< ಪ್ರಸಂಗಿ 4 >

1 ಆ ಮೇಲೆ ಪುನಃ ದೃಷ್ಟಿಸಿ ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನೋಡಿದೆನು. ಆಹಾ! ಹಿಂಸೆಗೊಂಡವರ ಕಣ್ಣೀರನ್ನು ನೋಡು. ಅವರನ್ನು ಸಂತೈಸುವವರು ಯಾರೂ ಇಲ್ಲ. ಅವರನ್ನು ಹಿಂಸಿಸುವವರಿಗೆ ಬಹಳ ಬಲ ಇದೆ. ಹಿಂಸೆಗೊಂಡವರನ್ನು ಸಂತೈಸುವವರು ಒಬ್ಬರೂ ಇಲ್ಲ.
Potem zwróciłem się w stronę wszystkich ucisków, jakie zdarzają się pod słońcem, i przyjrzałem się im. I oto [widziałem] łzy uciśnionych, a nie mieli pocieszyciela. Siła była w rękach ciemięzców, a tamci nie mieli pocieszyciela.
2 ಇದನ್ನು ನೋಡಿ ಇನ್ನೂ ಜೀವದಿಂದಿದ್ದು ಬದುಕುವವರಿಗಿಂತ ಸತ್ತವರೇ ಮೇಲೆಂದು ಹೊಗಳಿದೆನು.
Dlatego chwaliłem umarłych, którzy już odeszli, bardziej niż żywych, którzy jeszcze żyją.
3 ಹೌದು, ಈ ಇಬ್ಬರಿಗಿಂತಲೂ ಇನ್ನೂ ಹುಟ್ಟದೇ, ಲೋಕದಲ್ಲಿ ನಡೆಯುತ್ತಿರುವ ಅಧರ್ಮವನ್ನು ನೋಡದೆ ಇರುವುದೇ ಒಳ್ಳೆಯದೆಂದು ತಿಳಿದುಕೊಂಡೆನು.
Nawet lepszy od nich obu jest ten, którego jeszcze nie było i który nie widział zła, jakie się dzieje pod słońcem.
4 ಆಗ ಸಮಸ್ತ ಪ್ರಯಾಸವನ್ನು, ಕೈಗೂಡುವ ಸಕಲ ಕಾರ್ಯವನ್ನು ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದು ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೇ.
Zobaczyłem też, że wszelka praca i każde dobre dzieło wywołują tylko zazdrość jednego wobec drugiego. Także i to jest marnością i utrapieniem ducha.
5 ಮೂಢನು ತನ್ನ ಕೈಗಳನ್ನು ಮುಚ್ಚಿಕೊಂಡು ಯಾವ ಕೆಲಸವನ್ನು ಮಾಡದೆ, ತನ್ನನ್ನು ತಾನು ನಾಶಪಡಿಸಿಕೊಳ್ಳುವನು.
Głupi składa swoje ręce i zjada własne ciało.
6 ಗಾಳಿಯನ್ನು ಹಿಂದಟ್ಟುವ ಹಾಗೆಯೇ ಪ್ರಯಾಸದಿಂದ ತುಂಬಿದ ಎರಡು ಕೈಗಳಿಂದ ಮಾಡಿದ ಕೆಲಸಕ್ಕಿಂತ ನೆಮ್ಮದಿಯಾಗಿ ಒಂದು ಕೈಯಿಂದ ಮಾಡಿದ ಕೆಲಸವೇ ಲೇಸು.
Lepsza jest pełna garść z pokojem niż obie pełne garści z trudem i utrapieniem ducha.
7 ಆಗ ನಾನು ಲೋಕದಲ್ಲಿ ಮತ್ತೊಂದು ವ್ಯರ್ಥ ವಿಷಯವನ್ನು ಕಂಡೆನು.
Znowu obróciłem się i zobaczyłem [kolejną] marność pod słońcem.
8 ಒಬ್ಬಂಟಿಗನಾದ ಒಬ್ಬ ಮನುಷ್ಯನಿದ್ದಾನೆ. ಅವನಿಗೆ ಅಣ್ಣತಮ್ಮಂದಿರು ಇಲ್ಲ, ಮಕ್ಕಳೂ ಇಲ್ಲ. ಆದರೂ ಅವನ ಪ್ರಯಾಸಕ್ಕೆ ಅಂತ್ಯವಿಲ್ಲ, ಐಶ್ವರ್ಯದಿಂದ ಅವನ ಕಣ್ಣಿಗೆ ತೃಪ್ತಿಯಿಲ್ಲ. ಅವನು, “ನಾನು ಸುಖವನ್ನು ತೊರೆದು ಯಾರಿಗೋಸ್ಕರ ಪ್ರಯಾಸಪಡುತ್ತಾ ಇದ್ದೇನೆ?” ಅಂದುಕೊಳ್ಳುವನು. ಇದೂ ಸಹ ವ್ಯರ್ಥವೇ. ಕೇವಲ ಪ್ರಯಾಸದ ಕೆಲಸವೇ ಸರಿ.
Jest to człowiek samotny, bez towarzysza, nie ma ani syna, ani brata i nie ma końca wszelki jego trud, a jego oczy nie mogą nasycić się bogactwem. [Nie myśli]: Dla kogo ja pracuję i odmawiam dobra swojej duszy? Także i to jest marnością i ciężką udręką.
9 ಒಬ್ಬನಿಗಿಂತ ಇಬ್ಬರು ಕೆಲಸ ಮಾಡುವುದು ಒಳ್ಳೆಯದು. ಅವರ ಪ್ರಯಾಸಕ್ಕೆ ಒಳ್ಳೆಯ ಲಾಭವನ್ನು ಸಂಪಾದಿಸಬಹುದು.
Lepiej jest dwom niż jednemu, gdyż mają dobry pożytek ze swojej pracy.
10 ೧೦ ಒಬ್ಬನು ಬಿದ್ದರೆ, ಇನ್ನೊಬ್ಬನು ತನ್ನ ಸ್ನೇಹಿತನನ್ನು ಮೇಲಕ್ಕೆ ಎಬ್ಬಿಸುವನು. ಒಬ್ಬನು ಒಬ್ಬಂಟ್ಟಿಗನಾಗಿ ಬಿದ್ದರೆ, ಅವನನ್ನು ಮೇಲಕ್ಕೆ ಎಬ್ಬಿಸುವವನು ಯಾರೂ ಇಲ್ಲ, ಅವನ ಗತಿ ದುರ್ಗತಿಯೇ.
Jeśli bowiem jeden upadnie, drugi podniesie swego towarzysza. Lecz biada samotnemu, gdy upadnie, bo nie ma drugiego, który by go podniósł.
11 ೧೧ ಮತ್ತು ಇಬ್ಬರು ಜೊತೆಯಲ್ಲಿ ಮಲಗಿಕೊಂಡರೆ ಅವರಿಗೆ ಬೆಚ್ಚಗಾಗುತ್ತದೆ, ಆದರೆ ಒಬ್ಬನು ಹೇಗೆ ಬೆಚ್ಚಗಿರುತ್ತಾನೆ?
Także jeśli dwoje [ludzi] śpi [razem], grzeją się wzajemnie. Ale jeden jakże się ogrzeje?
12 ೧೨ ಒಬ್ಬನನ್ನು ಮತ್ತೊಬ್ಬನು ಜಯಿಸಬಹುದು, ಆದರೆ ಗೆದ್ದವನನ್ನು ಇಬ್ಬರು ಎದುರಿಸಿ ನಿಲ್ಲಿಸಬಹುದು. ಮೂರು ಹುರಿಯ ಹಗ್ಗ ಬೇಗನೆ ಕಿತ್ತುಹೋಗುವುದಿಲ್ಲ.
A jeśli [kto] przemaga jednego, to dwaj stawią mu czoła, a potrójny sznur nie rozerwie się tak łatwo.
13 ೧೩ ಎಚ್ಚರಿಕೆಯ ಮಾತಿಗೆ ಕಿವಿಗೊಡದ ಮುದಕನೂ, ಮೂಢನೂ ಆದ ಅರಸನಿಗಿಂತ ಜ್ಞಾನಿಯಾದ ಬಡ ಯುವಕನೇ ಮೇಲು.
Lepszy jest chłopiec ubogi i mądry niż król stary i głupi, który nie potrafi już przyjmować napomnienia.
14 ೧೪ ಇಂಥ ಯುವಕನೊಬ್ಬನು ರಾಜನಾಗಲು ಸೆರೆಮನೆಯಿಂದ ಬಂದಿರಬಹುದು ಅಥವಾ ತನ್ನ ರಾಜ್ಯದಲ್ಲಿ ಬಡ ಪ್ರಜೆಯಾಗಿ ಹುಟ್ಟಿರಬಹುದು.
Bo [tamten] wychodzi z więzienia, aby królować, a ten urodzony w swoim królestwie zubożeje.
15 ೧೫ ಸೂರ್ಯನ ಕೆಳಗೆ ಜೀವಿಸಿ ಮತ್ತು ನಡೆದಾಡಿದವರೆಲ್ಲರೂ ಅರಸನ ಉತ್ತರಾಧಿಕಾರಿಯಾದ ಯುವಕನ ಪಕ್ಷವಹಿಸುವುದನ್ನು ನಾನು ನೋಡಿದೆನು.
Widziałem, jak wszyscy żyjący, którzy chodzą pod słońcem, przestawali z chłopcem, potomkiem, który miał wstąpić na miejsce tamtego.
16 ೧೬ ಇವನ ಅಧಿಪತ್ಯಕ್ಕೆ ಒಳಪಟ್ಟ ಎಲ್ಲಾ ಜನರ ಸಂಖ್ಯೆಯು ಅಪಾರ. ಅವನ ಆಳ್ವಿಕೆಯ ನಂತರ ಇವನಲ್ಲಿ ಆನಂದಿಸುವುದಿಲ್ಲ. ಇದೂ ಸಹ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವಾಗಿದೆ.
Niezliczony jest cały lud, jaki żył przed nimi. Lecz następni nie będą się z niego cieszyć. A tak i to jest marność i utrapienie ducha.

< ಪ್ರಸಂಗಿ 4 >