< ಲೂಕನು 19 >

1 ಯೇಸು ಯೆರಿಕೋ ಊರನ್ನು ಪ್ರವೇಶಿಸಿ ಹಾದುಹೋಗುವಾಗ,
ಯದಾ ಯೀಶು ರ್ಯಿರೀಹೋಪುರಂ ಪ್ರವಿಶ್ಯ ತನ್ಮಧ್ಯೇನ ಗಚ್ಛಂಸ್ತದಾ
2 ಅಲ್ಲಿ ಜಕ್ಕಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಸುಂಕವಸೂಲಿಯ ಮುಖ್ಯಸ್ಥನು ಮತ್ತು ಐಶ್ವರ್ಯವಂತನಾಗಿದ್ದನು.
ಸಕ್ಕೇಯನಾಮಾ ಕರಸಞ್ಚಾಯಿನಾಂ ಪ್ರಧಾನೋ ಧನವಾನೇಕೋ
3 ಅವನು ಯೇಸು ಹೇಗಿದ್ದಾನೆಂದು ನೋಡಲು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದುದರಿಂದ, ಜನರ ಗುಂಪಿನ ನಿಮಿತ್ತ ನೋಡಲಾರದೆ ಹೋದನು.
ಯೀಶುಃ ಕೀದೃಗಿತಿ ದ್ರಷ್ಟುಂ ಚೇಷ್ಟಿತವಾನ್ ಕಿನ್ತು ಖರ್ವ್ವತ್ವಾಲ್ಲೋಕಸಂಘಮಧ್ಯೇ ತದ್ದರ್ಶನಮಪ್ರಾಪ್ಯ
4 ಆದಕಾರಣ ಆತನನ್ನು ನೋಡುವುದಕ್ಕಾಗಿ ಮುಂದೆ ಓಡಿಹೋಗಿ ಆತನು ಬರುತ್ತಿರುವ ಮಾರ್ಗದಲ್ಲಿದ್ದ ಆಲದ ಮರವನ್ನು ಹತ್ತಿದನು.
ಯೇನ ಪಥಾ ಸ ಯಾಸ್ಯತಿ ತತ್ಪಥೇಽಗ್ರೇ ಧಾವಿತ್ವಾ ತಂ ದ್ರಷ್ಟುಮ್ ಉಡುಮ್ಬರತರುಮಾರುರೋಹ|
5 ಯೇಸು ಅಲ್ಲಿಗೆ ಬಂದು ಮೇಲಕ್ಕೆ ನೋಡಿ, “ಜಕ್ಕಾಯನೇ, ತಟ್ಟನೆ ಇಳಿದು ಬಾ, ನಾನು ಈಹೊತ್ತು ನಿನ್ನ ಮನೆಯಲ್ಲಿ ಉಳಿದುಕೊಳ್ಳಬೇಕು” ಎಂದು ಅವನಿಗೆ ಹೇಳಲು,
ಪಶ್ಚಾದ್ ಯೀಶುಸ್ತತ್ಸ್ಥಾನಮ್ ಇತ್ವಾ ಊರ್ದ್ಧ್ವಂ ವಿಲೋಕ್ಯ ತಂ ದೃಷ್ಟ್ವಾವಾದೀತ್, ಹೇ ಸಕ್ಕೇಯ ತ್ವಂ ಶೀಘ್ರಮವರೋಹ ಮಯಾದ್ಯ ತ್ವದ್ಗೇಹೇ ವಸ್ತವ್ಯಂ|
6 ಅವನು ತಕ್ಷಣ ಇಳಿದು ಬಂದು ಆತನನ್ನು ಸಂತೋಷದಿಂದ ಬರಮಾಡಿಕೊಂಡನು.
ತತಃ ಸ ಶೀಘ್ರಮವರುಹ್ಯ ಸಾಹ್ಲಾದಂ ತಂ ಜಗ್ರಾಹ|
7 ಇದನ್ನು ನೋಡಿದವರೆಲ್ಲರು, “ಈತನು ಪಾಪಿಯಾಗಿರುವವನ ಬಳಿಯಲ್ಲಿ ಉಳಿದುಕೊಳ್ಳುವುದಕ್ಕೆ ಹೋಗಿದ್ದಾನೆ” ಎಂದು ಗೊಣಗುಟ್ಟಿದರು.
ತದ್ ದೃಷ್ಟ್ವಾ ಸರ್ವ್ವೇ ವಿವದಮಾನಾ ವಕ್ತುಮಾರೇಭಿರೇ, ಸೋತಿಥಿತ್ವೇನ ದುಷ್ಟಲೋಕಗೃಹಂ ಗಚ್ಛತಿ|
8 ಆದರೆ ಜಕ್ಕಾಯನು ನಿಂತುಕೊಂಡು “ಕರ್ತನಿಗೆ, ಕರ್ತನೇ, ನೋಡು, ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ ಮತ್ತು ನಾನು ಅನ್ಯಾಯವಾಗಿ ಯಾರಿಂದ ಏನಾದರೂ ಕಿತ್ತುಕೊಂಡಿದ್ದೇಯಾದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ” ಎಂದು ಹೇಳಿದನು.
ಕಿನ್ತು ಸಕ್ಕೇಯೋ ದಣ್ಡಾಯಮಾನೋ ವಕ್ತುಮಾರೇಭೇ, ಹೇ ಪ್ರಭೋ ಪಶ್ಯ ಮಮ ಯಾ ಸಮ್ಪತ್ತಿರಸ್ತಿ ತದರ್ದ್ಧಂ ದರಿದ್ರೇಭ್ಯೋ ದದೇ, ಅಪರಮ್ ಅನ್ಯಾಯಂ ಕೃತ್ವಾ ಕಸ್ಮಾದಪಿ ಯದಿ ಕದಾಪಿ ಕಿಞ್ಚಿತ್ ಮಯಾ ಗೃಹೀತಂ ತರ್ಹಿ ತಚ್ಚತುರ್ಗುಣಂ ದದಾಮಿ|
9 ಇದನ್ನು ಕೇಳಿ ಯೇಸು, “ಈಹೊತ್ತು ಈ ಮನೆಗೆ ರಕ್ಷಣೆಯಾಯಿತು. ಇವನು ಸಹ ಅಬ್ರಹಾಮನ ವಂಶದವನಲ್ಲವೇ.
ತದಾ ಯೀಶುಸ್ತಮುಕ್ತವಾನ್ ಅಯಮಪಿ ಇಬ್ರಾಹೀಮಃ ಸನ್ತಾನೋಽತಃ ಕಾರಣಾದ್ ಅದ್ಯಾಸ್ಯ ಗೃಹೇ ತ್ರಾಣಮುಪಸ್ಥಿತಂ|
10 ೧೦ ಮನುಷ್ಯಕುಮಾರನು ದಾರಿತಪ್ಪಿ ಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕೆ ಬಂದನು” ಎಂದು ಹೇಳಿದನು.
ಯದ್ ಹಾರಿತಂ ತತ್ ಮೃಗಯಿತುಂ ರಕ್ಷಿತುಞ್ಚ ಮನುಷ್ಯಪುತ್ರ ಆಗತವಾನ್|
11 ೧೧ ಜನರು ಈ ಮಾತುಗಳನ್ನು ಕೇಳುತ್ತಿರಲಾಗಿ ಯೇಸು ತಾನು ಯೆರೂಸಲೇಮಿಗೆ ಸಮೀಪವಾಗಿದ್ದದರಿಂದಲೂ ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗುವ ಹಾಗಿದೆ ಎಂದು ಅವರು ಭಾವಿಸಿದ್ದರಿಂದಲೂ ಇನ್ನೂ ಒಂದು ಸಾಮ್ಯವನ್ನು ಅವರಿಗೆ ಹೇಳಿದನು.
ಅಥ ಸ ಯಿರೂಶಾಲಮಃ ಸಮೀಪ ಉಪಾತಿಷ್ಠದ್ ಈಶ್ವರರಾಜತ್ವಸ್ಯಾನುಷ್ಠಾನಂ ತದೈವ ಭವಿಷ್ಯತೀತಿ ಲೋಕೈರನ್ವಭೂಯತ, ತಸ್ಮಾತ್ ಸ ಶ್ರೋತೃಭ್ಯಃ ಪುನರ್ದೃಷ್ಟಾನ್ತಕಥಾಮ್ ಉತ್ಥಾಪ್ಯ ಕಥಯಾಮಾಸ|
12 ೧೨ ಅದೇನೆಂದರೆ, “ಶ್ರೀಮಂತನಾದ ಒಬ್ಬ ಮನುಷ್ಯನು ತಾನು ರಾಜ್ಯಾಧಿಕಾರವನ್ನು ಪಡೆದುಕೊಂಡು ಬರಬೇಕೆಂದು ದೂರದೇಶಕ್ಕೆ ಹೊರಟನು.
ಕೋಪಿ ಮಹಾಲ್ಲೋಕೋ ನಿಜಾರ್ಥಂ ರಾಜತ್ವಪದಂ ಗೃಹೀತ್ವಾ ಪುನರಾಗನ್ತುಂ ದೂರದೇಶಂ ಜಗಾಮ|
13 ೧೩ ಹೊರಡುವಾಗ ತನ್ನ ಆಳುಗಳಲ್ಲಿ ಹತ್ತು ಮಂದಿಯನ್ನು ಕರೆದು ಅವರಿಗೆ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟು, ‘ನಾನು ಬರುವ ತನಕ ವ್ಯಾಪಾರಮಾಡಿಕೊಂಡಿರಿ’ ಎಂದು ಹೇಳಿ ಹೊರಟು ಹೋದನು.
ಯಾತ್ರಾಕಾಲೇ ನಿಜಾನ್ ದಶದಾಸಾನ್ ಆಹೂಯ ದಶಸ್ವರ್ಣಮುದ್ರಾ ದತ್ತ್ವಾ ಮಮಾಗಮನಪರ್ಯ್ಯನ್ತಂ ವಾಣಿಜ್ಯಂ ಕುರುತೇತ್ಯಾದಿದೇಶ|
14 ೧೪ ಆದರೆ ಅವನ ಪಟ್ಟಣದ ನಿವಾಸಿಗಳು ಅವನನ್ನು ದ್ವೇಷಿಸಿ ಅವನ ಹಿಂದೆ ರಾಯಭಾರಿಗಳನ್ನು ಕಳುಹಿಸಿ ‘ನೀನು ನಮ್ಮ ಮೇಲೆ ದೊರೆತನಮಾಡುವುದು ನಮಗೆ ಇಷ್ಟವಿಲ್ಲ’ ಎಂದು ಹೇಳಿಸಿದರು.
ಕಿನ್ತು ತಸ್ಯ ಪ್ರಜಾಸ್ತಮವಜ್ಞಾಯ ಮನುಷ್ಯಮೇನಮ್ ಅಸ್ಮಾಕಮುಪರಿ ರಾಜತ್ವಂ ನ ಕಾರಯಿವ್ಯಾಮ ಇಮಾಂ ವಾರ್ತ್ತಾಂ ತನ್ನಿಕಟೇ ಪ್ರೇರಯಾಮಾಸುಃ|
15 ೧೫ ಆ ಮೇಲೆ ಅವನು ರಾಜ್ಯಾಧಿಕಾರವನ್ನು ಪಡೆದುಕೊಂಡು ಹಿಂತಿರುಗಿ ಬಂದು, ತಾನು ಹಣವನ್ನು ಕೊಟ್ಟಿದ್ದ ಆಳುಗಳು ವ್ಯಾಪಾರದಿಂದ ಎಷ್ಟೆಷ್ಟು ಲಾಭ ಸಂಪಾದಿಸಿಕೊಂಡಿದ್ದಾರೆಂದು ತಿಳಿದುಕೊಳ್ಳುವುದಕ್ಕಾಗಿ, ಅವರನ್ನು ತನ್ನ ಬಳಿಗೆ ಕರೆಯಿಸಿದನು.
ಅಥ ಸ ರಾಜತ್ವಪದಂ ಪ್ರಾಪ್ಯಾಗತವಾನ್ ಏಕೈಕೋ ಜನೋ ಬಾಣಿಜ್ಯೇನ ಕಿಂ ಲಬ್ಧವಾನ್ ಇತಿ ಜ್ಞಾತುಂ ಯೇಷು ದಾಸೇಷು ಮುದ್ರಾ ಅರ್ಪಯತ್ ತಾನ್ ಆಹೂಯಾನೇತುಮ್ ಆದಿದೇಶ|
16 ೧೬ ಮೊದಲನೆಯವನು ಆತನ ಮುಂದೆ ಬಂದು, ‘ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಹತ್ತು ನಾಣ್ಯಗಳು ಸಂಪಾದನೆಯಾದವು’ ಅನ್ನಲು,
ತದಾ ಪ್ರಥಮ ಆಗತ್ಯ ಕಥಿತವಾನ್, ಹೇ ಪ್ರಭೋ ತವ ತಯೈಕಯಾ ಮುದ್ರಯಾ ದಶಮುದ್ರಾ ಲಬ್ಧಾಃ|
17 ೧೭ ಅವನು ಅವನಿಗೆ, ‘ಭಲಾ! ನೀನು ಒಳ್ಳೆಯ ಆಳು, ನೀನು ಬಹು ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿದ್ದರಿಂದ ಹತ್ತು ಗ್ರಾಮಗಳ ಮೇಲೆ ಅಧಿಕಾರಿಯಾಗಿರು’ ಎಂದು ಹೇಳಿದನು.
ತತಃ ಸ ಉವಾಚ ತ್ವಮುತ್ತಮೋ ದಾಸಃ ಸ್ವಲ್ಪೇನ ವಿಶ್ವಾಸ್ಯೋ ಜಾತ ಇತಃ ಕಾರಣಾತ್ ತ್ವಂ ದಶನಗರಾಣಾಮ್ ಅಧಿಪೋ ಭವ|
18 ೧೮ ಎರಡನೆಯವನು ಬಂದು, ‘ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಐದು ನಾಣ್ಯಗಳು ದೊರಕಿದವು’ ಅನ್ನಲು,
ದ್ವಿತೀಯ ಆಗತ್ಯ ಕಥಿತವಾನ್, ಹೇ ಪ್ರಭೋ ತವೈಕಯಾ ಮುದ್ರಯಾ ಪಞ್ಚಮುದ್ರಾ ಲಬ್ಧಾಃ|
19 ೧೯ ಅವನು ಆ ಆಳಿಗೆ, ‘ನೀನು ಸಹ ಐದು ಗ್ರಾಮಗಳ ಮೇಲೆ ಅಧಿಕಾರಿಯಾಗಿರು’ ಎಂದು ಹೇಳಿದನು.
ತತಃ ಸ ಉವಾಚ, ತ್ವಂ ಪಞ್ಚಾನಾಂ ನಗರಾಣಾಮಧಿಪತಿ ರ್ಭವ|
20 ೨೦ ಬಳಿಕ ಮತ್ತೊಬ್ಬನು ಬಂದು, ‘ದೊರೆಯೇ, ಇಗೋ ನೀನು ಕೊಟ್ಟ ನಾಣ್ಯ. ನೀನು ಇಡದೆಯಿರುವುದನ್ನು ಎತ್ತಿಕೊಂಡು ಹೋಗುವವನು, ಬಿತ್ತದೆಯಿರುವುದನ್ನು ಕೊಯ್ಯುವ ಕಠಿಣ ಮನುಷ್ಯನು ಎಂದು ನಿನಗೆ ಹೆದರಿಕೊಂಡು ಇದನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟುಕೊಂಡೆನು’ ಅಂದನು.
ತತೋನ್ಯ ಆಗತ್ಯ ಕಥಯಾಮಾಸ, ಹೇ ಪ್ರಭೋ ಪಶ್ಯ ತವ ಯಾ ಮುದ್ರಾ ಅಹಂ ವಸ್ತ್ರೇ ಬದ್ಧ್ವಾಸ್ಥಾಪಯಂ ಸೇಯಂ|
21 ೨೧
ತ್ವಂ ಕೃಪಣೋ ಯನ್ನಾಸ್ಥಾಪಯಸ್ತದಪಿ ಗೃಹ್ಲಾಸಿ, ಯನ್ನಾವಪಸ್ತದೇವ ಚ ಛಿನತ್ಸಿ ತತೋಹಂ ತ್ವತ್ತೋ ಭೀತಃ|
22 ೨೨ ಅದಕ್ಕೆ ಅವನು, ‘ನೀನು ಕೆಟ್ಟ ಆಳು, ನಿನ್ನ ಮಾತಿನ ಮೇಲೆಯೇ ನಿನಗೆ ತೀರ್ಪುಮಾಡುತ್ತೇನೆ. ನಾನು ಇಡದೆಯಿರುವುದನ್ನು ಎತ್ತಿಕೊಂಡು ಹೋಗುವವನು, ಬಿತ್ತದೆಯಿರುವುದನ್ನು ಕೊಯ್ಯುವ ಉಗ್ರವಾದ ಮನುಷ್ಯನು ಎಂದು ತಿಳಿದಿರುವೆಯಾ?
ತದಾ ಸ ಜಗಾದ, ರೇ ದುಷ್ಟದಾಸ ತವ ವಾಕ್ಯೇನ ತ್ವಾಂ ದೋಷಿಣಂ ಕರಿಷ್ಯಾಮಿ, ಯದಹಂ ನಾಸ್ಥಾಪಯಂ ತದೇವ ಗೃಹ್ಲಾಮಿ, ಯದಹಂ ನಾವಪಞ್ಚ ತದೇವ ಛಿನದ್ಮಿ, ಏತಾದೃಶಃ ಕೃಪಣೋಹಮಿತಿ ಯದಿ ತ್ವಂ ಜಾನಾಸಿ,
23 ೨೩ ಹಾಗಾದರೆ ನೀನು ನನ್ನ ಹಣವನ್ನು ಬಡ್ಡಿಗೆ ಯಾಕೆ ಕೊಡಲಿಲ್ಲ? ಆ ಮೇಲೆ ನಾನು ಬಂದು ಅದನ್ನು ಬಡ್ಡಿ ಸಹಿತ ತೆಗೆದುಕೊಳ್ಳುತ್ತಿದ್ದೆನು’ ಎಂದು ಹೇಳಿ,
ತರ್ಹಿ ಮಮ ಮುದ್ರಾ ಬಣಿಜಾಂ ನಿಕಟೇ ಕುತೋ ನಾಸ್ಥಾಪಯಃ? ತಯಾ ಕೃತೇಽಹಮ್ ಆಗತ್ಯ ಕುಸೀದೇನ ಸಾರ್ದ್ಧಂ ನಿಜಮುದ್ರಾ ಅಪ್ರಾಪ್ಸ್ಯಮ್|
24 ೨೪ ಹತ್ತಿರ ನಿಂತಿದ್ದವರಿಗೆ, ‘ಆ ನಾಣ್ಯವನ್ನು ಅವನಿಂದ ತೆಗೆದುಕೊಂಡು ಹತ್ತು ಚಿನ್ನದ ನಾಣ್ಯಗಳುಳ್ಳವನಿಗೆ ಕೊಡಿರಿ’ ಎಂದು ಹೇಳಿದನು.
ಪಶ್ಚಾತ್ ಸ ಸಮೀಪಸ್ಥಾನ್ ಜನಾನ್ ಆಜ್ಞಾಪಯತ್ ಅಸ್ಮಾತ್ ಮುದ್ರಾ ಆನೀಯ ಯಸ್ಯ ದಶಮುದ್ರಾಃ ಸನ್ತಿ ತಸ್ಮೈ ದತ್ತ|
25 ೨೫ ಅವರು, ‘ದೊರೆಯೇ, ಹತ್ತು ನಾಣ್ಯಗಳು ಅವನಲ್ಲಿ ಅವೆಯಲ್ಲಾ’ ಎಂದು ಅವನಿಗೆ ಹೇಳಿದರು.
ತೇ ಪ್ರೋಚುಃ ಪ್ರಭೋಽಸ್ಯ ದಶಮುದ್ರಾಃ ಸನ್ತಿ|
26 ೨೬ ಅದಕ್ಕವನು, ‘ಇದ್ದವರಿಗೆಲ್ಲಾ ಕೊಡಲ್ಪಡುವುದು, ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು’ ಎಂದು ನಾನು ನಿಮಗೆ ಹೇಳುತ್ತೇನೆ
ಯುಷ್ಮಾನಹಂ ವದಾಮಿ ಯಸ್ಯಾಶ್ರಯೇ ವದ್ಧತೇ ಽಧಿಕಂ ತಸ್ಮೈ ದಾಯಿಷ್ಯತೇ, ಕಿನ್ತು ಯಸ್ಯಾಶ್ರಯೇ ನ ವರ್ದ್ಧತೇ ತಸ್ಯ ಯದ್ಯದಸ್ತಿ ತದಪಿ ತಸ್ಮಾನ್ ನಾಯಿಷ್ಯತೇ|
27 ೨೭ ಮತ್ತು ತಮ್ಮ ಮೇಲೆ ನಾನು ದೊರೆತನ ಮಾಡುವುದು ಇಷ್ಟವಿಲ್ಲವೆಂದು ಹೇಳಿದ ಆ ನನ್ನ ವೈರಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ” ಅಂದನು.
ಕಿನ್ತು ಮಮಾಧಿಪತಿತ್ವಸ್ಯ ವಶತ್ವೇ ಸ್ಥಾತುಮ್ ಅಸಮ್ಮನ್ಯಮಾನಾ ಯೇ ಮಮ ರಿಪವಸ್ತಾನಾನೀಯ ಮಮ ಸಮಕ್ಷಂ ಸಂಹರತ|
28 ೨೮ ಯೇಸು ಈ ಮಾತುಗಳನ್ನು ಹೇಳಿದ ಮೇಲೆ ಗಟ್ಟಾ ಹತ್ತಿ ಯೆರೂಸಲೇಮಿಗೆ ಮುಂದಾಗಿ ಹೋದನು.
ಇತ್ಯುಪದೇಶಕಥಾಂ ಕಥಯಿತ್ವಾ ಸೋಗ್ರಗಃ ಸನ್ ಯಿರೂಶಾಲಮಪುರಂ ಯಯೌ|
29 ೨೯ ಅನಂತರ ಆತನು ಎಣ್ಣೆಮರಗಳ ಗುಡ್ಡ ಎನಿಸಿಕೊಳ್ಳುವ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ ಶಿಷ್ಯರಲ್ಲಿ ಇಬ್ಬರನ್ನು ಕರೆದು,
ತತೋ ಬೈತ್ಫಗೀಬೈಥನೀಯಾಗ್ರಾಮಯೋಃ ಸಮೀಪೇ ಜೈತುನಾದ್ರೇರನ್ತಿಕಮ್ ಇತ್ವಾ ಶಿಷ್ಯದ್ವಯಮ್ ಇತ್ಯುಕ್ತ್ವಾ ಪ್ರೇಷಯಾಮಾಸ,
30 ೩೦ “ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ, ಅದರೊಳಗೆ ಹೋಗುತ್ತಿರುವಾಗಲೇ ಅಲ್ಲಿ ಕಟ್ಟಿರುವ ಒಂದು ಕತ್ತೆಮರಿಯನ್ನು ಕಾಣುವಿರಿ. ಇದುವರೆಗೆ ಅದರ ಮೇಲೆ ಯಾರೂ ಹತ್ತಿರುವುದಿಲ್ಲ, ಅದನ್ನು ಬಿಚ್ಚಿ ಕರೆತನ್ನಿರಿ.
ಯುವಾಮಮುಂ ಸಮ್ಮುಖಸ್ಥಗ್ರಾಮಂ ಪ್ರವಿಶ್ಯೈವ ಯಂ ಕೋಪಿ ಮಾನುಷಃ ಕದಾಪಿ ನಾರೋಹತ್ ತಂ ಗರ್ದ್ದಭಶಾವಕಂ ಬದ್ಧಂ ದ್ರಕ್ಷ್ಯಥಸ್ತಂ ಮೋಚಯಿತ್ವಾನಯತಂ|
31 ೩೧ ಯಾವನಾದರೂ ನಿಮ್ಮನ್ನು ‘ಮರಿಯನ್ನು ಯಾಕೆ ಬಿಚ್ಚುತ್ತೀರಿ?’ ಎಂದು ಕೇಳಿದರೆ ‘ಇದು ಕರ್ತನಿಗೆ ಬೇಕಾಗಿದೆ ಅನ್ನಿರಿ’” ಎಂದು ಹೇಳಿಕಳುಹಿಸಿದನು.
ತತ್ರ ಕುತೋ ಮೋಚಯಥಃ? ಇತಿ ಚೇತ್ ಕೋಪಿ ವಕ್ಷ್ಯತಿ ತರ್ಹಿ ವಕ್ಷ್ಯಥಃ ಪ್ರಭೇರತ್ರ ಪ್ರಯೋಜನಮ್ ಆಸ್ತೇ|
32 ೩೨ ಕಳುಹಿಸಲ್ಪಟ್ಟವರು ಹೋಗಿ ಆತನು ತಮಗೆ ಹೇಳಿದಂತೆಯೇ ಕಂಡರು.
ತದಾ ತೌ ಪ್ರರಿತೌ ಗತ್ವಾ ತತ್ಕಥಾನುಸಾರೇಣ ಸರ್ವ್ವಂ ಪ್ರಾಪ್ತೌ|
33 ೩೩ ಅವರು ಆ ಕತ್ತೆಮರಿಯನ್ನು ಬಿಚ್ಚುತ್ತಿರುವಾಗ ಅದರ ಯಜಮಾನನು, “ಈ ಮರಿಯನ್ನು ಯಾಕೆ ಬಿಚ್ಚುತ್ತೀರಿ?” ಎಂದು ಅವರನ್ನು ಕೇಳಿದ್ದಕ್ಕೆ
ಗರ್ದಭಶಾವಕಮೋಚನಕಾಲೇ ತತ್ವಾಮಿನ ಊಚುಃ, ಗರ್ದಭಶಾವಕಂ ಕುತೋ ಮೋಚಯಥಃ?
34 ೩೪ ಅವರು, “ಇದು ಕರ್ತನಿಗೆ ಬೇಕಾಗಿದೆ” ಎಂದು ಹೇಳಿದರು.
ತಾವೂಚತುಃ ಪ್ರಭೋರತ್ರ ಪ್ರಯೋಜನಮ್ ಆಸ್ತೇ|
35 ೩೫ ಅದನ್ನು ಯೇಸುವಿನ ಬಳಿಗೆ ತಂದು ತಮ್ಮ ಬಟ್ಟೆಗಳನ್ನು ಆ ಕತ್ತೆಮರಿಯ ಮೇಲೆ ಹಾಕಿ ಯೇಸುವನ್ನು ಕುಳ್ಳಿರಿಸಿದರು.
ಪಶ್ಚಾತ್ ತೌ ತಂ ಗರ್ದಭಶಾವಕಂ ಯೀಶೋರನ್ತಿಕಮಾನೀಯ ತತ್ಪೃಷ್ಠೇ ನಿಜವಸನಾನಿ ಪಾತಯಿತ್ವಾ ತದುಪರಿ ಯೀಶುಮಾರೋಹಯಾಮಾಸತುಃ|
36 ೩೬ ಆತನು ಹೋಗುತ್ತಿರುವಾಗ ಅವರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು.
ಅಥ ಯಾತ್ರಾಕಾಲೇ ಲೋಕಾಃ ಪಥಿ ಸ್ವವಸ್ತ್ರಾಣಿ ಪಾತಯಿತುಮ್ ಆರೇಭಿರೇ|
37 ೩೭ ಆತನು ಪಟ್ಟಣವನ್ನು ಸಮೀಪಿಸಿ ಎಣ್ಣೆಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಬಂದಾಗ ಶಿಷ್ಯರ ಗುಂಪೆಲ್ಲಾ ಸಂತೋಷಪಡುತ್ತಾ ತಾವು ಕಂಡಿದ್ದ ಎಲ್ಲಾ ಮಹತ್ಕಾರ್ಯಗಳ ವಿಷಯದಲ್ಲಿ,
ಅಪರಂ ಜೈತುನಾದ್ರೇರುಪತ್ಯಕಾಮ್ ಇತ್ವಾ ಶಿಷ್ಯಸಂಘಃ ಪೂರ್ವ್ವದೃಷ್ಟಾನಿ ಮಹಾಕರ್ಮ್ಮಾಣಿ ಸ್ಮೃತ್ವಾ,
38 ೩೮ “ಕರ್ತನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ, ಪರಲೋಕದಲ್ಲಿ ಸಮಾಧಾನ, ಮೇಲಣಲೋಕಗಳಲ್ಲಿ ಮಹಿಮೆ” ಎಂದು ಮಹಾ ಶಬ್ದದಿಂದ ದೇವರನ್ನು ಕೊಂಡಾಡುವುದಕ್ಕೆ ತೊಡಗಿದರು.
ಯೋ ರಾಜಾ ಪ್ರಭೋ ರ್ನಾಮ್ನಾಯಾತಿ ಸ ಧನ್ಯಃ ಸ್ವರ್ಗೇ ಕುಶಲಂ ಸರ್ವ್ವೋಚ್ಚೇ ಜಯಧ್ವನಿ ರ್ಭವತು, ಕಥಾಮೇತಾಂ ಕಥಯಿತ್ವಾ ಸಾನನ್ದಮ್ ಉಚೈರೀಶ್ವರಂ ಧನ್ಯಂ ವಕ್ತುಮಾರೇಭೇ|
39 ೩೯ ಜನರ ಗುಂಪಿನೊಳಗಿದ್ದ ಫರಿಸಾಯರಲ್ಲಿ ಕೆಲವರು ಆತನಿಗೆ, “ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು” ಎಂದು ಹೇಳಿದ್ದಕ್ಕೆ,
ತದಾ ಲೋಕಾರಣ್ಯಮಧ್ಯಸ್ಥಾಃ ಕಿಯನ್ತಃ ಫಿರೂಶಿನಸ್ತತ್ ಶ್ರುತ್ವಾ ಯೀಶುಂ ಪ್ರೋಚುಃ, ಹೇ ಉಪದೇಶಕ ಸ್ವಶಿಷ್ಯಾನ್ ತರ್ಜಯ|
40 ೪೦ ಆತನು, “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು” ಎಂದು ನಿಮಗೆ ಹೇಳುತ್ತೇನೆ ಅಂದನು.
ಸ ಉವಾಚ, ಯುಷ್ಮಾನಹಂ ವದಾಮಿ ಯದ್ಯಮೀ ನೀರವಾಸ್ತಿಷ್ಠನ್ತಿ ತರ್ಹಿ ಪಾಷಾಣಾ ಉಚೈಃ ಕಥಾಃ ಕಥಯಿಷ್ಯನ್ತಿ|
41 ೪೧ ತರುವಾಯ ಆತನು ಯೆರೂಸಲೇಮ್ ಪಟ್ಟಣದ ಸಮೀಪಕ್ಕೆ ಬಂದಾಗ ಆ ಪಟ್ಟಣವನ್ನು ನೋಡಿ ಅದರ ವಿಷಯವಾಗಿ ಕಣ್ಣೀರಿಡುತ್ತಾ,
ಪಶ್ಚಾತ್ ತತ್ಪುರಾನ್ತಿಕಮೇತ್ಯ ತದವಲೋಕ್ಯ ಸಾಶ್ರುಪಾತಂ ಜಗಾದ,
42 ೪೨ “ನೀನಾದರೂ ಸಮಾಧಾನಕ್ಕೆ ಬೇಕಾದದ್ದನ್ನು ಇದೇ ದಿನದಲ್ಲಿ ತಿಳಿದುಕೊಂಡಿದ್ದರೆ ಎಷ್ಟೋ ಒಳ್ಳೆಯದು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ.
ಹಾ ಹಾ ಚೇತ್ ತ್ವಮಗ್ರೇಽಜ್ಞಾಸ್ಯಥಾಃ, ತವಾಸ್ಮಿನ್ನೇವ ದಿನೇ ವಾ ಯದಿ ಸ್ವಮಙ್ಗಲಮ್ ಉಪಾಲಪ್ಸ್ಯಥಾಃ, ತರ್ಹ್ಯುತ್ತಮಮ್ ಅಭವಿಷ್ಯತ್, ಕಿನ್ತು ಕ್ಷಣೇಸ್ಮಿನ್ ತತ್ತವ ದೃಷ್ಟೇರಗೋಚರಮ್ ಭವತಿ|
43 ೪೩ ದೇವರು ನಿನಗೆ ದರ್ಶನಕೊಟ್ಟ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲವಾದ್ದರಿಂದ, ನಿನ್ನ ವೈರಿಗಳು ನಿನ್ನ ಸುತ್ತಲೂ ಒಡ್ದುಕಟ್ಟಿ, ಮುತ್ತಿಗೆ ಹಾಕಿ, ಎಲ್ಲಾ ಕಡೆಗಳಿಂದ ನಿನ್ನನ್ನು ಒಂದುಗೂಡಿಸಿ, ನಿನ್ನನ್ನೂ ನಿನ್ನೊಳಗಿರುವ ನಿನ್ನ ಜನರನ್ನೂ ನಿರ್ಮೂಲಮಾಡಿ, ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿನಗಳು ನಿನ್ನ ಮೇಲೆ ಬರುವವು” ಅಂದನು.
ತ್ವಂ ಸ್ವತ್ರಾಣಕಾಲೇ ನ ಮನೋ ನ್ಯಧತ್ಥಾ ಇತಿ ಹೇತೋ ರ್ಯತ್ಕಾಲೇ ತವ ರಿಪವಸ್ತ್ವಾಂ ಚತುರ್ದಿಕ್ಷು ಪ್ರಾಚೀರೇಣ ವೇಷ್ಟಯಿತ್ವಾ ರೋತ್ಸ್ಯನ್ತಿ
44 ೪೪
ಬಾಲಕೈಃ ಸಾರ್ದ್ಧಂ ಭೂಮಿಸಾತ್ ಕರಿಷ್ಯನ್ತಿ ಚ ತ್ವನ್ಮಧ್ಯೇ ಪಾಷಾಣೈಕೋಪಿ ಪಾಷಾಣೋಪರಿ ನ ಸ್ಥಾಸ್ಯತಿ ಚ, ಕಾಲ ಈದೃಶ ಉಪಸ್ಥಾಸ್ಯತಿ|
45 ೪೫ ಬಳಿಕ ಆತನು ದೇವಾಲಯಕ್ಕೆ ಹೋಗಿ ವ್ಯಾಪಾರಮಾಡುವವರನ್ನು ಹೊರಹಾಕುವುದಕ್ಕೆ ಪ್ರಾರಂಭಿಸಿ ಅವರಿಗೆ,
ಅಥ ಮಧ್ಯೇಮನ್ದಿರಂ ಪ್ರವಿಶ್ಯ ತತ್ರತ್ಯಾನ್ ಕ್ರಯಿವಿಕ್ರಯಿಣೋ ಬಹಿಷ್ಕುರ್ವ್ವನ್
46 ೪೬ “‘ನನ್ನ ಆಲಯವು ಪ್ರಾರ್ಥನಾಲಯವಾಗಿರುವುದು’ ಎಂದು ಬರೆಯಲ್ಪಟ್ಟಿದೆಯಲ್ಲಾ, ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ” ಎಂದು ಹೇಳಿ ಅವರನ್ನು ಹೊರಗೆ ಅಟ್ಟಿದನು.
ಅವದತ್ ಮದ್ಗೃಹಂ ಪ್ರಾರ್ಥನಾಗೃಹಮಿತಿ ಲಿಪಿರಾಸ್ತೇ ಕಿನ್ತು ಯೂಯಂ ತದೇವ ಚೈರಾಣಾಂ ಗಹ್ವರಂ ಕುರುಥ|
47 ೪೭ ಅಲ್ಲದೆ ಆತನು ಪ್ರತಿದಿನ ದೇವಾಲಯದಲ್ಲಿ ಬಂದು ಬೋಧನೆ ಮಾಡುತ್ತಿದ್ದನು. ಅಷ್ಟರಲ್ಲಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಪ್ರಜೆಗಳಲ್ಲಿ ನಾಯಕರೂ ಆತನನ್ನು ಕೊಲ್ಲುವುದಕ್ಕೆ ಸಂದರ್ಭನೋಡುತ್ತಿದ್ದರು.
ಪಶ್ಚಾತ್ ಸ ಪ್ರತ್ಯಹಂ ಮಧ್ಯೇಮನ್ದಿರಮ್ ಉಪದಿದೇಶ; ತತಃ ಪ್ರಧಾನಯಾಜಕಾ ಅಧ್ಯಾಪಕಾಃ ಪ್ರಾಚೀನಾಶ್ಚ ತಂ ನಾಶಯಿತುಂ ಚಿಚೇಷ್ಟಿರೇ;
48 ೪೮ ಆದರೆ ಜನರೆಲ್ಲರು ಆತನ ಹತ್ತಿರದಲ್ಲಿದ್ದುಕೊಂಡು ಬೋಧನೆಯನ್ನು ಗಮನಿಸಿ ಕೇಳುತ್ತಿದ್ದುದರಿಂದ ಏನು ಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ.
ಕಿನ್ತು ತದುಪದೇಶೇ ಸರ್ವ್ವೇ ಲೋಕಾ ನಿವಿಷ್ಟಚಿತ್ತಾಃ ಸ್ಥಿತಾಸ್ತಸ್ಮಾತ್ ತೇ ತತ್ಕರ್ತ್ತುಂ ನಾವಕಾಶಂ ಪ್ರಾಪುಃ|

< ಲೂಕನು 19 >