< ದಾನಿಯೇಲನು 2 >

1 ನೆಬೂಕದ್ನೆಚ್ಚರನು ತನ್ನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಕನಸು ಕಂಡು ತತ್ತರಗೊಂಡನು, ಅವನಿಗೆ ನಿದ್ರೆ ತಪ್ಪಿತು.
Katika mwaka wa pili wa utawala wa Nebukadneza, alikuwa na ndoto. Akili yake ilisumbuka, na hakuweza kulala.
2 ಆಗ ರಾಜನು ತನ್ನ ಕನಸುಗಳ ಅಭಿಪ್ರಾಯವನ್ನು ತಿಳಿದುಕೊಳ್ಳಲು ಜೋಯಿಸರನ್ನೂ, ಮಂತ್ರವಾದಿಗಳನ್ನೂ, ಮಾಟಗಾರರನ್ನೂ, ಪಂಡಿತರನ್ನೂ ಕರೆಯಿಸಲು ಅವರು ಸನ್ನಿಧಿಗೆ ಬಂದು ರಾಜನ ಮುಂದೆ ನಿಂತುಕೊಂಡರು.
Ndipo mfalme alipowaita waganga na wale wenye kuongea na wafu. Lakini pia aliwaita wachawi na watu wenye hekima. Aliwataka wamwambie juu ya ndoto zake. Basi walikuja na kusimama mbele za mfalme.
3 ರಾಜನು ಅವರಿಗೆ, “ನಾನು ಕನಸುಕಂಡೆನು, ಅದರ ಅರ್ಥವೇನೋ ಎಂದು ನನ್ನ ಮನಸ್ಸು ತತ್ತರಿಸುತ್ತದೆ” ಎಂಬುದಾಗಿ ಹೇಳಿದನು.
Mfalme akawambia, “Nilikuwa na ndoto, na akili yangu ina mashaka nataka kujua ndoto hiyo nini maana yake.”
4 ಆಗ ಆ ಪಂಡಿತರು ಅರಮಾಯ ಭಾಷೆಯಲ್ಲಿ ರಾಜನಿಗೆ, “ಅರಸನೇ, ಚಿರಂಜೀವಿಯಾಗಿರು; ಆ ಕನಸನ್ನು ನಿನ್ನ ದಾಸರಿಗೆ ಹೇಳು; ಅದರ ತಾತ್ಪರ್ಯವನ್ನು ತಿಳಿಸುವೆವು” ಎಂದು ಅರಿಕೆಮಾಡಿದರು.
Kisha watu wenye hekima wakamwambia mfalme katika Kiaramaiki, “Mfalme, aishi milele! Twambie sisi ndoto, watumishi wako, nasi tutaifunua maana yake.”
5 ಆಗ ರಾಜನು ಪಂಡಿತರಿಗೆ ಪ್ರತ್ಯುತ್ತರವಾಗಿ, “ನನ್ನ ಮಾತು ಖಂಡಿತ; ನೀವೇ ಆ ಕನಸನ್ನೂ, ಅದರ ಅರ್ಥವನ್ನೂ ನನಗೆ ತಿಳಿಸದಿದ್ದರೆ ನಿಮ್ಮನ್ನು ತುಂಡುತುಂಡಾಗಿ ಕತ್ತರಿಸುವೆನು, ನಿಮ್ಮ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಿಬಿಡುವೆನು.
Mfalme akawajibu watu wenye hekima, “Jambo hili limeshamalizika. Kama hamtaweza kuiweka wazi ndoto kwangu na kuitafsiri, miili yenu itakatwa vipande vipande na nyumba zenu zitafanywa kuwa vichuguu vya uchafu.
6 ನೀವು ಆ ಕನಸನ್ನೂ, ಅದರ ಅರ್ಥವನ್ನೂ ತಿಳಿಸಿದರೆ ನನ್ನಿಂದ ನಿಮಗೆ ದಾನ ಮತ್ತು ಬಹುಮಾನಗಳೂ, ವಿಶೇಷ ಸನ್ಮಾನಗಳೂ ಲಭಿಸುವವು. ಆದಕಾರಣ ಆ ಕನಸನ್ನೂ, ಅದರ ಅಭಿಪ್ರಾಯವನ್ನೂ ನನಗೆ ತಿಳಿಸಿರಿ” ಎಂದು ಹೇಳಿದನು.
Lakini kama mtaniambia ndoto na maana yake, mtapokea zawadi kutoka kwangu, thawabu, na heshima kubwa. Basi niambie ndoto na maana yake.”
7 ಪಂಡಿತರು ಉತ್ತರವಾಗಿ, “ರಾಜನು ತನ್ನ ದಾಸರಿಗೆ ಕನಸನ್ನು ತಿಳಿಸಲಿ, ನಾವು ಅದರ ತಾತ್ಪರ್ಯವನ್ನು ವಿವರಿಸುವೆವು” ಎಂಬ ಉತ್ತರವನ್ನೇ ಪುನಃ ಕೊಟ್ಟರು.
Wakamjibu tena na kusema, “Mfalme na atuambie, watumishi wake, ndoto nasi tukwambia maana yake.”
8 ಅದಕ್ಕೆ ರಾಜನು, “ನೀವು ಆ ಕನಸನ್ನು ನನಗೆ ತಿಳಿಸದಿದ್ದರೆ ಮರಣದಂಡನೆಯ ನಿಯಮವೇ ನಿಮಗೆ ಗತಿಯಾಗುವುದು ಎಂಬ ನನ್ನ ಮಾತು ಖಂಡಿತವೆಂದು ನೀವು ತಿಳಿದುಕೊಂಡು ಕಾಲಹರಣ ಮಾಡುತ್ತಿದ್ದೀರಿ, ಇದು ನನಗೆ ಚೆನ್ನಾಗಿ ಗೊತ್ತು.
Mfalme akawajibu, “Ninajua kwa hakika mnahitaji muda zaidi kwasababu mmeona maamuzi yangu ni magumu kuhusu jambo hili.
9 ಕಾಲಾಂತರವನ್ನು ನಿರೀಕ್ಷಿಸಿಕೊಂಡೇ ನನ್ನ ಮುಂದೆ ಕೆಟ್ಟ ಸುಳ್ಳುಗಳನ್ನು ಆಡುತ್ತಿರಬೇಕೆಂದು ಒಪ್ಪಂದ ಮಾಡಿಕೊಂಡಿದ್ದೀರಿ; ಅಂತು ಆ ಕನಸನ್ನು ತಿಳಿಸಬೇಕು; ಆದುದರಿಂದ ನೀವು ಅದರ ಅರ್ಥವನ್ನೂ ವಿವರಿಸಬಲ್ಲಿರೆಂದು ತಿಳಿದುಕೊಳ್ಳುವೆನು” ಎಂದು ಹೇಳಿದನು.
Lakini kama hamtaweza kuniambia ndoto, kuna sentensi moja tu kwa ajili yenu. Mmeamua kuandaa uongo na maneno ya kudanganya ambayo mmekubaliana kwa pamoja kuniambia mpaka pale nitakapobadili akili zangu. Basi, niambieni ndoto, na kisha nitajua kuwa mnaweza kuitafsiri kwa ajili yangu.”
10 ೧೦ ಆಗ ಆ ಪಂಡಿತರು ರಾಜನ ಸನ್ನಿಧಿಯ ಮುಂದೆ, “ರಾಜನು ಕೇಳಿದ ಸಂಗತಿಯನ್ನು ತಿಳಿಸಬಲ್ಲವನು ಲೋಕದಲ್ಲಿ ಯಾರೂ ಇಲ್ಲ; ಎಷ್ಟೇ ಬಲಿಷ್ಠನು, ಎಷ್ಟೇ ಪ್ರಬಲನು ಆದ ಯಾವ ಅರಸನೂ ಜೋಯಿಸರನ್ನಾಗಲಿ, ಮಾಟಗಾರನನ್ನಾಗಲಿ, ಪಂಡಿತನನ್ನಾಗಲಿ, ಇಂಥ ಸಂಗತಿಯನ್ನು ಎಂದೂ ಕೇಳಿದ್ದಿಲ್ಲ.
Watu wenye hekima wakamjibu mfalme, “Hakuna mtu katika dunia anayeweza kutimiza matakwa ya mfalme. Hakuna mfalme yoyote mkuu na mwenye nguvu ambaye alishataka jambo kama hilo kutoka kwa wachawi, wala wenye kuongea na wafu, wala mwenye hekima.
11 ೧೧ ರಾಜನು ಕೇಳುವ ಸಂಗತಿಯು ಅತಿ ಕಷ್ಟವಾದದ್ದು. ನರಜನ್ಮದವರ ಮಧ್ಯೆ ವಾಸಿಸುವ ದೇವರುಗಳೇ ಹೊರತು ಇನ್ಯಾರೂ ರಾಜನ ಸಮ್ಮುಖದಲ್ಲಿ ಅದನ್ನು ತಿಳಿಸಲಾರರು” ಎಂದು ಉತ್ತರಕೊಟ್ಟರು.
Kile anachokitaka mfalme ni kigumu, na hakuna yeyote awezaye kumwambia mfalme isipokuwa miungu, ambayo haishi miongoni mwa watu.”
12 ೧೨ ಇದನ್ನು ಕೇಳಿ, ರಾಜನು ಉಗ್ರರೋಷವುಳ್ಳವನಾಗಿ ಬಾಬೆಲಿನ ಸಕಲ ವಿದ್ವಾಂಸರನ್ನು ಕೊಲ್ಲಬೇಕೆಂದು ಆಜ್ಞಾಪಿಸಿದನು.
Jambo hili lilimfanya mfalme akasirike na kughadhabika sana, na alitoa amri kuwaangamiza wale wote waliojulikana kuwa ni wenye hekima zao katika Babeli.
13 ೧೩ ಕೂಡಲೆ ಆ ಆಜ್ಞೆಯು ಪ್ರಕಟವಾಯಿತು. ವಿದ್ವಾಂಸರು ಪ್ರಾಣಾಪಾಯಕ್ಕೆ ಗುರಿಯಾದರು; ದಾನಿಯೇಲನನ್ನೂ, ಅವನ ಸ್ನೇಹಿತರನ್ನೂ ಕೊಲ್ಲುವುದಕ್ಕೆ ಹುಡುಕಿದರು.
Hivyo, amri ilitoka kwamba wale wote waliojulikana kwa hekima yao ni lazima wauawe. Na kwa sababu ya amri hii, walimtafuta Daniel na rafiki zake ili kwamba wauawe.
14 ೧೪ ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬೆಲಿನ ವಿದ್ವಾಂಸರ ಸಂಹಾರಕ್ಕೆ ಹೊರಟಾಗ, ದಾನಿಯೇಲನು ಬುದ್ಧಿವಿವೇಕಗಳಿಂದ ಅವನ ಸಂಗಡ ಮಾತನಾಡಿ,
Ndipo Daniel alipomjibu kwa busara na umakini, Arioki, kamanda wa walinzi wa mfalme, ambaye alikuwa amekuja kuwaua wale wote waliojulikana kuwa na hekima katika Babeli.
15 ೧೫ “ಈ ರಾಜಾಜ್ಞೆಯು ಏಕೆ ಇಷ್ಟು ಉಗ್ರವಾಗಿದೆ?” ಎಂದು ಕೇಳಲು ಅರ್ಯೋಕನು ನಡೆದ ಸಂಗತಿಯನ್ನು ದಾನಿಯೇಲನಿಗೆ ತಿಳಿಸಿದನು.
Danieli alimwuliza kamanda wa mfalme, “Kwanini amri ya mfalme ni ya haraka hivyo?” Hivyo, Arioki akamwambia Danieli kile kilichotokea.
16 ೧೬ ಆ ಮೇಲೆ ದಾನಿಯೇಲನು ಅರಮನೆಗೆ ಬಂದು, “ನನಗೆ ಸಮಯವನ್ನು ಕೊಟ್ಟರೆ ನಾನು ಆ ಕನಸಿನ ಅರ್ಥವನ್ನು ರಾಜನಿಗೆ ವಿವರಿಸುವೆನು” ಎಂದು ಅರಿಕೆ ಮಾಡಿದನು.
Ndipo Danieli aliingia ndani na akaomba ahadi ya muda wa kuonana na mfalme ili kwamba aweze kuwasilisha tafsiri kwa mfalme.
17 ೧೭ ಬಳಿಕ ದಾನಿಯೇಲನು ತನ್ನ ಮನೆಗೆ ಹೋಗಿ ಹನನ್ಯ, ಮೀಶಾಯೇಲ, ಅಜರ್ಯ ಎಂಬ ತನ್ನ ಸ್ನೇಹಿತರಿಗೆ,
Kisha Danieli aliingia ndani ya nyumba na aliwaelezea Hanania, Mishaeli, na Azaria, kile kilichotokea.
18 ೧೮ “ದಾನಿಯೇಲನು ಆ ಸಮಾಚಾರವನ್ನು ತಿಳಿಸಿ, ನಾವು ಬಾಬೆಲಿನ ಇತರ ವಿದ್ವಾಂಸರೊಂದಿಗೆ ನಾಶವಾಗದಂತೆ ಪರಲೋಕ ದೇವರು ಈ ರಹಸ್ಯದ ವಿಷಯವಾಗಿ ಕೃಪೆತೋರಿಸಲು ಆತನನ್ನು ಬೇಡಿಕೊಳ್ಳೋಣ” ಎಂದನು.
Aliwasihi kutafuta rehema kutoka kwa Mungu wa mbinguni kuhusiana na siri hii ili kwamba yeye na wao wasije wakauawa pamoja na watu wengine waliosalia waliojulikana kuwa na hekima katika Babeli.
19 ೧೯ ಆಗ ಆ ರಹಸ್ಯವು ರಾತ್ರಿಯ ಸ್ವಪ್ನದಲ್ಲಿ ದಾನಿಯೇಲನಿಗೆ ಪ್ರಕಟವಾಯಿತು. ಕೂಡಲೆ ದಾನಿಯೇಲನು ಪರಲೋಕ ದೇವರನ್ನು ಹೀಗೆ ಸ್ತುತಿಸಿದನು,
Usiku ule siri ilifunuliwa kwa Danieli katika maono. Kisha Danieli akamtukuza Mungu wa mbinguni
20 ೨೦ “ದೇವರ ನಾಮಕ್ಕೆ ಯುಗಯುಗಾಂತರಗಳಲ್ಲಿಯೂ ಸ್ತುತಿಸ್ತೋತ್ರ ಉಂಟಾಗಲಿ! ಜ್ಞಾನ ತ್ರಾಣಗಳು ಆತನವುಗಳೇ.
na kusema, “Litukuzwa jina la Mungu milele na milele; kwa kuwa hekima na nguvu ni zake.
21 ೨೧ ಕಾಲ ಸಮಯಗಳನ್ನು ಮಾರ್ಪಡಿಸುತ್ತಾನೆ, ರಾಜರನ್ನು ಕಡೆಗಣಿಸುತ್ತಾನೆ, ನೆಲೆಸುವಂತೆ ಮಾಡುತ್ತಾನೆ; ಜ್ಞಾನಿಗಳ ಜ್ಞಾನವು, ವಿವೇಕಿಗಳ ವಿವೇಕವು ಆತನ ವರವೇ.
Anabadili wakati na majira; anaondoa wafalme na kuweka wafalme katika viti vyao vya enzi. Anawapa hekima wenye hekima na ufahamu kwa wenye weledi.
22 ೨೨ ಆತನು ಅಗಾಧ ವಿಷಯಗಳನ್ನೂ ಗೂಢಾರ್ಥಗಳನ್ನೂ ಬಯಲಿಗೆ ತರುತ್ತಾನೆ; ಕಗ್ಗತ್ತಲೆಯಲ್ಲಿ ಅಡಗಿರುವುದೂ ಆತನಿಗೆ ಗೋಚರವಾಗುವುದು; ತೇಜಸ್ಸು ಆತನಲ್ಲೇ ನೆಲೆಗೊಂಡಿದೆ.
Hufunua vitu vya chini na vilifichika kwa sababu anajua kile kilicho gizani, naye anaishi pamoja na mwanga.
23 ೨೩ ನನ್ನ ಪೂರ್ವಿಕರ ದೇವರೇ, ನಿನ್ನನ್ನು ಸ್ತುತಿಸುತ್ತೇನೆ, ಕೊಂಡಾಡುತ್ತೇನೆ, ನೀನು ನನಗೆ ಜ್ಞಾನತ್ರಾಣಗಳನ್ನು ದಯಪಾಲಿಸಿ ನಾವು ಬೇಡಿದ್ದನ್ನು ನನಗೆ ತೋರ್ಪಡಿಸಿದ್ದಿಯಲ್ಲಾ; ಹೌದು, ರಾಜನ ರಹಸ್ಯವನ್ನು ನಮಗೆ ಪ್ರಕಟಪಡಿಸಿರುವೆ” ಎಂದನು.
Mungu wa baba zetu, ninakushukuru na kukutukuza wewe kwa ajili ya hekima na nguvu uliyonipa. Sasa umeyafanya yawe wazi kwetu yale tuliyokuomba; umetujulisha mambo yamhusuyo mfalme.”
24 ೨೪ ನಂತರ ದಾನಿಯೇಲನು ಬಾಬೆಲಿನ ವಿದ್ವಾಂಸರನ್ನು ಕೊಲ್ಲುವುದಕ್ಕೆ ರಾಜನು ನೇಮಿಸಿದ ಅರ್ಯೋಕನ ಬಳಿಗೆ ಹೋಗಿ ಅವನಿಗೆ, “ಬಾಬೆಲಿನ ವಿದ್ವಾಂಸರನ್ನು ಕೊಲ್ಲಬೇಡ; ನನ್ನನ್ನು ರಾಜನ ಸನ್ನಿಧಿಗೆ ಬಿಡು; ನಾನು ಕನಸಿನ ಅಭಿಪ್ರಾಯವನ್ನು ರಾಜನಿಗೆ ತಿಳಿಸುವೆನು” ಎಂದು ಹೇಳಿದನು.
Ndipo Danieli alienda kumwona Arioki ( yule ambaye mfalme alimchagua kuua kila mtu aliyekuwa na hekima katika Babeli). Alimwendea na kumwambia, “Usiwauwe watu wenye hekima katika Babeli. Nipeleke kwa mfalme na nitamwonesha mfalme tafsiri ya ndoto yake.”
25 ೨೫ ಕೂಡಲೆ ಅರ್ಯೋಕನು ದಾನಿಯೇಲನನ್ನು ರಾಜನ ಬಳಿಗೆ ಶೀಘ್ರವಾಗಿ ಕರೆದುಕೊಂಡು ಹೋಗಿ, “ರಾಜನೇ, ಕನಸಿನ ಅಭಿಪ್ರಾಯವನ್ನು ನಿನಗೆ ತಿಳಿಸಬಲ್ಲವನೊಬ್ಬನು ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ನನಗೆ ಸಿಕ್ಕಿದ್ದಾನೆ” ಎಂದು ಅರಿಕೆಮಾಡಿದನು.
Kisha Arioki kwa haraka alimleta Danieli mbele za mfalme na kusema, “Nimempata miongoni wa watu wa mateka wa Yuda mtu ambaye atafunua maana ya ndoto ya mfalme.”
26 ೨೬ ರಾಜನು ಬೇಲ್ತೆಶಚ್ಚರನೆಂಬ ಅಡ್ಡಹೆಸರಿನ ದಾನಿಯೇಲನನ್ನು, “ನಾನು ಕಂಡ ಕನಸನ್ನೂ, ಅದರ ಅರ್ಥವನ್ನೂ ನನಗೆ ತಿಳಿಸಬಲ್ಲೆಯಾ?” ಎಂದು ಕೇಳಿದನು.
Mfalme akamwambia Danieli (ambaye alikuwa akiitwa Beliteshaza), “Je unaweza kunimbia ndoto niliyoiona na maana yake?”
27 ೨೭ ಅದಕ್ಕೆ ದಾನಿಯೇಲನು ರಾಜನನ್ನು ಕುರಿತು, “ರಾಜನು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ, ಮಾಟಗಾರರಾಗಲಿ, ಜೋಯಿಸರಾಗಲಿ, ಶಕುನದವರಾಗಲಿ ಯಾರೂ ರಾಜನಿಗೆ ತಿಳಿಸಲಾರರು.
Danieli alimjibu mfalme na kusema, “Siri ambayo mfalme ameiomba haiwezi kufunuliwa na watu wenye hekima, wala wale wenye kuongea na wafu, wala wachawi, na wala wataalamu wa nyota.
28 ೨೮ ಆದರೆ ರಹಸ್ಯಗಳನ್ನು ಪ್ರಕಟಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಆತನು ಪರಲೋಕದಲ್ಲಿದ್ದಾನೆ. ಮುಂದೆ ನಡೆಯತಕ್ಕದ್ದನ್ನು ಆತನೇ ರಾಜನಾದ ನೆಬೂಕದ್ನೆಚ್ಚರನಿಗೆ ತಿಳಿಯಪಡಿಸಿದ್ದಾನೆ. ನಿನ್ನ ಕನಸು, ಹಾಸಿಗೆಯ ಮೇಲೆ ನಿನ್ನ ಮನಸ್ಸಿನಲ್ಲಿ ಬಿದ್ದ ಸ್ವಪ್ನಗಳು ಇವೇ.
Isipokuwa kuna Mungu ambaye anaishi mbinguni, ambaye hufunua siri, na amekwisha kukujulisha wewe, mfalme Nebukadneza, kile kitakachotokea katika siku zijazo. Hizi ndizo Ndoto na maono ya akili zako uliyoyaona wakati ulipokuwa umelala kitandani mwako.
29 ೨೯ “ರಾಜನೇ, ನೀನು ಹಾಸಿಗೆಯ ಮೇಲೆ ಮಲಗಿರುವಾಗ ಮುಂದೆ ಏನಾಗುವುದೋ? ಎಂಬ ಯೋಚನೆಯು ನಿನ್ನಲ್ಲಿ ಹುಟ್ಟಿತಲ್ಲಾ; ರಹಸ್ಯಗಳನ್ನು ವ್ಯಕ್ತಗೊಳಿಸುವಾತನು ಮುಂದೆ ಸಂಭವಿಸುವುದನ್ನು ನಿನಗೆ ಗೋಚರಮಾಡಿದ್ದಾನೆ.
Na kwako Wewe, mfalme, mawazo yako kitandani mwako yalikuwa ni juu ya mambo yajayo, na yule afichuaye siri ameifanya ijulikane kwako kuhusu kile kilicho karibu kutokea.
30 ೩೦ ನಾನೇ ಎಲ್ಲಾ ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತನಲ್ಲ, ಕನಸಿನ ಅಭಿಪ್ರಾಯವು ರಾಜನಿಗೆ ಗೋಚರವಾಗಿ ನಿನ್ನ ಮನಸ್ಸಿನ ಯೋಚನೆಯ ವಿಷಯವು ನಿನಗೆ ತಿಳಿದು ಬರಲಿ ಎಂದು ಈ ರಹಸ್ಯವು ನನಗೂ ಪ್ರಕಟವಾಗಿದೆ.
Na kuhusu mimi, siri hii haikufunuliwa kwangu kwa sababu ya hekima yoyote niliyo nayo zaidi ya mtu yoyote anayeishi. Siri hii imefunliwa kwangu ili kwamba wewe, mfalme, uweze kufahamu maana, na ili kwamba ujuwe mawazo yaliyo ndani mwako.
31 ೩೧ “ರಾಜನೇ, ನೀನು ಕಂಡದ್ದು ಆಹಾ, ಅದ್ಭುತಪ್ರತಿಮೆ; ಥಳಥಳನೆ ಹೊಳೆಯುವ ಆ ದೊಡ್ಡ ಪ್ರತಿಮೆಯು ನಿನ್ನೆದುರಿಗೆ ನಿಂತಿತ್ತು; ಭಯಂಕರವಾಗಿ ಕಾಣಿಸಿತು.
Mfalme, uliangalia juu na ukaona sanamu kubwa. Sanamu hii ambayo ilikuwa yenye nguvu na yenye kung'aa, ilisimama mbele yako. Mng'ao wake ulikuwa unatisha.
32 ೩೨ ಆ ಪ್ರತಿಮೆಯ ತಲೆಯು ಅಪರಂಜಿ, ಎದೆತೋಳುಗಳು ಬೆಳ್ಳಿ, ಹೊಟ್ಟೆಸೊಂಟಗಳು ತಾಮ್ರ,
Kichwa cha sanamu kilikuwa kimetengenezwa kwa dhahabu safi. Matiti yake na mikono ilikuwa ya fedha. Sehemu ya katikati na mapaja yake yalikuwa yametengenezwa kwa shaba,
33 ೩೩ ಕಾಲುಗಳು ಕಬ್ಬಿಣ, ಪಾದಗಳು ಕಬ್ಬಿಣ ಮತ್ತು ಮಣ್ಣು.
na miguu yake ilikuwa imetengenezwa kwa chuma. Miguu yake ilikuwa ilitengenezwa kwa sehemu chuma na sehemu kwa udongo.
34 ೩೪ “ನೀನು ನೋಡುತ್ತಿರಲಾಗಿ ಬೆಟ್ಟದೊಳಗಿಂದ ಒಂದು ಗುಂಡು ಬಂಡೆಯು ಕೈಯಿಲ್ಲದೆ ಒಡೆಯಲ್ಪಟ್ಟು, ಸಿಡಿದು ಬಂದು ಆ ಪ್ರತಿಮೆಯ ಕಬ್ಬಿಣ ಮಣ್ಣಿನ ಪಾದಗಳಿಗೆ ಬಡಿದು, ಚೂರುಚೂರು ಮಾಡಿತು.
Ulitazama juu, na jiwe lilikuwa limechongwa, ingawa si kwa mikono ya wanadamu, na liliipiga sanamu katika miguu yake ya chuma na udongo, na ponda ponda.
35 ೩೫ ಆಗ ಕಬ್ಬಿಣ, ಮಣ್ಣು, ತಾಮ್ರ, ಬೆಳ್ಳಿ ಬಂಗಾರಗಳೆಲ್ಲವೂ ಪುಡಿಪುಡಿಯಾಗಿ ಸುಗ್ಗಿಯ ಕಣಗಳ ಹೊಟ್ಟಿನಂತಾದವು; ಗಾಳಿಯು ತೂರಿಕೊಂಡು ಹೋಗಲು ಅವುಗಳಿಗೆ ನೆಲೆಯೇ ಇಲ್ಲವಾಯಿತು; ಪ್ರತಿಮೆಗೆ ಬಡಿದ ಆ ಬಂಡೆಯು ಮಹಾ ಪರ್ವತವಾಗಿ ಲೋಕದಲ್ಲೆಲ್ಲಾ ತುಂಬಿಕೊಂಡಿತು.
Kisha chuma, udongo, fedha, na dhahabu zilivunjwa katika vipande vipande kwa wakati mmoja na yakawa kama makapi yaliyo katika sakafu za kupuria kipindi cha kiangazi. Upepo huyapeperushia mbali na hakuna alama inayoachwa. Lakini jiwe lililoipiga sanammu likawa mlima mkubwa na kuijaza dunia yote.
36 ೩೬ “ಕನಸು ಇದೇ; ಇದರ ಅರ್ಥವನ್ನೂ ನಿನ್ನಲ್ಲಿ ಅರಿಕೆಮಾಡುತ್ತೇನೆ.
Hii ndiyo ilikuwa ndotoyako. Na sasa tutamwambia mfalme maana yake.
37 ೩೭ ಅರಸನೇ, ನೀನು ರಾಜಾಧಿರಾಜ, ಪರಲೋಕ ದೇವರು ನಿನಗೆ ರಾಜ್ಯಬಲ, ಪರಾಕ್ರಮ, ವೈಭವಗಳನ್ನು ದಯಪಾಲಿಸಿದ್ದಾನೆ.
Wewe, mfalme, ni mfalme wa wafalme kwa wale ambao Mungu wa mbinguni amekupa ufalme, nguvu, uweza na heshima.
38 ೩೮ ನರಜಾತಿಯವರು ವಾಸಿಸುವ ಸಕಲ ಪ್ರಾಂತ್ಯಗಳಲ್ಲಿ ಆಕಾಶಪಕ್ಷಿಗಳನ್ನೂ, ಭೂಜಂತುಗಳನ್ನೂ ನಿನ್ನ ಕೈಗೆ ಒಪ್ಪಿಸಿ ನೀನು ಅವುಗಳನ್ನೆಲ್ಲಾ ಆಳುವಂತೆ ಮಾಡಿದ್ದಾನೆ; ನೀನೇ ಆ ಬಂಗಾರದ ತಲೆ.
Amevitia mkononi mwako sehemu ambazo binadamu huishi. Amekupa wanyama wa mwituni na ndege wa angani katika mkono wako, na amekufanya wewe utawale juu yao wote. Wewe u kichwa cha dhahabu cha sanamu.
39 ೩೯ “ನಿನ್ನ ಕಾಲವಾದ ಮೇಲೆ ನಿನಗಿಂತ ಬಿಳುಪಾದ (ಬೆಳ್ಳಿ) ಮತ್ತೊಂದು ರಾಜ್ಯವು ಉಂಟಾಗುವುದು. ಅನಂತರ ಬೇರೊಂದು ಮೂರನೆಯ ರಾಜ್ಯವು ತಾಮ್ರದ್ದಾಗಿ ತಲೆದೋರಿ ಭೂಮಂಡಲವನ್ನೆಲ್ಲಾ ಆಳುವುದು.
Baada yako, ufalme mwingine utainuka ambao ni mdogo kwako, na hata ufalme wa tatu wa shaba utatawala juu ya dunia yote.
40 ೪೦ “ನಾಲ್ಕನೆಯ ರಾಜ್ಯವು ಕಬ್ಬಿಣದಷ್ಟು ಗಟ್ಟಿ; ಕಬ್ಬಿಣವು ಎಲ್ಲಾ ವಸ್ತುಗಳನ್ನು ಚೂರುಚೂರಾಗಿ ಒಡೆದು ಹಾಕುತ್ತದಷ್ಟೆ; ಸಕಲವನ್ನೂ ಧ್ವಂಸಮಾಡುವ ಕಬ್ಬಿಣದಂತೆಯೇ ಅದು ಚೂರುಚೂರಾಗಿ ಧ್ವಂಸಮಾಡುವುದು.
Kutakuwa na ufalme wa tatu, wenye nguvu kama chuma, kwa kuwa chuma huvunja vipande vipande vitu vingine na kuponda ponda kila kitu. Itaviharibu vitu hivi vyote na kuvisaga.
41 ೪೧ “ಪಾದಗಳಲ್ಲಿ ಮತ್ತು ಬೆರಳುಗಳಲ್ಲಿ ಒಂದಂಶವು ಕುಂಬಾರನ ಮಣ್ಣೂ, ಒಂದಂಶವು ಕಬ್ಬಿಣವೂ ಆಗಿದ್ದುದನ್ನು ನೀನು ನೋಡಿದ ಪ್ರಕಾರ ಆ ರಾಜ್ಯವು ಭಿನ್ನ ಭಿನ್ನವಾಗಿರುವುದು; ಜೇಡಿಮಣ್ಣಿನೊಂದಿಗೆ ಕಬ್ಬಿಣವು ಮಿಶ್ರವಾಗಿದ್ದದ್ದನ್ನು ನೀನು ನೋಡಿದಂತೆ ಆ ರಾಜ್ಯದಲ್ಲಿ ಕಬ್ಬಿಣದ ಬಲವು ಸೇರಿರುವುದು.
Kama vile ulivyoona, miguu na vidole vilikuwa kwa sehemu vimetengenezwa kwa udongo na kwa sehemu vimefanywa kwa chuma, hivyo utakuwa ni ufalme uliogawanyika; baadhi ya nguvu za chuma zitakuwa ndani yake, kama tu ulivyoona kuwa chuma kimechanganyikana na udongo laini.
42 ೪೨ ಕಾಲ್ಬೆರಳುಗಳ ಒಂದಂಶವು ಕಬ್ಬಿಣ, ಒಂದಂಶವು ಮಣ್ಣು ಆಗಿದ್ದ ಹಾಗೆ ಆ ರಾಜ್ಯದ ಒಂದಂಶವು ಗಟ್ಟಿ, ಒಂದಂಶವು ಜೊಂಡಾಗಿರುವುದು.
Kama vile vidole vya miguuni vilivyokuwa kwa sehemu vimetengenezwa kwa chuma na kwa sehemu vimetengenezwa kwa udongo, ndivyo ufalme utakuwa kwa sehemu una nguvu na kwa sehemu utakuwa dhaifu.
43 ೪೩ ಕಬ್ಬಿಣವು ಜೇಡಿಮಣ್ಣಿನೊಂದಿಗೆ ಬೆರೆತಿರುವುದನ್ನು ನೀನು ನೋಡಿದ ಮೇರೆಗೆ, ಆ ರಾಜ್ಯಾಗಳ ಸಂತತಿ ಸಂಬಂಧದಿಂದ ಬೆರೆತುಕೊಳ್ಳುವವು. ಆದರೆ ಕಬ್ಬಿಣವು ಮಣ್ಣಿನೊಂದಿಗೆ ಹೇಗೆ ಕೂಡಿಕೊಳ್ಳುವುದಿಲ್ಲವೋ ಹಾಗೆ ಅವು ಒಂದಕ್ಕೊಂದು ಹೊಂದಿಕೊಳ್ಳುವುದಿಲ್ಲ.
Kama ulivyoona chuma kimechanganywa na udongo laini, na hivyo na watu watakuwa wamechanganyikana; hawakaa kwa pamoja, kama vile chuma kisivyoweza kushikamana na udongo
44 ೪೪ “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು. ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವುದು.
Katika siku za wafalme hao, Mungu wa mbinguni ataanzisha ufalme ambao hautaweza kuangushwa, wala kushindwa na watu wengine. Utazivunja falme zingine vipande vipande na kuzikomesha zote, nao utadumu milele.
45 ೪೫ ಬೆಟ್ಟದೊಳಗಿಂದ ಒಂದು ಗುಂಡು ಬಂಡೆಯು ಕೈಯಿಲ್ಲದೆ ಒಡೆಯಲ್ಪಟ್ಟು ಕಬ್ಬಿಣ, ತಾಮ್ರ, ಮಣ್ಣು, ಬೆಳ್ಳಿಬಂಗಾರಗಳನ್ನು ಚೂರುಚೂರು ಮಾಡಿದ್ದು ನಿನ್ನ ಕಣ್ಣಿಗೆ ಬಿತ್ತಲ್ಲಾ. ಇದರಿಂದ ಪರಲೋಕದೇವರು ಮುಂದೆ ನಡೆಯುವ ವಿಷಯಗಳನ್ನು ರಾಜನಿಗೆ ತಿಳಿಯಪಡಿಸಿದ್ದಾನೆ. ಕನಸು ನಿಜ, ಅದರ ಅರ್ಥವು ನಂಬತಕ್ಕದು” ಎಂದು ಹೇಳಿದನು.
Kama tu ulivyoona, jiwe lilichongwa kutoka katika mlima, lakini si kwa mikono ya wanadamu. Lilivunja vunja chuma, shaba, udongo, fedha, na dhahabu katika vipande vipande. Mungu mkuu amekujulisha wewe, mfalme, kile kitakachotokea baada ya haya. Ndoto ni ya kweli na tafsiri yake ni ya kuaminika.
46 ೪೬ ಆಗ ರಾಜನಾದ ನೆಬೂಕದ್ನೆಚ್ಚರನು ಅಡ್ಡಬಿದ್ದು, “ದಾನಿಯೇಲನನ್ನು ಪೂಜಿಸಿ, ಅವನಿಗೆ ನೈವೇದ್ಯಮಾಡಿ ಧೂಪ ಹಾಕಬೇಕು” ಎಂದು ಆಜ್ಞಾಪಿಸಿದನು.
Mfalme Nebukadneza alianguka kifudifudi mbele ya Daniel na alimweshimu; aliamuru kwamba sadaka zitolewe na manukato yatolewe kwake.
47 ೪೭ ಅರಸನು ದಾನಿಯೇಲನಿಗೆ ಪ್ರತ್ಯುತ್ತರವಾಗಿ, “ನೀನು ಈ ರಹಸ್ಯವನ್ನು ಬಯಲಿಗೆ ತರಲು ಸಮರ್ಥನಾದ ಕಾರಣ ನಿಮ್ಮ ದೇವರು ದೇವಾಧಿದೇವನೂ, ರಾಜರ ಒಡೆಯನೂ, ರಹಸ್ಯಗಳನ್ನು ವ್ಯಕ್ತಗೊಳಿಸುವವನೂ ಆಗಿದ್ದಾನೆ ಎಂಬುದು ನಿಶ್ಚಯ” ಎಂದು ಹೇಳಿದನು.
Mfalme alimwambia Danieli, “Hakika Mungu wako ni Mungu wa miungu, Bwana wa wafalme, na ambaye hufunua mafumbo, kwa kuwa umekuwa ukiweza kufumbua mafumbo haya.”
48 ೪೮ ಬಳಿಕ ರಾಜನು ದಾನಿಯೇಲನನ್ನು ಸನ್ಮಾನಿಸಿ, ಅವನಿಗೆ ಅಮೂಲ್ಯವಾದ ಅನೇಕ ಬಹುಮಾನಗಳನ್ನೂ ದಾನಗಳನ್ನು ಕೊಟ್ಟು, ಬಾಬೆಲ್ ಸಂಸ್ಥಾನವನ್ನೆಲ್ಲಾ ಅಧೀನಪಡಿಸಿ, ಬಾಬೆಲಿನ ವಿದ್ವಾಂಸರ ಸಕಲ ಮುಖ್ಯಸ್ಥರಿಗೂ ಅವನನ್ನು ಮುಖ್ಯಸ್ಥನನ್ನಾಗಿ ನೇಮಿಸಿದನು.
Ndipo mfalme alimfanya Danieli kuwa wa kuheshiwa sana na alimpa zawadi nyingi nzuri. Alimfanya kuwa mtawala juu ya jimbo lote la Babeli. Danieli akawa liwali mkuu juu watu wenye hekima wa Babeli.
49 ೪೯ ದಾನಿಯೇಲನು ಬಿನ್ನಹ ಮಾಡಲು ರಾಜನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರಿಗೆ ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿದನು. ದಾನಿಯೇಲನು ಅರಮನೆಯಲ್ಲಿ ಉಳಿದನು.
Danieli alipeleka ombi kwa mfalme, na mfalme aliwateua Shadraka, Meshaki na Abedinego kuwa watawala juu ya jimbo la Babeli. Lakini Danieli alisalia katika ikulu ya mfalme.

< ದಾನಿಯೇಲನು 2 >