< ಇಬ್ರಿಯರಿಗೆ ಬರೆದ ಪತ್ರಿಕೆ 11 >

1 ನಂಬಿಕೆಯೋ ನಾವು ನಿರೀಕ್ಷಿಸುವಂಥವುಗಳ ಭರವಸೆಯೂ, ಇನ್ನೂ ಕಣ್ಣಿಗೆ ಕಾಣದವುಗಳ ಮೇಲಿನ ನಿಶ್ಚಯವೂ ಆಗಿದೆ.
វិឝ្វាស អាឝំសិតានាំ និឝ្ចយះ, អទ្ឫឝ្យានាំ វិឞយាណាំ ទឝ៌នំ ភវតិ។
2 ನಮ್ಮ ಹಿರಿಯರು ತಮ್ಮ ನಂಬಿಕೆಯಿಂದಲೇ ದೈವಸಮ್ಮತಿಯನ್ನು ಪಡೆದರು.
តេន វិឝ្វាសេន ប្រាញ្ចោ លោកាះ ប្រាមាណ្យំ ប្រាប្តវន្តះ។
3 ವಿಶ್ವವು ದೇವರ ಮಾತಿನಿಂದಲೇ ನಿರ್ಮಿತವಾಯಿತೆಂದು ನಾವು ನಂಬಿಕೆಯಿಂದಲೇ ತಿಳಿದುಕೊಂಡಿದ್ದೇವೆ. ಈ ಕಾರಣದಿಂದ ಕಾಣಿಸುವ ಈ ಜಗತ್ತು ದೃಶ್ಯವಸ್ತುಗಳಿಂದ ಉಂಟಾಗಲಿಲ್ಲವೆಂದು ಗ್ರಹಿಸುತ್ತೇವೆ. (aiōn g165)
អបរម៑ ឦឝ្វរស្យ វាក្យេន ជគន្ត្យស្ឫជ្យន្ត, ទ្ឫឞ្ដវស្តូនិ ច ប្រត្យក្ឞវស្តុភ្យោ នោទបទ្យន្តៃតទ៑ វយំ វិឝ្វាសេន ពុធ្យាមហេ។ (aiōn g165)
4 ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಶ್ರೇಷ್ಠ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಇದರ ಮೂಲಕ ಅವನು ನೀತಿವಂತನೆಂದು ಸಾಕ್ಷಿ ಹೊಂದಿದನು. ದೇವರು ಅವನ ಕಾಣಿಕೆಗಳನ್ನು ಕುರಿತು ಪ್ರಶಂಸಿಸಿದನು. ಅವನು ಸತ್ತುಹೋಗಿದ್ದರೂ, ಅವನ ನಂಬಿಕೆಯ ಮೂಲಕ ಇನ್ನೂ ಮಾತನಾಡುವವನಾಗಿದ್ದಾನೆ.
វិឝ្វាសេន ហាពិល៑ ឦឝ្វរមុទ្ទិឝ្យ កាពិលះ ឝ្រេឞ្ឋំ ពលិទានំ ក្ឫតវាន៑ តស្មាច្ចេឝ្វរេណ តស្យ ទានាន្យធិ ប្រមាណេ ទត្តេ ស ធាម៌្មិក ឥត្យស្យ ប្រមាណំ លព្ធវាន៑ តេន វិឝ្វាសេន ច ស ម្ឫតះ សន៑ អទ្យាបិ ភាឞតេ។
5 ನಂಬಿಕೆಯಿಂದಲೇ ಹನೋಕನು ಮರಣವನ್ನು ಅನುಭವಿಸದೇ ಒಯ್ಯಲ್ಪಟ್ಟನು. ದೇವರು ಅವನನ್ನು ತೆಗೆದುಕೊಂಡು ಹೋದದ್ದರಿಂದ ಅವನು ಯಾರಿಗೂ ಕಾಣಿಸಿಗಲಿಲ್ಲ. ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿ ಹೊಂದಿದನು.
វិឝ្វាសេន ហនោក៑ យថា ម្ឫត្យុំ ន បឝ្យេត៑ តថា លោកាន្តរំ នីតះ, តស្យោទ្ទេឝឝ្ច កេនាបិ ន ប្រាបិ យត ឦឝ្វរស្តំ លោកាន្តរំ នីតវាន៑, តត្ប្រមាណមិទំ តស្យ លោកាន្តរីករណាត៑ បូវ៌្វំ ស ឦឝ្វរាយ រោចិតវាន៑ ឥតិ ប្រមាណំ ប្រាប្តវាន៑។
6 ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಏಕೆಂದರೆ ದೇವರ ಬಳಿಗೆ ಬರುವವನು ದೇವರು ಇದ್ದಾನೆ ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬಬೇಕು.
កិន្តុ វិឝ្វាសំ វិនា កោៜបីឝ្វរាយ រោចិតុំ ន ឝក្នោតិ យត ឦឝ្វរោៜស្តិ ស្វាន្វេឞិលោកេភ្យះ បុរស្ការំ ទទាតិ ចេតិកថាយាម៑ ឦឝ្វរឝរណាគតៃ រ្វិឝ្វសិតវ្យំ។
7 ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ದೈವೋಕ್ತಿಯನ್ನು ಹೊಂದಿ, ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ನಂಬಿಕೆಯಿಂದಲೇ ಅವನು ಲೋಕದವರು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡನು. ಆದುದ್ದರಿಂದ ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು.
អបរំ តទានីំ យាន្យទ្ឫឝ្យាន្យាសន៑ តានីឝ្វរេណាទិឞ្ដះ សន៑ នោហោ វិឝ្វាសេន ភីត្វា ស្វបរិជនានាំ រក្ឞាត៌្ហំ បោតំ និម៌្មិតវាន៑ តេន ច ជគជ្ជនានាំ ទោឞាន៑ ទឝ៌ិតវាន៑ វិឝ្វាសាត៑ លភ្យស្យ បុណ្យស្យាធិការី ពភូវ ច។
8 ನಂಬಿಕೆಯಿಂದಲೇ ಅಬ್ರಹಾಮನು ಕರೆಯಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟು ಹೋದನು. ತಾನು ಹೋಗುವುದು ಎಲ್ಲಿಗೆ ಎಂದು ತಿಳಿಯದೆ ಹೊರಟನು.
វិឝ្វាសេនេព្រាហីម៑ អាហូតះ សន៑ អាជ្ញាំ គ្ឫហីត្វា យស្យ ស្ថានស្យាធិការស្តេន ប្រាប្តវ្យស្តត៑ ស្ថានំ ប្រស្ថិតវាន៑ កិន្តុ ប្រស្ថានសមយេ ក្ក យាមីតិ នាជានាត៑។
9 ನಂಬಿಕೆಯಿಂದಲೇ ಅವನು ವಾಗ್ದಾನದ ದೇಶಕ್ಕೆ ಬಂದಾಗ, ಅಲ್ಲಿ ಅನ್ಯ ದೇಶದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿ ಬದುಕಿದನು. ಅದೇ ವಾಗ್ದಾನಕ್ಕೆ ಸಹಭಾಧ್ಯರಾಗಿದ್ದ ಇಸಾಕನೂ, ಯಾಕೋಬನೂ ಅವನಂತೆಯೇ ಗುಡಾರಗಳಲ್ಲಿ ವಾಸಿಸಿದರು.
វិឝ្វាសេន ស ប្រតិជ្ញាតេ ទេឝេ បរទេឝវត៑ ប្រវសន៑ តស្យាះ ប្រតិជ្ញាយាះ សមានាំឝិភ្យាម៑ ឥស្ហាកា យាកូពា ច សហ ទូឞ្យវាស្យភវត៑។
10 ೧೦ ಯಾಕೆಂದರೆ ಅವನು ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು.
យស្មាត៑ ស ឦឝ្វរេណ និម៌្មិតំ ស្ថាបិតញ្ច ភិត្តិមូលយុក្តំ នគរំ ប្រត្យៃក្ឞត។
11 ೧೧ ಇದಲ್ಲದೆ ಸಾರಳು ವಾಗ್ದಾನ ಮಾಡಿದಾತನನ್ನು ನಂಬತಕ್ಕವನೆಂದೆಣಿಸಿ ತಾನು ಪ್ರಾಯ ಮೀರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿಯಾಗುವುದಕ್ಕೆ ಶಕ್ತಿಯನ್ನು ಹೊಂದಿದಳು.
អបរញ្ច វិឝ្វាសេន សារា វយោតិក្រាន្តា សន្ត្យបិ គព៌្ហធារណាយ ឝក្តិំ ប្រាប្យ បុត្រវត្យភវត៑, យតះ សា ប្រតិជ្ញាការិណំ វិឝ្វាស្យម៑ អមន្យត។
12 ೧೨ ಆದುದರಿಂದ ಮೃತಪ್ರಾಯನಾಗಿದ್ದ ಒಬ್ಬನಿಂದ ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾದ ಮಕ್ಕಳು ಹುಟ್ಟಿದರು.
តតោ ហេតោ រ្ម្ឫតកល្បាទ៑ ឯកស្មាត៑ ជនាទ៑ អាកាឝីយនក្ឞត្រាណីវ គណនាតីតាះ សមុទ្រតីរស្ថសិកតា ឥវ ចាសំខ្យា លោកា ឧត្បេទិរេ។
13 ೧೩ ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದಲಿಲ್ಲ. ಆದರೂ ಅವುಗಳನ್ನು ದೂರದಿಂದ ನೋಡಿ ಮತ್ತು ಉಲ್ಲಾಸದೊಡನೆ ಸ್ವೀಕರಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳು ಆಗಿದ್ದೆವೆಂದು ಒಪ್ಪಿಕೊಂಡರು.
ឯតេ សវ៌្វេ ប្រតិជ្ញាយាះ ផលាន្យប្រាប្យ កេវលំ ទូរាត៑ តានិ និរីក្ឞ្យ វន្ទិត្វា ច, ប្ឫថិវ្យាំ វយំ វិទេឝិនះ ប្រវាសិនឝ្ចាស្មហ ឥតិ ស្វីក្ឫត្យ វិឝ្វាសេន ប្រាណាន៑ តត្យជុះ។
14 ೧೪ ಇಂಥ ಮಾತುಗಳನ್ನಾಡುವವರು ತಾವು ಸ್ವದೇಶವನ್ನು ಹುಡುಕುವವರಾಗಿದ್ದರೆಂಬುದನ್ನು ವ್ಯಕ್ತಪಡಿಸುತ್ತದೆ.
យេ តុ ជនា ឥត្ថំ កថយន្តិ តៃះ បៃត្ឫកទេឝោ ៜស្មាភិរន្វិឞ្យត ឥតិ ប្រកាឝ្យតេ។
15 ೧೫ ತಾವು ಬಿಟ್ಟು ಬಂದ ದೇಶದ ಮೇಲೆ ಮನಸ್ಸಿಟ್ಟವರಾಗಿದ್ದರೆ ಅಲ್ಲಿಗೆ ಹಿಂದಿರುಗಿ ಹೋಗುವ ಅವಕಾಶಗಳು ಅವರಿಗಿದ್ದವು.
តេ យស្មាទ៑ ទេឝាត៑ និគ៌តាស្តំ យទ្យស្មរិឞ្យន៑ តហ៌ិ បរាវត៌្តនាយ សមយម៑ អលប្ស្យន្ត។
16 ೧೬ ಆದರೆ ಅವರು ಪರಲೋಕವೆಂಬ ಉತ್ತಮ ದೇಶವನ್ನು ಹಾರೈಸುವವರು. ಆದ್ದರಿಂದ ದೇವರು ಅವರ ದೇವರೇ ಎನ್ನಿಸಿಕೊಳ್ಳುವುದಕ್ಕೆ ನಾಚಿಕೆಗೊಳ್ಳದೇ, ಅವರಿಗೋಸ್ಕರ ಪಟ್ಟಣವನ್ನು ಸಿದ್ಧಮಾಡಿದ್ದಾನೆ.
កិន្តុ តេ សវ៌្វោត្ក្ឫឞ្ដម៑ អត៌្ហតះ ស្វគ៌ីយំ ទេឝម៑ អាកាង្ក្ឞន្តិ តស្មាទ៑ ឦឝ្វរស្តានធិ ន លជ្ជមានស្តេឞាម៑ ឦឝ្វរ ឥតិ នាម គ្ឫហីតវាន៑ យតះ ស តេឞាំ ក្ឫតេ នគរមេកំ សំស្ថាបិតវាន៑។
17 ೧೭ ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು” ಎಂದು ದೇವರು ಅವನಿಗೆ ಹೇಳಿದ್ದರೂ ತನ್ನ ಏಕಪುತ್ರನನ್ನು ಅರ್ಪಿಸಿದನು.
អបរម៑ ឥព្រាហីមះ បរីក្ឞាយាំ ជាតាយាំ ស វិឝ្វាសេនេស្ហាកម៑ ឧត្សសជ៌,
18 ೧೮
វស្តុត ឥស្ហាកិ តវ វំឝោ វិខ្យាស្យត ឥតិ វាគ៑ យមធិ កថិតា តម៑ អទ្វិតីយំ បុត្រំ ប្រតិជ្ញាប្រាប្តះ ស ឧត្សសជ៌។
19 ೧೯ ನನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸಲು ಸಮರ್ಥನಾಗಿದ್ದಾನೆಂದು ತಿಳಿದುಕೊಂಡಿದ್ದನು. ಮತ್ತು ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಪಡೆದುಕೊಂಡನು.
យត ឦឝ្វរោ ម្ឫតានប្យុត្ថាបយិតុំ ឝក្នោតីតិ ស មេនេ តស្មាត៑ ស ឧបមារូបំ តំ លេភេ។
20 ೨೦ ನಂಬಿಕೆಯಿಂದಲೇ ಇಸಾಕನು ಯಾಕೋಬನನ್ನು ಮತ್ತು ಏಸಾವನನ್ನು ಆಶೀರ್ವದಿಸಿದಾಗ ಮುಂದೆ ಸಂಭವಿಸಬಹುದಾದ ವಿಷಯಗಳನ್ನು ಸೂಚಿಸಿದನು.
អបរម៑ ឥស្ហាក៑ វិឝ្វាសេន យាកូព៑ ឯឞាវេ ច ភាវិវិឞយានធ្យាឝិឞំ ទទៅ។
21 ೨೧ ಯಾಕೋಬನು ತಾನು ಮರಣ ಹೊಂದುವ ಸಮಯದಲ್ಲಿ ನಂಬಿಕೆಯಿಂದಲೇ ಯೋಸೇಫನ ಮಕ್ಕಳಿಬ್ಬರನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.
អបរំ យាកូព៑ មរណកាលេ វិឝ្វាសេន យូឞផះ បុត្រយោរេកៃកស្មៃ ជនាយាឝិឞំ ទទៅ យឞ្ដ្យា អគ្រភាគេ សមាលម្ព្យ ប្រណនាម ច។
22 ೨೨ ಯೋಸೇಫನು ತನ್ನ ಮರಣ ಸಮಯದಲ್ಲಿ ಇಸ್ರಾಯೇಲ್ಯರು ಐಗುಪ್ತದೇಶದಿಂದ ಹೊರಡುವುದನ್ನು ಕುರಿತು ನಂಬಿಕೆಯಿಂದಲೇ ಮಾತನಾಡಿ ತನ್ನ ಎಲುಬುಗಳನ್ನು ತೆಗೆದುಕೊಂಡು ಹೋಗುವ ವಿಷಯದಲ್ಲಿ ಅಪ್ಪಣೆ ಕೊಟ್ಟನು.
អបរំ យូឞផ៑ ចរមកាលេ វិឝ្វាសេនេស្រាយេល្វំឝីយានាំ មិសរទេឝាទ៑ ពហិគ៌មនស្យ វាចំ ជគាទ និជាស្ថីនិ ចាធិ សមាទិទេឝ។
23 ೨೩ ಮೋಶೆ ಹುಟ್ಟಿದಾಗ ಅವನ ತಂದೆತಾಯಿಗಳು ಕೂಸು ಸುಂದರವಾಗಿದೆ ಎಂದು ನೋಡಿ ಅರಸನ ಅಪ್ಪಣೆಗೆ ಭಯಪಡದೇ ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳು ಬಚ್ಚಿಟ್ಟರು.
នវជាតោ មូសាឝ្ច វិឝ្វាសាត៑ ត្រាន៑ មាសាន៑ ស្វបិត្ឫភ្យាម៑ អគោប្យត យតស្តៅ ស្វឝិឝុំ បរមសុន្ទរំ ទ្ឫឞ្ដវន្តៅ រាជាជ្ញាញ្ច ន ឝង្កិតវន្តៅ។
24 ೨೪ ನಂಬಿಕೆಯಿಂದಲೇ ಮೋಶೆಯು ದೊಡ್ಡವನಾದ ಮೇಲೆ ಫರೋಹನ ಪುತ್ರಿಯ ಮಗನೆನಿಸಿಕೊಳ್ಳುವುದು ಬೇಡವೆಂದುಕೊಂಡನು.
អបរំ វយះប្រាប្តោ មូសា វិឝ្វាសាត៑ ផិរៅណោ ទៅហិត្រ ឥតិ នាម នាង្គីចការ។
25 ೨೫ ಸ್ವಲ್ಪ ಕಾಲದಲ್ಲಿ ಗತಿಸಿ ಹೋಗುವ ಪಾಪಭೋಗಗಳನ್ನು ಅನುಭವಿಸುವುದಕ್ಕಿಂತ, ದೇವಜನರೊಂದಿಗೆ ಕಷ್ಟವನ್ನು ಅನುಭವಿಸುವುದೇ ಮೇಲೆಂದು ತೀರ್ಮಾನಿಸಿಕೊಂಡನು.
យតះ ស ក្ឞណិកាត៑ បាបជសុខភោគាទ៑ ឦឝ្វរស្យ ប្រជាភិះ សាទ៌្ធំ ទុះខភោគំ វវ្រេ។
26 ೨೬ ಐಗುಪ್ತದೇಶದ ಸರ್ವಐಶ್ವರ್ಯಕ್ಕಿಂತಲೂ, ಕ್ರಿಸ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠ ಭಾಗ್ಯವೆಂದೆಣಿಸಿಕೊಂಡನು. ಏಕೆಂದರೆ ಮುಂಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು.
តថា មិសរទេឝីយនិធិភ្យះ ខ្រីឞ្ដនិមិត្តាំ និន្ទាំ មហតីំ សម្បត្តិំ មេនេ យតោ ហេតោះ ស បុរស្ការទានម៑ អបៃក្ឞត។
27 ೨೭ ನಂಬಿಕೆಯಿಂದಲೇ ಅವನು ಅರಸನ ರೌದ್ರಕ್ಕೆ ಭಯಪಡದೇ ಐಗುಪ್ತದೇಶವನ್ನು ಬಿಟ್ಟುಹೋದನು. ಏಕೆಂದರೆ ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನಂತೆ ದೃಢಚಿತ್ತನಾಗಿದ್ದನು.
អបរំ ស វិឝ្វាសេន រាជ្ញះ ក្រោធាត៑ ន ភីត្វា មិសរទេឝំ បរិតត្យាជ, យតស្តេនាទ្ឫឝ្យំ វីក្ឞមាណេនេវ ធៃយ៌្យម៑ អាលម្ពិ។
28 ೨೮ ಚೊಚ್ಚಲ ಮಕ್ಕಳನ್ನು ಸಂಹರಿಸುವವನು, ಇಸ್ರಾಯೇಲ್ಯರ ಚೊಚ್ಚಲ ಮಕ್ಕಳನ್ನು ಮುಟ್ಟದಂತೆ, ನಂಬಿಕೆಯಿಂದಲೇ ಅವನು ಪಸ್ಕವನ್ನೂ ರಕ್ತಪೋಕ್ಷಣಾಚಾರವನ್ನೂ ಆಚರಿಸಿದನು.
អបរំ ប្រថមជាតានាំ ហន្តា យត៑ ស្វីយលោកាន៑ ន ស្ប្ឫឝេត៑ តទត៌្ហំ ស វិឝ្វាសេន និស្តារបវ៌្វីយពលិច្ឆេទនំ រុធិរសេចនញ្ចានុឞ្ឋិតាវាន៑។
29 ೨೯ ಇಸ್ರಾಯೇಲ್ಯರು ನಂಬಿಕೆಯಿಂದಲೇ ಕೆಂಪು ಸಮುದ್ರವನ್ನು ಒಣ ಭೂಮಿಯನ್ನು ದಾಟುವಂತೆ ದಾಟಿದರು. ಐಗುಪ್ತದೇಶದವರು ಅದನ್ನು ದಾಟುವುದಕ್ಕೆ ಪ್ರಯತ್ನಿಸಿದಾಗ ಮುಳುಗಿ ಹೋದರು.
អបរំ តេ វិឝ្វាសាត៑ ស្ថលេនេវ សូផ្សាគរេណ ជគ្មុះ កិន្តុ មិស្រីយលោកាស្តត៑ កត៌្តុម៑ ឧបក្រម្យ តោយេឞុ មមជ្ជុះ។
30 ೩೦ ನಂಬಿಕೆಯಿಂದಲೇ ಅವರು ಏಳು ದಿನಗಳ ತನಕ ಯೆರಿಕೋ ಪಟ್ಟಣದ ಗೋಡೆಗಳನ್ನು ಸುತ್ತಿದ ಮೇಲೆ ಅವು ಬಿದ್ದವು.
អបរញ្ច វិឝ្វាសាត៑ តៃះ សប្តាហំ យាវទ៑ យិរីហោះ ប្រាចីរស្យ ប្រទក្ឞិណេ ក្ឫតេ តត៑ និបបាត។
31 ೩೧ ನಂಬಿಕೆಯಿಂದಲೇ ರಾಹಾಬಳೆಂಬ ಸೂಳೆಯು ಗೂಢಚಾರರನ್ನು ಸಮಾಧಾನವಾಗಿ ಸೇರಿಸಿಕೊಂಡು, ಅವಿಧೇಯರೊಂದಿಗೆ ನಾಶವಾಗದೆ ಉಳಿದಳು.
វិឝ្វាសាទ៑ រាហព្នាមិកា វេឝ្យាបិ ប្រីត្យា ចារាន៑ អនុគ្ឫហ្យាវិឝ្វាសិភិះ សាទ៌្ធំ ន វិននាឝ។
32 ೩೨ ಇನ್ನೂ ಏನು ಹೇಳಬೇಕು? ಗಿದ್ಯೋನ್, ಬಾರಾಕ ಸಂಸೋನ, ಯೆಪ್ತಾಹ, ದಾವೀದ, ಸಮುವೇಲ ಮತ್ತು ಪ್ರವಾದಿಗಳ ವಿಷಯವಾಗಿ ಹೇಳಬೇಕಾದರೆ ನನಗೆ ಸಮಯ ಸಾಲದು.
អធិកំ កិំ កថយិឞ្យាមិ? គិទិយោនោ ពារកះ ឝិម្ឝោនោ យិប្តហោ ទាយូទ៑ ឝិមូយេលោ ភវិឞ្យទ្វាទិនឝ្ចៃតេឞាំ វ្ឫត្តាន្តកថនាយ មម សមយាភាវោ ភវិឞ្យតិ។
33 ೩೩ ನಂಬಿಕೆಯ ಮೂಲಕ ಅವರು ರಾಜ್ಯಗಳನ್ನೂ ಸ್ವಾಧೀನ ಮಾಡಿಕೊಂಡರು, ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, ಸಿಂಹಗಳ ಬಾಯಿ ಕಟ್ಟಿದರು.,
វិឝ្វាសាត៑ តេ រាជ្យានិ វឝីក្ឫតវន្តោ ធម៌្មកម៌្មាណិ សាធិតវន្តះ ប្រតិជ្ញានាំ ផលំ លព្ធវន្តះ សិំហានាំ មុខានិ រុទ្ធវន្តោ
34 ೩೪ ಬೆಂಕಿಯ ಶಕ್ತಿಯನ್ನು ನಂದಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ದುರ್ಬಲರಾಗಿದ್ದು ಬಲಿಷ್ಠರಾದರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು, ಪರದೇಶದವರ ಸೈನ್ಯಗಳನ್ನು ಓಡಿಸಿಬಿಟ್ಟರು.
វហ្នេទ៌ាហំ និវ៌្វាបិតវន្តះ ខង្គធារាទ៑ រក្ឞាំ ប្រាប្តវន្តោ ទៅព៌្ពល្យេ សពលីក្ឫតា យុទ្ធេ បរាក្រមិណោ ជាតាះ បរេឞាំ សៃន្យានិ ទវយិតវន្តឝ្ច។
35 ೩೫ ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರುಗಿ ಪಡೆದುಕೊಂಡರು. ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ, ಬಿಡುಗಡೆಯನ್ನು ತಿರಸ್ಕರಿಸಿದರು.
យោឞិតះ បុនរុត្ថានេន ម្ឫតាន៑ អាត្មជាន៑ លេភិរេ, អបរេ ច ឝ្រេឞ្ឋោត្ថានស្យ ប្រាប្តេរាឝយា រក្ឞាម៑ អគ្ឫហីត្វា តាឌនេន ម្ឫតវន្តះ។
36 ೩೬ ಬೇರೆ ಕೆಲವರು ಅಪಹಾಸ್ಯ, ಕೊರಡೆಯ ಪೆಟ್ಟು, ಬೇಡಿ, ಸೆರೆಮನೆವಾಸಗಳನ್ನು ಅನುಭವಿಸಿದರು.
អបរេ តិរស្ការៃះ កឝាភិ រ្ពន្ធនៃះ ការយា ច បរីក្ឞិតាះ។
37 ೩೭ ಕೆಲವರನ್ನು ಜನರು ಕಲ್ಲೆಸೆದು ಕೊಂದರು, ಕೆಲವರನ್ನು ಗರಗಸದಿಂದ ಎರಡು ಭಾಗವಾಗಿ ಕೊಯ್ದು ಕೊಂದರು, ಕೆಲವರನ್ನು ಕತ್ತಿಯಿಂದ ಕೊಂದರು. ಕೆಲವರು ಕೊರತೆ, ಹಿಂಸೆ, ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು.
ពហវឝ្ច ប្រស្តរាឃាតៃ រ្ហតាះ ករបត្រៃ រ្វា វិទីណ៌ា យន្ត្រៃ រ្វា ក្លិឞ្ដាះ ខង្គធារៃ រ្វា វ្យាបាទិតាះ។ តេ មេឞាណាំ ឆាគានាំ វា ចម៌្មាណិ បរិធាយ ទីនាះ បីឌិតា ទុះខាត៌្តាឝ្ចាភ្រាម្យន៑។
38 ೩೮ ಇಂಥವರಿಗೆ ಈ ಲೋಕವು ಯೋಗ್ಯಸ್ಥಳವಾಗಿರಲಿಲ್ಲ. ಅವರು ತಮ್ಮ ದೇಶದ ಮರುಭೂಮಿ, ಬೆಟ್ಟ, ಗವಿ, ಕುಣಿಗಳಲ್ಲಿ ಅಲೆಯುವವರಾಗಿದ್ದರು.
សំសារោ យេឞាម៑ អយោគ្យស្តេ និជ៌នស្ថានេឞុ បវ៌្វតេឞុ គហ្វរេឞុ ប្ឫថិវ្យាឝ្ឆិទ្រេឞុ ច បយ៌្យដន៑។
39 ೩೯ ಇವರೆಲ್ಲರು ತಮ್ಮ ನಂಬಿಕೆಯ ಮೂಲಕ ಒಳ್ಳೆ ಸಾಕ್ಷಿಯನ್ನು ಹೊಂದಿದವರಾಗಿದ್ದರೂ, ವಾಗ್ದಾನದ ಫಲವನ್ನು ಹೊಂದಲಿಲ್ಲ.
ឯតៃះ សវ៌្វៃ រ្វិឝ្វាសាត៑ ប្រមាណំ ប្រាបិ កិន្តុ ប្រតិជ្ញាយាះ ផលំ ន ប្រាបិ។
40 ೪೦ ದೇವರು ನಮಗೋಸ್ಕರ ಶ್ರೇಷ್ಠವಾದ ಭಾಗ್ಯವನ್ನು ಏರ್ಪಡಿಸಿ, ನಾವಿಲ್ಲದೆ ಅವರು ಪರಿಪೂರ್ಣರಾಗಬಾರದೆಂದು ಸಂಕಲ್ಪಿಸಿದನು.
យតស្តេ យថាស្មាន៑ វិនា សិទ្ធា ន ភវេយុស្តថៃវេឝ្វរេណាស្មាកំ ក្ឫតេ ឝ្រេឞ្ឋតរំ កិមបិ និទ៌ិទិឝេ។

< ಇಬ್ರಿಯರಿಗೆ ಬರೆದ ಪತ್ರಿಕೆ 11 >