< ಯೆರೆಮೀಯನು 45 >

1 ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ನೇರೀಯನ ಮಗನಾದ ಬಾರೂಕನು ಯೆರೆಮೀಯನ ಮಾತುಗಳನ್ನು ಅವನ ಬಾಯಿಂದ ಬಂದ ಹಾಗೆಯೇ ಪುಸ್ತಕದಲ್ಲಿ ಬರೆದಾಗ ಪ್ರವಾದಿಯಾದ ಯೆರೆಮೀಯನು ಯೆಹೋವನ ಅಪ್ಪಣೆಯ ಪ್ರಕಾರ ಈ ವಾಕ್ಯವನ್ನು ಅವನಿಗೆ ಹೇಳಿದನು.
הַדָּבָ֗ר אֲשֶׁ֤ר דִּבֶּר֙ יִרְמְיָ֣הוּ הַנָּבִ֔יא אֶל־בָּר֖וּךְ בֶּֽן־נֵֽרִיָּ֑ה בְּכָתְבוֹ֩ אֶת־הַדְּבָרִ֨ים הָאֵ֤לֶּה עַל־סֵ֙פֶר֙ מִפִּ֣י יִרְמְיָ֔הוּ בַּשָּׁנָה֙ הָֽרְבִעִ֔ית לִיהוֹיָקִ֧ים בֶּן־יֹאשִׁיָּ֛הוּ מֶ֥לֶךְ יְהוּדָ֖ה לֵאמֹֽר׃ ס
2 “ಬಾರೂಕನೇ, ಇಸ್ರಾಯೇಲಿನ ದೇವರಾದ ಯೆಹೋವನು ನಿನಗೆ ಹೀಗೆ ಹೇಳುತ್ತಾನೆ, ‘ನನ್ನ ಗತಿಯನ್ನು ಏನು ಹೇಳಲಿ?
כֹּֽה־אָמַ֥ר יְהוָ֖ה אֱלֹהֵ֣י יִשְׂרָאֵ֑ל עָלֶ֖יךָ בָּרֽוּךְ׃
3 ವ್ಯಥೆಪಡುತ್ತಿದ್ದ ನನ್ನನ್ನು ಯೆಹೋವನು ಹೆಚ್ಚೆಚ್ಚಾಗಿ ದುಃಖಪಡಿಸಿದ್ದಾನೆ; ನಾನು ನರಳಿ ನರಳಿ ದಣಿದಿದ್ದೇನೆ, ನನಗೆ ಯಾವ ವಿಶ್ರಾಂತಿಯೂ ದೊರಕದು’ ಎಂದು ನೀನು ಹೇಳಿದೆಯಲ್ಲಾ,
אָמַ֙רְתָּ֙ אֽוֹי־נָ֣א לִ֔י כִּֽי־יָסַ֧ף יְהוָ֛ה יָג֖וֹן עַל־מַכְאֹבִ֑י יָגַ֙עְתִּי֙ בְּאַנְחָתִ֔י וּמְנוּחָ֖ה לֹ֥א מָצָֽאתִי׃ ס
4 ಯೆಹೋವನ ಈ ವಾಕ್ಯವನ್ನು ಕೇಳು, ಇಗೋ, ನಾನು ಕಟ್ಟಿದ್ದನ್ನು ನಾನೇ ಕೆಡವುವೆನು, ನಾನು ನೆಟ್ಟದ್ದನ್ನು ನಾನೇ ಕಿತ್ತುಹಾಕುವೆನು; ಹೌದು, ಭೂಮಂಡಲದಲ್ಲೆಲ್ಲಾ ಹಾಗೆ ಮಾಡುವೆನು.
כֹּ֣ה ׀ תֹּאמַ֣ר אֵלָ֗יו כֹּ֚ה אָמַ֣ר יְהוָ֔ה הִנֵּ֤ה אֲשֶׁר־בָּנִ֙יתִי֙ אֲנִ֣י הֹרֵ֔ס וְאֵ֥ת אֲשֶׁר־נָטַ֖עְתִּי אֲנִ֣י נֹתֵ֑שׁ וְאֶת־כָּל־הָאָ֖רֶץ הִֽיא׃
5 ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳುತ್ತೀಯೋ? ನಿರೀಕ್ಷಿಸ ಬೇಡ; ಆಹಾ, ನಾನು ನರಜನ್ಮದವರೆಲ್ಲರಿಗೂ ಕೇಡನ್ನು ಉಂಟುಮಾಡುವೆನು; ಆದರೆ ನೀನು ಎಲ್ಲಿಗೆ ಹೋದರೂ ಪ್ರಾಣವೊಂದನ್ನೇ ಉಳಿಸಿಕೊಳ್ಳುವುದಕ್ಕೆ ನಿನಗೆ ಅವಕಾಶ ಕೊಡುವೆನು. ಇದು ಯೆಹೋವನಾದ ನನ್ನ ನುಡಿ.”
וְאַתָּ֛ה תְּבַקֶּשׁ־לְךָ֥ גְדֹל֖וֹת אַל־תְּבַקֵּ֑שׁ כִּ֡י הִנְנִי֩ מֵבִ֨יא רָעָ֤ה עַל־כָּל־בָּשָׂר֙ נְאֻם־יְהוָ֔ה וְנָתַתִּ֨י לְךָ֤ אֶֽת־נַפְשְׁךָ֙ לְשָׁלָ֔ל עַ֥ל כָּל־הַמְּקֹמ֖וֹת אֲשֶׁ֥ר תֵּֽלֶךְ־שָֽׁם׃ ס

< ಯೆರೆಮೀಯನು 45 >