហំ គត្វា តំ បីឌិតំ ទាសំ ស្វស្ថំ ទទ្ឫឝុះ។
11 ೧೧ ಸ್ವಲ್ಪಕಾಲದ ನಂತರ ಆತನು ನಾಯಿನ್ ಎಂಬ ಊರಿಗೆ ಹೋದನು. ಆತನ ಜೊತೆಯಲ್ಲಿ ಆತನ ಶಿಷ್ಯರು ಮತ್ತು ಬಹುಜನರು ಹೋದರು.
បរេៜហនិ ស នាយីនាខ្យំ នគរំ ជគាម តស្យានេកេ ឝិឞ្យា អន្យេ ច លោកាស្តេន សាទ៌្ធំ យយុះ។
12 ೧೨ ಆತನು ಊರು ಬಾಗಿಲಿನ ಹತ್ತಿರಕ್ಕೆ ಬಂದಾಗ ಸತ್ತುಹೋಗಿದ್ದ ಒಬ್ಬನನ್ನು ಹೊತ್ತುಕೊಂಡು ಹೊರಗೆ ತರುತ್ತಿದ್ದರು. ಅವನು ತನ್ನ ತಾಯಿಗೆ ಒಬ್ಬನೇ ಮಗನಾಗಿದ್ದನು; ಆಕೆಯು ವಿಧವೆಯಾಗಿದ್ದಳು. ಆಕೆಯ ಸಂಗಡ ಊರಿನವರು ಅನೇಕರಿದ್ದರು.
តេឞុ តន្នគរស្យ ទ្វារសន្និធិំ ប្រាប្តេឞុ កិយន្តោ លោកា ឯកំ ម្ឫតមនុជំ វហន្តោ នគរស្យ ពហិយ៌ាន្តិ, ស តន្មាតុរេកបុត្រស្តន្មាតា ច វិធវា; តយា សាទ៌្ធំ តន្នគរីយា ពហវោ លោកា អាសន៑។
13 ೧೩ ಕರ್ತನು ಆಕೆಯನ್ನು ಕಂಡು ಕನಿಕರಿಸಿ, “ಅಳಬೇಡ” ಎಂದು ಆಕೆಗೆ ಹೇಳಿ,
ប្រភុស្តាំ វិលោក្យ សានុកម្បះ កថយាមាស, មា រោទីះ។ ស សមីបមិត្វា ខដ្វាំ បស្បឝ៌ តស្មាទ៑ វាហកាះ ស្ថគិតាស្តម្យុះ;
14 ೧೪ ಚಟ್ಟದ ಹತ್ತಿರಕ್ಕೆ ಹೋಗಿ ಅದನ್ನು ಮುಟ್ಟಲು ಹೊತ್ತುಕೊಂಡವರು ನಿಂತರು. ಆಗ ಆತನು, “ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ” ಅಂದನು.
តទា ស ឧវាច ហេ យុវមនុឞ្យ ត្វមុត្តិឞ្ឋ, ត្វាមហម៑ អាជ្ញាបយាមិ។
15 ೧೫ ಅನ್ನುತ್ತಲೇ ಸತ್ತಿದ್ದವನು ಎದ್ದು ಕುಳಿತುಕೊಂಡು ಮಾತನಾಡುವುದಕ್ಕೆ ತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದನು.
តស្មាត៑ ស ម្ឫតោ ជនស្តត្ក្ឞណមុត្ថាយ កថាំ ប្រកថិតះ; តតោ យីឝុស្តស្យ មាតរិ តំ សមប៌យាមាស។
16 ೧೬ ಎಲ್ಲರು ಭಯಹಿಡಿದವರಾಗಿ, “ಮಹಾಪ್ರವಾದಿಯು ನಮ್ಮಲ್ಲಿ ಎದ್ದಿದ್ದಾನೆ, ದೇವರು ತನ್ನ ಜನರನ್ನು ಸಂದರ್ಶಿಸಲು ಬಂದಿದ್ದಾನೆ” ಎಂದು ದೇವರನ್ನು ಕೊಂಡಾಡಿದರು.
តស្មាត៑ សវ៌្វេ លោកាះ ឝឝង្កិរេ; ឯកោ មហាភវិឞ្យទ្វាទី មធ្យេៜស្មាកម៑ សមុទៃត៑, ឦឝ្វរឝ្ច ស្វលោកានន្វគ្ឫហ្លាត៑ កថាមិមាំ កថយិត្វា ឦឝ្វរំ ធន្យំ ជគទុះ។
17 ೧೭ ಈ ಸುದ್ದಿಯು ಯೂದಾಯದಲ್ಲಿಯೂ ಸುತ್ತಲಿರುವ ಎಲ್ಲಾ ಪ್ರಾಂತ್ಯದಲ್ಲಿಯೂ ಹಬ್ಬಿತು.
តតះ បរំ សមស្តំ យិហូទាទេឝំ តស្យ ចតុទ៌ិក្ស្ថទេឝញ្ច តស្យៃតត្កីត៌្តិ រ្វ្យានឝេ។
18 ೧೮ ಯೋಹಾನನ ಶಿಷ್ಯರು ನಡೆದ ಸಂಗತಿಗಳನ್ನೆಲ್ಲಾ ಆತನಿಗೆ ತಿಳಿಸಲು,
តតះ បរំ យោហនះ ឝិឞ្យេឞុ តំ តទ្វ្ឫត្តាន្តំ ជ្ញាបិតវត្សុ
19 ೧೯ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದವನು ನೀನೋ ಅಥವಾ ನಾವು ಬೇರೊಬ್ಬನಿಗಾಗಿ ಕಾಯಬೇಕೋ?” ಎಂದು ಕರ್ತನನ್ನು ಕೇಳಲು ಹೇಳಿಕಳುಹಿಸಿದನು.
ស ស្វឝិឞ្យាណាំ ទ្វៅ ជនាវាហូយ យីឝុំ ប្រតិ វក្ឞ្យមាណំ វាក្យំ វក្តុំ ប្រេឞយាមាស, យស្យាគមនម៑ អបេក្ឞ្យ តិឞ្ឋាមោ វយំ កិំ ស ឯវ ជនស្ត្វំ? កិំ វយមន្យមបេក្ឞ្យ ស្ថាស្យាមះ?
20 ೨೦ ಅವರು ಯೇಸುವಿನ ಬಳಿಗೆ ಬಂದು, “‘ಬರಬೇಕಾದವನು ನೀನೋ ಅಥವಾ ನಾವು ಮತ್ತೊಬ್ಬನ ಬರುವಿಕೆಗಾಗಿ ಕಾಯಬೇಕೋ?’ ಎಂದು ಕೇಳುವುದಕ್ಕಾಗಿ ಸ್ನಾನಿಕನಾದ ಯೋಹಾನನು ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ” ಅಂದರು.
បឝ្ចាត្តៅ មានវៅ គត្វា កថយាមាសតុះ, យស្យាគមនម៑ អបេក្ឞ្យ តិឞ្ឋាមោ វយំ, កិំ សឯវ ជនស្ត្វំ? កិំ វយមន្យមបេក្ឞ្យ ស្ថាស្យាមះ? កថាមិមាំ តុភ្យំ កថយិតុំ យោហន៑ មជ្ជក អាវាំ ប្រេឞិតវាន៑។
21 ೨೧ ಅದೇ ಗಳಿಗೆಯಲ್ಲಿ ಆತನು ಅನೇಕರನ್ನು ರೋಗ, ಕಾಯಿಲೆ, ದೆವ್ವ ಇಂಥವುಗಳಿಂದ ಪೀಡಿತರಾದವರನ್ನು ವಾಸಿಮಾಡಿದನು ಮತ್ತು ಅನೇಕ ಕುರುಡರಿಗೆ ಕಣ್ಣಿನ ದೃಷ್ಟಿ ದಯಪಾಲಿಸಿದನು.
តស្មិន៑ ទណ្ឌេ យីឝូរោគិណោ មហាវ្យាធិមតោ ទុឞ្ដភូតគ្រស្តាំឝ្ច ពហូន៑ ស្វស្ថាន៑ ក្ឫត្វា, អនេកាន្ធេភ្យឝ្ចក្ឞុំឞិ ទត្ត្វា ប្រត្យុវាច,
22 ೨೨ ಹೀಗಿರಲು ಯೇಸು ಅವರಿಗೆ ಪ್ರತ್ಯುತ್ತರವಾಗಿ, “ನೀವು ಹೋಗಿ ಕಂಡು ಕೇಳಿದವುಗಳನ್ನು ಯೋಹಾನನಿಗೆ ತಿಳಿಸಿರಿ; ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಜೀವದಿಂದ ಎಬ್ಬಿಸಲ್ಪಡುತ್ತಾರೆ, ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತಿದೆ.
យុវាំ វ្រជតម៑ អន្ធា នេត្រាណិ ខញ្ជាឝ្ចរណានិ ច ប្រាប្នុវន្តិ, កុឞ្ឋិនះ បរិឞ្ក្រិយន្តេ, ពធិរាះ ឝ្រវណានិ ម្ឫតាឝ្ច ជីវនានិ ប្រាប្នុវន្តិ, ទរិទ្រាណាំ សមីបេឞុ សុសំវាទះ ប្រចាយ៌្យតេ, យំ ប្រតិ វិឃ្នស្វរូបោហំ ន ភវាមិ ស ធន្យះ,
23 ೨೩ ನನ್ನ ವಿಷಯದಲ್ಲಿ ಸಂಶಯಪಡದವನೇ ಧನ್ಯನು” ಎಂದು ಹೇಳಿದನು.
ឯតានិ យានិ បឝ្យថះ ឝ្ឫណុថឝ្ច តានិ យោហនំ ជ្ញាបយតម៑។
24 ೨೪ ಯೋಹಾನನ ಶಿಷ್ಯರು ಹಿಂತಿರುಗಿ ಹೋಗಲು ಆತನು ಯೋಹಾನನ ವಿಷಯವಾಗಿ ಆ ಜನರ ಗುಂಪುಗಳಿಗೆ ಹೇಳತೊಡಗಿದ್ದೇನಂದರೆ, “ಏನು ನೋಡಬೇಕೆಂದು ಮರುಭೂಮಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ?
តយោ រ្ទូតយោ រ្គតយោះ សតោ រ្យោហនិ ស លោកាន៑ វក្តុមុបចក្រមេ, យូយំ មធ្យេប្រាន្តរំ កិំ ទ្រឞ្ដុំ និរគមត? កិំ វាយុនា កម្បិតំ នឌំ?
25 ೨೫ ಅಲ್ಲವಾದರೆ ಏನು ನೋಡಬೇಕೆಂದು ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿ ಭೋಗದಲ್ಲಿ ಬಾಳುವವರು ಅರಮನೆಗಳಲ್ಲಿ ಇರುತ್ತಾರಷ್ಟೆ.
យូយំ កិំ ទ្រឞ្ដុំ និរគមត? កិំ សូក្ឞ្មវស្ត្របរិធាយិនំ កមបិ នរំ? កិន្តុ យេ សូក្ឞ្មម្ឫទុវស្ត្រាណិ បរិទធតិ សូត្តមានិ ទ្រវ្យាណិ ភុញ្ជតេ ច តេ រាជធានីឞុ តិឞ្ឋន្តិ។
26 ೨೬ ಹಾಗಾದರೆ ನೀವು ಏನು ನೋಡಬೇಕೆಂದು ಹೋಗಿದ್ದಿರಿ? ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದ್ದಿರಿ ಎಂದು ನಿಮಗೆ ಹೇಳುತ್ತೇನೆ.
តហ៌ិ យូយំ កិំ ទ្រឞ្ដុំ និរគមត? កិមេកំ ភវិឞ្យទ្វាទិនំ? តទេវ សត្យំ កិន្តុ ស បុមាន៑ ភវិឞ្យទ្វាទិនោបិ ឝ្រេឞ្ឋ ឥត្យហំ យុឞ្មាន៑ វទាមិ;
27 ೨೭ ‘ಇಗೋ, ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ. ನೀನು ಹೋಗುವ ದಾರಿಯನ್ನು ಅವನು ನಿನ್ನ ಮುಂದೆ ಸಿದ್ಧಮಾಡುವನು,’ ಎಂದು ಯಾರ ವಿಷಯವಾಗಿ ಬರೆದದೆಯೋ, ಆ ಪುರುಷನು ಅವನೇ.
បឝ្យ ស្វកីយទូតន្តុ តវាគ្រ ប្រេឞយាម្យហំ។ គត្វា ត្វទីយមាគ៌ន្តុ ស ហិ បរិឞ្ករិឞ្យតិ។ យទត៌្ហេ លិបិរិយម៑ អាស្តេ ស ឯវ យោហន៑។
28 ೨೮ ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಯೋಹಾನನಿಗಿಂತ ಮಹಾಪುರುಷನು ಒಬ್ಬನೂ ಹುಟ್ಟಿಲ್ಲ, ಅದರೂ ದೇವರ ರಾಜ್ಯದಲ್ಲಿ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು” ನಿಮಗೆ ಹೇಳುತ್ತೇನೆ.
អតោ យុឞ្មានហំ វទាមិ ស្ត្រិយា គព៌្ភជាតានាំ ភវិឞ្យទ្វាទិនាំ មធ្យេ យោហនោ មជ្ជកាត៑ ឝ្រេឞ្ឋះ កោបិ នាស្តិ, តត្រាបិ ឦឝ្វរស្យ រាជ្យេ យះ សវ៌្វស្មាត៑ ក្ឞុទ្រះ ស យោហនោបិ ឝ្រេឞ្ឋះ។
29 ೨೯ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡ ಜನರೆಲ್ಲರೂ, ಸುಂಕದವರೂ ಸಹ ಆತನ ಉಪದೇಶವನ್ನು ಕೇಳಿದಾಗ, ದೇವರು ನೀತಿವಂತನೆಂದು ಒಪ್ಪಿಕೊಂಡರು.
អបរញ្ច សវ៌្វេ លោកាះ ករមញ្ចាយិនឝ្ច តស្យ វាក្យានិ ឝ្រុត្វា យោហនា មជ្ជនេន មជ្ជិតាះ បរមេឝ្វរំ និទ៌ោឞំ មេនិរេ។
30 ೩೦ ಆದರೆ ಫರಿಸಾಯರೂ ಧರ್ಮೋಪದೇಶಕರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳದೆ ಹೋದದ್ದರಿಂದ ಅವರು ತಮ್ಮ ಕುರಿತಾದ ದೈವಸಂಕಲ್ಪವನ್ನು ನಿರಾಕರಿಸಿದರು.
កិន្តុ ផិរូឝិនោ វ្យវស្ថាបកាឝ្ច តេន ន មជ្ជិតាះ ស្វាន៑ ប្រតីឝ្វរស្យោបទេឝំ និឞ្ផលម៑ អកុវ៌្វន៑។
31 ೩೧ ಯೇಸು ತಮ್ಮ ಬೋಧನೆಯ ಮುಂದುವರಿಸುತ್ತಾ, “ಈ ಕಾಲದ ಜನರನ್ನು ಯಾರಿಗೆ ಹೋಲಿಸಲಿ? ಅವರು ಯಾರನ್ನು ಹೋಲುತ್ತಾರೆ?
អថ ប្រភុះ កថយាមាស, ឥទានីន្តនជនាន៑ កេនោបមាមិ? តេ កស្យ សទ្ឫឝាះ?
32 ೩೨ ಪೇಟೆಯಲ್ಲಿ ಕುಳಿತುಕೊಂಡು, ‘ನಾವು ನಿಮಗೋಸ್ಕರ ಕೊಳಲೂದಿದೆವು, ನೀವು ಕುಣಿಯಲಿಲ್ಲ; ಗೋಳಾಡಿದೆವು, ನೀವು ಅಳಲಿಲ್ಲ’ ಎಂದು ಒಬ್ಬರಿಗೊಬ್ಬರು ಕೂಗಿ ಹೇಳುವಂಥ ಮಕ್ಕಳನ್ನು ಹೋಲುತ್ತಾರೆ.
យេ ពាលកា វិបណ្យាម៑ ឧបវិឝ្យ បរស្បរម៑ អាហូយ វាក្យមិទំ វទន្តិ, វយំ យុឞ្មាកំ និកដេ វំឝីរវាទិឞ្ម, កិន្តុ យូយំ នានត៌្តិឞ្ដ, វយំ យុឞ្មាកំ និកដ អរោទិឞ្ម, កិន្តុ យុយំ ន វ្យលបិឞ្ដ, ពាលកៃរេតាទ្ឫឝៃស្តេឞាម៑ ឧបមា ភវតិ។
33 ೩೩ ಏಕೆಂದರೆ ಸ್ನಾನಿಕನಾದ ಯೋಹಾನನು ಬಂದಿದ್ದಾನೆ; ಅವನು ರೊಟ್ಟಿ ತಿನ್ನದವನು, ದ್ರಾಕ್ಷಾರಸ ಕುಡಿಯದವನು; ನೀವು, ‘ಅವನಿಗೆ ದೆವ್ವ ಹಿಡಿದದೆ’ ಅನ್ನುತ್ತೀರಿ.
យតោ យោហន៑ មជ្ជក អាគត្យ បូបំ នាខាទត៑ ទ្រាក្ឞារសញ្ច នាបិវត៑ តស្មាទ៑ យូយំ វទថ, ភូតគ្រស្តោយម៑។
34 ೩೪ ಮನುಷ್ಯಕುಮಾರನು ಬಂದಿದ್ದಾನೆ, ಆತನು ಅನ್ನ ಪಾನಗಳನ್ನು ತೆಗೆದುಕೊಳ್ಳುವವನಾಗಿದ್ದಾನೆ. ನೀವು, ‘ಇಗೋ, ಈತನು ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಷ್ಠರ ಗೆಳೆಯನು’ ಅನ್ನುತ್ತೀರಿ.
តតះ បរំ មានវសុត អាគត្យាខាទទបិវញ្ច តស្មាទ៑ យូយំ វទថ, ខាទកះ សុរាបឝ្ចាណ្ឌាលបាបិនាំ ពន្ធុរេកោ ជនោ ទ្ឫឝ្យតាម៑។
35 ೩೫ ಆದರೆ ಜ್ಞಾನವಾದರೋ ತನ್ನ ಎಲ್ಲಾ ಮಕ್ಕಳಿಂದ ಸಮರ್ಥನೆ ಪಡೆದದೆ” ಅಂದನು.
កិន្តុ ជ្ញានិនោ ជ្ញានំ និទ៌ោឞំ វិទុះ។
36 ೩೬ ಫರಿಸಾಯರಲ್ಲಿ ಒಬ್ಬನು ಆತನನ್ನು ತನ್ನ ಜೊತೆಯಲ್ಲಿ ಊಟಮಾಡಬೇಕೆಂದು ಬೇಡಿಕೊಂಡಾಗ ಆತನು ಆ ಫರಿಸಾಯನ ಮನೆಗೆ ಹೋಗಿ ಆತನ ಸಂಗಡ ಊಟಕ್ಕೆ ಕುಳಿತುಕೊಂಡನು.
បឝ្ចាទេកះ ផិរូឝី យីឝុំ ភោជនាយ ន្យមន្ត្រយត៑ តតះ ស តស្យ គ្ឫហំ គត្វា ភោក្តុមុបវិឞ្ដះ។
37 ೩೭ ಆಗ ಆ ಊರಿನಲ್ಲಿದ್ದ ದುರಾಚಾರಿಯಾದ ಒಬ್ಬ ಹೆಂಗಸು ಫರಿಸಾಯನ ಮನೆಯಲ್ಲಿ ಆತನು ಊಟಕ್ಕೆ ಬಂದಿದ್ದಾನೆಂದು ತಿಳಿದು ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು,
ឯតហ៌ិ តត្ផិរូឝិនោ គ្ឫហេ យីឝុ រ្ភេក្តុម៑ ឧបាវេក្ឞីត៑ តច្ឆ្រុត្វា តន្នគរវាសិនី កាបិ ទុឞ្ដា នារី បាណ្ឌរប្រស្តរស្យ សម្បុដកេ សុគន្ធិតៃលម៑ អានីយ
38 ೩೮ ಯೇಸುವಿನ ಹಿಂದೆ ಪಾದಗಳ ಬಳಿಯಲ್ಲಿ ನಿಂತುಕೊಂಡು ಅಳುತ್ತಾ ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ನೆನಸುತ್ತಾ ತನ್ನ ತಲೆ ಕೂದಲಿನಿಂದ ಒರಸಿ, ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.
តស្យ បឝ្ចាត៑ បាទយោះ សន្និធៅ តស្យៅ រុទតី ច នេត្រាម្ពុភិស្តស្យ ចរណៅ ប្រក្ឞាល្យ និជកចៃរមាក៌្ឞីត៑, តតស្តស្យ ចរណៅ ចុម្ពិត្វា តេន សុគន្ធិតៃលេន មមទ៌។
39 ೩೯ ಆದರೆ ಆತನನ್ನು ಊಟಕ್ಕೆ ಕರೆದ ಫರಿಸಾಯನು ಇದನ್ನು ಕಂಡು, “ಇವಳು ದುರಾಚಾರಿ; ಈತನು ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟಿದ ಈ ಹೆಂಗಸು ಇಂಥವಳೆಂದು ತಿಳಿದುಕೊಳ್ಳುತ್ತಿದ್ದನು” ಎಂದು ತನ್ನೊಳಗೇ ಅಂದುಕೊಂಡನು.
តស្មាត៑ ស និមន្ត្រយិតា ផិរូឝី មនសា ចិន្តយាមាស, យទ្យយំ ភវិឞ្យទ្វាទី ភវេត៑ តហ៌ិ ឯនំ ស្ប្ឫឝតិ យា ស្ត្រី សា កា កីទ្ឫឝី ចេតិ ជ្ញាតុំ ឝក្នុយាត៑ យតះ សា ទុឞ្ដា។
40 ೪೦ ಅದಕ್ಕೆ ಯೇಸು, “ಸೀಮೋನನೇ, ನಾನು ನಿನಗೆ ಹೇಳಬೇಕಾದ ಒಂದು ಮಾತದೆ” ಅಂದಾಗ ಸೀಮೋನನು, “ಬೋಧಕನೇ, ಹೇಳು” ಅಂದನು.
តទា យាឝុស្តំ ជគាទ, ហេ ឝិមោន៑ ត្វាំ ប្រតិ មម កិញ្ចិទ៑ វក្តវ្យមស្តិ; តស្មាត៑ ស ពភាឞេ, ហេ គុរោ តទ៑ វទតុ។
41 ೪೧ ಆಗ ಯೇಸು, “ಒಬ್ಬ ಸಾಹುಕಾರನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರುಬೆಳ್ಳಿ ನಾಣ್ಯಗಳನ್ನು ಕೊಡಬೇಕಾಗಿತ್ತು. ಮತ್ತೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಕೊಡಬೇಕಾಗಿತ್ತು.
ឯកោត្តមណ៌ស្យ ទ្វាវធមណ៌ាវាស្តាំ, តយោរេកះ បញ្ចឝតានិ មុទ្រាបាទាន៑ អបរឝ្ច បញ្ចាឝត៑ មុទ្រាបាទាន៑ ធារយាមាស។
42 ೪೨ ತೀರಿಸುವುದಕ್ಕೆ ಅವರಿಗೆ ಗತಿಯಿಲ್ಲದ್ದರಿಂದ ಆ ಇಬ್ಬರಿಗೂ ಸಾಲವನ್ನು ಮನ್ನಾಮಾಡಿ ಬಿಟ್ಟನು. ಹಾಗಾದರೆ ಅವರಿಬ್ಬರಲ್ಲಿ ಯಾವನು ಆ ಸಾಹುಕಾರನನ್ನು ಹೆಚ್ಚಾಗಿ ಪ್ರೀತಿಸುವನು?” ಎಂದು ಕೇಳಿದ್ದಕ್ಕೆ,
តទនន្តរំ តយោះ ឝោធ្យាភាវាត៑ ស ឧត្តមណ៌ស្តយោ រ្ឫណេ ចក្ឞមេ; តស្មាត៑ តយោទ៌្វយោះ កស្តស្មិន៑ ប្រេឞ្យតេ ពហុ? តទ៑ ព្រូហិ។
43 ೪೩ ಸೀಮೋನನು, “ಯಾವನಿಗೆ ಹೆಚ್ಚಾಗಿ ಬಿಟ್ಟನೋ ಅವನೇ ಎಂದು ಭಾವಿಸುತ್ತೇನೆ” ಅಂದನು. ಯೇಸು ಅವನಿಗೆ, “ನೀನು ಸರಿಯಾಗಿ ತೀರ್ಪುಮಾಡಿದಿ” ಎಂದು ಹೇಳಿ,
ឝិមោន៑ ប្រត្យុវាច, មយា ពុធ្យតេ យស្យាធិកម៑ ឫណំ ចក្ឞមេ ស ឥតិ; តតោ យីឝុស្តំ វ្យាជហារ, ត្វំ យថាត៌្ហំ វ្យចារយះ។
44 ೪೪ ಆ ಹೆಂಗಸಿನ ಕಡೆಗೆ ತಿರುಗಿಕೊಂಡು ಸೀಮೋನನಿಗೆ ಹೇಳಿದ್ದೇನಂದರೆ, “ಈ ಹೆಂಗಸನ್ನು ನೋಡಿದ್ದಿಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಇವಳಾದರೋ ನನ್ನ ಕಾಲುಗಳನ್ನು ಕಣ್ಣೀರಿನಿಂದ ನೆನಸಿ ತನ್ನ ತಲೆಯಕೂದಲಿನಿಂದ ಒರಸಿದಳು.
អថ តាំ នារីំ ប្រតិ វ្យាឃុឋ្យ ឝិមោនមវោចត៑, ស្ត្រីមិមាំ បឝ្យសិ? តវ គ្ឫហេ មយ្យាគតេ ត្វំ បាទប្រក្ឞាលនាត៌្ហំ ជលំ នាទាះ កិន្តុ យោឞិទេឞា នយនជលៃ រ្មម បាទៅ ប្រក្ឞាល្យ កេឝៃរមាក៌្ឞីត៑។
45 ೪೫ ನೀನು ನನಗೆ ಮುದ್ದಿಡಲಿಲ್ಲ; ಇವಳಾದರೋ ನಾನು ಒಳಗೆ ಬಂದಾಗಿನಿಂದ ನನ್ನ ಕಾಲಿಗೆ ಮುದ್ದಿಡುವುದನ್ನು ಬಿಟ್ಟಿಲ್ಲ.
ត្វំ មាំ នាចុម្ពីះ កិន្តុ យោឞិទេឞា ស្វីយាគមនាទារភ្យ មទីយបាទៅ ចុម្ពិតុំ ន វ្យរំស្ត។
46 ೪೬ ನೀನು ನನ್ನ ತಲೆಗೆ ಎಣ್ಣೆ ಹಚ್ಚಲಿಲ್ಲ; ಇವಳಾದರೋ ಸುಗಂಧ ತೈಲವನ್ನು ಕಾಲಿಗೆ ಹಚ್ಚಿದಳು.
ត្វញ្ច មទីយោត្តមាង្គេ កិញ្ចិទបិ តៃលំ នាមទ៌ីះ កិន្តុ យោឞិទេឞា មម ចរណៅ សុគន្ធិតៃលេនាមទ៌្ទីត៑។
47 ೪೭ ಹೀಗಿರಲು ನಾನು ಹೇಳುವ ಮಾತೇನಂದರೆ, ಇವಳ ಪಾಪಗಳು ಬಹಳವಾಗಿದ್ದರೂ ಅವೆಲ್ಲಾವು ಕ್ಷಮಿಸಲ್ಪಟ್ಟಿವೆ. ಇದಕ್ಕೆ ಪ್ರಮಾಣವೇನಂದರೆ ಇವಳು ತೋರಿಸಿದ ಪ್ರೀತಿ ಬಹಳ. ಆದರೆ ಯಾವನಿಗೆ ಸ್ವಲ್ಪ ಮಾತ್ರ ಕ್ಷಮಿಸಲ್ಪಟ್ಟಿದೆಯೋ ಅವನು ತೋರಿಸುವ ಪ್ರೀತಿಯು ಸ್ವಲ್ಪವೇ” ಅಂದನು.
អតស្ត្វាំ វ្យាហរាមិ, ឯតស្យា ពហុ បាបមក្ឞម្យត តតោ ពហុ ប្រីយតេ កិន្តុ យស្យាល្បបាបំ ក្ឞម្យតេ សោល្បំ ប្រីយតេ។
48 ೪೮ ಆ ಮೇಲೆ ಆತನು ಅವಳಿಗೆ, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
តតះ បរំ ស តាំ ពភាឞេ, ត្វទីយំ បាបមក្ឞម្យត។
49 ೪೯ ಆತನ ಸಂಗಡ ಊಟಕ್ಕೆ ಕುಳಿತಿದ್ದವರೆಲ್ಲರೂ, “ಪಾಪಗಳನ್ನು ಸಹ ಕ್ಷಮಿಸಲು ಇವನಾರು?” ಎಂದು ತಮ್ಮತಮ್ಮೊಳಗೆ ಅಂದುಕೊಂಡರು.
តទា តេន សាទ៌្ធំ យេ ភោក្តុម៑ ឧបវិវិឝុស្តេ បរស្បរំ វក្តុមារេភិរេ, អយំ បាបំ ក្ឞមតេ ក ឯឞះ?
50 ೫೦ ಆದರೆ ಆತನು ಆ ಹೆಂಗಸಿಗೆ, “ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿದೆ, ಸಮಾಧಾನದಿಂದ ಹೋಗು” ಎಂದು ಹೇಳಿದನು.
កិន្តុ ស តាំ នារីំ ជគាទ, តវ វិឝ្វាសស្ត្វាំ បយ៌្យត្រាស្ត ត្វំ ក្ឞេមេណ វ្រជ។

< ಲೂಕನು 7 >