< ಎಸ್ತೇರಳು 8 >

1 ಆ ದಿನದಲ್ಲಿ ಅರಸನಾದ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಮನೆಯನ್ನು ಎಸ್ತೇರ್ ರಾಣಿಗೆ ಕೊಟ್ಟನು. ಆಕೆಯು ಮೊರ್ದೆಕೈಗೂ ತನಗೂ ಇರುವ ಸಂಬಂಧವನ್ನು ತಿಳಿಸಿದಳು.
Ɛda no ara, Ɔhene Ahasweros de Haman a ɔyɛ Yudafoɔ ɔtamfoɔ no agyapadeɛ maa Ɔhemmaa Ɛster. Na afei, wɔde Mordekai baa ɔhene anim, ɛfiri sɛ, na Ɛster akyerɛ sɛdeɛ ɔne no bɔ abusua.
2 ಆಗ ಅರಸನು ತಾನು ಹಾಮಾನನಿಗೆ ನೀಡಿದ್ದ ತನ್ನ ಮುದ್ರೆಯುಂಗುರವನ್ನು ಮೊರ್ದೆಕೈಗೆ ಕೊಟ್ಟನು; ಎಸ್ತೇರಳು ಹಾಮಾನನ ಮನೆಯ ಆಡಳಿತವನ್ನು ಅವನಿಗೆ ಒಪ್ಪಿಸಿದಳು.
Ɔhene no worɔɔ kawa a ɔgye firii Haman nkyɛn no de hyɛɛ Mordekai. Na Ɛster yii Mordekai sɛ ɔno na ɔnhwɛ Haman agyapadeɛ so.
3 ಎಸ್ತೇರಳು ಪುನಃ ಅರಸನನ್ನು ಮಾತನಾಡಿಸುವುದಕ್ಕೆ ಹೋಗಿ ಅವನ ಪಾದಗಳಿಗೆ ಬಿದ್ದು, ಅಳುತ್ತಾ, “ಅಗಾಗನ ವಂಶದವನಾದ ಹಾಮಾನನು ಯೆಹೂದ್ಯರ ಹಾನಿಗಾಗಿ ಕಲ್ಪಿಸಿದ ದುಷ್ಟ ಯೋಜನೆಗಳನ್ನು, ಅಪಾಯಗಳನ್ನು ನಿವಾರಿಸಬೇಕು” ಎಂದು ವಿಜ್ಞಾಪಿಸಿದಳು.
Bio, Ɛster baa ɔhene no nkyɛn bɛhwee ne nan ase, de su srɛɛ no sɛ, Haman atirisopam a ɔpam de tiaa Yudafoɔ no, wɔmma wɔnnyae.
4 ಅರಸನು ಸುವರ್ಣ ರಾಜದಂಡವನ್ನು ಆಕೆಯ ಕಡೆಗೆ ಚಾಚಿದ್ದರಿಂದ ಆಕೆಯು ಎದ್ದು ಅರಸನ ಮುಂದೆ ನಿಂತಳು.
Bio, ɔhene no sɔɔ sika ahempoma no mu, de kyerɛɛ Ɛster so. Enti, ɔsɔre gyinaa nʼanim
5 ಆಗ ಎಸ್ತೇರಳು ಅವನಿಗೆ, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು, ನನ್ನನ್ನು ಮೆಚ್ಚಿ, ನಾನು ಹೇಳುವ ಮಾತು ಒಳ್ಳೆಯದೆಂದು ಅದಕ್ಕೆ ಸಮ್ಮತಿಸುವುದಾದರೆ, ಅರಸನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಸಂಹರಿಸುವ ವಿಷಯವಾಗಿ ಅಗಾಗನ ವಂಶದವನೂ, ಹಮ್ಮೆದಾತನ ಮಗನು ಆದ ಹಾಮಾನನು ಬರೆಯಿಸಿದ ಪತ್ರವನ್ನು ರದ್ದುಮಾಡುವುದಕ್ಕಾಗಿ ಆಜ್ಞಾಪತ್ರವನ್ನು ಪ್ರಕಟಿಸಬೇಕು.
kaa sɛ, “Sɛ mesɔ Ɔhenkɛseɛ ani na sɛ ɔdwene sɛ ɛyɛ a, hyɛ mmara a ɛtia sɛeɛ a na Hamedata babarima Haman pɛ sɛ ɔsɛe Yudafoɔ a wɔwɔ ɔhene amantam nyinaa no mu.
6 ನನ್ನ ಜನರಿಗೆ ಕೇಡು ಸಂಭವಿಸುವುದನ್ನು ನೋಡಿ ನಾನು ಸಹಿಸಿಕೊಂಡಿರುವುದು ಹೇಗೆ? ನನ್ನ ಕುಲನಾಶನವನ್ನು ನೋಡುತ್ತಾ ಸುಮ್ಮನಿರುವುದು ಹೇಗೆ?” ಎಂದು ಬಿನ್ನವಿಸಿದಳು.
Na mɛyɛ dɛn matena ase ahwɛ sɛ wɔrekunkum me nkurɔfoɔ ne mʼabusuafoɔ, asɛe wɔn?”
7 ಆಗ ಅಹಷ್ವೇರೋಷ್ ರಾಜನು ರಾಣಿಯಾದ ಎಸ್ತೇರಳಿಗೂ ಮತ್ತು ಯೆಹೂದ್ಯನಾದ ಮೊರ್ದೆಕೈಗೂ, “ಹಾಮಾನನು ಯೆಹೂದ್ಯರಿಗೆ ವಿರುದ್ಧವಾಗಿ ಕೈಯೆತ್ತಿದ್ದರಿಂದ ಅವನನ್ನು ಗಲ್ಲಿಗೆ ಹಾಕಿಸಿ, ಅವನ ಸೊತ್ತನ್ನು ಎಸ್ತೇರಳಿಗೆ ದಾನಮಾಡಿದ್ದೇನಲ್ಲಾ, ಅರಸನ ಹೆಸರಿನಲ್ಲಿ ಬರೆಯಲ್ಪಟ್ಟು ರಾಜಮುದ್ರೆಯಿರುವ ಲೇಖನವನ್ನು ಯಾರೂ ರದ್ದುಮಾಡಲು ಬರುವುದಿಲ್ಲ.
Na ɔhene Ahasweros ka kyerɛɛ Ɔhemmaa Ɛster ne Yudani Mordekai sɛ, “Mede Haman agyapadeɛ ama Ɛster, na wɔasɛn no dua so, ɛfiri sɛ, ɔpɛɛ sɛ ɔsɛe Yudafoɔ.
8 ಆದುದರಿಂದ ಯೆಹೂದ್ಯರ ವಿಷಯವಾಗಿ ನಿಮಗೆ ಸರಿತೋರುವುದನ್ನು ಅರಸನ ಹೆಸರಿನಲ್ಲಿ ನೀವೂ ಬರೆಯಿಸಿ, ಅದಕ್ಕೆ ರಾಜಮುದ್ರೆಯನ್ನು ಹಾಕಿರಿ” ಎಂದು ಹೇಳಿದನು.
Afei, kɔ so fa ɔhene din to nkra kɔma Yudafoɔ, ka deɛ wopɛ biara kyerɛ wɔn, na fa ɔhene kawa no sɔ ano. Nanso, kae sɛ, biribiara a wɔatwerɛ wɔ ɔhene din mu de ne kawa asɔ ano no, wɔnnane ani.”
9 ಆಗ ರಾಜಲೇಖಕರು ಕರೆಯಲ್ಪಟ್ಟರು. ಅವರು ಬಂದು ಮೂರನೆಯ ತಿಂಗಳಾದ ಜೇಷ್ಠಮಾಸದ ಇಪ್ಪತ್ತಮೂರನೆಯ ದಿನದಲ್ಲಿ, ಮೊರ್ದೆಕೈಯ ಆಜ್ಞಾನುಸಾರ ಯೆಹೂದ್ಯರಿಗೂ, ಭಾರತ ಮೊದಲುಗೊಂಡು ಕೂಷಿನ ವರೆಗೂ ಇರುವ ನೂರ ಇಪ್ಪತ್ತೇಳು ಸಂಸ್ಥಾನಗಳ ಉಪರಾಜರಿಗೂ, ದೇಶಾಧಿಪತಿಗಳಿಗೂ ಮತ್ತು ಅಧಿಕಾರಿಗಳಿಗೂ ಪತ್ರಗಳನ್ನು ಬರೆದರು. ಆ ಪತ್ರಗಳು ಆಯಾ ಸಂಸ್ಥಾನಗಳ ಬರಹಗಳಲ್ಲಿಯೂ, ಆಯಾ ಜನಾಂಗಗಳ ಭಾಷೆಗಳಲ್ಲಿಯೂ ಇದ್ದವು. ಯೆಹೂದ್ಯರಿಗೆ ಬರೆದ ಪತ್ರಗಳು ಯೆಹೂದ್ಯ ಬರಹದಲ್ಲಿಯೂ, ಭಾಷೆಗಳಲ್ಲಿಯೂ ಲಿಖಿತವಾದವು.
Enti, Siwan bosome (bɛyɛ Ayɛwohomumu) da a ɛtɔ so aduonu enum no, wɔfrɛɛ ɔhene atwerɛfoɔ. Mordekai kaa nsɛm no, na wɔtwerɛɛ mmara kɔmaa Yudafoɔ ne mmapɔmma, amradofoɔ ne mpasua no mu adwumayɛfoɔ a wɔwɔ amantam ɔha aduonu nson no mu, ɛfiri India kɔsi Etiopia. Wɔtwerɛɛ mmara no wɔ kasa hodoɔ a nnipa no ka no ahemman no mu, a Yudafoɔ no ka ho.
10 ೧೦ ಮೊರ್ದೆಕೈಯು ಅರಸನ ಹೆಸರಿನಲ್ಲಿ ಬರೆಯಲ್ಪಟ್ಟ ಆ ಪತ್ರಗಳಿಗೆ ರಾಜಮುದ್ರೆಯನ್ನು ಹಾಕಿ, ಅರಮನೆಯ ಅಶ್ವಾಲಯಗಳಲ್ಲಿ ಹುಟ್ಟಿ ಬೆಳೆದಂಥ, ಅರಸನ ಸೇವೆಗಾಗಿ ಉಪಯೋಗಿಸಲ್ಪಡುತ್ತಿದ್ದ ವೇಗವಾಗಿ ಓಡುವಂಥ ಕುದುರೆಗಳ ಮುಖಾಂತರ ಕಳುಹಿಸಿದನು.
Mordekai de Ɔhene Ahasweros din na ɛtwerɛeɛ, na ɔde ɔhene no kawa sɔɔ ano. Ɔde nkrataa no somaa abɔfoɔ ahoɔherɛfoɔ a wɔtenatenaa apɔnkɔ a wɔayɛn wɔn ama ɔhene no som no so.
11 ೧೧ ಆ ಪತ್ರಗಳಲ್ಲಿ ಅರಸನು, “ಅಹಷ್ವೇರೋಷ್ ರಾಜನ ಎಲ್ಲಾ ಸಂಸ್ಥಾನಗಳ ಆಯಾ ಪಟ್ಟಣಗಳಲ್ಲಿರುವ ಯೆಹೂದ್ಯರು ಒಂದೇ ದಿನದಲ್ಲಿ ಅಂದರೆ, ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನದಲ್ಲಿ ಒಟ್ಟಾಗಿ ಸೇರಿಕೊಳ್ಳಬೇಕು.
Ɔhene no mmara no maa Yudafoɔ a wɔwɔ kuro biara so tumi ma wɔkaa wɔn ho bɔɔ mu, bɔɔ wɔn nkwa ho ban. Wɔmaa wɔn ho kwan sɛ, ɔman anaa ɔmantam biara a ɛbɛtu wɔn mma anaa wɔn yerenom so sa no, wɔwɔ ho kwan sɛ, wɔkunkum wɔn, tɔre wɔn ase, fo wɔn atamfoɔ no agyapadeɛ.
12 ೧೨ ತಮ್ಮ ಪ್ರಾಣರಕ್ಷಣೆಗಾಗಿ ಎದ್ದು, ತಮ್ಮ ವಿರುದ್ಧವಾಗಿ ಆಯುಧಗಳೊಡನೆ ನೆರೆದು ಬರುವ ಎಲ್ಲಾ ಜನಾಂಗಗಳವರನ್ನೂ, ಸಂಸ್ಥಾನಗಳವರನ್ನೂ, ಅವರ ಹೆಂಡತಿಯರು ಮಕ್ಕಳು ಸಹಿತವಾಗಿ ಕೊಂದು, ಸಂಹರಿಸಿ, ನಿರ್ನಾಮಗೊಳಿಸಬೇಕು.
Ɛda pɔtee a wɔtu sii hɔ maa adeyɛ yi wɔ ɔhene Ahasweros mantam mu no yɛ Adar bosome (bɛyɛ Ɔbɛnem) da a ɛtɔ so nson wɔ afe a na wɔrebɛsim no mu.
13 ೧೩ ಅವರ ಸೊತ್ತನ್ನು ಸೂರೆಮಾಡಬೇಕು, ಈ ಪತ್ರದ ಒಂದೊಂದು ಪ್ರತಿಯನ್ನು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಬೇಕು, ಆ ದಿನದಲ್ಲಿ ಯೆಹೂದ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವುದಕ್ಕೆ ಸಿದ್ಧರಾಗಿರಬೇಕು” ಎಂದು ಅಪ್ಪಣೆಮಾಡಿದ್ದನು.
Ɛsɛ sɛ wɔfa mmara yi sɛso wɔ ɔmantam biara mu sɛ mmara, na wɔda no adi kyerɛ ɔmanfoɔ nyinaa. Sɛ ɛba saa a, saa da no, Yudafoɔ no bɛsiesie wɔn ho, atɔ wɔn atamfoɔ so were.
14 ೧೪ ಈ ರಾಜಾಜ್ಞೆಯು ಶೂಷನ್ ಕೋಟೆಯಲ್ಲಿ ಪ್ರಕಟವಾದಾಗಲೇ ಅಂಚೆಯವರು ಅರಮನೆಯ ಸವಾರಿಕುದುರೆಗಳನ್ನು ಹತ್ತಿಕೊಂಡು ಅರಸನ ಅಪ್ಪಣೆಯಿಂದ ಪ್ರೇರಿತರಾಗಿ ಅತಿ ಶೀಘ್ರವಾಗಿ ಹೊರಟರು.
Ɔhene asɛm no enti, abɔfoɔ no de apɔnkɔ a wɔayɛn wɔn ama ɔhene no tuu mmirikatɛntɛ. Wɔhyɛɛ mmara korɔ no ara bi wɔ Susa aban no mu.
15 ೧೫ ಮೊರ್ದೆಕೈಯಾದರೋ ನೀಲಿ ಮತ್ತು ಶುಭ್ರವರ್ಣಗಳುಳ್ಳ ರಾಜವಸ್ತ್ರಗಳನ್ನು ಧರಿಸಿಕೊಂಡು, ಬಂಗಾರದ ದೊಡ್ಡ ಕಿರೀಟವನ್ನು ಇಟ್ಟುಕೊಂಡು, ರಕ್ತವರ್ಣದ ನಾರಿನ ನಿಲುವಂಗಿಯನ್ನು ಹೊದ್ದುಕೊಂಡು ರಾಜಸನ್ನಿಧಿಯಿಂದ ಹೊರಟನು. ಶೂಷನ್ ಪಟ್ಟಣದಲ್ಲಿ ಸಂತೋಷದ ಆರ್ಭಟವು ಕೇಳಿಸಿತು.
Na Mordekai hyɛɛ ahentadeɛ tuntum ne fufuo ne sikakɔkɔɔ ahenkyɛ, na ɔhyɛɛ batakari afasebire ngugusoɔ fɛfɛ bi guu so. Na ɔmanfoɔ a wɔwɔ Susa no hyɛɛ mmara foforɔ no ho fa.
16 ೧೬ ಅಲ್ಲಿನ ಯೆಹೂದ್ಯರಿಗೆ ಸಂತೋಷ, ಗೌರವ, ಹರ್ಷಪ್ರಭಾವ ಮತ್ತು ತೇಜಸ್ಸುಳ್ಳವರಾದರು.
Anigyeɛ ne ahosɛpɛ hyɛɛ Yudafoɔ no ma ma, na wɔhyɛɛ wɔn animuonyam wɔ baabiara.
17 ೧೭ ರಾಜನಿರ್ಣಯ ಶಾಸನಗಳು ಪ್ರಕಟಿಸಲ್ಪಟ್ಟ ಪ್ರತಿಯೊಂದು ಸಂಸ್ಥಾನದಲ್ಲಿಯೂ ಪಟ್ಟಣದಲ್ಲಿಯೂ ಇದ್ದ ಯೆಹೂದ್ಯರಿಗೆ ಶುಭದಿನ ಉಂಟಾಯಿತು; ಅವರು ಸಂತೋಷದಿಂದಲೂ, ಉಲ್ಲಾಸದಿಂದಲೂ ಭಕ್ಷ್ಯಭೋಜನಮಾಡಿದರು. ದೇಶದ ಜನರಲ್ಲಿ ಅನೇಕರು ಯೆಹೂದ್ಯರಿಗೆ ಭಯಪಟ್ಟು ಅವರ ಮತಕ್ಕೆ ಸೇರಿದರು.
Kuropɔn biara ne ɔmantam biara a ɔhene no mmara no duruiɛ no, Yudafoɔ no sɛpɛɛ wɔn ho, hyɛɛ fa kɛseɛ na wɔdii ho afoofi. Na asase no so nnipa bebree yɛɛ wɔn ho Yudafoɔ, ɛfiri sɛ, na wɔsuro deɛ Yudafoɔ no bɛyɛ wɔn.

< ಎಸ್ತೇರಳು 8 >