< ಯೆಶಾಯನು 15 >

1 ಮೋವಾಬಿನ ಬಗ್ಗೆ ದೈವೋಕ್ತಿ. ಒಂದು ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿರ್ಮೂಲವಾಯಿತು; ಹೌದು, ಒಂದು ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವೂ ಹಾಳಾಗಿ ನಿರ್ಮೂಲವಾಯಿತು.
Breme Moavu. Da, obnoæ se raskopa Ar Moavski i propade; da, obnoæ se raskopa Kir Moavski i propade.
2 ಬಯಿತ್ ಮತ್ತು ದೀಬೋನ್ ಊರಿನವರು ಆಳುವುದಕ್ಕಾಗಿ, ತಮ್ಮ ಎತ್ತರವಾದ ಪೂಜಾ ಸ್ಥಳಗಳಿಗೆ ಹೋಗುತ್ತಾರೆ. ನೆಬೋವಿನಲ್ಲಿಯೂ, ಮೇದೆಬದಲ್ಲಿಯೂ ಮೋವಾಬ್ಯರು ಗೋಳಾಡುತ್ತಾರೆ. ಎಲ್ಲರ ತಲೆಯು ಬೋಳಾಗಿರುವುದು, ಎಲ್ಲರ ಗಡ್ಡವು ವಿಕಾರವಾಗಿ ಕತ್ತರಿಸಲ್ಪಡುವುದು.
Otide u dom i u Devon, na visine, da plaèe: Moav æe ridati za Nevonom i za Medevom, sve æe mu glave biti æelave, svaka brada oskubena.
3 ಬೀದಿಗಳಲ್ಲಿ ತಿರುಗುವವರು ನಡುವಿಗೆ ಗೋಣಿತಟ್ಟನ್ನು ಸುತ್ತಿಕೊಂಡಿದ್ದಾರೆ ಮತ್ತು ತಮ್ಮ ಮಾಳಿಗೆಗಳ ಮೇಲೆಯೂ, ಚೌಕಗಳಲ್ಲಿಯೂ ಎಲ್ಲರು ಅರಚುತ್ತಾ ಕಣ್ಣೀರನ್ನು ಸುರಿಸಿ ಸುರಿಸಿ ಗೋಳಾಡುತ್ತಾ ಇಳಿದು ಹೋಗಿದ್ದಾರೆ.
Po ulicama æe njegovijem pripasivati kostrijet, na krovovima njegovijem i na ulicama njegovijem sve æe ridati suze lijuæi.
4 ಹೆಷ್ಬೋನ್ ಮತ್ತು ಎಲೆಯಾಲೆ ಕೂಗುತ್ತವೆ, ಇವುಗಳ ರೋದನವು ಯಹಜಿನ ಪಟ್ಟಣದವರೆಗೂ ಕೇಳಿಸುತ್ತದೆ. ಇದರಿಂದ ಮೋವಾಬಿನ ಯುದ್ಧಭಟರು ಕಿರಿಚಿಕೊಳ್ಳುತ್ತಾರೆ; ಅವರ ಹೃದಯಗಳು ಭಯದಿಂದ ತತ್ತರಿಸುತ್ತದೆ.
I vikaæe Esevon i Eleala, do Jase èuæe im se glas; i vojnici æe Moavski vikati, duša æe se u svakom uzmuèiti.
5 ನನ್ನ ಹೃದಯವು ಮೋವಾಬಿನ ನಿಮಿತ್ತವಾಗಿ ಮೊರೆಯಿಡುತ್ತದೆ, ಅಲ್ಲಿಂದ ಪಲಾಯನವಾದವರು ಚೋಯರಿಗೂ, ಎಗ್ಲತ್ ಶೆಲಿಶೀಯಕ್ಕೂ ಓಡಿಹೋಗುತ್ತಾರೆ, ಅಳುತ್ತಾ ಲೂಹೀತ್ ದಿಣ್ಣೆಯನ್ನು ಹತ್ತುತ್ತಾರೆ, ಹೊರೊನಯಿಮಿನ ದಾರಿಯಲ್ಲಿ ನಡೆಯುತ್ತಾ ನಾಶವಾದೆವಲ್ಲಾ ಎಂದು ಧ್ವನಿಗೈಯುತ್ತಾರೆ.
Srce moje vapije za Moavom; bjegunci njegovi pobjegoše dori do Sigora kao junica treæakinja; jer æe se iæi uz brdo Luitsko plaèuæi, i putem Oronaimskim razlijegaæe æe se jauk.
6 ನಿಮ್ರೀಮ್ ಹೊಳೆಯು ಹಾಳಾಯಿತು, ಹಸಿಹುಲ್ಲು ಬಾಡಿತು, ಮೇವು ತೀರಿತು, ಯಾವ ಹಸಿರೂ ಇಲ್ಲ.
Jer æe nestati voda Nimrimskih, jer æe posahnuti bilje, nestaæe trave, zeleni neæe biti.
7 ಆದಕಾರಣ ತಾವು ಸಂಪಾದಿಸಿದ ಆಸ್ತಿಯನ್ನೂ, ಕೂಡಿಸಿಟ್ಟ ಸೊತ್ತನ್ನೂ ನೀರವಂಜಿಯ ಹೊಳೆಯ ಆಚೆಗೆ ಹೊತ್ತುಕೊಂಡು ಹೋಗುತ್ತಾರೆ.
I zato što su ostavljali i što su èuvali odnijeæe se na potok Arapski.
8 ಪ್ರಲಾಪವು ಮೋವಾಬಿನ ಎಲ್ಲೆಗಳ ತನಕ ಹಬ್ಬಿದೆ, ಅದರ ಅರಚಾಟವು ಎಗ್ಲಯಿಮಿನವರೆಗೂ, ಬೆಯೇರ್ ಏಲೀಮಿನ ಪರ್ಯಂತರವೂ ವ್ಯಾಪಿಸಿದೆ.
Jer æe vika iæi oko meða Moavskih, do Eglaima jauk njihov, i do Vir-Elima jauk njihov.
9 ದೀಮೋನಿನ ನೀರೆಲ್ಲಾ ರಕ್ತವಾಯಿತು. ಆದರೆ ದೀಮೋನಿನ ಮೇಲೆ ಹೆಚ್ಚು ಬಾಧೆಯನ್ನು, ಅಂದರೆ ಮೋವಾಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ, ದೇಶದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು ಬರಮಾಡುವೆನು.
Jer æe se voda Dimonska napuniti krvi; i još æu dometnuti Dimonu, na bjegunce Moavske i na ostatak zemaljski poslaæu lavove.

< ಯೆಶಾಯನು 15 >