< ಯೆಶಾಯನು 21 >

1 ಸಮುದ್ರ ಹಾಗೂ ಅಡವಿಯ ವಿಷಯವಾದ ದೈವೋಕ್ತಿ. ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿಯಂತೆ ಅರಣ್ಯದ ಕಡೆಯ ಭಯಂಕರ ದೇಶದಿಂದ (ದೊಡ್ಡ ಅಪಾಯ) ಬರುತ್ತದೆ ಎಂಬ
ಸಮುದ್ರತೀರದ ಮರುಭೂಮಿಯ ವಿಷಯವಾದ ಪ್ರವಾದನೆ: ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿ ದಾಟಿ ಹೋಗುವಂತೆ ಆಕ್ರಮಣಕಾರರು ಮರುಭೂಮಿ ಕಡೆಯಿಂದ ಭಯಂಕರವಾದ ದೇಶದಿಂದ ಬರುತ್ತಾರೆ.
2 ಘೋರದರ್ಶನವು ನನಗೆ ತಿಳಿಯ ಬಂದಿದೆ; ಬಾಧಕನು ಬಾಧಿಸುತ್ತಿದ್ದಾನೆ, ಸೂರೆಗಾರನು ಸೂರೆಮಾಡುತ್ತಿದ್ದಾನೆ. ಏಲಾಮೇ, ಏಳು! ಮೇದ್ಯವೇ, ಮುತ್ತಿಗೆ ಹಾಕು! ನಿಮ್ಮ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ.
ಘೋರ ದರ್ಶನವು ನನಗೆ ತಿಳಿಯಬಂದಿದೆ: ಬಾಧಕನು ಬಾಧಿಸುತ್ತಿದ್ದಾನೆ. ಸೂರೆಗಾರನು ಸೂರೆಮಾಡುತ್ತಿದ್ದಾನೆ. ಏಲಾಮೇ, ಏಳು! ಮೇದ್ಯವೇ ಮುತ್ತಿಗೆ ಹಾಕು, ಅದರ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ.
3 ಆದುದ್ದರಿಂದ ನನ್ನ ಸೊಂಟದಲ್ಲಿ ನೋವು ತುಂಬಿದೆ, ಪ್ರಸವವೇದನೆಯಂತಿರುವ ವೇದನೆಯು ನನ್ನನ್ನು ಹಿಡಿದಿದೆ, ಕಿವಿ ಕಿವುಡಾಗುವಷ್ಟು ಸಂಕಟಪಡುತ್ತೇನೆ, ಕಣ್ಣು ಕುರುಡಾಗುವಷ್ಟು ತತ್ತರಗೊಂಡಿದ್ದೇನೆ.
ಆದ್ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ. ಕಿವಿ ಕಿವುಡಾಗುವಷ್ಟು ಸಂಕಟಪಡುತ್ತೇನೆ. ಕಣ್ಣು ಕುರುಡಾಗುವಷ್ಟು ಭ್ರಾಂತನಾಗಿದ್ದೇನೆ.
4 ನನ್ನ ಹೃದಯವು ಬಡಿದುಕೊಳ್ಳುತ್ತಿದೆ, ನಡುಕವು ನನ್ನನ್ನು ಆವರಿಸಿಕೊಂಡಿದೆ, ನಾನು ಅಪೇಕ್ಷಿಸುತ್ತಿದ್ದ ರಾತ್ರಿಯು ನನಗೆ ಭಯವಾಗಿ ಪರಿಣಮಿಸಿದೆ.
ನನ್ನ ಹೃದಯವು ಬಡಿದುಕೊಳ್ಳುತ್ತಿದೆ, ಗಾಬರಿಗೊಂಡಿದೆ. ನಡುಗುವಿಕೆಯು ನನ್ನನ್ನು ಕಳವಳಗೊಳಿಸಿದೆ, ನಾ ಬಯಸಿದ ಸಂಜೆಯೇ ನನಗೆ ಭಯಭ್ರಾಂತಿಯಾಗಿ ಮಾಡಿದ್ದಾನೆ.
5 ಔತಣಕ್ಕೆ ಸಿದ್ಧಪಡಿಸಿಕೊಂಡು, ಚಾಪೆಗಳನ್ನು ಹಾಸಿಕೊಂಡು ತಿಂದು, ಕುಡಿಯುತ್ತಾರೆ; ಪ್ರಭುಗಳೇ, ಏಳಿರಿ, ಗುರಾಣಿಗೆ ಎಣ್ಣೆಯನ್ನು ಹಚ್ಚಿ ಸಿದ್ಧವಾಗಿ!
ಔತಣ ಸಿದ್ಧವಾಗಿದೆ. ಬುರುಜಿನ ಮೇಲೆ ಕಾವಲಿರು. ಉಣ್ಣು, ಕುಡಿ, ಪ್ರಭುಗಳೇ, ಏಳಿರಿ, ಗುರಾಣಿಗೆ ಎಣ್ಣೆಯನ್ನು ಹಚ್ಚಿರಿ.
6 ಕರ್ತನು ನನಗೆ ಹೇಳುವುದೇನೆಂದರೆ, “ಹೋಗು, ಕಾವಲುಗಾರನನ್ನು ನೇಮಿಸು; ಅವನು ಕಂಡದ್ದನ್ನು ತಿಳಿಸಲಿ.
ಕರ್ತರು ನನಗೆ ಹೇಳಿದ್ದೇನೆಂದರೆ, “ಹೋಗು, ಕಾವಲುಗಾರರನ್ನು ನೇಮಿಸು. ಅವನು ಕಂಡದ್ದನ್ನು ತಿಳಿಸಲಿ.
7 ಅವನು ಜೋಡಿ ಜೋಡಿಯಾಗಿ ಬರುವ ಸವಾರರ ಸಾಲನ್ನೂ, ಕತ್ತೆಗಳ ಮತ್ತು ಒಂಟೆಗಳ ಸಾಲುಗಳನ್ನೂ ನೋಡಿದರೆ, ಬಹಳ ಗಮನದಿಂದ ಕಿವಿಗೊಟ್ಟು ಗಮನಿಸಲಿ” ಎಂಬುದೇ.
ಅವನು ಜೋಡಿ ಜೋಡಿಯಾಗಿ ಬರುವ ರಥ ಸವಾರರ ಸಾಲನ್ನು ಕತ್ತೆಗಳ, ಒಂಟೆಗಳ, ರಥ ಸಾಲುಗಳನ್ನು ನೋಡಿದರೆ, ಬಹು ಗಮನದಿಂದ ಕಿವಿಗೊಟ್ಟು ಗಮನಿಸಲಿ.”
8 ಬಳಿಕ ಅವನು ಸಿಂಹದಂತೆ ಕೂಗಿ, “ಕರ್ತನೇ, ಪ್ರತಿ ದಿನವು ನಾನು ಕಾವಲಿನ ಬುರುಜಿನ ಮೇಲೆ ನಿಂತಿದ್ದೇನೆ, ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ.
ಬಳಿಕ ಅವನು ಸಿಂಹದಂತೆ ಕೂಗಿ ಹೀಗೆ ಹೇಳಿದನು, “ನನ್ನ ಒಡೆಯನೇ, ನಾನು ಹಗಲೆಲ್ಲಾ ಕಾವಲಿನ ಬುರುಜಿನ ಮೇಲೆ ನಿಂತಿದ್ದೇನೆ. ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ.
9 ಇಗೋ, ಸವಾರರು ಜೋಡಿ ಜೋಡಿಯಾಗಿ ಬರುತ್ತಾರೆ.” ಅವನು ಕೂಗಿ, “ಬಾಬೆಲ್ ಬಿದ್ದು ಹೋಯಿತು, ಬಾಬೆಲ್ ಬಿದ್ದು ಹೋಯಿತು! ಅದರ ದೇವತೆಗಳ ವಿಗ್ರಹಗಳನ್ನು ಒಡೆದು ನೆಲಸಮ ಮಾಡಿಬಿಟ್ಟರು” ಎಂದು ಹೇಳುವನು.
ಇಗೋ, ಎರಡು ಕುದುರೆಗಳನ್ನು ಹೊಂದಿರುವ ರಥದಲ್ಲಿ ಒಬ್ಬ ವ್ಯಕ್ತಿ ಸವಾರಿ ಮಾಡಿ ಬರುತ್ತಿದ್ದಾನೆ ಬಾಬಿಲೋನ್ ಬಿದ್ದುಹೋಯಿತು, ಬಾಬಿಲೋನ್ ಬಿದ್ದುಹೋಯಿತು! ಅದರ ಕೆತ್ತಿದ ದೇವತೆಗಳ ವಿಗ್ರಹಗಳೆಲ್ಲ ಮುರಿದು ನೆಲಸಮವಾಗಿವೆ.”
10 ೧೦ ನನ್ನ ಕಣದ ದವಸವೇ, ನನ್ನ ಬಡಿತಕ್ಕೆ ಈಡಾದವರೇ! ಇಸ್ರಾಯೇಲರ ದೇವರಾಗಿರುವ ಸೇನಾಧೀಶ್ವರನಾದ ಯೆಹೋವನಿಂದ, ನಾನು ಕೇಳಿದ್ದನ್ನೇ ನಿಮಗೆ ತಿಳಿಸಿದ್ದೇನೆ.
ಕಣದಲ್ಲಿ ತುಳಿತಕ್ಕೆ ಈಡಾದ ನನ್ನ ಜನರೇ ಇಸ್ರಾಯೇಲಿನ ದೇವರಾಗಿರುವ ಸೇನಾಧೀಶ್ವರ ಯೆಹೋವ ದೇವರಿಂದ ನಾನು ಕೇಳಿದ್ದನ್ನು ನಿಮಗೆ ತಿಳಿಸಿದ್ದೇನೆ.
11 ೧೧ ದೂಮದ ಬಗ್ಗೆ ದೈವೋಕ್ತಿ. ಆತನು ಸೇಯೀರಿನಿಂದ ನನ್ನನ್ನು ಕರೆದು, “ಕಾವಲುಗಾರನೇ, ಈಗ ರಾತ್ರಿ ಎಷ್ಟು ಸಮಯವಾಯಿತು? ಕಾವಲುಗಾರನೇ, ರಾತ್ರಿ ಸಮಯ ಎಷ್ಟು ಕಳೆಯಿತು
ದೂಮ ವಿಷಯವಾದ ಪ್ರವಾದನೆ: ಸೇಯೀರಿನಿಂದ ನನ್ನನ್ನು ಯಾರೋ ಹೀಗೆ ಕರೆಯುತ್ತಿದ್ದಾರೆ, “ಕಾವಲುಗಾರನೇ, ಈಗ ರಾತ್ರಿ ಎಷ್ಟು ಕಳೆಯಿತು? ಕಾವಲುಗಾರನೇ, ರಾತ್ರಿ ಎಷ್ಟು ಕಳೆಯಿತು?”
12 ೧೨ ಉದಯವು ಬರುತ್ತದೆ, ರಾತ್ರಿಯೂ ಬರುತ್ತದೆ; ವಿಚಾರಿಸಬೇಕಾದರೆ ಆಮೇಲೆ ಬಂದು ವಿಚಾರಿಸಿರಿ” ಎಂದು ಕಾವಲುಗಾರನು ಹೇಳಿದನು.
ಕಾವಲುಗಾರನು ಹೀಗೆ ಉತ್ತರಿಸಿದನು, “ಉದಯವು ಬರುತ್ತದೆ, ರಾತ್ರಿಯೂ ಬರುತ್ತದೆ. ವಿಚಾರಿಸಬೇಕಾದರೆ ವಿಚಾರಿಸಿರಿ, ತಿರುಗಿ ಬನ್ನಿರಿ.”
13 ೧೩ ಅರಬಿಯ ವಿಷಯವಾದ ದೈವೋಕ್ತಿ. ಓ ದೇದಾನ್ಯರೇ, ಅರಬಿಯದ ಮರುಭೂಮಿಯಲ್ಲಿ ಇಳಿದುಕೊಳ್ಳಿರಿ.
ಅರೇಬಿಯದ ವಿಷಯವಾದ ಪ್ರವಾದನೆ: ಓ ದೇದಾನ್ಯರ ವ್ಯಾಪಾರಿಗಳ ಗುಂಪಿನವರೇ ಅರೇಬಿಯದ ಕಾಡಿನಲ್ಲಿ ಇಳಿದುಕೊಳ್ಳಿರಿ.
14 ೧೪ ಬಾಯಾರಿದವರಿಗೆ ನೀರನ್ನು ತಂದುಕೊಡಿರಿ, ತೇಮಾ ದೇಶದ ನಿವಾಸಿಗಳೇ ಓಡಿ ಹೋದವರನ್ನು ರೊಟ್ಟಿಯೊಡನೆ ಎದುರುಗೊಳ್ಳಿರಿ.
ತೇಮಾ ದೇಶದ ನಿವಾಸಿಗಳೇ, ಬಾಯಾರಿದವರಿಗೆ ನೀರನ್ನು ತರುತ್ತಾರೆ. ಓಡಿ ಹೋಗುವವರನ್ನು ತಮ್ಮ ರೊಟ್ಟಿಯಿಂದ ನಿವಾರಿಸುತ್ತಾರೆ.
15 ೧೫ ಏಕೆಂದರೆ ಹಿರಿದ ಕತ್ತಿ, ಬಾಗಿದ ಬಿಲ್ಲು, ಯುದ್ಧದ ಬಾಧೆ ಇವುಗಳಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.
ಏಕೆಂದರೆ ಹಿರಿದ ಖಡ್ಗ, ಬಾಗಿದ ಬಿಲ್ಲು, ಕಠಿಣ ಯುದ್ಧ ಇವುಗಳಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾರಷ್ಟೆ.
16 ೧೬ ಕರ್ತನು ನನಗೆ ಹೇಳುವುದೇನೆಂದರೆ, “ಕೂಲಿಯವನ ವರ್ಷಗಳಂತೆ ಒಂದು ವರ್ಷದೊಳಗೆ ಕೇದಾರಿನ ಸಕಲ ವೈಭವವು ಇಲ್ಲವಾಗುವುದು.
ಏಕೆಂದರೆ ಕರ್ತರು ನನಗೆ ಹೀಗೆ ಹೇಳುತ್ತಾರೆ: “ಕೂಲಿಯವನ ವರುಷಗಳಂತೆ ಒಂದು ವರುಷದೊಳಗೆ ಕೇದಾರಿನ ವೈಭವವು ತೀರಿಹೋಗುವುದು.
17 ೧೭ ಕೇವಲ ಕೆಲವೇ ಬಿಲ್ಲುಗಾರರೂ ಹಾಗೂ ಕೇದಾರಿನ ಶೂರರೂ ಉಳಿಯುವರು” ಎಂಬುದಾಗಿ ಇಸ್ರಾಯೇಲರ ದೇವರಾದ ಯೆಹೋವನು ನುಡಿದಿದ್ದಾನೆ.
ಬಿಲ್ಲುಗಾರರಲ್ಲಿ ಕೆಲವರೂ, ಕೇದಾರಿನ ಬಲಿಷ್ಠರಲ್ಲಿ ಕೆಲವರು ಮಾತ್ರ ಉಳಿಯುವರು,” ಎಂದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ನುಡಿದಿದ್ದಾರೆ.

< ಯೆಶಾಯನು 21 >