< ಯೆರೆಮೀಯನು 48 >

1 ಮೋವಾಬನನ್ನು ಕುರಿತು ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, “ಅಯ್ಯೋ ನೆಬೋ ಊರಿನ ಗತಿಯನ್ನು ಏನು ಹೇಳಲಿ! ಅದು ಹಾಳಾಯಿತು; ಕಿರ್ಯಾತಯಿಮು ಶತ್ರುವಿನ ಕೈಗೆ ಸಿಕ್ಕಿ ಮಾನಭಂಗ ಹೊಂದಿದೆ, ಮಿಸ್ಗಾಬ್ ಕೆಡವಲ್ಪಟ್ಟು ಅವಮಾನಕ್ಕೆ ಗುರಿಯಾಗಿದೆ.
Kuhusu Moabu: Hili ndilo Bwana Mwenye Nguvu Zote, Mungu wa Israeli, asemalo: “Ole wake Nebo, kwa maana utaharibiwa. Kiriathaimu utaaibishwa na kutekwa; Misgabu itaaibishwa na kuvunjavunjwa.
2 ಮೋವಾಬಿನ ಕೀರ್ತಿಯು ಮಾಯವಾಯಿತು; ಶತ್ರುಗಳು ಹೆಷ್ಬೋನಿನಲ್ಲಿ ದೇಶಕ್ಕೆ ಕೇಡನ್ನು ಕಲ್ಪಿಸಿ, ‘ಮೋವಾಬ್ ಇನ್ನು ಜನಾಂಗವೆನಿಸಿಕೊಳ್ಳದಂತೆ ಅದನ್ನು ನಿರ್ಮೂಲಮಾಡೋಣ ಬನ್ನಿರಿ’ ಎಂದು ಆಲೋಚಿಸಿಕೊಂಡಿದ್ದಾರೆ. ಮದ್ಮೆನೇ, ನೀನು ಸಹ ಸುಮ್ಮನಾಗುವಿ; ಖಡ್ಗವು ನಿನ್ನನ್ನು ಹಿಂದಟ್ಟುವುದು.
Moabu haitasifiwa tena; huko Heshboni watu watafanya shauri baya la anguko lake: ‘Njooni na tuangamize taifa lile.’ Wewe nawe, ee Madmena, utanyamazishwa; upanga utakufuatia.
3 ‘ಅಯ್ಯೋ, ಸೂರೆ ಹೋದೆವು, ಬಹು ನಾಶವಾದೆವು’ ಎಂಬ ಕೂಗಾಟವು ಹೊರೊನಯಿಮಿನಿಂದ ಕೇಳಬರುತ್ತದೆ!
Sikiliza kilio kutoka Horonaimu, kilio cha maangamizi makuu na uharibifu.
4 ಮೋವಾಬಿಗೆ ಭಂಗವಾಯಿತು; ಅಲ್ಲಿ ದಿಕ್ಕುಗೆಟ್ಟವರು ಮೊರೆಯಿಟ್ಟಿದ್ದಾರೆ.
Moabu utavunjwa, wadogo wake watapiga kelele.
5 ಅಳುತ್ತಾ ಲೂಹೀತ್ ದಿಣ್ಣೆಯನ್ನು ಹತ್ತುತ್ತಾರೆ; ನಾಶವಾದೆವಲ್ಲಾ ಎಂಬ ಪ್ರಾಣಸಂಕಟ ಪ್ರಲಾಪವು ಹೊರೊನಯಿಮ್ ಇಳಿಜಾರಿನಲ್ಲಿ ಕೇಳಿಸುತ್ತದೆ.
Wanapanda kwenda njia ya kuelekea Luhithi, wakilia kwa uchungu wanapotembea, kwenye njia inayoshuka kwenda Horonaimu, kilio cha uchungu kwa ajili ya uharibifu kinasikika.
6 ಓಡಿಹೋಗಿರಿ, ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿರಿ, ಅಡವಿಯಲ್ಲಿನ ಜಾಲಿಯಂತಿರಿ.
Kimbieni! Okoeni maisha yenu, kuweni kama kichaka jangwani.
7 ನೀನು ನಿನ್ನ ಕೆಲಸಗಳಲ್ಲಿಯೂ, ಧನರಾಶಿಗಳಲ್ಲಿಯೂ ಭರವಸವಿಟ್ಟದ್ದರಿಂದ ನೀನೂ ಶತ್ರುವಿನ ಕೈವಶವಾಗುವಿ; ಕೆಮೋಷ್ ದೇವತೆಯೂ ಅದರ ಭಕ್ತರಾದ ಯಾಜಕರೂ ಮತ್ತು ಪ್ರಧಾನರೂ ಒಟ್ಟಾಗಿ ಸೆರೆಗೆ ಹೋಗುವರು.
Kwa kuwa mmetumainia matendo yenu na mali zenu, ninyi pia mtachukuliwa mateka, naye Kemoshi atakwenda uhamishoni, pamoja na makuhani wake na maafisa wake.
8 ಸೂರೆಗಾರನು ಪ್ರತಿಯೊಂದು ಪಟ್ಟಣದ ಮೇಲೆ ಬೀಳುವನು, ಯಾವ ಪಟ್ಟಣವೂ ಉಳಿಯದು; ಯೆಹೋವನು ನುಡಿದಂತೆಯೇ ತಗ್ಗಿನ ಭೂಮಿಯು ಹಾಳಾಗುವುದು, ಮೇಲ್ನಾಡೂ ನಾಶವಾಗುವುದು.
Mharabu atakuja dhidi ya kila mji, wala hakuna mji utakaookoka. Bonde litaangamizwa na uwanda utaharibiwa, kwa sababu Bwana amesema.
9 ಮೋವಾಬಿಗೆ ರೆಕ್ಕೆ ಕಟ್ಟಿರಿ, ಅದು ಹಾರಿಹೋಗಬೇಕಲ್ಲಾ; ಅದರ ಪಟ್ಟಣಗಳು ಹಾಳುಬಿದ್ದು ನಿರ್ಜನವಾಗುವವು.
Wekeni chumvi kwa ajili ya Moabu, kwa kuwa ataangamizwa; miji yake itakuwa ukiwa, pasipo kuwa na mtu atakayeishi ndani yake.
10 ೧೦ ಯೆಹೋವನು ನೇಮಿಸಿದ ಕೆಲಸದಲ್ಲಿ ಆಲಸ್ಯಗಾರನು ಶಾಪಗ್ರಸ್ತನಾಗಲಿ; ತನ್ನ ಕತ್ತಿಯನ್ನು ರಕ್ತಸುರಿಸದಂತೆ ತಡೆಯುವವನಿಗೆ ಶಾಪ ತಗಲಲಿ.
“Alaaniwe yeye afanyaye kazi ya Bwana kwa hila! Alaaniwe yeye auzuiaye upanga wake usimwage damu!
11 ೧೧ ಮೋವಾಬು ಚಿಕ್ಕಂದಿಂದಲೂ ನೆಮ್ಮದಿಯಾಗಿದೆ; ಅದು ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತಿದೆ; ಅದನ್ನು ಪಾತ್ರೆಯಿಂದ ಪಾತ್ರೆಗೆ ಯಾರೂ ಹೊಯ್ಯಲಿಲ್ಲ, ಅದು ಸೆರೆಹೋಗಲಿಲ್ಲ; ಆದಕಾರಣ ಅದರ ರುಚಿಯು ಅದರಲ್ಲಿದೆ, ಅದರ ವಾಸನೆಯು ಬೇರ್ಪಡಲಿಲ್ಲ.”
“Moabu amestarehe tangu ujana wake, kama divai iliyoachwa kwenye machujo yake, haikumiminwa kutoka chombo kimoja hadi kingine, hajaenda uhamishoni. Kwa hiyo ana ladha ile ile kama aliyokuwa nayo, nayo harufu yake haijabadilika.
12 ೧೨ ಹೀಗಿರಲು ಯೆಹೋವನು ಇಂತೆನ್ನುತ್ತಾನೆ, “ಇಗೋ, ಮುಂದಿನ ಕಾಲದಲ್ಲಿ ನಾನು ಅವರ ಬಳಿಗೆ ಹೊಯ್ಯತಕ್ಕವರನ್ನು ಕಳುಹಿಸುವೆನು, ಅವರು ಅದನ್ನು ಹೊಯ್ದುಬಿಡುವರು, ಪಾತ್ರೆಗಳನ್ನು ಬರಿದು ಮಾಡುವರು, ಗಡಿಗೆಗಳನ್ನು ಒಡೆದುಬಿಡುವರು” ಎಂಬುದೇ.
Lakini siku zinakuja,” asema Bwana, “nitakapotuma watu wamiminao kutoka kwenye magudulia, nao watamimina; wataacha magudulia yake yakiwa matupu na kuvunja mitungi yake.
13 ೧೩ ಆಗ ಇಸ್ರಾಯೇಲ್ ವಂಶದವರು ತಮಗೆ ಭರವಸವಾದ ಬೇತೇಲಿನಿಂದ ಆಶಾಭಂಗಪಟ್ಟಂತೆ ಮೋವಾಬ್ಯರು ಕೆಮೋಷಿನಿಂದ ಆಶಾಭಂಗಪಡುವರು.
Kisha Moabu atamwonea aibu mungu wao Kemoshi, kama vile nyumba ya Israeli walivyoona aibu walipotegemea mungu wa Betheli.
14 ೧೪ “‘ನಾವು ಶೂರರು, ಯುದ್ಧಪ್ರವೀಣರಾದ ಪರಾಕ್ರಮಶಾಲಿಗಳು’ ಎಂದು ನೀವು ಅಂದುಕೊಳ್ಳುವುದು ಹೇಗೆ?
“Mwawezaje kusema, ‘Sisi ni mashujaa, watu jasiri katika vita’?
15 ೧೫ ಮೋವಾಬು ಹಾಳಾಗಿದೆ; ಸುಟ್ಟುಹೋದ ಅದರ ಪಟ್ಟಣಗಳಿಂದ ಹೊಗೆ ಎದ್ದಿದ್ದೆ. ಅದರಲ್ಲಿನ ಶ್ರೇಷ್ಠ ಯುವಕರು ಹತರಾಗುವುದಕ್ಕೆ ಇಳಿದುಹೋಗಿದ್ದಾರೆ. ಇದು ಸೇನಾಧೀಶ್ವರನಾದ ಯೆಹೋವನೆಂಬ ನಾಮವುಳ್ಳ ರಾಜಾಧಿರಾಜನ ನುಡಿ.
Moabu ataangamizwa na miji yake itavamiwa, vijana wake waume walio bora sana watachinjwa,” asema Mfalme, ambaye jina lake ni Bwana Mungu Mwenye Nguvu Zote.
16 ೧೬ ಮೋವಾಬಿಗೆ ದುರ್ಗತಿ ಸಮೀಪಿಸಿದೆ, ವಿಪತ್ತು ಬೇಗ ಬರುವುದು.
“Kuanguka kwa Moabu kumekaribia, janga kubwa litamjia kwa haraka.
17 ೧೭ ಮೋವಾಬಿನ ನೆರೆಹೊರೆಯವರೇ, ಅದರ ಹೆಸರನ್ನೂ, ಪ್ರಖ್ಯಾತಿಯನ್ನು ಬಲ್ಲವರೇ, ನೀವೆಲ್ಲರೂ ಅದಕ್ಕಾಗಿ ಎದೆಬಡುಕೊಳ್ಳಿರಿ. ‘ಅಯ್ಯೋ, ಬಲವಾದ ಕೋಲು, ಮಹಿಮೆಯ ದಂಡವು ಮುರಿದುಹೋಯಿತಲ್ಲಾ’ ಎಂದು ಪ್ರಲಾಪಿಸಿರಿ.
Ombolezeni kwa ajili yake, ninyi nyote mnaomzunguka, ninyi nyote mnaojua sifa zake, semeni, ‘Tazama jinsi ilivyovunjika fimbo ya kifalme yenye nguvu, tazama jinsi ilivyovunjika fimbo iliyotukuka!’
18 ೧೮ ಯುವತಿಯೇ, ದೀಬೋನ್ ಪುರಿಯೇ, ನಿನ್ನ ಮಹಿಮೆಯ ಪದವಿಯಿಂದ ಕೆಳಕ್ಕಿಳಿದು ಬಾಯಾರಿದವಳಾಗಿ ಕುಳಿತುಕೋ! ಮೋವಾಬನ್ನು ಹಾಳುಮಾಡುವವನು ನಿನ್ನ ವಿರುದ್ಧವಾಗಿ ಬಂದು ನಿನ್ನ ಕೋಟೆಕೊತ್ತಲಗಳನ್ನು ಕೆಡವಿದ್ದಾನಲ್ಲಾ.
“Shuka kutoka fahari yako na uketi katika ardhi iliyokauka, enyi wenyeji wa Binti wa Diboni, kwa maana yeye aangamizaye Moabu atakuja dhidi yako, na kuangamiza miji yako iliyozungushiwa maboma.
19 ೧೯ ಅರೋಯೇರಿನವರೇ, ದಾರಿಯ ಮಗ್ಗುಲಲ್ಲಿ ನಿಂತುಕೊಂಡು ನೋಡಿರಿ; ಓಡಿಹೋಗುವವನನ್ನೂ ಮತ್ತು ತಪ್ಪಿಸಿಕೊಳ್ಳುವವಳನ್ನೂ ‘ಏನಾಯಿತು?’ ಎಂದು ವಿಚಾರಿಸಿರಿ.
Simama kando ya barabara na utazame, wewe unayeishi Aroeri. Muulize mwanaume anayekimbia na mwanamke anayetoroka, waulize, ‘Kumetokea nini?’
20 ೨೦ ಮೋವಾಬು ಭಂಗಪಟ್ಟು ಅವಮಾನಕ್ಕೆ ಈಡಾಗಿದೆ; ಗೋಳಾಡಿರಿ, ದುಃಖದಿಂದ ಕೂಗಿರಿ; ಮೋವಾಬು ಹಾಳಾಯಿತೆಂದು ಅರ್ನೋನಿನ ತೀರದಲ್ಲಿ ತಿಳಿಸಿರಿ.
Moabu amefedheheshwa, kwa kuwa amevunjavunjwa. Lieni kwa huzuni na kupiga kelele! Tangazeni kando ya Arnoni kwamba Moabu ameangamizwa.
21 ೨೧ ಮೇಲ್ನಾಡಿಗೆ ದಂಡನೆಯಾಗಿದೆ; ಹೋಲೋನ್, ಯಾಚಾ, ಮೆಫಾತ್,
Hukumu imefika kwenye uwanda wa juu: katika Holoni, Yahasa na Mefaathi,
22 ೨೨ ದೀಬೋನ್, ನೆಬೋ ಮತ್ತು ಬೇತ್ ದಿಬ್ಲಾತಯಿಮ್,
katika Diboni, Nebo na Beth-Diblathaimu,
23 ೨೩ ಕಿರ್ಯಾತಯಿಮ್, ಬೇತ್ ಗಾಮೂಲ್ ಮತ್ತು ಬೇತ್ ಮೆಯೋನ್,
katika Kiriathaimu, Beth-Gamuli na Beth-Meoni,
24 ೨೪ ಕೆರೀಯೋತ್, ಬೊಚ್ರ ಅಂತು ದೂರದ ಮತ್ತು ಹತ್ತಿರದ ಮೋವಾಬಿನ ಎಲ್ಲಾ ಪಟ್ಟಣಗಳಿಗೂ ದಂಡನೆಯಾಗದೆ ಇರುವುದಿಲ್ಲ.
katika Keriothi na Bosra; kwa miji yote ya Moabu, iliyoko mbali na karibu.
25 ೨೫ ಮೋವಾಬಿನ ಕೊಂಬು ಕಡಿದು ಬಿದ್ದಿದೆ, ಅದರ ತೋಳು ಮುರಿದುಹೋಗಿದೆ. ಇದು ಯೆಹೋವನ ನುಡಿ” ಎಂಬುದೇ.
Pembe ya Moabu imekatwa, mkono wake umevunjwa,” asema Bwana.
26 ೨೬ “ಮೋವಾಬಿಗೆ ತಲೆಗೇರುವಂತೆ ಕುಡಿಸಿರಿ, ಅದು ಯೆಹೋವನನ್ನು ತಿರಸ್ಕರಿಸಿ ಉಬ್ಬಿಕೊಂಡಿತಲ್ಲಾ; ಅದು ತನ್ನ ವಾಂತಿಯಲ್ಲಿ ದೊಪ್ಪನೆ ಬಿದ್ದು ಪರಿಹಾಸ್ಯಕ್ಕೆ ಗುರಿಯಾಗುವುದು.
“Mlevye, kwa kuwa amemdharau Bwana. Moabu na agaegae katika matapishi yake, yeye na awe kitu cha dhihaka.
27 ೨೭ ಇಸ್ರಾಯೇಲೇ ನಿನಗೆ ಗೇಲಿಯಾಯಿತಷ್ಟೆ. ಅದು ಕಳ್ಳರ ಗುಂಪಿನಲ್ಲಿ ಸೇರಿದ್ದಾಗಿ ಹಿಡಿಯಲ್ಪಟ್ಟಿತೋ? ನೀನು ಇಸ್ರಾಯೇಲಿನ ಪ್ರಸ್ತಾಪ ಎತ್ತುವಾಗೆಲ್ಲಾ ತಲೆಯಾಡಿಸುತ್ತೀಯಲ್ಲವೆ?
Je, Israeli hakuwa kitu chako cha kudhihakiwa? Je, alikamatwa miongoni mwa wezi, kiasi cha kutikisa kichwa chako kwa dharau kila mara unapozungumza juu yake?
28 ೨೮ ಮೋವಾಬ್ಯರೇ, ಪಟ್ಟಣಗಳನ್ನು ಬಿಟ್ಟು ಬಂಡೆಯ ಗುಹೆಗಳಲ್ಲಿ ವಾಸಿಸಿರಿ; ಹಳ್ಳಕೊಳ್ಳದ ಆಚೆಯ ಪಕ್ಕದಲ್ಲಿ ಗೂಡನ್ನು ಕಟ್ಟಿಕೊಳ್ಳುವ ಪಾರಿವಾಳದಂತಿರಿ;
Ondokeni kwenye miji yenu, mkaishi katikati ya miamba, enyi mnaoishi Moabu. Kuweni kama huwa ambaye hutengeneza kiota chake kwenye mdomo wa pango.
29 ೨೯ ಮೋವಾಬ್ಯರಿಗೆ ಬಹು ಸೊಕ್ಕೇರಿದೆ ಎಂಬ ಅವರ ಹೆಮ್ಮೆಯ ಸುದ್ದಿಯೂ, ಅವರ ಡಂಭ, ಅಹಂಕಾರ, ಸ್ವಾಭಿಮಾನ ಮತ್ತು ಸ್ವಪ್ರತಿಷ್ಠೆ ಇವುಗಳ ಸಮಾಚಾರವೂ ನಮ್ಮ ಕಿವಿಗೆ ಬಿದ್ದಿವೆ.”
“Tumesikia juu ya kiburi cha Moabu: kutakabari kwake kwa kiburi na majivuno, kiburi chake na ufidhuli wake, na kujivuna kwa moyo wake.
30 ೩೦ ಯೆಹೋವನು ಹೇಳುವುದೇನೆಂದರೆ, “ಅವರ ಗರ್ವೋದ್ರೇಕವು ನನಗೆ ಗೊತ್ತು, ಅದು ಬರೀ ಬುರುಡೆಯೇ; ಅವರು ಕೊಚ್ಚಿಕೊಳ್ಳುವುದೆಲ್ಲಾ ನಿರರ್ಥಕ.
Ninaujua ujeuri wake, lakini ni bure,” asema Bwana, “nako kujisifu kwake hakumsaidii chochote.
31 ೩೧ ಆದಕಾರಣ ನಾನು ಮೋವಾಬಿನ ನಿಮಿತ್ತ ಗೋಳಾಡುವೆನು; ಹೌದು, ಇಡೀ ದೇಶದ ದುರ್ಗತಿಯನ್ನು ನೋಡಿ ಪ್ರಲಾಪಿಸುವೆನು; ಕೀರ್ ಹೆರೆಸಿನವರ ವಿಷಯವಾಗಿ ನರಳಾಟವಾಗುವುದು.
Kwa hiyo namlilia Moabu, kwa ajili ya Moabu yote ninalia, ninaomboleza kwa ajili ya watu wa Kir-Haresethi.
32 ೩೨ ಸಿಬ್ಮದ ದ್ರಾಕ್ಷಾಲತೆಯೇ, ಯಜ್ಜೇರಿನ ನಿಮಿತ್ತ ಅಳುವುದಕ್ಕಿಂತಲೂ ನಿನ್ನನ್ನು ಕಂಡು ಹೆಚ್ಚಾಗಿ ಅಳುವೆನು; ನಿನ್ನ ಶಾಖೆಗಳು ಸಮುದ್ರದಾಚೆಗೂ ಯಜ್ಜೇರಿನ ಸರೋವರದವರೆಗೂ ವ್ಯಾಪಿಸಿದ್ದವಲ್ಲಾ; ಈಗ ನಿನ್ನ ಹಣ್ಣುಹಂಪಲುಗಳ ಮೇಲೆಯೂ ಮತ್ತು ದ್ರಾಕ್ಷಿಯ ಸುಗ್ಗಿಯ ಮೇಲೆಯೂ ಸೂರೆಗಾರನು ಬಿದ್ದಿದ್ದಾನೆ.
Ninalia machozi kwa ajili yenu, kama Yazeri aliavyo, enyi mizabibu ya Sibma. Matawi yako yameenea hadi baharini; yamefika hadi bahari ya Yazeri. Mharabu ameyaangukia matunda yako yaliyoiva na mizabibu yako iliyoiva.
33 ೩೩ ಹರ್ಷಾನಂದಗಳು ತೋಟಗಳಿಂದಲೂ, ಮೋವಾಬಿನ ಇಡೀ ದೇಶದಿಂದಲೂ ತೊಲಗಿವೆ; ತೊಟ್ಟಿಗಳಲ್ಲಿ ದ್ರಾಕ್ಷಾರಸವು ಇಲ್ಲದಂತೆ ಮಾಡಿದ್ದೇನೆ; ಯಾರೂ ದ್ರಾಕ್ಷಿತೊಟ್ಟಿಯಲ್ಲಿ ತುಳಿಯುತ್ತಾ ಹರ್ಷಧ್ವನಿಗೈಯರು; ಕೇಳಿಸುವ ಧ್ವನಿ ಹರ್ಷಧ್ವನಿಯಲ್ಲ.
Shangwe na furaha vimetoweka kutoka bustani na mashamba ya Moabu. Nimekomesha kutiririka kwa divai kutoka mashinikizo; hakuna hata mmoja ayakanyagaye kwa kelele za shangwe. Ingawa kuna kelele, sio kelele za shangwe.
34 ೩೪ ಹೆಷ್ಬೋನಿನಿಂದ ಎಲೆಯಾಲೆಯ ಮತ್ತು ಯಹಚಿನವರೆಗೆ ಜನರು ಅರಚಿಕೊಳ್ಳುತ್ತಾರೆ, ಚೋಯರಿನಿಂದ ಹೊರೊನಯಿಮಿನ ಮತ್ತು ಎಗ್ಲತ್ ಶೆಲಿಶೀಯದವರೆಗೆ ಕಿರಿಚಿಕೊಳ್ಳುತ್ತಾರೆ; ನಿಮ್ರೀಮ್ ಹಳ್ಳವೂ ಹಾಳಾಗಿದೆ.
“Sauti ya kilio chao inapanda kutoka Heshboni hadi Eleale na Yahazi, kutoka Soari hadi Horonaimu na Eglath-Shelishiya, kwa kuwa hata maji ya Nimrimu yamekauka.
35 ೩೫ ಮೋವಾಬಿನೊಳಗೆ ಪೂಜಾಸ್ಥಾನದಲ್ಲಿ ಬಲಿಯರ್ಪಿಸುವವರನ್ನೂ ತಮ್ಮ ದೇವರುಗಳಿಗೆ ಧೂಪಹಾಕುವವರನ್ನೂ ನಿರ್ಮೂಲಮಾಡುವೆನು. ಇದು ಯೆಹೋವನ ನುಡಿ.”
Nitakomesha wale wote katika Moabu watoao sadaka mahali pa juu, na kufukiza uvumba kwa miungu yao,” asema Bwana.
36 ೩೬ ಆದುದರಿಂದ ಮೋವಾಬಿನ ಮತ್ತು ಕೀರ್ ಹೆರೆಸಿನವರ ನಿಮಿತ್ತ ನನ್ನ ಹೃದಯವು ಕೊಳಲುಗಳಂತೆ ಮೊರೆಯಿಡುತ್ತದೆ; ಮೋವಾಬ್ಯರು ಕೂಡಿಸಿಟ್ಟ ಹೇರಳವಾದ ಆಸ್ತಿಯು ಮಾಯವಾಯಿತಲ್ಲಾ.
“Kwa hiyo moyo wangu unaomboleza kwa ajili ya Moabu kama filimbi; unaomboleza kama filimbi kwa ajili ya watu wa Kir-Haresethi. Utajiri waliojipatia umetoweka.
37 ೩೭ ಎಲ್ಲರ ತಲೆಯು ಬೋಳು, ಎಲ್ಲರ ಗಡ್ಡವು ವಿಕಾರ, ಎಲ್ಲರ ಕೈಯಲ್ಲಿ ಗಾಯ, ಎಲ್ಲರ ನಡುವಿನ ಮೇಲೆ ಗೋಣಿತಟ್ಟು.
Kila kichwa kimenyolewa na kila mwenye ndevu zimekatwa; kila mkono umekatwa na kila kiuno kimefunikwa kwa nguo ya gunia.
38 ೩೮ ಮೋವಾಬಿನ ಎಲ್ಲಾ ಮಾಳಿಗೆಗಳ ಮೇಲೆಯೂ, ಚೌಕಗಳಲ್ಲಿಯೂ ರೋದನವು ತುಂಬಿದೆ; “ಮೋವಾಬನ್ನು ಯಾರಿಗೂ ಇಷ್ಟವಲ್ಲದ ಮಡಿಕೆಯಂತೆ ಒಡೆದುಬಿಟ್ಟಿದ್ದೇನೆ” ಎಂದು ಯೆಹೋವನು ಅನ್ನುತ್ತಾನೆ.
Juu ya mapaa yote katika Moabu na katika viwanja hakuna kitu chochote isipokuwa maombolezo, kwa kuwa nimemvunja Moabu kama gudulia ambalo hakuna mtu yeyote anayelitaka,” asema Bwana.
39 ೩೯ ಆಹಾ, ಭಂಗವಾಯಿತು! ಕಿರಿಚಿಕೊಳ್ಳುತ್ತಾರಲ್ಲಾ! ಓಹೋ, ಮೋವಾಬು ನಾಚಿಕೆಯಿಂದ ಬೆನ್ನು ತೋರಿಸಿದೆ! ಅದರ ನೆರೆಹೊರೆಯವರು ಅಣಕಿಸುವುದಕ್ಕೂ ಮತ್ತು ಬೆಚ್ಚಿಬೀಳುವುದಕ್ಕೂ ಆಸ್ಪದವಾಗಿದೆ.
“Tazama jinsi alivyovunjikavunjika! Jinsi wanavyolia kwa huzuni! Tazama jinsi Moabu anavyogeuka kwa aibu! Moabu amekuwa kitu cha kudhihakiwa, kitu cha kutisha kwa wale wote wanaomzunguka.”
40 ೪೦ ಯೆಹೋವನು ಇಂತೆನ್ನುತ್ತಾನೆ, “ಇಗೋ, ಮೋವಾಬಿನ ಮೇಲೆ ಎರಗಬೇಕೆಂದು ಶತ್ರುವು ರಣಹದ್ದಿನಂತೆ ರೆಕ್ಕೆಗಳನ್ನು ಹರಡಿ ಹಾರುವನು.
Hili ndilo asemalo Bwana: “Tazama! Tai anashuka chini, akitanda mabawa yake juu ya Moabu.
41 ೪೧ ಪಟ್ಟಣಗಳನ್ನು ಹಿಡಿದಿದ್ದಾನೆ, ಕೋಟೆಗಳನ್ನು ಆಕ್ರಮಿಸಿದ್ದಾನೆ; ಆ ದಿನಗಳಲ್ಲಿ ಮೋವಾಬಿನ ಶೂರರ ಎದೆಯು ಹೆರುವ ಹೆಂಗಸಿನ ಎದೆಯಂತೆ ಅದರುವುದು.
Miji itatekwa na ngome zake zitatwaliwa. Katika siku hiyo, mioyo ya mashujaa wa Moabu itakuwa kama moyo wa mwanamke katika utungu wa kuzaa.
42 ೪೨ ಮೋವಾಬು ಯೆಹೋವನನ್ನು ತಿರಸ್ಕರಿಸಿ ಉಬ್ಬಿಕೊಂಡಿದ್ದರಿಂದ ಅದು ಹಾಳಾಗಿ ಇನ್ನು ಜನಾಂಗವೆನಿಸಿಕೊಳ್ಳದು.”
Moabu ataangamizwa kama taifa kwa sababu amemdharau Bwana.
43 ೪೩ ಯೆಹೋವನು ಇಂತೆನ್ನುತ್ತಾನೆ, “ಮೋವಾಬಿನ ನಿವಾಸಿಯೇ, ಭಯವೂ, ಗುಂಡಿಯೂ, ಬಲೆಯೂ ನಿನಗೆ ಕಾದಿವೆ;
Hofu kuu, shimo na mtego vinawangojea, enyi watu wa Moabu,” asema Bwana.
44 ೪೪ ಭಯಕ್ಕೆ ಓಡುವವನು ಗುಂಡಿಯಲ್ಲಿ ಬೀಳುವನು; ಗುಂಡಿಯಿಂದ ಹತ್ತಿ ಬರುವವನು ಬಲೆಗೆ ಸಿಕ್ಕುವನು; ನಾನು ದಂಡನೆಯ ವರ್ಷವನ್ನು ಮೋವಾಬಿಗೆ ಬರಮಾಡುವೆನಷ್ಟೆ. ಇದು ಯೆಹೋವನ ನುಡಿ.”
“Yeyote atakayeikimbia hiyo hofu kuu ataanguka ndani ya shimo, yeyote atakayepanda kutoka shimoni, atanaswa katika mtego, kwa sababu nitaletea Moabu mwaka wa adhabu yake,” asema Bwana.
45 ೪೫ ಪಲಾಯನವಾದವರು ಬಲಗುಂದಿದವರಾಗಿ ಹೆಷ್ಬೋನಿನ ನೆರಳಿನಲ್ಲಿ ನಿಂತಿದ್ದಾರೆ; ಆದರೆ ಸೀಹೋನನ ರಾಜ್ಯಕ್ಕೆ ಸೇರಿದ ಹೆಷ್ಬೋನಿನಿಂದಲೂ ಅಗ್ನಿಜ್ವಾಲೆ ಹೊರಟು ಮೋವಾಬಿನ ಹಣೆಯನ್ನೂ, ಯುದ್ಧವೀರರ ನೆತ್ತಿಯನ್ನೂ ನುಂಗಿಬಿಟ್ಟಿದೆ.
“Katika kivuli cha Heshboni, wakimbizi wamesimama pasipo msaada, kwa kuwa moto umezimika huko Heshboni, mwali wa moto kutoka katikati ya Sihoni; unaunguza vipaji vya nyuso za Moabu, mafuvu yao wenye kujivuna kwa kelele.
46 ೪೬ “ಮೋವಾಬ್ಯರೇ, ನಿಮ್ಮ ಗತಿಯೇನೆಂದು ಹೇಳಲಿ? ಕೆಮೋಷಿನ ಭಕ್ತರು ನಾಶವಾದರು; ನಿನ್ನ ಗಂಡು, ಹೆಣ್ಣುಮಕ್ಕಳು ಗಡೀಪಾರಾಗಿ ಸೆರೆಯಾದರು.
Ole wako, ee Moabu! Watu wa Kemoshi wameangamizwa; wana wako wamepelekwa uhamishoni na binti zako wamechukuliwa mateka.
47 ೪೭ ಆದರೂ ಅಂತ್ಯದಲ್ಲಿ ನಾನು ಮೋವಾಬಿನ ದುರವಸ್ಥೆಯನ್ನು ತಪ್ಪಿಸುವೆನು ಎಂದು ಯೆಹೋವನು ಅನ್ನುತ್ತಾನೆ”. ಮೋವಾಬಿನ ವಿಷಯವಾದ ನ್ಯಾಯತೀರ್ಪು ಇದೇ.
“Lakini nitarudisha mateka wa Moabu, katika siku zijazo,” asema Bwana. Huu ndio mwisho wa hukumu juu ya Moabu.

< ಯೆರೆಮೀಯನು 48 >