< ಲೂಕನು 10 >

1 ಇದಾದ ಮೇಲೆ ಕರ್ತನು ಇನ್ನೂ ಎಪ್ಪತ್ತು ಮಂದಿಯನ್ನು ತನ್ನ ಶಿಷ್ಯರನ್ನಾಗಿ ನೇಮಿಸಿ, ಅವರನ್ನು ಇಬ್ಬಿಬ್ಬರಾಗಿ ತಾನು ಹೋಗಬೇಕೆಂದಿದ್ದ ಪ್ರತಿಯೊಂದು ಊರಿಗೂ ಪ್ರತಿಯೊಂದು ಸ್ಥಳಕ್ಕೂ ಮುಂದಾಗಿ ಕಳುಹಿಸಿದನು.
ತತಃ ಪರಂ ಪ್ರಭುರಪರಾನ್ ಸಪ್ತತಿಶಿಷ್ಯಾನ್ ನಿಯುಜ್ಯ ಸ್ವಯಂ ಯಾನಿ ನಗರಾಣಿ ಯಾನಿ ಸ್ಥಾನಾನಿ ಚ ಗಮಿಷ್ಯತಿ ತಾನಿ ನಗರಾಣಿ ತಾನಿ ಸ್ಥಾನಾನಿ ಚ ಪ್ರತಿ ದ್ವೌ ದ್ವೌ ಜನೌ ಪ್ರಹಿತವಾನ್|
2 ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ, “ಬೆಳೆಯು ಹೇರಳವಾಗಿದೆ, ಕೊಯ್ಲುಗಾರರು ಕೆಲವರೂ ಮಾತ್ರ ಇದ್ದಾರೆ; ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸಬೇಕೆಂದು ಬೆಳೆಯ ಯಜಮಾನನನ್ನು ಬೇಡಿಕೊಳ್ಳಿರಿ.
ತೇಭ್ಯಃ ಕಥಯಾಮಾಸ ಚ ಶಸ್ಯಾನಿ ಬಹೂನೀತಿ ಸತ್ಯಂ ಕಿನ್ತು ಛೇದಕಾ ಅಲ್ಪೇ; ತಸ್ಮಾದ್ಧೇತೋಃ ಶಸ್ಯಕ್ಷೇತ್ರೇ ಛೇದಕಾನ್ ಅಪರಾನಪಿ ಪ್ರೇಷಯಿತುಂ ಕ್ಷೇತ್ರಸ್ವಾಮಿನಂ ಪ್ರಾರ್ಥಯಧ್ವಂ|
3 ಹೋಗಿರಿ, ತೋಳಗಳ ನಡುವೆ ಕುರಿಮರಿಗಳಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇನೆ.
ಯೂಯಂ ಯಾತ, ಪಶ್ಯತ, ವೃಕಾಣಾಂ ಮಧ್ಯೇ ಮೇಷಶಾವಕಾನಿವ ಯುಷ್ಮಾನ್ ಪ್ರಹಿಣೋಮಿ|
4 ನೋಡಿರಿ, ನೀವು ಹೋಗುವಾಗ ಹಣದ ಚೀಲವನ್ನಾಗಲಿ, ಪ್ರವಾಸದ ಚೀಲವನ್ನಾಗಲಿ, ಕಾಲಿಗೆ ಕೆರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ದಾರಿಯಲ್ಲಿ ಯಾರಿಗೂ ವಂದಿಸಬೇಡಿರಿ.
ಯೂಯಂ ಕ್ಷುದ್ರಂ ಮಹದ್ ವಾ ವಸನಸಮ್ಪುಟಕಂ ಪಾದುಕಾಶ್ಚ ಮಾ ಗೃಹ್ಲೀತ, ಮಾರ್ಗಮಧ್ಯೇ ಕಮಪಿ ಮಾ ನಮತ ಚ|
5 ಇದಲ್ಲದೆ ನೀವು ಯಾವ ಮನೆಯೊಳಗೆ ಹೋದರೂ, ‘ಈ ಮನೆಗೆ ಸಮಾಧಾನವಾಗಲಿ’ ಎಂದು ಮೊದಲು ಹೇಳಿರಿ.
ಅಪರಞ್ಚ ಯೂಯಂ ಯದ್ ಯತ್ ನಿವೇಶನಂ ಪ್ರವಿಶಥ ತತ್ರ ನಿವೇಶನಸ್ಯಾಸ್ಯ ಮಙ್ಗಲಂ ಭೂಯಾದಿತಿ ವಾಕ್ಯಂ ಪ್ರಥಮಂ ವದತ|
6 ಸಮಾಧಾನ ಹೊಂದಲು ಯೋಗ್ಯನು ಆ ಮನೆಯಲ್ಲಿ ಇದ್ದರೆ ನಿಮ್ಮ ಸಮಾಧಾನವು ಅವನ ಮೇಲೆ ನಿಲ್ಲುವುದು, ಇಲ್ಲದಿದ್ದರೆ ಅದು ನಿಮಗೆ ಹಿಂತಿರುಗುವುದು.
ತಸ್ಮಾತ್ ತಸ್ಮಿನ್ ನಿವೇಶನೇ ಯದಿ ಮಙ್ಗಲಪಾತ್ರಂ ಸ್ಥಾಸ್ಯತಿ ತರ್ಹಿ ತನ್ಮಙ್ಗಲಂ ತಸ್ಯ ಭವಿಷ್ಯತಿ, ನೋಚೇತ್ ಯುಷ್ಮಾನ್ ಪ್ರತಿ ಪರಾವರ್ತ್ತಿಷ್ಯತೇ|
7 ಆ ಮನೆಯಲ್ಲಿಯೇ ಇದ್ದುಕೊಂಡು ಅವರು ಕೊಡುವಂಥದನ್ನು ಊಟಮಾಡಿರಿ, ಕುಡಿಯಿರಿ. ಆಳು ತನ್ನ ಕೂಲಿಗೆ ಯೋಗ್ಯನಷ್ಟೆ. ಒಂದು ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಹೋಗಿ ಇಳಿದುಕೊಳ್ಳಬೇಡಿರಿ.
ಅಪರಞ್ಚ ತೇ ಯತ್ಕಿಞ್ಚಿದ್ ದಾಸ್ಯನ್ತಿ ತದೇವ ಭುಕ್ತ್ವಾ ಪೀತ್ವಾ ತಸ್ಮಿನ್ನಿವೇಶನೇ ಸ್ಥಾಸ್ಯಥ; ಯತಃ ಕರ್ಮ್ಮಕಾರೀ ಜನೋ ಭೃತಿಮ್ ಅರ್ಹತಿ; ಗೃಹಾದ್ ಗೃಹಂ ಮಾ ಯಾಸ್ಯಥ|
8 ಮತ್ತು ನೀವು ಯಾವ ಊರಿಗಾದರೂ ಹೋದ ಮೇಲೆ ಆ ಊರಿನ ಜನರು ನಿಮ್ಮನ್ನು ಸೇರಿಸಿಕೊಂಡರೆ ಅವರು ನಿಮಗೆ ಬಡಿಸಿದ್ದನ್ನು ಊಟಮಾಡಿರಿ.
ಅನ್ಯಚ್ಚ ಯುಷ್ಮಾಸು ಕಿಮಪಿ ನಗರಂ ಪ್ರವಿಷ್ಟೇಷು ಲೋಕಾ ಯದಿ ಯುಷ್ಮಾಕಮ್ ಆತಿಥ್ಯಂ ಕರಿಷ್ಯನ್ತಿ, ತರ್ಹಿ ಯತ್ ಖಾದ್ಯಮ್ ಉಪಸ್ಥಾಸ್ಯನ್ತಿ ತದೇವ ಖಾದಿಷ್ಯಥ|
9 ಅಲ್ಲಿರುವ ರೋಗಿಗಳನ್ನು ವಾಸಿಮಾಡಿ ಅವರಿಗೆ, ‘ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ’ ಎಂದು ಹೇಳಿರಿ.
ತನ್ನಗರಸ್ಥಾನ್ ರೋಗಿಣಃ ಸ್ವಸ್ಥಾನ್ ಕರಿಷ್ಯಥ, ಈಶ್ವರೀಯಂ ರಾಜ್ಯಂ ಯುಷ್ಮಾಕಮ್ ಅನ್ತಿಕಮ್ ಆಗಮತ್ ಕಥಾಮೇತಾಞ್ಚ ಪ್ರಚಾರಯಿಷ್ಯಥ|
10 ೧೦ ಆದರೆ ನೀವು ಯಾವ ಊರಿಗಾದರೂ ಹೋದ ಮೇಲೆ ಆ ಜನರು ನಿಮ್ಮನ್ನು ಸ್ವೀಕರಿಸದ್ದಿದ್ದರೆ, ನೀವು ಆ ಊರ ಬೀದಿಗಳಿಗೆ ಬಂದು,
ಕಿನ್ತು ಕಿಮಪಿ ಪುರಂ ಯುಷ್ಮಾಸು ಪ್ರವಿಷ್ಟೇಷು ಲೋಕಾ ಯದಿ ಯುಷ್ಮಾಕಮ್ ಆತಿಥ್ಯಂ ನ ಕರಿಷ್ಯನ್ತಿ, ತರ್ಹಿ ತಸ್ಯ ನಗರಸ್ಯ ಪನ್ಥಾನಂ ಗತ್ವಾ ಕಥಾಮೇತಾಂ ವದಿಷ್ಯಥ,
11 ೧೧ ‘ನಮ್ಮ ಪಾದಗಳಿಗೆ ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮ್ಮ ವಿರುದ್ಧವಾಗಿ ಝಾಡಿಸಿಬಿಡುತ್ತೇವೆ. ಆದಾಗ್ಯೂ ದೇವರ ರಾಜ್ಯವು ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ’ ಎಂಬುದಾಗಿ ಹೇಳಿರಿ.
ಯುಷ್ಮಾಕಂ ನಗರೀಯಾ ಯಾ ಧೂಲ್ಯೋಽಸ್ಮಾಸು ಸಮಲಗನ್ ತಾ ಅಪಿ ಯುಷ್ಮಾಕಂ ಪ್ರಾತಿಕೂಲ್ಯೇನ ಸಾಕ್ಷ್ಯಾರ್ಥಂ ಸಮ್ಪಾತಯಾಮಃ; ತಥಾಪೀಶ್ವರರಾಜ್ಯಂ ಯುಷ್ಮಾಕಂ ಸಮೀಪಮ್ ಆಗತಮ್ ಇತಿ ನಿಶ್ಚಿತಂ ಜಾನೀತ|
12 ೧೨ ಆ ದಿನದಲ್ಲಿ ಅಂತಹ ಊರಿನ ಗತಿಯು ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದು ಎಂದು ನಿಮಗೆ ಹೇಳುತ್ತೇನೆ.
ಅಹಂ ಯುಷ್ಮಭ್ಯಂ ಯಥಾರ್ಥಂ ಕಥಯಾಮಿ, ವಿಚಾರದಿನೇ ತಸ್ಯ ನಗರಸ್ಯ ದಶಾತಃ ಸಿದೋಮೋ ದಶಾ ಸಹ್ಯಾ ಭವಿಷ್ಯತಿ|
13 ೧೩ ಅಯ್ಯೋ ಖೊರಾಜಿನೇ, ಅಯ್ಯೋ ಬೇತ್ಸಾಯಿದವೇ, ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣಿತಟ್ಟು ಹೊದ್ದುಕೊಂಡು, ಬೂದಿಯಲ್ಲಿ ಕುಳಿತುಕೊಂಡು ಪಶ್ಚಾತ್ತಾಪಪಡುತ್ತಿದ್ದರು.
ಹಾ ಹಾ ಕೋರಾಸೀನ್ ನಗರ, ಹಾ ಹಾ ಬೈತ್ಸೈದಾನಗರ ಯುವಯೋರ್ಮಧ್ಯೇ ಯಾದೃಶಾನಿ ಆಶ್ಚರ್ಯ್ಯಾಣಿ ಕರ್ಮ್ಮಾಣ್ಯಕ್ರಿಯನ್ತ, ತಾನಿ ಕರ್ಮ್ಮಾಣಿ ಯದಿ ಸೋರಸೀದೋನೋ ರ್ನಗರಯೋರಕಾರಿಷ್ಯನ್ತ, ತದಾ ಇತೋ ಬಹುದಿನಪೂರ್ವ್ವಂ ತನ್ನಿವಾಸಿನಃ ಶಣವಸ್ತ್ರಾಣಿ ಪರಿಧಾಯ ಗಾತ್ರೇಷು ಭಸ್ಮ ವಿಲಿಪ್ಯ ಸಮುಪವಿಶ್ಯ ಸಮಖೇತ್ಸ್ಯನ್ತ|
14 ೧೪ ಆದರೆ ನ್ಯಾಯವಿಚಾರಣೆಯಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು.
ಅತೋ ವಿಚಾರದಿವಸೇ ಯುಷ್ಮಾಕಂ ದಶಾತಃ ಸೋರಸೀದೋನ್ನಿವಾಸಿನಾಂ ದಶಾ ಸಹ್ಯಾ ಭವಿಷ್ಯತಿ|
15 ೧೫ ಎಲೈ ಕಪೆರ್ನೌಮೇ, ನೀನು ಪರಲೋಕಕ್ಕೆ ಏರಿಸಲ್ಪಡುವಿಯಾ? ಇಲ್ಲ! ಪಾತಾಳಕ್ಕೇ ಇಳಿಯುವಿ. (Hadēs g86)
ಹೇ ಕಫರ್ನಾಹೂಮ್, ತ್ವಂ ಸ್ವರ್ಗಂ ಯಾವದ್ ಉನ್ನತಾ ಕಿನ್ತು ನರಕಂ ಯಾವತ್ ನ್ಯಗ್ಭವಿಷ್ಯಸಿ| (Hadēs g86)
16 ೧೬ ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುವವನಾಗಿದ್ದಾನೆ, ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುವವನಾಗಿದ್ದಾನೆ, ನನ್ನನ್ನು ತಿರಸ್ಕಾರ ಮಾಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ತಿರಸ್ಕಾರ ಮಾಡುವವನಾಗಿದ್ದಾನೆ” ಅಂದನು.
ಯೋ ಜನೋ ಯುಷ್ಮಾಕಂ ವಾಕ್ಯಂ ಗೃಹ್ಲಾತಿ ಸ ಮಮೈವ ವಾಕ್ಯಂ ಗೃಹ್ಲಾತಿ; ಕಿಞ್ಚ ಯೋ ಜನೋ ಯುಷ್ಮಾಕಮ್ ಅವಜ್ಞಾಂ ಕರೋತಿ ಸ ಮಮೈವಾವಜ್ಞಾಂ ಕರೋತಿ; ಯೋ ಜನೋ ಮಮಾವಜ್ಞಾಂ ಕರೋತಿ ಚ ಸ ಮತ್ಪ್ರೇರಕಸ್ಯೈವಾವಜ್ಞಾಂ ಕರೋತಿ|
17 ೧೭ ತರುವಾಯ ಆ ಎಪ್ಪತ್ತು ಮಂದಿಯು ಸಂತೋಷವುಳ್ಳವರಾಗಿ ಹಿಂತಿರುಗಿ ಬಂದು, “ಕರ್ತನೇ, ದೆವ್ವಗಳು ಕೂಡಾ ನಿನ್ನ ಹೆಸರಿನಲ್ಲಿ ನಮಗೆ ಅಧೀನವಾಗುತ್ತವೆ” ಅಂದರು.
ಅಥ ತೇ ಸಪ್ತತಿಶಿಷ್ಯಾ ಆನನ್ದೇನ ಪ್ರತ್ಯಾಗತ್ಯ ಕಥಯಾಮಾಸುಃ, ಹೇ ಪ್ರಭೋ ಭವತೋ ನಾಮ್ನಾ ಭೂತಾ ಅಪ್ಯಸ್ಮಾಕಂ ವಶೀಭವನ್ತಿ|
18 ೧೮ ಯೇಸು ಅವರಿಗೆ, “ಸೈತಾನನು ಮಿಂಚಿನಂತೆ ಆಕಾಶದಿಂದ ಬೀಳುವುದನ್ನು ಕಂಡೆನು.
ತದಾನೀಂ ಸ ತಾನ್ ಜಗಾದ, ವಿದ್ಯುತಮಿವ ಸ್ವರ್ಗಾತ್ ಪತನ್ತಂ ಶೈತಾನಮ್ ಅದರ್ಶಮ್|
19 ೧೯ ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದೇ ಇಲ್ಲ.
ಪಶ್ಯತ ಸರ್ಪಾನ್ ವೃಶ್ಚಿಕಾನ್ ರಿಪೋಃ ಸರ್ವ್ವಪರಾಕ್ರಮಾಂಶ್ಚ ಪದತಲೈ ರ್ದಲಯಿತುಂ ಯುಷ್ಮಭ್ಯಂ ಶಕ್ತಿಂ ದದಾಮಿ ತಸ್ಮಾದ್ ಯುಷ್ಮಾಕಂ ಕಾಪಿ ಹಾನಿ ರ್ನ ಭವಿಷ್ಯತಿ|
20 ೨೦ ಆದರೂ ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿವೆ ಎಂದು ಸಂತೋಷಪಡಿರಿ” ಎಂದು ಹೇಳಿದನು.
ಭೂತಾ ಯುಷ್ಮಾಕಂ ವಶೀಭವನ್ತಿ, ಏತನ್ನಿಮಿತ್ತತ್ ಮಾ ಸಮುಲ್ಲಸತ, ಸ್ವರ್ಗೇ ಯುಷ್ಮಾಕಂ ನಾಮಾನಿ ಲಿಖಿತಾನಿ ಸನ್ತೀತಿ ನಿಮಿತ್ತಂ ಸಮುಲ್ಲಸತ|
21 ೨೧ ಅದೇ ಗಳಿಗೆಯಲ್ಲಿ ಆತನು ಪವಿತ್ರಾತ್ಮನನಿಂದ ಉಲ್ಲಾಸಗೊಂಡು ಹೇಳಿದ್ದೇನಂದರೆ, “ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಮತ್ತು ವಿವೇಕಿಗಳಿಗೂ ಈ ವಿಷಯಗಳನ್ನು ಮರೆಮಾಡಿ, ಮಕ್ಕಳಿಗೆ ಪ್ರಕಟಮಾಡಿರುವುದರಿಂದ ನಿನ್ನನ್ನು ಕೊಂಡಾಡುತ್ತೇನೆ. ಹೌದು, ತಂದೆಯೇ, ಹೀಗೆ ಮಾಡುವುದೇ ಒಳ್ಳೆಯದೆಂದು ನಿನ್ನ ದೃಷ್ಟಿಗೆ ತೋರಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ.
ತದ್ಘಟಿಕಾಯಾಂ ಯೀಶು ರ್ಮನಸಿ ಜಾತಾಹ್ಲಾದಃ ಕಥಯಾಮಾಸ ಹೇ ಸ್ವರ್ಗಪೃಥಿವ್ಯೋರೇಕಾಧಿಪತೇ ಪಿತಸ್ತ್ವಂ ಜ್ಞಾನವತಾಂ ವಿದುಷಾಞ್ಚ ಲೋಕಾನಾಂ ಪುರಸ್ತಾತ್ ಸರ್ವ್ವಮೇತದ್ ಅಪ್ರಕಾಶ್ಯ ಬಾಲಕಾನಾಂ ಪುರಸ್ತಾತ್ ಪ್ರಾಕಾಶಯ ಏತಸ್ಮಾದ್ಧೇತೋಸ್ತ್ವಾಂ ಧನ್ಯಂ ವದಾಮಿ, ಹೇ ಪಿತರಿತ್ಥಂ ಭವತು ಯದ್ ಏತದೇವ ತವ ಗೋಚರ ಉತ್ತಮಮ್|
22 ೨೨ ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ಮಗನು ಎಂಥವನೆಂದು ತಂದೆಯ ಹೊರತು ಮತ್ತಾರೂ ತಿಳಿದಿರುವುದಿಲ್ಲ, ತಂದೆ ಎಂಥವನೆಂದು ಮಗನ ಹೊರತು ಇನ್ನಾರು ತಿಳಿದಿರುವುದಿಲ್ಲ ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಪಡಿಸುವುದಕ್ಕೆ ಮನಸ್ಸುಳ್ಳವನಾಗಿದ್ದಾನೋ, ಅವನೂ ಆತನನ್ನು ತಿಳಿದವನಾಗಿದ್ದಾನೆ” ಅಂದನು.
ಪಿತ್ರಾ ಸರ್ವ್ವಾಣಿ ಮಯಿ ಸಮರ್ಪಿತಾನಿ ಪಿತರಂ ವಿನಾ ಕೋಪಿ ಪುತ್ರಂ ನ ಜಾನಾತಿ ಕಿಞ್ಚ ಪುತ್ರಂ ವಿನಾ ಯಸ್ಮೈ ಜನಾಯ ಪುತ್ರಸ್ತಂ ಪ್ರಕಾಶಿತವಾನ್ ತಞ್ಚ ವಿನಾ ಕೋಪಿ ಪಿತರಂ ನ ಜಾನಾತಿ|
23 ೨೩ ಆ ಮೇಲೆ ಆತನು ಶಿಷ್ಯರ ಕಡೆಗೆ ತಿರುಗಿಕೊಂಡು ಪ್ರತ್ಯೇಕವಾಗಿ ಹೇಳಿದ್ದೇನೆಂದರೆ, “ನೀವು ನೋಡುತ್ತಿರುವ ಸಂಗತಿಗಳನ್ನು ನೋಡುವವರು ಧನ್ಯರು.
ತಪಃ ಪರಂ ಸ ಶಿಷ್ಯಾನ್ ಪ್ರತಿ ಪರಾವೃತ್ಯ ಗುಪ್ತಂ ಜಗಾದ, ಯೂಯಮೇತಾನಿ ಸರ್ವ್ವಾಣಿ ಪಶ್ಯಥ ತತೋ ಯುಷ್ಮಾಕಂ ಚಕ್ಷೂಂಷಿ ಧನ್ಯಾನಿ|
24 ೨೪ ಬಹು ಮಂದಿ ಪ್ರವಾದಿಗಳೂ ಅರಸರೂ ನೀವು ನೋಡುತ್ತಿರುವ ಸಂಗತಿಗಳನ್ನು ನೋಡಬೇಕೆಂದು ಅಪೇಕ್ಷಿಸಿದರೂ ಸಾಧ್ಯವಾಗಲಿಲ್ಲ, ನೀವು ಕೇಳುತ್ತಿರುವ ಸಂಗತಿಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಾಗಲಿಲ್ಲ ಎಂಬುದಾಗಿ ನಿಮಗೆ ಹೇಳುತ್ತೇನೆ” ಅಂದನು.
ಯುಷ್ಮಾನಹಂ ವದಾಮಿ, ಯೂಯಂ ಯಾನಿ ಸರ್ವ್ವಾಣಿ ಪಶ್ಯಥ ತಾನಿ ಬಹವೋ ಭವಿಷ್ಯದ್ವಾದಿನೋ ಭೂಪತಯಶ್ಚ ದ್ರಷ್ಟುಮಿಚ್ಛನ್ತೋಪಿ ದ್ರಷ್ಟುಂ ನ ಪ್ರಾಪ್ನುವನ್, ಯುಷ್ಮಾಭಿ ರ್ಯಾ ಯಾಃ ಕಥಾಶ್ಚ ಶ್ರೂಯನ್ತೇ ತಾಃ ಶ್ರೋತುಮಿಚ್ಛನ್ತೋಪಿ ಶ್ರೋತುಂ ನಾಲಭನ್ತ|
25 ೨೫ ಆಗ ಒಬ್ಬ ಧರ್ಮೋಪದೇಶಕನು ಎದ್ದು ಆತನನ್ನು ಪರೀಕ್ಷಿಸುವುದಕ್ಕಾಗಿ, “ಬೋಧಕನೇ, ನಾನು ನಿತ್ಯಜೀವವನ್ನು ಹೊಂದಿಕೊಳ್ಳಲು ಏನು ಮಾಡಬೇಕು?” ಎಂದು ಕೇಳಲು, (aiōnios g166)
ಅನನ್ತರಮ್ ಏಕೋ ವ್ಯವಸ್ಥಾಪಕ ಉತ್ಥಾಯ ತಂ ಪರೀಕ್ಷಿತುಂ ಪಪ್ರಚ್ಛ, ಹೇ ಉಪದೇಶಕ ಅನನ್ತಾಯುಷಃ ಪ್ರಾಪ್ತಯೇ ಮಯಾ ಕಿಂ ಕರಣೀಯಂ? (aiōnios g166)
26 ೨೬ ಆತನು ಅವನಿಗೆ, “ಧರ್ಮಶಾಸ್ತ್ರದಲ್ಲಿ ಏನು ಬರೆದದೆ? ಹೇಗೆ ಓದಿದ್ದೀ?” ಎಂದು ಕೇಳಿದನು.
ಯೀಶುಃ ಪ್ರತ್ಯುವಾಚ, ಅತ್ರಾರ್ಥೇ ವ್ಯವಸ್ಥಾಯಾಂ ಕಿಂ ಲಿಖಿತಮಸ್ತಿ? ತ್ವಂ ಕೀದೃಕ್ ಪಠಸಿ?
27 ೨೭ ಅದಕ್ಕೆ ಅವನು, “‘ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.’ ಮತ್ತು ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂದು ಬರೆದದೆ” ಅಂದನು.
ತತಃ ಸೋವದತ್, ತ್ವಂ ಸರ್ವ್ವಾನ್ತಃಕರಣೈಃ ಸರ್ವ್ವಪ್ರಾಣೈಃ ಸರ್ವ್ವಶಕ್ತಿಭಿಃ ಸರ್ವ್ವಚಿತ್ತೈಶ್ಚ ಪ್ರಭೌ ಪರಮೇಶ್ವರೇ ಪ್ರೇಮ ಕುರು, ಸಮೀಪವಾಸಿನಿ ಸ್ವವತ್ ಪ್ರೇಮ ಕುರು ಚ|
28 ೨೮ ಆತನು ಅವನಿಗೆ, “ನೀನು ಸರಿಯಾಗಿ ಉತ್ತರಕೊಟ್ಟಿರುವಿ, ಅದರಂತೆ ಮಾಡು, ಮಾಡಿದರೆ ನಿತ್ಯಜೀವಕ್ಕೆ ಬಾಧ್ಯನಾಗುವಿ” ಎಂದು ಹೇಳಿದನು.
ತದಾ ಸ ಕಥಯಾಮಾಸ, ತ್ವಂ ಯಥಾರ್ಥಂ ಪ್ರತ್ಯವೋಚಃ, ಇತ್ಥಮ್ ಆಚರ ತೇನೈವ ಜೀವಿಷ್ಯಸಿ|
29 ೨೯ ಆದರೆ ಅವನು ತನ್ನನ್ನು ನೀತಿವಂತನೆಂದು ತೋರಿಸಿಕೊಳ್ಳುವುದಕ್ಕೆ ಅಪೇಕ್ಷಿಸಿ, “ನನ್ನ ನೆರೆಯವನು ಯಾರು?” ಎಂದು ಯೇಸುವನ್ನು ಕೇಳಲು,
ಕಿನ್ತು ಸ ಜನಃ ಸ್ವಂ ನಿರ್ದ್ದೋಷಂ ಜ್ಞಾಪಯಿತುಂ ಯೀಶುಂ ಪಪ್ರಚ್ಛ, ಮಮ ಸಮೀಪವಾಸೀ ಕಃ? ತತೋ ಯೀಶುಃ ಪ್ರತ್ಯುವಾಚ,
30 ೩೦ ಯೇಸು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ, “ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನ ಬೆಟ್ಟದ ಪ್ರದೇಶದಿಂದ ಇಳಿದು ಯೆರಿಕೋ ಎಂಬ ಊರಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು, ಹೊಡೆದು, ಅವನನ್ನು ಅರೆಜೀವಮಾಡಿ ಬಿಟ್ಟುಹೋದರು.
ಏಕೋ ಜನೋ ಯಿರೂಶಾಲಮ್ಪುರಾದ್ ಯಿರೀಹೋಪುರಂ ಯಾತಿ, ಏತರ್ಹಿ ದಸ್ಯೂನಾಂ ಕರೇಷು ಪತಿತೇ ತೇ ತಸ್ಯ ವಸ್ತ್ರಾದಿಕಂ ಹೃತವನ್ತಃ ತಮಾಹತ್ಯ ಮೃತಪ್ರಾಯಂ ಕೃತ್ವಾ ತ್ಯಕ್ತ್ವಾ ಯಯುಃ|
31 ೩೧ ಆಗ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ಓರೆಯಾಗಿ ಹೋದನು.
ಅಕಸ್ಮಾದ್ ಏಕೋ ಯಾಜಕಸ್ತೇನ ಮಾರ್ಗೇಣ ಗಚ್ಛನ್ ತಂ ದೃಷ್ಟ್ವಾ ಮಾರ್ಗಾನ್ಯಪಾರ್ಶ್ವೇನ ಜಗಾಮ|
32 ೩೨ ಅದೇ ರೀತಿಯಲ್ಲಿ ಒಬ್ಬ ಲೇವಿಯು ಆ ಸ್ಥಳಕ್ಕೆ ಬಂದು ಅವನನ್ನು ಕಂಡು ಓರೆಯಾಗಿ ಹೋದನು.
ಇತ್ಥಮ್ ಏಕೋ ಲೇವೀಯಸ್ತತ್ಸ್ಥಾನಂ ಪ್ರಾಪ್ಯ ತಸ್ಯಾನ್ತಿಕಂ ಗತ್ವಾ ತಂ ವಿಲೋಕ್ಯಾನ್ಯೇನ ಪಾರ್ಶ್ವೇನ ಜಗಾಮ|
33 ೩೩ ಆದರೆ ಒಬ್ಬ ಸಮಾರ್ಯದವನು ಪ್ರಯಾಣಮಾಡುತ್ತಾ ಅವನು ಬಿದಿದ್ದ ಸ್ಥಳಕ್ಕೆ ಬಂದಾಗ ಅವನನ್ನು ಕಂಡು ಕನಿಕರಿಸಿ,
ಕಿನ್ತ್ವೇಕಃ ಶೋಮಿರೋಣೀಯೋ ಗಚ್ಛನ್ ತತ್ಸ್ಥಾನಂ ಪ್ರಾಪ್ಯ ತಂ ದೃಷ್ಟ್ವಾದಯತ|
34 ೩೪ ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಗಾಯವನು ಕಟ್ಟಿ ತನ್ನ ಸ್ವಂತ ವಾಹನ ಪಶುವಿನ ಮೇಲೆ ಹತ್ತಿಸಿಕೊಂಡು ಛತ್ರಕ್ಕೆ ಕರೆದುಕೊಂಡು ಹೋಗಿ ಅವನನ್ನು ಆರೈಕೆಮಾಡಿದನು.
ತಸ್ಯಾನ್ತಿಕಂ ಗತ್ವಾ ತಸ್ಯ ಕ್ಷತೇಷು ತೈಲಂ ದ್ರಾಕ್ಷಾರಸಞ್ಚ ಪ್ರಕ್ಷಿಪ್ಯ ಕ್ಷತಾನಿ ಬದ್ಧ್ವಾ ನಿಜವಾಹನೋಪರಿ ತಮುಪವೇಶ್ಯ ಪ್ರವಾಸೀಯಗೃಹಮ್ ಆನೀಯ ತಂ ಸಿಷೇವೇ|
35 ೩೫ ಮರುದಿನ ಅವನು ಎರಡು ದಿನಾರಿಗಳನ್ನುತೆಗೆದು ಛತ್ರದವನಿಗೆ ಕೊಟ್ಟು, ‘ಇವನನ್ನು ಆರೈಕೆಮಾಡು, ಇದಕ್ಕಿಂತ ಹೆಚ್ಚಾಗಿ ಏನಾದರೂ ವೆಚ್ಚಮಾಡಿದರೆ ನಾನು ಹಿಂತಿರುಗಿ ಬಂದಾಗ ನಿನಗೆ ಕೊಡುವೆನು’ ಅಂದನು.
ಪರಸ್ಮಿನ್ ದಿವಸೇ ನಿಜಗಮನಕಾಲೇ ದ್ವೌ ಮುದ್ರಾಪಾದೌ ತದ್ಗೃಹಸ್ವಾಮಿನೇ ದತ್ತ್ವಾವದತ್ ಜನಮೇನಂ ಸೇವಸ್ವ ತತ್ರ ಯೋಽಧಿಕೋ ವ್ಯಯೋ ಭವಿಷ್ಯತಿ ತಮಹಂ ಪುನರಾಗಮನಕಾಲೇ ಪರಿಶೋತ್ಸ್ಯಾಮಿ|
36 ೩೬ ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು?” ಎಂದು ಕೇಳಿದ್ದಕ್ಕೆ,
ಏಷಾಂ ತ್ರಯಾಣಾಂ ಮಧ್ಯೇ ತಸ್ಯ ದಸ್ಯುಹಸ್ತಪತಿತಸ್ಯ ಜನಸ್ಯ ಸಮೀಪವಾಸೀ ಕಃ? ತ್ವಯಾ ಕಿಂ ಬುಧ್ಯತೇ?
37 ೩೭ ಆ ಧರ್ಮೋಪದೇಶಕನು, “ಅವನಿಗೆ ದಯೆ ತೋರಿಸಿದವನೇ” ಅಂದನು. ಆಗ ಯೇಸು ಅವನಿಗೆ, “ಹೋಗು, ನೀನೂ ಅದರಂತೆ ಮಾಡು” ಎಂದು ಹೇಳಿದನು.
ತತಃ ಸ ವ್ಯವಸ್ಥಾಪಕಃ ಕಥಯಾಮಾಸ ಯಸ್ತಸ್ಮಿನ್ ದಯಾಂ ಚಕಾರ| ತದಾ ಯೀಶುಃ ಕಥಯಾಮಾಸ ತ್ವಮಪಿ ಗತ್ವಾ ತಥಾಚರ|
38 ೩೮ ಅವರು ಸಂಚಾರಮಾಡುತ್ತಿರುವಾಗ ಆತನು ಒಂದು ಹಳ್ಳಿಗೆ ಬಂದನು. ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಆತನನ್ನು ತನ್ನ ಮನೆಯಲ್ಲಿ ಉಳಿಸಿಕೊಂಡಳು.
ತತಃ ಪರಂ ತೇ ಗಚ್ಛನ್ತ ಏಕಂ ಗ್ರಾಮಂ ಪ್ರವಿವಿಶುಃ; ತದಾ ಮರ್ಥಾನಾಮಾ ಸ್ತ್ರೀ ಸ್ವಗೃಹೇ ತಸ್ಯಾತಿಥ್ಯಂ ಚಕಾರ|
39 ೩೯ ಆಕೆಗೆ ಮರಿಯಳೆಂಬ ಒಬ್ಬ ತಂಗಿ ಇದ್ದಳು. ಈಕೆಯು ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತುಕೊಂಡು ಆತನ ವಾಕ್ಯವನ್ನು ಕೇಳುತ್ತಿದ್ದಳು.
ತಸ್ಮಾತ್ ಮರಿಯಮ್ ನಾಮಧೇಯಾ ತಸ್ಯಾ ಭಗಿನೀ ಯೀಶೋಃ ಪದಸಮೀಪ ಉವವಿಶ್ಯ ತಸ್ಯೋಪದೇಶಕಥಾಂ ಶ್ರೋತುಮಾರೇಭೇ|
40 ೪೦ ಆದರೆ ಮಾರ್ಥಳು ಉಪಚಾರ ಸೇವೆಯ ವಿಷಯವಾಗಿ ಬಹಳ ಬೇಸತ್ತು ಯೇಸುವಿನ ಬಳಿಗೆ ಬಂದು, “ಕರ್ತನೇ, ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ, ಇದಕ್ಕೆ ನಿನಗೆ ಚಿಂತೆಯಿಲ್ಲವೋ? ನನಗೆ ನೆರವಾಗಬೇಕೆಂದು ಆಕೆಗೆ ಹೇಳು” ಅಂದಳು.
ಕಿನ್ತು ಮರ್ಥಾ ನಾನಾಪರಿಚರ್ಯ್ಯಾಯಾಂ ವ್ಯಗ್ರಾ ಬಭೂವ ತಸ್ಮಾದ್ಧೇತೋಸ್ತಸ್ಯ ಸಮೀಪಮಾಗತ್ಯ ಬಭಾಷೇ; ಹೇ ಪ್ರಭೋ ಮಮ ಭಗಿನೀ ಕೇವಲಂ ಮಮೋಪರಿ ಸರ್ವ್ವಕರ್ಮ್ಮಣಾಂ ಭಾರಮ್ ಅರ್ಪಿತವತೀ ತತ್ರ ಭವತಾ ಕಿಞ್ಚಿದಪಿ ನ ಮನೋ ನಿಧೀಯತೇ ಕಿಮ್? ಮಮ ಸಾಹಾಯ್ಯಂ ಕರ್ತ್ತುಂ ಭವಾನ್ ತಾಮಾದಿಶತು|
41 ೪೧ ಆದರೆ, ಕರ್ತನು ಆಕೆಗೆ, “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳಿಗಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ.
ತತೋ ಯೀಶುಃ ಪ್ರತ್ಯುವಾಚ ಹೇ ಮರ್ಥೇ ಹೇ ಮರ್ಥೇ, ತ್ವಂ ನಾನಾಕಾರ್ಯ್ಯೇಷು ಚಿನ್ತಿತವತೀ ವ್ಯಗ್ರಾ ಚಾಸಿ,
42 ೪೨ ಆದರೆ ಅಗತ್ಯವಾದದ್ದು ಒಂದೇ, ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ, ಅದು ಆಕೆಯಿಂದ ತೆಗೆಯಲ್ಪಡುವುದಿಲ್ಲ” ಎಂದು ಉತ್ತರಕೊಟ್ಟನು.
ಕಿನ್ತು ಪ್ರಯೋಜನೀಯಮ್ ಏಕಮಾತ್ರಮ್ ಆಸ್ತೇ| ಅಪರಞ್ಚ ಯಮುತ್ತಮಂ ಭಾಗಂ ಕೋಪಿ ಹರ್ತ್ತುಂ ನ ಶಕ್ನೋತಿ ಸಏವ ಮರಿಯಮಾ ವೃತಃ|

< ಲೂಕನು 10 >