< ಯೆಶಾಯನು 18 >

1 ಓಹೋ, ಕೂಷಿನ ನದಿಗಳ ಆಚೆಯಲ್ಲಿರುವ ಸೀಮೆ, ರೆಕ್ಕೆಗಳನ್ನು ಪಟಪಟನೆ ಬಡಿಯುವ ನಾಡು,
ה֥וֹי אֶ֖רֶץ צִלְצַ֣ל כְּנָפָ֑יִם אֲשֶׁ֥ר מֵעֵ֖בֶר לְנַֽהֲרֵי־כֽוּשׁ׃
2 ರಾಯಭಾರಿಗಳನ್ನು ನೀರಿನ ಮೇಲೆ ಬೆಂಡಿನ ದೋಣಿಗಳಲ್ಲಿ ನದಿಯ ಮಾರ್ಗವಾಗಿ ಕಳುಹಿಸುವ ದೇಶ, ವೇಗವಾಗಿ ಬರುತ್ತಿರುವ ದೂತರೇ, ಎತ್ತರವಾದವರೂ, ನಯವಾದ ಚರ್ಮವುಳ್ಳವರೂ, ಸರ್ವ ಭಯಂಕರರೂ, ಮಹಾ ಬಲದಿಂದ ಶತ್ರುಗಳನ್ನು ತುಳಿಯುವವರೂ, ನದಿಗಳಿಂದ ವಿಭಾಗವಾಗಿರುವ ದೇಶದ ನಿವಾಸಿಗಳೂ ಆದ ಜನಾಂಗದವರ ಬಳಿಗೆ ಹೋಗಿರಿ.
הַשֹּׁלֵ֨חַ בַּיָּ֜ם צִירִ֗ים וּבִכְלֵי־גֹמֶא֮ עַל־פְּנֵי־מַיִם֒ לְכ֣וּ ׀ מַלְאָכִ֣ים קַלִּ֗ים אֶל־גּוֹי֙ מְמֻשָּׁ֣ךְ וּמוֹרָ֔ט אֶל־עַ֥ם נוֹרָ֖א מִן־ה֣וּא וָהָ֑לְאָה גּ֚וֹי קַו־קָ֣ו וּמְבוּסָ֔ה אֲשֶׁר־בָּזְא֥וּ נְהָרִ֖ים אַרְצֽוֹ׃
3 ಸಮಸ್ತ ಭೂನಿವಾಸಿಗಳೇ, ಲೋಕದ ಸಕಲ ಜನರೇ, ಬೆಟ್ಟಗಳಲ್ಲಿ ಧ್ವಜವನ್ನು ಹಾರಿಸುವಾಗ ನೋಡಿರಿ, ತುತ್ತೂರಿಯನ್ನೂದುವಾಗ ಕೇಳಿರಿ!
כָּל־יֹשְׁבֵ֥י תֵבֵ֖ל וְשֹׁ֣כְנֵי אָ֑רֶץ כִּנְשֹׂא־נֵ֤ס הָרִים֙ תִּרְא֔וּ וְכִתְקֹ֥עַ שׁוֹפָ֖ר תִּשְׁמָֽעוּ׃ ס
4 ಯೆಹೋವನು ನನಗೆ ಹೇಳುವುದೇನೆಂದರೆ, “ಬಿಸಿಲಿನಲ್ಲಿ ಜಳಜಳಿಸುವ ಧಗೆಯಂತೆಯೂ, ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು” ಎಂಬುದೇ.
כִּי֩ כֹ֨ה אָמַ֤ר יְהוָה֙ אֵלַ֔י אשקוטה וְאַבִּ֣יטָה בִמְכוֹנִ֑י כְּחֹ֥ם צַח֙ עֲלֵי־א֔וֹר כְּעָ֥ב טַ֖ל בְּחֹ֥ם קָצִֽיר׃
5 ಕೊಯ್ಲಿನ ಕಾಲಕ್ಕೆ ಮೊದಲು ಮೊಗ್ಗು ಬಿಟ್ಟಾದ ಮೇಲೆ, ಹೂವಿನಿಂದ ಹೀಚು ದ್ರಾಕ್ಷಿ ದೋರೆ ಕಾಯಿಯಾಗುವಾಗ, ಆತನು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕುವನು.
כִּֽי־לִפְנֵ֤י קָצִיר֙ כְּתָם־פֶּ֔רַח וּבֹ֥סֶר גֹּמֵ֖ל יִֽהְיֶ֣ה נִצָּ֑ה וְכָרַ֤ת הַזַּלְזַלִּים֙ בַּמַּזְמֵר֔וֹת וְאֶת־הַנְּטִישׁ֖וֹת הֵסִ֥יר הֵתַֽז׃
6 ಅವೆಲ್ಲವು ಬೆಟ್ಟದ ಪಕ್ಷಿಗಳಿಗೂ, ಭೂಮಿಯ ಕಾಡುಮೃಗಗಳಿಗೂ ಆಹಾರವಾಗಿ ಬಿದ್ದಿರುವವು. ಬೇಸಿಗೆಯಲ್ಲಿ ಪಕ್ಷಿಗಳಿಗೂ, ಹಿಮಕಾಲದಲ್ಲಿ ಕಾಡುಮೃಗಗಳಿಗೂ ಆಹಾರವಾಗುವುದು.
יֵעָזְב֤וּ יַחְדָּו֙ לְעֵ֣יט הָרִ֔ים וּֽלְבֶהֱמַ֖ת הָאָ֑רֶץ וְקָ֤ץ עָלָיו֙ הָעַ֔יִט וְכָל־בֶּהֱמַ֥ת הָאָ֖רֶץ עָלָ֥יו תֶּחֱרָֽף׃
7 ಆ ಕಾಲದಲ್ಲಿ ಎತ್ತರವಾದವರೂ, ನುಣುಪಾದ ಚರ್ಮವುಳ್ಳವರೂ, ಸರ್ವದಾ ಭಯಂಕರರೂ, ಮಹಾ ಬಲದಿಂದ ಶತ್ರುಗಳನ್ನು ತುಳಿಯುವವರೂ, ನದಿಗಳಿಂದ ವಿಭಾಗವಾಗಿರುವ ದೇಶದ ನಿವಾಸಿಗಳೂ ಆದ ಜನಾಂಗದವರು ಸೇನಾಧೀಶ್ವರನಾದ ಯೆಹೋವನ ನಾಮ ಮಹತ್ವದ ಚೀಯೋನ್ ಪರ್ವತಕ್ಕೆ, ಆತನಿಗೋಸ್ಕರ ಕಾಣಿಕೆಯನ್ನು ತರುವರು.
בָּעֵת֩ הַהִ֨יא יֽוּבַל־שַׁ֜י לַיהוָ֣ה צְבָא֗וֹת עַ֚ם מְמֻשָּׁ֣ךְ וּמוֹרָ֔ט וּמֵעַ֥ם נוֹרָ֖א מִן־ה֣וּא וָהָ֑לְאָה גּ֣וֹי ׀ קַו־קָ֣ו וּמְבוּסָ֗ה אֲשֶׁ֨ר בָּזְא֤וּ נְהָרִים֙ אַרְצ֔וֹ אֶל־מְק֛וֹם שֵׁם־יְהוָ֥ה צְבָא֖וֹת הַר־צִיּֽוֹן׃ ס

< ಯೆಶಾಯನು 18 >