< ಯೋಬನು 41 >

1 ಲಿವ್ಯಾತಾನ್ ಮೊಸಳೆಯನ್ನು ಮೀನು ಗಾಳದಿಂದ ಎಳೆಯುವಿಯೋ? ಹುರಿಯಿಂದ ಅದರ ನಾಲಿಗೆಯನ್ನು ಅದುಮಿ ಬಿಗಿಯುವಿಯೋ?
လဝိသန်ကိုငါးမျှားနှင့် ဆွဲယူ၍၊ သူ၏လျှာကို ကြိုးနှင့်နှိပ်နင်းမည်လော။
2 ಅದರ ಮೂಗಿಗೆ ಗಾಳವನ್ನು ಇಡುವೆಯೋ? ಅದರ ದವಡೆಗೆ ಮುಳ್ಳನ್ನು ಚುಚ್ಚುವಿಯೋ?
သူ့ကို နှာရှုတ်တပ်၍၊ ပါးရိုး၌သံကွင်းလျှိုမည် လော။
3 ಅದು ನಿನ್ನ ಬಳಿ ವಿಜ್ಞಾಪಿಸುವುದೋ? ನಿನ್ನ ಸಂಗಡ ಸವಿಮಾತನಾಡೀತೇ?
သူသည်သင့်ကိုများစွာ တောင်းပန်လိမ့်မည် လော။ ချော့မော့သောစကားကို ပြောလိမ့်မည်လော။
4 ಅದನ್ನು ನೀನು ಸದಾ ಆಳಾಗಿ ಸೇರಿಸಿಕೊಳ್ಳುವಂತೆ, ನಿನ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದೋ?
သင်နှင့်ဝန်ခံခြင်း ပဋိညာဉ်ကို ပြုလိမ့်မည် လော။ သင်၏အမှုကို အစဉ်ဆောင်ရွက်စေခြင်းငှါ သူ့ကို ခန့်ထားမည်လော။
5 ಅದನ್ನು ಪಕ್ಷಿಯಂತೆ ಆಡಿಸುವೆಯಾ? ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟುವೆಯಾ?
ငှက်နှင့်ကစားသကဲ့သို့ သူနှင့်ကစားမည်လော။ သင်၏မိန်းမကလေးတို့အဘို့ သူ့ကိုချည်နှောင်မည်လော။
6 ಪಾಲುಗಾರರಾದ ಬೆಸ್ತರು ಅದನ್ನು ವ್ಯಾಪಾರಕ್ಕೆ ಇಡುವರೋ? ವರ್ತಕರಿಗೆ ಹಂಚಿ ಮಾರುವರೋ?
သင်၏အပေါင်းအဘော်တို့သည် သူ့ကိုဝိုင်း၍ စားသောက်ပွဲခံကြလိမ့်မည်လော။ ကုန်သည်တို့တွင် ဝေကြလိမ့်မည်လော။
7 ಅದರ ಚರ್ಮವನ್ನೆಲ್ಲ ಕೊಂಡಿಗಳಿಂದಲೂ ಅಥವಾ ತಲೆಯನ್ನೆಲ್ಲ ಮೀನಿನ ಈಟಿಗಳಿಂದಲೂ ಚುಚ್ಚಬಲ್ಲೆಯಾ?
သူ၏အရေကို မှိန်းနှင့်၎င်း၊ သူ၏ခေါင်းကို ငါးထိုးသောလှံနှင့်၎င်း၊ အနှံ့အပြားထိုးဖောက်နိုင် သလော။
8 ಅದರ ಮೇಲೆ ಕೈಹಾಕಿ ನೋಡು! ಆ ಜಗಳವನ್ನು ನೆನಸಿಕೊಂಡರೆ ನೀನು ಮತ್ತೆ ಅದನ್ನು ಮುಟ್ಟುವುದೇ ಇಲ್ಲ.
သူ့အပေါ်မှာ လက်တင်ရုံမျှသာ ပြုပါ။ သူ့ကို တိုက်မည်အကြံကို နောက်တဖန်မအောက်မေ့ရ။
9 ಆಹಾ, ಅದನ್ನು ಹಿಡಿಯಬೇಕೆಂಬ ನಿರೀಕ್ಷೆಯು ವ್ಯರ್ಥ! ಹಿಡಿಯಲು ಬಂದವನು ನೋಡಿದ ಮಾತ್ರಕ್ಕೆ ಬಿದ್ದು ಹೋಗುವನು.
တိုက်သောသူသည်နိုင်မည်ဟု အချည်းနှီး ထင်၏။ မြင်ကာမျှနှင့် စိတ်မပျက်သလော။
10 ೧೦ ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆ ಯಾರಲ್ಲಿಯೂ ಇಲ್ಲ; ಹೀಗಿರಲು ನನ್ನ ಮುಂದೆ ನಿಲ್ಲಬಲ್ಲವರು ಯಾರು?
၁၀သူ့ကိုနှိုးဆော်ခြင်းငှါ အဘယ်သူမျှမရဲရင့်။ သို့ဖြစ်၍ ငါ့ရှေ့မှာ အဘယ်သူရပ်နိုင်သနည်း။
11 ೧೧ ನಾನು ಸಾಲ ತೀರಿಸಬೇಕಾದರೆ ಮೊದಲು ಅದನ್ನು ನನಗೆ ಕೊಟ್ಟವರು ಯಾರು? ಆಕಾಶಮಂಡಲದ ಕೆಳಗಿರುವ ಸರ್ವಸ್ವವೂ ನನ್ನದೇ.
၁၁ငါသည် ကျေးဇူးတုံ့ပြုရမည်အကြောင်း အဘယ် သူသည် ငါ၌ ကျေးဇူးပြုဘူးသနည်း။ မိုဃ်းကောင်းကင် အောက်၌ ရှိသမျှတို့သည် ငါ၏ ဥစ္စာဖြစ်ကြ၏။
12 ೧೨ ನಾನು ಅದರ ಅಂಗಗಳನ್ನೂ ಶಕ್ತಿವಿಧಾನವನ್ನೂ ಸೊಗಸಾದ ಜೋಡಣೆಯನ್ನೂ ವರ್ಣಿಸದೆ ಸುಮ್ಮನಿರಲಾರೆನು.
၁၂လဝိသန်၏အင်္ဂါများ၊ ခွန်အား၊ တင့်တယ်သော တန်ဆာတို့ကို ငါသည် ဝှက်၍မထား။
13 ೧೩ ಅದರ ಹೊರಕವಚವನ್ನು ಯಾರು ತೆಗೆಯುವರು? ಜೋಡು ದವಡೆಗಳೊಳಗೆ ಪ್ರವೇಶಿಸುವವರು ಯಾರು?
၁၃သူ၏အဝတ်ကို အဘယ်သူလှန်နိုင်သနည်း။ နှစ်ထပ်ရှိသော ပါးရိုးကို အဘယ်သူချဉ်းကပ်လိမ့်မည် နည်း။
14 ೧೪ ಮುಖದ ಕದಗಳನ್ನು ಯಾರು ತೆರೆದಾರು? ಭಯವು ಅದರ ಹಲ್ಲುಗಳನ್ನು ಆವರಿಸಿಕೊಂಡಿದೆ.
၁၄သူ၏မျက်နှာတံခါးကို အဘယ်သူဖွင့်လိမ့်မည်နည်း။ သူ၏ သွားတန်းတို့သည် ကြောက်မက်ဘွယ် ဖြစ်ကြ၏။
15 ೧೫ ಗುರಾಣಿಗಳ ಸಾಲುಗಳು ಅದರ ಹೆಚ್ಚಳಕ್ಕೆ ಆಸ್ಪದವಾಗಿದೆ. ಅವು ಬಿಗಿದು ಮುದ್ರಿಸಲ್ಪಟ್ಟಿವೆ.
၁၅လုံခြုံစွာ တံဆိပ်ခတ်သကဲ့သို့ တချပ်နှင့် တချပ် ပူးကပ်သောအကြေးများနှင့် ဝါကြွားတတ်၏။
16 ೧೬ ಗಾಳಿಯು ಕೂಡ ನುಗ್ಗದಂತೆ ಅವು ಒಂದಕ್ಕೊಂದು ಹೊಂದಿಕೊಂಡಿವೆ.
၁၆လေမျှမဝင်နိုင်အောင် တချပ်နှင့်တချပ် ပူးကပ် လျက်ရှိကြ၏။
17 ೧೭ ಪರಸ್ಪರ ಅಂಟಿಕೊಂಡು ವಿಂಗಡಿಸದ ಹಾಗೆ ಹಿಡಿದುಕೊಂಡಿವೆ.
၁၇တချပ်နှင့်တချပ် မခွါနိုင်အောင် တခဲနက် ရှက်တင်လျက်ရှိကြ၏။
18 ೧೮ ಅದರ ಸೀನಿನ ತುಂತುರುಗಳು ತಳತಳಿಸುವವು, ಕಣ್ಣು ಅರುಣನೇತ್ರಕ್ಕೆ ಸಮಾನವಾಗಿದೆ.
၁၈သူချေဆတ်သောအခါ အလင်းတောက်တတ်၏။ သူ့မျက်စိသည် နံနက်မျက်တောင်ခတ်သကဲ့သို့ ဖြစ်၏။
19 ೧೯ ಬಾಯೊಳಗಿಂದ ಕೊಳ್ಳಿಗಳು ಹೊರಡುವವು, ಬೆಂಕಿಕಿಡಿಗಳು ಹಾರುವವು.
၁၉ပစပ်ထဲက မီးရူးထွက်၍ မီးပွါးတို့လည်း လွင့်ကြ၏။
20 ೨೦ ಆಪುಹುಲ್ಲಿಗೆ ಬೆಂಕಿಯಿಟ್ಟು ಊದಿ ಕಾಯಿಸಿದ ಕೊಪ್ಪರಿಗೆಯಿಂದಲೋ ಎಂಬಂತೆ ಮೂಗಿನೊಳಗಿಂದ ಹೊಗೆ ಹಾಯುವುದು.
၂၀ကြွက်ကြွက်ဆူသော အိုးကင်းထဲက အခိုးအငွေ့ တတ်သကဲ့သို့ သူ့နှာခေါင်းထဲက အခိုးအငွေ့တက်တတ် ၏။
21 ೨೧ ಅದರ ಉಸಿರೇ ಇದ್ದಲನ್ನು ಹೊತ್ತಿಸುವುದು, ಜ್ವಾಲೆಯು ಬಾಯಿಂದೇಳುವುದು.
၂၁အသက်ရှုသောအခါ မီးခဲတောက်၍ ပစပ်ထဲက မီးလျှံထွက်တတ်၏။
22 ೨೨ ಬಲವು ಕುತ್ತಿಗೆಯಲ್ಲಿ ನೆಲೆಗೊಂಡಿದೆ, ಅದರ ಮುಂದೆ ಭಯವು ಕುಣಿದಾಡುವುದು.
၂၂လည်ပင်း၌ တန်ခိုးနေတတ်၏။ သူ့ရှေ့မှာ ကြောက်လန့်ခြင်းသည် ကခုန်တတ်၏။
23 ೨೩ ಅದರ ಮಾಂಸದ ಖಂಡಗಳು ಸಡಿಲವಿಲ್ಲದೆ ಅದಕ್ಕೆ ಗಟ್ಟಿಯಾಗಿ ಅಂಟಿಕೊಂಡಿವೆ.
၂၃အသားအကြောတို့သည် တခဲနက်ဖြစ်၍ မရွေ့နိုင်အောင် ခိုင်မာလျက် ရှိကြ၏။
24 ೨೪ ಅದರ ಹೃದಯವು ಬಂಡೆಯ ಹಾಗೂ ಬೀಸುವ ಕೆಳಗಲ್ಲಿನಂತೆಯೂ ಗಟ್ಟಿಯಾಗಿದೆ.
၂၄နှလုံးသည် ကျောက်ကဲ့သို့မာ၏။ အောက်ကြိတ် ဆုံကျောက်ကဲ့သို့ မာ၏။
25 ೨೫ ಅದು ಎದ್ದರೆ ಶೂರರು ಕೂಡ ಅಂಜಿ ಹೊಡೆತಗಳಿಂದ ಭಯಭ್ರಾಂತರಾಗುವರು.
၂၅သူထသောအခါ ခွန်အားကြီးသောသူတို့သည် ကြောက်လန့်ကြ၏။ ကြောက်လန့်အားကြီးသောကြောင့် အရူးကဲ့သို့ ဖြစ်ကြ၏။
26 ೨೬ ಒಬ್ಬನು ಕತ್ತಿಯೊಡನೆ ಮೇಲೆ ಬಿದ್ದರೂ ಅದಕ್ಕೇನೂ ಆಗಲಾರದು; ಬಾಣ ಭರ್ಜಿ ಈಟಿ ಇವುಗಳೂ ವ್ಯರ್ಥವೇ.
၂၆သူ့ကိုတိုက်လျှင်ထားမခိုင်တတ်။ လှံ၊ မြှား၊ သံချပ်မခိုင်တတ်။
27 ೨೭ ಅದು ಕಬ್ಬಿಣವನ್ನು ಒಣಹುಲ್ಲನ್ನಾಗಿಯೂ ತಾಮ್ರವನ್ನು ಕೊಳೆತ ಮರವನ್ನಾಗಿಯೂ ಭಾವಿಸುವುದು.
၂၇သံကို ကောက်ရိုးကဲ့သို့၎င်း၊ ကြေးဝါကို သစ်ဆွေး ကဲ့သို့၎င်း မှတ်တတ်၏။
28 ೨೮ ಬಿಲ್ಲು ಅದನ್ನು ಓಡಿಸಲಾರದು, ಕವಣೆಯ ಕಲ್ಲುಗಳು ಅದಕ್ಕೆ ಹೊಟ್ಟಿನಂತಿರುವವು.
၂၈လေးနှင့်ပစ်၍ သူ့ကိုမပြေးစေနိုင်။ လောက်လွှဲ နှင့်ပစ်သော ကျောက်ခဲတို့သည် သူ၌ အမှိုက်ကဲ့သို့ ဖြစ်ကြ၏။
29 ೨೯ ಅದು ದೊಣ್ಣೆಗಳನ್ನು ಹುಲ್ಲುಕಡ್ಡಿಯಾಗಿ ಎಣಿಸುವುದು; ಬಿರ್ರನೆ ಬರುವ ಈಟಿಗೆ ನಗುವುದು.
၂၉ဒုတ်ကြီးကို ဖွဲကဲ့သို့မှတ်၍၊ လှံနှင့်ရွယ်သောအခါ ရယ်တတ်၏။
30 ೩೦ ಅದರ ಕೆಳಭಾಗವು ಚೂಪಾದ ಬೋಕಿಗಳಾಗಿದೆ, ಅದು ಕೆಸರಿನ ಮೇಲೆ ಹಲಗೆಯ ಹಾಗೆ ನೀಡಿಕೊಂಡಿರುವುದು.
၃၀သူ့အောက်မှာ ထက်သောအိုးစောင်းခြမ်းများရှိ၏။ ရွံ့ပေါ်မှာ ထွန်သွားများကို ဖြန့်တတ်၏။
31 ೩೧ ಜಲನಿಧಿಯನ್ನು ಹಂಡೆಯ ನೀರಿನ ಹಾಗೆ ಕುದಿಸುವುದು; ಸಮುದ್ರವನ್ನು ಕಲಕಿದ ತೈಲಪಾತ್ರೆಯಂತೆ ಮಾಡುವುದು.
၃၁အိုးကင်းဆူသကဲ့သို့ ပင်လယ်ကိုဆူစေတတ်၏။ သမုဒ္ဒရာကို ဘယောင်းချက်ကဲ့သို့ ဖြစ်စေတတ်၏။
32 ೩೨ ಸಾಗರಕ್ಕೆ ನರೆ ಬಂತೋ ಎಂಬಂತೆ ತಾನು ಬಂದ ದಾರಿಯನ್ನು ಶುಭ್ರಗೊಳಿಸುವುದು.
၃၂သူလွန်သွားသောလမ်းသည် ထွန်းတောက် သဖြင့်၊ ပင်လယ်သည် ဆံပင်ဖြူယောင်ဆောင်တတ်၏။
33 ೩೩ ಇದಕ್ಕೆ ಸಮಾನವಾದದ್ದು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ, ಭಯವಿಲ್ಲದೆ ಇರುವುದಕ್ಕಾಗಿ ಸೃಷ್ಟಿಸಲ್ಪಟ್ಟಿದೆ.
၃၃မြေပေါ်မှာသူနှင့်ခိုင်းနိုင်သော တိရစ္ဆာန်မရှိ။ ပကတိအားဖြင့် ကြောက်တတ်သောသဘောနှင့် ကင်းလွတ်၏။
34 ೩೪ ಇದು ಪ್ರತಿಯೊಂದು ದೊಡ್ಡ ಪ್ರಾಣಿಯನ್ನೂ ದಿಟ್ಟಿಸಿ ನೋಡುವುದು, ಸೊಕ್ಕಿದ ಮೃಗಗಳಿಗೆಲ್ಲಾ ರಾಜನಾಗಿರುವುದು.
၃၄ကြီးမြင့်သောအရာရှိသမျှတို့ကို မထီမဲ့မြင်ပြု တတ်၏။ မာနထောင်လွှားသောသူအပေါင်းတို့အပေါ်၌ မင်းဖြစ်သည်ဟု မိန့်တော်မူ၏။

< ಯೋಬನು 41 >