< ಎಜ್ರನು 3 >

1 ಸೆರೆವಾಸದಿಂದ ಹಿಂದಿರುಗಿ ಬಂದು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಇಸ್ರಾಯೇಲರು ಏಳನೆಯ ತಿಂಗಳಿನಲ್ಲಿ ಏಕಮನಸ್ಸಿನಿಂದ ಯೆರೂಸಲೇಮಿಗೆ ಕೂಡಿಬಂದರು.
इस्राएलीहरू आ-आफ्ना सहरमा फर्केको सातौं महिनमा तिनीहरू एक जना मानिसझैं यरूशलेममा भेला भए ।
2 ಆಗ ದೇವರ ಮನುಷ್ಯನಾದ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಸರ್ವಾಂಗಹೋಮಗಳನ್ನು ಸಮರ್ಪಿಸುವುದಕ್ಕಾಗಿ ಯೋಚಾದಾಕನ ಮಗನಾದ ಯೇಷೂವನೂ, ಯಾಜಕರಾದ ಅವನ ಬಂಧುಗಳೂ, ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನೂ ಮತ್ತು ಅವನ ಬಂಧುಗಳೂ ಇಸ್ರಾಯೇಲ್ ದೇವರ ಯಜ್ಞವೇದಿಯನ್ನು ಪುನಃ ಕಟ್ಟುವುದಕ್ಕೆ ಪ್ರಾರಂಭಿಸಿದರು.
योसादाकका छोरा येशूअ र तिनका पुजारी दाजुभाइहरू, शालतिएलका छोरा यरुबाबेल र तिनका दाजुभाइहरू उठे, र परमेश्‍वरका मानिस मोशाको व्यवस्थामा लेखिएझैं होमबलिहरू चढाउन इस्राएलका परमेश्‍वरको वेदी निर्माण गरे ।
3 ಅವರು ಸುತ್ತಣ ಪ್ರಾಂತ್ಯಗಳ ಜನರಿಗೆ ಹೆದರಿಕೊಂಡಿದ್ದರಿಂದ ವೇದಿಯನ್ನು ಅದರ ಸ್ಥಳದಲ್ಲಿ ಕಟ್ಟಿ, ಅದರ ಮೇಲೆ ಯೆಹೋವನಿಗೋಸ್ಕರ ಮುಂಜಾನೆಯ ಹಾಗು ಸಾಯಂಕಾಲಗಳ ಸರ್ವಾಂಗಹೋಮಗಳನ್ನು ಅರ್ಪಿಸಿದರು.
त्यसपछि तिनीहरूमा देशका मानिसहरूको डर परेको भए तापनि तिनीहरूले वेदीलाई त्‍यसको आधारमा स्थापित गरे । तिनीहरूले बिहान र बेलुका परमप्रभुका निम्ति होमबलिहरू चढाए ।
4 ಇದಲ್ಲದೆ ಶಾಸ್ತ್ರದಲ್ಲಿ ಬರೆದಿರುವಂತೆ ಅವರು ಪರ್ಣಶಾಲೆಗಳ ಜಾತ್ರೆಯನ್ನು ಆಚರಿಸಿ, ಪ್ರತಿದಿನ ನಿಗದಿಪಡಿಸಿದ ವಿಧಿಗನುಸಾರವಾದ ಸರ್ವಾಂಗಹೋಮಗಳನ್ನು ಅರ್ಪಿಸಿದರು.
लेखिएअनुसार तिनीहरूले छाप्रोवासको चाड पनि मनाए, र हरेक दिनको निम्‍ति आदेश भएअनुसार दिनदिनै होमबलिहरू चढाए ।
5 ಅಂದಿನಿಂದ ನಿತ್ಯ ಸರ್ವಾಂಗಹೋಮ, ಅಮಾವಾಸ್ಯೆ, ಯೆಹೋವನ ಎಲ್ಲಾ ಉತ್ಸವದಿನ ಇವುಗಳಲ್ಲಿ ನೇಮಕವಾದ ಸರ್ವಾಂಗಹೋಮಗಳೂ, ಜನರು ಸ್ವ ಇಚ್ಛೆಯಿಂದ ತಂದುಕೊಟ್ಟ ಯಜ್ಞಗಳೂ ಯೆಹೋವನಿಗೆ ಸಮರ್ಪಣೆಯಾಗುತ್ತಾ ಬಂದವು.
यसैगरी, सबै स्वेच्छिक भेटीहरूका साथै परमप्रभुका सबै तोकिएका चाडका लागि दैनिक होमबलिहरू र मासिक होमबलिहरू र भेटीहरू पनि थिए ।
6 ಏಳನೆಯ ತಿಂಗಳಿನ ಮೊದಲನೆಯ ದಿನದಿಂದ ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸತೊಡಗಿದರು. ಆಗ ಯೆಹೋವನ ಆಲಯದ ಅಸ್ತಿವಾರವು ಇನ್ನೂ ಹಾಕಲ್ಪಟ್ಟಿರಲಿಲ್ಲ.
मन्‍दिरको जग नै नबसालिएको भए तापनि तिनीहरूले सातौं महिनाको पहिलो दिनमा परमप्रभुका निम्ति होमबलिहरू चढाउन थाले ।
7 ಆದರೆ ಪರ್ಷಿಯ ರಾಜನಾದ ಕೋರೆಷನಿಂದ ಪಡೆದುಕೊಂಡ ಅಪ್ಪಣೆಯ ಮೇರೆಗೆ ಅವರು ಕಲ್ಲುಕುಟಿಗರಿಗೆ ಮತ್ತು ಬಡಗಿಗಳಿಗೆ ಹಣವನ್ನೂ, ಲೆಬನೋನಿನಿಂದ ಸಮುದ್ರಮಾರ್ಗವಾಗಿ ಯೊಪ್ಪಕ್ಕೆ ದೇವದಾರು ಮರಗಳನ್ನು ತರುತ್ತಿದ್ದ ಚೀದೋನ್ಯರಿಗೆ ಮತ್ತು ತೂರ್ಯರಿಗೆ ಅನ್ನಪಾನಗಳನ್ನೂ ಮತ್ತು ಎಣ್ಣೆಯನ್ನೂ ಕೊಟ್ಟಿದ್ದರು.
तिनीहरूले ढुङ्गा काट्ने र कारीगरहरूलाई चाँदी दिए, अनि फारसका राजा कोरेसले सीदोन र टुरोसका मानिसहरूलाई अधिकार दिएका हुनाले लेबनानदेखि योप्पासम्म समुद्राबाट उनीहरूले देवदारुका काठहरू ल्याइदिऊन् भनी तिनीहरूले उनीहरूलाई खाना, पानी र तेल दिए ।
8 ಅವರು ಯೆರೂಸಲೇಮಿನ ದೇವಾಲಯವನ್ನು ತಲುಪಿದ ಎರಡನೆಯ ವರ್ಷದ ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್, ಯೋಚಾದಾಕನ ಮಗನಾದ ಯೇಷೂವ ಇವರೂ, ಲೇವಿಯರೂ, ಸೆರೆಯಿಂದ ಯೆರೂಸಲೇಮಿಗೆ ಹಿಂತಿರುಗಿ ಬಂದ ಬೇರೆ ಎಲ್ಲರೂ ದೇವಾಲಯವನ್ನು ಕಟ್ಟುವುದಕ್ಕೆ ಪ್ರಾರಂಭಿಸಿ, ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸುಳ್ಳ ಲೇವಿಯರನ್ನು ಯೆಹೋವನ ಆಲಯದಲ್ಲಿ ಕಟ್ಟುವವರ ಮೇಲ್ವಿಚಾರಣೆಗಾಗಿ ನೇಮಿಸಿದರು.
त्‍यसपछि तिनीहरू यरूशलेममा परमेश्‍वरको मन्दिरमा आएको दोस्रो वर्षको दोस्रो महिनामा शालतिएलका छोरा यरुबाबेल, योसादाकका छोरा येशूअ, बाँकी पुजारीहरू, लेवीहरू र निर्वासनबाट यरूशलेममा फर्केकाहरूले काम गर्न सुरु गरे । तिनीहरूले बिस वर्ष र त्यसभन्दा माथिका लेवीहरूलाई परमप्रभुको मन्दिरको निरीक्षण गर्ने जिम्मा दिए ।
9 ಕೂಡಲೆ ಲೇವಿಯರಲ್ಲಿ ಹೋದವ್ಯನ ಸಂತಾನದವರಾದ ಯೇಷೂವನು ಅವನ ಮಕ್ಕಳು ಮತ್ತು ಸಹೋದರರು, ಕದ್ಮೀಯೇಲನು ಮತ್ತು ಅವನ ಮಕ್ಕಳು, ಹೇನಾದಾದನ ಮಕ್ಕಳು ಅವರ ಮಕ್ಕಳು ಮತ್ತು ಬಂಧುಗಳು ಇವರೆಲ್ಲರೂ ಕೂಡಿಕೊಂಡು ದೇವಾಲಯ ಕಟ್ಟುವವರ ಮೇಲ್ವಿಚಾರಕರಾಗಿ ನಿಂತರು.
येशूअ र तिनका छोराहरूसाथै दाजुभाइहरू, कादमीएल र तिनका छोराहरू (जो होदबियाका सन्तानहरू थिए), हेनादादका छोराहरू र तिनीहरूका छोराहरू र दाजुभाइ जो सबै लेवी थिए, तिनीहरू परमप्रभुको मन्दिर निर्माण गर्नेहरूको निरीक्षण गर्न एकजुट भए ।
10 ೧೦ ಕಟ್ಟುವವರು ಯೆಹೋವನ ಮಂದಿರದ ಅಸ್ತಿವಾರವನ್ನು ಹಾಕಿದಾಗ ಇಸ್ರಾಯೇಲರ ಅರಸನಾದ ದಾವೀದನು ನೇಮಿಸಿದ ಕ್ರಮಕ್ಕನುಸಾರವಾಗಿ ಯೆಹೋವನನ್ನು ಸ್ತುತಿಸಿ ಕೀರ್ತಿಸುವುದಕ್ಕೋಸ್ಕರ ಯಾಜಕರು ತಮ್ಮ ದೀಕ್ಷಾವಸ್ತ್ರಗಳಿಂದ ಭೂಷಿತರಾಗಿ ತುತ್ತೂರಿಗಳೊಡನೆಯೂ, ಆಸಾಫನ ಮಕ್ಕಳಾದ ಲೇವಿಯರು ತಾಳಗಳೊಡನೆಯೂ ನಿಂತುಕೊಂಡರು.
जब निर्माणकर्ताहरूले परमप्रभुको मन्दिरको जग बसाले, तब पुजारीहरू आ-आफ्ना पोशाकहरूमा तुरहीहरू लिएर अनि लेवीहरू र आसापका छोराहरू झ्यालीहरू लिएर परमप्रभुको प्रशंसा गर्न खडा भए, जसरी इस्राएलका राजा दाऊदले आज्ञा गरेका थिए ।
11 ೧೧ ಅವರು ಪರಸ್ಪರ ಹಾಡುತ್ತಾ, ಯೆಹೋವನನ್ನು ಸಂಕೀರ್ತಿಸುತ್ತಾ, “ಆತನು ಒಳ್ಳೆಯವನು; ಆತನ ಕೃಪೆಯು ಇಸ್ರಾಯೇಲರೊಂದಿಗೆ ಶಾಶ್ವತವಾಗಿರುತ್ತದೆ” ಎಂದು ಕೃತಜ್ಞತಾಸ್ತುತಿಮಾಡಿದರು. ಯೆಹೋವನ ಕೀರ್ತನೆ ಕೇಳಿಸಿದ ಕೂಡಲೆ ಯೆಹೋವನ ಆಲಯದ ಅಸ್ತಿವಾರವು ಹಾಕಲ್ಪಟ್ಟಿರುತ್ತದೆಂದು ಜನರೆಲ್ಲರೂ ಉತ್ಸಾಹಧ್ವನಿಯಿಂದ ಜಯಘೋಷ ಮಾಡಿದರು.
तिनीहरूले परमप्रभुलाई प्रशंसा र धन्यवादको गीत गाए, “उहाँ भलो हुनुहुन्छ! इस्राएलसित बाँधिएको उहाँको करारको विश्‍वासनियता सदासर्वदा रहन्छ ।” मन्दिरको जग बसालिएको हुनाले सबै मानिसले परमप्रभुको प्रशंसा गर्दै आनन्दले कराए ।
12 ೧೨ ಆದರೆ ಯಾಜಕರಲ್ಲಿಯೂ, ಲೇವಿಯರಲ್ಲಿಯೂ, ಗೋತ್ರಪ್ರಧಾನರಲ್ಲಿಯೂ ಅನೇಕರು ಅಂದರೆ ಮೊದಲಿನ ದೇವಾಲಯವನ್ನು ನೋಡಿದ್ದ ಹಿರಿಯರು ತಮ್ಮ ಕಣ್ಣ ಮುಂದೆ ದೇವಾಲಯದ ಅಸ್ತಿವಾರವು ಹಾಕಲ್ಪಟ್ಟಿದ್ದನ್ನು ನೋಡಿದಾಗ ಬಹಳವಾಗಿ ಅತ್ತರು. ಬೇರೆ ಹಲವರು ಹರ್ಷಧ್ವನಿಯಿಂದ ಜಯಘೋಷ ಮಾಡಿದರು.
तर पुजारीहरू, लेवीहरू र मुख्‍य मानिसहरूमध्‍ये धेरै जना जो धेरै वृद्ध थिए र पहिलो मन्दिरलाई देखेका थिए, जब तिनीहरूको आँखाको सामु यो मन्दिरको जग बसालियो, तब तिनीहरू धुरुधुरु रोए । तर खुसी र आनन्‍दको चर्को स्‍वरको आनन्दले कराउने मानिसहरूको संख्‍या धेरै थियो ।
13 ೧೩ ಜನರು ಮಹಾಧ್ವನಿಯಿಂದ ಅರ್ಭಟಿಸುತ್ತಿದ್ದರಿಂದ ಹರ್ಷಧ್ವನಿ ಯಾವುದು ಅಳುವವರ ಧ್ವನಿ ಯಾವುದು ಗೊತ್ತಾಗಲಿಲ್ಲ. ಗದ್ದಲವು ಬಹುದೂರದ ವರೆಗೂ ಕೇಳಿಸಿತು.
फलस्वरूप, मानिसहरूले आनन्‍द र खुसीको आवाजलाई रोएका मानिसहरूको आवाजबाट छुट्ट्याउन सकेनन् किनकि मानिसहरू ठुलो आनन्दले कराउँदै थिए, र आवाज टाढा-टाढासम्म सुनिएको थियो ।

< ಎಜ್ರನು 3 >