< ಇಬ್ರಿಯರಿಗೆ ಬರೆದ ಪತ್ರಿಕೆ 4 >

1 ಹೀಗಿರಲಾಗಿ, ದೇವರ ವಿಶ್ರಾಂತಿಯಲ್ಲಿ ಸೇರಬಹುದೆಂಬ ವಾಗ್ದಾನ ಇನ್ನೂ ಇರುವುದರಿಂದ ನಿಮ್ಮಲ್ಲಿ ಯಾವನಾದರೂ ಅದರಿಂದ ತಪ್ಪಿಹೋಗದಂತೆ ನಾವು ಭಯಭಕ್ತಿಯಿಂದ ಇರೋಣ.
អបរំ តទ្វិឝ្រាមប្រាប្តេះ ប្រតិជ្ញា យទិ តិឞ្ឋតិ តហ៌្យស្មាកំ កឝ្ចិត៑ ចេត៑ តស្យាះ ផលេន វញ្ចិតោ ភវេត៑ វយម៑ ឯតស្មាទ៑ ពិភីមះ។
2 ಇಸ್ರಾಯೇಲ್ಯರಿಗೆ ದೇವರ ವಿಶ್ರಾಂತಿಯ ಶುಭವರ್ತಮಾನವು ಸಾರೋಣವಾದಂತೆಯೇ ನಮಗೂ ಸಾರೋಣವಾಯಿತು. ಆದರೆ ಆ ಕಾಲದಲ್ಲಿ ಕೇಳಿದವರ ನಂಬಿಕೆಯೊಂದಿಗೆ ಇವರು ಪಾಲುಗಾರರಾಗದ ಕಾರಣ ಆ ಸಂದೇಶದಿಂದ ಅವರಿಗೆ ಪ್ರಯೋಜನವಾಗಲಿಲ್ಲ.
យតោ ៜស្មាកំ សមីបេ យទ្វត៑ តទ្វត៑ តេឞាំ សមីបេៜបិ សុសំវាទះ ប្រចារិតោ ៜភវត៑ កិន្តុ តៃះ ឝ្រុតំ វាក្យំ តាន៑ ប្រតិ និឞ្ផលម៑ អភវត៑, យតស្តេ ឝ្រោតារោ វិឝ្វាសេន សាទ៌្ធំ តន្នាមិឝ្រយន៑។
3 ಈಗ ನಂಬುವವರಾದ ನಾವುಗಳೇ ಆ ವಿಶ್ರಾಂತಿಯಲ್ಲಿ ಸೇರುವವರು. ಏಕೆಂದರೆ ಲೋಕಾದಿಯಿಂದ ತನ್ನ ಸೃಷ್ಟಿಯ ಕಾರ್ಯಗಳು ಮುಗಿದುಹೋದಾಗ್ಯೂ “ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ ಎಂದು ನಾನು ಕೋಪದಿಂದ ಪ್ರಮಾಣ ಮಾಡಿದೆನು” ಎಂದು ಹೇಳಿದೆಯಲ್ಲಾ.
តទ៑ វិឝ្រាមស្ថានំ វិឝ្វាសិភិរស្មាភិះ ប្រវិឝ្យតេ យតស្តេនោក្តំ, "អហំ កោបាត៑ ឝបថំ ក្ឫតវាន៑ ឥមំ, ប្រវេក្ឞ្យតេ ជនៃរេតៃ រ្ន វិឝ្រាមស្ថលំ មម។ " កិន្តុ តស្យ កម៌្មាណិ ជគតះ ស្ឫឞ្ដិកាលាត៑ សមាប្តានិ សន្តិ។
4 ಎಲ್ಲಿಯೋ ಒಂದು ಕಡೆ ಏಳನೆಯ ದಿನವನ್ನು ಕುರಿತಾಗಿ, “ದೇವರು ತನ್ನ ಕಾರ್ಯಗಳನ್ನೆಲ್ಲಾ ಮುಗಿಸಿಬಿಟ್ಟು, ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನೆಂದು” ಬರೆದದೆ.
យតះ កស្មិំឝ្ចិត៑ ស្ថានេ សប្តមំ ទិនមធិ តេនេទម៑ ឧក្តំ, យថា, "ឦឝ្វរះ សប្តមេ ទិនេ ស្វក្ឫតេភ្យះ សវ៌្វកម៌្មភ្យោ វិឝឝ្រាម។ "
5 “ಇವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು” ಎಂದು ಭಾಗದಲ್ಲಿ ಆತನು ಪುನಃ ಹೇಳಿದ್ದಾನೆ.
កិន្ត្វេតស្មិន៑ ស្ថានេ បុនស្តេនោច្យតេ, យថា, "ប្រវេក្ឞ្យតេ ជនៃរេតៃ រ្ន វិឝ្រាមស្ថលំ មម។ "
6 ಆದ್ದರಿಂದ, ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುವುದಕ್ಕೆ ದೇವರು ಇನ್ನೂ ಅನುಮತಿಸುವವನಾಗಿದ್ದಾನೆ. ಮೊದಲು ಶುಭವರ್ತಮಾನವನ್ನು ಕೇಳಿದವರು ಅವಿಧೇಯರಾದ ಕಾರಣ ಅದರಲ್ಲಿ ಸೇರದೆಹೋದರು.
ផលតស្តត៑ ស្ថានំ កៃឝ្ចិត៑ ប្រវេឞ្ដវ្យំ កិន្តុ យេ បុរា សុសំវាទំ ឝ្រុតវន្តស្តៃរវិឝ្វាសាត៑ តន្ន ប្រវិឞ្ដម៑,
7 ಪುನಃ ಬಹುಕಾಲದ ನಂತರ ಆತನು ದಾವೀದನ ಮೂಲಕ ‘ಈ ಹೊತ್ತೇ’ ಎಂದು ಬೇರೊಂದು ದಿನವನ್ನು ಗೊತ್ತುಮಾಡಿದ್ದಾನೆ. ಹೇಗೆಂದರೆ, “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಡುವುದಾದರೆ, ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ!” ಎಂದು ಹೇಳುತ್ತಾನಷ್ಟೆ.
ឥតិ ហេតោះ ស បុនរទ្យនាមកំ ទិនំ និរូប្យ ទីគ៌្ហកាលេ គតេៜបិ បូវ៌្វោក្តាំ វាចំ ទាយូទា កថយតិ, យថា, "អទ្យ យូយំ កថាំ តស្យ យទិ សំឝ្រោតុមិច្ឆថ, តហ៌ិ មា កុរុតេទានីំ កឋិនានិ មនាំសិ វះ។ "
8 ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ, ಬೇರೊಂದು ದಿನವನ್ನು ಕುರಿತು ದೇವರು ಹೇಳುತ್ತಿರಲಿಲ್ಲವಲ್ಲಾ.
អបរំ យិហោឝូយោ យទិ តាន៑ វ្យឝ្រាមយិឞ្យត៑ តហ៌ិ តតះ បរម៑ អបរស្យ ទិនស្យ វាគ៑ ឦឝ្វរេណ នាកថយិឞ្យត។
9 ಆದಕಾರಣ ದೇವರ ಜನರಿಗೆ ಸಬ್ಬತೆಂಬ ವಿಶ್ರಾಂತಿಯು ಇನ್ನೂ ಉಂಟು.
អត ឦឝ្វរស្យ ប្រជាភិះ កត៌្តវ្យ ឯកោ វិឝ្រាមស្តិឞ្ឋតិ។
10 ೧೦ ಹೇಗೆಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೋ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ.
អបរម៑ ឦឝ្វរោ យទ្វត៑ ស្វក្ឫតកម៌្មភ្យោ វិឝឝ្រាម តទ្វត៑ តស្យ វិឝ្រាមស្ថានំ ប្រវិឞ្ដោ ជនោៜបិ ស្វក្ឫតកម៌្មភ្យោ វិឝ្រាម្យតិ។
11 ೧೧ ಆದ್ದರಿಂದ ನಾವು ಈ ವಿಶ್ರಾಂತಿಯಲ್ಲಿ ಸೇರುವುದಕ್ಕೆ ಪ್ರಯತ್ನಿಸೋಣ. ನಮ್ಮಲ್ಲಿ ಒಬ್ಬರಾದರೂ ಅವರಂತೆ ಅವಿಧೇಯರಾಗಿ ಬಿದ್ದುಹೋಗದೆ ಇರೋಣ.
អតោ វយំ តទ៑ វិឝ្រាមស្ថានំ ប្រវេឞ្ដុំ យតាមហៃ, តទវិឝ្វាសោទាហរណេន កោៜបិ ន បតតុ។
12 ೧೨ ಏಕೆಂದರೆ ದೇವರ ವಾಕ್ಯವು ಸಜೀವವಾದದ್ದು, ಸಕ್ರಿಯವಾದದ್ದು ಮತ್ತು ಯಾವ ಇಬ್ಬಾಯಿ ಕತ್ತಿಗಿಂತಲೂ ಹರಿತವಾದದ್ದು ಆಗಿದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದಾಗಿದ್ದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ.
ឦឝ្វរស្យ វាទោៜមរះ ប្រភាវវិឝិឞ្ដឝ្ច សវ៌្វស្មាទ៑ ទ្វិធារខង្គាទបិ តីក្ឞ្ណះ, អបរំ ប្រាណាត្មនោ រ្គ្រន្ថិមជ្ជយោឝ្ច បរិភេទាយ វិច្ឆេទការី មនសឝ្ច សង្កល្បានាម៑ អភិប្រេតានាញ្ច វិចារកះ។
13 ೧೩ ಆತನ ದೃಷ್ಟಿಗೆ ಮರೆಯಾಗಿರುವ ಒಂದು ಸೃಷ್ಟಿಯೂ ಇಲ್ಲ. ಆತನ ಕಣ್ಣಿಗೆ ಮರೆಯಾದದ್ದು ಒಂದೂ ಇಲ್ಲ ಎಲ್ಲವೂ ನಗ್ನವಾಗಿಯೂ ಬಟ್ಟಬಯಲಾಗಿಯೂ ಇದೆ. ಅಂಥವನಿಗೆ ನಾವು ಲೆಕ್ಕಕೊಡಬೇಕಾಗಿದೆ.
អបរំ យស្យ សមីបេ ស្វីយា ស្វីយា កថាស្មាភិះ កថយិតវ្យា តស្យាគោចរះ កោៜបិ ប្រាណី នាស្តិ តស្យ ទ្ឫឞ្ដៅ សវ៌្វមេវានាវ្ឫតំ ប្រកាឝិតញ្ចាស្តេ។
14 ೧೪ ಆಕಾಶಗಳನ್ನು ದಾಟಿಹೋದ ದೇವಕುಮಾರನಾದ ಯೇಸುವೆಂಬ ಶ್ರೇಷ್ಠ ಮಹಾಯಾಜಕನು ನಮಗಿದ್ದಾನೆ. ಆದುದರಿಂದ ನಮಗಿರುವ ನಂಬಿಕೆಯನ್ನು ದೃಢವಾಗಿ ಹಿಡಿಯೋಣ.
អបរំ យ ឧច្ចតមំ ស្វគ៌ំ ប្រវិឞ្ដ ឯតាទ្ឫឝ ឯកោ វ្យក្តិរត៌្ហត ឦឝ្វរស្យ បុត្រោ យីឝុរស្មាកំ មហាយាជកោៜស្តិ, អតោ ហេតោ រ្វយំ ធម៌្មប្រតិជ្ញាំ ទ្ឫឍម៑ អាលម្ពាមហៃ។
15 ೧೫ ಏಕೆಂದರೆ ನಮಗಿರುವ ಮಹಾಯಾಜಕನು ನಮ್ಮ ಬಲಹೀನತೆಗಳಲ್ಲಿ ಅನುಕಂಪ ತೋರಿಸುವವನಾಗಿದ್ದಾನೆ. ಆತನು ಸರ್ವ ವಿಷಯಗಳಲ್ಲಿಯೂ ನಮ್ಮ ಹಾಗೆ ಶೋಧನೆಗೆ ಗುರಿಯಾದವನು, ಪಾಪ ಮಾತ್ರ ಮಾಡಲಿಲ್ಲವಷ್ಟೇ.
អស្មាកំ យោ មហាយាជកោ ៜស្តិ សោៜស្មាកំ ទុះខៃ រ្ទុះខិតោ ភវិតុម៑ អឝក្តោ នហិ កិន្តុ បាបំ វិនា សវ៌្វវិឞយេ វយមិវ បរីក្ឞិតះ។
16 ೧೬ ಆದುದರಿಂದ ನಾವು ತಕ್ಕ ಸಮಯದಲ್ಲಿ ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಆತನ ಕೃಪಾಸನದ ಮುಂದೆ ಬರೋಣ.
អតឯវ ក្ឫបាំ គ្រហីតុំ ប្រយោជនីយោបការាត៌្ហម៑ អនុគ្រហំ ប្រាប្តុញ្ច វយម៑ ឧត្សាហេនានុគ្រហសិំហាសនស្យ សមីបំ យាមះ។

< ಇಬ್ರಿಯರಿಗೆ ಬರೆದ ಪತ್ರಿಕೆ 4 >