< ಯೋಹಾನನು 5 >

1 ಇದಾದ ಮೇಲೆ ಯೆಹೂದ್ಯರ ಒಂದು ಜಾತ್ರೆ ಇದ್ದುದರಿಂದ ಯೇಸು ಯೆರೂಸಲೇಮಿಗೆ ಹೋದನು.
តតះ បរំ យិហូទីយានាម៑ ឧត្សវ ឧបស្ថិតេ យីឝុ រ្យិរូឝាលមំ គតវាន៑។
2 ಅಲ್ಲಿ ಕುರಿಬಾಗಿಲು ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಇಬ್ರಿಯ ಭಾಷೆಯಲ್ಲಿ ಬೇತ್ಸಥಾ ಎಂದು ಕರೆಯುತ್ತಾರೆ.
តស្មិន្នគរេ មេឞនាម្នោ ទ្វារស្យ សមីបេ ឥព្រីយភាឞយា ពៃថេស្ទា នាម្នា បិឞ្ករិណី បញ្ចឃដ្ដយុក្តាសីត៑។
3 ಇವುಗಳಲ್ಲಿ ಅಸ್ವಸ್ಥರೂ, ರೋಗಿಗಳೂ, ಕುರುಡರೂ, ಕುಂಟರೂ, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. (ನೀರು ಕಲಕುವುದನ್ನು ಕಾದುಕೊಂಡು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. ಆಗಾಗ ಒಬ್ಬ ದೂತನು ಬಂದು ಕೊಳದ ನೀರನ್ನು ಕಲಕಿಹೊಗುತ್ತಿದ್ದನು. ಆಗ ಮೊದಲು ಯಾರು ಕೊಳದೊಳಗೆ ಇಳಿಯುತ್ತಿದ್ದರೋ ಅವರ ರೋಗವು ವಾಸಿಯಾಗುತ್ತಿತ್ತು.)
តស្យាស្តេឞុ ឃដ្ដេឞុ កិលាលកម្បនម៑ អបេក្ឞ្យ អន្ធខញ្ចឝុឞ្កាង្គាទយោ ពហវោ រោគិណះ បតន្តស្តិឞ្ឋន្តិ ស្ម។
4
យតោ វិឝេឞកាលេ តស្យ សរសោ វារិ ស្វគ៌ីយទូត ឯត្យាកម្បយត៑ តត្កីលាលកម្បនាត៑ បរំ យះ កឝ្ចិទ៑ រោគី ប្រថមំ បានីយមវារោហត៑ ស ឯវ តត្ក្ឞណាទ៑ រោគមុក្តោៜភវត៑។
5 ಅಲ್ಲಿ ಮೂವತ್ತೆಂಟು ವರ್ಷಗಳಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನಿದ್ದನು.
តទាឞ្ដាត្រិំឝទ្វឞ៌ាណិ យាវទ៑ រោគគ្រស្ត ឯកជនស្តស្មិន៑ ស្ថានេ ស្ថិតវាន៑។
6 ಅವನು ಬಿದ್ದುಕೊಂಡಿರುವುದನ್ನು ಯೇಸು ನೋಡಿ ಇವನಿಗೆ ಹೀಗಾಗಿ ಬಹು ಕಾಲವಾಗಿದೆ ಎಂದು ಅರಿತು ಅವನಿಗೆ “ನಿನಗೆ ಗುಣಹೊಂದಲು ಮನಸ್ಸಿದೆಯೋ?” ಎಂದು ಕೇಳಿದನು.
យីឝុស្តំ ឝយិតំ ទ្ឫឞ្ដ្វា ពហុកាលិករោគីតិ ជ្ញាត្វា វ្យាហ្ឫតវាន៑ ត្វំ កិំ ស្វស្ថោ ពុភូឞសិ?
7 ಅದಕ್ಕೆ ಆ ರೋಗಿಯು “ಆಯ್ಯಾ, ನೀರು ಉಕ್ಕುವಾಗ ನನ್ನನ್ನು ಕೊಳದೊಳಗೆ ಇಳಿಸುವುದಕ್ಕೆ ಯಾರೂ ಇಲ್ಲ. ನಾನು ಹೋಗುವುದರೊಳಗೆ ನನಗಿಂತ ಮೊದಲು ಮತ್ತೊಬ್ಬನು ಇಳಿಯುತ್ತಾನೆ” ಎಂದನು.
តតោ រោគី កថិតវាន៑ ហេ មហេច្ឆ យទា កីលាលំ កម្បតេ តទា មាំ បុឞ្ករិណីម៑ អវរោហយិតុំ មម កោបិ នាស្តិ, តស្មាន៑ មម គមនកាលេ កឝ្ចិទន្យោៜគ្រោ គត្វា អវរោហតិ។
8 ಯೇಸು ಅವನಿಗೆ, “ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ” ಎಂದು ಹೇಳಿದನು.
តទា យីឝុរកថយទ៑ ឧត្តិឞ្ឋ, តវ ឝយ្យាមុត្តោល្យ គ្ឫហីត្វា យាហិ។
9 ಕೂಡಲೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು. ಅಂದು ಸಬ್ಬತ್ ದಿನವಾಗಿತ್ತು,
ស តត្ក្ឞណាត៑ ស្វស្ថោ ភូត្វា ឝយ្យាមុត្តោល្យាទាយ គតវាន៑ កិន្តុ តទ្ទិនំ វិឝ្រាមវារះ។
10 ೧೦ ಆದುದರಿಂದ ಯೆಹೂದ್ಯರು ಸ್ವಸ್ಥವಾದವನಿಗೆ, “ಈ ದಿನ ಸಬ್ಬತ್ ದಿನವಾದುದರಿಂದ ನೀನು ಹಾಸಿಗೆಯನ್ನು ಹೊತ್ತುಕೊಂಡು ಹೋಗುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆಯೆಂದು” ಹೇಳಿದ್ದಕ್ಕೆ,
តស្មាទ៑ យិហូទីយាះ ស្វស្ថំ នរំ វ្យាហរន៑ អទ្យ វិឝ្រាមវារេ ឝយនីយមាទាយ ន យាតវ្យម៑។
11 ೧೧ ಅವನು, “ನನ್ನನ್ನು ಸ್ವಸ್ಥಮಾಡಿದವನೇ ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ನನಗೆ ಹೇಳಿದನು” ಎಂದನು.
តតះ ស ប្រត្យវោចទ៑ យោ មាំ ស្វស្ថម៑ អកាឞ៌ីត៑ ឝយនីយម៑ ឧត្តោល្យាទាយ យាតុំ មាំ ស ឯវាទិឝត៑។
12 ೧೨ ಅದಕ್ಕೆ ಯೆಹೂದ್ಯರು ಅವನಿಗೆ, “ಅದನ್ನು ಎತ್ತಿಕೊಂಡು ನಡೆ ಎಂದು ನಿನಗೆ ಹೇಳಿದ ಮನುಷ್ಯನು ಯಾರು?” ಎಂದು ಕೇಳಿದರು.
តទា តេៜប្ឫច្ឆន៑ ឝយនីយម៑ ឧត្តោល្យាទាយ យាតុំ យ អាជ្ញាបយត៑ ស កះ?
13 ೧೩ ಆದರೆ ಆತನು ಯಾರೆಂದು ಸ್ವಸ್ಥನಾದವನಿಗೆ ತಿಳಿದಿರಲಿಲ್ಲ, ಏಕೆಂದರೆ, ಯೇಸು ಆ ಸ್ಥಳದಲ್ಲಿ ಇದ್ದ ಜನರ ಗುಂಪಿನ ಮಧ್ಯದಲ್ಲಿ ಮರೆಯಾದನು.
កិន្តុ ស ក ឥតិ ស្វស្ថីភូតោ នាជានាទ៑ យតស្តស្មិន៑ ស្ថានេ ជនតាសត្ត្វាទ៑ យីឝុះ ស្ថានាន្តរម៑ អាគមត៑។
14 ೧೪ ಇದಾದ ಮೇಲೆ ಯೇಸು ಅವನನ್ನು ದೇವಾಲಯದಲ್ಲಿ ಕಂಡು, “ನಿನಗೆ ಸ್ವಸ್ಥವಾಯಿತಲ್ಲಾ; ಇನ್ನು ಮೇಲೆ ಪಾಪ ಮಾಡಬೇಡ, ನಿನಗೆ ಹೆಚ್ಚಿನ ಕೇಡು ಬಂದೀತು” ಎಂದನು.
តតះ បរំ យេឝុ រ្មន្ទិរេ តំ នរំ សាក្ឞាត្ប្រាប្យាកថយត៑ បឝ្យេទានីម៑ អនាមយោ ជាតោសិ យថាធិកា ទុទ៌ឝា ន ឃដតេ តទ្ធេតោះ បាបំ កម៌្ម បុនម៌ាកាឞ៌ីះ។
15 ೧೫ ಆ ಮನುಷ್ಯನು ಅಲ್ಲಿಂದ ಹೋಗಿ, ತನ್ನನ್ನು ಸ್ವಸ್ಥಪಡಿಸಿದಾತನು ಯೇಸುವೇ ಎಂದು ಯೆಹೂದ್ಯರಿಗೆ ತಿಳಿಸಿದನು.
តតះ ស គត្វា យិហូទីយាន៑ អវទទ៑ យីឝុ រ្មាម៑ អរោគិណម៑ អកាឞ៌ីត៑។
16 ೧೬ ಆದಕಾರಣ ಯೆಹೂದ್ಯರು, ಯೇಸು ಸಬ್ಬತ್ ದಿನಗಳಲ್ಲಿ ಇಂಥಾ ಕಾರ್ಯಗಳನ್ನು ಮಾಡುತ್ತಾನಲ್ಲಾ ಎಂದು ಆತನನ್ನು ಹಿಂಸಿಸತೊಡಗಿದರು.
តតោ យីឝុ រ្វិឝ្រាមវារេ កម៌្មេទ្ឫឝំ ក្ឫតវាន៑ ឥតិ ហេតោ រ្យិហូទីយាស្តំ តាឌយិត្វា ហន្តុម៑ អចេឞ្ដន្ត។
17 ೧೭ ಅದಕ್ಕೆ ಯೇಸು ಅವರಿಗೆ, “ನನ್ನ ತಂದೆಯು ಇಂದಿನವರೆಗೂ ಕೆಲಸ ಮಾಡುತ್ತಿದ್ದಾನೆ, ನಾನೂ ಕೆಲಸ ಮಾಡುತ್ತೇನೆ” ಎಂದು ಹೇಳಿದನು.
យីឝុស្តានាខ្យត៑ មម បិតា យត៑ កាយ៌្យំ ករោតិ តទនុរូបម៑ អហមបិ ករោតិ។
18 ೧೮ ಯೇಸು ಈ ಮಾತನ್ನು ಹೇಳಿದ್ದರಿಂದ, ಆತನು ಸಬ್ಬತ್ ದಿನವನ್ನು ಅಲಕ್ಷ್ಯಮಾಡಿದ್ದಲ್ಲದೇ, ದೇವರನ್ನು ತನ್ನ ಸ್ವಂತ ತಂದೆ ಎಂದು ಹೇಳಿ ತನ್ನನ್ನು ದೇವರಿಗೆ ಸರಿಸಮಾನ ಮಾಡಿಕೊಂಡನೆಂದು ಯೆಹೂದ್ಯರು ಆತನನ್ನು ಕೊಲ್ಲುವುದಕ್ಕೆ ಇನ್ನಷ್ಟು ಪ್ರಯತ್ನಪಟ್ಟರು.
តតោ យិហូទីយាស្តំ ហន្តុំ បុនរយតន្ត យតោ វិឝ្រាមវារំ នាមន្យត តទេវ កេវលំ ន អធិកន្តុ ឦឝ្វរំ ស្វបិតរំ ប្រោច្យ ស្វមបីឝ្វរតុល្យំ ក្ឫតវាន៑។
19 ೧೯ ಯೇಸು ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವುದನ್ನು ಕಂಡು ಮಗನು ಮಾಡುತ್ತಾನೆಯೇ, ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು. ಏಕೆಂದರೆ ಆತನು ಯಾವುದನ್ನೆಲ್ಲಾ ಮಾಡುವನೋ ಹಾಗೆಯೇ ಮಗನೂ ಮಾಡುತ್ತಾನೆ.
បឝ្ចាទ៑ យីឝុរវទទ៑ យុឞ្មានហំ យថាត៌្ហតរំ វទាមិ បុត្រះ បិតរំ យទ្យត៑ កម៌្ម កុវ៌្វន្តំ បឝ្យតិ តទតិរិក្តំ ស្វេច្ឆាតះ កិមបិ កម៌្ម កត៌្តុំ ន ឝក្នោតិ។ បិតា យត៑ ករោតិ បុត្រោបិ តទេវ ករោតិ។
20 ೨೦ ಏಕೆಂದರೆ, ತಂದೆಯು ಮಗನನ್ನು ಪ್ರೀತಿಸುತ್ತಾನೆ, ತಾನು ಮಾಡುವುದನ್ನೆಲ್ಲಾ ಅವನಿಗೆ ತೋರಿಸುತ್ತಾನೆ. ಇದಲ್ಲದೆ ಇವುಗಳಿಗಿಂತ ಮಹತ್ತಾದ ಕೆಲಸಗಳನ್ನು ಆತನಿಗೆ ತೋರಿಸುವನು. ಅವುಗಳನ್ನು ನೋಡಿ ನಿಮಗೆ ಆಶ್ಚರ್ಯವಾಗುವುದು.
បិតា បុត្រេ ស្នេហំ ករោតិ តស្មាត៑ ស្វយំ យទ្យត៑ កម៌្ម ករោតិ តត្សវ៌្វំ បុត្រំ ទឝ៌យតិ; យថា ច យុឞ្មាកំ អាឝ្ចយ៌្យជ្ញានំ ជនិឞ្យតេ តទត៌្ហម៑ ឥតោបិ មហាកម៌្ម តំ ទឝ៌យិឞ្យតិ។
21 ೨೧ ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನು ಸಹ ತನಗೆ ಬೇಕಾದವರನ್ನು ಬದುಕಿಸುತ್ತಾನೆ.
វស្តុតស្តុ បិតា យថា ប្រមិតាន៑ ឧត្ថាប្យ សជិវាន៑ ករោតិ តទ្វត៑ បុត្រោបិ យំ យំ ឥច្ឆតិ តំ តំ សជីវំ ករោតិ។
22 ೨೨ ಇದಲ್ಲದೆ ತಂದೆಯು ಯಾರಿಗೂ ತೀರ್ಪುಮಾಡುವುದಿಲ್ಲ, ಆದರೆ ಎಲ್ಲಾ ತೀರ್ಪನ್ನು ಮಗನಿಗೆ ಕೊಟ್ಟಿದ್ದಾನೆ.
សវ៌្វេ បិតរំ យថា សត្កុវ៌្វន្តិ តថា បុត្រមបិ សត្ការយិតុំ បិតា ស្វយំ កស្យាបិ វិចារមក្ឫត្វា សវ៌្វវិចារាណាំ ភារំ បុត្រេ សមប៌ិតវាន៑។
23 ೨೩ ಎಲ್ಲರೂ ತಂದೆಯನ್ನು ಯಾವ ರೀತಿಯಲ್ಲಿ ಗೌರವಿಸುವರೋ ಅದೇ ರೀತಿಯಲ್ಲಿ ಮಗನನ್ನೂ ಗೌರವಿಸಬೇಕೆಂದು ಹಾಗೆ ಮಾಡಿದ್ದಾನೆ. ಮಗನನ್ನು ಗೌರವಿಸದವನು ಆತನನ್ನು ಕಳುಹಿಸಿದ ತಂದೆಯನ್ನು ಗೌರವಿಸಲಾರನು.
យះ បុត្រំ សត៑ ករោតិ ស តស្យ ប្រេរកមបិ សត៑ ករោតិ។
24 ೨೪ ನಿಮಗೆ ನಿಜನಿಜವಾಗಿ ಹೇಳುತ್ತೇನೆ ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯ ಜೀವವನ್ನು ಹೊಂದಿದ್ದಾನೆ, ಅವನು ಖಂಡನೆಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದಾನೆ. (aiōnios g166)
យុឞ្មានាហំ យថាត៌្ហតរំ វទាមិ យោ ជនោ មម វាក្យំ ឝ្រុត្វា មត្ប្រេរកេ វិឝ្វសិតិ សោនន្តាយុះ ប្រាប្នោតិ កទាបិ ទណ្ឌពាជនំ ន ភវតិ និធនាទុត្ថាយ បរមាយុះ ប្រាប្នោតិ។ (aiōnios g166)
25 ೨೫ ನಿಮಗೆ ನಿಜನಿಜವಾಗಿ ಹೇಳುತ್ತೇನೆ ಸತ್ತವರು ದೇವಕುಮಾರನ ಸ್ವರವನ್ನು ಕೇಳುವ ಕಾಲ ಬರುತ್ತದೆ, ಅದು ಈಗಾಗಲೇ ಬಂದಿದೆ, ಕೇಳಿದವರು ಬದುಕುವರು.
អហំ យុឞ្មានតិយថាត៌្ហំ វទាមិ យទា ម្ឫតា ឦឝ្វរបុត្រស្យ និនាទំ ឝ្រោឞ្យន្តិ យេ ច ឝ្រោឞ្យន្តិ តេ សជីវា ភវិឞ្យន្តិ សមយ ឯតាទ្ឫឝ អាយាតិ វរម៑ ឥទានីមប្យុបតិឞ្ឋតិ។
26 ೨೬ ತಂದೆಯು ತಾನು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ, ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಮಾಡಿದ್ದಾನೆ.
បិតា យថា ស្វយញ្ជីវី តថា បុត្រាយ ស្វយញ្ជីវិត្វាធិការំ ទត្តវាន៑។
27 ೨೭ ಮಗನು ಮನುಷ್ಯಕುಮಾರನಾಗಿರುವುದರಿಂದ ನ್ಯಾಯತೀರ್ಪು ಮಾಡುವ ಅಧಿಕಾರವನ್ನೂ ತಂದೆ ಆತನಿಗೆ ಕೊಟ್ಟಿದ್ದಾನೆ.
ស មនុឞ្យបុត្រះ ឯតស្មាត៑ ការណាត៑ បិតា ទណ្ឌករណាធិការមបិ តស្មិន៑ សមប៌ិតវាន៑។
28 ೨೮ ಅದಕ್ಕೆ ಆಶ್ಚರ್ಯಪಡಬೇಡಿರಿ. ಒಂದು ಕಾಲ ಬರುತ್ತದೆ, ಆಗಸಮಾಧಿಗಳಲ್ಲಿರುವವರೆಲ್ಲಾ ಆತನ ಸ್ವರವನ್ನು ಕೇಳಿ,
ឯតទត៌្ហេ យូយម៑ អាឝ្ចយ៌្យំ ន មន្យធ្វំ យតោ យស្មិន៑ សមយេ តស្យ និនាទំ ឝ្រុត្វា ឝ្មឝានស្ថាះ សវ៌្វេ ពហិរាគមិឞ្យន្តិ សមយ ឯតាទ្ឫឝ ឧបស្ថាស្យតិ។
29 ೨೯ ಎದ್ದು ಹೊರಗೆ ಬರುವರು. ಒಳ್ಳೆಯದನ್ನು ಮಾಡಿದವರಿಗೆ ನಿತ್ಯಜೀವಕ್ಕಾಗಿ ಪುನರುತ್ಥಾನವಾಗುವುದು. ಕೆಟ್ಟದ್ದನ್ನು ಮಾಡಿದವರು ಖಂಡನೆಗಾಗಿ ಪುನರುತ್ಥಾನವನ್ನೂ ಹೊಂದುವರು.
តស្មាទ៑ យេ សត្កម៌្មាណិ ក្ឫតវន្តស្ត ឧត្ថាយ អាយុះ ប្រាប្ស្យន្តិ យេ ច កុកម៌ាណិ ក្ឫតវន្តស្ត ឧត្ថាយ ទណ្ឌំ ប្រាប្ស្យន្តិ។
30 ೩೦ “ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು ತಂದೆಯು ಹೇಳಿದ್ದನ್ನು ನಾನು ಕೇಳಿ ನ್ಯಾಯತೀರಿಸುತ್ತೇನೆ ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ನಾನು ಬಯಸುವುದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.
អហំ ស្វយំ កិមបិ កត៌្តុំ ន ឝក្នោមិ យថា ឝុណោមិ តថា វិចារយាមិ មម វិចារញ្ច ន្យាយ្យះ យតោហំ ស្វីយាភីឞ្ដំ នេហិត្វា មត្ប្រេរយិតុះ បិតុរិឞ្ដម៑ ឦហេ។
31 ೩೧ ನನ್ನ ವಿಷಯವಾಗಿ ನಾನೇ ಸಾಕ್ಷಿ ಹೇಳಿಕೊಂಡರೆ ನನ್ನ ಸಾಕ್ಷಿಯು ಸತ್ಯವಾದದ್ದಲ್ಲ.
យទិ ស្វស្មិន៑ ស្វយំ សាក្ឞ្យំ ទទាមិ តហ៌ិ តត្សាក្ឞ្យម៑ អាគ្រាហ្យំ ភវតិ;
32 ೩೨ ನನ್ನ ವಿಷಯವಾಗಿ ಸಾಕ್ಷಿ ಹೇಳುವವನು ಮತ್ತೊಬ್ಬನಿದ್ದಾನೆ. ಆತನು ನನ್ನ ವಿಷಯವಾಗಿ ಹೇಳುವ ಸಾಕ್ಷಿಯು ನಿಜವೆಂದು ನಾನು ಬಲ್ಲೆನು.
កិន្តុ មទត៌្ហេៜបរោ ជនះ សាក្ឞ្យំ ទទាតិ មទត៌្ហេ តស្យ យត៑ សាក្ឞ្យំ តត៑ សត្យម៑ ឯតទប្យហំ ជានាមិ។
33 ೩೩ ನೀವು ಯೋಹಾನನ ಬಳಿಗೆ ದೂತರನ್ನು ಕೇಳಿಕೊಂಡು ಬರುವುದಕ್ಕೆ ಕಳುಹಿಸಿದಿರಿ. ಅವನು ಸತ್ಯಕ್ಕೆ ಸಾಕ್ಷಿ ಹೇಳಿದನು.
យុឞ្មាភិ រ្យោហនំ ប្រតិ លោកេឞុ ប្រេរិតេឞុ ស សត្យកថាយាំ សាក្ឞ្យមទទាត៑។
34 ೩೪ ನಾನಂತೂ ನನಗೆ ಬೇಕಾದ ಸಾಕ್ಷಿಯನ್ನು ಮನುಷ್ಯರಿಂದ ಸ್ವೀಕರಿಸುವುದಿಲ್ಲ. ಆದರೂ ನಿಮಗೆ ರಕ್ಷಣೆಯಾಗಬೇಕೆಂದು ಇದನ್ನು ನಿಮಗೆ ಹೇಳಿದ್ದೇನೆ.
មានុឞាទហំ សាក្ឞ្យំ នោបេក្ឞេ តថាបិ យូយំ យថា បរិត្រយធ្វេ តទត៌្ហម៑ ឥទំ វាក្យំ វទាមិ។
35 ೩೫ ಯೋಹಾನನು ಉರಿಯುವ ದೀಪದಂತೆ ಪ್ರಕಾಶಿಸಿದನು. ಅವನು ಕೊಡುವ ಬೆಳಕಿನಲ್ಲಿ ಸ್ವಲ್ಪ ಕಾಲ ಅತ್ಯಾನಂದಪಡುವುದಕ್ಕೆ ಮನಸ್ಸು ಮಾಡಿದಿರಿ.
យោហន៑ ទេទីប្យមានោ ទីប ឥវ តេជស្វី ស្ថិតវាន៑ យូយម៑ អល្បកាលំ តស្យ ទីប្ត្យានន្ទិតុំ សមមន្យធ្វំ។
36 ೩೬ ನನಗಂತೂ ಯೋಹಾನನ ಸಾಕ್ಷಿಗಿಂತ ದೊಡ್ಡದಾದಸಾಕ್ಷಿ ಉಂಟು. ಹೇಗೆಂದರೆ, ಪೂರೈಸುವುದಕ್ಕೆ ತಂದೆಯು ನನಗೆ ಕೊಟ್ಟಿರುವ ಕೆಲಸಗಳೇ, ಅಂದರೆ ನಾನು ಮಾಡುವ ಈ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆಂದು ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ.
កិន្តុ តត្ប្រមាណាទបិ មម គុរុតរំ ប្រមាណំ វិទ្យតេ បិតា មាំ ប្រេឞ្យ យទ្យត៑ កម៌្ម សមាបយិតុំ ឝក្ត្តិមទទាត៑ មយា ក្ឫតំ តត្តត៑ កម៌្ម មទត៌្ហេ ប្រមាណំ ទទាតិ។
37 ೩೭ ಇದಲ್ಲದೆ ನನ್ನನ್ನು ಕಳುಹಿಸಿಕೊಟ್ಟ ತಂದೆಯು ನನ್ನ ವಿಷಯವಾಗಿ ಸಾಕ್ಷಿ ಹೇಳಿದ್ದಾನೆ. ನೀವು ಎಂದಾದರೂ ಆತನ ಸ್ವರವನ್ನು ಕೇಳಿದ್ದೂ ಇಲ್ಲ, ಆತನ ರೂಪವನ್ನು ನೋಡಿದ್ದೂ ಇಲ್ಲ.
យះ បិតា មាំ ប្រេរិតវាន៑ មោបិ មទត៌្ហេ ប្រមាណំ ទទាតិ។ តស្យ វាក្យំ យុឞ្មាភិះ កទាបិ ន ឝ្រុតំ តស្យ រូបញ្ច ន ទ្ឫឞ្ដំ
38 ೩೮ ಆತನ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಆತನು ಕಳುಹಿಸಿದಾತನನ್ನು ನೀವು ನಂಬದೇ ಇದ್ದೀರಿ.
តស្យ វាក្យញ្ច យុឞ្មាកម៑ អន្តះ កទាបិ ស្ថានំ នាប្នោតិ យតះ ស យំ ប្រេឞិតវាន៑ យូយំ តស្មិន៑ ន វិឝ្វសិថ។
39 ೩೯ ಧರ್ಮಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ತಿಳಿದು ಅವುಗಳನ್ನು ಪರಿಶೋಧಿಸುತ್ತಿರಾ? ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿ ಕೊಡುವವುಗಳಾಗಿವೆ. (aiōnios g166)
ធម៌្មបុស្តកានិ យូយម៑ អាលោចយធ្វំ តៃ រ្វាក្យៃរនន្តាយុះ ប្រាប្ស្យាម ឥតិ យូយំ ពុធ្យធ្វេ តទ្ធម៌្មបុស្តកានិ មទត៌្ហេ ប្រមាណំ ទទតិ។ (aiōnios g166)
40 ೪೦ ಆದರೂ ಜೀವ ಹೊಂದುವುದಕ್ಕಾಗಿ ನನ್ನ ಬಳಿಗೆ ಬರುವುದಕ್ಕೆ ನಿಮಗೆ ಮನಸ್ಸಿಲ್ಲ.
តថាបិ យូយំ បរមាយុះប្រាប្តយេ មម សំនិធិម៑ ន ជិគមិឞថ។
41 ೪೧ “ನಾನು ಮನುಷ್ಯರಿಂದ ಬರುವ ಪ್ರಶಂಸೆಯನ್ನು ಸ್ವೀಕರಿಸುವುದಿಲ್ಲ,
អហំ មានុឞេភ្យះ សត្ការំ ន គ្ឫហ្លាមិ។
42 ೪೨ ಆದರೆ ನಿಮ್ಮನ್ನು ನಾನು ಬಲ್ಲೆನು. ದೇವರ ಪ್ರೀತಿ ನಿಮ್ಮೊಳಗೆ ಇಲ್ಲವೆಂದು ನನಗೆ ತಿಳಿದಿದೆ.
អហំ យុឞ្មាន៑ ជានាមិ; យុឞ្មាកមន្តរ ឦឝ្វរប្រេម នាស្តិ។
43 ೪೩ ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ ಆದರೂ ನನ್ನನ್ನು ನೀವು ಸ್ವೀಕರಿಸುವುದಿಲ್ಲ. ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ಅವನನ್ನು ನೀವು ಸ್ವೀಕರಿಸುತ್ತೀರಿ.
អហំ និជបិតុ រ្នាម្នាគតោស្មិ តថាបិ មាំ ន គ្ឫហ្លីថ កិន្តុ កឝ្ចិទ៑ យទិ ស្វនាម្នា សមាគមិឞ្យតិ តហ៌ិ តំ គ្រហីឞ្យថ។
44 ೪೪ ಒಬ್ಬನೇ ದೇವರಿಂದ ಬರುವ ಮಹಿಮೆಯನ್ನು ಅಪೇಕ್ಷಿಸದೇ ನಿಮ್ಮ ನಿಮ್ಮೊಳಗೇ ಪ್ರಶಂಸೆಯನ್ನು ಸ್ವೀಕರಿಸುವವರಾದ ನೀವು ಅದನ್ನು ನಂಬಲು ಹೇಗೆ ಸಾಧ್ಯ?
យូយម៑ ឦឝ្វរាត៑ សត្ការំ ន ចិឞ្ដត្វា កេវលំ បរស្បរំ សត្ការម៑ ចេទ៑ អាទធ្វ្វេ តហ៌ិ កថំ វិឝ្វសិតុំ ឝក្នុថ?
45 ೪೫ ನಾನು ತಂದೆಯ ಮುಂದೆ ನಿಮ್ಮ ಮೇಲೆ ಅಪವಾದ ಹೊರಿಸುತ್ತಿದ್ದೇನೆಂದು ತಿಳಿಯಬೇಡಿರಿ. ನಿಮ್ಮ ಮೇಲೆ ಅಪವಾದ ಹೊರಿಸುವವನು ಒಬ್ಬನಿದ್ದಾನೆ; ಅವನೇ ನೀವು ನಿರೀಕ್ಷೆಯಿಟ್ಟಿರುವ ಮೋಶೆ!
បុតុះ សមីបេៜហំ យុឞ្មាន៑ អបវទិឞ្យាមីតិ មា ចិន្តយត យស្មិន៑, យស្មិន៑ យុឞ្មាកំ វិឝ្វសះ សឯវ មូសា យុឞ្មាន៑ អបវទតិ។
46 ೪೬ ಅವನು ನನ್ನ ವಿಷಯವಾಗಿ ಬರೆದನು, ಆದುದರಿಂದ ನೀವು ಮೋಶೆಯನ್ನೂ ನಂಬುವವರಾಗಿದ್ದರೆ ನನ್ನನ್ನೂ ನಂಬುತ್ತಿದ್ದಿರಿ.
យទិ យូយំ តស្មិន៑ វ្យឝ្វសិឞ្យត តហ៌ិ មយ្យបិ វ្យឝ្វសិឞ្យត, យត៑ ស មយិ លិខិតវាន៑។
47 ೪೭ ಅವನು ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ನೀವು ನಂಬದಿದ್ದರೆ ನಾನು ಹೇಳುವ ಮಾತುಗಳನ್ನು ಹೇಗೆ ನಂಬುವಿರಿ?” ಎಂದನು.
តតោ យទិ តេន លិខិតវានិ ន ប្រតិថ តហ៌ិ មម វាក្យានិ កថំ ប្រត្យេឞ្យថ?

< ಯೋಹಾನನು 5 >