< ಅಪೊಸ್ತಲರ ಕೃತ್ಯಗಳ 26 >

1 ಆಗ ಅಗ್ರಿಪ್ಪನು, ಪೌಲನಿಗೆ; “ನೀನು ನಿನ್ನ ಪರವಾಗಿ ಮಾತನಾಡಬಹುದು” ಅನ್ನಲು, ಪೌಲನು ಕೈಯೆತ್ತಿ, ಪ್ರತಿವಾದ ಮಾಡಿದ್ದೇನಂದರೆ;
ತತ ಆಗ್ರಿಪ್ಪಃ ಪೌಲಮ್ ಅವಾದೀತ್, ನಿಜಾಂ ಕಥಾಂ ಕಥಯಿತುಂ ತುಭ್ಯಮ್ ಅನುಮತಿ ರ್ದೀಯತೇ| ತಸ್ಮಾತ್ ಪೌಲಃ ಕರಂ ಪ್ರಸಾರ್ಯ್ಯ ಸ್ವಸ್ಮಿನ್ ಉತ್ತರಮ್ ಅವಾದೀತ್|
2 “ಅಗ್ರಿಪ್ಪರಾಜನೇ, ಯೆಹೂದ್ಯರು ನನ್ನ ಮೇಲೆ ಆರೋಪಿಸುವ ಎಲ್ಲಾ ಆರೋಪಗಳ ವಿಷಯವಾಗಿ ನಿನ್ನ ಎದುರಿನಲ್ಲಿ ನಾನು ಈಹೊತ್ತು ಪ್ರತಿವಾದ ಮಾಡಬೇಕಾಗಿರುವುದರಿಂದ, ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ.
ಹೇ ಆಗ್ರಿಪ್ಪರಾಜ ಯತ್ಕಾರಣಾದಹಂ ಯಿಹೂದೀಯೈರಪವಾದಿತೋ ಽಭವಂ ತಸ್ಯ ವೃತ್ತಾನ್ತಮ್ ಅದ್ಯ ಭವತಃ ಸಾಕ್ಷಾನ್ ನಿವೇದಯಿತುಮನುಮತೋಹಮ್ ಇದಂ ಸ್ವೀಯಂ ಪರಮಂ ಭಾಗ್ಯಂ ಮನ್ಯೇ;
3 ಏಕೆಂದರೆ, ಯೆಹೂದ್ಯರಲ್ಲಿರುವ ಎಲ್ಲಾ ಆಚಾರಗಳನ್ನೂ, ವಿವಾದಗಳನ್ನೂ ನೀನು ಚೆನ್ನಾಗಿ ಬಲ್ಲವನಾಗಿರುತ್ತೀ. ನನ್ನ ಮಾತುಗಳನ್ನು ಸಹನೆಯಿಂದ ಕೇಳಬೇಕೆಂದು ಬೇಡಿಕೊಳ್ಳುತ್ತೇನೆ.
ಯತೋ ಯಿಹೂದೀಯಲೋಕಾನಾಂ ಮಧ್ಯೇ ಯಾ ಯಾ ರೀತಿಃ ಸೂಕ್ಷ್ಮವಿಚಾರಾಶ್ಚ ಸನ್ತಿ ತೇಷು ಭವಾನ್ ವಿಜ್ಞತಮಃ; ಅತಏವ ಪ್ರಾರ್ಥಯೇ ಧೈರ್ಯ್ಯಮವಲಮ್ಬ್ಯ ಮಮ ನಿವೇದನಂ ಶೃಣೋತು|
4 “ನಾನು ಚಿಕ್ಕಂದಿನಿಂದಲೂ, ಯೆರೂಸಲೇಮಿನಲ್ಲಿ ನನ್ನ ದೇಶದ ಜನರೊಳಗಿದ್ದು, ಬದುಕಿದ ರೀತಿಯು ಎಲ್ಲಾ ಯೆಹೂದ್ಯರಿಗೆ ತಿಳಿದ ವಿಷಯವಾಗಿದೆ.
ಅಹಂ ಯಿರೂಶಾಲಮ್ನಗರೇ ಸ್ವದೇಶೀಯಲೋಕಾನಾಂ ಮಧ್ಯೇ ತಿಷ್ಠನ್ ಆ ಯೌವನಕಾಲಾದ್ ಯದ್ರೂಪಮ್ ಆಚರಿತವಾನ್ ತದ್ ಯಿಹೂದೀಯಲೋಕಾಃ ಸರ್ವ್ವೇ ವಿದನ್ತಿ|
5 ನಾನು, ನಮ್ಮ ಧರ್ಮದಲ್ಲಿ ಬಹು ಕಟ್ಟುನಿಟ್ಟಾಗಿ ಆಚರಿಸುವ ಫರಿಸಾಯರ ಪಂಥವನ್ನನುಸರಿಸಿ ಫರಿಸಾಯನಾಗಿ ನಡೆದುಕೊಂಡೆನೆಂಬುದನ್ನು, ಪ್ರಾರಂಭದಿಂದಲೂ ಅವರು ಬಲ್ಲರು. ಸಾಕ್ಷಿ ಹೇಳುವುದಕ್ಕೆ ಅವರಿಗೆ ಮನಸ್ಸಿದ್ದರೆ ಹೇಳಬಹುದು.
ಅಸ್ಮಾಕಂ ಸರ್ವ್ವೇಭ್ಯಃ ಶುದ್ಧತಮಂ ಯತ್ ಫಿರೂಶೀಯಮತಂ ತದವಲಮ್ಬೀ ಭೂತ್ವಾಹಂ ಕಾಲಂ ಯಾಪಿತವಾನ್ ಯೇ ಜನಾ ಆ ಬಾಲ್ಯಕಾಲಾನ್ ಮಾಂ ಜಾನಾನ್ತಿ ತೇ ಏತಾದೃಶಂ ಸಾಕ್ಷ್ಯಂ ಯದಿ ದದಾತಿ ತರ್ಹಿ ದಾತುಂ ಶಕ್ನುವನ್ತಿ|
6 ಈಗಲೂ ದೇವರು ನಮ್ಮ ಪೂರ್ವಿಕರಿಗೆ, ಮಾಡಿದ ವಾಗ್ದಾನವು ನೆರವೇರುವುದೆಂಬ ನಿರೀಕ್ಷೆಯ ನಿಮಿತ್ತವೇ, ನಾನು ಇಂದು ನ್ಯಾಯವಿಚಾರಣೆಗೆ ಇಲ್ಲಿ ನಿಂತಿದ್ದೇನೆ.
ಕಿನ್ತು ಹೇ ಆಗ್ರಿಪ್ಪರಾಜ ಈಶ್ವರೋಽಸ್ಮಾಕಂ ಪೂರ್ವ್ವಪುರುಷಾಣಾಂ ನಿಕಟೇ ಯದ್ ಅಙ್ಗೀಕೃತವಾನ್ ತಸ್ಯ ಪ್ರತ್ಯಾಶಾಹೇತೋರಹಮ್ ಇದಾನೀಂ ವಿಚಾರಸ್ಥಾನೇ ದಣ್ಡಾಯಮಾನೋಸ್ಮಿ|
7 ನಮ್ಮ ಹನ್ನೆರಡು ಕುಲದವರು ಹಗಲಿರುಳು ಆಸಕ್ತಿಯಿಂದ ದೇವರನ್ನು ಆರಾಧಿಸುತ್ತಾ, ಆ ವಾಗ್ದಾನದ ಫಲವನ್ನು ಹೊಂದುವುದಕ್ಕಾಗಿ ನಿರೀಕ್ಷಿಸುತ್ತಾ ಇದ್ದಾರೆ. ಅರಸನೇ, ಅದೇ ನಿರೀಕ್ಷೆಯ ವಿಷಯದಲ್ಲಿಯೇ ಯೆಹೂದ್ಯರು, ನನ್ನ ವಿರುದ್ಧ ದೋಷಾರೋಪಣೆಮಾಡುತ್ತಿದ್ದಾರೆ.
ತಸ್ಯಾಙ್ಗೀಕಾರಸ್ಯ ಫಲಂ ಪ್ರಾಪ್ತುಮ್ ಅಸ್ಮಾಕಂ ದ್ವಾದಶವಂಶಾ ದಿವಾನಿಶಂ ಮಹಾಯತ್ನಾದ್ ಈಶ್ವರಸೇವನಂ ಕೃತ್ವಾ ಯಾಂ ಪ್ರತ್ಯಾಶಾಂ ಕುರ್ವ್ವನ್ತಿ ತಸ್ಯಾಃ ಪ್ರತ್ಯಾಶಾಯಾ ಹೇತೋರಹಂ ಯಿಹೂದೀಯೈರಪವಾದಿತೋಽಭವಮ್|
8 ದೇವರು ಸತ್ತವರನ್ನು ಎಬ್ಬಿಸಿದ್ದು ನಂಬಲು ಅಸಾಧ್ಯವೆಂದು ನೀವು ಏಕೆ ತೀರ್ಮಾನಿಸುತ್ತೀರಿ?
ಈಶ್ವರೋ ಮೃತಾನ್ ಉತ್ಥಾಪಯಿಷ್ಯತೀತಿ ವಾಕ್ಯಂ ಯುಷ್ಮಾಕಂ ನಿಕಟೇಽಸಮ್ಭವಂ ಕುತೋ ಭವೇತ್?
9 ಒಂದು ಕಾಲದಲ್ಲಿ ನಜರೇತಿನ ಯೇಸುವಿನ ಹೆಸರಿಗೆ ವಿರುದ್ಧವಾಗಿ ಅನೇಕ ಕಾರ್ಯಗಳನ್ನು ನಡೆಸಬೇಕೆಂದು ನಾನೂ ಯೋಚಿಸಿಕೊಂಡಿದ್ದೆನು.
ನಾಸರತೀಯಯೀಶೋ ರ್ನಾಮ್ನೋ ವಿರುದ್ಧಂ ನಾನಾಪ್ರಕಾರಪ್ರತಿಕೂಲಾಚರಣಮ್ ಉಚಿತಮ್ ಇತ್ಯಹಂ ಮನಸಿ ಯಥಾರ್ಥಂ ವಿಜ್ಞಾಯ
10 ೧೦ ಯೆರೂಸಲೇಮಿನಲ್ಲಿ ಹಾಗೆಯೇ ಮಾಡಿದ್ದೆನು. ಮುಖ್ಯಯಾಜಕರಿಂದ, ಅಧಿಕಾರವನ್ನು ಪಡೆದು ದೇವಜನರಲ್ಲಿ ಅನೇಕರನ್ನು ಸೆರೆಮನೆಗಳಲ್ಲಿ ಇರಿಸಿ, ಅವರಿಗೆ ಮರಣದ ತೀರ್ಪಾದಾಗ, ನಾನು ಅದಕ್ಕೆ ಸಮ್ಮತಿಯನ್ನು ಸೂಚಿಸಿದೆನು.
ಯಿರೂಶಾಲಮನಗರೇ ತದಕರವಂ ಫಲತಃ ಪ್ರಧಾನಯಾಜಕಸ್ಯ ನಿಕಟಾತ್ ಕ್ಷಮತಾಂ ಪ್ರಾಪ್ಯ ಬಹೂನ್ ಪವಿತ್ರಲೋಕಾನ್ ಕಾರಾಯಾಂ ಬದ್ಧವಾನ್ ವಿಶೇಷತಸ್ತೇಷಾಂ ಹನನಸಮಯೇ ತೇಷಾಂ ವಿರುದ್ಧಾಂ ನಿಜಾಂ ಸಮ್ಮತಿಂ ಪ್ರಕಾಶಿತವಾನ್|
11 ೧೧ ಎಲ್ಲಾ ಸಭಾಮಂದಿರಗಳಲ್ಲಿಯೂ, ನಾನು ಅನೇಕ ಸಾರಿ ಅವರನ್ನು ದಂಡಿಸಿ ಅವರಿಂದ ದೇವದೂಷಣೆಯ ಮಾತುಗಳನ್ನಾಡಿಸುವುದಕ್ಕೆ ಪ್ರಯತ್ನಿಸಿದೆನು. ಇದಲ್ಲದೆ ಅವರ ಮೇಲೆ ಬಹು ಕೋಪಾವೇಶವುಳ್ಳವನಾಗಿ ಬೇರೆ ಪಟ್ಟಣಗಳವರೆಗೂ ಹೋಗಿ, ಅವರನ್ನು ಹಿಂಸೆಪಡಿಸಿದೆನು.
ವಾರಂ ವಾರಂ ಭಜನಭವನೇಷು ತೇಭ್ಯೋ ದಣ್ಡಂ ಪ್ರದತ್ತವಾನ್ ಬಲಾತ್ ತಂ ಧರ್ಮ್ಮಂ ನಿನ್ದಯಿತವಾಂಶ್ಚ ಪುನಶ್ಚ ತಾನ್ ಪ್ರತಿ ಮಹಾಕ್ರೋಧಾದ್ ಉನ್ಮತ್ತಃ ಸನ್ ವಿದೇಶೀಯನಗರಾಣಿ ಯಾವತ್ ತಾನ್ ತಾಡಿತವಾನ್|
12 ೧೨ ಈ ಉದ್ದೇಶದಿಂದ ನಾನು ಮುಖ್ಯಯಾಜಕರಿಂದ ಅಧಿಕಾರವನ್ನೂ, ಆದೇಶವನ್ನೂ ಹೊಂದಿ ದಮಸ್ಕಕ್ಕೆ ಹೋಗುವ ದಾರಿಯಲ್ಲಿ ರಾಜನೇ,
ಇತ್ಥಂ ಪ್ರಧಾನಯಾಜಕಸ್ಯ ಸಮೀಪಾತ್ ಶಕ್ತಿಮ್ ಆಜ್ಞಾಪತ್ರಞ್ಚ ಲಬ್ಧ್ವಾ ದಮ್ಮೇಷಕ್ನಗರಂ ಗತವಾನ್|
13 ೧೩ ಮಧ್ಯಾಹ್ನದ ಹೊತ್ತಿನಲ್ಲಿ ಪರಲೋಕದಿಂದ ಒಂದು ಬೆಳಕು ನನ್ನ ಸುತ್ತಲೂ ಮತ್ತು ನನ್ನ ಜೊತೆಯಲ್ಲಿ ಪ್ರಯಾಣಮಾಡುತ್ತಿದ್ದವರ ಸುತ್ತಲೂ ಸೂರ್ಯನ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವುದನ್ನು ನಾನು ಕಂಡೆನು.
ತದಾಹಂ ಹೇ ರಾಜನ್ ಮಾರ್ಗಮಧ್ಯೇ ಮಧ್ಯಾಹ್ನಕಾಲೇ ಮಮ ಮದೀಯಸಙ್ಗಿನಾಂ ಲೋಕಾನಾಞ್ಚ ಚತಸೃಷು ದಿಕ್ಷು ಗಗಣಾತ್ ಪ್ರಕಾಶಮಾನಾಂ ಭಾಸ್ಕರತೋಪಿ ತೇಜಸ್ವತೀಂ ದೀಪ್ತಿಂ ದೃಷ್ಟವಾನ್|
14 ೧೪ ನಾವೆಲ್ಲರು ನೆಲಕ್ಕೆ ಬೀಳಲು; ‘ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವುದರಿಂದ ನಿನಗೇ ಹಾನಿಯಲ್ಲವೇ? ಎಂದು ಇಬ್ರಿಯ ಭಾಷೆಯಿಂದ ಹೇಳುವ ವಾಣಿಯನ್ನು’ ಕೇಳಿದೆನು.
ತಸ್ಮಾದ್ ಅಸ್ಮಾಸು ಸರ್ವ್ವೇಷು ಭೂಮೌ ಪತಿತೇಷು ಸತ್ಸು ಹೇ ಶೌಲ ಹೈ ಶೌಲ ಕುತೋ ಮಾಂ ತಾಡಯಸಿ? ಕಣ್ಟಕಾನಾಂ ಮುಖೇ ಪಾದಾಹನನಂ ತವ ದುಃಸಾಧ್ಯಮ್ ಇಬ್ರೀಯಭಾಷಯಾ ಗದಿತ ಏತಾದೃಶ ಏಕಃ ಶಬ್ದೋ ಮಯಾ ಶ್ರುತಃ|
15 ೧೫ ಆಗ ನಾನು; ‘ಕರ್ತನೇ, ನೀನಾರು?’ ಅನ್ನಲು ಕರ್ತನು; ‘ನೀನು ಹಿಂಸೆಪಡಿಸುವ ಯೇಸುವೇ ನಾನು.
ತದಾಹಂ ಪೃಷ್ಟವಾನ್ ಹೇ ಪ್ರಭೋ ಕೋ ಭವಾನ್? ತತಃ ಸ ಕಥಿತವಾನ್ ಯಂ ಯೀಶುಂ ತ್ವಂ ತಾಡಯಸಿ ಸೋಹಂ,
16 ೧೬ ನೀನು ಎದ್ದು, ನಿಂತುಕೋ. ನಿನ್ನನ್ನು ನನ್ನ ಸೇವಕನಾಗಿಯೂ, ಸಾಕ್ಷಿಯಾಗಿಯೂ ನೇಮಿಸುವುದಕ್ಕೋಸ್ಕರ ನಿನಗೆ ಕಾಣಿಸಿಕೊಂಡಿದ್ದೇನೆ. ಈಗಲೂ, ಮುಂದೆಯೂ ನಿನಗೆ ತೋರಿಸಲಿರುವ ದರ್ಶನಗಳಲ್ಲಿಯೂ, ನಿನಗೆ ಕಾಣಿಸಿಕೊಂಡದ್ದನ್ನು ಕುರಿತು ನೀನು ನನ್ನ ಸಾಕ್ಷಿಯಾಗಿರಬೇಕು.
ಕಿನ್ತು ಸಮುತ್ತಿಷ್ಠ ತ್ವಂ ಯದ್ ದೃಷ್ಟವಾನ್ ಇತಃ ಪುನಞ್ಚ ಯದ್ಯತ್ ತ್ವಾಂ ದರ್ಶಯಿಷ್ಯಾಮಿ ತೇಷಾಂ ಸರ್ವ್ವೇಷಾಂ ಕಾರ್ಯ್ಯಾಣಾಂ ತ್ವಾಂ ಸಾಕ್ಷಿಣಂ ಮಮ ಸೇವಕಞ್ಚ ಕರ್ತ್ತುಮ್ ದರ್ಶನಮ್ ಅದಾಮ್|
17 ೧೭ ನಾನು ನಿನ್ನ ಸ್ವಂತ ಜನರಿಂದಲೂ, ಅನ್ಯಜನರಿಂದಲೂ ನಿನ್ನನ್ನು ರಕ್ಷಿಸುವೆನು.
ವಿಶೇಷತೋ ಯಿಹೂದೀಯಲೋಕೇಭ್ಯೋ ಭಿನ್ನಜಾತೀಯೇಭ್ಯಶ್ಚ ತ್ವಾಂ ಮನೋನೀತಂ ಕೃತ್ವಾ ತೇಷಾಂ ಯಥಾ ಪಾಪಮೋಚನಂ ಭವತಿ
18 ೧೮ ಅವರು ಕತ್ತಲೆಯಿಂದ ಬೆಳಕಿಗೂ, ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು, ನನ್ನಲ್ಲಿ ನಂಬಿಕೆಯಿಡುವುದರಿಂದ ಪಾಪಕ್ಷಮಾಪಣೆಯನ್ನೂ, ಪರಿಶುದ್ಧರೊಂದಿಗೆ ಹಕ್ಕನ್ನೂ ಹೊಂದುವಂತೆ, ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ’ ಅಂದನು.
ಯಥಾ ತೇ ಮಯಿ ವಿಶ್ವಸ್ಯ ಪವಿತ್ರೀಕೃತಾನಾಂ ಮಧ್ಯೇ ಭಾಗಂ ಪ್ರಾಪ್ನುವನ್ತಿ ತದಭಿಪ್ರಾಯೇಣ ತೇಷಾಂ ಜ್ಞಾನಚಕ್ಷೂಂಷಿ ಪ್ರಸನ್ನಾನಿ ಕರ್ತ್ತುಂ ತಥಾನ್ಧಕಾರಾದ್ ದೀಪ್ತಿಂ ಪ್ರತಿ ಶೈತಾನಾಧಿಕಾರಾಚ್ಚ ಈಶ್ವರಂ ಪ್ರತಿ ಮತೀಃ ಪರಾವರ್ತ್ತಯಿತುಂ ತೇಷಾಂ ಸಮೀಪಂ ತ್ವಾಂ ಪ್ರೇಷ್ಯಾಮಿ|
19 ೧೯ ಆದಕಾರಣ ಅಗ್ರಿಪ್ಪರಾಜನೇ, ಪರಲೋಕದಿಂದ ನನಗೆ ಉಂಟಾದ ಆ ದರ್ಶನಕ್ಕೆ ನಾನು ಅವಿಧೇಯನಾಗದೆ ಮೊದಲು ದಮಸ್ಕದವರಿಗೆ,
ಹೇ ಆಗ್ರಿಪ್ಪರಾಜ ಏತಾದೃಶಂ ಸ್ವರ್ಗೀಯಪ್ರತ್ಯಾದೇಶಂ ಅಗ್ರಾಹ್ಯಮ್ ಅಕೃತ್ವಾಹಂ
20 ೨೦ ಆಮೇಲೆ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸೀಮೆಯಲ್ಲಿಯೂ ಇರುವವರಿಗೆ ಮತ್ತು ಅನ್ಯಜನರಿಗೆ ಸಹ; ನೀವು ದೇವರ ಕಡೆಗೆ ತಿರುಗಿಕೊಳ್ಳಬೇಕೆಂತಲೂ, ಮಾನಸಾಂತರಕ್ಕೆ ಯೋಗ್ಯವಾದ ಕೃತ್ಯಗಳನ್ನು ಮಾಡಬೇಕೆಂತಲೂ ಸಾರಿದೆನು.
ಪ್ರಥಮತೋ ದಮ್ಮೇಷಕ್ನಗರೇ ತತೋ ಯಿರೂಶಾಲಮಿ ಸರ್ವ್ವಸ್ಮಿನ್ ಯಿಹೂದೀಯದೇಶೇ ಅನ್ಯೇಷು ದೇಶೇಷು ಚ ಯೇನ ಲೋಕಾ ಮತಿಂ ಪರಾವರ್ತ್ತ್ಯ ಈಶ್ವರಂ ಪ್ರತಿ ಪರಾವರ್ತ್ತಯನ್ತೇ, ಮನಃಪರಾವರ್ತ್ತನಯೋಗ್ಯಾನಿ ಕರ್ಮ್ಮಾಣಿ ಚ ಕುರ್ವ್ವನ್ತಿ ತಾದೃಶಮ್ ಉಪದೇಶಂ ಪ್ರಚಾರಿತವಾನ್|
21 ೨೧ ಈ ಕಾರಣದಿಂದ ಯೆಹೂದ್ಯರು ದೇವಾಲಯದಲ್ಲಿ ನನ್ನನ್ನು ಹಿಡಿದು ಕೊಲ್ಲುವುದಕ್ಕೆ ಪ್ರಯತ್ನಿಸಿದರು.
ಏತತ್ಕಾರಣಾದ್ ಯಿಹೂದೀಯಾ ಮಧ್ಯೇಮನ್ದಿರಂ ಮಾಂ ಧೃತ್ವಾ ಹನ್ತುಮ್ ಉದ್ಯತಾಃ|
22 ೨೨ ಆದರೆ ನಾನು ದೇವರಿಂದ ಸಹಾಯವನ್ನು ಪಡೆದು ಈ ದಿನದವರೆಗೂ ಸುರಕ್ಷಿತವಾಗಿದ್ದು ಚಿಕ್ಕವರಿಗೂ, ದೊಡ್ಡವರಿಗೂ ಸಾಕ್ಷಿಹೇಳುವವನಾಗಿದ್ದೇನೆ. ಪ್ರವಾದಿಗಳೂ, ಮೋಶೆಯೂ ಮುಂದೆ ಆಗುವುದನ್ನು ಕುರಿತು ತಿಳಿಸಿದ ಸಂಗತಿಗಳನ್ನೇ, ಹೊರತು ನಾನು ಇನ್ನೇನೂ ಹೇಳುವವನಲ್ಲ.
ತಥಾಪಿ ಖ್ರೀಷ್ಟೋ ದುಃಖಂ ಭುಕ್ತ್ವಾ ಸರ್ವ್ವೇಷಾಂ ಪೂರ್ವ್ವಂ ಶ್ಮಶಾನಾದ್ ಉತ್ಥಾಯ ನಿಜದೇಶೀಯಾನಾಂ ಭಿನ್ನದೇಶೀಯಾನಾಞ್ಚ ಸಮೀಪೇ ದೀಪ್ತಿಂ ಪ್ರಕಾಶಯಿಷ್ಯತಿ
23 ೨೩ ಆ ಸಂಗತಿಗಳು ಏನೆಂದರೆ; ಕ್ರಿಸ್ತನು ಬಾಧೆಪಟ್ಟು ಸಾಯಬೇಕಾದವನು ಮತ್ತು ಆತನು ಸತ್ತವರೊಳಗಿಂದ ಮೊದಲನೆಯವನಾಗಿ ಎದ್ದು ಯೆಹೂದ್ಯರಿಗೂ, ಅನ್ಯಜನರಿಗೂ ಬೆಳಕನ್ನು ಪ್ರಸಿದ್ಧಿಪಡಿಸುವವನಾಗಿರುವನು” ಎಂಬುದೇ.
ಭವಿಷ್ಯದ್ವಾದಿಗಣೋ ಮೂಸಾಶ್ಚ ಭಾವಿಕಾರ್ಯ್ಯಸ್ಯ ಯದಿದಂ ಪ್ರಮಾಣಮ್ ಅದದುರೇತದ್ ವಿನಾನ್ಯಾಂ ಕಥಾಂ ನ ಕಥಯಿತ್ವಾ ಈಶ್ವರಾದ್ ಅನುಗ್ರಹಂ ಲಬ್ಧ್ವಾ ಮಹತಾಂ ಕ್ಷುದ್ರಾಣಾಞ್ಚ ಸರ್ವ್ವೇಷಾಂ ಸಮೀಪೇ ಪ್ರಮಾಣಂ ದತ್ತ್ವಾದ್ಯ ಯಾವತ್ ತಿಷ್ಠಾಮಿ|
24 ೨೪ ಹೀಗೆ ಪೌಲನು ಪ್ರತಿವಾದ ಮಾಡುತ್ತಿದ್ದಾಗ, ಫೆಸ್ತನು ಮಹಾಶಬ್ದದಿಂದ; “ಪೌಲನೇ, ನಿನಗೆ ಹುಚ್ಚು ಹಿಡಿದಿದೆ; ಅಧಿಕ ಪಾಂಡಿತ್ಯ ನಿನ್ನನ್ನು ಹುಚ್ಚನನ್ನಾಗಿಸಿದೆ,” ಎಂದು ಹೇಳಿದನು.
ತಸ್ಯಮಾಂ ಕಥಾಂ ನಿಶಮ್ಯ ಫೀಷ್ಟ ಉಚ್ಚೈಃ ಸ್ವರೇಣ ಕಥಿತವಾನ್ ಹೇ ಪೌಲ ತ್ವಮ್ ಉನ್ಮತ್ತೋಸಿ ಬಹುವಿದ್ಯಾಭ್ಯಾಸೇನ ತ್ವಂ ಹತಜ್ಞಾನೋ ಜಾತಃ|
25 ೨೫ ಅದಕ್ಕೆ ಪೌಲನು; “ಮಹಾ ಶ್ರೇಷ್ಠನಾದ ಫೆಸ್ತನೇ, ನಾನು ಹುಚ್ಚನಲ್ಲ; ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತುಗಳನ್ನೇ ಹೇಳುತ್ತಿದ್ದೇನೆ.
ಸ ಉಕ್ತವಾನ್ ಹೇ ಮಹಾಮಹಿಮ ಫೀಷ್ಟ ನಾಹಮ್ ಉನ್ಮತ್ತಃ ಕಿನ್ತು ಸತ್ಯಂ ವಿವೇಚನೀಯಞ್ಚ ವಾಕ್ಯಂ ಪ್ರಸ್ತೌಮಿ|
26 ೨೬ ಅಗ್ರಿಪ್ಪರಾಜನು ಈ ಸಂಗತಿಗಳನ್ನೆಲ್ಲಾ ತಿಳಿದವನು; ಆದುದರಿಂದ, ಅವನ ಮುಂದೆ ಧೈರ್ಯವಾಗಿ ಮಾತನಾಡುತ್ತೇನೆ. ಇವುಗಳಲ್ಲಿ ಒಂದಾದರೂ ಅವನಿಗೆ ಮುಚ್ಚುಮರೆಯಾದುದಲ್ಲವೆಂದು ನಂಬಿದ್ದೇನೆ, ಏಕೆಂದರೆ ಇದು ಒಂದು ಮೂಲೆಯಲ್ಲಿ ನಡೆದ ಕಾರ್ಯವಲ್ಲ.
ಯಸ್ಯ ಸಾಕ್ಷಾದ್ ಅಕ್ಷೋಭಃ ಸನ್ ಕಥಾಂ ಕಥಯಾಮಿ ಸ ರಾಜಾ ತದ್ವೃತ್ತಾನ್ತಂ ಜಾನಾತಿ ತಸ್ಯ ಸಮೀಪೇ ಕಿಮಪಿ ಗುಪ್ತಂ ನೇತಿ ಮಯಾ ನಿಶ್ಚಿತಂ ಬುಧ್ಯತೇ ಯತಸ್ತದ್ ವಿಜನೇ ನ ಕೃತಂ|
27 ೨೭ ಅಗ್ರಿಪ್ಪರಾಜನೇ, ಪ್ರವಾದಿಗಳಲ್ಲಿ ನಿನಗೆ ನಂಬಿಕೆಯುಂಟೋ?” ಉಂಟೆಂದು ನಾನು ಬಲ್ಲೆನು ಅಂದನು.
ಹೇ ಆಗ್ರಿಪ್ಪರಾಜ ಭವಾನ್ ಕಿಂ ಭವಿಷ್ಯದ್ವಾದಿಗಣೋಕ್ತಾನಿ ವಾಕ್ಯಾನಿ ಪ್ರತ್ಯೇತಿ? ಭವಾನ್ ಪ್ರತ್ಯೇತಿ ತದಹಂ ಜಾನಾಮಿ|
28 ೨೮ ಅದಕ್ಕೆ ಅಗ್ರಿಪ್ಪನು; “ಅಲ್ಪಪ್ರಯತ್ನದಿಂದ, ನನ್ನನ್ನು ಕ್ರೈಸ್ತನಾಗುವುದಕ್ಕೆ ಒಡಂಬಡಿಸುತ್ತೀಯಾ?” ಎಂದು ಹೇಳಲು
ತತ ಆಗ್ರಿಪ್ಪಃ ಪೌಲಮ್ ಅಭಿಹಿತವಾನ್ ತ್ವಂ ಪ್ರವೃತ್ತಿಂ ಜನಯಿತ್ವಾ ಪ್ರಾಯೇಣ ಮಾಮಪಿ ಖ್ರೀಷ್ಟೀಯಂ ಕರೋಷಿ|
29 ೨೯ ಪೌಲನು; “ಅಲ್ಪಪ್ರಯತ್ನದಿಂದಾಗಲಿ, ಅಧಿಕ ಪ್ರಯತ್ನದಿಂದಾಗಲಿ ನೀನು ಮಾತ್ರವಲ್ಲದೆ ಈಹೊತ್ತು ನನ್ನ ಮಾತುಗಳನ್ನು ಕೇಳುವವರೆಲ್ಲರೂ, ಈ ಬೇಡಿಗಳ ಹೊರತು, ನನ್ನಂತೆ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ” ಅಂದನು.
ತತಃ ಸೋಽವಾದೀತ್ ಭವಾನ್ ಯೇ ಯೇ ಲೋಕಾಶ್ಚ ಮಮ ಕಥಾಮ್ ಅದ್ಯ ಶೃಣ್ವನ್ತಿ ಪ್ರಾಯೇಣ ಇತಿ ನಹಿ ಕಿನ್ತ್ವೇತತ್ ಶೃಙ್ಖಲಬನ್ಧನಂ ವಿನಾ ಸರ್ವ್ವಥಾ ತೇ ಸರ್ವ್ವೇ ಮಾದೃಶಾ ಭವನ್ತ್ವಿತೀಶ್ವಸ್ಯ ಸಮೀಪೇ ಪ್ರಾರ್ಥಯೇಽಹಮ್|
30 ೩೦ ಆ ಮೇಲೆ ರಾಜನೂ, ದೇಶಾಧಿಪತಿಯೂ ಮತ್ತು ಬೆರ್ನಿಕೆಯೂ ಅವರ ಸಂಗಡ ಕುಳಿತಿದ್ದವರೂ, ಎದ್ದು ಹೊರಗೆ ಹೋಗಿ;
ಏತಸ್ಯಾಂ ಕಥಾಯಾಂ ಕಥಿತಾಯಾಂ ಸ ರಾಜಾ ಸೋಽಧಿಪತಿ ರ್ಬರ್ಣೀಕೀ ಸಭಾಸ್ಥಾ ಲೋಕಾಶ್ಚ ತಸ್ಮಾದ್ ಉತ್ಥಾಯ
31 ೩೧ “ಈ ಮನುಷ್ಯನು ಮರಣದಂಡನೆಗಾಗಲಿ, ಬೇಡಿಗಾಗಲಿ ಆಧಾರವಾದದ್ದೇನೂ ಮಾಡಿದವನಲ್ಲ” ಎಂಬುದಾಗಿ ತಮ್ಮ ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
ಗೋಪನೇ ಪರಸ್ಪರಂ ವಿವಿಚ್ಯ ಕಥಿತವನ್ತ ಏಷ ಜನೋ ಬನ್ಧನಾರ್ಹಂ ಪ್ರಾಣಹನನಾರ್ಹಂ ವಾ ಕಿಮಪಿ ಕರ್ಮ್ಮ ನಾಕರೋತ್|
32 ೩೨ ಅಗ್ರಿಪ್ಪನು ಫೆಸ್ತನಿಗೆ; “ಈ ಮನುಷ್ಯನು ಕೈಸರನಿಗೆ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳದೆ ಹೋಗಿದ್ದರೆ ಇವನನ್ನು ಬಿಡುಗಡೆ ಮಾಡಬಹುದಿತ್ತು” ಎಂದು ಹೇಳಿದನು.
ತತ ಆಗ್ರಿಪ್ಪಃ ಫೀಷ್ಟಮ್ ಅವದತ್, ಯದ್ಯೇಷ ಮಾನುಷಃ ಕೈಸರಸ್ಯ ನಿಕಟೇ ವಿಚಾರಿತೋ ಭವಿತುಂ ನ ಪ್ರಾರ್ಥಯಿಷ್ಯತ್ ತರ್ಹಿ ಮುಕ್ತೋ ಭವಿತುಮ್ ಅಶಕ್ಷ್ಯತ್|

< ಅಪೊಸ್ತಲರ ಕೃತ್ಯಗಳ 26 >