< ಅಪೊಸ್ತಲರ ಕೃತ್ಯಗಳ 26 >

1 ಆಗ ಅಗ್ರಿಪ್ಪನು, ಪೌಲನಿಗೆ; “ನೀನು ನಿನ್ನ ಪರವಾಗಿ ಮಾತನಾಡಬಹುದು” ಅನ್ನಲು, ಪೌಲನು ಕೈಯೆತ್ತಿ, ಪ್ರತಿವಾದ ಮಾಡಿದ್ದೇನಂದರೆ;
तत आग्रिप्पः पौलम् अवादीत्, निजां कथां कथयितुं तुभ्यम् अनुमति र्दीयते। तस्मात् पौलः करं प्रसार्य्य स्वस्मिन् उत्तरम् अवादीत्।
2 “ಅಗ್ರಿಪ್ಪರಾಜನೇ, ಯೆಹೂದ್ಯರು ನನ್ನ ಮೇಲೆ ಆರೋಪಿಸುವ ಎಲ್ಲಾ ಆರೋಪಗಳ ವಿಷಯವಾಗಿ ನಿನ್ನ ಎದುರಿನಲ್ಲಿ ನಾನು ಈಹೊತ್ತು ಪ್ರತಿವಾದ ಮಾಡಬೇಕಾಗಿರುವುದರಿಂದ, ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ.
हे आग्रिप्पराज यत्कारणादहं यिहूदीयैरपवादितो ऽभवं तस्य वृत्तान्तम् अद्य भवतः साक्षान् निवेदयितुमनुमतोहम् इदं स्वीयं परमं भाग्यं मन्ये;
3 ಏಕೆಂದರೆ, ಯೆಹೂದ್ಯರಲ್ಲಿರುವ ಎಲ್ಲಾ ಆಚಾರಗಳನ್ನೂ, ವಿವಾದಗಳನ್ನೂ ನೀನು ಚೆನ್ನಾಗಿ ಬಲ್ಲವನಾಗಿರುತ್ತೀ. ನನ್ನ ಮಾತುಗಳನ್ನು ಸಹನೆಯಿಂದ ಕೇಳಬೇಕೆಂದು ಬೇಡಿಕೊಳ್ಳುತ್ತೇನೆ.
यतो यिहूदीयलोकानां मध्ये या या रीतिः सूक्ष्मविचाराश्च सन्ति तेषु भवान् विज्ञतमः; अतएव प्रार्थये धैर्य्यमवलम्ब्य मम निवेदनं शृणोतु।
4 “ನಾನು ಚಿಕ್ಕಂದಿನಿಂದಲೂ, ಯೆರೂಸಲೇಮಿನಲ್ಲಿ ನನ್ನ ದೇಶದ ಜನರೊಳಗಿದ್ದು, ಬದುಕಿದ ರೀತಿಯು ಎಲ್ಲಾ ಯೆಹೂದ್ಯರಿಗೆ ತಿಳಿದ ವಿಷಯವಾಗಿದೆ.
अहं यिरूशालम्नगरे स्वदेशीयलोकानां मध्ये तिष्ठन् आ यौवनकालाद् यद्रूपम् आचरितवान् तद् यिहूदीयलोकाः सर्व्वे विदन्ति।
5 ನಾನು, ನಮ್ಮ ಧರ್ಮದಲ್ಲಿ ಬಹು ಕಟ್ಟುನಿಟ್ಟಾಗಿ ಆಚರಿಸುವ ಫರಿಸಾಯರ ಪಂಥವನ್ನನುಸರಿಸಿ ಫರಿಸಾಯನಾಗಿ ನಡೆದುಕೊಂಡೆನೆಂಬುದನ್ನು, ಪ್ರಾರಂಭದಿಂದಲೂ ಅವರು ಬಲ್ಲರು. ಸಾಕ್ಷಿ ಹೇಳುವುದಕ್ಕೆ ಅವರಿಗೆ ಮನಸ್ಸಿದ್ದರೆ ಹೇಳಬಹುದು.
अस्माकं सर्व्वेभ्यः शुद्धतमं यत् फिरूशीयमतं तदवलम्बी भूत्वाहं कालं यापितवान् ये जना आ बाल्यकालान् मां जानान्ति ते एतादृशं साक्ष्यं यदि ददाति तर्हि दातुं शक्नुवन्ति।
6 ಈಗಲೂ ದೇವರು ನಮ್ಮ ಪೂರ್ವಿಕರಿಗೆ, ಮಾಡಿದ ವಾಗ್ದಾನವು ನೆರವೇರುವುದೆಂಬ ನಿರೀಕ್ಷೆಯ ನಿಮಿತ್ತವೇ, ನಾನು ಇಂದು ನ್ಯಾಯವಿಚಾರಣೆಗೆ ಇಲ್ಲಿ ನಿಂತಿದ್ದೇನೆ.
किन्तु हे आग्रिप्पराज ईश्वरोऽस्माकं पूर्व्वपुरुषाणां निकटे यद् अङ्गीकृतवान् तस्य प्रत्याशाहेतोरहम् इदानीं विचारस्थाने दण्डायमानोस्मि।
7 ನಮ್ಮ ಹನ್ನೆರಡು ಕುಲದವರು ಹಗಲಿರುಳು ಆಸಕ್ತಿಯಿಂದ ದೇವರನ್ನು ಆರಾಧಿಸುತ್ತಾ, ಆ ವಾಗ್ದಾನದ ಫಲವನ್ನು ಹೊಂದುವುದಕ್ಕಾಗಿ ನಿರೀಕ್ಷಿಸುತ್ತಾ ಇದ್ದಾರೆ. ಅರಸನೇ, ಅದೇ ನಿರೀಕ್ಷೆಯ ವಿಷಯದಲ್ಲಿಯೇ ಯೆಹೂದ್ಯರು, ನನ್ನ ವಿರುದ್ಧ ದೋಷಾರೋಪಣೆಮಾಡುತ್ತಿದ್ದಾರೆ.
तस्याङ्गीकारस्य फलं प्राप्तुम् अस्माकं द्वादशवंशा दिवानिशं महायत्नाद् ईश्वरसेवनं कृत्वा यां प्रत्याशां कुर्व्वन्ति तस्याः प्रत्याशाया हेतोरहं यिहूदीयैरपवादितोऽभवम्।
8 ದೇವರು ಸತ್ತವರನ್ನು ಎಬ್ಬಿಸಿದ್ದು ನಂಬಲು ಅಸಾಧ್ಯವೆಂದು ನೀವು ಏಕೆ ತೀರ್ಮಾನಿಸುತ್ತೀರಿ?
ईश्वरो मृतान् उत्थापयिष्यतीति वाक्यं युष्माकं निकटेऽसम्भवं कुतो भवेत्?
9 ಒಂದು ಕಾಲದಲ್ಲಿ ನಜರೇತಿನ ಯೇಸುವಿನ ಹೆಸರಿಗೆ ವಿರುದ್ಧವಾಗಿ ಅನೇಕ ಕಾರ್ಯಗಳನ್ನು ನಡೆಸಬೇಕೆಂದು ನಾನೂ ಯೋಚಿಸಿಕೊಂಡಿದ್ದೆನು.
नासरतीययीशो र्नाम्नो विरुद्धं नानाप्रकारप्रतिकूलाचरणम् उचितम् इत्यहं मनसि यथार्थं विज्ञाय
10 ೧೦ ಯೆರೂಸಲೇಮಿನಲ್ಲಿ ಹಾಗೆಯೇ ಮಾಡಿದ್ದೆನು. ಮುಖ್ಯಯಾಜಕರಿಂದ, ಅಧಿಕಾರವನ್ನು ಪಡೆದು ದೇವಜನರಲ್ಲಿ ಅನೇಕರನ್ನು ಸೆರೆಮನೆಗಳಲ್ಲಿ ಇರಿಸಿ, ಅವರಿಗೆ ಮರಣದ ತೀರ್ಪಾದಾಗ, ನಾನು ಅದಕ್ಕೆ ಸಮ್ಮತಿಯನ್ನು ಸೂಚಿಸಿದೆನು.
यिरूशालमनगरे तदकरवं फलतः प्रधानयाजकस्य निकटात् क्षमतां प्राप्य बहून् पवित्रलोकान् कारायां बद्धवान् विशेषतस्तेषां हननसमये तेषां विरुद्धां निजां सम्मतिं प्रकाशितवान्।
11 ೧೧ ಎಲ್ಲಾ ಸಭಾಮಂದಿರಗಳಲ್ಲಿಯೂ, ನಾನು ಅನೇಕ ಸಾರಿ ಅವರನ್ನು ದಂಡಿಸಿ ಅವರಿಂದ ದೇವದೂಷಣೆಯ ಮಾತುಗಳನ್ನಾಡಿಸುವುದಕ್ಕೆ ಪ್ರಯತ್ನಿಸಿದೆನು. ಇದಲ್ಲದೆ ಅವರ ಮೇಲೆ ಬಹು ಕೋಪಾವೇಶವುಳ್ಳವನಾಗಿ ಬೇರೆ ಪಟ್ಟಣಗಳವರೆಗೂ ಹೋಗಿ, ಅವರನ್ನು ಹಿಂಸೆಪಡಿಸಿದೆನು.
वारं वारं भजनभवनेषु तेभ्यो दण्डं प्रदत्तवान् बलात् तं धर्म्मं निन्दयितवांश्च पुनश्च तान् प्रति महाक्रोधाद् उन्मत्तः सन् विदेशीयनगराणि यावत् तान् ताडितवान्।
12 ೧೨ ಈ ಉದ್ದೇಶದಿಂದ ನಾನು ಮುಖ್ಯಯಾಜಕರಿಂದ ಅಧಿಕಾರವನ್ನೂ, ಆದೇಶವನ್ನೂ ಹೊಂದಿ ದಮಸ್ಕಕ್ಕೆ ಹೋಗುವ ದಾರಿಯಲ್ಲಿ ರಾಜನೇ,
इत्थं प्रधानयाजकस्य समीपात् शक्तिम् आज्ञापत्रञ्च लब्ध्वा दम्मेषक्नगरं गतवान्।
13 ೧೩ ಮಧ್ಯಾಹ್ನದ ಹೊತ್ತಿನಲ್ಲಿ ಪರಲೋಕದಿಂದ ಒಂದು ಬೆಳಕು ನನ್ನ ಸುತ್ತಲೂ ಮತ್ತು ನನ್ನ ಜೊತೆಯಲ್ಲಿ ಪ್ರಯಾಣಮಾಡುತ್ತಿದ್ದವರ ಸುತ್ತಲೂ ಸೂರ್ಯನ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವುದನ್ನು ನಾನು ಕಂಡೆನು.
तदाहं हे राजन् मार्गमध्ये मध्याह्नकाले मम मदीयसङ्गिनां लोकानाञ्च चतसृषु दिक्षु गगणात् प्रकाशमानां भास्करतोपि तेजस्वतीं दीप्तिं दृष्टवान्।
14 ೧೪ ನಾವೆಲ್ಲರು ನೆಲಕ್ಕೆ ಬೀಳಲು; ‘ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವುದರಿಂದ ನಿನಗೇ ಹಾನಿಯಲ್ಲವೇ? ಎಂದು ಇಬ್ರಿಯ ಭಾಷೆಯಿಂದ ಹೇಳುವ ವಾಣಿಯನ್ನು’ ಕೇಳಿದೆನು.
तस्माद् अस्मासु सर्व्वेषु भूमौ पतितेषु सत्सु हे शौल है शौल कुतो मां ताडयसि? कण्टकानां मुखे पादाहननं तव दुःसाध्यम् इब्रीयभाषया गदित एतादृश एकः शब्दो मया श्रुतः।
15 ೧೫ ಆಗ ನಾನು; ‘ಕರ್ತನೇ, ನೀನಾರು?’ ಅನ್ನಲು ಕರ್ತನು; ‘ನೀನು ಹಿಂಸೆಪಡಿಸುವ ಯೇಸುವೇ ನಾನು.
तदाहं पृष्टवान् हे प्रभो को भवान्? ततः स कथितवान् यं यीशुं त्वं ताडयसि सोहं,
16 ೧೬ ನೀನು ಎದ್ದು, ನಿಂತುಕೋ. ನಿನ್ನನ್ನು ನನ್ನ ಸೇವಕನಾಗಿಯೂ, ಸಾಕ್ಷಿಯಾಗಿಯೂ ನೇಮಿಸುವುದಕ್ಕೋಸ್ಕರ ನಿನಗೆ ಕಾಣಿಸಿಕೊಂಡಿದ್ದೇನೆ. ಈಗಲೂ, ಮುಂದೆಯೂ ನಿನಗೆ ತೋರಿಸಲಿರುವ ದರ್ಶನಗಳಲ್ಲಿಯೂ, ನಿನಗೆ ಕಾಣಿಸಿಕೊಂಡದ್ದನ್ನು ಕುರಿತು ನೀನು ನನ್ನ ಸಾಕ್ಷಿಯಾಗಿರಬೇಕು.
किन्तु समुत्तिष्ठ त्वं यद् दृष्टवान् इतः पुनञ्च यद्यत् त्वां दर्शयिष्यामि तेषां सर्व्वेषां कार्य्याणां त्वां साक्षिणं मम सेवकञ्च कर्त्तुम् दर्शनम् अदाम्।
17 ೧೭ ನಾನು ನಿನ್ನ ಸ್ವಂತ ಜನರಿಂದಲೂ, ಅನ್ಯಜನರಿಂದಲೂ ನಿನ್ನನ್ನು ರಕ್ಷಿಸುವೆನು.
विशेषतो यिहूदीयलोकेभ्यो भिन्नजातीयेभ्यश्च त्वां मनोनीतं कृत्वा तेषां यथा पापमोचनं भवति
18 ೧೮ ಅವರು ಕತ್ತಲೆಯಿಂದ ಬೆಳಕಿಗೂ, ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು, ನನ್ನಲ್ಲಿ ನಂಬಿಕೆಯಿಡುವುದರಿಂದ ಪಾಪಕ್ಷಮಾಪಣೆಯನ್ನೂ, ಪರಿಶುದ್ಧರೊಂದಿಗೆ ಹಕ್ಕನ್ನೂ ಹೊಂದುವಂತೆ, ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ’ ಅಂದನು.
यथा ते मयि विश्वस्य पवित्रीकृतानां मध्ये भागं प्राप्नुवन्ति तदभिप्रायेण तेषां ज्ञानचक्षूंषि प्रसन्नानि कर्त्तुं तथान्धकाराद् दीप्तिं प्रति शैतानाधिकाराच्च ईश्वरं प्रति मतीः परावर्त्तयितुं तेषां समीपं त्वां प्रेष्यामि।
19 ೧೯ ಆದಕಾರಣ ಅಗ್ರಿಪ್ಪರಾಜನೇ, ಪರಲೋಕದಿಂದ ನನಗೆ ಉಂಟಾದ ಆ ದರ್ಶನಕ್ಕೆ ನಾನು ಅವಿಧೇಯನಾಗದೆ ಮೊದಲು ದಮಸ್ಕದವರಿಗೆ,
हे आग्रिप्पराज एतादृशं स्वर्गीयप्रत्यादेशं अग्राह्यम् अकृत्वाहं
20 ೨೦ ಆಮೇಲೆ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸೀಮೆಯಲ್ಲಿಯೂ ಇರುವವರಿಗೆ ಮತ್ತು ಅನ್ಯಜನರಿಗೆ ಸಹ; ನೀವು ದೇವರ ಕಡೆಗೆ ತಿರುಗಿಕೊಳ್ಳಬೇಕೆಂತಲೂ, ಮಾನಸಾಂತರಕ್ಕೆ ಯೋಗ್ಯವಾದ ಕೃತ್ಯಗಳನ್ನು ಮಾಡಬೇಕೆಂತಲೂ ಸಾರಿದೆನು.
प्रथमतो दम्मेषक्नगरे ततो यिरूशालमि सर्व्वस्मिन् यिहूदीयदेशे अन्येषु देशेषु च येेन लोका मतिं परावर्त्त्य ईश्वरं प्रति परावर्त्तयन्ते, मनःपरावर्त्तनयोग्यानि कर्म्माणि च कुर्व्वन्ति तादृशम् उपदेशं प्रचारितवान्।
21 ೨೧ ಈ ಕಾರಣದಿಂದ ಯೆಹೂದ್ಯರು ದೇವಾಲಯದಲ್ಲಿ ನನ್ನನ್ನು ಹಿಡಿದು ಕೊಲ್ಲುವುದಕ್ಕೆ ಪ್ರಯತ್ನಿಸಿದರು.
एतत्कारणाद् यिहूदीया मध्येमन्दिरं मां धृत्वा हन्तुम् उद्यताः।
22 ೨೨ ಆದರೆ ನಾನು ದೇವರಿಂದ ಸಹಾಯವನ್ನು ಪಡೆದು ಈ ದಿನದವರೆಗೂ ಸುರಕ್ಷಿತವಾಗಿದ್ದು ಚಿಕ್ಕವರಿಗೂ, ದೊಡ್ಡವರಿಗೂ ಸಾಕ್ಷಿಹೇಳುವವನಾಗಿದ್ದೇನೆ. ಪ್ರವಾದಿಗಳೂ, ಮೋಶೆಯೂ ಮುಂದೆ ಆಗುವುದನ್ನು ಕುರಿತು ತಿಳಿಸಿದ ಸಂಗತಿಗಳನ್ನೇ, ಹೊರತು ನಾನು ಇನ್ನೇನೂ ಹೇಳುವವನಲ್ಲ.
तथापि ख्रीष्टो दुःखं भुक्त्वा सर्व्वेषां पूर्व्वं श्मशानाद् उत्थाय निजदेशीयानां भिन्नदेशीयानाञ्च समीपे दीप्तिं प्रकाशयिष्यति
23 ೨೩ ಆ ಸಂಗತಿಗಳು ಏನೆಂದರೆ; ಕ್ರಿಸ್ತನು ಬಾಧೆಪಟ್ಟು ಸಾಯಬೇಕಾದವನು ಮತ್ತು ಆತನು ಸತ್ತವರೊಳಗಿಂದ ಮೊದಲನೆಯವನಾಗಿ ಎದ್ದು ಯೆಹೂದ್ಯರಿಗೂ, ಅನ್ಯಜನರಿಗೂ ಬೆಳಕನ್ನು ಪ್ರಸಿದ್ಧಿಪಡಿಸುವವನಾಗಿರುವನು” ಎಂಬುದೇ.
भविष्यद्वादिगणो मूसाश्च भाविकार्य्यस्य यदिदं प्रमाणम् अददुरेतद् विनान्यां कथां न कथयित्वा ईश्वराद् अनुग्रहं लब्ध्वा महतां क्षुद्राणाञ्च सर्व्वेषां समीपे प्रमाणं दत्त्वाद्य यावत् तिष्ठामि।
24 ೨೪ ಹೀಗೆ ಪೌಲನು ಪ್ರತಿವಾದ ಮಾಡುತ್ತಿದ್ದಾಗ, ಫೆಸ್ತನು ಮಹಾಶಬ್ದದಿಂದ; “ಪೌಲನೇ, ನಿನಗೆ ಹುಚ್ಚು ಹಿಡಿದಿದೆ; ಅಧಿಕ ಪಾಂಡಿತ್ಯ ನಿನ್ನನ್ನು ಹುಚ್ಚನನ್ನಾಗಿಸಿದೆ,” ಎಂದು ಹೇಳಿದನು.
तस्यमां कथां निशम्य फीष्ट उच्चैः स्वरेण कथितवान् हे पौल त्वम् उन्मत्तोसि बहुविद्याभ्यासेन त्वं हतज्ञानो जातः।
25 ೨೫ ಅದಕ್ಕೆ ಪೌಲನು; “ಮಹಾ ಶ್ರೇಷ್ಠನಾದ ಫೆಸ್ತನೇ, ನಾನು ಹುಚ್ಚನಲ್ಲ; ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತುಗಳನ್ನೇ ಹೇಳುತ್ತಿದ್ದೇನೆ.
स उक्तवान् हे महामहिम फीष्ट नाहम् उन्मत्तः किन्तु सत्यं विवेचनीयञ्च वाक्यं प्रस्तौमि।
26 ೨೬ ಅಗ್ರಿಪ್ಪರಾಜನು ಈ ಸಂಗತಿಗಳನ್ನೆಲ್ಲಾ ತಿಳಿದವನು; ಆದುದರಿಂದ, ಅವನ ಮುಂದೆ ಧೈರ್ಯವಾಗಿ ಮಾತನಾಡುತ್ತೇನೆ. ಇವುಗಳಲ್ಲಿ ಒಂದಾದರೂ ಅವನಿಗೆ ಮುಚ್ಚುಮರೆಯಾದುದಲ್ಲವೆಂದು ನಂಬಿದ್ದೇನೆ, ಏಕೆಂದರೆ ಇದು ಒಂದು ಮೂಲೆಯಲ್ಲಿ ನಡೆದ ಕಾರ್ಯವಲ್ಲ.
यस्य साक्षाद् अक्षोभः सन् कथां कथयामि स राजा तद्वृत्तान्तं जानाति तस्य समीपे किमपि गुप्तं नेति मया निश्चितं बुध्यते यतस्तद् विजने न कृतं।
27 ೨೭ ಅಗ್ರಿಪ್ಪರಾಜನೇ, ಪ್ರವಾದಿಗಳಲ್ಲಿ ನಿನಗೆ ನಂಬಿಕೆಯುಂಟೋ?” ಉಂಟೆಂದು ನಾನು ಬಲ್ಲೆನು ಅಂದನು.
हे आग्रिप्पराज भवान् किं भविष्यद्वादिगणोक्तानि वाक्यानि प्रत्येति? भवान् प्रत्येति तदहं जानामि।
28 ೨೮ ಅದಕ್ಕೆ ಅಗ್ರಿಪ್ಪನು; “ಅಲ್ಪಪ್ರಯತ್ನದಿಂದ, ನನ್ನನ್ನು ಕ್ರೈಸ್ತನಾಗುವುದಕ್ಕೆ ಒಡಂಬಡಿಸುತ್ತೀಯಾ?” ಎಂದು ಹೇಳಲು
तत आग्रिप्पः पौलम् अभिहितवान् त्वं प्रवृत्तिं जनयित्वा प्रायेण मामपि ख्रीष्टीयं करोषि।
29 ೨೯ ಪೌಲನು; “ಅಲ್ಪಪ್ರಯತ್ನದಿಂದಾಗಲಿ, ಅಧಿಕ ಪ್ರಯತ್ನದಿಂದಾಗಲಿ ನೀನು ಮಾತ್ರವಲ್ಲದೆ ಈಹೊತ್ತು ನನ್ನ ಮಾತುಗಳನ್ನು ಕೇಳುವವರೆಲ್ಲರೂ, ಈ ಬೇಡಿಗಳ ಹೊರತು, ನನ್ನಂತೆ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ” ಅಂದನು.
ततः सोऽवादीत् भवान् ये ये लोकाश्च मम कथाम् अद्य शृण्वन्ति प्रायेण इति नहि किन्त्वेतत् शृङ्खलबन्धनं विना सर्व्वथा ते सर्व्वे मादृशा भवन्त्वितीश्वस्य समीपे प्रार्थयेऽहम्।
30 ೩೦ ಆ ಮೇಲೆ ರಾಜನೂ, ದೇಶಾಧಿಪತಿಯೂ ಮತ್ತು ಬೆರ್ನಿಕೆಯೂ ಅವರ ಸಂಗಡ ಕುಳಿತಿದ್ದವರೂ, ಎದ್ದು ಹೊರಗೆ ಹೋಗಿ;
एतस्यां कथायां कथितायां स राजा सोऽधिपति र्बर्णीकी सभास्था लोकाश्च तस्माद् उत्थाय
31 ೩೧ “ಈ ಮನುಷ್ಯನು ಮರಣದಂಡನೆಗಾಗಲಿ, ಬೇಡಿಗಾಗಲಿ ಆಧಾರವಾದದ್ದೇನೂ ಮಾಡಿದವನಲ್ಲ” ಎಂಬುದಾಗಿ ತಮ್ಮ ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
गोपने परस्परं विविच्य कथितवन्त एष जनो बन्धनार्हं प्राणहननार्हं वा किमपि कर्म्म नाकरोत्।
32 ೩೨ ಅಗ್ರಿಪ್ಪನು ಫೆಸ್ತನಿಗೆ; “ಈ ಮನುಷ್ಯನು ಕೈಸರನಿಗೆ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳದೆ ಹೋಗಿದ್ದರೆ ಇವನನ್ನು ಬಿಡುಗಡೆ ಮಾಡಬಹುದಿತ್ತು” ಎಂದು ಹೇಳಿದನು.
तत आग्रिप्पः फीष्टम् अवदत्, यद्येष मानुषः कैसरस्य निकटे विचारितो भवितुं न प्रार्थयिष्यत् तर्हि मुक्तो भवितुम् अशक्ष्यत्।

< ಅಪೊಸ್ತಲರ ಕೃತ್ಯಗಳ 26 >