< ಆದಿಕಾಂಡ 12 >

1 ಯೆಹೋವನು ಅಬ್ರಾಮನಿಗೆ, “ನೀನು, ನಿನ್ನ ಸ್ವದೇಶವನ್ನೂ, ಬಂಧುಬಳಗವನ್ನೂ, ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು.
I reèe Gospod Avramu: idi iz zemlje svoje i od roda svojega i iz doma oca svojega u zemlju koju æu ti ja pokazati.
2 ನಾನು ನಿನ್ನನ್ನು ಮಹಾ ಜನಾಂಗವಾಗುವಂತೆ ಮಾಡಿ, ಆಶೀರ್ವದಿಸಿ, ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನೀನು ಆಶೀರ್ವಾದದ ನಿಧಿಯಾಗುವಿ.
I uèiniæu od tebe velik narod, i blagosloviæu te, i ime tvoje proslaviæu, i ti æeš biti blagoslov.
3 ನಿನ್ನನ್ನು ಆಶೀರ್ವದಿಸುವವರನ್ನು ನಾನು ಆಶೀರ್ವದಿಸುವೆನು; ನಿನ್ನನ್ನು ಶಪಿಸುವವರನ್ನು ನಾನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೆ ಆಶೀರ್ವಾದವುಂಟಾಗುವುದು” ಎಂದು ಹೇಳಿದನು.
Blagosloviæu one koji tebe uzblagosiljaju, i prokleæu one koji tebe usproklinju; i u tebi æe biti blagoslovena sva plemena na zemlji.
4 ಯೆಹೋವನು ಹೇಳಿದ ಪ್ರಕಾರ ಅಬ್ರಾಮನು ಹೊರಟುಹೋದನು. ಲೋಟನೂ ಅವನ ಸಂಗಡ ಹೋದನು. ಅಬ್ರಾಮನು ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟಾಗ ಎಪ್ಪತ್ತೈದು ವರ್ಷದವನಾಗಿದ್ದನು.
Tada poðe Avram, kao što mu kaza Gospod, i s njim poðe Lot. A bješe Avramu sedamdeset i pet godina kad poðe iz Harana.
5 ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ, ತನ್ನ ತಮ್ಮನ ಮಗನಾದ ಲೋಟನನ್ನೂ, ತಾನೂ ಲೋಟನೂ ಹಾರಾನಿನಲ್ಲಿ ಸಂಪಾದಿಸಿದ್ದ ಎಲ್ಲಾ ಸೊತ್ತನ್ನೂ, ದಾಸ ದಾಸಿಯರನ್ನೂ ತೆಗೆದುಕೊಂಡು ಕಾನಾನ್ ದೇಶಕ್ಕೆ ಬಂದನು.
I uze Avram Saru ženu svoju i Lota sina brata svojega sa svijem blagom koje bjehu stekli i s dušama koje bjehu dobili u Haranu; i poðoše u zemlju Hanansku, i doðoše u nju.
6 ಅಬ್ರಾಮನು ಆ ದೇಶದಲ್ಲಿ ಸಂಚರಿಸುತ್ತಾ ಶೆಕೆಮ್ ಸ್ಥಳದಲ್ಲಿರುವ ಮೋರೆ ಎಂಬ ವೃಕ್ಷದ ಬಳಿಗೆ ಬಂದನು. ಆ ಕಾಲದಲ್ಲಿ ಕಾನಾನ್ಯರು ದೇಶದಲ್ಲಿದ್ದರು.
I proðe Avram tu zemlju do mjesta Sihema i do ravnice Moreške; a bijahu tada Hananeji u toj zemlji.
7 ಅಲ್ಲಿ ಯೆಹೋವನು ಅಬ್ರಾಮನಿಗೆ ದರ್ಶನದಲ್ಲಿ, “ನಾನು ಈ ದೇಶವನ್ನು ನಿನ್ನ ಸಂತಾನಕ್ಕೆ ಕೊಡುವೆನು” ಅಂದನು. ತನಗೆ ದರ್ಶನಕೊಟ್ಟ ಯೆಹೋವನಿಗೆ ಅಬ್ರಾಮನು ಯಜ್ಞವೇದಿಯನ್ನು ಕಟ್ಟಿಸಿದನು.
I javi se Gospod Avramu i reèe: tvojemu sjemenu daæu zemlju ovu. I Avram naèini ondje žrtvenik Gospodu, koji mu se javio.
8 ಅವನು ಅಲ್ಲಿಂದ ಹೊರಟು ಬೇತೇಲಿನ ಪೂರ್ವದಲ್ಲಿರುವ ಗುಡ್ಡಕ್ಕೆ ಬಂದು ತನ್ನ ಗುಡಾರವನ್ನು ಹಾಕಿ ಇಳಿದುಕೊಂಡನು. ಪಶ್ಚಿಮಕ್ಕೆ ಬೇತೇಲ್, ಪೂರ್ವಕ್ಕೆ ಆಯಿ ಎಂಬ ಊರುಗಳಿದ್ದವು. ಅಲ್ಲಿಯೂ ಅಬ್ರಾಮನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ ಆತನ ಹೆಸರಿನಲ್ಲಿ ಆರಾಧಿಸಿದನು.
Poslije otide odande na brdo koje je prema istoku od Vetilja, i ondje razape šator svoj, te mu Vetilj bješe sa zapada a Gaj s istoka; i ondje naèini Gospodu žrtvenik, i prizva ime Gospodnje.
9 ತರುವಾಯ ಅಬ್ರಾಮನು ಅಲ್ಲಿಂದ ಹೊರಟು ಕಾನಾನ್ ದೇಶದ ದಕ್ಷಿಣ ಸೀಮೆಗೆ ಪ್ರಯಾಣ ಮಾಡುತ್ತಾ ಹೋದನು.
Odande otide Avram dalje iduæi na jug.
10 ೧೦ ದಕ್ಷಿಣ ಕಾನಾನ್ ದೇಶದಲ್ಲಿ ಘೋರ ಕ್ಷಾಮವಿದ್ದುದರಿಂದ, ಅಬ್ರಾಮನು ಅಲ್ಲಿರದೆ, ಐಗುಪ್ತ ದೇಶದಲ್ಲಿ ಕೆಲವು ಕಾಲ ಇರಬೇಕೆಂದು ಆ ಬೆಟ್ಟದ ಸೀಮೆಯಿಂದ ಇಳಿದು ಹೋದನು.
Ali nasta glad u onoj zemlji, te Avram siðe u Misir da se ondje skloni; jer glad bješe velika u onoj zemlji.
11 ೧೧ ಅವನು ಐಗುಪ್ತ ದೇಶದ ಹತ್ತಿರಕ್ಕೆ ಬಂದಾಗ ತನ್ನ ಹೆಂಡತಿಯಾದ ಸಾರಯಳಿಗೆ, “ಕೇಳು, ನೀನು ಸುಂದರಿ ಎಂದು ನಾನು ಬಲ್ಲೆ;
A kad se približi da veæ uðe u Misir, reèe Sari ženi svojoj: gle, znam da si žena lijepa u licu.
12 ೧೨ ಐಗುಪ್ತ ದೇಶದವರು ನಿನ್ನನ್ನು ಕಂಡು, ಈಕೆಯು ಇವನ ಹೆಂಡತಿ ಎಂದು ತಿಳಿದು ನನ್ನನ್ನು ಕೊಂದು ನಿನ್ನನ್ನು ಉಳಿಸಬಹುದು.
Zato kad te vide Misirci reæi æe: ovo mu je žena. Pa æe me ubiti, a tebe æe ostaviti u životu.
13 ೧೩ ಆದಕಾರಣ ನೀನು ನನಗೆ ತಂಗಿಯಾಗಬೇಕೆಂದು ಅವರಿಗೆ ಹೇಳು; ಹೀಗೆ ಹೇಳಿದರೆ ನಿನ್ನ ನಿಮಿತ್ತ ನನಗೆ ಹಿತವಾಗುವುದು, ನಾನು ನಿನ್ನ ದೆಸೆಯಿಂದ ಸಾಯದೆ ಬದುಕುವೆನು” ಎಂದು ಹೇಳಿದನು.
Nego hajde kaži da si mi sestra, te æe meni biti dobro tebe radi i ostaæu u životu uz tebe.
14 ೧೪ ಅಬ್ರಾಮನು ಐಗುಪ್ತ ದೇಶಕ್ಕೆ ಬಂದಾಗ ಐಗುಪ್ತರು ಅವನ ಸಂಗಡ ಇದ್ದ ಸ್ತ್ರೀಯನ್ನು ನೋಡಿ ಬಹು ಸುಂದರಿ ಎಂದು ಅಂದುಕೊಂಡರು.
I kad doðe Avram u Misir, vidješe Misirci ženu da je vrlo lijepa.
15 ೧೫ ಫರೋಹನ ರಾಜಕುಮಾರರು ಆಕೆಯನ್ನು ನೋಡಿ ಬಂದು, ಅವನ ಮುಂದೆ ಹೊಗಳಲಾಗಿ ಫರೋಹನು ಆ ಸ್ತ್ರೀಯನ್ನು ಅರಮನೆಗೆ ಕರೆಯಿಸಿ ಆಕೆಯ ನಿಮಿತ್ತ ಅಬ್ರಾಮನಿಗೆ ಉಪಕಾರ ಮಾಡಿದನು.
I vidješe je knezovi Faraonovi, i hvališe je pred Faraonom. I uzeše je u dvor Faraonov.
16 ೧೬ ಆಗ ಅಬ್ರಾಮನಿಗೆ ಕುರಿ, ಎತ್ತು, ಗಂಡು, ಹೆಣ್ಣು ಕತ್ತೆಗಳು, ದಾಸದಾಸಿಯರು, ಒಂಟೆಗಳು, ದೊರಕಿದವು.
I on èinjaše dobro Avramu nje radi, te imaše ovaca i goveda i magaraca i sluga i sluškinja i magarica i kamila.
17 ೧೭ ಆದರೆ ಯೆಹೋವನು ಫರೋಹನಿಗೂ ಅವನ ಮನೆಯವರಿಗೂ ಅಬ್ರಾಮನ ಹೆಂಡತಿಯಾದ ಸಾರಯಳ ನಿಮಿತ್ತ ಬಹಳ ಉಪದ್ರವಗಳಿಂದ ಬಾಧಿಸಿದನು.
Ali Gospod pusti velika zla na Faraona i na dom njegov radi Sare žene Avramove.
18 ೧೮ ಆಗ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ಏಕೆ ಹೀಗೆ ಮಾಡಿದೆ? ಆಕೆ ನಿನ್ನ ಹೆಂಡತಿಯೆಂದು ಏಕೆ ನನಗೆ ತಿಳಿಸಲಿಲ್ಲ?
Tada dozva Faraon Avrama i reèe mu: šta mi to uèini? zašto mi nijesi kazao da ti je žena?
19 ೧೯ ತಂಗಿಯೆಂದು ಯಾಕೆ ಹೇಳಿದೆ? ಹೀಗೆ ಹೇಳಿದ್ದರಿಂದ ಆಕೆಯನ್ನು ಹೆಂಡತಿಯನ್ನಾಗಿ ತೆಗೆದುಕೊಂಡೆನಲ್ಲಾ. ಇಗೋ ನಿನ್ನ ಹೆಂಡತಿ; ಕರೆದುಕೊಂಡು ಹೋಗು” ಎಂದು ಹೇಳಿ,
Zašto si kazao: sestra mi je? te je uzeh za ženu. Sad eto ti žene, uzmi je, pa idi.
20 ೨೦ ಫರೋಹನು ಅವನ ವಿಷಯವಾಗಿ ತನ್ನ ಸೇವಕರಿಗೆ ಅಪ್ಪಣೆಕೊಡಲು ಅವರು ಅಬ್ರಾಮನನ್ನೂ ಅವನ ಹೆಂಡತಿಯನ್ನೂ ಅವನಿಗೆ ಇದ್ದದ್ದೆಲ್ಲವನ್ನೂ ಒಟ್ಟಿಗೆ ಸೇರಿಸಿ ಕಳುಹಿಸಿ ಬಿಟ್ಟರು.
I Faraon zapovjedi ljudima za nj, te ga ispratiše i ženu njegovu i što god imaše.

< ಆದಿಕಾಂಡ 12 >