< ವಿಮೋಚನಕಾಂಡ 5 >

1 ಬಳಿಕ ಮೋಶೆ ಮತ್ತು ಆರೋನರು ಫರೋಹನ ಸನ್ನಿಧಿಗೆ ಹೋಗಿ, “ಇಸ್ರಾಯೇಲರ ದೇವರಾದ ಯೆಹೋವನು, ನನ್ನ ಜನರು ನನಗಾಗಿ ಅರಣ್ಯದೊಳಗೆ ಜಾತ್ರೆ ನಡೆಸುವಂತೆ ಅವರಿಗೆ ಅಪ್ಪಣೆ ಕೊಡಬೇಕು ಎಂದು ಹೇಳಿದ್ದಾನೆ” ಅಂದರು.
Pea hili ia naʻe ʻalu ʻa Mōsese mo ʻElone, ʻo tala kia Felo, “ʻOku pehē mai ʻe Sihova, ko e ʻOtua ʻo ʻIsileli, Tukuange ʻa hoku kakai ke ʻalu, koeʻuhi ke nau fai ʻae kātoanga kiate au ʻi he toafa.”
2 ಅದಕ್ಕೆ ಫರೋಹನು, “ಯೆಹೋವನೆಂಬುವವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲರನ್ನು ಹೋಗಗೊಡಿಸುವುದೇತಕ್ಕೆ? ಯೆಹೋವನು ಯಾರೋ ನನಗೆ ಗೊತ್ತಿಲ್ಲ. ಇದು ಮಾತ್ರವಲ್ಲದೆ, ಇಸ್ರಾಯೇಲರನ್ನು ಹೋಗಲು ನಾನು ಬಿಡುವುದೇ ಇಲ್ಲ” ಅಂದನು.
Pea pehēange ʻe Felo, “Ko hai ʻa Sihova, koeʻuhi ke u talangofua ai ki hono leʻo ʻo tukuange ʻa ʻIsileli ke ʻalu? ʻOku ʻikai te u ʻiloa ʻa Sihova, pea ʻe ʻikai te u tukuange ʻa ʻIsileli ke ʻalu.”
3 ಆಗ ಅವರು, “ಇಬ್ರಿಯರ ದೇವರು ನಮ್ಮನ್ನು ಎದುರುಗೊಂಡನು. ಅಪ್ಪಣೆಯಾದರೆ ನಾವು ಮರುಭೂಮಿಯಲ್ಲಿ ಮೂರು ದಿನ ಪ್ರಯಾಣಮಾಡಿ, ನಮ್ಮ ದೇವರಾದ ಯೆಹೋವನಿಗೋಸ್ಕರ ಯಜ್ಞಮಾಡಿ ಬರುವೆವು. ಇಲ್ಲವಾದರೆ ಆತನು ನಮ್ಮನ್ನು ವ್ಯಾಧಿಯಿಂದಾದರೂ, ಕತ್ತಿಯಿಂದಾದರೂ ಸಂಹಾರಮಾಡುವನು” ಎಂದು ಹೇಳಿದರು.
Pea naʻa na pehē, “Kuo hāʻele mai ʻae ʻOtua ʻoe kau Hepelū kiate kimautolu: ko ia ʻoku mau kole ai kiate koe, tuku ʻakimautolu ke mau ʻalu ki he toafa, ko e fonongaʻanga ʻoe ʻaho ʻe tolu, ke feilaulau kia Sihova ko homau ʻOtua; telia naʻa hoko ia kiate kimautolu ʻi he mahaki fakaʻauha pe ko e heletā.
4 ಐಗುಪ್ತರ ಅರಸನು ಅವರಿಗೆ, “ಮೋಶೆ ಮತ್ತು ಆರೋನರೇ, ಈ ಜನರು ತಮ್ಮ ಕೆಲಸವನ್ನು ಮಾಡದಂತೆ ಯಾಕೆ ಅಡ್ಡಿ ಮಾಡುತ್ತೀರಿ? ನಿಮ್ಮ ಬಿಟ್ಟೀ ಕೆಲಸಕ್ಕೆ ಹೋಗಿರಿ” ಎಂದು ಹೇಳಿದನು.
Pea pehēange ʻe he tuʻi ʻo ʻIsipite kiate kinaua, “ʻE Mōsese mo ʻElone, ko e hā ʻoku mo taʻofi ai ʻae kakai ʻi heʻenau ngaahi ngāue? Mou fei mo ʻalu ki hoʻomou ngaahi kavenga.
5 ಫರೋಹನು, “ಇಬ್ರಿಯರು ದೇಶದಲ್ಲಿ ಹೆಚ್ಚಾಗಿದ್ದಾರೆ. ಅವರು ತಮ್ಮ ಬಿಟ್ಟೀ ಕೆಲಸಗಳನ್ನು ಮಾಡದಂತೆ ನಿಲ್ಲಿಸಿ ಬಿಡುತ್ತಿದ್ದೀರಲ್ಲಾ?” ಎಂದನು.
Pea naʻe pehē ʻe Felo, “Vakai, ko ʻeni, ʻoku tokolahi ʻae kakai ʻoe fonua pea ʻoku mou taʻofi ʻakinautolu mei heʻenau ngaahi kavenga.”
6 ಆ ದಿನದಲ್ಲಿ ಫರೋಹನು ಬಿಟ್ಟೀಮಾಡಿಸುವವರನ್ನು ಮತ್ತು ಅವರ ಅಧಿಕಾರಿಗಳನ್ನು ಕರೆಯಿಸಿ,
Pea naʻe fekau ʻe Felo ʻi he ʻaho ko ia ki he kau enginaki ngāue ʻoe kakai, mo honau kau matāpule, ʻo pehē,
7 “ಇನ್ನು ಮೇಲೆ ನೀವು ಆ ಜನರಿಗೆ ಇಟ್ಟಿಗೆ ಮಾಡುವುದಕ್ಕೆ ಹುಲ್ಲನ್ನು ಕೊಡಬಾರದು. ಅವರೇ ಹೋಗಿ ಹುಲ್ಲನ್ನು ಶೇಖರಿಸಿಕೊಳ್ಳಲಿ,
“ʻOua te mou kei ʻatu ki he kakai ʻae mohuku mōmoa ke ngaohi ʻae makaʻumea ʻo hangē ko ia naʻe fai: tuku ke nau ʻalu ʻo tānaki ʻae mohuku mōmoa maʻanautolu.
8 ಆದರೂ ಅವರು ಈವರೆಗೆ ಮಾಡಿದ ಇಟ್ಟಿಗೆಗಳ ಲೆಕ್ಕದಲ್ಲಿ ಏನೂ ಕಡಿಮೆಯಾಗಬಾರದು ಎಂದು ಅವರಿಗೆ ಹೇಳಬೇಕು. ಅವರು ಮೈಗಳ್ಳರೇ, ಆದುದರಿಂದಲೇ ಅವರು, ‘ನಾವು ಹೋಗಿ ನಮ್ಮ ದೇವರಿಗೆ ಯಜ್ಞಮಾಡಿ ಬರುವುದಕ್ಕೆ ಅಪ್ಪಣೆಯಾಗಬೇಕು’ ಎಂದು ಕೂಗಿಕೊಳ್ಳುತ್ತಿದ್ದಾರೆ.
Pea ko hono lau ʻoe ngaahi makaʻumea ʻaia naʻa nau muʻaki ngaohi, te mou fakapapau ia kiate kinautolu; ʻe ʻikai te mou fakasiʻisiʻi ia, he ʻoku nau fakapikopiko; ko ia ʻoku nau tangi ai, ʻo pehē, Tukuange ʻakimautolu ke ʻalu ʻo feilaulau ki homau ʻOtua.
9 ಈ ಜನರು ವ್ಯರ್ಥವಾದ ಮಾತುಗಳಿಗೆ ಗಮನ ಕೊಡದಂತೆ ನೀವು ಅವರ ಮೇಲೆ ಹೆಚ್ಚು ಕೆಲಸವನ್ನು ಹೊರಿಸಿರಿ. ಅವರು ದುಡಿಯಲಿ” ಎಂದು ಆಜ್ಞಾಪಿಸಿದನು.
Fakalahi ki he ngāue ʻae kau tangata, koeʻuhi ke nau moʻua ai; pea ʻoua naʻa nau tokanga ki he ngaahi launoa.”
10 ೧೦ ಆಗ ಬಿಟ್ಟೀಕೆಲಸವನ್ನು ಮಾಡಿಸುವವರೂ ಮತ್ತು ಅಧಿಕಾರಿಗಳೂ ಹೊರಗೆ ಹೋಗಿ ಆ ಜನರಿಗೆ, “ನಿಮಗೆ ಹುಲ್ಲನ್ನು ಕೊಡಬಾರದೆಂದು ಫರೋಹನ ಅಪ್ಪಣೆಯಾಗಿದೆ.
Pea naʻe ʻalu kituʻa ʻae kau ʻenginaki ngāue ʻoe kakai, mo honau kau matāpule, ʻonau lea ki he kakai, ʻo pehē, “ʻOku pehē mai ʻe Felo, ʻE ʻikai te u ʻatu ʻae mohuku mōmoa kiate kimoutolu.
11 ೧೧ ನಿಮಗೆ ಹುಲ್ಲು ಎಲ್ಲಿ ದೊರಕುವುದೋ ಅಲ್ಲಿಗೆ ನೀವೇ ಹೋಗಿ ತೆಗೆದುಕೊಳ್ಳಿರಿ. ಆದರೂ ನೀವು ಮಾಡಬೇಕಾದ ಕೆಲಸದಲ್ಲಿ ಸ್ವಲ್ಪವೂ ಕಡಿಮೆಯಾಗಬಾರದು” ಎಂದು ಹೇಳಿದರು.
Mou ʻalu, ʻo maʻu ʻae mohuku mōmoa mei ha potu pe: ka ʻe ʻikai siʻi fakasiʻisiʻi ai hoʻomou ngāue.”
12 ೧೨ ಹೀಗಿರಲಾಗಿ ಜನರು ಹುಲ್ಲನ್ನು ಕೂಡಿಸಿಕೊಳ್ಳುವುದಕ್ಕಾಗಿ ಐಗುಪ್ತ ದೇಶದಲ್ಲೆಲ್ಲಾ ಚದರಿಹೋಗಿ ಹುಡುಕತೊಡಗಿದರು.
Pea ko ia naʻe movetevete ai ʻae kakai ʻi he fonua kotoa pē ʻo ʻIsipite, ke tānaki ʻae louveve ko e fetongi ʻoe mohuku mōmoa.
13 ೧೩ ಇದಲ್ಲದೆ ಬಿಟ್ಟೀ ಕೆಲಸ ಮಾಡಿಸುವವರು, “ನಿಮಗೆ ಹುಲ್ಲು ಇದ್ದಾಗ ಹೇಗೋ ಹಾಗೆ ಪ್ರತಿದಿನದ ಕೆಲಸವನ್ನು ಅದೇ ದಿನದಲ್ಲೇ ಮುಗಿಸಬೇಕು” ಎಂದು ಹೇಳಿ ಅವರನ್ನು ಅವಸರ ಪಡಿಸಿದರು.
Pea naʻe fakavavevave ʻakinautolu ʻe he kau enginaki ngāue, ʻo pehē, “Fakakakato hoʻomou ngāue ki he ʻaho taki taha, ʻo hangē ko ia ʻi he ʻi ai ʻae mohuku.
14 ೧೪ ಫರೋಹನ ಅಧಿಕಾರಿಗಳು ತಾವೇ ನೇಮಿಸಿದ ಇಸ್ರಾಯೇಲರ ಮೇಲ್ವಿಚಾರಕರಿಗೆ, “ನೀವು ಮೊದಲು ಇಟ್ಟಿಗೆಗಳ ಲೆಕ್ಕ ಒಪ್ಪಿಸುತ್ತಿದ್ದಂತೆ ನಿನ್ನೆ ಹಾಗೂ ಈ ಹೊತ್ತು ಯಾಕೆ ಒಪ್ಪಿಸಲಿಲ್ಲ” ಎಂದು ಹೇಳಿ ಅವರನ್ನು ಹೊಡೆದರು.
Pea ko e kau matāpule ʻi he fānau ʻa ʻIsileli, ʻaia naʻe fakanofo ʻe he kau enginaki ngāue ʻa Felo, ke pule kiate kinautolu, naʻe teʻia, pea ʻeke kiate kinautolu, “Ko e hā naʻe ʻikai te mou fakakakato ai hono lau ʻoe maka naʻe tala ke ngaohi ʻaneafi, pea mo e ʻaho ni, ʻo hangē ko hono muʻaki fai?”
15 ೧೫ ಹೀಗಿರಲು ಇಸ್ರಾಯೇಲರ ಮೇಲ್ವಿಚಾರಕರು ಫರೋಹನ ಬಳಿಗೆ ಹೋಗಿ, “ಏಕೆ ನಿನ್ನ ದಾಸರಿಗೆ ಹೀಗೆ ಮಾಡುತ್ತಿರುವಿರಿ ಸ್ವಾಮೀ?
Pea haʻu ai ʻae kau matāpule ʻi he fānau ʻa ʻIsileli kia Felo, ʻo tangi ʻo pehē, “Ko e hā ʻoku ke fai pehē ai ki hoʻo kau tamaioʻeiki?
16 ೧೬ ನಿನ್ನ ದಾಸರಿಗೆ, ನೇಮಿಸಿದ ಅಧಿಕಾರಿಗಳು ಹುಲ್ಲನ್ನು ಕೊಡದೆ ‘ಇಟ್ಟಿಗೆಗಳನ್ನು ಮಾಡಿರಿ!’ ಎಂದು ಹೇಳುತ್ತಾ ನಮ್ಮನ್ನು ಹೊಡೆಯುತ್ತಿದ್ದಾರೆ. ಹೀಗೆ ನಿನ್ನ ಜನರು ಮಾಡುತ್ತಿರುವುದು ಪಾಪಕಾರ್ಯವಾಗಿದೆ” ಎಂದು ಗೋಳಾಡಿದರು.
‌ʻOku ʻikai tuku mai ha mohuku mōmoa ki hoʻo kau tamaioʻeiki, pea ʻoku nau tala mai, ‘Ngaohi ʻae maka:’ pea vakai, kuo teʻia ʻa hoʻo kau tamaioʻeiki ka ko hono kovi ʻoku ʻi ho kakai ʻoʻou.”
17 ೧೭ ಅದಕ್ಕೆ ಅವನು, “ನೀವು ಮೈಗಳ್ಳರು, ನೀವು ಮೈಗಳ್ಳರಾದ ಕಾರಣ, ‘ನಾವು ಹೋಗಿ ಯೆಹೋವನಿಗೆ ಯಜ್ಞವನ್ನರ್ಪಿಸಿ ಬರಬೇಕು’ ಎಂದು ಹೇಳುತ್ತಿದ್ದೀರಿ.
Ka naʻe pehē ʻe ia, “ʻOku mou fakapikopiko, ʻoku mou fakapikopiko: ko ia ʻoku mou pehē ai, ‘Tuku ʻakimautolu ke mau ʻalu ʻo feilaulau kia Sihova.’
18 ೧೮ ಆದ್ದರಿಂದ ಈಗ ಕೆಲಸಕ್ಕೆ ನಡೆಯಿರಿ ನಿಮಗೆ ಹುಲ್ಲನ್ನು ಕೊಡುವುದಿಲ್ಲ. ಆದರೂ ನೇಮಿಸಿದ ಇಟ್ಟಿಗೆಗಳ ಲೆಕ್ಕವನ್ನು ತಪ್ಪದೆ ಒಪ್ಪಿಸಬೇಕು” ಅಂದನು.
Ko ia mou ʻalu ni ʻo ngāue: ʻe ʻikai ʻatu ha mohuku mōmoa kiate kimoutolu, ka te mou ʻatu hono lau totonu ʻo hoʻomou makaʻumea.”
19 ೧೯ ದಿನ ದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂಬ ಅಪ್ಪಣೆಯಾಗಿದ್ದರಿಂದ ಇಸ್ರಾಯೇಲರ ಮೇಲ್ವಿಚಾರಕರು ತಾವು ದುರವಸ್ಥೆಯಲ್ಲಿ ಸಿಕ್ಕಿಕೊಂಡಿವೆಂದು ತಿಳಿದುಕೊಂಡರು.
Pea mamata ʻae kau matāpule ʻoe fānau ʻa ʻIsileli ʻoku nau tuʻutāmaki, hili hono tala, ʻo pehē, “ʻE ʻikai te mou fakasiʻisiʻi ʻae makaʻumea mei he ngāue ʻoe ʻaho taki taha.”
20 ೨೦ ಅವರು ಫರೋಹನ ಬಳಿಯಿಂದ ಹೊರಗೆ ಬಂದಾಗ ತಮ್ಮನ್ನು ಎದುರುಗೊಳ್ಳುವುದಕ್ಕೆ ನಿಂತಿದ್ದ ಮೋಶೆ ಮತ್ತು ಆರೋನರನ್ನು ನೋಡಿ
Pea naʻa nau fetaulaki mo Mōsese mo ʻElone, ʻoku tutuʻu ʻi he hala, ʻi heʻenau haʻu kituʻa meia Felo.
21 ೨೧ ಮೋಶೆ ಹಾಗು ಆರೋನರಿಗೆ, “ಯೆಹೋವನು ನಿಮ್ಮನ್ನು ನೋಡಿ ನ್ಯಾಯತೀರಿಸಲಿ. ಏಕೆಂದರೆ ಫರೋಹನು ಮತ್ತು ಅವನ ಸೇವಕರೂ ನಮ್ಮನ್ನು ನೋಡಿ ಅಸಹ್ಯಪಡುವಂತೆ ನೀವು ಮಾಡಿರುವಿರಿ. ನಮ್ಮನ್ನು ಸಂಹಾರಮಾಡುವುದಕ್ಕೆ ಅವರ ಕೈಗೆ ಕತ್ತಿಯನ್ನು ಕೊಟ್ಟಿದ್ದೀರಿ” ಅಂದರು. “ಯೆಹೋವನು ನಿಮ್ಮ ತಪ್ಪನ್ನು ವಿಚಾರಿಸಿ ತಕ್ಕ ಶಿಕ್ಷೆಯನ್ನು ವಿಧಿಸಲಿ” ಎಂದು ಹೇಳಿದರು.
Pea nau pehē kiate kinaua, “Ke vakai ʻa Sihova kiate kimoua, pea fakamaauʻi: koeʻuhi kuo mo fakanamukūʻi ʻakimautolu ʻi he ʻao ʻo Felo, pea mo e ʻao ʻo ʻene kau tamaioʻeiki, ke ai ʻae heletā ʻi honau nima ke fakapoongi ʻaki ʻakimautolu.”
22 ೨೨ ಆಗ ಮೋಶೆಯು ಯೆಹೋವನ ಬಳಿಗೆ ಹಿಂತಿರುಗಿ ಬಂದು, “ಸ್ವಾಮೀ, ಈ ಜನರಿಗೆ ಕೇಡನ್ನು ಮಾಡಿದ್ದೀಯಲ್ಲಾ? ನನ್ನನ್ನು ಕಳುಹಿಸಿದ್ದು ಯಾಕೆ?
Pea naʻe toe ʻalu ʻa Mōsese kia Sihova, ʻo ne pehē, “ʻEiki ko e hā kuo ke fai kovi pehē ai ki he kakai ni? Ko e hā kuo ke fekau ai au?
23 ೨೩ ನಾನು ಫರೋಹನ ಬಳಿಗೆ ಹೋಗಿ ನಿನ್ನ ಹೆಸರಿನಲ್ಲಿ ಮಾತನಾಡಿದಂದಿನಿಂದ ಅವನು ಈ ಜನರಿಗೆ ಕೇಡನ್ನೇ ಮಾಡುತ್ತಿದ್ದಾನೆ. ನೀನು ನಿನ್ನ ಜನರನ್ನು ಎಷ್ಟು ಮಾತ್ರವೂ ತಪ್ಪಿಸಲಿಲ್ಲವಲ್ಲ” ಎಂದು ಹೇಳಿದನು.
He talu ʻeku haʻu kia Felo ke lea ʻi ho huafa, kuo fai kovi ʻe ia ki he kakai ni; pea ʻoku teʻeki ʻaupito te ke fakamoʻui ho kakai.”

< ವಿಮೋಚನಕಾಂಡ 5 >