< ಯೆರೆಮೀಯನು 36 >

1 ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಯೆಹೋವನು ಯೆರೆಮೀಯನಿಗೆ,
Ilikuja tokea katika mwaka wa nne wa Yehoyakimu mwana wa Yosiah mfalme wa Yuda, kwamba neno hili lilikuja kwa Yeremiah kutoka kwa Yahwe, na alisema,
2 “ನೀನು ಗ್ರಂಥ ಬರೆಯತಕ್ಕ ಸುರುಳಿಯನ್ನು ತೆಗೆದುಕೊಂಡು, ನಾನು ಯೋಷೀಯನ ಕಾಲದಲ್ಲಿ ನಿನ್ನ ಸಂಗಡ ಮಾತನಾಡಿದ ದಿನದಿಂದ ಇಂದಿನವರೆಗೂ ಇಸ್ರಾಯೇಲು, ಯೆಹೂದ, ಸಕಲ ಜನಾಂಗಗಳು ಇವುಗಳ ವಿಷಯವಾಗಿ ನಿನಗೆ ನುಡಿಯುತ್ತಾ ಬಂದಿರುವ ಮಾತುಗಳನ್ನೆಲ್ಲಾ ಬರೆ.
“Chukua kitabu kwa ajili yako na uandike juu yake maneno yote ambayo nimekwisha kukuambia kuhusiana na Israel na Yuda, na kila taifa. Fanya hivi kwa kila kitu nilichokuambia tokea siku za Yosia mpaka siku ile.
3 ಒಂದು ವೇಳೆ ಯೆಹೂದ ವಂಶದವರು ನಾನು ಅವರಿಗೆ ಮಾಡಬೇಕೆಂದಿರುವ ಕೇಡನ್ನು ಕೇಳಿ ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು; ಹಿಂದಿರುಗಿದರೆ ಅವರ ಪಾಪ ಮತ್ತು ಅಪರಾಧಗಳನ್ನು ಕ್ಷಮಿಸಿಬಿಡುವೆನು” ಎಂಬ ಮಾತನ್ನು ತಿಳಿಸಿದನು.
Huenda watu wa Yuda watasikiliza majanga yote ambayo ninakusudia kuleta juu yao. Huenda kila mmoja ataacha njia zake mbaya, ili kwamba niweze kuwasamehe maovu yao na dhambi zao.”
4 ಆಗ ಯೆರೆಮೀಯನು ನೇರೀಯನ ಮಗನಾದ ಬಾರೂಕನನ್ನು ಕರೆಯಿಸಿ ಯೆಹೋವನ ಮಾತುಗಳನ್ನೆಲ್ಲಾ ಹೇಳಲು ಅವನು ಯೆರೆಮೀಯನ ಬಾಯಿಂದ ಬಂದ ಹಾಗೆಯೇ ಅವುಗಳನ್ನು ಗ್ರಂಥದ ಸುರುಳಿಯಲ್ಲಿ ಬರೆದನು.
Kisha Yeremia alimwita Baruku mwana wa Neria, na Baruku aliandika kwenye kitabu, kwa imla ya Yeremia, maneno yote ya Yahwe yalizunguzwa kwake.
5 ಮತ್ತು ಯೆರೆಮೀಯನು ಬಾರೂಕನಿಗೆ, “ಯೆಹೋವನ ಆಲಯದೊಳಗೆ ಪ್ರವೇಶಿಸಲು ನನಗೆ ತಡೆಯಾಗಿದೆ;
Kisha Yeremia alitoa amri kwa Baruku. Alisema, “Niko gerezani na siwezi kwenda kwenye nyumba ya Yahwe.
6 ನೀನೇ ಹೋಗಿ ನನ್ನ ಬಾಯಿಂದ ಬಂದ ಹಾಗೆ ನೀನು ಬರೆದ ಈ ಸುರುಳಿಯಲ್ಲಿನ ಯೆಹೋವನ ಮಾತುಗಳನ್ನು ಉಪವಾಸದ ದಿನದಲ್ಲಿ ಯೆಹೋವನ ಆಲಯದೊಳಗೆ ಯೆರೂಸಲೇಮಿನ ಜನರಿಗೂ, ತಮ್ಮ ತಮ್ಮ ಊರುಗಳಿಂದ ಬಂದಿರುವ ಎಲ್ಲಾ ಯೆಹೂದ್ಯರಿಗೂ ಕೇಳಿಸುವಂತೆ ಓದು.
Kwa hiyo unapaswa uende na kusoma kutoka kwenye kitabu ulichoandika kwa imla yangu. Kwa siku ya kufunga, unapaswa usome maneno ya Yahwe kwenye masikio ya watu katika nyumba yake, na pia kwenye masikio ya Yuda yote waliokuja kutoka katika miji yao. Tangaza maneno haya kwao.
7 ಅವರು ಒಂದು ವೇಳೆ ಯೆಹೋವನಿಗೆ ಶರಣಾಗತರಾಗಿ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಿಯಾರು; ಯೆಹೋವನು ಈ ಜನರ ಮೇಲೆ ತೀರಿಸಬೇಕೆಂದು ಪ್ರಕಟಿಸಿರುವ ಕೋಪ ಮತ್ತು ರೋಷಗಳು ಅಪಾರವಾಗಿವೆ” ಎಂದು ಅಪ್ಪಣೆಕೊಟ್ಟನು.
Huenda maombi yao ya rehema yatakuja mbele ya Yahwe. Huenda kila mtu ataacha njia mbaya, kwani gathabu na hasira ya Yahwe imetangazwa dhidi ya watu kwa ukali.”
8 ನೇರೀಯನ ಮಗನಾದ ಬಾರೂಕನು ಸುರುಳಿಯಲ್ಲಿನ ಯೆಹೋವನ ಮಾತುಗಳನ್ನು ಯೆಹೋವನ ಆಲಯದೊಳಗೆ ಓದಿ ಪ್ರವಾದಿಯಾದ ಯೆರೆಮೀಯನು ಆಜ್ಞಾಪಿಸಿದಂತೆ ಮಾಡಿದನು.
Kwa hiyo Baruku mwana wa Neria alifanya kila kitu ambacho Yeremia nabii alimwamuru yeye kufanya. Alisoma kwa sauti maneno ya Yahwe ndani mwa nyumba ya Yahwe.
9 ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಐದನೆಯ ವರ್ಷದ ಒಂಭತ್ತನೆಯ ತಿಂಗಳಿನಲ್ಲಿ ಯೆರೂಸಲೇಮಿನವರೆಲ್ಲರೂ, ಯೆಹೂದದ ಊರುಗಳಿಂದ ಯೆರೂಸಲೇಮಿಗೆ ಬಂದವರೆಲ್ಲರೂ ಯೆಹೋವನ ಆರಾಧನೆಯ ಉಪವಾಸವನ್ನು ಗೊತ್ತುಮಾಡಿ ಪ್ರಕಟಿಸಿದರು.
Ilikuja tokea katika mwaka wa tano na mwezi wa tisa kwa Yehoyakimu mwana wa Yosia, mfalme wa Yuda, kwamba watu wote Yerusalemu na watu waliotoka Yerusalemu toka miji ya Yuda walitangaza kufunga kwa kumheshimu Yahwe.
10 ೧೦ ಆಗ ಬಾರೂಕನು ಯೆಹೋವನ ಆಲಯದೊಳಗೆ ಮೇಲಣ ಪ್ರಾಕಾರದಲ್ಲಿ ಹೊಸ ಬಾಗಿಲ ಹತ್ತಿರ ಲೇಖಕನಾದ ಶಾಫಾನನ ಮಗನಾಗಿರುವ ಗೆಮರ್ಯನ ಕೋಣೆಯಲ್ಲಿ ಸುರುಳಿಯಲ್ಲಿನ ಯೆರೆಮೀಯನ ಮಾತುಗಳನ್ನು ಎಲ್ಲಾ ಜನರಿಗೂ ಕೇಳಿಸುವಂತೆ ಓದಿದನು.
Baruku alisoma kwa sauti maneno ya Yeremia katika nyumba ya Yahwe, kutoka kwenye chumba cha Gamaria mwana wa Shafani mwandishi, katika ua wa juu, kwa mlango wa kuingilia wa nyumba ya Yahwe. Alifanya hivi kwa masikio ya watu wote.
11 ೧೧ ಶಾಫಾನನ ಮೊಮ್ಮಗನೂ ಗೆಮರ್ಯನ ಮಗನೂ ಆದ ಮೀಕಾಯನು ಸುರುಳಿಯಲ್ಲಿನ ಯೆಹೋವನ ಮಾತುಗಳನ್ನೆಲ್ಲಾ ಕೇಳಿ, ಅರಮನೆಯಲ್ಲಿ ಲೇಖಕನ ಕೋಣೆಗೆ ಇಳಿದುಹೋದನು.
Basi Mikaya mwana wa Gemaria alisikia maneno yote ya Yahwe kwenye kitabu.
12 ೧೨ ಅಲ್ಲಿ ಲೇಖಕನಾದ ಎಲೀಷಾಮನು, ಶೆಮಾಯನ ಮಗನಾದ ದೆಲಾಯನು, ಅಕ್ಬೋರನ ಮಗನಾದ ಎಲ್ನಾಥಾನನು, ಶಾಫಾನನ ಮಗನಾದ ಗೆಮರ್ಯನು, ಹನನೀಯನ ಮಗನಾದ ಚಿದ್ಕೀಯನು ಅಂತು ಪ್ರಧಾನರೆಲ್ಲರೂ ಕುಳಿತುಕೊಂಡಿದ್ದರು.
Alienda chini kwenye nyumba ya mfalme, kwenye chumba cha katibu. Tazama, maafisa wote walikuwa wamekaa hapo: Elishama mwandishi, Delaiah mwana wa Shemaiah, Elnathan mwana wa Achbor, Gemaria mwana wa Shefani, na Sedekia mwana wa Hananiah, na maafisa wote.
13 ೧೩ ಮೀಕಾಯನು ಜನರ ಮುಂದೆ ಗ್ರಂಥವನ್ನು ಓದುತ್ತಿರುವ ಬಾರೂಕನ ಬಾಯಿಂದ ತಾನು ಕೇಳಿದ್ದ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಲು,
Kisha Mikaya alitoa taarifa ya maneno yote kwao ambayo alikuwa amesikia ambayo Baruku alisoma kwa sauti kwenye masikio ya watu.
14 ೧೪ ಸಕಲ ಪ್ರಧಾನರು ಬಾರೂಕನಿಗೆ, “ನೀನು ಜನರ ಮುಂದೆ ಓದಿದ ಸುರುಳಿಯನ್ನು ಕೈಯಲ್ಲಿ ತೆಗೆದುಕೊಂಡು ಬಾ” ಎಂದು ನೆಥನ್ಯನ ಮಗನೂ ಶೆಲೆಮ್ಯನ ಮೊಮ್ಮಗನೂ ಕೂಷಿಯ ಮರಿಮಗನೂ ಆದ ಯೆಹೂದಿಯ ಮೂಲಕ ಹೇಳಿ ಕಳುಹಿಸಿದರು. ಕೂಡಲೆ ನೇರೀಯನ ಮಗನಾದ ಬಾರೂಕನು ಸುರುಳಿಯನ್ನು ಕೈಯಲ್ಲಿ ತೆಗೆದುಕೊಂಡು ಅವರ ಬಳಿಗೆ ಬಂದನು.
Kwa hiyo maafisa wote walimtuma Jehudi mwana wa Nethania mwana wa Shelemiah mwana wa Kushi, kwa Baruku. Jehudi alisema kwa Baruku, “Chukua kitabu katika mkono wako, kitabu ambacho ulikuwa unakisoma kwa masikio ya watu and kuja.” Kwa hiyo Baruku mwana wa Neria alichukua kitabu katika mkono wake na alienda kwa maafisa.
15 ೧೫ ಅವರು ಅವನಿಗೆ, “ದಯಮಾಡಿ ಕುಳಿತುಕೊಂಡು ನಮ್ಮ ಮುಂದೆ ಓದು” ಎಂದು ಹೇಳಲು ಬಾರೂಕನು ಅದನ್ನು ಅವರ ಮುಂದೆ ಓದಿದನು.
Kisha walisema naye,”Kaa chini na usome haya katika masikio yetu.” Kwa hiyo Baruku akasoma kitabu.
16 ೧೬ ಅವರು ಆ ಮಾತುಗಳನ್ನೆಲ್ಲಾ ಕೇಳಿ ಬೆಚ್ಚಿಬಿದ್ದು ಒಬ್ಬರನ್ನೊಬ್ಬರು ನೋಡುತ್ತಾ, “ನಾವು ಈ ಮಾತುಗಳನ್ನೆಲ್ಲಾ ಅರಸನಿಗೆ ತಿಳಿಸಲೇಬೇಕು” ಎಂದು ಬಾರೂಕನಿಗೆ ಹೇಳಿದರು.
Ilitokea wakati waliposikia haya maneno yote, kila mtu alipatwa na hofu kwa mtu aliye karibu naye na kusema kwa Baruku, “Kwa hakika tunapaswa kutoa taarifa ya maneno haya yote kwa mfalme.”
17 ೧೭ ಮತ್ತು, “ನೀನು ಈ ಮಾತುಗಳನ್ನೆಲ್ಲಾ ಹೇಗೆ ಬರೆದಿ? ಅವನ ಬಾಯಿಂದ ಬಂದ ಹಾಗೆತಾನೇ? ದಯಮಾಡಿ ನಮಗೆ ತಿಳಿಸು” ಎಂದು ಅವನನ್ನು ಕೇಳಿದರು.
Kisha walimuuliza Baruku, “Tuambie, ulipataje kuandika maneno yote haya kwa imla ya Yeremia?”
18 ೧೮ ಬಾರೂಕನು ಅವರಿಗೆ, “ಅವನು ಈ ಮಾತುಗಳನ್ನೆಲ್ಲಾ ತನ್ನ ಬಾಯಿಂದಲೇ ನನಗೆ ನುಡಿದನು, ನಾನು ಅವುಗಳನ್ನು ಮಸಿಯಿಂದ ಈ ಪುಸ್ತಕದಲ್ಲಿ ಬರೆದೆನು” ಎಂದು ಉತ್ತರಕೊಟ್ಟನು.
Baruku aliwaambia, “Alitoa imla ya maneno haya yote kwangu, na nikayaandika kwa wino kwenye kitabu hiki.”
19 ೧೯ ಆಗ ಪ್ರಧಾನರು ಬಾರೂಕನಿಗೆ, “ಹೊರಡು, ನೀನೂ ಮತ್ತು ಯೆರೆಮೀಯನೂ ಅಡಗಿಕೊಳ್ಳಿರಿ, ನೀವೆಲ್ಲಿದ್ದೀರೆಂಬುದು ಯಾರಿಗೂ ಗೊತ್ತಾಗಬಾರದು” ಎಂದು ಹೇಳಿದನು.
Kisha maafisa walisema kwa Baruku, “Nenda, jifiche mwenyewe, na Yeremiah, pia. Usipatikane mtu yeyote kujua uko wapi.”
20 ೨೦ ಅನಂತರ ಅವರು ಸುರುಳಿಯನ್ನು ಲೇಖಕನಾದ ಎಲೀಷಾಮನ ಕೋಣೆಯಲ್ಲಿ ಇಟ್ಟುಬಿಟ್ಟು ಪ್ರಾಕಾರದಲ್ಲಿನ ಅರಸನ ಬಳಿಗೆ ಹೋಗಿ ಆ ಮಾತುಗಳನ್ನೆಲ್ಲಾ ಅವನಿಗೆ ಅರಿಕೆ ಮಾಡಿದರು.
Kisha walienda kwa uwanja wa mfalme na wakatoa taarifa ya maneno haya kwake. Lakini kwanza walikihifadhi kitabu kwenye chumba cha katibu Elishama.
21 ೨೧ ಕೂಡಲೆ ಅರಸನು ಸುರುಳಿಯನ್ನು ತರುವುದಕ್ಕೆ ಯೆಹೂದಿಯನ್ನು ಕಳುಹಿಸಿದನು; ಅವನು ಲೇಖಕನಾದ ಎಲೀಷಾಮನ ಕೋಣೆಯೊಳಗಿಂದ ಅದನ್ನು ತೆಗೆದುಕೊಂಡು ಬಂದು ಅರಸನ ಮತ್ತು ಅವನ ಪಕ್ಕದಲ್ಲಿ ನಿಂತಿದ್ದ ಸಕಲ ಪ್ರಧಾನರ ಮುಂದೆ ಓದಿದನು.
Basi mfalme alimtuma Yehudi kuchukua kitabu. Yehudi alikichukua toka chumba cha Elishama katibu. Kisha alikisoma kwa sauti kwa mfalme na wote maafisa walikuwa wamesimama karibu naye.
22 ೨೨ ಆಗ ಪುಷ್ಯಮಾಸ; ಅರಸನು ಚಳಿಗಾಲದ ಮನೆಯಲ್ಲಿ ಕುಳಿತಿದ್ದನು; ಅವನ ಮುಂದೆ ಅಗ್ಗಿಷ್ಟಿಕೆಯು ಉರಿಯುತ್ತಿತ್ತು.
Sasa mfalme alikuwa amesimama kwenye nyumba ya majira ya baridi katika mwezi wa tisa, na mkaa ulikuwa unawaka mbele yake.
23 ೨೩ ಯೆಹೂದಿಯು ಬರವಣಿಗೆಯ ಮೂರು ನಾಲ್ಕು ಪುಟಗಳನ್ನು ಓದಿದ ಹಾಗೆಲ್ಲಾ ಅರಸನು ಆಯಾ ಭಾಗಗಳನ್ನು ಕತ್ತರಿಯಿಂದ ಕತ್ತರಿಸಿ ಸುರುಳಿಯು ಸಂಪೂರ್ಣವಾಗಿ ಸುಟ್ಟುಹೋಗುವ ತನಕ ಅದನ್ನು ಅಗ್ಗಿಷ್ಟಿಕೆಯ ಬೆಂಕಿಯಲ್ಲಿ ಹಾಕುತ್ತಾ ಬಂದನು.
Ilitokea wakati Yehudi aliposoma kurusa tatu au nne, mfalme angeweza kuikata kwa kisu na kuitupa kwenye moto katika mkaa mpaka kitabu chote kiliteketea.
24 ೨೪ ಅರಸನಾಗಲಿ ಅಥವಾ ಸುರುಳಿಯ ಮಾತುಗಳನ್ನೆಲ್ಲಾ ಕೇಳಿದ ಅವನ ಸೇವಕರಲ್ಲಿ ಯಾರೇ ಆಗಲಿ ಭಯಪಡಲಿಲ್ಲ, ಬಟ್ಟೆಗಳನ್ನು ಹರಿದುಕೊಳ್ಳಲಿಲ್ಲ.
Lakini wala mfalme wala yeyote wa mjakazi wake aliyesikia haya maneno yote aliogopa, wala hawakuchana nguo zao.
25 ೨೫ ಎಲ್ನಾಥಾನನೂ, ದೆಲಾಯನೂ ಮತ್ತು ಗೆಮರ್ಯನೂ, “ದಯಮಾಡಿ ಸುರುಳಿಯನ್ನು ಸುಡಬಾರದು” ಎಂದು ಅರಸನಿಗೆ ವಿಜ್ಞಾಪನೆಮಾಡಿದರೂ ಅವನು ಅವರ ಮಾತನ್ನು ಕೇಳಲಿಲ್ಲ.
Elnathani, Delaya, na Gemaria walikuwa wamemuomba mfalme asikichome kitabu, lakini hakuwasikiliza.
26 ೨೬ ಮತ್ತು ಅರಸನು ರಾಜವಂಶೀಯನಾದ ಎರಖ್ಮೆಯೇಲ, ಅಜ್ರಿಯೇಲನ ಮಗನಾದ ಸೆರಾಯ, ಅಬ್ದೆಯೇಲನ ಮಗನಾದ ಶಲೆಮ್ಯ ಇವರಿಗೆ ಲೇಖಕನಾದ ಬಾರೂಕನನ್ನೂ ಮತ್ತು ಪ್ರವಾದಿಯಾದ ಯೆರೆಮೀಯನನ್ನೂ ಹಿಡಿಯಬೇಕೆಂದು ಅಪ್ಪಣೆಕೊಟ್ಟನು; ಆದರೆ ಯೆಹೋವನು ಅವರನ್ನು ಮರೆಯಲ್ಲಿಟ್ಟನು.
Basi mfalme alimwamuru Yerameeli, ndugu, Seraya mwana wa Azrieli, na Shelemia mwana wa Abdeeli kumfunga Baruku mwandishi na Yeremia nabii, lakini Yahwe alikuwa amewaficha.
27 ೨೭ ಯೆರೆಮೀಯನ ಬಾಯಿಂದ ಬಂದ ಹಾಗೆ ಬಾರೂಕನು ಬರೆದಿದ್ದ ಮಾತುಗಳ ಸುರುಳಿಯನ್ನು ಅರಸನು ಸುಟ್ಟುಬಿಟ್ಟ ಮೇಲೆ ಯೆಹೋವನು ಯೆರೆಮೀಯನಿಗೆ,
Kisha neno la Yahwe lilikuja kwa Yeremia baada ya mfalme kuwa amechoma kitabu na maneno ya Baruku yaliyokuwa yameandikwa kwa imla ya Yeremia, na alisema,
28 ೨೮ “ನೀನು ಇನ್ನೊಂದು ಸುರುಳಿಯನ್ನು ತೆಗೆದುಕೊಂಡು ಯೆಹೂದದ ಅರಸನಾದ ಯೆಹೋಯಾಕೀಮನು ಸುಟ್ಟ ಮೊದಲನೆಯ ಸುರುಳಿಯಲ್ಲಿದ್ದ ಹಿಂದಿನ ಆ ಮಾತುಗಳನ್ನೆಲ್ಲಾ ಪುನಃ ಬರೆಯಿಸು.
“Rudi, chukua kitabu kingine kwa ajili yako, na uandike maneno haya yote ambayo yalikuwa kwenye kitabu cha kwanza, ambacho Yehoyakimu mfalme wa Yuda alikichoma.
29 ೨೯ ಅಲ್ಲದೆ ಯೆಹೂದದ ಅರಸನಾದ ಯೆಹೋಯಾಕೀಮನ ವಿಷಯದಲ್ಲಿ ಹೀಗೆ ಬರೆಯಿಸು, ‘ಯೆಹೋವನು ಇಂತೆನ್ನುತ್ತಾನೆ, ಬಾಬೆಲಿನ ಅರಸನು ಬಂದು ಈ ದೇಶವನ್ನು ಜನ, ಪಶುಗಳಿಲ್ಲದಂತೆ ಹಾಳುಮಾಡುವುದು ಖಂಡಿತ ಎಂದು ಸುರುಳಿಯನ್ನು ಬರೆಯಿಸಿದ್ದೇಕೆ ಎಂಬುದಾಗಿ ನೀನು ಆಕ್ಷೇಪಿಸಿ ಅದನ್ನು ಸುಟ್ಟುಬಿಟ್ಟಿಯಲ್ಲ.
Kisha unapaswa kusema hivi kwa mfalme Yehoyakimu mfalme wa Yuda: 'Ulichoma hicho kitabu! Na ulisema: Kwanini umeandika juu yake, “Mfalme wa Babeli hakika atakuja na kuharibu nchi hii, kwa kuwa atawaangamiza wanaume wote na wanyama ndani yake?”
30 ೩೦ ಆದಕಾರಣ ಯೆಹೂದದ ಅರಸನಾದ ಯೆಹೋಯಾಕೀಮನ ವಿಷಯದಲ್ಲಿ ಯೆಹೋವನು ಇಂತೆನ್ನುತ್ತಾನೆ, ಇವನ ಸಂತಾನದಲ್ಲಿ ಯಾರೂ ದಾವೀದನ ಸಿಂಹಾಸನಾರೂಢನಾಗನು; ಇವನ ಹೆಣವು ಬಿಸಾಡಲ್ಪಟ್ಟು ಹಗಲಿನ ತಾಪಕ್ಕೂ, ರಾತ್ರಿಯ ಚಳಿಗೂ ಈಡಾಗುವುದು.
Kwa hiyo Yahwe anasema hivi kuhusu wewe, Yehoyakimu mfalme wa Yuda: “Hakuna mzao wako atawahi kukaa kwenye kiti cha Daudi. Kama wewe, maiti yako itatupwa kwenye siku ya joto na usiku wa baridi.
31 ೩೧ ಇವನೂ, ಇವನ ಸಂತತಿಯವರೂ ಮತ್ತು ಸೇವಕರೂ ನಡೆಸಿದ ಅಧರ್ಮಕ್ಕಾಗಿ ಇವರನ್ನು ದಂಡಿಸುವೆನು. ನಾನು ಇವರನ್ನೂ, ಯೆರೂಸಲೇಮಿನವರನ್ನೂ ಮತ್ತು ಯೆಹೂದ್ಯರನ್ನೂ ನಿಮಗೆ ಬಹು ಕೇಡಾಗುವುದೆಂದು ಎಚ್ಚರಿಸಿದರೂ ಇವರುಗಳು ಕೇಳಲಿಲ್ಲವಾದುದರಿಂದ ಆ ಕೇಡನ್ನೆಲ್ಲಾ ಇವರೆಲ್ಲರ ಮೇಲೆ ಬರಮಾಡುವೆನು’” ಎಂದು ಹೇಳಿದನು.
Kwa kuwa nitakuadhibu, wazao wako, na wajakazi wako kwa maovu yenu yote. Nitaleta kwenu, kwa wakazi wote wa Yerusalemu, na kwa kila mtu Yuda majanga ambayo nimewatishia ninyi, lakini kwa hamkuwa makini.”
32 ೩೨ ಆಗ ಯೆರೆಮೀಯನು ಇನ್ನೊಂದು ಸುರುಳಿಯನ್ನು ತೆಗೆದುಕೊಂಡು ನೇರೀಯನ ಮಗನಾಗಿರುವ ಲೇಖಕನಾದ ಬಾರೂಕನಿಗೆ ಕೊಡಲು ಅವನು ಅದರಲ್ಲಿ ಯೆಹೂದದ ಅರಸನಾದ ಯೆಹೋಯಾಕೀಮನು ಬೆಂಕಿಯಲ್ಲಿ ಸುಟ್ಟ ಗ್ರಂಥದ ಎಲ್ಲಾ ಮಾತುಗಳನ್ನಲ್ಲದೆ ಇನ್ನು ಇಂತಹ ಅನೇಕ ಮಾತುಗಳನ್ನು ಯೆರೆಮೀಯನ ಬಾಯಿಂದ ಬಂದ ಹಾಗೆ ಬರೆದನು.
Kwa hiyo Yeremia alichukua kitabu kingine na akampa Baruku mwana wa Neria mwandishi. Baruku aliandika juu yake kwa imla ya Yeremia maneno yote ambayo yalikuwa katika kitabu kilichochomwa moto na mfalme Yehoyakimu mfalme wa Yuda. Zaidi, maneno mengi ya kufanana yaliongezwa kwenye kitabu hiki.

< ಯೆರೆಮೀಯನು 36 >